Tag: ಪಾನೀಯ

  • 8 ಕೋಟಿ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚಲು ಸಹಕಾರಿಯಾಯ್ತು 10 ರೂ. ಜ್ಯೂಸ್

    8 ಕೋಟಿ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚಲು ಸಹಕಾರಿಯಾಯ್ತು 10 ರೂ. ಜ್ಯೂಸ್

    ಚಂಡೀಗಢ: ಕಳ್ಳರನ್ನು (Theif) ಪತ್ತೆಹಚ್ಚುವ ಸಲುವಾಗಿ ಪೊಲಿಸರು ಹಲವಾರು ಬಗೆಯ ಟ್ರಿಕ್ಸ್‌ಗಳನ್ನು ಬಳಸುವುದು ನೀವು ನೋಡಿರಬಹುದು. ಆದರೆ ಪಂಜಾಬ್‌ನಲ್ಲಿ (Punjab) 8 ಕೋಟಿ 49 ಲಕ್ಷ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ 10 ರೂ. ಜ್ಯೂಸ್ (Juice) ಸಹಾಯ ಮಾಡಿದೆ.

    ಜೂನ್ 10ರಂದು ಪಂಜಾಬ್‌ನ ಲೂಧಿಯಾನದಲ್ಲಿ (Ludhiana) 8 ಕೋಟಿ 49 ಲಕ್ಷ ರೂ. ದರೋಡೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೂಸ್‌ನ ಸಹಾಯದಿಂದ ಪೊಲೀಸರು ‘ಡಾಕು ಹಸೀನ’ ಎಂದು ಕರೆಯಲ್ಪಡುವ ಮನ್ದೀಪ್ ಕೌರ್ ಎಂಬಾಕೆ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್‌ನನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ನಲ್ಲಿ ಬಂಧಿಸಿದ್ದಾರೆ. ದಂಪತಿಯ ಹೊರತಾಗಿ ಪಂಜಾಬ್‌ನ ಗಿಡ್ಡರ್ ಬಾಹಾದಿಂದ ಗೌರವ್ ಎಂಬ ಆರೋಪಿಯನ್ನು ಸಹಾ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಇದುವರೆಗೆ 12 ಮಂದಿ ಆರೋಪಿಗಳ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಆರೋಪಿ ದಂಪತಿ ತಮ್ಮ ಕೆಲಸ ಯಶಸ್ವಿಯಾಗಿ ನಡೆದುದ್ದಕ್ಕಾಗಿ ದೇವರಿಗೆ ಕೈಮುಗಿಯಲು ಸಿಖ್ ದೇಗುಲಕ್ಕೆ ತೆರಳಿದ್ದ ಸಂದರ್ಭ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಭಂಡ ಧೈರ್ಯದಿಂದ ಮೂರು ದಶಕದ ಹಿಂದಿನ ಕೊಲೆ ರಹಸ್ಯ ಬಾಯ್ಬಿಟ್ಟ!

    ಆರೋಪಿ ದಂಪತಿ ಕಳ್ಳತನ ಮಾಡಿದ ಬಳಿಕ ನೇಪಾಳಕ್ಕೆ (Nepal) ಹೋಗಲು ನಿರ್ಧರಿಸಿದ್ದು, ಅದಕ್ಕೂ ಮೊದಲು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಯೋಚಿಸಿದ್ದಾರೆ. ಈ ಮಾಹಿತಿ ಪೊಲೀಸರಿಗೆ ದೊರತಿದ್ದು, ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ

    ಉತ್ತರಾಖಂಡದ (Uttarakhand) ಸಿಖ್ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದರು. ಅದರಲ್ಲಿ ಆರೋಪಿ ದಂಪತಿಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಹೀಗಾಗಿ ಪೊಲೀಸರು ಭಕ್ತಾದಿಗಳಿಗೆ ಪಾನೀಯ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭ ಎಲ್ಲರಂತೆ ಆರೋಪಿ ದಂಪತಿ ಮುಖ ಮುಚ್ಚಿಕೊಂಡು ಅಲ್ಲಿಗೆ ಬಂದಿದ್ದರು. ಆದರೆ ಪಾನೀಯ ಸೇವಿಸುವ ವೇಳೆ ತಮ್ಮ ಮುಖಕ್ಕೆ ಹಾಕಿಕೊಂಡಿದ್ದ ಬಟ್ಟೆಯನ್ನು ತೆಗೆಯಲೇ ಬೇಕಾಯಿತು. ಈ ಸಂದರ್ಭ ಪೊಲೀಸರು ಅವರನ್ನು ಗುರುತಿಸಿದ್ದಾರೆ. ಇದನ್ನೂ ಓದಿ: ತರಕಾರಿ ತರ್ತೀನಿ ಅಂತಾ ಮಾರ್ಕೆಟ್‌ಗೆ ಹೋದ ಮಹಿಳೆ ಪ್ರಿಯಕರನೊಂದಿಗೆ ಪರಾರಿ – ಗಂಡನ ಪಾಡು ಕೇಳೋರಿಲ್ಲ

    ಕೂತೂಹಲಕಾರಿ ವಿಷಯವೆಂದರೆ ಗುರುತಿಸಿದ ತಕ್ಷಣ ಪೊಲೀಸರು ಅವರನ್ನು ಬಂಧಿಸದೇ ಅವರಿಗೆ ಸಿಖ್ ದೇಗುಲದಲ್ಲಿ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟರು. ಬಳಿಕ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳ ಸೆರೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ‘ರಾಣಿ ಜೇನುನೊಣ ಹಿಡಿಯೋಣ’ ಎಂಬ ಹೆಸರನ್ನು ಇಡಲಾಗಿತ್ತು. ಮನ್ದೀಪ್ ಕೌರ್ ದಂಪತಿ ದ್ವಿಚಕ್ರ ವಾಹನದಲ್ಲಿದ್ದ 12 ಲಕ್ಷ ರೂ. ಮತ್ತು ಮನೆಯಲ್ಲಿದ್ದ 9 ಲಕ್ಷ ರೂ ಸೇರಿ ಒಟ್ಟು 21 ಲಕ್ಷ ರೂ.ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅಪ್ರಾಪ್ತ ಸಹೋದರರಿಂದ ಸಾಮೂಹಿಕ ಅತ್ಯಾಚಾರ- ಇಬ್ಬರು ಅರೆಸ್ಟ್

  • ಆಪಲ್ ಸೈಡರ್ ವಿನೆಗರ್ ದೇಹಕ್ಕೆ ಎಷ್ಟು ಆರೋಗ್ಯಕರ ಗೊತ್ತಾ?

    ಆಪಲ್ ಸೈಡರ್ ವಿನೆಗರ್ ದೇಹಕ್ಕೆ ಎಷ್ಟು ಆರೋಗ್ಯಕರ ಗೊತ್ತಾ?

    ಆಪಲ್ ಸೈಡರ್ ವಿನೆಗರ್ ಸಕ್ಕರೆ ಹಾಗೂ ಆಲ್ಕೋಹಾಲ್ ಪರಿವರ್ತಿತ ಪಾನೀಯವಾಗಿದೆ. ಬ್ಯಾಕ್ಟೀರಿಯಾವು ಆಲ್ಕೋಹಾಲ್ ನನ್ನು ಆಮ್ಲವಾಗಿ ಪರಿವರ್ತಿಸಿ ಹುಳಿ ರುಚಿಯನ್ನು ನೀಡುವುದರ ಜೊತೆಗೆ ಸುವಾಸನೆಯನ್ನು ನೀಡುತ್ತದೆ. ವಿವಿಧ ಪಾನೀಯಗಳಲ್ಲಿ ಆಪಲ್ ಸೈಡರ್ ವಿನೆಗರ್ ಕೂಡ ಒಂದಾಗಿದ್ದು ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಸಿಟಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲದ ಅಂಶವಿದೆ. ಜೊತೆಗೆ ಇದರಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಪೋಷಕಾಂಶ ಇದ್ದು ಆಪಲ್ ಸೈಡರ್‍ನನ್ನು ಔಷಧಿಯಾಗಿ ಕೂಡ ಬಳಸಲಾಗುತ್ತದೆ.

    ಇದು ಆರೋಗ್ಯಕರ ಉತ್ಪನ್ನವೆಂದು ಪರಿಗಣಿಸಿದರೂ ಕೂಡ ನೈಸರ್ಗಿಕ ಉತ್ಪನ್ನಗಳು ಯಾವಾಗಲೂ ಸುರಕ್ಷಿತವಾದವೇ ಆದರೂ ಇದನ್ನು ಸೇವಿಸುವಾಗ ಜಾಗರೂಕತೆಯಿಂದ ಇರಬೇಕು. ಸೇವಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಮತ್ತು ಎಷ್ಟು ಡೋಸೇಜ್ ಪ್ರಮಾಣದಲ್ಲಿ ಸೇವಿಸಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಅಗತ್ಯ.

    ಆಪಲ್ ಸೈಡರ್ ವಿನೆಗರ್ ಆರೋಗ್ಯದ ಪ್ರಯೋಜನಗಳು

    * ಆಪಲ್ ಸೈಡರ್ ವಿನೆಗರ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.
    * ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಿದರೆ ನಿಮ್ಮ ದೇಹದಲ್ಲಿನ ಕ್ಯಾಲೋರಿಯನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
    * ಆಪಲ್ ಸೈಡರ್ ವಿನೆಗರ್ ಹೃದಯದಾರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತ ಸಂಚನವನ್ನು ಸುಗಮಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ನನ್ನು ಕಡಿಮೆ ಮಾಡುತ್ತದೆ. ಹೃದೋಗ ಅಪಾಯವನ್ನು ತಡೆಗಟ್ಟುತ್ತದೆ.

    * ಆಪಲ್ ಸೈಡರ್ ವಿನೆಗರ್ ದೇಹದಲ್ಲಿನ ಕರುಳಿಗೆ ಒಳ್ಳೆಯದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.
    * ಆಪಲ್ ಸೈಡರ್ ವಿನೆಗರ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
    * ಆಪಲ್ ಸೈಡರ್ ವಿನೆಗರ್ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

    ಆಪಲ್ ಸೈಡರ್ ವಿನೆಗರ್‍ನಿಂದಾಗುವ ಉಪಯೋಗಗಳು
    * ಆಪಲ್ ಸೈಡರ್ ವಿನೆಗರ್ ಉತ್ತಮ ಡೈ ಕ್ಲೀನರ್ ಆಗಿ ಉಪಯೋಗಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಇದನ್ನು ಅಡುಗೆ ಮನೆ,ಕಿಟಕಿ ಫಲಕ, ಸ್ನಾನ ಗೃಹ, ಪಾತ್ರೆಗಳು, ಕನ್ನಡಿ, ಬಾಗಿಲುಗಳಂತಹ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

    * ಆಪಲ್ ಸೈಡರ್ ವಿನೆಗರ್ ನ್ನು ಹಣ್ಣು ತರಕಾರಿಗಳನ್ನು ತೊಳೆಯಲು ಬಳಸಬಹುದಾಗಿದೆ. ಇದು ಹಣ್ಣು, ತರಕಾರಿ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
    * ನಿಮ್ಮ ಹಲ್ಲುಗಳಲ್ಲಿನ ಕಲೆಗಳನ್ನು ನಾಶಪಡಿಸಲು ಮತ್ತು ಹಲ್ಲನ್ನು ನೈಸರ್ಗಿಕವಾಗಿ ಬಿಳುಪುಗೊಳಿಸಲು ಆಪಲ್ ಸೈಡರ್ ವಿನೆಗರ್‍ನನ್ನುಬಳಸಬಹುದು.
    * ಜೊತೆಗೆ ಬಾಯಿಯಲ್ಲಿ ಬರುವ ದುರ್ವಸನೆಯನ್ನು ತೊಡೆದು ಹಾಕಿ ತಾಜಾ ಉಸಿರನ್ನು ನೀಡಲು ಮೌತ್ ಫ್ರೆಶ್ ನರ್ ಆಗಿ ಕೂಡ ಉಪಯೋಗಿಸಬಹುದಾಗಿದೆ.
    * ಆಪಲ್ ಸೈಡರ್ ವಿನೆಗರ್ ನಿಮ್ಮ ಚರ್ಮ ಮತ್ತು ಕೂದಲು ಹೊಳೆಯುವಂತೆ ಮಾಡಲು ಸಹಾಕಾರಿಯಾಗಿದೆ. ಒಂದು ರೀತಿ ಚರ್ಮರೋಗಕ್ಕೆ ಆಪಲ್ ಸೈಡರ್ ವಿನೆಗರ್ ಮದ್ದಾಗಿದೆ.

  • ಮತ್ತು ಬರುವ ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆರಗಿದ ಕಾಮುಕರು – ವಿಡಿಯೋ ಮಾಡಿ ಅಪ್ಲೋಡ್

    ಮತ್ತು ಬರುವ ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆರಗಿದ ಕಾಮುಕರು – ವಿಡಿಯೋ ಮಾಡಿ ಅಪ್ಲೋಡ್

    ಲಕ್ನೋ: ಅಪ್ರಾಪ್ತ ಹುಡುಗಿಯನ್ನು ಐದು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗಾಜೀಯಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಸೆಪ್ಟೆಂಬರ್ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಸಂತ್ರಸ್ತೆ ತನ್ನ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧೀಕ್ಷಕ ಶ್ಲೋಕ್ ಕುಮಾರ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಸೆಪ್ಟೆಂಬರ್ 25 ಸಂತ್ರಸ್ತೆ ತನ್ನ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಗೆಂದು ಹೋಗಿದ್ದಾಳೆ. ಅಲ್ಲಿ ಐದು ಮಂದಿ ಕಾಮುಕರು ಸಂತ್ರಸ್ತೆಗೆ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಪಾನೀಯವನ್ನು ಕುಡಿಸಿದ್ದಾರೆ. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆ ಈ ಸ್ಥಿತಿಯಲ್ಲಿ ಇದ್ದಾಗ ಕಾಮುಕರು ಬಜರಿಯಾ ಮಾರುಕಟ್ಟೆ ರೈಲ್ವೆ ರಸ್ತೆಯಲ್ಲಿರುವ ಹೋಟೆಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಐದು ಮಂದಿಯೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಅತ್ಯಾಚಾರದ ಬಳಿಕ ಈ ವಿಚಾರವನ್ನು ಪೋಷಕರು ಅಥವಾ ಪೊಲೀಸರಿಗೆ ಹೇಳಿದರೆ ಮುಂದೆ ಉಂಟಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂದು ಎಸ್‍ಪಿ ಹೇಳಿದ್ದಾರೆ.

    ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್, ಚಂದ್, ಶದಾಬ್, ರಹೀಸ್ ಮತ್ತು ಶಹೀದ್ ವಿರುದ್ಧ ಐಪಿಸಿ ಸೆಕ್ಷನ್ 375 (ಅತ್ಯಾಚಾರ) ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಶಾರೂಖ್ ನನ್ನು ಬಂಧಿಸಲಾಗಿದೆ ಎಂದು ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

    ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

    ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದ್ದು, ಶಿರೂರು ಮೂಲ ಮಠದಲ್ಲಿ ಸಿಕ್ಕಿದ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.

    ಮಠದಲ್ಲಿ ಸಿಕ್ಕಿರುವ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡುತ್ತಿದ್ದು, ಬಾಟಲಿಯಲ್ಲಿದ್ದ ದ್ರವವನ್ನು ಗೋಡಂಬಿ ಜ್ಯೂಸ್ ಎಂದೂ ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಬಾಟಲಿ Morinzhi ಎಂಬ ಹೆಸರಿನ ಡ್ರಿಂಕ್ ಆಗಿದ್ದು, ಪೊಲೀಸರು ಸದ್ಯ ಈ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

    ಮೊರಿಜೈನ್ ಆರೋಗ್ಯ ವೃದ್ಧಿ ಪಾನೀಯವಾಗಿದ್ದು, ಇದನ್ನೇ ವಿಷದ ಬಾಟಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ಆ ಹೆಸರಿನ ಶಕ್ತಿವರ್ಧಕ ಪಾನೀಯ ಲಭ್ಯವಿದ್ದು, ಸ್ವಾಮೀಜಿ ತಮ್ಮ ಆಪ್ತ ಮಹಿಳೆಯಿಂದ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ರಾ? ಅಥವಾ ಮಹಿಳೆಯೇ ತಂದು ಕುಡಿಸಿದ್ರಾ? ಎಂಬ ಶಂಕೆಯ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಶಿರೂರು ಸ್ವಾಮೀಜಿ ಆಪ್ತರು ನೀಡಿರುವ ಮಾಹಿತಿ ಪ್ರಕಾರ, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೂ ಈ ಮಹಿಳೆ ಬಂದಿರಲಿಲ್ಲ. ಅನಾರೋಗ್ಯಕ್ಕೀಡಾದಾಗಲೂ ಆಸ್ಪತ್ರೆಗೆ ಬಂದಿರಲಿಲ್ಲ. ಹಾಗಾದ್ರೆ ಸ್ವಾಮೀಜಿ ಜೊತೆ ಕೊನೆಗಳಿಗೆಯಲ್ಲಿ ಆಪ್ತೆ ಎನಿಸಿಕೊಂಡಿದ್ದ ಮಹಿಳೆ ಮುನಿಸಿಕೊಂಡಿರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.