Tag: ಪಾತ್ರೆ

  • ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

    ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

    ಲಕ್ನೋ: ಕುದಿಯುತ್ತಿರುವ ಸಾಂಬಾರಿನ (Dal) ಪಾತ್ರೆಯೊಳಗೆ ಬಿದ್ದು ಐದು ವರ್ಷದ ಬಾಲಕನೊಬ್ಬ (Boy) ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ (Uttar Pradesh) ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಪ್ರದೇಶ ಕರಣ್‍ಪುರದ ಸುತಾರಿ ಗ್ರಾಮದ ನಿವಾಸಿ ಪ್ರಶಾಂತ್(5) ಮೃತ ಬಾಲಕ. ಈತ ತಂದೆ ದುಶೀಲ್ ಸಿಂಗ್. ವೃತ್ತಿಯಲ್ಲಿ ರೈತರಾಗಿದ್ದಾರೆ. ಮುಂಡನ್ ಕಾರ್ಯದ ಅಂಗವಾಗಿ ಅಡುಗೆ ಮಾಡಲಾಗುತ್ತಿತ್ತು. ಆದರೆ ಬಾಲಕ ಪ್ರಶಾಂತ್ ಬಿಸಿ ಪಾತ್ರೆ ಇಡುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದ. ಆಟವಾಡುತ್ತಾ ಪ್ರಶಾಂತ್ ಜಿಗಿದಿದ್ದಾನೆ. ಈ ವೇಳೆ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯೊಳಗೆ ಬಿದ್ದಿದ್ದಾನೆ. ಇದನ್ನೂ ಓದಿ: ಧಮ್, ತಾಕತ್ ಇದ್ರೆ ಉತ್ತರ ಕೊಡಿ – ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ

    crime

    ಪ್ರಶಾಂತ್‍ನ ಕಿರುಚಾಟ ಕೇಳಿ ಹತ್ತಿರದಲ್ಲಿದ್ದವರು ಬಂದು ಕೂಡಲೇ ಆತನನ್ನು ಮೀರತ್‍ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಈ ಘಟನೆ ಸೈದಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಣ್‍ಪುರ ಸ್ಕುಟಾರಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    Live Tv 
    [brid partner=56869869 player=32851 video=960834 autoplay=true]

  • ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ಬಾಲಕನಿಗೆ ಥಳಿಸಿ ಕೊಂದ ಶಿಕ್ಷಕ

    ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ಬಾಲಕನಿಗೆ ಥಳಿಸಿ ಕೊಂದ ಶಿಕ್ಷಕ

    ಜೈಪುರ: ಖಾಸಗಿ ಶಾಲೆಯೊಂದರಲ್ಲಿ ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಕ್ಕೆ ಒಂಬತ್ತು ವರ್ಷದ ದಲಿತ ವಿದ್ಯಾರ್ಥಿಗೆ ಶಿಕ್ಷಕನೊಬ್ಬ ಅಮಾನವೀಯವಾಗಿ ಥಳಿಸಿದ್ದರಿಂದ ಬಾಲಕ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ.

    ಜುಲೈ 20 ರಂದು ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಘಟನೆ ಜರುಗಿದ್ದು, ಗಾಯಗೊಂಡ ಬಾಲಕ ಗುಜರಾತಿನ ಅಹಮದಾಬಾದ್‍ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    ಇದೀಗ 40 ವರ್ಷದ ಆರೋಪಿ ಶಿಕ್ಷಕ ಚೈಲ್ ಸಿಂಗ್ ಅನ್ನು ಪೊಲೀಸರು ಬಂಧಿಸಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ ಟಾಂಗ್

    ಈ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಇದೊಂದು ದುರಂತ ಘಟನೆ ಎಂದಿದ್ದಾರೆ. ಜಾಲೋರ್‍ನ ಸೈಲಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ ನಡೆಸಿದ ಹಲ್ಲೆಯಿಂದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದು ದುರಂತವಾಗಿದ್ದು, ಆರೋಪಿಗಳ ವಿರುದ್ಧ ಕೊಲೆ ಹಾಗೂ ಎಸ್‍ಸಿ/ಎಸ್‍ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವರ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರಕ್ಕೆ ಕಿರಿಕ್ – ನಾಲ್ವರಿಗೆ ಗಂಭೀರ ಗಾಯ

    ದೇವರ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರಕ್ಕೆ ಕಿರಿಕ್ – ನಾಲ್ವರಿಗೆ ಗಂಭೀರ ಗಾಯ

    ಹಾಸನ: ದೇವರ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರಕ್ಕೆ ಶುರುವಾದ ಜಗಳದಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ.

