Tag: ಪಾಯಲ್ ಘೋಷ್

  • ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!

    ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!

    ಮುಂಬೈ: ಜೀವನದ ಏಳು-ಬೀಳುಗಳನ್ನ ದಾಟಿ ದೇಶವೇ ಕೊಂಡಾಡುತ್ತಿರುವ ಟೀಂ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ ಅವರ ಬದುಕು ತೆರೆಯ ಹಿಂದೆ ಘೋರವೆನಿಸುತ್ತದೆ. ಮೊಹಮ್ಮದ್‌ ಶಮಿ ಇತ್ತೀಚಿನ ಬೌಲಿಂಗ್‌ ಪ್ರದರ್ಶನ ಕುರಿತು ವಿಚ್ಛೇದಿತ ಪತ್ನಿ ಹಸೀನ್‌ ಜಹಾನ್‌ ಮೊದಲಬಾರಿಗೆ ಮಾತನಾಡಿದ್ದಾರೆ.

    ನ್ಯೂಜಿಲೆಂಡ್‌ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಅತ್ಯದ್ಭುತ ಜಯ ಸಾಧಿಸಿತು. ಇತರ ಬೌಲರ್‌ಗಳನ್ನು ಬಗ್ಗು ಬಡಿಯುತ್ತಿದ್ದ ಕಿವೀಸ್‌ ಪಡೆಯ ಆಟಕ್ಕೆ ಬ್ರೇಕ್‌ ಹಾಕುವ ಮೂಲಕ ಶಮಿ ಟೀಂ ಇಂಡಿಯಾಕ್ಕೆ ಜಯ ತಂದುಕೊಟ್ಟಿದ್ದರು. ಒಂದೇ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಅನೇಕ ದಾಖಲೆಗಳನ್ನ ನುಚ್ಚುನೂರು ಮಾಡಿದರು. ಆದ್ರೆ ಶಮಿ ಅವರ ಅದ್ಭುತ ಬೌಲಿಂಗ್‌ ಪ್ರದರ್ಶನದ ಬಗ್ಗೆ ವಿಚ್ಛೇದಿತ ಪತ್ನಿ ಹಸೀನ್‌ ಜಹಾನ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಮಾತಿನಲ್ಲೇ ತಿವಿದಿದ್ದಾರೆ.

    ಶಮಿ ಆಟಗಾರನಾಗಿ ಒಳ್ಳೆಯ ವ್ಯಕ್ತಿ ಅಷ್ಟೇ. ಆಟಗಾರನಾಗಿ ಇರುವಷ್ಟೇ ಜೀವನದಲ್ಲೂ ಒಳ್ಳೆಯ ವ್ಯಕ್ತಿಯಾಗಿದ್ದರೆ, ಉತ್ತಮ ಜೀವನ ನಡೆಸಬಹುದಿತ್ತು. ಅವರು ನಿಜಕ್ಕೂ ಒಳ್ಳೆಯವರಾಗಿದ್ದರೆ ನನ್ನ ಮಕ್ಕಳೊಂದಿಗೆ ನಾನೂ ಸಂತೋಷವಾಗಿರುತ್ತಿದ್ದೆ. ಸಂತೋಷದಾಯಕ ಜೀವನ ನಡೆಸಬಹುದಿತ್ತು. ಅವರು ಆಟಗಾರನಾಗಿರುವಷ್ಟೇ ಮಕ್ಕಳಿಗೆ ಒಳ್ಳೆಯ ತಂದೆ, ಹೆಂಡತಿಗೆ ಒಳ್ಳೆಯ ಗಂಡನಾಗಿದ್ದಿದ್ದರೆ ಅದು ಇನ್ನೂ ಗೌರವ ತರುತ್ತಿತ್ತು ಎಂದು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಶಮಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮದುವೆ ಆಫರ್‌ ಕೊಟ್ಟ ನಟಿಗೆ ಹೇಳಿದ್ದೇನು?
    ಪಾಯಲ್​ ಘೋಷ್​ ಹೇಳಿಕೆಗೆ ಇದೀಗ ಮಾಧ್ಯಮ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಹಸಿನಾ, ಸೆಲೆಬ್ರಿಟಿಗಳಿಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯ ಆಫರ್​ ನೀಡುವುದು ಹೊಸತೇನಲ್ಲ. ಇದೆಲ್ಲವು ತುಂಬಾನೇ ಸಾಮಾನ್ಯ. ಇಂತಹ ವಿಚಾರಗಳ ಬಗ್ಗೆ ಕಾಮೆಂಟ್​ ಮಾಡಲು ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.

