Tag: ಪಾನ್

  • 600 ರೂ. ವಿಶೇಷ ಗೋಲ್ಡ್ ಪಾನ್ – ವೀಡಿಯೋ ವೈರಲ್

    600 ರೂ. ವಿಶೇಷ ಗೋಲ್ಡ್ ಪಾನ್ – ವೀಡಿಯೋ ವೈರಲ್

    ನವದೆಹಲಿ: ಪಾನ್ ಸೇವಿಸುವುದು ಎಂದರೆ ನಿಮಗೆ ಇಷ್ಟನಾ? ಪಾನ್ ಪ್ರಿಯರಿಗೆ ತಾಜಾ ಸುದ್ದಿಯೊಂದು ಇಲ್ಲಿದೆ. ಹೌದು ದೆಹಲಿಯ ಕೊನಾಟ್ ಎಂಬ ಪ್ರದೇಶದರಲ್ಲಿರುವ ಪಾನ್  ಪಾರ್ಲರ್‌ನಲ್ಲಿ  600 ರೂ.ಗಳ ವಿಶೇಷ ಗೋಲ್ಡ್ ಪಾನ್‍ನನ್ನು ಮಾರಾಟ ಮಾಡಲಾಗುತ್ತಿದೆ. ಸದ್ಯ ಈ ಪಾನ್ ವೀಡಿಯೋವನ್ನು ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವೀಡಿಯೋವನ್ನು ಯಮುಸ್ ಪಂಚಾಯತ್ ಎಂಬ ಖಾತೆಯಲ್ಲಿ ಶೇರ್ ಮಾಡಿದ್ದು, ಮಹಿಳೆಯೊಬ್ಬರು ಒಣಗಿದ ಖರ್ಜೂರ, ಏಲಕ್ಕಿ, ಸಿಹಿ ಚಟ್ನಿ, ಗುಲ್ಕಂಡ್, ಲವಂಗ ಮತ್ತು ಚೆರ್ರಿ ಬಿಟ್ , ತೆಂಗಿನ ಕಾಯಿ ತುರಿ ಸೇರಿದಂತೆ ಹಲವಾರು ಪದಾರ್ಥಗಳನ್ನು ಹಾಕಿ ಗೋಲ್ಡನ್ ಪಾನ್‍ನನ್ನು ತಯಾರಿಸುತ್ತಾರೆ. ಬಳಿಕ ಅದನ್ನು ಎಲೆಯಿಂದ ಮುಚ್ಚಿ ಗೋಲ್ಡನ್ ಪೇಪರ್‍ನಿಂದ ಸುತ್ತುತ್ತಾರೆ. ನಂತರ ಕಡ್ಡಿಗೆ ಚೆರ್ರಿ ಸೇರಿಸಿ ಎಲೆ ಮಧ್ಯೆ ಚುಚ್ಚುವುದನ್ನು ಕಾಣಬಹುದಾಗಿದೆ.

    ಈ ರಾಫೆಲೋ ಗೋಲ್ಡ್ ಪಾನ್ ಬೆಲೆ 600 ರೂ. ಆಗಿದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾವಿರಕ್ಕೂ ಅಧಿಕ ವಿವ್ಸ್ ಬಂದಿದ್ದು, ನೆಟ್ಟಿಗರು ಕಮೆಂಟ್ ಸೆಕ್ಷನ್‍ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

  • ಐಟಿ  ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ನವದೆಹಲಿ: ಕೊನೆಯ ಕ್ಷಣದಲ್ಲಿ ಆದಾಯ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್)  ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್.

    ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಐ.ಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.

    ಐ.ಟಿ ರಿಟರ್ನ್ಸ್  ಸಲ್ಲಿಕೆ ವೇಳೆ ಕೊನೆ ಕ್ಷಣದಲ್ಲಿ ಹಲವು ಮಂದಿಗೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಡೆಡ್‍ಲೈನ್ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳ್ಳಲು ಆಗಸ್ಟ್ 31ರ ಒಳಗಡೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಯಾಗಬೇಕು ಎಂದು ತಿಳಿಸಿದೆ.

  • ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಬೆಂಗಳೂರು: ಜುಲೈ 1 ರಿಂದ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಕಡ್ಡಾಯಗೊಂಡ ಕಾರಣ ಹೀಗಾಗಿ ಬಹಳಷ್ಟು ಜನ ಹೇಗಪ್ಪಾ  ಆಧಾರ್ ಜೋಡಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಆದರೆ ಈ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಕೇವಲ ಒಂದೇ ನಿಮಿಷದ ಒಳಗಡೆ ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡಿಗೆ ಜೋಡಿಸಬಹುದು. ಹೇಗೆ ಜೋಡಣೆ ಮಾಡಬಹುದು ಎನ್ನುವ ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

    ಸ್ಟೆಪ್ 1: ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ https://www.incometaxindiaefiling.gov.in/   ಪೋರ್ಟಲ್ ಹೋಗಿ.

    ಸ್ಟೆಪ್ 2: ವೆಬ್‍ಸೈಟ್ ಓಪನ್ ಆಗುತ್ತಿದ್ದಂತೆ ಅದರ ಹೋಮ್ ಪೇಜ್‍ನ ಎಡಗಡೆ ಸರ್ವಿಸಸ್ ಎನ್ನುವ ವಿಭಾಗ ಇದೆ. ಇದರಲ್ಲಿ ಮೇಲುಗಡೆ ಲಿಂಕ್ ಆಧಾರ್ ಬ್ಲಿಂಕ್ ಆಗುತ್ತಿರುತ್ತದೆ. ಈ ಲಿಂಕ್  ಕ್ಲಿಕ್ ಮಾಡಿ.

    ಸ್ಟೆಪ್ 3: ಲಿಂಕ್ ಆಧಾರ್ ಕ್ಲಿಕ್ ಮಾಡಿದ ಕೂಡಲೇ ಒಂದು ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನೀವು ಪಾನ್ ನಂಬರ್, ಆಧಾರ್ ನಂಬರ್, ಹೆಸರು ಟೈಪಿಸಬೇಕು. ಇದಾದ ಬಳಿಕ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಟೈಪ್ ಮಾಡಬೇಕು. ಒಂದು ವೇಳೆ ಇಮೇಜ್ ಕ್ಯಾಪ್ಚಾ ಕೋಡ್ ನೋಡಲು ಸಾಧ್ಯವಿಲ್ಲದಿದ್ದರೆ ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಆಯ್ಕೆಯೂ ಇದೆ. ಸೇರಿಸಬೇಕಾದ ಎಲ್ಲ ಮಾಹಿತಿಗಳನ್ನು ಟೈಪಿಸಿದ ಬಳಿಕ ಕೆಳಗಡೆ ಹಸಿರು ಬಾಕ್ಸ್ ನಲ್ಲಿರುವ ಲಿಂಕ್ ಆಧಾರ್ ಕ್ಲಿಕ್ ಮಾಡಬೇಕು. ನೀವು ಟೈಪಿಸಿದ ಆಧಾರ್ ಮಾಹಿತಿ ಮತ್ತು ಪಾನ್ ನಂಬರ್‍ಗಳು ಸರಿಯಾಗಿ ಇದ್ದರೆ ನಿಮ್ಮ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಸ್ಕ್ರೀನ್‍ನಲ್ಲಿ ಮರುಕ್ಷಣವೇ ಬರುತ್ತದೆ. ಒಂದು ವೇಳೆ ಈ ಸಂದೇಶ ಬಾರದೇ ಇದ್ದಲ್ಲಿ ನೀವು ತಪ್ಪು ಮಾಹಿತಿ ನಮೂದಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.

     

    ಮೊಬೈಲ್ ಎಸ್‍ಎಂಎಸ್ ಮೂಲಕ ಜೋಡಣೆ ಹೇಗೆ?
    ಆಧಾರ್ ಜೋಡಣೆಯನ್ನು ಮೊಬೈಲ್ ಮೂಲಕ ಮಾಡಲು ಸಾಧ್ಯವಿದೆ. ನಿಮ್ಮ ಮೊಬೈಲ್ ನಿಂದ 56768 ಅಥವಾ 56161 ಎಸ್‍ಎಂಎಸ್ ಕಳುಹಿಸಿ ಜೋಡಣೆ ಮಾಡಬಹುದು. ನಿಮ್ಮ ಸಂದೇಶ ಈ ಮಾದರಿಯಲ್ಲಿ ಇರಬೇಕು.

    UIDPAN<SPACE><12 digit Aadhaar><Space><10 digit PAN>

    ಉದಾಹರಣೆ: UIDPAN 234567890123 ABCDE1234F

    ಜೋಡಣೆ ಯಾಕೆ ಆಗಲ್ಲ?
    ಪಾನ್ ಕಾರ್ಡ್ ಗೆ ನೀಡಿದ ಮಾಹಿತಿ ಮತ್ತು ಆಧಾರ್ ಕಾರ್ಡ್ ಪಡೆಯುವ ವೇಳೆ ನೀಡಿದ ಮಾಹಿತಿ ಸರಿಯಾಗಿ ಇಲ್ಲದೇ ಇದ್ದರೆ ಈ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ. ವಿಶೇಷವಾಗಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ, ಇನ್ಶಿಯಲ್ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಪಾನ್ ಕಾರ್ಡಿಗೆ ಆಧಾರ್ ಜೋಡಣೆಯಾಗುವುದಿಲ್ಲ.

    ಆಧಾರ್ ಕಡ್ಡಾಯ ಮಾಡಿದ್ದು ಯಾಕೆ?
    ಬಹಳಷ್ಟು ಜನ ತೆರಿಗೆಯನ್ನು ವಂಚಿಸಲು ಬೇರೆ ಬೇರೆ ಪಾನ್ ಕಾರ್ಡ್ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ತೆರಿಗೆಯನ್ನು ವಂಚನೆ ಮಾಡುವ ಕುಳಗಳನ್ನು ನಿಯಂತ್ರಿಸಲು ಪಾನ್ ಕಾರ್ಡಿಗೆ ಆಧಾರ್ ಜೋಡಣೆ ಸಂಬಂಧ ಆದಾಯ ತೆರಿಗೆ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?