    ಅಡಿಬೈಲು ರಂಗನಾಥಸ್ವಾಮಿ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರವಾಗಿ ದಿನೇಶ್ ಹಾಗೂ ರಘು ಕುಟುಂಬದವರ ನಡುವೆ ಭಾನುವಾರ ರಾತ್ರಿ ಜಗಳ ನಡೆದಿದೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರು. ಈ ಬಗ್ಗೆ ಸೋಮವಾರ ಆಲೂರು ಪೊಲೀಸ್ ಠಾಣೆಗೆ ದಿನೇಶ್ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ರಘು ಹಾಗೂ ಅಣ್ಣ-ತಮ್ಮಂದಿರು ನಿನ್ನೆ ದಿನೇಶ್ ಹಾಗೂ ಪುಟ್ಟರಾಜು ಮನೆಗೆ ನುಗ್ಗಿ ಕಲ್ಲು, ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮುತಾಲಿಕ್ ಬರುವುದಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು


    ಘಟನೆಯಲ್ಲಿ ಪುಟ್ಟರಾಜು, ದಿನೇಶ್, ಗೀತಾ, ಕೃಷ್ಣಾಚಾರಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಲ್ಲದೇ ಮನೆಗೆ ನುಗ್ಗಿ ಹಲ್ಲೆ ಮಾಡುವ ವೀಡಿಯೋ ವೈರಲ್ ಆಗಿದೆ. ಗಾಯಾಳುಗಳಿಗೆ ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಘು, ಮಂಜುನಾಥ್, ದರ್ಶನ್, ಅಪ್ಪಣ್ಣ, ಚಂದು, ಮಂಜ, ದೇವರಾಜು, ಮೋಹನ್, ಪ್ರೇಮ ಎಂಬುವವರ ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅರುಂಧತಿ ನಕ್ಷತ್ರ ಬದಲು ಪುನೀತ್ ಫೋಟೋ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

  • ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಮುಂಬೈ: ಗುಲಾಬ್ ಜಾಮೂನ್ ತಯಾರಿಸಿಟ್ಟಿದ್ದ ಪಾತ್ರೆಗೆ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಎರಡು ವರ್ಷದ ರಾಜವೀರ್ ನಿತಿನ್ ಮೇಘವಾಲೆ ಗುಲಾಬ್ ಜಾಮೂನು ಪಾತ್ರೆಯಲ್ಲಿ ಬಿದ್ದು ಮೃತಪಟ್ಟ ಮಗುವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮನೆಯವರು ಮಹಾಪ್ರಸಾದವಾಗಿ ಗುಲಾಬ್ ಜಾಮೂನುಗಳನ್ನು ಸಿದ್ಧಪಡಿಸಿ, ದೊಡ್ಡದಾದ ಪಾತ್ರೆಯಲ್ಲಿ ಸಂಗ್ರಹಿಸಿದ್ದರು.

    ಇದರ ಅರಿವಿಲ್ಲದ ರಾಜವೀರ್ ಆಟವಾಡುತ್ತಾ ಹೋಗಿ ಬಿಸಿ ಜಾಮೂನು ಪಾತ್ರೆಯಲ್ಲಿ ಬಿದ್ದಿದ್ದಾನೆ. ತಕ್ಷಣಕ್ಕೆ ಮಗುವನ್ನು ಯಾರೂ ಗಮನಿಸಿರಲಿಲ್ಲ. ಮಗು ಕಿರುಚಾಡಿದ್ದನ್ನು ಕೇಳಿ, ಪೋಷಕರು ಮಗುವನ್ನು ಪಾತ್ರೆಯಿಂದ ಎತ್ತಿದ್ದಾರೆ. ಆದರೆ ಬಿಸಿ ಜಾಮೂನಿನಲ್ಲಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದವು. ಕೂಡಲೇ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾಜವೀರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ನಾಗರಹಾವು

    ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ನಾಗರಹಾವು

    ಚಿಕ್ಕಮಗಳೂರು: ಮನೆಯ ಕಾಂಪೌಂಡ್ ಒಳಗೆ ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ಗೋಧಿ ಬಣ್ಣದ ನಾಗರಹಾವನ್ನು ಉರಗತಜ್ಞ ಸೆರೆ ಹಿಡಿದು ರಕ್ಷಿಸಿದ್ದಾರೆ.

    ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೆಎಸ್‍ಆರ್ ಟಿಸಿ ಬಸ್ ಸ್ಟ್ಯಾಂಡ್ ಹಿಂಭಾಗದ ಕುವೆಂಪು ನಗರದ ದೇವಣ್ಣ ಮಾಸ್ಟರ್ ಎಂಬವರ ಮನೆಯಲ್ಲಿ ಈ ಗೋಧಿ ನಾಗರ ಸೆರೆಯಾಗಿದ್ದಾನೆ. ಮನೆಯವರು ಹೊರಗಿದ್ದ ಪಾತ್ರೆಯನ್ನ ತೊಳೆಯಲು ಬಂದಾಗ ಹಾವನ್ನ ನೋಡಿ ಗಾಬರಿಯಾಗಿದ್ದಾರೆ. ಕೂಡಲೇ ಉರಗ ತಜ್ಞ ಆರೀಫ್‍ಗೆ ಕರೆ ಮಾಡಿದ್ದಾರೆ.

    ಸ್ಥಳಕ್ಕೆ ಬಂದ ಆರೀಫ್, ಹಾವು ಚಿಕ್ಕದ್ದಾಗಿರೋದ್ರಿಂದ ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಹೋಗ್ತಿದ್ದ ಕಾರಣ ಸುಮಾರು ಅರ್ಧ ಗಂಟೆಗಳ ಕಾಲ ಹರಸಾಹಸಪಟ್ಟು ಹಾವನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಹಾವನ್ನ ಮನೆಯ ಮುಂಭಾಗವೇ ಸ್ವಲ್ಪ ಹೊತ್ತು ಆಡಿಸಿ ನಂತರ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

  • ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ತಿರುವನಂತಪುರಂ: ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿರುತ್ತವೇ ಅಂತ ಮನೆಯಲ್ಲಿ ಇರುವ ಮಂದಿ ಗಮನಹರಿಸಿದೇ ಇರಬಾರದು. ಅಪ್ಪಿ ತಪ್ಪಿ ಮಕ್ಕಳ ಕಡೆ ಗಮನಕೊಡದಿದ್ರೆ ಆಪತ್ತಿಗೆ ಸಿಲುಕಿಕೊಳ್ತಾವೆ. ಇದಕ್ಕೆ ಸಾಕ್ಷಿ ಈ ವಿಡಿಯೋ.

    ಆಟವಾಡ್ತಿದ್ದ ಮಗು ಖಾಲಿ ಪಾತ್ರೆಯನ್ನು ತಗೆದುಕೊಂಡು ತಲೆ ಮೇಲೆ ಟೋಪಿ ಥರ ಹಾಕಿಕೊಂಡಿದೆ. ಆದ್ರೆ ಪಾತ್ರ ಮಾತ್ರ ವಾಪಸ್ ಬರಲೇ ಇಲ್ಲ. ಕೊನೆಗೆ ಮಗುವಿನ ಕಿರುಚಾಟ ನೋಡಿ ಪೋಷಕರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

    ಮಗುವಿನ ಸ್ಥಿತಿಯನ್ನು ನೋಡಿದ ವೈದ್ಯರು ಅಗ್ನಿಶಾಮಕ ದಳದ ಹತ್ತಿರ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಪಾತ್ರೆಯನ್ನು ಕತ್ತರಿಸಿ ಮಗುವನ್ನ ರಕ್ಷಣೆ ಮಾಡಿದ್ದಾರೆ.

    ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಬುಧವಾರ ನಡೆದಿದೆ. ಕೇರಳ ಫೈರ್ ಫೋರ್ಸ್ ನವರು ಈ ವಿಡಿಯೋವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

    https://youtu.be/T1FRHw3-hd8