Tag: ಪಾದಾಚಾರಿ ಮಾರ್ಗ

  • ಪಾದಾಚಾರಿ ಮೇಲ್ಸೇತುವೆ ಕುಸಿತ – 4 ಸಾವು, 34 ಮಂದಿಗೆ ಗಾಯ

    ಪಾದಾಚಾರಿ ಮೇಲ್ಸೇತುವೆ ಕುಸಿತ – 4 ಸಾವು, 34 ಮಂದಿಗೆ ಗಾಯ

    ಮುಂಬೈ: 2008ರ ಭಯೋತ್ಪಾದಕ ದಾಳಿಯ ವೇಳೆ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಅಜ್ಮಲ್ ಕಸಬ್ ಬಳಕೆ ಮಾಡಿದ್ದ ಪಾದಚಾರಿ ಮಾರ್ಗ ಕುಸಿತಗೊಂಡ ಪರಿಣಾಮ ಸುಮಾರು 4 ಮಂದಿ ಸಾವನ್ನಪ್ಪಿದ್ದು, 34ಕ್ಕೂ ಮಂದಿ ಗಾಯಗೊಂಡಿದ್ದಾರೆ.

    ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದ ಬಳಿ ಇರುವ 20 ಅಡಿ ಎತ್ತರದ ಸೇತುವೆ ಇದಾಗಿದ್ದು, ಇಂದು ಸಂಜೆ 7.30ರ ವೇಳೆಗೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 10 ಕ್ಕೂ ಹೆಚ್ಚು ಮಂದಿಯ ಮೃತದೇಹ ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    26/11 ಮುಂಬೈ ಉಗ್ರರ ದಾಳಿ ಬಳಿಕ ಈ ಪಾದಾಚಾರಿ ಮಾರ್ಗ ಕಸಬ್ ಸೇತುವೆ ಎಂದೇ ಜನರ ಮಾತಿನಲ್ಲಿ ಕೇಳಿ ಬರುತ್ತಿತ್ತು. ಘಟನೆ ಬಗ್ಗೆ ಮಾಹಿತಿ ಪಡೆದ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ದುರ್ಘಟನೆ ನಡೆದ ಪರಿಣಾಮ ಜನಸಾಮಾನ್ಯರಿಗೆ ಈ ಮಾರ್ಗಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

    ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) 2018 ಸೆ.22 ರಂದು ನಗರದಲ್ಲಿ ಇದ್ದ ಅವಧಿ ಮೀರಿದ ಪಾದಾಚಾರಿ ಮಾರ್ಗಗಳ ಉರುಳಿಸುವ ಸಮಯವನ್ನು ವಿಸ್ತರಣೆ ಮಾಡಿದ್ದವು. ಸದ್ಯ ಈ ಅವಘಡಕ್ಕೆ ಸ್ಥಳೀಯ ಸಂಸ್ಥೆಯ ನಿರ್ಲಷವೇ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv