Tag: ಪಾದಯಾತ್ರೆ

  • ತಲೆ ಕೆಡಿಸಿಕೊಳ್ಳಬೇಡಾ, ನಾಳೆ ನಾನು ಜಾಯಿನ್ ಆಗ್ತೀನಿ: ಡಿಕೆಶಿ ಜೊತೆ ಸಿದ್ದು ಫೋನ್ ಟಾಕ್

    ತಲೆ ಕೆಡಿಸಿಕೊಳ್ಳಬೇಡಾ, ನಾಳೆ ನಾನು ಜಾಯಿನ್ ಆಗ್ತೀನಿ: ಡಿಕೆಶಿ ಜೊತೆ ಸಿದ್ದು ಫೋನ್ ಟಾಕ್

    ಬೆಂಗಳೂರು: ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿ ನಿನ್ನೆಯಿಂದ ಪಾದಯಾತ್ರೆಯನ್ನು ಆರಂಭಿಸಿದ್ದರು. ಆದರೆ ಸಿದ್ದರಾಮಯ್ಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಅರ್ಧದಲ್ಲೇ ಪಾದಯಾತ್ರೆಯನ್ನು ನಿಲ್ಲಿಸಿ ಬೆಂಗಳೂರಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ಮಾಡಿ ಪಾದಯಾತ್ರೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

    ಈ ಬಗ್ಗೆ ಮಾತನಾಡಿದ ಡಿಕೆಶಿ ಪಾದಯಾತ್ರೆ ಚೆನ್ನಾಗಿ ನಡೆಯುತ್ತಿದೆ. ನಿನ್ನೆ ದೊಡ್ಡ ಆಲಹಳ್ಳಿಯವರೆಗೆ ಏನು ತೊಂದರೆ ಇಲ್ಲದಂತೆ ಬಂದಿದ್ದೇವೆ. ಇಂದು ಇಲ್ಲಿಂದ ಕನಕಪುರದ ವರೆಗೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಮಾಹಿತಿಯನ್ನು ನೀಡಿ, ಅವರ ಆರೋಗ್ಯವನ್ನು ವಿಚಾರಿಸಿದರು.

    ಅದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ ಈಗ ಸುಧಾರಿಸಿಕೊಂಡಿದ್ದೇನೆ. ಸಂಜೆಯ ಮೇಲೆ ಪಾದಯಾತ್ರೆಗೆ ಬರುತ್ತೇನೆ ಎಂದು ಹೇಳಿದ್ದಕ್ಕೆ ಇಂದು ಬೇಡ ಸರಿಯಾಗಿ ಚಿಕಿತ್ಸೆಯನ್ನು ತೆಗೆದುಕೊಂಡು ವಿಶ್ರಾಂತಿಯನ್ನು ಪಡೆದುಕೊಂಡು ನಾಳೆ ಬನ್ನಿ ಎಂದು ತಿಳಿಸಿದರು. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದರು. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ಈ ವೇಳೆ ಡಿಕೆಶಿ ಸ್ಯಾಬ್ ಟೆಸ್ಟ್ ಬಗ್ಗೆ ಮಾತನಾಡಿ, ನಿನ್ನೆ ಜಿಲ್ಲಾಡಳಿತದವರು ಡಿಎಚ್‌ಓ ಅಧಿಕಾರಿಗಳನ್ನು ಮನೆ ಹತ್ತಿರ ಕಳುಹಿಸಿದ್ದರು. ಸ್ವ್ಯಾಬ್ ಕೇಳಲು ಬಂದಿದ್ದರು. ಅದಕ್ಕೆ ನಾನು ಇಂತದ್ದನ್ನೆಲ್ಲಾ ನಾನು ನೋಡಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ. ಸುಮ್ಮನೆ ಹೋಗಿ ಎಂದು ಕಳುಹಿಸಿದ್ದೇನೆ ಎಂದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳಬೇಡಾ. ನಿನ್ನ ಪಾಡಿಗೆ ಚೆನ್ನಾಗಿ ಇವತ್ತು ಪಾದಯಾತ್ರೆ ಮಾಡು, ನೀನು ಹೇಳಿದ ಹಾಗೇ ನಾನು ನಾಳೆ ಬಂದು ಜಾಯಿನ್ ಆಗುತ್ತೇನೆ ಎಂದಿದ್ದಾರೆ. ಅದಕ್ಕೆ ಡಿಕೆಶಿ ಓಕೆ ಸರ್ ರೆಸ್ಟ್ ಮಾಡಿ ಎಂದು ಕರೆಯನ್ನು ಕಟ್ ಮಾಡಿದ್ದಾರೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್

  • ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ರೈತ ಗೀತೆ ಮೂಲಕವಾಗಿ ಚಾಲನೆ ನೀಡಲಾಗಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕೈ ನಾಯಕರು ಮೊದಲ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ಈ ಪಾದಯಾತ್ರೆ ನಡೆಯಲಿದೆ. ಇದನ್ನೂ ಓದಿ:  ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ


    ಇಂದಿನಿಂದ ಜನವರಿ 18ರವರೆಗೆ ಪಾದಯಾತ್ರೆ ನಡೆಯಲಿದೆ. ನಮ್ಮ ನೀರು ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಸಂಜೆಯ ವೇಳೆಗೆ ಕನಕಪುರವನ್ನು ತಲುಪಲಿದ್ದಾರೆ.

    ಮೇಕೆದಾಟು ಪಾದಯಾತ್ರೆ ಸಂಗಮದಲ್ಲಿ ಕೊರೊನಾ ರೂಲ್ಸ್ ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗಿದೆ. ಕರ್ಫ್ಯೂ ನಿಯಮ ಮೀರಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಜನ ಸೇರಿದ್ದಾರೆ. ಕೊರೊನಾ ರೂಲ್ಸ್ ಪಾಲನೆ ಮಾಡುತ್ತೇವೆ ಅಂತ ಕಾಂಗ್ರೆಸ್ ಹೇಳಿತ್ತು. ನಿಯಮ ಮೀರಿ ಸಾವಿರಾರು ಜನ ಸಂಗಮದಲ್ಲಿ  ಜಮಾಯಿಸಿದ್ದಾರೆ

    ರಾಜ್ಯ, ಬೆಂಗಳೂರಿನ ಜನ ಹಿತಕ್ಕಾಗಿ ಈ ಪಾದಯಾತ್ರೆ ಮಾಡ್ತಿದ್ದೇವೆ. ನಾವು 2 ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡಿದ್ದೆವು. ಪಾದಯಾತ್ರೆ ಮಾಡಬಾರದು ಅಂತ ಕರ್ಫ್ಯೂ ಹಾಕಿದ್ದಾರೆ. ಕಾನೂನು ಭಂಗ ಮಾಡದೇ ಪಾದಯಾತ್ರೆ ಮಾಡುತ್ತೇವೆ ಎಂದು ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಮೇಕೆದಾಟು ಪಾದಯಾತ್ರೆ ಯೋಜನೆಯ ವಿವರ ಇಲ್ಲಿದೆ: 
    ಜನವರಿ 9 ರಂದು ಬೆಳಿಗ್ಗೆ 8-30ಕ್ಕೆ ಸಂಗಮದಲ್ಲಿ ಪಾದಯಾತ್ರೆ ಉದ್ಘಾಟನೆಯಾಗಿದೆ. ಮಧ್ಯಾಹ್ನ 1ಕ್ಕೆ ಹೆಗ್ಗನೂರು ತಲುಪಲಿದೆ. ಹೆಗ್ಗನೂರಿನಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ದೊಡ್ಡಆಲಹಳ್ಳಿ ತಲುಪಲಿರುವ ನಾಯಕರು, ಅಂದು ದೊಡ್ಡಆಲಹಳ್ಳಿಯಲ್ಲೇ ಸಭೆ ಸೇರಿ ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 10ಕ್ಕೆ ದೊಡ್ಡಆಲಹಳ್ಳಿಯಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಾದಪ್ಪನದೊಡ್ಡಿ ತಲುಪಲಿದೆ. ಪಾದಯಾತ್ರೆ, ಮಧ್ಯಾಹ್ನ 1ಕ್ಕೆ ಮಾದಪ್ಪನದೊಡ್ಡಿ ,ಕರಿಯಣ್ಣನದೊಡ್ಡಿ ತಲುಪಲಿದೆ. ಇಲ್ಲಿಯೇ  ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕನಕಪುರಟೌನ್ ತಲುಪಲಿರುವ ನಾಯಕರು ಅಂದು ಕನಕಪುರಟೌನಲ್ಲೇ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 11ಕ್ಕೆ ಕನಕಪುರದಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ಪಾದಯಾತ್ರೆ ತಲುಪಲಿದೆ. ಮಧ್ಯಾಹ್ನ 1ಕ್ಕೆ ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ತಲುಪಲಿರುವ ಪಾದಯಾತ್ರೆ, ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿರುವ ಪಾದಯಾತ್ರೆ ಬಳಿಕ ಅಂದು ಚಿಕ್ಕೇನಹಳ್ಳಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 12ಕ್ಕೆ ಚಿಕ್ಕೇನಹಳ್ಳಿಯಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೃಷ್ಣಾಪುರದೊಡ್ಡಿ ಬಳಿ ಪಾದಯಾತ್ರೆ ತಲುಪಲಿದೆ.  ಕೃಷ್ಣಾಪುರದೊಡ್ಡಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ರಾಮನಗರ ಟೌನ್ ತಲುಪಲಿರುವ ಪಾದಯಾತ್ರೆ, ಅಂದು ರಾಮನಗರ ಟೌನ್‌ನಲ್ಲಿ ಸಭೆ,ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 13ಕ್ಕೆ ರಾಮನಗರ ಟೌನ್ ಬಳಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮಾಯಾಗಾನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಪಾದಯಾತ್ರೆ ತಲುಪಲಿದೆ. ಮಾಯಾಗಾನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಬಿಡದಿ ತಲುಪಲಿರುವ ಪಾದಯಾತ್ರೆ, ಅಂದು ಬಿಡದಿಯಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 14ಕ್ಕೆ ಬಿಡದಿಯಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ರಾಜ್‍ಕುಮಾರ್ ಫಾರ್‍ಂ-ಮಂಚನಾಯಕನಹಳ್ಳಿಯನ್ನು ಪಾದಯಾತ್ರೆ ತಲುಪಲಿದೆ. ಮಂಚನಾಯಕನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಬಳಿ ತಲುಪಲಿರುವ ಪಾದಯಾತ್ರೆ ಅಂದು ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಯಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 15ಕ್ಕೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ವೆಂಕಟಾದ್ರಿ ಚೌಟ್ರಿ ಬನಶಂಕರಿ ತಲುಪಲಿರುವ ಪಾದಯಾತ್ರೆ ವೆಂಕಟಾದ್ರಿ ಚೌಟ್ರಿ ಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ತಲುಪಲಿರುವ ಪಾದಯಾತ್ರೆ ಅಂದು ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 16ಕ್ಕೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೋರಮಂಗಲ (ಮಂಗಳ ಕಲ್ಯಾಣ ಮಂಟಪ) ತಲುಪಲಿರುವ ಪಾದಯಾತ್ರೆ ಅಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆ ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರ ತಲುಪಲಿರುವ ಪಾದಯಾತ್ರೆ ಅಂದು ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರದಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 17ಕ್ಕೆ ಸುಬ್ರಮಣ್ಯ ಚೌಟ್ರಿ ಲಕ್ಷ್ಮೀಪುರದಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಎಎಸ್ ಕಲ್ಯಾಣ ಮಂಟಪ ತಲುಪಲಿರುವ ಪಾದಯಾತ್ರೆ ಸಂಜೆ ಮತ್ತೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ತಲುಪಲಿದೆ. ಅಂದು ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 18ಕ್ಕೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮೇಕ್ರಿ ಸರ್ಕಲ್ ಹತ್ತಿರದ ಗಾಯತ್ರಿ ವಿಹಾರದಲ್ಲಿ ಭೋಜನ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಅರಮನೆ ಆವರಣದ ಗಾಯತ್ರಿ ವಿಹಾರದಲ್ಲೇ ನಾಯಕರು ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 19ಕ್ಕೆ ರೇಸ್ ಕೋರ್ಸ್ ರಸ್ತೆಯಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1.30ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ತಲುಪಲಿರುವ ನಾಯಕರು, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲಿದ್ದಾರೆ.

  • ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಪಾದಯಾತ್ರೆ: ಯತ್ನಾಳ್

    ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಪಾದಯಾತ್ರೆ: ಯತ್ನಾಳ್

    ಬೆಂಗಳೂರು: ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಈ ಪಾದಯಾತ್ರೆಯನ್ನು ಮಾಡುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ನಾಟಕವಾಡುತ್ತಿದೆ. ಪಾದಯಾತ್ರೆಗಾಗಿ ಹೋಟೆಲ್ ಬುಕ್ ಮಾಡಿರುವುದಾಗಿ ಕಾಂಗ್ರಸ್ಸಿಗರು ತಿಳಿಸಿದ್ದಾರೆ. ಆದರೆ ಹೋಟೆಲ್ ಬುಕ್ ಮಾಡಿರುವುದು ಪಾದಯಾತ್ರೆಗಲ್ಲ, ರಾತ್ರಿಯಲ್ಲಾ ಮಜಾ ಮಾಡಲು ಎಂದು ವ್ಯಂಗ್ಯವಾಡಿದರು.

    ತಾಕತ್ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನೀರಾವರಿ ಮಂತ್ರಿ ಇದ್ದಾಗ ಡಿಕೆಶಿ ಏನು ಮಾಡಿದ್ದರು. ಸೋನಿಯಾ ಗಾಂಧಿ ಗೋವಾದಲ್ಲಿ ಕರ್ನಾಟಕಕ್ಕೆ ನೀರು ಕೊಡಬೇಡಿ ಅಂದಿದ್ದರು. ಆಗ ಏನು ಮಾಡದೇ ಸುಮ್ಮನಿದ್ದ ಕಾಂಗ್ರೆಸ್ ಈಗ ನಾಟಕವಾಡುತ್ತಿದೆ ಎಂದರು. ದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    ಸಿಎಂ ಆಗಲು ಡಿ.ಕೆ. ಶಿವಕುಮಾರ್ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಇಂತಹವರು ಸಿಎಂ ಆದರೆ ಏನು ಆಗುತ್ತದೆ ಎನ್ನುವುದನ್ನು ಮೊನ್ನೆ ರಾಮನಗರದಲ್ಲಿ ನಡೆದ ಘಟನೆಯನ್ನು ಜನ ನೋಡಿದ್ದಾರೆ ಎಂದ ಅವರು ಕರ್ನಾಟಕದಲ್ಲಿ ಬೆಂಕಿ ಹಚ್ಚಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

  • ಪಾದಯಾತ್ರೆಗಾಗಿ ಮಾರ್ಗ ಸೂಚಿ ಬದಲಾವಣೆ ಮಾಡ್ತಿದ್ದಾರೆ: ನಾಗೇಂದ್ರ

    ಪಾದಯಾತ್ರೆಗಾಗಿ ಮಾರ್ಗ ಸೂಚಿ ಬದಲಾವಣೆ ಮಾಡ್ತಿದ್ದಾರೆ: ನಾಗೇಂದ್ರ

    ಬಳ್ಳಾರಿ: ಪಾದಯಾತ್ರೆ ಹತ್ತಿಕ್ಕಲು ಬಿಜೆಪಿ ಪ್ಲಾನ್ ಮಾಡಿದ್ದು, ಪಾದಯಾತ್ರೆಗಾಗಿ ಮಾರ್ಗ ಸೂಚಿ ಬದಲಾವಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನಾಗೇಂದ್ರ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಹತ್ತಿಕ್ಕಲು ಬಿಜೆಪಿ ಕುತಂತ್ರದಿಂದ ವೀಕೆಂಡ್ ಕಫ್ರ್ಯೂ ಮಾಡಿದೆ. ಮೆಕೆದಾಟು ನಿಲ್ಲಿಸಲು ಕುತಂತ್ರ ಮಾಡಿದೆ. ಪಾದಯಾತ್ರೆಗಾಗಿ ಮಾರ್ಗ ಸೂಚಿ ಬದಲಾವಣೆ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಜಗ್ಗಲ್ಲ ಎಂದು ಹೇಳಿದ್ದಾರೆ.

    ಮೇಕೆದಾಟು ಪೂರ್ವ ನಿರ್ಧರಿತ ಕಾರ್ಯಕ್ರಮ. ಇದು ಕಾಂಗ್ರೆಸ್ ಗೆ ವರವಾಗತ್ತೆ ಎಂದು ಬಿಜೆಪಿ ಕುತಂತ್ರ ಮಾಡುತ್ತಿದೆ. ಆದರೆ ಮೋದಿ ಲಕ್ಷಾಂತರ ಜನ ಸೇರಿಸಿ ಭಾಷಣ ಮಾಡುತ್ತಾರೆ. ರೈತರ ಪರ ಹೋರಾಟಕ್ಕೆ ಮಾತ್ರ ಬಿಜೆಪಿ ಕುತಂತ್ರ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿಕೋವಿಡ್-19 ಹೊಸ ಮಾರ್ಗಸೂಚಿಗೆ ಬಿಜೆಪಿಯ ಸಚಿವ, ಶಾಸಕರಿಂದಲೇ ವಿರೋಧ

    ರಾಜ್ಯದ ಹಿತದೃಷ್ಟಿಯಿಂದ ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ.9 ರಿಂದ 19ರವರೆಗೂ ಯಾತ್ರೆಯನ್ನು ಕಾಂಗ್ರೆಸ್ ಕೈಗೊಂಡಿದೆ. ಆದರೆ ಇದೀಗ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಯಮ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದು, ಏನಾದ್ರು ಮಾಡಿ ಆದರೆ ನಾವು ನಿರ್ಧರಿಸಿರೋ ಪಾದಯಾತ್ರೆ ನಡೆಸಲು ಬದ್ಧರಾಗಿದ್ದೇವೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

  • ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ

    ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ

    ಬೆಂಗಳೂರು: ಏನೇ ಅದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುನರುಚ್ಚರಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಅಲ್ಲ ದೇಶದಲ್ಲಿ ಹೋರಾಟ ಮಾಡಲಿ. ಮಂತ್ರಿ ನುಡಿಮುತ್ತುಗಳನ್ನಾಡಿದ್ದಾರೆ. ಸಿಎಂ ಬಿಜೆಪಿ ಅಧ್ಯಕ್ಷ, ಅಶೋಕ್ ಅವರ ಎಲ್ಲಾ ಮಾತುಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಾವು ಅವರ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ. ಬಿಜೆಪಿ ಅವರ ಸಂಸ್ಕೃತಿ ಅನಾವಣರ ಆಗಿದೆ. ಅವರ ವಿಶ್ವರೂಪ ದರ್ಶನ ಆಗಿದೆ ಮೇಕೆದಾಟು ಪಾದಯಾತ್ರೆ ವಾಪಸ್ ಪಡೆಯಲು ಸುಧಾಕರ್ ಮನವಿ ಮಾಡಿದ್ದಾರೆ. ಬಹಳ ಸಂತೋಷ. ಆದರೆ ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ. ಇದನ್ನೂ ಓದಿ: ರಾಮನಗರಕ್ಕೂ ಸಚಿವರಿಗೂ ಏನು ಸಂಬಂಧ? – ಡಿಕೆಶಿ ಪ್ರಶ್ನೆಗೆ ಉತ್ತರ ನೀಡಿದ ಅಶ್ವಥ್‌ ನಾರಾಯಣ್‌

    ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ?. ಜನರಿಗೆ ತೊಂದರೆ ಆಗ್ತಾ ಇದೆ ಮೊದಲು ಅದನ್ನು ನೋಡಿ. ಕೊರೊನಾ ಸ್ಫೋಟವಾದರೆ ಕಾಂಗ್ರೆಸ್ ಹೊಣೆ ಎಂದು ಸುಧಾಕರ್ ಹೇಳಿದ್ದಾರೆ. ಈಗಾಗಲೇ ನಮ್ಮ ವಿರುದ್ಧ ಕೇಸ್ ಕೂಡ ಹಾಕಿದ್ದಾರೆ. ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ ಏಕೆ ಅವರ ವಿರುದ್ಧ ಕೇಸ್ ಮಾಡಿಲ್ಲ? ಸಿಎಂ ವಿರುದ್ಧ ಕೇಸ್ ಹಾಕಲಿ ಮೊದಲು. ಸುಧಾಕರ್, ಏರ್​ಪೋರ್ಟ್​ನಲ್ಲಿ  ಹರಾಸ್‍ಮೆಂಟ್ ನಡಿತಾ ಇದೆ. ಊಟ ಹೋಟೆಲ್ ಎಲ್ಲಾ ಅಡ್ಜಸ್ಟ್​ಮೆಂಟ್​ ಮಾಡ್ಕೋತಾ ಇದ್ದಾರೆ ಮೊದಲು ಅದನ್ನು ಸರಿಪಡಿಸಲಿ ಎಂದು ವಾಗ್ದಾಳಿ ನಡೆಸಿದರು.

    ರಿಪಬ್ಲಿಕ್ ಆಫ್ ರಾಮನಗರ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಜನ ಅಲ್ಲಿದ್ದಾರೆ. ಅವರು ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ

  • ಮಿನಿಸ್ಟರ್‌ಗಳು ಏನೇನೋ ಮಾತಾಡ್ತಿದ್ದಾರೆ, ಅವರಿಗೆ ಒಳ್ಳೆಯದಾಗ್ಲಿ ರಾಜ್ಯಕ್ಕೂ ಹಿತವಾಗ್ಲಿ: ಡಿಕೆಶಿ

    ಮಿನಿಸ್ಟರ್‌ಗಳು ಏನೇನೋ ಮಾತಾಡ್ತಿದ್ದಾರೆ, ಅವರಿಗೆ ಒಳ್ಳೆಯದಾಗ್ಲಿ ರಾಜ್ಯಕ್ಕೂ ಹಿತವಾಗ್ಲಿ: ಡಿಕೆಶಿ

    ಮೈಸೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸುವ ಪಾದೆಯಾತ್ರೆಗೆ ಮಿನಿಸ್ಟರ್ ಗಳು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕು ಹಿತವಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಾರ್ಯ ಮಾಡುವ ಮುನ್ನ ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಿದ್ದೇನೆ. ಎಲ್ಲಾ ಅಡಚಣೆ ಸಂಹಾರ ಮಾಡುವ ಶಕ್ತಿ ದೇವಿಗೆ ಇದೆ. ಹಿಂದಿನಿಂದ ದೇವಿಯ ಶಕ್ತಿಯನ್ನ ನಾವು ನಂಬಿಕೊಂಡಿದ್ದೇವೆ. ಅದಕ್ಕಾಗಿ ನಾವು ಹೋರಾಟಕ್ಕೂ ಮುನ್ನ ದೇವರ ದರ್ಶನ ಮಾಡಿದ್ದೇವೆ. ರಾಜ್ಯದ ಹಿತಕ್ಕಾಗಿ ನಾವು ಈ ಮೇಕೆದಾಡ ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರನ್ನು ಜನರಿಗೆ ಕೊಡಬೇಕು ಅನ್ನೋದು ನಮ್ಮ ಹೋರಾಟ ಎಂದರು.

    ಇದೇ ವೇಳೆ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಿನಿಸ್ಟರ್ ಗಳು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೂ ಹಿತವಾಗಲಿ. ಅವರು ಈಗ ಗಿಮಿಕ್ ಅಂತಿದ್ದಾರೆ. ವಾಜಪೇಯಿ ಕಾಲದಲ್ಲಿ ಅಡ್ವಾಣಿಯವರು ರಥಯಾತ್ರೆ ಮಾಡಿದ್ರು. ದೇವೆಗೌಡರು ಹಿಂದೆ ಬೇಕಾದಷ್ಟು ಯಾತ್ರೆಗಳನ್ನು ಮಾಡಿದ್ರು ಅದಕ್ಕೆ ಏನಂತ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ಕುಮಾರಸ್ವಾಮಿಯವರು ಯಾತ್ರೆ ಮಾಡ್ತೀನಿ ಅಂತಾ ಇದ್ದಾರೆ. ಯಡಿಯೂರಪ್ಪನವರು ಐದು ತಂಡ ಮಾಡಿಕೊಂಡು ಯಾತ್ರೆ ಮಾಡ್ತೀನಿ ಅಂದ್ರು. ಇದಕ್ಕೆಲ್ಲ ಏನ್ ಅಂತ ಹೇಳಬೇಕು. ಎಲೆಕ್ಷನ್ ಟೈಮ್ ನಲ್ಲಿ ಇಡೀ ದೇಶದಲ್ಲಿ ಎಲ್ಲೂ ಕೊರೊನಾ ಇರಲಿಲ್ವಾ..?, ಈಗ ಮಾತನಾಡುತ್ತಿರುವವರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ ಹೇಳಿದರು.

  • ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

    ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

    ಬೆಂಗಳೂರು: ಏ ಡಿಕೆ ನನ್ನ ಜಿಲ್ಲೆಯಲ್ಲಿ ನಾನಿಲ್ಲದಾಗ ಸಭೆ ಮಾಡಬೇಡ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಡಿ.ಕೆ.ಶಿವಕುಮಾರ್ ಜೊತೆಗೂಡಿ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದಾರೆ.

    ಹೌದು. ಬೆಳಗಾವಿಯಲ್ಲಿ ಅದಿವೇಶನ ನಡೆಯುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ವಾರ್ನ್ ಮಾಡಿ ಸಿದ್ದರಾಮಯ್ಯ ಸಭೆ ನಿಲ್ಲಿಸಿದ್ದರು. ಆದರೆ ಈಗ ಸಿದ್ದರಾಮಯ್ಯರಿಂದ ಭಾನುವಾರ ಹಾಗೂ ಸೋಮವಾರ ಮೇಕೆ ದಾಟು ಪಾದಯಾತ್ರೆ ಸಭೆ ನಡೆಯಲಿದೆ. ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ – ಕರ್ನಾಟಕದಿಂದ 1007.18 ಕೋಟಿ ರೂ. ಬಿಡುಗಡೆ

    ಭಾನುವಾರ ಚಾಮರಾಜನಗರದಲ್ಲಿ ಹಾಗೂ ಸೋಮವಾರ ಮೈಸೂರಿನಲ್ಲಿ ಮೇಕೆದಾಟು ಸಂಬಂಧ ಸಭೆ ನಡೆಸಲಿರುವ ಸಿದ್ದರಾಮಯ್ಯ ಜೊತೆಗೆ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದರೆ.

    ಬೆಳಗಾವಿ ಅದಿವೇಶನದ ಸಂದರ್ಭದಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ನಾಯಕರ ಸಭೆ ನಡೆಸಲು ಡಿಕೆಶಿ ಮುಂದಾಗಿದ್ದರು. ನಾನಿಲ್ಲದಾಗ ನನ್ನ ಜಿಲ್ಲೆಯಲ್ಲಿ ಸಭೆ ನಡೆಸಬಾರದು ಎಂದು ಸುವರ್ಣ ಸೌಧದ ಲಾಂಜ್‍ನಲ್ಲೇ ಡಿಕೆಶಿಗೆ ಸಿದ್ದರಾಮಯ್ಯ ವಾರ್ನ್ ಮಾಡಿದ್ದರು. ಸಿದ್ದರಾಮಯ್ಯ ಮಾತಿಗೆ ಸಭೆ ನಡೆಸದೇ ಡಿಕೆಶಿ ಸೈಲೆಂಟಾಗಿದ್ದರು. ಇದನ್ನೂ ಓದಿ: ಸಚಿವರಲ್ಲಿ ಯಾರು ಪಾಸ್? ಫೇಲ್?: ಎಕ್ಸಾಂ ನಡೆಸಲು ಬರ್ತಾರಂತೆ ಅಮಿತ್ ಶಾ

  • ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK

    ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK

    ರಾಮನಗರ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ಟಾಂಗ್ ಕೊಟ್ಟಿದ್ದಾರೆ.

    ಮೇಕೆದಾಟುಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದು, ಅದಕ್ಕೆ ಕುಮಾರಸ್ವಾಮಿ ಅವರನ್ನು ಕರೆಯಲಾಗಿದೆ ಎಂದು ಡಿಕೆಶಿ ಹೇಳಿಕೆಯನ್ನು ನೀಡಿದ್ದರು. ಈ ವಿಚಾರವಾಗಿ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಭಾಗವಹಿಸಿ ಏನು ಮಾಡೋದು ಹೇಳಿ? ಭಾಗವಹಿಸದರೆ ಕೆಲಸ ಪ್ರಾರಂಭ ಮಾಡಲು ಸಾಧ್ಯವಾ? ಮಾಜಿ ಪ್ರಧಾನಿ ದೇವೇಗೌಡರು ಹಲವು ಪಾದಯಾತ್ರೆ ಮಾಡಿದ್ದಾರೆ. ನಾನು ಕೂಡ ಹುಬ್ಬಳ್ಳಿವರೆಗೆ ಪಾದಯಾತ್ರೆ ಮಾಡಿದ್ದೆ. ಆ ಪಾದಯಾತ್ರೆಗೂ ಇದಕ್ಕೂ ಇದೆ. ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನವರೆಗೆ ದೇವೇಗೌಡರು ಪಾದಯಾತ್ರೆ ಮಾಡಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ಗೋಲಿಬಾರ್ ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು. ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪಾದಯಾತ್ರೆ ಮಾಡಿದ್ದರು. ಕುಣಿಗಲ್ ನಿಂದ ಬೆಂಗಳೂರುವರೆಗೆ ರೈತರ ವಿಚಾರವಾಗಿ ಪಾದಯಾತ್ರೆ ಮಾಡಿದ್ದರು. ರೈತ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದ ಎಂದು ಪಾದಯಾತ್ರೆ ಮಾಡಿದ್ದರು. ದೊಡ್ಡಳ್ಳಿ ಗೋಲಿಬಾರ್ ನಲ್ಲಿ ಕಾಂಗ್ರೆಸ್ ಸರ್ಕಾರ ಇಬ್ಬರು ರೈತರನ್ನು ಬಲಿ ಪಡೆದಿದೆ ಎಂದು ದೇವೇಗೌಡರು 9 ದಿನ ಉಪವಾಸ ಮಾಡಿದ್ದರು. ಈ ಪಾದಯಾತ್ರೆ ಜನತೆಯ ಒಳಿತಿಗಾಗಿ ಮಾಡಿದ್ದು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಾದಯಾತ್ರೆ ಮಾಡುತ್ತಿದೆ ಅಷ್ಟೇ ಎಂದು ಕಿಡಿಕಾರಿದರು.

    ಮೇಕೆದಾಟು ಡಿಪಿಆರ್ ಅನ್ನು ನಾನು ಕಳುಹಿಸಿದ್ದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ಕಳುಹಿಸಿರೋದು. ವಿಧಾನಸಭೆಯಲ್ಲಿ ನೀರಾವರಿ ಮಂತ್ರಿ ಪ್ರಶ್ನೋತ್ತರ ಕಾಲದಲ್ಲಿ ಉತ್ತರಿಸಿದ್ದಾರೆ. ಡಿಪಿಆರ್ ಸಿದ್ಧವಾಗಿದ್ದು, ನಮ್ಮ ಕಾಲದಲ್ಲಿ. ಇವರೇ 5 ವರ್ಷ ಅಧಿಕಾರದಲ್ಲಿದ್ದಾಗಲೇ ಮಾಡಬೇಕಿತ್ತು. ಇವರನ್ನು ಹಿಡಿದುಕೊಂಡಿದ್ದವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತ

    ಇಲ್ಲಿ ಪಾದಯಾತ್ರೆ ಅವಶ್ಯಕತೆ ಇಲ್ಲ. ಇಲ್ಲೊಂದು ತಾಂತ್ರಿಕ ಸಮಸ್ಯೆ ಇದೆ. ಬಿಜೆಪಿ ಅವರಿಗೆ ದುಡ್ಡಿನ ಸಮಸ್ಯೆ ಇದೆ. ಯೋಜನೆಗೆ ಅನುಮತಿ ಸಿಕ್ಕಿದರೆ ಕೆಲಸ ಮಾಡಲು ದುಡ್ಡೆಲ್ಲಿ ತರೋದು ಅನ್ನೋ ಸಮಸ್ಯೆ ಇದೆ. ಪಾದಯಾತ್ರೆ ಮಾಡೋದ್ರಿಂದ ಇವರಿಗೆ ಅನುಮತಿ ಸಿಗುತ್ತಾ? ಇವರ ಪಾದಯಾತ್ರೆಯಿಂದಾಗಿ ಕೇಂದ್ರ ಸರ್ಕಾರ ಇನ್ನು ಬಿಗಿಯಾಗಲಿದೆ. ಒಪ್ಪಿಗೆ ಕೊಡೋದನ್ನು ನಿಲ್ಲಿಸುತ್ತಾರೆ. ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಮುಂದಿನ ಸಭೆಯಲ್ಲಿ ಕ್ಲಿಯರೆನ್ಸ್ ಸಿಗಲಿದೆ ಎಂದಿದ್ದರು. ಈಗ ಇವರ ಪಾದಯಾತ್ರೆಯಿಂದ ಮತ್ತೆ ಮುಂದೆ ಹೋಗಲಿದೆ ಎಂದರು.

  • ಕೊಬ್ಬರಿ ಹೋರಿ ಹಬ್ಬಕ್ಕೆ ಅವಕಾಶ ನೀಡಿ – ಸ್ವಾಮೀಜಿಯಿಂದ 10 ಕಿಮೀ ಪಾದಯಾತ್ರೆ

    ಕೊಬ್ಬರಿ ಹೋರಿ ಹಬ್ಬಕ್ಕೆ ಅವಕಾಶ ನೀಡಿ – ಸ್ವಾಮೀಜಿಯಿಂದ 10 ಕಿಮೀ ಪಾದಯಾತ್ರೆ

    ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯ ಅಕ್ಕಿಆಲೂರು ಗ್ರಾಮದಿಂದ ಹಾನಗಲ್ ಪಟ್ಟಣದವರೆಗೆ ಹೋರಿಗಳ ಜೊತೆಗೆ ಪಾದಯಾತ್ರೆ ಮಾಡಲಾಗಿದೆ.

    ಪ್ರತಿವರ್ಷ ದೀಪಾವಳಿ ಹಬ್ಬದ ನಂತರ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಕೊಬ್ಬರಿ, ಬಲೂನ್, ಜೂಲಾ ಹಾಕಿ ಭರ್ಜರಿ ಅಲಂಕಾರ ಮಾಡಿದ್ದ ಹೋರಿಗಳನ್ನು ಅಖಾಡದಲ್ಲಿ ಓಡಿಸಿ ರೈತರು ಹೋರಿ ಹಬ್ಬದ ಸಂಭ್ರಮ ಆಚರಿಸುತ್ತಿದರು. ಆದರೆ ಕಳೆದೊಂದು ತಿಂಗಳ ಹಿಂದೆ ಹಾವೇರಿ ತಾಲೂಕಿನ ಬಸಾಪುರದಲ್ಲಿ ನಡೆದ ಹೋರಿ ಹಬ್ಬದಲ್ಲಿ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

    ಈ ಘಟನೆಯ ಬಳಿಕ ಜಿಲ್ಲಾಡಳಿತ ಹೋರಿ ಬೆದರಿಸುವ ಹಬ್ಬಕ್ಕೆ ನಿರ್ಬಂಧ ಹೇರಿದೆ. ಹೋರಿ ಹಬ್ಬಗಳನ್ನು ನಡೆಸದಂತೆ ತಾಕೀತು ಮಾಡಿದೆ. ಈ ವಿಷಯ ಹೋರಿ ಹಬ್ಬದ ಅಭಿಮಾನಿಗಳು ಮತ್ತು ಹೋರಿ ಮಾಲೀಕರನ್ನು ಕೆರಳಿಸಿದೆ. ಹೀಗಾಗಿ ಹೋರಿ ಹಬ್ಬಕ್ಕೆ ಅನುಮತಿ ನೀಡುವಂತೆ ಅಕ್ಕಿಆಲೂರು ಗ್ರಾಮದಿಂದ ಹಾನಗಲ್ ಪಟ್ಟಣದವರೆಗೆ ಸುಮಾರು ಹತ್ತು ಕಿಮೀ ವರೆಗೆ ವಿರಕ್ತ ಮಠದ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಿ ಹಬ್ಬದ ಅಭಿಮಾನಿಗಳು ಪಾದಯಾತ್ರೆ ನಡೆಸಿದರು. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಈ ಸಂದರ್ಭದಲ್ಲಿ ಅಕ್ಕಿಆಲೂರಿನ ವಿರಕ್ತ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ರೈತರಿಗೆ ಖುಷಿ ಕೊಡುವ ಹೋರಿ ಹಬ್ಬಕ್ಕೆ ಅನುಮತಿ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಬಂದಿರುವ ಜಾನಪದ ಹಬ್ಬವನ್ನು ಉಳಿಸಬೇಕು. ಜಿಲ್ಲಾಡಳಿತ ಹೋರಿ ಹಬ್ಬಕ್ಕೆ ಅನುಮತಿ ನೀಡಿ ರೈತರ ಸಂತಸ, ಸಂಭ್ರಮಕ್ಕೆ ಕಾರಣವಾಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ

    ಹಾನಗಲ್ ತಹಸೀಲ್ದಾರರ ಕಚೇರಿಗೆ ಕೊಬ್ಬರಿ ಹೋರಿಯ ಸಮೇತ ಹೋಗಿ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಕೆಲವು ನಿಯಮ ಹಾಗೂ ನಿರ್ಬಂಧಗಳನ್ನು ಹಾಕಿ ಹೋರಿ ಹಬ್ಬಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

  • ಜೀಪ್ ಡಿಕ್ಕಿಯಾಗಿ 20 ಮಂದಿ ಪಾದಯಾತ್ರಿಗಳು ಗಂಭೀರ

    ಜೀಪ್ ಡಿಕ್ಕಿಯಾಗಿ 20 ಮಂದಿ ಪಾದಯಾತ್ರಿಗಳು ಗಂಭೀರ

    ಮುಂಬೈ: ಪಾದಯಾತ್ರೆ ವೇಳೆ ಯಾತ್ರಾರ್ಥಿಗಳಿಗೆ ಜೀಪ್ ಡಿಕ್ಕಿಯಾಗಿ ಗಂಭೀರವಾಗಿರುವ ಘಟನೆ ಪುಣೆಯ ವಡಗಾವ್ ಮಾವೆಲ್ ಪ್ರದೇಶದಲ್ಲಿ ಮುಂಜಾನೆ ಸಂಭವಿಸಿದೆ.

    ಆಳಂದಿಯಲ್ಲಿರುವ ವಿಠ್ಠಲನ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರ ಗುಂಪಿಗೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತು ಮಂದಿ ಯಾತ್ರಾರ್ಥಿಗಳು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ

    POLICE JEEP

    ಪುಣೆಯಿಂದ ಇಪ್ಪತೈದು ಕಿಲೋಮೀಟರ್ ದೂರದಲ್ಲಿರುವ ಆಳಂದಿ ವಿಠ್ಠಲ ದೇವಸ್ಥಾನಕ್ಕೆ ಭಕ್ತರ ತಂಡವೊಂದು ಪಾದಯಾತ್ರೆಯ ಮೂಲಕ ತೆರಳುತ್ತಿತ್ತು. ಈ ವೇಳೆ ರಸ್ತೆ ಬದಿ ನಡೆದುಕೊಂಡು ತೆರಳುತ್ತಿದ್ದ ಯಾತ್ರಾರ್ಥಿಗಳ ಗುಂಪಿಗೆ ಹಿಂದಿನಿಂದ ಬಂದ ಜೀಪೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಡ್ಗಾಂವ್ ಮಾವಲ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