Tag: ಪಾನಕಂ

  • ರಾಮನವಮಿ ವಿಶೇಷ; ಸುಲಭವಾಗಿ ಮಾಡಿ ಬೆಲ್ಲದ ಪಾನಕ!

    ರಾಮನವಮಿ ವಿಶೇಷ; ಸುಲಭವಾಗಿ ಮಾಡಿ ಬೆಲ್ಲದ ಪಾನಕ!

    ರಾಮನವಮಿ ಹಬ್ಬದಂದು ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದವಾಗಿ ಪಾನಕವನ್ನು ವಿತರಿಸಲಾಗುತ್ತದೆ. ಸಾಮಾನ್ಯವಾಗಿ ಚೈತ್ರ ಮಾಸದ ಸಮಯದಲ್ಲಿ ವಿಪರೀತ ಬಿಸಿಲಿರುವ ಕಾರಣ ದೇಹಕ್ಕೆ ತಂಪು ಎಂಬ ಕಾರಣಕ್ಕೆ ಪಾನಕವನ್ನು ಹಂಚಲಾಗುತ್ತದೆ. ಜೊತೆಗೆ ಇದು ವಿಷ್ಣುವಿಗೆ ಪ್ರಿಯವಾದ ಪಾನೀಯವಾಗಿರುವುದರಿಂದ ರಾಮನವಮಿ ದಿನ ದೇವರಿಗೆ ಪಾನಕವನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಹಾಗಿದ್ರೆ ಸುಲಭವಾಗಿ ಪಾನಕ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಾಗ್ರಿಗಳು:
    ನೀರು – ಅಗತ್ಯಕ್ಕೆ ತಕ್ಕಷ್ಟು
    ಬೆಲ್ಲ – ರುಚಿಗೆ ತಕ್ಕಷ್ಟು
    ಕಾಳು ಮೆಣಸಿನ ಪುಡಿ- ಸ್ವಲ್ಪ
    ಶುಂಠಿ ಪುಡಿ – ಅಗತ್ಯಕ್ಕೆ ತಕ್ಕಷ್ಟು
    ನಿಂಬೆ ರಸ – ಸ್ವಲ್ಪ
    ಏಲಕ್ಕಿ ಪುಡಿ – 1 ಚಿಟಿಕೆ

    ತಯಾರಿಸುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ನಿಮ್ಮ ಅಳತೆಗೆ ತಕ್ಕಷ್ಟು ಅದಕ್ಕೆ ನೀರನ್ನು ಹಾಕಿ.
    * ನಂತರ ಆ ನೀರಿಗೆ ತುರಿದ ಅಥವಾ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ, ಅದು ಕರಗುವರೆಗೂ ಬೆರೆಸಿ.
    * ಈಗ ಅದಕ್ಕೆ ನಿಂಬೆ ರಸ, ಕಾಳು ಮೆಣಸಿನ ಪುಡಿ, ಶುಂಠಿ ಪುಡಿ, ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ರೆಡಿ.
    * ನೀವು ನಿಂಬೆ ರಸದ ಬದಲಿಗೆ ಇದಕ್ಕೆ ಹುಣಸೆ ರಸವನ್ನು ಕೂಡಾ ಸೇರಿಸಬಹುದು.

  • ಯುಗಾದಿಗೆ ಮಾಡಿ ದೇಹಕ್ಕೆ ತಂಪೆನಿಸುವ ಪಾನಕ, ಮಜ್ಜಿಗೆ

    ಯುಗಾದಿಗೆ ಮಾಡಿ ದೇಹಕ್ಕೆ ತಂಪೆನಿಸುವ ಪಾನಕ, ಮಜ್ಜಿಗೆ

    ರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣಬೇಕೆಂದು ಪ್ರಾರಂಭ ಮಾಡುವ ಹೊಸ ವರ್ಷವೇ ಯುಗಾದಿ. ಪ್ರಕೃತಿಯಲ್ಲೂ ಹೊಸತನ, ಹೊಸ ಚಿಗುರು ಮೊಳೆಯುವ ಈ ಕಾಲಕ್ಕೆ ದೇಹ, ಮನಸ್ಸನ್ನು ಹಗುರಗೊಳಿಸಬೇಕು. ಚೈತ್ರ ಮಾಸ ಪ್ರಾರಂಭವಾಗುತ್ತಲೇ ದೇಹಕ್ಕೆ ತಂಪು ಮಾಡಲು ವಿವಿಧ ರೀತಿಯ ಪಾನೀಯಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಾನಕ, ಮಜ್ಜಿಗೆಗೆ ಬೇಡಿಕೆ ಹೆಚ್ಚು. ನಾವಿಂದು ಈ ವಿಶೇಷ ದಿನಕ್ಕೆ ತಂಪಾದ ಮಜ್ಜಿಗೆ ಹಾಗೂ ಪಾನಕದ ರೆಸಿಪಿಯನ್ನು ಹೇಳಿಕೊಡುತ್ತೇವೆ. ಈ ಪಾನೀಯಗಳನ್ನು ಸವಿದು, ಯುಗಾದಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಿ.

    ಪಾನಕ ಮಾಡಲು ಬೇಕಾಗುವ ಪದಾರ್ಥಗಳು:
    ಬೆಲ್ಲ – 2 ಕಪ್
    ಏಲಕ್ಕಿ – 3
    ಕಾಳು ಮೆಣಸು – 5
    ಸಕ್ಕರೆ – ಒಂದು ಟೀಸ್ಪೂನ್
    ಉಪ್ಪು – ಚಿಟಿಕೆ
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ನಿಂಬೆಹಣ್ಣು – 1

    ಪಾನಕ ಮಾಡುವ ವಿಧಾನ:
    * ಮೊದಲಿಗೆ ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಿಸಿ.
    * ಏಲಕ್ಕಿ, ಕಾಳು ಮೆಣಸು ಹಾಗೂ ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಮಿಶ್ರಣ ಮಾಡಿ.
    * ಬಳಿಕ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ.
    * ಇದೀಗ ಬೆಲ್ಲದ ಪಾನಕ ಸವಿಯಲು ಸಿದ್ಧ. ಇದನ್ನೂ ಓದಿ: ಕಹಿಯಾದ ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ – ಈ ರೆಸಿಪಿ ಮಾಡ್ನೋಡಿ

    ಮಜ್ಜಿಗೆ ಮಾಡಲು ಬೇಕಾಗುವ ಪದಾರ್ಥಗಳು:
    ಮೊಸರು – ಕಾಲು ಲೀಟರ್
    ಹಸಿಮೆಣಸಿನ ಕಾಯಿ – 2
    ಶುಂಠಿ – 1 ಇಂಚು
    ಕರಿಬೇವು – 1 ಎಸಳು
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಹಿಂಗ್ – ಚಿಟಿಕೆ

    ಮಜ್ಜಿಗೆ ಮಾಡುವ ವಿಧಾನ:
    * ಮೊದಲಿಗೆ ಮಿಕ್ಸರ್ ಜಾರ್‌ಗೆ ಮೊಸರು ಹಾಗೂ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಅದನ್ನು ಒಂದು ಪಾತ್ರೆಗೆ ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ ಮಿಶ್ರಣ ಮಾಡಿ.
    * ಈಗ ಮಿಕ್ಸರ್ ಜಾರ್‌ಗೆ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಹಾಗೂ ಹಿಂಗ್ ಹಾಕಿ ರುಬ್ಬಿಕೊಳ್ಳಿ.
    * ಈ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
    * ಇದೀಗ ರುಚಿಕರ ಮಜ್ಜಿಗೆ ಸವಿಯಲು ಸಿದ್ಧ. ಇದನ್ನೂ ಓದಿ: ಸಬ್ಬಕ್ಕಿ, ಅವಲಕ್ಕಿಯಿಂದ ಮಾಡಿ ಸಖತ್ ಟೇಸ್ಟಿ ವಡೆ

  • ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ವಸಂತ ಋತುವಿನ ಆಗಮನ ಕಾಲದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಹಬ್ಬ ಸಮೃದ್ಧಿಯನ್ನು ಸೂಚಿಸುತ್ತದೆ. ಈ ಹಬ್ಬಕ್ಕೆ ವಿಶೇಷವೆಂದು ರುಚಿಯಾದ ಸ್ವೀಟ್‍ಗಳನ್ನು ಮಾಡಲಾಗುತ್ತದೆ. ಹಬ್ಬದ ವಿಶೇಷವಾಗಿ ಸಾಂಪ್ರದಾಯಿಕ ಖಾದ್ಯವನ್ನು ತಯಾರಿಸಲಾಗುತ್ತದೆ. ಯುಗಾದಿ ಹಬ್ಬದಂದು ಬೇವು-ಬೆಲ್ಲವನ್ನು ತಿನ್ನುವುದು ಆಚರಣೆ. ಇದೇ ಬೇವು-ಬೆಲ್ಲದಿಂದ ಸ್ಪೆಷಲ್ ಪಾನಕ ತಯಾರಿಸುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಬೇವಿನ ಹೂವು – ಸ್ವಲ್ಪ
    2. ದ್ರಾಕ್ಷಿ – 4-5
    3. ಮಾವಿನ ಕಾಯಿ – 3 ಚಮಚ
    4. ಬೆಲ್ಲ – ಅರ್ಧ ಕಪ್
    5. ಬಾಳೆಹಣ್ಣು – ಒಂದು
    6. ಹುರಿಗಡಲೆ ಹಿಟ್ಟು – ಅರ್ಧ ಪಕ್
    7. ಹುಣಸೆ ಹಣ್ಣಿನ ರಸ – 1 ಕಪ್
    8. ಕತ್ತರಿಸಿದ ಕಲ್ಲಂಗಡಿ- 4, 5 ಪೀಸ್
    9. ಶುಂಠಿ ಪೌಡರ್ – ಚಿಟಿಕೆ
    10. ಉಪ್ಪು – ರುಚಿಗೆ ತಕ್ಕಷ್ಟು
    11. ಬಾದಾಮಿ, ಗೋಡಂಬಿ ಮತ್ತು ಕಲ್ಲು ಸಕ್ಕರೆ -ಸ್ವಲ್ಪ

    ಬೇವು ಬೆಲ್ಲದ ಪಾನಕ ಮಾಡುವ ವಿಧಾನ:
    * ಒಂದು ಕಪ್ ಹುಣಸೆ ಹಣ್ಣಿನ ರಸವನ್ನು ದೊಡ್ಡ ಪಾತ್ರೆಗೆ ಹಾಕಿ, ಅದಕ್ಕೆ ಬೆಲ್ಲ ಮತ್ತು ಕಲ್ಲು ಸಕ್ಕರೆ ಹಾಕಿ ನೆನೆಯಲು ಬಿಡಿ.
    * ಹುಣಸೆ ಹಣ್ಣು, ಬೆಲ್ಲ ಮತ್ತು ಕಲ್ಲು ಸಕ್ಕರೆಯ ಮಿಶ್ರಣಕ್ಕೆ 2 ಚಮಚ ಹುರಿಗಡಲೆ ಹಿಟ್ಟು ಹಾಕಿ ಗಂಟು ಬರದಂತೆ ಬೆರೆಸಿ.
    * ಇತ್ತ ಮಾವಿನ ಕಾಯಿ, ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು, ಬಾದಾಮಿ, ಗೋಡಂಬಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. (ಮಾವಿನ ಕಾಯಿ ಕಾಯಿಯನ್ನು ಕೊಬ್ಬರಿ ತುರಿಯಂತೆ ಮಾಡಿಕೊಳ್ಳುವುದು ಉತ್ತಮ)

    * ಹುಣಸೆ ಹಣ್ಣಿನ ಮಿಶ್ರಣಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಎಲ್ಲ ಹಣ್ಣುಗಳನ್ನು ಒಂದೊಂದಾಗಿ ಹಾಕುತ್ತಾ ಹೋಗಬೇಕು.
    * ಈ ಮಿಶ್ರಣಕ್ಕೆ ಒಂದರಿಂದ ಎರಡು ಗ್ಲಾಸ್ ನೀರನ್ನು ಬೆರೆಸಿಕೊಳ್ಳಿ.
    * ನೀರು ಸೇರಿಸಿದ ಬಳಿಕ ಸ್ವಲ್ಪ ಶುಂಠಿ ಪೌಡರ್, ಸ್ವಲ್ಪ ಉಪ್ಪು ಹಾಕಿ, ಕೊನೆಯದಾಗಿ ಬೇವಿನ ಹೂಗಳನ್ನು ಹಾಕಿದರೆ ಬೇವು-ಬೆಲ್ಲದ ಪಾನಕ ಸಿದ್ದವಾಗುತ್ತದೆ.

  • ಶ್ರೀರಾಮ ನವಮಿ ಸ್ಪೆಷಲ್- ಬೆಲ್ಲದ ಪಾನಕ ಮಾಡುವ ವಿಧಾನ

    ಶ್ರೀರಾಮ ನವಮಿ ಸ್ಪೆಷಲ್- ಬೆಲ್ಲದ ಪಾನಕ ಮಾಡುವ ವಿಧಾನ

    ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶ್ರೀ ರಾಮನವಮಿಯೂ ಒಂದು. ವಸಂತ ನವರಾತ್ರಿ ಹೊಸ ಸಂವತ್ಸರದ ಆದಿಯಿಂದಲೇ 9 ದಿನ ಆಂಜನೇಯನ ಗುಡಿಯಲ್ಲಿ, ಶ್ರೀರಾಮನ ದೇವಾಲಯಗಳಲ್ಲಿ ಹಾಗೂ ಶ್ರೀರಾಮ ಸೇವಾ ಸಮಿತಿಗಳು ವಸಂತ ನವರಾತ್ರಿ ಆಚರಿಸುತ್ತಾರೆ. ಹೀಗಾಗಿ ಹಬ್ಬದ ಪ್ರಯುಕ್ತ ಬೆಲ್ಲದ ಪಾನಕ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿ:
    * ಬೆಲ್ಲದ ಪುಡಿ – 3 ಚಮಚ
    * ಕತ್ತರಿಸಿದ ಕರ್ಬೂಜ ಹಣ್ಣು- ಒಂದು ಬೌಲ್
    * ಏಲಕ್ಕಿ ಪುಡಿ- ಸ್ವಲ್ಪ
    * ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಎರಡು ಗ್ಲಾಸ್ ನೀರನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಳ್ಳಿ
    * ನಂತರ ಆ ನೀರಿಗೆ ಪುಡಿ ಮಾಡಿಕೊಂಡಿರುವ ಬೆಲ್ಲವನ್ನು ಹಾಕಿಕೊಳ್ಳಿ. ಬೆಲ್ಲ ಸಂಪೂರ್ಣವಾಗಿ ಕರಗಲಿ.
    * ನೀರಿನಲ್ಲಿ ಬೆಲ್ಲ ಕರಗಿದ ಬಳಿಕ ಚಿಕ್ಕದಾಗಿ ಕತ್ತರಿಸಿಕೊಂಡ ಕರ್ಬೂಜ ಹಣ್ಣಿನ ತುಂಡುಗಳನ್ನು ಸೇರಿಸಿಕೊಳ್ಳಿ. (ಬೇಕಾದಲ್ಲಿ ಕತ್ತರಿಸಿದ ಕರ್ಬೂಜ ತುಂಡುಗಳನ್ನು ಮಿಕ್ಸಿಗೆ ಹಾಕಿಕೊಂಡು ಜ್ಯೂಸ್ ರೀತಿ ಮಾಡಬಹುದು)
    * ನಂತರ ಸ್ವಲ್ಪ ಏಲಕ್ಕಿ ಪುಡಿ ಮತ್ತು ಉಪ್ಪು ಮಿಕ್ಸ್ ಮಾಡಿಕೊಳ್ಳಬೇಕು.
    * ಕತ್ತರಿಸಿದ ಕರ್ಬೂಜ ಹಣ್ಣನ್ನು ಸ್ವಲ್ಪ ಕಿವುಚಿಕೊಳ್ಳಬೇಕು.
    * ರೆಡಿಯಾದ ಪಾನಕಕ್ಕೆ ಐಸ್ ಹಾಕಿಕೊಂಡು ಕುಡಿಯಬಹುದು.