Tag: ಪಾಣಿಪತ್

  • ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ

    ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ

    ಚಂಡೀಗಢ: ಮೊಮ್ಮಗಳನ್ನು ಸೇನೆಗೆ ಸೇರಿಸುತ್ತೇನೆ. ಈ ಮೂಲಕ ನನ್ನ ಮಗನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಲೂತ್ತೇವೆ ಎಂದು ಹುತಾತ್ಮ ಯೋಧ ಮೇಜರ್ ಆಶೀಶ್ ಢೋನ್‍ಚಕ್ (Major Aashish Dhonchak)  ತಾಯಿ ಹೇಳಿದ್ದಾರೆ.

    ಜಮ್ಮು-ಕಾಶ್ಮೀರದ (jammu Kashmir) ಅನಂತ್‍ನಾಗ್‍ನಲ್ಲಿ ಸೇನೆ ಹಾಗೂ ಉಗ್ರರ ಜೊತೆ ನಡೆದ ಗುಮಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಅಂತೆಯೇ ಇಂದು ಈ ಯೋಧರ ಅಂತ್ಯಕ್ರಿಯೆಯು ತಾಯ್ನಾಡಿನಲ್ಲಿ ನಡೆದಿದೆ.

    ಪಾಣಿಪತ್‍ನ (Panipat) ಬಿಂಜೋಲ್‍ನಲ್ಲಿ ವೀರಯೋಧ ಮೇಜರ್ ಆಶೀಶ್ ಢೋನ್‍ಚಕ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಅಭಿಮಾನಿಗಳು, ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರು ಪಾಣಿಪತ್‍ನಲ್ಲಿ ಹೊಸದಾಗಿ ನಿರ್ಮಿಸಿದ ಅವರ ಮನೆಯಿಂದ ಅವರ ತವರು ಬಿಂಜೋಲ್‍ಗೆ ನಡೆದುಕೊಂಡು ಹೋದರು. ಇನ್ನು ಯೋಧನ ಮೃತದೇಹವಿದ್ದ ಕಾರಿನ ಜೊತೆ ಕಾರಿನಲ್ಲಿ ತೆರಳಿದರು. ಇದನ್ನೂ ಓದಿ: ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ಭಾರತ ಮಾತೆಗಾಗಿ ನನ್ನ ಮಗ ಪ್ರಾಣತ್ಯಾಗ ಮಾಡಿದ್ದಾನೆ. ನನ್ನ ಮಗನ ಬಗ್ಗೆ ನನಗೆ ಹೆಮ್ಮಾಯಾಗುತ್ತಿದೆ ಎಮದು ಹೇಳಿದ್ದಾರೆ. ಜೊತೆಗೆ ಮಗನಿಗೆ ಎರಡೂವರೆ ವರ್ಷದ ಮಗಳಿದ್ದಾಳೆ. ಆಕೆ ದೊಡ್ಡವಳಾದ ಬಳಿಕ ಸೇನೆಗೆ ಸೇರಿಸುತ್ತೇನೆ. ನನ್ನ ಮೊಮ್ಮಗಳನ್ನು ಯೋಧಳನ್ನಾಗಿ ಮಾಡುತ್ತೇನೆ. ಈ ಮೂಲಕ ಮಗನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಆಶೀಶ್ ಹೊಸದಾಗಿ ಮೂರು ಅಂತಸ್ತಿನ ಮನೆಯೊಂದು ಕಟ್ಟಿಸುತ್ತಿದ್ದು, ಇದರ ಗೃಹಪ್ರವೇಶಕ್ಕಾಗಿ ಮುಂದಿನ ತಿಂಗಳು ಅಂದರೆ ಅಕ್ಟೋಬರ್‍ನಲ್ಲಿ ತಾಯ್ನಾಡಿಗೆ ಆಗಮಿಸುವವರಿದ್ದರು. ಅಲ್ಲದೆ ಅಕ್ಟೋಬರ್ 23 ಆಶೀಶ್ ಹುಟ್ಟುಹಬ್ಬ ಕೂಡ ಆಗಿತ್ತು. ಹೀಗಾಗಿ ಅದೇ ದಿನ ಗೃಹಪ್ರವೇಶ ಕಾರ್ಯಕ್ರಮವನ್ನು ಕೂಡ ಇಟ್ಟುಕೊಂಡಿದ್ದರು. ಆದರೆ ಈ ಮಧ್ಯೆಯೇ ಆಶೀಶ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲಿಂಡರ್‌ ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು

    ಸಿಲಿಂಡರ್‌ ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು

    ಚಂಡೀಗಢ: ಪಾಣಿಪತ್‌ನ (Panipat) ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ (Cylinder Blast) ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಮೃತರನ್ನು ಅಬ್ದುಲ್ ಕರೀಂ (48), ಅವರ ಪತ್ನಿ ಅಫ್ರೋಜ್ (45), ಅವರ ಪುತ್ರಿಯರಾದ ಇಶ್ರತ್ (18), ರೇಷ್ಮಾ (16) ಮತ್ತು ಅಫ್ಸಾನಾ (8) ಮತ್ತು ಮಗ ಅಬ್ದುಶ್ ಶಕುರ್ (12) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಜಾ ದಿನಗಳಲ್ಲಿ ಸಹೋದ್ಯೋಗಿಗೆ ತೊಂದರೆ ನೀಡಿದ್ರೆ 1 ಲಕ್ಷ ದಂಡ..!

    ಕರೀಂ ಅವರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಾಗಿದ್ದರು. ಅವರ ಕುಟುಂಬದೊಂದಿಗೆ ಒಂದು ಕೊಠಡಿಯ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಪ್ರಕರಣ ಕುರಿತು ಪಾಣಿಪತ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಮಾತನಾಡಿ, ಬೆಳಗ್ಗೆ 6:30 ರ ಸಮಯದಲ್ಲಿ ಅಡುಗೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.

    ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವಷ್ಟರಲ್ಲಿ, ಸಿಲಿಂಡರ್‌ ಸ್ಫೋಟಿಸಿದ್ದ ಕೊಠಡಿ ಸುಟ್ಟುಹೋಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲಿರುವ ಕರೀಂ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ನಾಯಿ ಬೊಗಳುವ ವಿಚಾರಕ್ಕೆ ಜಗಳ- ಮಹಿಳೆ ಸಾವು, ಐವರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 3 ದಿನದ ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದು ಕಚ್ಚಿ ಕೊಂದ ಬೀದಿನಾಯಿ

    3 ದಿನದ ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದು ಕಚ್ಚಿ ಕೊಂದ ಬೀದಿನಾಯಿ

    ಚಂಡೀಗಢ: ಬೀದಿನಾಯಿಯೊಂದು ಮೂರು ದಿನದ ಗಂಡು ಮಗುವನ್ನು ಆಸ್ಪತ್ರೆಯಿಂದ ಎತ್ತುಕೊಂಡು ಹೋಗಿ ಕಚ್ಚಿ ಕೊಂದಿರುವ ಘಟನೆಯೊಂದು ಹರಿಯಾಣದ ಪಾಣಿಪತ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಪಾಣಿಪತ್‍ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮಗು ವೃದ್ಧೆ ಪಕ್ಕ ನೆಲದ ಮೇಲೆ ಮಲಗಿಕೊಂಡಿತ್ತು. ಈ ವೇಳೆ ಆಸ್ಪತ್ರೆ ಒಳಗೆ ಬಂದ ಬೀದಿನಾಯಿ ನೆಲದ ಮೇಲೆ ಮಲಗಿಕೊಂಡಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕಚ್ಚಿ ಕೊಂದಿದೆ. ಇದನ್ನೂ ಓದಿ: ಪತಿ ಜೊತೆ ಸೇರಿ 7,894 ಕೋಟಿ ರೂ. ಸೋಲಾರ್ ಹಗರಣ ಮಾಡಿ ಸಿಕ್ಕಿಬಿದ್ಳು

    dog

    ನಡೆದಿದ್ದೇನು?
    ತಾಯಿಯು ಹಾಸಿಗೆ ಮೇಲೆ ಮಲಗಿಕೊಂಡಿದ್ದಳು. ಆಕೆಯ ಅಮ್ಮ ಮತ್ತು ಚಿಕ್ಕಮ್ಮ ಆಸ್ಪತ್ರೆಯ ಜನರಲ್ ವಾರ್ಡ್‍ನಲ್ಲಿ ಮಲಗಿದ್ದರು. ಮಗುವನ್ನು ಆಕೆಯ ಅಮ್ಮ ತನ್ನ ಜೊತೆ ನೆಲದ ಮೇಲೆ ಮಲಗಿಸಿಕೊಂಡಿದ್ದಳು. ಈ ವೇಳೆ ಆಸ್ಪತ್ರೆಯ ಒಳಗೆ ಬಂದ ನಾಯಿಯು ಮಗುವನ್ನು ಬಾಯಿಂದ ಎತ್ತಿಕೊಂಡು ಹೊರಗೆ ಹೋಗಿ ಕಚ್ಚಿ ಸಾಯಿಸಿದೆ.

    ಬೆಳಗಿನ ಜಾವ 2:15ರ ಸುಮಾರಿಗೆ ಮಗುವಿನ ಕುಟುಂಬಸ್ಥರು ಎಚ್ಚರವಾದಾಗ, ಮಗು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ನಂತರ ಆಸ್ಪತ್ರೆ ಸುತ್ತ ಹುಡುಕಿ ಸಿಸಿಟಿವಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಇದನ್ನೂ ಓದಿ:  ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ 

    ಪ್ರಸ್ತುತ ಮಗುವಿನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಪಾಣಿಪತ್‍ನ ಹೃದಯ ಮತ್ತು ಮದರ್ ಕೇರ್ ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಯಾವುದೇ ಆರೋಪಗಳಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಪ್ರತಿಕ್ರಿಯಿಸಿಲ್ಲ.

    Live Tv

  • ಅರ್ಜುನ್ ಕಪೂರ್ ಶರ್ಟ್ ಲೆಸ್ ಫೋಟೋಗೆ ಮಲೈಕಾ ಫಿದಾ

    ಅರ್ಜುನ್ ಕಪೂರ್ ಶರ್ಟ್ ಲೆಸ್ ಫೋಟೋಗೆ ಮಲೈಕಾ ಫಿದಾ

    ಮುಂಬೈ: ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ನಡುವೆ ಸಾಕಷ್ಟು ಗಾಸಿಪ್ ಹರಿದಾಡುತ್ತಿದ್ದು, ಇದೂವರೆಗೂ ಇಬ್ಬರು ಬಹಿರಂಗವಾಗಿ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಈ ನಡುವೆ ಅರ್ಜುನ್ ಕಪೂರ್ ಇನ್‍ಸ್ಟಾಗ್ರಾಮ್ ಫೋಟೋಗೆ ಮಲೈಕಾ ಅರೋರ ಕಮೆಂಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಸದ್ಯ ಅರ್ಜುನ್ ಕಪೂರ್ ಬಹುನಿರೀಕ್ಷಿತ ಸಿನಿಮಾ ‘ಪಾಣಿಪತ್’ನಲ್ಲಿ ಬ್ಯುಸಿಯಾಗಿದ್ದು, ಬಾಡಿ ಬಿಲ್ಡ್‍ಗಾಗಿ ಸಾಕಷ್ಟು ವರ್ಕೌಟ್ ನಡೆಸುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಬೆವರನ್ನು ಕೂಡ ಹರಿಸುತ್ತಿದ್ದಾರೆ. ಇತ್ತೀಚೆಗೆ ಅರ್ಜೂನ್ ಕಪೂರ್ ವರ್ಕೌಟ್ ಮಾಡಿದ ಶರ್ಟ್‍ಲೆಸ್ ಪಿಕ್‍ವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವುದು ಮಲೈಕಾ ಫಿದಾ ಆಗುವಂತೆ ಮಾಡಿದೆ.

    ಚಿತ್ರದಲ್ಲಿ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್ ಕಪೂರ್ ತಮ್ಮ ಚಿತ್ರೀಕರಣದ ಹಿಂದಿನ ದೃಶ್ಯಾವಳಿಗಳನ್ನು ತಮ್ಮ ಅಭಿಮಾನಿಗಳಿಗೆ ತೋರಿಸಲು ‘ವಾರಿಯರ್ ಮೂಡ್ ಆನ್ #ಪಾಣಿಪತ್’ ಎಂಬ ಕಾಪ್ಷನ್‍ನೊಂದಿಗೆ ಶರ್ಟ್‍ಲೆಸ್ ಪಿಕ್ ಪೋಸ್ಟ್ ಮಾಡಿದ್ದಾರೆ.

    ಈ ಪಿಕ್ಚರ್ ಗೆ ಕಮೆಂಟ್ ಮಾಡಿರುವ ಮಲೈಕಾ ಬಾಡಿಬಿಲ್ಡ್ ಮಾಡಿರುವ ಆರ್ಮ್ ಎಮೋಜಿಗಳನ್ನು ಕಳುಹಿಸಿ ಕಮೆಂಟ್ ಮಾಡಿದ್ದಾರೆ. ಪ್ರತಿಬಾರಿಯೂ ಇಬ್ಬರ ಪೋಸ್ಟ್ ಗಳಿಗೆ ಇಬ್ಬರು ಕಮೆಂಟ್ ಮಾಡುವ ಮೂಲಕ ಇನ್ಸ್ಟಾ ಲವ್‍ನಲ್ಲಿ ಸುದ್ದಿಯಾಗಿದ್ದಾರೆ.

    ಕೆಲವು ದಿನಗಳಿಂದ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳ ಮುಂದೆ ಬಂದು ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮಲೈಕಾ ಮತ್ತು ಅರ್ಜುನ್ ಕಪೂರ್ ರೆಸ್ಟೋರೆಂಟ್‍ಗೆ ಪಾರ್ಟಿಗೆಂದು ಬಂದಿದ್ದರು. ಈ ವೇಳೆ ರೆಸ್ಟೋರೆಂಟ್‍ನಿಂದ ಹೊರಬರುವಾಗ ಮಲೈಕಾ ಅವರೊಂದಿಗೆ ಬರುತ್ತಿದ್ದ ಅರ್ಜುನ್ ಮಾಧ್ಯಮದವರನ್ನು ಕಂಡು ತಮ್ಮ ಮುಖ ಮುಚ್ಚಿಕೊಂಡು ಹೋಗಿದ್ದರು.

    ಮಲೈಕಾಗೆ ಈಗಾಗಲೇ ಮದುವೆಯಾಗಿದ್ದು ತಮ್ಮ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇಧನ ನೀಡಿ ತಮ್ಮ 16ವರ್ಷದ ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅರ್ಜುನ್ ಕಪೂರ್ ಮತ್ತು ಮಲೈಕಾರವರ ಇನ್ಸ್ಟಾ ಪೋಸ್ಟ್‍ಗಳಿಗೆ ಸ್ವತಃ ಇಬ್ಬರು ತಪ್ಪದೇ ಕಮೆಂಟ್ ಮಾಡಿ ತಮ್ಮ ಒಲವು ತೋರ್ಪಡಿಸುತ್ತಿದ್ದಾರೆ.