    ಶಮಿ ಬದುಕಿಗೆ ಮದುವೆಯೇ ಮುಳುವಾಯ್ತಾ?
    ಕ್ರಿಕೆಟ್ ಪಿಚ್ ನಲ್ಲಿ ಶಮಿ ಇದ್ದರೆ ಅಲ್ಲಿ ಗೆಲುವು ಗ್ಯಾರಂಟಿ. ಸಾಕಷ್ಟು ಬಾರಿ ಸೋಲಿನ ದವಡೆಯಿಂದ ಟೀಮ್ ಇಂಡಿಯಾವನ್ನು ಪಾರು ಮಾಡಿದ್ದಾರೆ ಮೊಹಮ್ಮದ್ ಶಮಿ. ಕ್ರಿಕೆಟ್ ಪ್ರೇಮಿಗಳ ಸಂಭ್ರಮಕ್ಕೆ ಕಾರಣವಾಗುತ್ತಿರುವ ಶಮಿ ಖಾಸಗಿ ಬದುಕಿನಲ್ಲಿ ನಿಜಕ್ಕೂ ಸಂಭ್ರಮವಿಲ್ಲ. ಇಂಥದ್ದೊಂದು ಸಂಭ್ರಮವನ್ನು ಒಅವರಿಂದ ಕಿತ್ತುಕೊಂಡಿದ್ದು ಅವರ ಮದುವೆ ಎನ್ನುವುದು ಸುಳ್ಳಲ್ಲ.

    ಅಷ್ಟಕ್ಕೂ ಶಮಿ ಮದುವೆಯಾದ ಹುಡುಗಿ ಬೇರೆ ಯಾರೂ ಅಲ್ಲ, ಇದೇ ಕ್ರಿಕೆಟ್ ಪಂದ್ಯ ಆಡುವಾಗ ಚೀರ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದವರು. ಶಮಿ ಮದುವೆಯಾದ ಹುಡುಗಿಯ ಹೆಸರು ಹಸೀನ್ ಜಹಾನ್. ಮೂಲತಃ ಕೋಲ್ಕತ್ತಾ ನಿವಾಸಿ. 10ನೇ ತರಗತಿಯಲ್ಲಿರುವಾಗ ಕಿರಾಣಿ ಅಂಗಡಿಯ ಮಾಲೀಕರೊಬ್ಬರ ಜೊತೆ ಇವರ ಮದುವೆಯಾಗಿತ್ತು. ಈ ಜೋಡಿಗೆ ಎರಡು ಹೆಣ್ಣು ಮಕ್ಕಳು ಕೂಡ ಇದ್ದರು. ಗಂಡನೊಂದಿಗಿನ ಮನಸ್ತಾಪದಿಂದಾಗಿ ಡಿವೋರ್ಸ್ ಪಡೆದರು. 2012ರಲ್ಲಿ ಶಮಿ ಟೀಂ ಇಂಡಿಯಾ ಸೇರಲು ಕಸರತ್ತು ನಡೆಸಿದ್ದರು. ಇದೇ ವೇಳೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದ ಹಸೀನ್, ಕೋಲ್ಕತಾ ನೈಟ್ ರೈಡರ್ಸ್ ಚೀರ್ ಲೀಡರು. ಐಪಿಎಲ್ ಲೀಗ್ ವೇಳೆ ಇಬ್ಬರ ಭೇಟಿ ಆಯಿತು. ಶಮಿ ಮತ್ತು ಹಸೀನ್ ಫ್ರೆಂಡ್ಸ್ ಆದರು. ಈ ಗೆಳೆತನ ಹಲವು ದಿನಗಳ ನಂತರ ಪ್ರೇಮಕ್ಕೆ ತಿರುಗಿತು. ಇಬ್ಬರ ನಡುವೆ 13 ವರ್ಷಗಳ ಅಂತರವಿದ್ದರೂ. ಕೆಲ ವರ್ಷಗಳ ಕಾಲ ಒಟ್ಟಿಗೆ ಬದುಕಿದರು. ಇಬ್ಬರೂ ಕುಟುಂಬದಲ್ಲಿ ಒಪ್ಪಿಸಿ ಮದುವೆಯಾದರು. ಈ ಜೋಡಿಗೂ ಒಂದು ಪುಟಾಣಿ ಹೆಣ್ಣು ಮಗುವಾಯಿತು. ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ಶಮಿ ಮತ್ತು ಹಸೀನ್ ಬದುಕಿನಲ್ಲಿ ಬಿರುಕಿನ ಬಿರುಗಾಳಿ ಎದ್ದಿತು.

    ಹೌದು, ಶಮಿ ಮತ್ತು ಹಸೀನ್ ಒಟ್ಟಿಗೆ ಇದ್ದದ್ದು ಕೇವಲ ನಾಲ್ಕು ವರ್ಷ. ಅತೀ ಕಡಿಮೆ ಸಮಯವದು. ಇಷ್ಟು ಕಡಿಮೆ ಸಮಯದಲ್ಲಿ ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಶಮಿ ಅವರದ್ದು ಅದೇನು ತೊಂದರೆ ಆಯಿತೋ ಗೊತ್ತಿಲ್ಲ. ಏಕಾಏಕಿ ಶಮಿ ಮೇಲೆ ಹಲವಾರು ಆರೋಪಗಳನ್ನು ಮಾಡಿಬಿಟ್ಟರು ಹಸೀನ್. ಅದು ಅಂತಿಂಥ ಆರೋಪವಲ್ಲ, ಇಷ್ಟಪಟ್ಟು ಮದುವೆಯಾದ ಪತಿಯ ವಿರುದ್ಧವೇ ಕೌಟುಂಬಿಕ ದೌರ್ಜುನ್ಯದ ಆರೋಪ ಹೊರಸಿದರು. ಪತಿಗೆ ವಿವಾಹೇತರ ಸಂಬಂಧಗಳಿವೆ ಎಂದು ಕೋರ್ಟ್ ಮೆಟ್ಟಿಲು ಏರಿದರು. ಕೌಟುಂಬಿಕ ಜಗಳ ಬೀದಿ ರಂಪಾಟವಾಯಿತು. ತಮ್ಮ ಮೇಲೆ ಶಮಿ ಕುಟುಂಬವು ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೂಡ ಮಾಡಿದರು. ಶಮಿ ಮೇಲೆ ಕೊಲೆ ಬೆದರಿಕೆ ದೂರು ಕೂಡ ದಾಖಲಾಯಿತು. ಪತ್ನಿಯೇ ಶಮಿ ಬದುಕಿಗೆ ವಿಲನ್ ಆದರು. ಅಷ್ಟೊಂದು ದೂರುಗಳು ದಾಖಲಾಗುತ್ತಿದ್ದಂತೆಯೇ ಅಕ್ಷರಶಃ ನಲುಗಿ ಹೋದರು ಶಮಿ. ತನ್ನದೇನೂ ತಪ್ಪಿಲ್ಲವೆಂದು ಹೇಳಿಕೊಂಡರೂ, ಯಾರೂ ಒಪ್ಪಿಕೊಳ್ಳಲು ತಯಾರು ಇರಲಿಲ್ಲ. ಗಾಯದ ಮೇಲೆ ಬರೆ ಎನ್ನುವಂತೆ ಬಿಸಿಸಿಐ ಕೂಡ ಶಮಿಯನ್ನು ಕೆಲ ಕಾಲ ನಿಷೇಧ ಹೇರಿತ್ತು. ಪಾತಾಳಕ್ಕೆ ಕುಸಿದು ಬಿಟ್ಟರು ವೇಗಿ ಈ ಬೌಲರ್. ಈ ಎಲ್ಲ ಸಂಕೋಲೆಗಳಿಂದ ಶಮಿ ಬಿಡಿಸಿಕೊಂಡು ಮತ್ತೆ ಪಿಚ್‌ನಲ್ಲಿ ಕಾಣಿಸಿಕೊಂಡ್ಡದ್ದು ಮಾತ್ರ ರೋಚಕ.

  • ಕ್ರಿಕೆಟಿಗ ಮೊಹಮ್ಮದ್ ಶಮಿ ಒಪ್ಪಿದರೆ ಮದುವೆಗೆ ರೆಡಿ: ನಟಿ ಪಾಯಲ್ ಘೋಷ್

    ಕ್ರಿಕೆಟಿಗ ಮೊಹಮ್ಮದ್ ಶಮಿ ಒಪ್ಪಿದರೆ ಮದುವೆಗೆ ರೆಡಿ: ನಟಿ ಪಾಯಲ್ ಘೋಷ್

    ಭಾರತೀಯ ಕ್ರಿಕೆಟ್ (Marriage) ರಂಗದ ಹೆಸರಾಂತ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು(Mohammed Shami) ಮದುವೆಯಾಗಲು ಓಪನ್ ಆಫರ್ ಮಾಡಿದ್ದಾರೆ ದಕ್ಷಿಣದ ನಟಿ ಪಾಯಲ್ ಘೋಷ್. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನಾನು ಶಮಿಯನ್ನು ಮದುವೆಯಾಗಲು ರೆಡಿ ಇದ್ದೇನೆ. ಅವರು ಒಪ್ಪಿಕೊಳ್ಳಬೇಕು ಅಷ್ಟೇ’ ಎಂದು ಬರೆದುಕೊಂಡಿದ್ದಾರೆ. ಪಾಯಲ್ ಈ ಆಫರ್ ಸಖತ್ ವೈರಲ್ ಕೂಡ ಆಗಿದೆ.

    ಇಂಥದ್ದೇ ಕಾರಣಗಳಿಂದಾಗಿ ಪಾಯಲ್ ಸದಾ ಸುದ್ದಿಯಲ್ಲಿರುತ್ತಾರೆ. ಮೀಟೂ ಆರೋಪದ ಮೂಲಕ ಬಾಲಿವುಡ್ (Bollywood) ಗೆ ಬೆಂಕಿ ಹಚ್ಚಿದ್ದ ನಟಿ ಪಾಯಲ್ ಘೋಷ್ (Payal Ghosh) ಮೊನ್ನೆಯಷ್ಟೇ ಮತ್ತೊಂದು ಬಾಂಬ್ ಸಿಡಿಸಿದ್ದರು. ಈ ಹಿಂದೆ ಮೀಟೂ (Metoo) ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪಾಯಲ್, ‘ಬಾಲಿವುಡ್ ಟಾಪ್ ನಿರ್ದೇಶಕರೊಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದು ಅವರು ಆರೋಪ (Allegation) ಮಾಡಿದ್ದರು.

    ಇದೀಗ ಪಾಯಲ್ ಘೋಷ್ 11ನೇ ಸಿನಿಮಾವನ್ನು ಮುಗಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಖುಷಿಯ ಜೊತೆಗೆ ಕಹಿ ಮಾತುಗಳನ್ನೂ ಆಡಿದ್ದಾರೆ. ಕೇಳಿದವರೊಟ್ಟಿಗೆ ನಾನು ಮಲಗಿದ್ದರೆ, ನನ್ನ ದೇಹವನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗೆ 30 ಚಿತ್ರಗಳನ್ನು ಮಾಡಿರುತ್ತಿದ್ದೆ ಎಂದು ಬರೆದುಕೊಂಡಿದ್ದರು.

    ಬಾಲಿವುಡ್ ಸಿನಿಮಾ ರಂಗದ ಕರಾಳ ಮುಖವನ್ನು ಆಗಾಗ್ಗೆ ಬಿಚ್ಚಿಡುವ ಪಾಯಲ್, ಈ ಹಿಂದೆ ಅನೇಕ ನಿರ್ದೇಶಕರ ಮತ್ತು ನಿರ್ಮಾಪಕರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕೆಲವು ನಟಿಯರ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ದೇಹ ಹಂಚಿಕೊಂಡೆ ಪಾತ್ರಗಳನ್ನು ಪಡೆಯುವ ನಟಿಯರೂ ಇದ್ದಾರೆ ಎಂದು ನೇರವಾಗಿಯೇ ಮಾತನಾಡಿದ್ದರು. ಆಗಲೂ ಕೂಡ ಇವರ ಮಾತು ಅಷ್ಟೇ ಸದ್ದು ಮಾಡಿತ್ತು.

    ಈ ಬಾರಿಯ ಕಾಮೆಂಟ್ ಗೂ ಅಷ್ಟೇ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾರೆಲ್ಲ ನಟಿಯರು ಹೀಗೆ ಅವಕಾಶ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿ ಎಂದು ಕೆಲವರು ಕೇಳಿದ್ದಾರೆ. ಅಲ್ಲದೇ, ನಿಮ್ಮನ್ನು ಯಾರೆಲ್ಲ ಮಲಗಲು ಕರೆದಿದ್ದಾರೆ ಎನ್ನುವುದನ್ನು ತಿಳಿಸಿರಿ ಎಂದು ಕಾಮೆಂಟ್ ಮಾಡಿದ್ದರು.

     

    ಪಾಯಲ್ ಘೋಷ್ ಸಿನಿಮಾ ರಂಗದ ಬಗ್ಗೆ ಆಗಾಗ್ಗೆ ಈ ರೀತಿಯ ಬಾಂಬ್ ಗಳನ್ನು ಸಿಡಿಸುತ್ತಲೇ ಇರುತ್ತಾರೆ. ಒಂದಷ್ಟು ಬಾರಿ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡರೆ, ಮತ್ತಷ್ಟು ಬಾರಿ ನೆಗ್ಲೆಟ್ ಮಾಡಲಾಗುತ್ತದೆ. ಆದರೂ, ಅವರು ಹೇಳುವುದನ್ನು ನಿಲ್ಲಿಸುವುದಿಲ್ಲ. ಸಿನಿಮಾ ರಂಗ ಮತ್ತು ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಪಾಯಲ್, ಬೋಲ್ಡ್ ಫೋಟೋ ಶೂಟ್ ಮೂಲಕವೂ ಸುದ್ದಿಯಲ್ಲಿರುತ್ತಾರೆ.

  • ದೇಹ ಹಂಚಿದ್ದರೆ 30ನೇ ಸಿನಿಮಾ ಮುಗಿಸುತ್ತಿದ್ದೆ: ನಟಿ ಪಾಯಲ್ ಸಿಡಿಸಿದ ಬಾಂಬ್

    ದೇಹ ಹಂಚಿದ್ದರೆ 30ನೇ ಸಿನಿಮಾ ಮುಗಿಸುತ್ತಿದ್ದೆ: ನಟಿ ಪಾಯಲ್ ಸಿಡಿಸಿದ ಬಾಂಬ್

    ಮೀಟೂ ಆರೋಪದ ಮೂಲಕ ಬಾಲಿವುಡ್ (Bollywood) ಗೆ ಬೆಂಕಿ ಹಚ್ಚಿದ್ದ ನಟಿ ಪಾಯಲ್ ಘೋಷ್ (Payal Ghosh) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಮೀಟೂ (Metoo) ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪಾಯಲ್, ‘ಬಾಲಿವುಡ್ ಟಾಪ್ ನಿರ್ದೇಶಕರೊಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದು ಅವರು ಆರೋಪ (Allegation) ಮಾಡಿದ್ದರು.

    ಇದೀಗ ಪಾಯಲ್ ಘೋಷ್ 11ನೇ ಸಿನಿಮಾವನ್ನು ಮುಗಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಖುಷಿಯ ಜೊತೆಗೆ ಕಹಿ ಮಾತುಗಳನ್ನೂ ಆಡಿದ್ದಾರೆ. ಕೇಳಿದವರೊಟ್ಟಿಗೆ ನಾನು ಮಲಗಿದ್ದರೆ, ನನ್ನ ದೇಹವನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗೆ 30 ಚಿತ್ರಗಳನ್ನು ಮಾಡಿರುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದ ಕರಾಳ ಮುಖವನ್ನು ಆಗಾಗ್ಗೆ ಬಿಚ್ಚಿಡುವ ಪಾಯಲ್, ಈ ಹಿಂದೆ ಅನೇಕ ನಿರ್ದೇಶಕರ ಮತ್ತು ನಿರ್ಮಾಪಕರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕೆಲವು ನಟಿಯರ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ದೇಹ ಹಂಚಿಕೊಂಡೆ ಪಾತ್ರಗಳನ್ನು ಪಡೆಯುವ ನಟಿಯರೂ ಇದ್ದಾರೆ ಎಂದು ನೇರವಾಗಿಯೇ ಮಾತನಾಡಿದ್ದರು. ಆಗಲೂ ಕೂಡ ಇವರ ಮಾತು ಅಷ್ಟೇ ಸದ್ದು ಮಾಡಿತ್ತು. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ಈ ಬಾರಿಯ ಕಾಮೆಂಟ್ ಗೂ ಅಷ್ಟೇ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾರೆಲ್ಲ ನಟಿಯರು ಹೀಗೆ ಅವಕಾಶ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿ ಎಂದು ಕೆಲವರು ಕೇಳಿದ್ದಾರೆ. ಅಲ್ಲದೇ, ನಿಮ್ಮನ್ನು ಯಾರೆಲ್ಲ ಮಲಗಲು ಕರೆದಿದ್ದಾರೆ ಎನ್ನುವುದನ್ನು ತಿಳಿಸಿರಿ ಎಂದು ಕಾಮೆಂಟ್ ಮಾಡಿದ್ದಾರೆ.

     

    ಪಾಯಲ್ ಘೋಷ್ ಸಿನಿಮಾ ರಂಗದ ಬಗ್ಗೆ ಆಗಾಗ್ಗೆ ಈ ರೀತಿಯ ಬಾಂಬ್ ಗಳನ್ನು ಸಿಡಿಸುತ್ತಲೇ ಇರುತ್ತಾರೆ. ಒಂದಷ್ಟು ಬಾರಿ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡರೆ, ಮತ್ತಷ್ಟು ಬಾರಿ ನೆಗ್ಲೆಟ್ ಮಾಡಲಾಗುತ್ತದೆ. ಆದರೂ, ಅವರು ಹೇಳುವುದನ್ನು ನಿಲ್ಲಿಸುವುದಿಲ್ಲ. ಸಿನಿಮಾ ರಂಗ ಮತ್ತು ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಪಾಯಲ್, ಬೋಲ್ಡ್ ಫೋಟೋ ಶೂಟ್ ಮೂಲಕವೂ ಸುದ್ದಿಯಲ್ಲಿರುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ಹುಭಾಷಾ ನಟಿ ಪಾಯಲ್ ಘೋಷ್ (Payal Ghosh) ಅವರು ಸೋಷಿಯಲ್ ಮೀಡಿಯಾದಲ್ಲಿ ಆತ್ಮಹತ್ಯೆ ಪತ್ರ ಶೇರ್ ಮಾಡಿಕೊಂಡು ಸಂಚಲನ ಮೂಡಿಸಿದ್ದಾರೆ. ಸೂಸೈಡ್ ನೋಟ್ (Death Note) ಬರೆದಿರುವ ಪೇಪರ್‌ನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವರ್ಷಧಾರೆ (Varshadaare) ನಟಿ ಚರ್ಚೆಗೆ  ಗ್ರಾಸವಾಗಿದ್ದಾರೆ. ಇದನ್ನೂ ಓದಿ: ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ತೆಲುಗು, ಹಿಂದಿ ಮತ್ತು ಕನ್ನಡ ಸಿನಿಮಾದಲ್ಲೂ ನಟಿ ಪಾಯಲ್ (Payal) ಅಭಿನಯಿಸಿದ್ದಾರೆ. ಕನ್ನಡದ `ವರ್ಷಧಾರೆ’ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿ ಕಿರುತೆರೆಯ `ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್‌ನಲ್ಲಿ ರಾಧಿಕಾ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು.

    ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದರು ಎಂದು ನಟಿ ಪಾಯಲ್ ಹೇಳಿದ್ದರು. ರಾತ್ರಿ 10 ಗಂಟೆಗೆ ಔಷಧಿ ತರಲು ಹೋಗಿದ್ದಾಗ ನಡೆದ ಘಟನೆಯಿದು. ನಟಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ನಟಿಯ ಕೈಗೆ ರಾಡ್‌ನಿಂದ ಪೆಟ್ಟು ಬಿದ್ದಿತ್ತು. ಈ ಬಗ್ಗೆ ಪಾಯಲ್ ತಿಳಿಸಿದ್ದರು. ಇದಾದ ಬಳಿಕ ಅವರು ಕುಗ್ಗಿ ಹೋಗಿದ್ದರು. ಈಗ ಸೂಸೈಡ್ ನೋಟ್ ಬರೆದಿರುವ ನಟಿಯ ನಡೆ ಬಗ್ಗೆ ಫ್ಯಾನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Payal Ghosh (@iampayalghosh)

    ಇದೀಗ ನಟಿ ಪಾಯಲ್ ಅವರು ಸೂಸೈಡ್ ನೋಟ್ ಬರೆದಿರುವ ಪೇಪರ್ ಮುಂಬೈನ ತಾಜ್‌ಮಹಲ್ ಟವರ್ ಎಂದು ಉಲ್ಲೇಖಗೊಂಡಿದೆ. ಅದರಲ್ಲಿ, “ನಾನು ಪಾಯಲ್ ಘೋಷ್. ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಇವರೇ ಕಾರಣ” ಎಂದು ಬರೆದುಕೊಂಡಿದ್ದಾರೆ. ಅವರು ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಇದರಿಂದ ಜನರೂ ಗೊಂದಲಕ್ಕೆ ಸಿಲುಕಿದ್ದಾರೆ. ನೂರಾರು ಮಂದಿ ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಕೆಯ ಯೋಗಕ್ಷೇಮದ ಬಗ್ಗೆ ಕೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಈ ಸೂಕ್ಷ್ಮ ವಿಷಯದಲ್ಲೂ ಪಾಯಲ್ ಅವರನ್ನು ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ.

  • ಅನುರಾಗ್ ಕಶ್ಯಪ್ ಲೈಂಗಿಕ ಕಿರುಕುಳ ನೀಡಿದ್ದಾರೆ- ನಟಿ ಪಾಯಲ್

    ಅನುರಾಗ್ ಕಶ್ಯಪ್ ಲೈಂಗಿಕ ಕಿರುಕುಳ ನೀಡಿದ್ದಾರೆ- ನಟಿ ಪಾಯಲ್

    ಮುಂಬೈ: ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ನಟಿ, ಅನುರಾಗ್ ಕಶ್ಯಪ್ ನನ್ನೊಂದಿಗೆ ಬಲವಂತವಾಗಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ದಯವಿಟ್ಟು ಬೇಗ ಕ್ರಮ ಕೈಗೊಳ್ಳಿ ಸೃಜನಶೀಲ ವ್ಯಕ್ತಿಯ ಹಿಂದಿನ ರಾಕ್ಷಸ ಗುಣವನ್ನು ದೇಶ ನೋಡಲಿ. ಇದರಿಂದ ನನಗೆ ಹಾನಿಯಾಗಬಹುದು ಎಂಬುದರ ಅರಿವು ನನಗಿದೆ. ನನ್ನ ಸುರಕ್ಷತೆಗೆ ಅಪಾಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿ ಕೇಳಿಕೊಂಡಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಪ್ರಧಾನಿ ಕಚೇರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಯಲ್ ಟ್ವೀಟ್ ಟ್ಯಾಗ್ ಮಾಡಿದ್ದಾರೆ.

    ಪಾಯಲ್ ಆರೋಪಕ್ಕೆ ಅನುರಾಗ್ ಕಶ್ಯಪ್ ಸರಣಿ ಟ್ವೀಟ್‍ಗಳ ಮೂಲಕ ಪ್ರತಿಕ್ರಿಯಿಸಿದ್ದು, ನನ್ನನ್ನು ಸುಮ್ಮನಿರಿಸುವ ಪ್ರಯತ್ನವನ್ನು ತುಂಬಾ ಸಮಯದ ಬಳಿಕ ಮಾಡುತ್ತಿದ್ದೀರಿ. ಇರಲಿ, ನನ್ನನ್ನು ಮೌನಗೊಳಿಸುವ ಪ್ರಯತ್ನದಲ್ಲಿ ನಿಮ್ಮ ಜೊತೆಗೆ ಹಲವು ಮಹಿಳೆಯರನ್ನು ಎಳೆದು ತಂದಿದ್ದೀರಿ. ಸ್ವಲ್ಪ ಮಿತಿ ಇರಲಿ, ಯಾವುದೇ ಆರೋಪ, ಏನೇ ಇರಲಿ ಇದೆಲ್ಲವೂ ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

    ನನ್ನ ಮೇಲೆ ಆರೋಪ ಹೊರಿಸುವ ಮೂಲಕ ನೀವು ನನ್ನ ಕಲಾವಿದರು ಹಾಗೂ ಬಚ್ಚನ್ ಕುಟುಂಬವನ್ನು ಎಳೆಯಲು ಪ್ರಯತ್ನಿಸಿದ್ದೀರಿ ಆದರೆ ವಿಫಲವಾಗಿದ್ದೀರಿ. ನಾನು ಎರಡು ಬಾರಿ ವಿವಾಹವಾಗಿದ್ದೇನೆ, ಅದು ನನ್ನ ಅಪರಾಧವಾಗಿದ್ದರೆ ಅದನ್ನು ಸ್ವೀಕರಿಸುತ್ತೇನೆ ಮತ್ತು ತುಂಬಾ ಪ್ರೀತಿಸುತ್ತೇನೆ. ಇದನ್ನೂ ನಾನು ಒಪ್ಪುತ್ತೇನೆ.

    ಈ ಕುರಿತು ನನ್ನ ಮೊದಲ ಪತ್ನಿ, ಎರಡನೇ ಪತ್ನಿ ಅಥವಾ ಇನ್ನಾವುದೇ ಲವರ್ ಆಗಲಿ ಇಲ್ಲವೆ ಅನೇಕ ನಟಿಯರೇ ಆಗಲಿ. ಹಲವು ನಟಿಯರು ಹಾಗೂ ಮಹಿಳೆಯ ತಂಡದೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅಲ್ಲದೆ ಹಲವು ಮಹಿಳೆಯರು ಖಾಸಗಿಯಾಗಿ ಹಾಗೂ ಸಾರ್ವಜನಿಕವಾಗಿ ನನ್ನನ್ನು ಭೇಟಿ ಮಾಡಿದ್ದಾರೆ ಎವರೆಲ್ಲರನ್ನೂ ಕೇಳಿ ಎಂದು ಹೇಳಿದ್ದಾರೆ.

    ನಾನು ಆ ರೀತಿ ವರ್ತಿಸುವುದಿಲ್ಲ. ಇಂತಹ ವರ್ತನೆಯನ್ನು ಸಹಿಸುವುದೂ ಇಲ್ಲ. ಏನಾಗುತ್ತದೆಯೋ ನೋಡೋಣ. ಈ ಆರೋಪ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ನಿಮ್ಮ ವಿಡಿಯೋದಲ್ಲೇ ಗೋಚರಿಸುತ್ತದೆ. ನನ್ನ ಮೇಲಿನ ನಿಮ್ಮ ಆಶೀರ್ವಾದ ಹಾಗೂ ಪ್ರೀತಿ ಹೀಗೆ ಇರಲಿ. ಇಂಗ್ಲಿಷ್ ಟ್ವೀಟ್‍ಗೆ ಹಿಂದಿಯಲ್ಲಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ.