Tag: ಪಾದಯಾತ್ರೆ

  • ಮಂತ್ರಾಲಯದಿಂದ ರಾಜ್ಯಕ್ಕೆ ಮರುಪ್ರವೇಶ ಮಾಡಿದ ಭಾರತ್ ಜೋಡೋ ಯಾತ್ರೆ

    ಮಂತ್ರಾಲಯದಿಂದ ರಾಜ್ಯಕ್ಕೆ ಮರುಪ್ರವೇಶ ಮಾಡಿದ ಭಾರತ್ ಜೋಡೋ ಯಾತ್ರೆ

    ರಾಯಚೂರು: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ(Rahul Gandhi) ಇಂದು ಬೆಳಿಗ್ಗೆ ಮಂತ್ರಾಲಯದ ಅಭಯ ಆಂಜನೇಯ ದೇವಾಲಯದಿಂದ ಭಾರತ್ ಜೋಡೋ ಯಾತ್ರೆ(Bharat Jodo Yatra) ಆರಂಭಿಸಿ ರಾಜ್ಯವನ್ನು ಮರುಪ್ರವೇಶ ಮಾಡಿದರು.

    ಮಂತ್ರಾಲಯದಿಂದ ಆಂಧ್ರಪ್ರದೇಶದ ಚಟ್ನಿಪಲ್ಲಿ, ಮಾಧವರಂ ಮೂಲಕ ರಾಯಚೂರಿನ ತುಂಗಭದ್ರಾ ಸೇತುವೆ ಮೂಲಕ ರಾಜ್ಯ ಪ್ರವೇಶಿಸಿದರು. ಮಾಧವರಂನಲ್ಲಿ ದಲಿತ ಮಹಿಳೆ ಲಕ್ಷ್ಮಮ್ಮ ಮನೆಯಲ್ಲಿ ಉಪಹಾರ ಸೇವಿಸಿದರು. ಬಳಿಕ ತುಂಗಭದ್ರಾ ಸೇತುವೆ ಬಳಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿ ನಾಯಕರು ರಾಹುಲ್ ಗಾಂಧಿಯಯನ್ನು ವಿವಿಧ ಕಲಾ ತಂಡಗಳೊಂದಿಗೆ ಭರ್ಜರಿಯಾಗಿ ಸ್ವಾಗತಿಸಿದರು.

    ಗಿಲ್ಲೆಸುಗೂರುವರೆಗೆ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ವಿಶ್ರಾಂತಿಗೆ ತೆರಳಿದರು. ಗಿಲ್ಲೆಸುಗೂರು ಗ್ರಾಮದಲ್ಲಿ ರೈತರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಸಂಜೆ 4 ರಿಂದ ಕೆರೆಬೂದುರಿನಿಂದ ಯರಗೇರಾದವರೆಗೆ ಪಾದಯಾತ್ರೆ ಆರಂಭಿಸಲಿದ್ದಾರೆ. ಸಂಜೆ ಕಾರ್ನರ್ ಮೀಟಿಂಗ್ ಬಳಿಕ ಯರಗೇರಾದಲ್ಲಿ ತಂಗಲಿದ್ದಾರೆ.

    ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಾಲಕಿಯನ್ನ ಹೆಗಲ ಮೇಲೆ ಹೊತ್ತು ಕೆಲಕಾಲ ರಾಹುಲ್ ಗಾಂಧಿ ನಡೆದರು.ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಮಾರ್ಗದುದ್ದಕ್ಕೂ ಸಾವಿರಾರು ಜನ ಭಾಗವಹಿಸಿದ್ದರು . ಕಾಂಗ್ರೆಸ್ ನಾಯಕರಾದ ಸುಜ್ರೆವಾಲ್, ಡಿಕೆ ಶಿವಕುಮಾರ್‌, ಕೃಷ್ಣಬೈರೇಗೌಡ, ಹೆಚ್.ಕೆ.ಪಾಟೀಲ್, ಯುಟಿ ಖಾದರ್, ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಿಶ್ಚಿತ ಪಿಂಚಣಿಗೆ ಆಗ್ರಹಿಸಿ ಅನುದಾನಿತ ಶಾಲಾ, ಕಾಲೇಜು ನೌಕರರಿಂದ ಬೃಹತ್ ಪಾದಯಾತ್ರೆ

    ನಿಶ್ಚಿತ ಪಿಂಚಣಿಗೆ ಆಗ್ರಹಿಸಿ ಅನುದಾನಿತ ಶಾಲಾ, ಕಾಲೇಜು ನೌಕರರಿಂದ ಬೃಹತ್ ಪಾದಯಾತ್ರೆ

    – ಸಿದ್ದಗಂಗಾ ಶ್ರೀಗಳಿಂದ ಚಾಲನೆ
    – ದಾಬಸ್ ಪೇಟೆ ತಲುಪಿದ ಮೊದಲ ದಿನ ಕಾಲ್ನಡಿಗೆ ಹೋರಾಟ

    ತುಮಕೂರು: ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕರು (Teachers) ಹಾಗೂ ನೌಕರರಿಗೆ (Employees) ನಿಶ್ಚಿತ ಪಿಂಚಣಿ (Fixed Pension) ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ತುಮಕೂರು (Tumakuru) ಸಿದ್ದಗಂಗಾ ಮಠದಿಂದ (Siddaganga Mutt) ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೂ ನಡೆಸುತ್ತಿರುವ ಬೃಹತ್ ಪಾದಯಾತ್ರೆ, ಪ್ರತಿಭಟನೆಗೆ (Protest) ಶುಕ್ರವಾರ ಬೆಳಗ್ಗೆ ಸಿದ್ಧಗಂಗಾ ಮಠದ ಶ್ರೀಗಳಾದ ಸಿದ್ಧಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

    ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಕಾಲ್ನಡಿಗೆ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಶ್ರೀಗಳು, ಈಗಾಗಲೇ ನಿವೃತ್ತರಾಗಿರುವ ಎಷ್ಟೋ ಶಿಕ್ಷಕರು ಪಡಬಾರದ ಕಷ್ಟಗಳನ್ನು ಪಡುತ್ತಿರುವುದು ಅಂತ್ಯಂತ ನೋವು ತಂದಿದೆ. ಆದ್ದರಿಂದ ಸರ್ಕಾರ ಕೂಡಲೇ ಅನುದಾನಿತ ನೌಕರರ ನ್ಯಾಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಮಹಿಳೆಗೆ ಮಾಸ್ಕ್ ತೊಡಿಸಿದ ರಾಗಾ

    ಕಾಲ್ನಡಿಗೆ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5,000 ನೌಕರರು ಪಾಲ್ಗೊಂಡಿದ್ದು, ಪಾದಯಾತ್ರೆಯ ಮೊದಲ ದಿನ ದಾಬಸ್ ಪೇಟೆ ತಲುಪಿದೆ. ಶನಿವಾರ ಅರೆ ಬೆತ್ತಲೆಯಾಗಿ ಕಾಲ್ನಡಿಗೆ ಹೋರಾಟ ನಡೆಸುತ್ತೇವೆ ಎಂದು ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತು ರಾಜ ಮತ್ತಿಕೊಪ್ಪ, ಸಂಘಟನಾ ಕಾರ್ಯದರ್ಶಿ ಹೊಸದುರ್ಗ ಪ್ರಕಾಶ್ ಎನ್‌ಒ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಆರ್‌ಬಿಐನಿಂದ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಪಾದಯಾತ್ರೆ ಅಂದ್ರೆ ನಮ್ ತಾಯಾಣೆ ಹೀಗೆ ಅಂತ ಗೊತ್ತಿರಲಿಲ್ಲ: ಸೋಮಣ್ಣ ವ್ಯಂಗ್ಯ

    ಪಾದಯಾತ್ರೆ ಅಂದ್ರೆ ನಮ್ ತಾಯಾಣೆ ಹೀಗೆ ಅಂತ ಗೊತ್ತಿರಲಿಲ್ಲ: ಸೋಮಣ್ಣ ವ್ಯಂಗ್ಯ

    ಬೆಂಗಳೂರು:ಪಾದಯಾತ್ರೆ(Padayatra) ಅಂದ್ರೆ ನಮ್ ತಾಯಾಣೆ ಹೀಗೆ ಅಂತ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ವಸತಿ ಸಚಿವ ವಿ. ಸೋಮಣ್ಣ(V Somanna) ರಾಹುಲ್‌ ಗಾಂಧಿ ಪಾದಯಾತ್ರೆಯನ್ನು ವ್ಯಂಗ್ಯಮಾಡಿದ್ದಾರೆ.

    ಭಾರತ್‌ ಜೋಡೋ(Bharat Jodo Yatra) ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಲ್ತಾನ್ ಬತ್ತೇರಿ ಇಂದ ಗುಂಡ್ಲುಪೇಟೆ ವರೆಗೂ 60 ಕಿ.ಮೀ ಇದೆ. ಪಾದಯಾತ್ರೆ ಅಂದರೆ ನಡೆದುಕೊಂಡು ಹೋಗುವುದು ಅಂದುಕೊಂಡಿದ್ದೆ. ಆದರೆ ವಾಹನ ಹತ್ತಿ ಓಡಾಡುವುದು ಅಂದುಕೊಂಡಿರಲಿಲ್ಲ.ರಾಹುಲ್ ಗಾಂಧಿ ಪಾದಯಾತ್ರೆ ಹೀಗೆ ಅಂತ ಗೊತ್ತಿಲ್ಲ ಎಂದು ಹೇಳಿದರು.

    ರಾಹುಲ್‌ ಗಾಂಧಿ(Rahul Gandhi) ಅವರ ಭಾರತ್‌ ಜೋಡೋ ಪಾದಯಾತ್ರೆ ಇಂದು ಕರ್ನಾಟಕ ಪ್ರವೇಶಿಸಿದೆ. ಇಂದು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ನಾಯಕರು ಸ್ವಾಗತ ಮಾಡಿದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ – ರಾಹುಲ್ ಎದುರೇ ಒಬ್ಬರಿಗೊಬ್ಬರು ಠಕ್ಕರ್

    ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14 ರ ವರೆಗೆ ಒಟ್ಟು 15 ದಿನ ರಾಹುಲ್‌ ಪಾದಯಾತ್ರೆ ಕರ್ನಾಟಕದಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

    ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

    ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದೇ ಮಾತು, ಸಿದ್ದು ಅವರ ಅಭಿಮಾನಿಗಳು ಮತ್ತು ಆಪ್ತರು ದಾವಣಗೆರೆಯಲ್ಲಿ ಜನ್ಮದಿನದ ಸಂಭ್ರಮವನ್ನು ಉತ್ಸವರ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

    ಈ ಕಾರ್ಯಕ್ರಮಕ್ಕೆ ಧಾರವಾಡದ ಸಿದ್ದು ಅಭಿಮಾನಿ ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ದಾವಣಗೆರೆ ಕಾಲ್ನಡಿಗೆ ಹೊರಟಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಸದಸ್ಯ ಹನಮಂತಪ್ಪರಿಂದ ಏಕಾಂಗಿಯಾಗಿ, ಗ್ರಾಮದಿಂದ ದಾವಣಗೆರೆವರೆಗೆ 120 ಕಿ.ಮೀವರೆಗೆ ಪಾದಯಾತ್ರೆ ಹೊರಟ್ಟಿದ್ದಾನೆ.

    ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಹನುಮಂತ ಈ ಹಿಂದೆ ದಿವಂಗತ ಸಿ.ಎಸ್. ಶಿವಳ್ಳಿವರು ಸಚಿವ ಸ್ಥಾನ ಸಿಗಲೆಂದು ಧೀರ್ಘ ದಂಡ ನಮಸ್ಕಾರ ಹಾಕಿದ್ದರು. ಇದಾದ ಬಳಿಕ ಅವರ ಮರಣದ ನಂತರ ಶಿವಳ್ಳಿ ಪತ್ನಿ ಕುಸುಮಾರವರು ಶಾಸಕಿಯಾಗಲೆಂದು ಮತ್ತೆ ದೀರ್ಘ ದಂಡ ನಮಸ್ಕಾರ ಹಾಗೂ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದರು. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    Live Tv
    [brid partner=56869869 player=32851 video=960834 autoplay=true]

  • ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ

    ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ

    ಶಿವಮೊಗ್ಗ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.

    ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಕನ್ನಡ ಸಾಹಿತಿಗಳಿಗೆ ಆದ ಅಪಮಾನವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕವಿಶೈಲದಿಂದ ಪಾದಯಾತ್ರೆ ಪ್ರಾರಂಭವಾಗಿದ್ದು, ಇದರ ನೇತೃತ್ವವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಹಿಸಿದ್ದಾರೆ.

    ಈ ಪಾದಯಾತ್ರೆಯಲ್ಲಿ ಸಾಹಿತಿಗಳು, ಪ್ರಗತಿಪರರು, ವಿವಿಧ ಸಂಘ ಸಂಸ್ಥೆ ಮುಖಂಡರು ಭಾಗಿಯಾಗಿದ್ದಾರೆ.

    ಏನಿದು ವಿವಾದ?
    ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿತ್ತು. ಅಲ್ಲದೇ ಅನೇಕ ಪಠ್ಯಗಳನ್ನು ಕೈಬಿಡಲಾಗಿದ್ದು, ಹಿಂದೂಪರ ಧೋರಣೆಗಳನ್ನು ಪಠ್ಯದಲ್ಲಿ ಬಿಂಬಿಸಲಾಗುತ್ತಿದೆ ಎಂದು ದೂರಲಾಗಿತ್ತು. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

    ವಿವಾದದ ಬಳಿಕ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೈಬಿಡಲಾಯಿತು. ಆದರೂ ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಸಾಕಷ್ಟು ಲೋಪಗಳಾಗಿವೆ. ಹೀಗಾಗಿ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಪಠ್ಯವನ್ನೇ ಈ ಶೈಕ್ಷಣಿಕ ಸಾಲಿನಲ್ಲೂ ಮುಂದುವರಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.

  • ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    ಚಿಕ್ಕೋಡಿ: ಹನುಮಂತನ ಜಯಂತಿ ಹಿನ್ನಲೆ ಶಾಸಕ ಗಣೇಶ್ ಹುಕ್ಕೇರಿಯವರು ತಮ್ಮ ಕಾರ್ಯಕರ್ತರ ಜೊತೆಗೆ ಬೆಳಗಾವಿ ಜಿಲ್ಲೆಯಿಂದ ಚಿಕ್ಕೋಡಿ ತೋರಣಹಳ್ಳಿಯ ಹನುಮಂತನ ದೇವಸ್ಥಾನದವರೆಗೆ ಪಾದಯಾತ್ರೆ ಮಾಡಿದ್ದಾರೆ.

    Ganesh Hukkeri

    ರಾಮಭಕ್ತ, ಪವನ ಪುತ್ರ ಹನುಮಂತ ಜಯಂತಿ ಹಿನ್ನಲೆ ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಹನುಮಂತ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷವಾಗಿ ಗಣೇಶ್ ಹುಕ್ಕೇರಿಯವರು ತಮ್ಮ ಅಪಾರವಾದ ಕಾರ್ಯಕರ್ತರ ಜೊತೆಗೆ ಚಿಕ್ಕೋಡಿಯ ಬಸವ ವೃತ್ತದಿಂದ ತೋರಣಹಳ್ಳಿಯ ಹನುಮಂತನ ದೇವಸ್ಥಾನವರೆ ಪಾದಯಾತ್ರೆ ಮಾಡಿ ಆಂಜನೇಯನ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಪಾದಯಾತ್ರೆಯಲ್ಲಿ ಹನುಮಂತ ಭಕ್ತರು, ಗಣೇಶ್ ಹುಕ್ಕೇರಿ ಅವರ ಕಾರ್ಯಕರ್ತರು ಚಿಕ್ಕೋಡಿ ಪುರಸಭೆ ಸದಸ್ಯರು ಸೇರಿದಂತೆ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಜನರು ಭಾರೀ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಗಣೇಶ್ ಹುಕ್ಕೇರಿಯವರಿಗೆ ತೋರಣ ಹಳ್ಳಿಯ ಹನುಮಂತ ಎಂದರೆ ಅಪಾರವಾದ ಭಕ್ತಿ, ಶ್ರದ್ಧೆ. ಈ ಕಾರಣಕ್ಕಾಗಿ ಗಣೇಶ್ ಹುಕ್ಕೇರಿಯವರು ಇಲ್ಲಿನ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದಾರೆ.

    Ganesh Hukkeri

    ಪಾದಯಾತ್ರೆಯ ಉದ್ದಕೂ ಶ್ರೀರಾಮ ಜೈ…ಜೈ..ರಾಮ ಎನ್ನುವ ಘೋಷಣೆಗಳು ಮೊಳಗಿದವು. ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಸುಮಾರು 15 ಕಿ.ಮೀ. ವರೆಗೆ ಈ ಪಾದಯಾತ್ರೆ ನಡೆಯಿತು. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

  • ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟ ಹೆಚ್‍ಡಿಕೆ

    ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟ ಹೆಚ್‍ಡಿಕೆ

    ಬೆಂಗಳೂರು: ಕೆಲ ದಿನಗಳಿಂದ ಅಶಾಂತಿ ಬೇಗುದಿಯಲ್ಲಿ ಬೇಯುತ್ತಿರುವ ಕರ್ನಾಟಕ ರಾಜ್ಯವು ಒಂದು ತಿಂಗಳ ಒಳಗಾಗಿ ಸಹಜ ಸ್ಥಿತಿಗೆ ಮರಳದೇ ಇದ್ದರೆ ಶಾಂತಿ, ಸಾಮರಸ್ಯ, ಸೌಹಾರ್ದ ಹಾಗೂ ಸಾಮರಸ್ಯ ಕರ್ನಾಟಕದ ಪುನರ್ ಸ್ಥಾಪನೆಗಾಗಿ ರಾಜ್ಯವ್ಯಾಪಿ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

    ಬೆಂಗಳೂರಿನ ಗಾಂಧಿ ಭವನದಲ್ಲಿ ಜೆಪಿ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಸರ್ವ ಜನಾಂಗದ ಶಾಂತಿಯ ತೋಟ – ಕರ್ನಾಟಕ ಒಂದು ಭಾವೈಕ್ಯ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಶಾಂತಿ, ಸಹನೆ, ಸೌಹಾರ್ದ, ಸಾಮರಸ್ಯದ ತಾಣವಾಗಿದ್ದ ಕರ್ನಾಟಕವೂ ಈಗ ಹಿಂಸೆ, ಅಸಹನೆ, ಕೋಮು ದ್ವೇಷದ ದಳ್ಳುರಿಯಲ್ಲಿ ಉರಿಯುತ್ತಿದೆ. ಈ ಕಾರಣಕ್ಕಾಗಿಯೇ ನಾನು ಸರ್ಕಾರಕ್ಕೆ ಗಡುವು ಕೊಡುತ್ತಿದ್ದೇನೆ. ಒಂದು ತಿಂಗಳಲ್ಲಿ ಈ ವಾತಾವರಣವನ್ನು ತಿಳಿಗೊಳಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ. ಅವರನ್ನು ಬಡಿದೆಬ್ಬಿಸುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ರಾಜ್ಯದಲ್ಲಿ ಸೃಷ್ಟಿ ಆಗಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು. ನಾಡಿನ ಮಕ್ಕಳನ್ನು ಇಂತದ್ದರಿಂದ ಪಾರು ಮಾಡಬೇಕು. ಪಾದಯಾತ್ರೆ ಮುಖಾಂತರ ಎಲ್ಲರನ್ನೂ ಭೇಟಿಯಾಗಿ ಮಾತನಾಡುತ್ತೇನೆ. ಸಮಾನ ಮನಸ್ಕರ ಜತೆ ಚರ್ಚೆ ನಡೆಸಿ ಮುಂದುವರಿಯುತ್ತೇನೆ ಎಂದರು.

    ರಾಜ್ಯದಲ್ಲಿ ಉಂಟಾಗಿರುವ ಪರಿಣಾಮಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಅವರು ಕಿಡಿಗೇಡಿ, ತಿಳಿಗೇಡಿ, ಸಮಾಜಘಾತಕರು ಈ ದೇಶವನ್ನೂ ಛಿದ್ರಗೊಳಿಸಲು ಹೊರಟಿದ್ದಾರೆ. ಯಾರ ಹೃದಯವನ್ನು ಸ್ವಚ್ಛ ಮಾಡುವುದು ಕಾಣುತ್ತಿಲ್ಲ. ಅದರ ವಿರುದ್ಧ ದನಿ ಎತ್ತಲು ಹೋದರೆ ಅಂತವರನ್ನು ಸಂಪೂರ್ಣ ನಿಗ್ರಹ ಮಾಡಲು ಕೆಲ ಸಂಸ್ಥೆಗಳನ್ನು ದಾಳಿಗೆ ಬಿಡುತ್ತಾರೆ. ವಿಹೆಚ್‍ಪಿ, ಭಜರಂಗದಳಕ್ಕಿಂತ ಇಡಿ, ಐಟಿ ಸಂಸ್ಥೆಗಳು ಭಯೋತ್ಪಾದಕ ಕೆಲಸ ಮಾಡುತ್ತಿವೆ ಎಂದು ಕೆಲ ಮಾಧ್ಯಮಗಳು ಬರೆದಿವೆ ಎಂದು ಹೇಳಿದರು.

    ಕರ್ನಾಟಕದಲ್ಲಿ ಇಂಥದ್ದಕ್ಕೆ ಅವಕಾಶ ಕೊಡುವ ಪ್ರಶ್ನೆ ಇಲ್ಲ. ಇದು ಉತ್ತರ ಪ್ರದೇಶ ಅಲ್ಲ, ಕರ್ನಾಟಕ ಎನ್ನುವುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ನಾನು ಯಾರಿಗೂ ಹೆದರುವ ಪೈಕಿ ಅಲ್ಲ. ಹೋರಾಟ ನಡೆಸಿಯೇ ಸಿದ್ಧ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

  • ಹಿಂದೂ ಸಮಾಜದ ಐಕ್ಯತೆಗಾಗಿ ಹಿಂದೂಗಳ ಬೃಹತ್ ಪಾದಯಾತ್ರೆ

    ಹಿಂದೂ ಸಮಾಜದ ಐಕ್ಯತೆಗಾಗಿ ಹಿಂದೂಗಳ ಬೃಹತ್ ಪಾದಯಾತ್ರೆ

    ಮಂಗಳೂರು: ರಾಜ್ಯ ಕರಾವಳಿಯಲ್ಲಿ ಹಿಜಬ್ ವಿವಾದದ ಬಳಿಕ ಗೊಂದಲದ ವಾತವರಣ ನಿರ್ಮಾಣವಾಗಿದೆ. ಈ ನಡುವೆ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆ ನಡೆದಿದೆ. ಕರಾವಳಿಯ ಕಾರ್ನಿಕ ದೈವ ಕೊರಗಜ್ಜನ ಆದಿಕ್ಷೇತ್ರಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರು ಹದಿನೈದು ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ.

    ಹಿಜಬ್ ಕುರಿತು ಬಂದ ಕೋರ್ಟ್ ತೀರ್ಪು ವಿರೋಧಿಸಿ ಎರಡು ದಿನಗಳ ಹಿಂದೆ ಮುಸ್ಲಿಂ ಸಮುದಾಯದವರು ಒಂದು ದಿನದ ಬಂದ್ ಆಚರಿಸಿದ್ದರು. ಈ ಬಂದ್ ಬಳಿಕ ಸೋಷಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆ ಶುರುವಾಗಿದೆ. ಹಿಂದೂ ಸಮಾಜ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜದ ಐಕ್ಯತೆಗಾಗಿ ಭಾನುವಾರ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಕುರಾನ್,ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತಿದೆ:  ಕಲ್ಲಡ್ಕ ಪ್ರಭಾಕರ ಭಟ್

    ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಮಂಗಳೂರು ಹೊರವಲಯದ ಕುತ್ತಾರು ಬಳಿ ಇರುವ ಕಾರ್ನಿಕ ದೈವ ಕೊರಗಜ್ಜನ ಆದಿಕ್ಷೇತ್ರಕ್ಕೆ ಕದ್ರಿ ಶ್ರೀಮಂಜುನಾಥ ದೇವಸ್ಥಾನದಿಂದ ಪಾದಯಾತ್ರೆ ನಡೆಯಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು 15 ಕಿ.ಮೀ. ದೂರ ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿದರು. ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಸಮಾರೋಪದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿ ಜಾಗೃತಿ ಭಾಷಣ ಮಾಡಿದರು ಹಾಗೂ ಪ್ರತ್ಯೇಕವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಮುಂದೆ ಒಂದಲ್ಲಾ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗಬಹುದು ಎಂಬ ವಿಶ್ವಾಸವನ್ನು ಪ್ರಭಾಕರ್ ಭಟ್ ವ್ಯಕ್ತಪಡಿಸಿದರು. ಆಕ್ರಮಣ ಆದಾಗ ಹಿಂದೂ ಸಮಾಜ ಪ್ರತಿರೋಧ ತೋರಿಸುತ್ತದೆ. ಶಾಂತಿ, ಸಾಮರಸ್ಯದ ಜೀವನ ದೌರ್ಬಲ್ಯ ಅಂದುಕೊಂಡರೆ ಅದು ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಮುಸಲ್ಮಾನರು ಹಿಜಬ್ ಹೆಸರಿನಲ್ಲಿ ಕೋರ್ಟ್ಗೆ ಹೋದರು. ತೀರ್ಪು ಬಂದ ಬಳಿಕ ಅದನ್ನು ಅವರು ಒಪ್ಪಲಿಲ್ಲ. ಅದು ಬಿಟ್ಟು ಪ್ರತಿಭಟನೆ ಮತ್ತು ನ್ಯಾಯಾಂಗ ನಿಂದನೆ ಮಾಡಿದರು. ಮುಸಲ್ಮಾನ ಸಾಮ್ರಾಜ್ಯ ನಿರ್ಮಾಣವೇ ಅವರ ಗುರಿ. ಇದಕ್ಕಾಗಿ ಹಿಂದೂ ಸಮಾಜ ಒಗ್ಗಟ್ಟಾಗಲು ಈ ನಡಿಗೆ ಎಂದು ಪ್ರಭಾಕರ್ ಭಟ್ ಹೇಳಿದರು.

    ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಭಟ್, ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಹಿಂದೂಗಳಾದ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

  • ಜೇಮ್ಸ್ ಚಿತ್ರದ ವಿಶ್ವದಾಖಲೆಗಾಗಿ ಪುಟಾಣಿಗಳ ಜೊತೆಗೆ 525 ಕಿಮೀ ಸಾಗಿದ ಕುಟುಂಬ

    ಜೇಮ್ಸ್ ಚಿತ್ರದ ವಿಶ್ವದಾಖಲೆಗಾಗಿ ಪುಟಾಣಿಗಳ ಜೊತೆಗೆ 525 ಕಿಮೀ ಸಾಗಿದ ಕುಟುಂಬ

    ನೆಲಮಂಗಲ: ಅಪ್ಪು ಕೊನೆಯ ಸಿನಿಮಾ ಜೇಮ್ಸ್ ವಿಶ್ವದಾಖಲೆ ಮಾಡಲೆಂದು 7 ಮಕ್ಕಳ ಜೊತೆಗೆ ಇಲ್ಲೊಂದು ಕುಟುಂಬ ಕಾಲ್ನಡಿಗೆ ಮೂಲಕ ವಿಜಯಪುರದಿಂದ ಬೆಂಗಳೂರು ನಗರಕ್ಕೆ ಬರುತ್ತಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ತಿಂಗಳುಗಳೇ ಕಳೆದರೂ ಅಭಿಮಾನಿಗಳು ಒಂದೆಲ್ಲಾ ಒಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ. ವಿಜಯಪುರದ ಧರೆಪ್ಪ ಅರ್ದಾವೂರ್ ಮತ್ತು ವಿದ್ಯಾರಾಣಿ ದಂಪತಿ ಏಳು ಮಕ್ಕಳ ಜೊತೆಗೆ ಸುಮಾರು 525 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

    ಫೆಬ್ರವರಿ 25ರಂದು ಆರಂಭ ಮಾಡಿದ ಪಾದಯಾತ್ರೆ ಇಂದು ನೆಲಮಂಗಲ ಮೂಲಕ ಕಂಠೀರವ ಸ್ಟುಡಿಯೋ ತಲುಪಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಕುಟುಂಬವು ಪಾದಯಾತ್ರೆ ಜೊತೆಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:  ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ರಸ್ತೆಯದ್ದಕ್ಕೂ ಪುನೀತ್ ಅಭಿನಯದ ಚಲನಚಿತ್ರ ಗೀತೆಗಳ ಸಾರದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಪುನೀತ್ ರಾಜ್‍ಕುಮಾರ್ ಕನಸಿನಂತೆ ಕನ್ನಡ ಶಾಲೆಗಳ ಅಭಿವೃದ್ಧಿ ಜಾಗೃತಿ ಜಾಥಾ, ಅಂಗಾಂಗಗಳ ದಾನ ಮತ್ತು ನೇತ್ರದಾನ ಕುರಿತು ಜನಜಾಗೃತಿ ಪಾದಯಾತ್ರೆಯುದ್ದಕೂ ಅಭಿಮಾನವನ್ನು ವ್ಯಕ್ತಪಡಿಸಿದ ಕುಟುಂಬ ಇದಾಗಿದೆ. ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿರೋ ಉಕ್ರೇನ್ ರಿಟರ್ನ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ..?

  • ವೇತನಕ್ಕೆ ಆಗ್ರಹಿಸಿ ಖಾಸಗಿ ಐಟಿಐ ಒಕ್ಕೂಟದಿಂದ ಬೆಂಗಳೂರಿಗೆ ಪಾದಯಾತ್ರೆ

    ವೇತನಕ್ಕೆ ಆಗ್ರಹಿಸಿ ಖಾಸಗಿ ಐಟಿಐ ಒಕ್ಕೂಟದಿಂದ ಬೆಂಗಳೂರಿಗೆ ಪಾದಯಾತ್ರೆ

    ಹುಬ್ಬಳ್ಳಿ: ಸಿಬ್ಬಂದಿ ವೇತನ ಅನುದಾನಕ್ಕೆ ಒತ್ತಾಯಿಸಿ ಖಾಸಗಿ ಐಟಿಐ ಸಂಘಟನೆಯಿಂದ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.

    ಸಂಘಟನೆ ನೂರಾರು ಸದಸ್ಯರು ವಿವಿಧ ಬೇಡಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನಗರದ ಮೂರುಸಾವಿರ ಮಠದಿಂದ ಆರಂಭಗೊಂಡಿರುವ ಈ ಪಾದಯಾತ್ರೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಮಾರ್ಗ ಮಧ್ಯೆ ವಿವಿಧ ಜಿಲ್ಲೆಯ ಸಿಬ್ಬಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಈ ಬಗ್ಗೆ ಮಾತನಾಡಿದ ಒಕ್ಕೂಟದ ರಾಜ್ಯ ಸಂಚಾಲಕ ಪ್ರದೀಪ್, ಸರ್ಕಾರ ಈ ಹಿಂದೆ ಐಟಿಐ ಕಾಲೇಜುಗಳಿಗೆ ಹಾಗೂ ಸಿಬ್ಬಂದಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದೆ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಈ ಪಾದಯಾತ್ರೆ ಬೆಂಗಳೂರು ತಲುಪುವುದರೊಳಗಾಗಿ ಸರ್ಕಾರ ನಮ್ಮ ಬೇಡಿಕೆಯನ್ನು ಪೂರೈಸಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮೈಕ್ರೋಸಾಫ್ಟ್ ಸಿಇಒ ಪುತ್ರ ನಿಧನ!