Tag: ಪಾಯಲ್ ರಜಪೂತ್

  • ಒಳ ಉಡುಪು ಧರಿಸದೇ ಹಾಟ್ ಪೋಸ್ ಕೊಟ್ಟ ಪಾಯಲ್ ರಜಪೂತ್

    ಒಳ ಉಡುಪು ಧರಿಸದೇ ಹಾಟ್ ಪೋಸ್ ಕೊಟ್ಟ ಪಾಯಲ್ ರಜಪೂತ್

    ನ್ನಡದ ‘ಹೆಡ್‌ಬುಷ್’ (Headbush) ನಟಿ ಪಾಯಲ್ ರಜಪೂತ್ (Payal Rajput) ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಒಳ ಉಡುಪು ಧರಿಸದೇ ಸಖತ್ ಸೆಕ್ಸಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಹಾಟ್ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಹಸಿರು ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಗಿಳಿ ಹಸಿರು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಒಳ ಉಡುಪು ಧರಿಸದೇ ಕೊಂಚ ಎದೆ ಭಾಗ ಕಾಣುವಂತೆ ಸಖತ್ ಹಾಟ್ ಆಗಿ ಕ್ಯಾಮೆರಾಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ಸೀನ್ ವೇಳೆ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ

    ಇತ್ತೀಚೆಗೆ ಚಿತ್ರವೊಂದರ ನಿರ್ಮಾಪಕರ ಬಗ್ಗೆ ಪಾಯಲ್ ಆರೋಪಿಸಿದ್ದರು. ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಸಂಭಾವನೆ ನೀಡಿಲ್ಲ. ಆದರೂ ಸಿನಿಮಾ ಪ್ರಚಾರ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ನಟಿ ಪಾಯಲ್ ನಿರ್ಮಾಪಕರ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

    ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ನನ್ನ ಬಳಿ ‘ರಕ್ಷಣ’ ಎಂಬ ಸಿನಿಮಾವಿದೆ. ಇದನ್ನು 2019 ಮತ್ತು 2020ರಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಮೂಲತಃ 5Ws ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಇತ್ತೀಚೆಗೆ ನನಗೆ ಸಿಕ್ಕ ಯಶಸ್ಸು ನೋಡಿ ಈಗ ನಿರ್ಮಾಪಕರು ಆ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನನ್ನ ಬಾಕಿ ಹಣಗಳನ್ನು ಕ್ಲೀಯರ್ ಮಾಡದೇ ಪ್ರಚಾರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದರು ಪಾಯಲ್.

    ಚಿತ್ರದ ಪ್ರಚಾರಕ್ಕೆ ಬರದೇ ಇದ್ದರೆ ತೆಲುಗು ಉದ್ಯಮದಿಂದ ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ತಂಡ ಬಾಕಿ ಮೊತ್ತದ ಬಗ್ಗೆ ಚರ್ಚಿಸಿದಾಗ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು. ನನ್ನ ಹೆಸರನ್ನು ಡ್ಯಾಮೇಜ್ ಆಗುವಂತೆ ಬಳಸಲಾಗುತ್ತಿದೆ. ಇತ್ತೀಚಿನ ಮೀಟಿಂಗ್‌ನಲ್ಲಿ ನನ್ನ ಬಗ್ಗೆ ಅಸಭ್ಯ ಭಾಷೆ ಬಳಸಲಾಗಿದೆ. ನನಗೆ ನೀಡಬೇಕಾದ ಸಂಪೂರ್ಣ ಸಂಭಾವನೆಯನ್ನು ನೀಡದೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಕ್ಕಾಗಿ ನಾನು ಈಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಪಾಯಲ್ ಆಕ್ರೋಶ ಹೊರಹಾಕಿದ್ದರು.

    ಅಂದಹಾಗೆ, ‘ಆರ್‌ಎಕ್ಸ್ 100’ (Rx 100 Film) ಸಿನಿಮಾದ ಮೂಲಕ ಟಾಲಿವುಡ್‌ಗೆ ನಟಿ ಎಂಟ್ರಿ ಕೊಟ್ಟರು. ಬಳಿಕ ಮಂಗಳವಾರಂ, ವೆಂಕಿ ಮಾಮ, ಡಿಸ್ಕೋ ರಾಜಾ, ಟೀಸ್ ಮಾರ್ ಖಾನ್, ಕನ್ನಡದ ಹೆಡ್‌ಬುಷ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

  • ನಿರ್ಮಾಪಕರಿಂದ ಕಿರುಕುಳ- ಕಾನೂನು ಸಮರಕ್ಕೆ ಮುಂದಾದ ‘ಹೆಡ್‌ಬುಷ್’ ನಟಿ

    ನಿರ್ಮಾಪಕರಿಂದ ಕಿರುಕುಳ- ಕಾನೂನು ಸಮರಕ್ಕೆ ಮುಂದಾದ ‘ಹೆಡ್‌ಬುಷ್’ ನಟಿ

    ನ್ನಡದ ‘ಹೆಡ್‌ಬುಷ್’ (Headbush Film) ನಟಿ ಪಾಯಲ್ ರಜಪೂತ್ (Payal Rajput) ಚಿತ್ರವೊಂದರ ನಿರ್ಮಾಪಕರ ಬಗ್ಗೆ ಆರೋಪಿಸಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಸಂಭಾವನೆ ನೀಡಿಲ್ಲ. ಆದರೂ ಸಿನಿಮಾ ಪ್ರಚಾರ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ನಟಿ ಪಾಯಲ್ ನಿರ್ಮಾಪಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ನನ್ನ ಬಳಿ ‘ರಕ್ಷಣ’ ಎಂಬ ಸಿನಿಮಾವಿದೆ. ಇದನ್ನು 2019 ಮತ್ತು 2020ರಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಮೂಲತಃ 5Ws ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಇತ್ತೀಚೆಗೆ ನನಗೆ ಸಿಕ್ಕ ಯಶಸ್ಸು ನೋಡಿ ಈಗ ನಿರ್ಮಾಪಕರು ಆ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನನ್ನ ಬಾಕಿ ಹಣಗಳನ್ನು ಕ್ಲೀಯರ್ ಮಾಡದೇ ಪ್ರಚಾರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಚಿತ್ರದ ಪ್ರಚಾರಕ್ಕೆ ಬರದೇ ಇದ್ದರೆ ತೆಲುಗು ಉದ್ಯಮದಿಂದ ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ತಂಡ ಬಾಕಿ ಮೊತ್ತದ ಬಗ್ಗೆ ಚರ್ಚಿಸಿದಾಗ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು. ನನ್ನ ಹೆಸರನ್ನು ಡ್ಯಾಮೇಜ್ ಆಗುವಂತೆ ಬಳಸಲಾಗುತ್ತಿದೆ. ಇತ್ತೀಚಿನ ಮೀಟಿಂಗ್‌ನಲ್ಲಿ ನನ್ನ ಬಗ್ಗೆ ಅಸಭ್ಯ ಭಾಷೆ ಬಳಸಲಾಗಿದೆ. ನನಗೆ ನೀಡಬೇಕಾದ ಸಂಪೂರ್ಣ ಸಂಭಾವನೆಯನ್ನು ನೀಡದೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಕ್ಕಾಗಿ ನಾನು ಈಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಪಾಯಲ್ ಬರೆದುಕೊಂಡಿದ್ದಾರೆ.

    ಅಂದಹಾಗೆ, ‘ರಕ್ಷಣ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಪಾಯಲ್ ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲರ್ ಸಿನಿಮಾವಾಗಿದೆ. ಈ ಚಿತ್ರವನ್ನು ಪ್ರಣದೀಪ್ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಸಣ್ಣ ವಯಸ್ಸಿನಲ್ಲಿಯೇ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ್ರು ಎಂದ ಜಾನ್ವಿ ಕಪೂರ್

    ಪಾಯಲ್ ಕಡೆಯದಾಗಿ ಕನ್ನಡದ ‘ಹೆಡ್‌ಬುಷ್’ ಸಿನಿಮಾ, ತೆಲುಗಿನ ‘ಮಂಗಳವಾರಂ’ ಚಿತ್ರದಲ್ಲಿ ನಟಿಸಿದ್ದರು.

  • ‘ಕಾಂತಾರ’ದಲ್ಲಿ ನಟಿಸೋಕೆ ಅವಕಾಶ ಕೇಳಿದ ನಟಿಯರು

    ‘ಕಾಂತಾರ’ದಲ್ಲಿ ನಟಿಸೋಕೆ ಅವಕಾಶ ಕೇಳಿದ ನಟಿಯರು

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಲಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿತ್ತು. ಹಲವಾರು ಪಾತ್ರಗಳು ಇರುವುದರಿಂದ ಕಲಾವಿದರ ವಯಸ್ಸನ್ನೂ ನಿಗದಿ ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ರೆಸ್ಪಾನ್ಸ್ ಬರುತ್ತದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅವಕಾಶ ಕೇಳಿದ್ದಾರೆ.

    ಕಾಂತಾರ ಸಿನಿಮಾದಲ್ಲಿ ನಟಿಸೋಕೆ ಆಸೆ ಇರುವುದಾಗಿ ಪಾಯಲ್ ರಜಪೂತ್ (Payal Rajput) ಮತ್ತು ಕನ್ನಡದ ನಟಿ ಕಾರುಣ್ಯ ರಾಮ್ (Karunya Ram) ಕೂಡ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಆಸೆಯನ್ನು ವ್ಯಕ್ತಪಡಿಸಿರುವ ಕಾರುಣ್ಯ ರಾಮ್, ನನಗೂ ಕಾಂತಾರ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಅವರು ಕೇಳಿಕೊಂಡಿದ್ದಾರೆ.

    ಕಾಂತಾರ್ ಚಾಪ್ಟರ್ 1ರ ಚಿತ್ರೀಕರಣದ ಸಿದ್ಧತೆ ಭರ್ಜರಿಯಾಗಿಯೇ ನಡೆಯುತ್ತಿದೆ. ಮೊನ್ನೆಯಷ್ಟೇ ಟೀಸರ್ ವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಿಷಬ್ ಕೈಯಲ್ಲಿ ಒಂದು ಕಡೆ ತ್ರಿಶೂಲ ಮತ್ತೊಂದು ಕಡೆ ಪರಶುರಾಮನ ಕೊಡಲಿ (Kodali) ಇತ್ತು. ಈ ಕೊಡಲಿ ಕುತೂಹಲಕ್ಕೂ ಕಾರಣವಾಗಿತ್ತು. ಇದರ ಕುರಿತಾಗಿಯೇ ಇದೀಗ ಹೊಸದೊಂದು ಸುದ್ದಿ ಸಿಕ್ಕಿದೆ.

    ಕೇರಳದ ಕಾಸರಗೋಡು ಜಿಲ್ಲೆಯ ಚಿಪ್ಪಾರುವಿನಲ್ಲಿ ರಾಜರ ಮನೆತನವೊಂದು ಇದ್ದು, ಇಲ್ಲಿಯೇ ಪರಶುರಾಮ (Parasurama) ಅವರು ಬಳಸಿರುವ 450 ವರ್ಷಗಳ ಇತಿಹಾಸವಿರುವ ಕೊಡಲಿ ಇದೆಯಂತೆ. ಈ ಕೊಡಲಿಯನ್ನು ರಿಷಬ್ ಬಯಸಿದರೆ ಶೂಟಿಂಗ್ ಗೆ ಕೊಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಕೊಡಲಿಗೆ ಸಾಕಷ್ಟು ಮಹತ್ವವಿದ್ದು, ಅದನ್ನು ಪಡೆದುಕೊಂಡು ರಿಷಬ್ ಶೂಟ್ ಮಾಡ್ತಾರಾ ಕಾದು ನೋಡಬೇಕು.

     

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವೀವ್ಸ್‌ ಪಡೆದಿದೆ. ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದಾರೆ.

  • ಪಾಯಲ್ ರಜಪೂತ್ ನಟನೆಯ ‘ಮಂಗಳವಾರಂ’ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್

    ಪಾಯಲ್ ರಜಪೂತ್ ನಟನೆಯ ‘ಮಂಗಳವಾರಂ’ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್

    ‘ಆರ್ ಎಕ್ಸ್ 100′ (Rx 100) ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಿರ್ದೇಶಕ ಅಜಯ್ ಭೂಪತಿ (Ajay Bhupathi) ಪ್ಯಾನ್ ಇಂಡಿಯಾ ಸಿನಿಮಾ ಮಂಗಳವಾರಂ ಚಿತ್ರದ ಮೂಲಕ ಸದ್ದು ಮಾಡ್ತಿದ್ದಾರೆ. ಸ್ವಾತಿ ಗುಣಪತಿ- ಸುರೇಶ್ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್ ಹಾಗೂ ಅಜಯ್ ಭೂಪತಿ ಅವರ ಎ ಕ್ರಿಯೇಟಿವ್ ವರ್ಕ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ.

    ನಿರ್ದೇಶಕರಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ, ‘ಮಂಗಳವಾರಂ’ (Mangalavaram) ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಂಗಳವಾರಂ ಸಿನಿಮಾ ನವೆಂಬರ್ 17ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಸೌತ್ ಬ್ಯೂಟಿ ಪಾಯಲ್ ರಜಪೂತ್ (Payal Rajput) ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟಿ ಬಣ್ಣ ಹಚ್ಚಿದ್ದಾರೆ. ಆರ್‌ಎಕ್ಸ್ 100 ಚಿತ್ರದ ಬಳಿಕ ಮತ್ತೆ ಡೈರೆಕ್ಟರ್ ಅಜಯ್ ಭೂಪತಿ ಜೊತೆ ಪಾಯಲ್ ಕೈಜೋಡಿಸಿದ್ದಾರೆ.

    ‘ಮಂಗಳವಾರಂ’ (Mangalavaram) ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಾಯಲ್ ರಜಪೂತ್, ಶ್ರೀತೇಜ್, ಚೈತನ್ಯ ಕೃಷ್ಣ, ಅಜಯ್ ಘೋಷ್, ಲಕ್ಷ್ಮಣ್‌ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. ‘ಮಂಗಳವಾರಂ’ ಚಿತ್ರಕ್ಕೆ ಕನ್ನಡದ ಅಜನೀಶ್ ಲೋಕನಾಥ್ (Ajaneesh Lokanath) ಸಂಗೀತ ಸಂಯೋಜಿಸುತ್ತಿದ್ದು, ದಾಶರಥಿ ಶಿವೇಂದ್ರ ಅವರ ಛಾಯಾಗ್ರಹಣವಿರಲಿದೆ. ರಘು ಕುಲಕರ್ಣಿ ಅವರ ಕಲಾ ನಿರ್ದೇಶನವಿರಲಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಾಯಿಕುಮಾರ್ ಯಡವಲ್ಲಿ ಕಾರ್ಯನಿರ್ವಹಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

    ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

    RX 100 ಸಿನಿಮಾ ಮೂಲಕ ಪಾಯಲ್‌ ರಜಪೂತ್ ಟಾಲಿವುಡ್‌ಗೆ ನಾಯಕಿಯಾಗಿ ಪಾದಾಪಣೆ ಮಾಡಿದ್ದರು. ಇದೀಗ‌ ಮತ್ತೆ ಚೊಚ್ಚಲ ಸಿನಿಮಾ ನಿರ್ದೇಶಕನ ಜೊತೆ ಪಾಯಲ್ ಕೈಜೊಡಿಸಿದ್ದಾರೆ. ಟಾಪ್‌ಲೆಸ್ ಅವತಾರದ ಮೂಲಕ ‘ಹೆಡ್‌ಬುಷ್’ ಬ್ಯೂಟಿ ಎಂಟ್ರಿ ಕೊಟ್ಟಿದ್ದಾರೆ.

    ಕನ್ನಡದ ‘ಹೆಡ್‌ಬುಷ್’ ನಟಿ ಪಾಯಲ್ ರಜಪೂತ್ (Payal Rajput) ಅವರು RX 100 ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೇಳಿಕೊಳ್ಳುವಂತಹ ಬ್ರೇಕ್ ಅವರಿಗೆ ಸಿಗಲಿಲ್ಲ. ಆದರೂ ಪಾಯಲ್ ರಜಪೂತ್‌ಗೆ ಬೇಡಿಕೆ ಕಮ್ಮಿಯಾಗಿಲ್ಲ. ಕೈತುಂಬಾ ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಇದೀಗ ತಮ್ಮ ಮೊದಲ ಸಿನಿಮಾ ನಿರ್ದೇಶಕ ಅಜಯ್ ಭೂಪತಿ (Ajay Bhupathi) ಜೊತೆ ‘ಮಂಗಳವಾರಂ’ (Mangalavaram) ಚಿತ್ರಕ್ಕೆ ಪಾಯಲ್ ಸಾಥ್ ನೀಡಿದ್ದಾರೆ. ನೀವು ನೋಡಿದರೆ ಈ ನೋಟವೇ ಸಾಕಷ್ಟು ವಿಷಯ ಹೇಳುತ್ತದೆ ಎಂಬ ಕ್ಯಾಪ್ಷನ್‌ನೊಂದಿಗೆ ಪಾಯಲ್ ರಜಪೂತ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಸಿನಿಮಾ ಬಗ್ಗೆ ಕೌತುಕ ಮೂಡಿಸಿದ್ದಾರೆ.

    ಚಿತ್ರದ ಪೋಸ್ಟರ್‌ನಲ್ಲಿ ನಟಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ನಟಿ ಬೋಲ್ಡ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಏಬ್ಬಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಅಂದಹಾಗೆ, ಪಾಯಲ್ ಕಳೆದ ವರ್ಷ ಡಾಲಿ (Daali) ನಟನೆ, ನಿರ್ಮಾಣದ ‘ಹೆಡ್‌ಬುಷ್’ (Head Bush) ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

  • `ಹೆಡ್‌ ಬುಷ್’ ಚಿತ್ರದ ಕುರಿತು ಪಾಯಲ್ ರಜಪೂತ್ ಹೇಳಿದ್ದೇನು ಗೊತ್ತಾ? ವೈರಲ್‌ ಆಯ್ತು ನಟಿಯ ಪೋಸ್ಟ್‌

    `ಹೆಡ್‌ ಬುಷ್’ ಚಿತ್ರದ ಕುರಿತು ಪಾಯಲ್ ರಜಪೂತ್ ಹೇಳಿದ್ದೇನು ಗೊತ್ತಾ? ವೈರಲ್‌ ಆಯ್ತು ನಟಿಯ ಪೋಸ್ಟ್‌

    ಸೌತ್ ಬ್ಯೂಟಿ ಪಾಯಲ್ ರಜಪೂತ್ ಕನ್ನಡ ಚಿತ್ರರಂಗಕ್ಕೆ `ಹೆಡ್ ಬುಷ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. `ಬಡವ ರಾಸ್ಕಲ್’ ಸೂಪರ್ ಸಕ್ಸಸ್ ನಂತರ ಡಾಲಿ ಧನಂಜಯ್ `ಹೆಡ್ ಬುಷ್’ ಚಿತ್ರ ಕೈಗೆತ್ತಿಕೊಂಡಿದ್ದು, ನಟರಾಕ್ಷಸ ಡಾಲಿಗೆ ನಾಯಕಿಯಾಗಿ ಪಾಯಲ್ ರಜಪೂತ್ ನಟಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ `ಹೆಡ್‌ಬುಷ್’ ಕುರಿತು ನಟಿ ಪಾಯಲ್ ಹಾಕಿರೋ ಪೋಸ್ಟ್ ವೈರಲ್ ಆಗುತ್ತಿದೆ.

    ಪಾಯಲ್ ರಜಪೂತ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿರೋ ಕಲಾವಿದೆ. ಈಗ `ಹೆಡ್‌ ಬುಷ್’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪಾಯಲ್ ಹಾಕಿರೋ ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಯೊಬ್ಬರು ನೀವು ಯಾವಾಗ ಕನ್ನಡ ಚಿತ್ರದಲ್ಲಿ ನಟಿಸುತ್ತೀರಾ ಅಂತಾ ಕೇಳಿದ್ದಾರೆ. ಅದಕ್ಕೆ ನಟಿ ಖುಷಿಯಿಂದಲೇ ಧನಂಜಯ್ ಜೊತೆಯಿರೋ ಫೋಟೋ ಶೇರ್ ಮಾಡಿ ಉತ್ತರ ನೀಡಿದ್ದಾರೆ.

    ನಾನು ಈಗಾಗಲೇ ಹೆಡ್‌ ಬುಷ್ ಕನ್ನಡ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿನ ನನ್ನ ಪಾತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ʻಹೆಡ್‌ ಬುಷ್ʼ ಚಿತ್ರ ತೆರೆಗೆ ಬರುವುದಾಗಿ ಅಭಿಮಾನಿಗಳಿಗೆ ಚಿತ್ರದ ಅಪ್‌ಡೇಟ್ ನೀಡಿದ್ದಾರೆ. ಇನ್ನು ನಟಿ ಪಾಯಲ್ ಟ್ಯಾಗ್ ಮಾಡಿರೋ ಪೋಸ್ಟ್‌ನ್ನು ಡಾಲಿ ಕೂಡ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಸದ್ಯ ಹಲವಾರು ವಿಚಾರಗಳಿಂದ ಅಟ್ರ್ಯಾಕ್ಟ್‌ ಮಾಡ್ತಿರೋ ಚಿತ್ರ `ಹೆಡ್‌ ಬುಷ್’ನಲ್ಲಿ ನಟ ಧನಂಜಯ್ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ಶೃತಿ ಹರಿಹರನ್, ರಘು ಮುಖರ್ಜಿ, ಲೂಸ್ ಮಾದ, ವಸಿಷ್ಠ ಸಿಂಹ, ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಹೀಗೆ ಸ್ಟಾರ್ ಕಲಾವಿದರ ದಂಡೆ ಚಿತ್ರದಲ್ಲಿದೆ. ಮಲ್ಟಿಸ್ಟಾರ್‌ಗಳಿರೋ `ಹೆಡ್‌ ಬುಷ್’ ಚಿತ್ರ ಈಗಿಂದಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಡಾಲಿಯ ನ್ಯೂ ವೆಂಚರ್ ನೋಡೋದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ.

  • ನೀಡಲ್ ಐ ಮಳಿಗೆ ಉದ್ಘಾಟಿಸಿದ ಪಾಯಲ್ ರಜಪೂತ್

    ನೀಡಲ್ ಐ ಮಳಿಗೆ ಉದ್ಘಾಟಿಸಿದ ಪಾಯಲ್ ರಜಪೂತ್

    ಬೆಂಗಳೂರು: ಕೊರೊನಾ ಕಾಟದ ಮಧ್ಯೆಯೂ ಬೆಂಗಳೂರಿನಲ್ಲಿ ಫ್ಯಾಷನ್ ಸೆನ್ಸ್ ಆ್ಯಕ್ಟಿವ್ ಆಗಿದ್ದು, ಬಾಣಸವಾಡಿಯ ನೀಡಲ್ ಐ ಇದಕ್ಕೆ ಸಾಕ್ಷಿಯಾಗಿದೆ.

    ವೇದಿಕ್ ವೇವ್ಸ್ ಬ್ರಾಂಡಿಂಗ್ ಜೊತೆ ಕೈ ಜೋಡಿಸಿರುವ ನೀಡಲ್ ಐ, ಇದೀಗ ಹೊಸ ಶೈಲಿಯ ಉಡುಪುಗಳನ್ನು ಪರಿಚಯಿಸುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕನಸಿನಲ್ಲೇ ನೀಡಲ್ ಐ ತನ್ನ ಮಳಿಗೆಯನ್ನು ಓಪನ್ ಮಾಡಿದೆ. ವಿಶೇಷವೆಂದರೆ ಹೆಡ್ ಬುಷ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವ ಖ್ಯಾತ ನಟಿ ಪಾಯಲ್ ರಜಪೂತ್ ಈ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ಆಲ್ ದಿ ಬೆಸ್ಟ್ ಹೇಳಿದರು. ಇದನ್ನೂ ಓದಿ: ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

    ಬೆಂಗಳೂರಿನ ವಾತಾವರಣ ಯಾವಾಗಲೂ ಖುಷಿ ಕೊಡುತ್ತೆ. ಈ ರೀತಿಯ ಸಾಂಪ್ರದಾಯಿಕ ಉಡುಪುಗಳು ನನಗೂ ತುಂಬಾ ಇಷ್ಟ. ನಾನು ಇನ್ನು ಮುಂದೆ ಸಿನಿಮಾಗಳಲ್ಲೂ ಇಂತಹ ಡಿಸೈನ್ ಸೀರೆಗಳನ್ನು ಉಡುತ್ತೇನೆ ಎಂದು ಫ್ಯಾಷನ್ ಜಗತ್ತಿನ ಹೊಸ ದೃಷ್ಟಿಕೋನಕ್ಕೆ ಸೈ ಎಂದರು.

  • ಡಾಲಿಗೆ ಜೋಡಿಯಾದ ಆರ್‌ಎಕ್ಸ್ 100 ಚೆಲುವೆ

    ಡಾಲಿಗೆ ಜೋಡಿಯಾದ ಆರ್‌ಎಕ್ಸ್ 100 ಚೆಲುವೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾಲಿ ಧನಂಜಯ್‍ರ ಹೊಸ ಸಿನಿಮಾಕ್ಕೆ ಟಾಲಿವುಡ್ ನಟಿ ಪಾಯಲ್ ರಜಪೂತ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

    70-80ರ ಕಾಲದಲ್ಲಿ ಅಂಡರ್‌ವರ್ಡ್ ಡಾನ್ ಆಗಿದ್ದ, ಜಯರಾಜ್ ಜೀವನ ಕಥೆ ಆಧರಿಸಿ ಸ್ಯಾಂಡಲ್‍ವುಡ್‍ನಲ್ಲಿ ಸಿನಿಮಾವೊಂದು ತಯಾರಾಗುತ್ತಿದ್ದು, ಈ ಸಿನಿಮಾಕ್ಕೆ ‘ಹೆಡ್ ಬುಷ್’ ಎಂಬ ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಡಾಲಿಗೆ ಜೋಡಿಯಾಗಿ ಟಾಲಿವುಡ್ ನಟಿ ಪಾಯಲ್ ರಜಪೂತ್ ಅಭಿನಯಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪಾಯಲ್ ರಾಜ್‍ಪೂತ್ ಕನ್ನಡದಲ್ಲಿ ಅಭಿನಯಿಸುತ್ತಿದ್ದು ಬಹಳ ಎಕ್ಸ್‌ಸೈಟ್ ಆಗಿದ್ದಾರೆ. ಅಲ್ಲದೇ ಡಾನ್ ಜಯರಾಜ್ ಪ್ರೇಯಸಿ ಇಂದಿಗೂ ಪಂಜಾಬ್‍ನಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು, ಅವರನ್ನು ಭೇಟಿ ಮಾಡಲು ಪಾಯಲ್ ಕಾತುರದಿಂದ ಕಾಯುತ್ತಿದ್ದಾರೆ.

    2017ರಲ್ಲಿ ಪಂಜಾಬಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಾಯಲ್ ರಜಪೂತ್ ಟಾಲಿವುಡ್‍ನ ಆರ್‌ಎಕ್ಸ್ 100 ಸಿನಿಮಾದಲ್ಲಿ ಬೋಲ್ಡ್ ಆಗಿ ಅಭಿನಯಿಸುವ ಮೂಲಕ ಪಡ್ಡೆಹುಡುಗರ ಮೈ ಚಳಿಬಿಡಿಸಿದ್ದರು. ಅಲ್ಲದೇ ಈ ಸಿನಿಮಾ ಟಾಲಿವುಡ್‍ನಲ್ಲಿ ಬಹುದೊಡ್ಡ ಸಕ್ಸಸ್ ಕೂಡ ಕಂಡಿತ್ತು. ನಂತರ ಆರ್​ಡಿಎಕ್ಸ್​ ಲವ್​  ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ಪಾಯಲ್ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಬಣ್ಣಹಚ್ಚಲಿದ್ದಾರೆ.

    ‘ಡೈರೆಕ್ಟರ್ ಸ್ಪೆಶಲ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಧನಂಜಯ್ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದು, ಟಗರು ಸಿನಿಮಾದಲ್ಲಿ ಮೊದಲ ಬಾರಿಗೆ ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ಸಾಕಷ್ಟು ಸಿನಿಮಾಗಳಲ್ಲಿ ಧನಂಜಯ್ ನೆಗೆಟಿವ್ ಶೇಡ್‍ನಲ್ಲಿಯೇ ಹೆಚ್ಚಾಗಿ ಮಿಂಚುತ್ತಿದ್ದಾರೆ.

    ಸದ್ಯ ಡಾಲಿ ಧನಂಜಯ್ ಹಾಗೂ ಪಾಯಲ್ ಹೆಡ್ ಬುಷ್ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಈ ಜೋಡಿ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ:ಡೆವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ: ಪ್ರಕಾಶ್ ರಾಜ್