Tag: ಪಾದ ಶಸ್ತ್ರ ಚಿಕಿತ್ಸೆ

  • ನಿಮ್ಮ ಪ್ರೀತಿಯೇ ನನಗೆ ಔಷಧಿ – ಅಭಿಮಾನಿಗಳಿಗೆ ಕಮಲ್ ಸಂದೇಶ

    ನಿಮ್ಮ ಪ್ರೀತಿಯೇ ನನಗೆ ಔಷಧಿ – ಅಭಿಮಾನಿಗಳಿಗೆ ಕಮಲ್ ಸಂದೇಶ

    ಚೆನ್ನೈ: ಕಾಲಿವುಡ್ ನಟ ಕಮಲ್ ಹಾಸನ್ ಪಾದದ ಶಸ್ತ್ರಚಿಕಿತ್ಸೆಯ ನಂತರ ಮಂಗಳವಾರ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

    2016ರಲ್ಲಿ ಕಮಲ್ ಹಾಸನ್ ಚೆನ್ನೈ ನಿವಾಸದಲ್ಲಿ ಕುಸಿದ ಬಿದ್ದ ಪರಿಣಾಮ ಪಾದಕ್ಕೆ ಗಂಭೀರ ಗಾಯಗೊಂಡಿದ್ದರು. ಸದ್ಯ ಇದೀಗ ಚೆನ್ನೈನ ರಾಮಚಂದ್ರ ಆಸ್ಪತ್ರೆಯಲ್ಲಿ ಪಾದಕ್ಕೆ ಸಂಬಂಧಿಸಿದಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಪೂರ್ಣಗೊಂಡು ಸ್ವಲ್ಪ ಚೇತರಿಸಿಕೊಂಡ ಕಮಲ್, ನಿಮ್ಮ ಪ್ರೀತಿಯೇ ನನಗೆ ಔಷಧಿ ಎಂದು ಟ್ವೀಟ್ ಮಾಡಿದ್ದಾರೆ.

    ತಮಿಳಿನಲ್ಲಿ ಟ್ವೀಟ್ ಮಾಡಿರುವ ಕಮಲ್ ಹಾಸನ್, ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದೆ. ಶ್ರೀ ರಾಮಚಂದ್ರ ಆಸ್ಪತ್ರೆಯ ವೈದ್ಯರ ತಂಡಕ್ಕೆ ದೊಡ್ಡ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಸಂಪೂರ್ಣ ಚೇತರಿಸಿಕೊಳ್ಳುವ ತನಕ ಇಲ್ಲಿಂದಲೇ ಅಭಿಮಾನಿಗಳ ಹೃದಯದೊಂದಿಗೆ ಸಂವಹನ ನಡೆಸಲು ಇಚ್ಛಿಸುತ್ತೇನೆ. ನಿಮ್ಮ ಪ್ರೀತಿಯೇ ನನಗೆ ಔಷಧಿ, ಶೀಘ್ರವೇ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕಮಲ್ ಇನ್ನೂ 4-5 ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವರದಿಯಾಗಿದೆ.