Tag: ಪಾನ್ ಮಸಾಲ

  • ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದ ಶಾಸಕ – ಸ್ವಚ್ಛಗೊಳಿಸಿದ ಸ್ಪೀಕರ್‌

    ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದ ಶಾಸಕ – ಸ್ವಚ್ಛಗೊಳಿಸಿದ ಸ್ಪೀಕರ್‌

    – ಉಗುಳಿದ ಶಾಸಕರನ್ನ ವಿಡಿಯೋನಲ್ಲಿ ನೋಡಿದ್ದೇನೆ, ತಪ್ಪೊಪ್ಪಿಕೊಳ್ಳಿ ಅಂತ ವಾರ್ನಿಂಗ್‌

    ಲಕ್ನೋ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿಂದು (Uttar Pradesh Assembly) ವಿಚಿತ್ರ ಪ್ರಸಂಗವೊಂದು ನಡೆದಿದೆ. ಸ್ಪೀಕರ್‌ ಸತೀಶ್‌ ಮಹಾನಾ ಅವರು, ಕೆಲ ಸದಸ್ಯರು ಪಾನ್‌ ಮಸಾಲ ಸೇವಿಸಿದ ಬಳಿಕ ವಿಧಾನಸಭೆಯ ಸಭಾಂಗಣದಲ್ಲೇ ಉಗುಳಿರುವ (Spitting Pan Masala) ವಿಚಾರವನ್ನು ಪ್ರಸ್ತಾಪಿಸಿದರು. ಅಲ್ಲದೇ ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿದರು.

    ಕಲಾಪ ಆರಂಭಕ್ಕೂ ಮುನ್ನವೇ ಮಾತನಾಡಿದ ಸ್ಪೀಕರ್‌, ಇಂದು ಬೆಳಗ್ಗೆ ಮಾನ್ಯ ಸದಸ್ಯರೊಬ್ಬರು ನಮ್ಮ ವಿಧಾನಸೌಧದ ಈ ಸಭಾಂಗಣದಲ್ಲಿ ಪಾನ್‌ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ನಾನಿಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ʻಕೈʼ ಕಾರ್ಯಕರ್ತೆ ಹಿಮಾನಿ ಹತ್ಯೆ ಕೇಸ್‌ – ಮೃತದೇಹ ಸೂಟ್‌ಕೇಸ್‌ನಲ್ಲಿ ಹಾಕಿ ಆರೋಪಿ ಎಳೆದೊಯ್ಯುವ ಸಿಸಿಟಿವಿ ದೃಶ್ಯ ಪತ್ತೆ

    ಮುಂದುವರಿದು.. ನಾನು ಉಗುಳಿದ ಶಾಸಕರನ್ನು ವಿಡಿಯೋನಲ್ಲಿ ನೋಡಿದ್ದೇನೆ. ಆದ್ರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ಹಾಗಾಗಿ ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಎಲ್ಲಾ ಸದರಿಗೆ ಇತ್ತಾಯಿಸುತ್ತೇನೆ. ಈ ಸಭೆಯಲ್ಲಿ ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿ ಪ್ರಶ್ನೆಯಲ್ಲಿರುವ ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: PUBLiC TV Impact | ಸಿಎಂ ಮನೆ ಬಳಿಯಿದ್ದ ವ್ಯಾಪಾರ ರಹಿತ ವಲಯ ಬೋರ್ಡ್ ತೆಗೆದ ಪಾಲಿಕೆ

    ಕಳೆದ ಫೆ.20 ರಂದು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್‌ ರಾಜ್ಯದ ಬಜೆಟ್ 2024-25ರ ಬಜೆಟ್‌ಗಿಂತ ಶೇ. 9.8 ರಷ್ಟು ಹೆಚ್ಚಾಗಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ವಿಜಯಪುರ ಕಾನ್ಸ್‌ಟೇಬಲ್‌ ಭಾವುಕ ಪೋಸ್ಟ್‌ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ

  • IND vs NZ  ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    ಲಕ್ನೋ: ಕಾನ್ಪುರದ ಗ್ರೀನ್ ಪಾರ್ಕ್‍ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಎರಡು ತಂಡಗಳ ನಡುವೆ ಜಿದ್ದಾ ಜಿದ್ದಿನಿಂದ ನಡೆಯುತ್ತಿದೆ. ಈ ನಡುವೆ ಪಂದ್ಯ ನೋಡಲು ಬಂದ ಪ್ರೇಕ್ಷಕನೊಬ್ಬ ಬಾಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್‍ನಲ್ಲಿ ಸಂಭಾಷಣೆ ಮಾಡಿ ಸುದ್ದಿಯಾಗುತ್ತಿದ್ದಾನೆ.

    ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಈತ ಬಾಯಿ ತುಂಬಾ ಗುಟ್ಕಾ ಹಾಕಿಕೊಂಡು ಬಿಂದಾಸಾಗಿ ಚೇರ್ ಮೇಲೆ ಒರಗಿಕೊಂಡು ಫೋನ್‍ನಲ್ಲಿ ಬ್ಯುಸಿ ಆಗಿದ್ದ ಈ ವೇಳೆ ಕ್ಯಾಮೆರಾದ ಕಣ್ಣು ಆತನ ಮೇಲೆ ಬಿದ್ದಿದೆ. ಆದರೆ ಆತ ಮಾತ್ರ ಫೋನ್ ಸಂಭಾಷಣೆ ಮುಂದುವರಿಸಿಕೊಂಡು ಕ್ಯಾಮೆರಾಕ್ಕೆ ಕೈ ಬೀಸಿ ಸುಮ್ಮನಿದ್ದ. ಈ ನಡುವೆ ವೀಕ್ಷಕ ವಿವರಣೆಕಾರರು ಆತನ ಬಾಯಲ್ಲಿ ಇದ್ದ ಗುಟ್ಕಾದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಆ ಬಳಿಕ ಆತನ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಆತನ ಬಗ್ಗೆ ವಿವಿಧ ಬಗೆಯ ಟ್ರೋಲ್ ಹೊರಬರುತ್ತಿದೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಶತಕದಾಟ – ಕಿವೀಸ್ ಉತ್ತಮ ಆರಂಭ

    ಉತ್ತರ ಪ್ರದೇಶದಲ್ಲಿ ಗುಟ್ಕಾ ಹಾಕುವುದು ಮಾಮೂಲಿ ಈತ ಕೂಡ ಗುಟ್ಕಾ ಹಾಕಿಕೊಂಡು ಮೈದಾನಕ್ಕೆ ಆಗಮಿಸಿದ್ದು, ಇದೀಗ ಬಾಯಲ್ಲಿ ಇದ್ದ ಗುಟ್ಕಾ ಉಗಿಯದೆ ಫೋನ್‍ನಲ್ಲಿ ಮಾತನಾಡಿ ವೈರಲ್ ಆಗಿದ್ದಾನೆ.  ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆಯ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್

  • ಕೊರೊನಾ ಎಫೆಕ್ಟ್ – ಪಾನ್ ಮಸಾಲ, ಗುಟ್ಕಾ ಉತ್ಪಾದನೆ ಬಂದ್

    ಕೊರೊನಾ ಎಫೆಕ್ಟ್ – ಪಾನ್ ಮಸಾಲ, ಗುಟ್ಕಾ ಉತ್ಪಾದನೆ ಬಂದ್

    ಲಕ್ನೋ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಭಾರತ ಬಂದ್ ಘೋಷಣೆ ಬಳಿಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತಾತ್ಕಾಲಿಕವಾಗಿ ಪಾನ್ ಮಸಾಲ ಉತ್ಪಾದನೆಗೆ ಬ್ರೇಕ್ ಹಾಕಿದೆ.

    ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆ ಪಾನ್ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ ಮಾಡದಂತೆ ಉತ್ಪಾದಕರಿಗೆ ಉತ್ತರ ಪ್ರದೇಶ ಸರ್ಕಾರದಿಂದ ಸೂಚನೆ ನೀಡಿದೆ. ತಂಬಾಕು ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಲಾಲಾ ರಸದಲ್ಲಿರುವ ಸೋಂಕು ಮತ್ತೊಬ್ಬರಿಗೆ ಹರಡುಬಹುದು ಎನ್ನುವ ಕಾರಣಕ್ಕೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಗುಟ್ಕಾ, ಪಾನ್ ಮಸಾಲ ಮತ್ತು ಚೂಯಿಂಗ್ ತಂಬಾಕು ಬಳಕೆಯನ್ನು ತಕ್ಷಣ ನಿಷೇಧಿಸುವಂತೆ ಮುಖ್ಯಮಂತ್ರಿ ಹಿಂದೆ ಆದೇಶಿಸಿದರು. ಆದಾಗ್ಯೂ ಸರ್ಕಾರಿ ನೌಕರರು ತಂಬಾಕು ಮತ್ತು ಪಾನ್ ಮಸಾಲವನ್ನು ಅಗಿಯಲು ಪ್ರಾರಂಭಿಸಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ತಂಬಾಕು ನಿಷೇಧದ ಬದಲಿಗೆ ಅದರ ಉತ್ಪಾದನೆಗೆ ಬ್ರೇಕ್ ಹಾಕುವ ಪ್ರಯತ್ನ ಸಿಎಂ ಯೋಗಿ ಆದಿತ್ಯನಾಥ್ ಮಾಡಿದ್ದಾರೆ.

  • ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್

    ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್

    ಪಟ್ನಾ: ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಹೊಂದಿರುವ 12 ಬಗೆಯ ಪಾನ್ ಮಸಾಲ ಬ್ರಾಂಡ್‍ಗಳನ್ನು ಬಿಹಾರದ ಸರ್ಕಾರ ಬ್ಯಾನ್ ಮಾಡಿದೆ.

    ಮೆಗ್ನೀಸಿಯಮ್ ಕಾರ್ಬೋನೇಟ್ ಹೊಂದಿರುವ ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಸಾಗಣಿಕೆ ಅಥವಾ ಮಾರಾಟವನ್ನು ಬಿಹಾರದಲ್ಲಿ ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಗುಟ್ಕಾ ಪಾನ್ ಮಸಾಲದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯದ ಆಹಾರ ಮತ್ತು ಸುರಕ್ಷತಾ ಇಲಾಖೆ ಈ ಆದೇಶ ಹೊರಡಿಸಿದೆ. ಈ ಹಿಂದೆ ಆಹಾರ ಮತ್ತು ಸುರಕ್ಷತಾ ವಿಭಾಗವು ಪರೀಕ್ಷಿಸಿದಾಗ ಕೆಲ ಪಾನ್ ಮಸಾಲ ಬ್ರಾಂಡ್‍ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ ಅಂಶ ಪತ್ತೆಯಾಗಿತ್ತು. ಈ ರಾಸಾಯನಿಕದ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು ಎಂದು ವರದಿ ನೀಡಿತ್ತು.

    ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ಪರೀಕ್ಷಿಸಲ್ಪಟ್ಟ, ರಾಜ್ನಿಗಂಧ ಪಾನ್ ಮಸಾಲಾ, ರಾಜ್ ನಿವಾಸ್ ಪಾನ್ ಮಸಾಲ, ಸುಪ್ರೀಂ ಪಾನ್ ಪರಾಗ್ ಪಾನ್ ಮಸಾಲ, ಪಾನ್ ಪರಾಗ್ ಪಾನ್ ಮಸಾಲ, ಬಹಾರ್ ಪಾನ್ ಮಸಾಲ, ಬಾಹುಬಲಿ ಪಾನ್ ಮಸಾಲ, ರಾಜಶ್ರೀ ಪಾನ್ ಮಸಾಲ, ರೌನಕ್ ಪಾನ್ ಮಸಾಲ, ಸಿಗ್ನೇಚರ್ ಪಾನ್ ಮಸಾಲಾ, ಕಮಲಾ ಲೈಕ್ಸ್ ಪಾನ್ ಮಸಾಲಾ, ಮಧು ಪಾನ್ ಮಸಾಲ ಬ್ರಾಂಡ್‍ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಿದೆ.