ಹಿರಿಯ ನಟ ಜಗ್ಗೇಶ್ (Jaggesh) ಕಾಲು ಮುರಿದುಕೊಂಡಿರುವ ವಿಷಯವನ್ನು ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು. ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿದ್ದ ಫೋಟೋವನ್ನು ಶೇರ್ ಮಾಡಿದ್ದ ಅವರು, ‘ಸಣ್ಣ ಅಚಾತುರ್ಯ ನಡಿಗೆಯಿಂದಾಗಿ ಕಾಲು ಮುರಿದುಕೊಂಡಿದ್ದೇನೆ (Fractured leg). ಪಾದದ ಮೂಳೆ ಮುರಿದಿದೆ. ಆರು ವಾರಗಳ ಕಾಲ ‘ದಿಘ್ಬಂಧನ’ ನಡಿಗೆಗೆ ಎಂದು ಬರೆದುಕೊಂಡಿದ್ದರು. ‘ದಿಘ್ಬಂಧನ’ ಪದ ತಪ್ಪಾಗಿರುವ ಕುರಿತು ನಿರ್ದೇಶಕ, ಸಿನಿಮಾ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಸೋಷಿಯಲ್ ಮೀಡಿಯಾದ ಮೂಲಕವೇ ಜಗ್ಗೇಶ್ ಅವರಿಗೆ ಕನ್ನಡ (Kannada) ಪಾಠ ಮಾಡಿದ್ದಾರೆ.
ಜಗ್ಗೇಶ್ ಹಾಕಿರುವ ಪೋಸ್ಟ್ ಗೆ ಉತ್ತರವಾಗಿ ಬರೆದಿರುವ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar), ‘ದಿಘ್ಬಂದನ ಅಲ್ಲ, ದಿಗ್ಬಂಧನ. ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ. ಮೂಳೆ ಮುರಿತ ಬೇಗ ಗುಣವಾಗಲಿ. ಸಕ್ಕರೆ ರೋಗವಿದ್ದಲ್ಲಿ ಹೆಚ್ಚು ಜೋಪಾನ ವಹಿಸಿ. ಶುಭವಾಗಲಿ. ಪ್ರೀತಿಯಿಂದ ನಾಗತಿಹಳ್ಳಿ ಚಂದ್ರಶೇಖರ್ ಎಂದು ಬರೆದಿದ್ದಾರೆ. ಇದನ್ನೂ ಓದಿ:ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಿ, ನೆಕ್ಲೇಸ್ ಧರಿಸಿ ಹಾಡಿದ ಸಂಜಿತ್ ಹೆಗ್ಡೆ
ಸದ್ಯ ಜಗ್ಗೇಶ್ ಯಾವುದೇ ಸಿನಿಮಾ ಶೂಟಿಂಗ್ ನಲ್ಲಿ ಇರದೇ ಇರುವ ಕಾರಣದಿಂದಾಗಿ ಇವರ ಕಾಲು ಮುರಿತ ಯಾರಿಗೂ ತೊಂದರೆ ಮಾಡದು. ಆದರೂ, ವೈದ್ಯರು ಸಲಹೆಯಂತೆ ವಿಶ್ರಾಂತಿ ಪಡೆದುಕೊಳ್ಳಿ. ಬೇಗ ಕಾಲು ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.
ಇತ್ತೀಚೆಗಷ್ಟೇ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ (Raghavendra Stores) ಸಿನಿಮಾ ರಿಲೀಸ್ ಆಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲವಾದ್ದರೂ, ಒಂದೊಳ್ಳೆ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಜಗ್ಗೇಶ್ ರಂಗನಾಯಕ ಚಿತ್ರದಲ್ಲಿ ನಟಿಸಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು.
ಬೆಂಗಳೂರು: ರೋಹಿತ್ ಚಕ್ರತೀರ್ಥ (Rohit Chakratirtha) ಸಮಿತಿ ಮಾಡಿಕೊಟ್ಟಿದ್ದ ಪಠ್ಯ ಪರಿಷ್ಕರಣೆಯನ್ನು ಖಂಡಿಸಿ ನಾಡಿನ ಹಲವು ಪ್ರಗತಿಪರ ಚಿಂತಕರು ಪಠ್ಯವಾಪ್ಸಿ ಚಳುವಳಿ ನಡೆಸಿದ್ದರು. ಸರ್ಕಾರಕ್ಕೆ ಪತ್ರ ಬರೆದು ತಮ್ಮ ಪಠ್ಯ/ಪದ್ಯವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಇದೀಗ ತಡವಾಗಿ ಸ್ಪಂದಿಸಿದೆ.
ಶೈಕ್ಷಣಿಕ ವರ್ಷದಲ್ಲಿ (Academic Year) ಅರ್ಧ ಭಾಗ ಮುಗಿದ ಬಳಿಕ ಇದೀಗ 7 ಸಾಹಿತಿಗಳ ಪಠ್ಯಗಳನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ. 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠ, ಈರಪ್ಪ ಕಂಬಳಿ ಅವರ ಹೀಗೊಂದು ಟಾಪ್ ಪಯಣ, ಸತೀಶ್ ಕುಲಕರ್ಣಿಯ ಕಟ್ಟುತ್ತೇವೆ ನಾವು ಪದ್ಯ, ಸುಕನ್ಯ ಮಾರುತಿ ಅವರ ಏಣಿ ಪದ್ಯವನ್ನು ಕೈಬಿಡಲಾಗಿದೆ. ಇದನ್ನೂ ಓದಿ: CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
9ನೇ ತರಗತಿಯಲ್ಲಿದ್ದ ರೂಪಾ ಹಾಸನ ಅವರ ಅಮ್ಮನಾಗುವುದೆಂದರೇ ಪದ್ಯ, 6ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ ಡಾ. ರಾಜಕುಮಾರ್ ಗದ್ಯವನ್ನು ಕೈಬಿಡಲಾಗಿದೆ. 7 ಸಾಹಿತಿಗಳ ಪಠ್ಯಗಳನ್ನು ಬೋಧನೆ ಮಾಡದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಗ್ರಾಹಕರಿಗೆ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ
Live Tv
[brid partner=56869869 player=32851 video=960834 autoplay=true]
ರಾಂಚಿ: ಕೋತಿಯೊಂದು(Monkey) ವಿದ್ಯಾರ್ಥಿಗಳಿದ್ದ ತರಗತಿಗೆ ನುಗ್ಗಿ ಪಾಠ ಕೇಳುತ್ತಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಾರ್ಖಂಡ್‍ನ(Jharkhand) ಸರ್ಕಾರಿ ಶಾಲೆಯಲ್ಲಿ(Government School) ಈ ಘಟನೆ ನಡೆದಿದೆ. ಈ ವೀಡಿಯೋವನ್ನು ಬಳಕೆದಾರ ದೀಪಕ್ ಮಹತೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ಕೋತಿಯೊಂದು ಇತರ ವಿದ್ಯಾರ್ಥಿಗಳೊಂದಿಗೆ(Student) ಸರ್ಕಾರಿ ಶಾಲೆಗೆ ಹೋಗುತ್ತಾನೆ ಎಂದು ಬರೆದಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಹಜಾರಿಬಾಗ್‍ನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ತರಗತಿ ನಡೆಯುತ್ತಿದ್ದಾಗ ಕೋತಿಯೊಂದು ಕಾಣಿಸಿಕೊಂಡಿದೆ. ಅಲ್ಲೇ ಸ್ವಲ್ಪ ಸಮಯ ಹಿಂದಿನ ಸಾಲಿನಲ್ಲಿ ಕುಳಿತು ಪಾಠವನ್ನು ಕೇಳಿಸಿಕೊಂಡಿದೆ. ನಂತರ ಮುಂದಿನ ಸಾಲಿಗೆ ಬಂದು ಕೆಲ ಕಾಲ ಕುಳಿತುಕೊಂಡಿದೆ. ಆದರೆ ಅಲ್ಲಿರುವ ಮಕ್ಕಳಿಗೆ ಅದು ಯಾವ ರೀತಿಯ ತೊಂದರೆಯನ್ನು ನೀಡಿಲ್ಲ. ಬದಲಿಗೆ ಶಿಕ್ಷಕರು, ಚಿಕ್ಕ ಮಕ್ಕಳಿಗೆ ಕಲಿಸುವುದನ್ನು ಮುಂದುವರೆಸಿದರು. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್
ತರಗತಿಯೊಂದರ ಮುಂದಿನ ಸಾಲಿನಲ್ಲಿ ಮಂಗ ಕುಳಿತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಶೇರ್ ಹಾಗೂ ಕಾಮೆಂಟ್‍ಗಳು ಬಂದಿದೆ. ನೆಟ್ಟಿಗನೊಬ್ಬ, ಶಾಲೆಯಲ್ಲಿ ಹೊಸ ವಿದ್ಯಾರ್ಥಿ ಎಂದು ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ
Live Tv
[brid partner=56869869 player=32851 video=960834 autoplay=true]
1 ರಿಂದ 7ನೇ ತರಗತಿವರೆಗೆ 64 ಮಕ್ಕಳು ಓದುತ್ತಿದ್ದಾರೆ. ಶಾಲಾ ಆವರಣದಲ್ಲಿ ನೀರು ತುಂಬಿಕೊಂಡು ತಿಂಗಳು ಕಳೆದರೂ ಅಧಿಕಾರಿಗಳು ಮಾತ್ರ ನೀರು ಹೊರಹಾಕಿಲ್ಲ. ಹೀಗಾಗಿ ಒಂದು ತಿಂಗಳಿಂದಲೂ ತಟ್ಟೆಕೆರೆ ಬೀರೇಶ್ವರ ದೇವಾಲಯದ ಬಳಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ದೃಷ್ಟಿಹೀನ ಶಿಕ್ಷಕ ಪಾಠ ಮಾಡುತ್ತಿದ್ದರೆ, ಅವರೆದುರು ನೃತ್ಯ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಗೇಟ್‍ಪಾಸ್ ಕೊಟ್ಟಿರುವ ಘಟನೆ ತಮಿಳುನಾಡಿನ ರಾಸಿಪುರಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕಣ್ಣು ಕಾಣದ ಶಿಕ್ಷಕನ ಎದುರು ಕುಣಿದು, ತಮಾಷೆ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟೆ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋ ನೋಡಿದ ಬಳಿಕವೇ ಇದು ನಮ್ಮ ಅರಿವಿಗೆ ಬಂತು. ಕ್ರಮ ಕೈಗೊಂಡಿದ್ದೇವೆ ರಾಸಿಪುರಂ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ
ಶಿಕ್ಷಕನ ಪನ್ನೀರ್ ಇತಿಹಾಸ ವಿಷಯ ಕಲಿಸುವ ಶಿಕ್ಷಕರಾಗಿದ್ದಾರೆ. ಆದರೆ ಇವರಿಗೆ ಕಣ್ಣು ಕಾಣಿಸುವುದಿಲ್ಲ. ರಾಸಿಪುರಂನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವ ಇವರು ಎಂದಿನಂತೆ ಪಾಠ ಕಲಿಸುತ್ತಿದ್ದರೆ, ಮೂವರು ವಿದ್ಯಾರ್ಥಿಗಳು ಅಲ್ಲಿಯೇ ನೃತ್ಯ ಮಾಡಿದ್ದಾರೆ. ಇನ್ಯಾರೋ ಅದನ್ನು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಿಕ್ಕಾಪಟೆ ವೈರಲ್ ಆಗಿದೆ. ದೃಷ್ಟಿಹೀನರಾಗಿರುವ ಶಿಕ್ಷಕ ತನ್ನ ಎದುರು ವಿದ್ಯಾರ್ಥಿಗಳು ಕುಣಿಯುತ್ತಿದ್ದಾರೆ ಎಂಬುದನ್ನು ಅರಿಯದೆ ಪಾಠ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ನೆರೆಮನೆಯ ಹೆಣ್ಣು ನಾಯಿಯನ್ನು ರೇಪ್ ಮಾಡಿದ 67ರ ವೃದ್ಧ
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಶಾಲೆ ಕ್ರಮ ಕೈಗೊಂಡಿದೆ. ನೃತ್ಯ ಮಾಡಿದ ಮೂವರೂ ವಿದ್ಯಾರ್ಥಿಗಳಿಗೆ ಶಾಲೆಯಿಂದ ಗೇಟ್‍ಪಾಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋ ನೋಡಿದ ಬಳಿಕವೇ ಇದು ನಮ್ಮ ಅರಿವಿಗೆ ಬಂತು ಎಂದು ಹೇಳಿರುವ ರಾಸಿಪುರಂ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಬಾಲಸುಬ್ರಹ್ಮಣ್ಯಂ, ನಿಜಕ್ಕೂ ವೀಡಿಯೋ ನೋಡಿ ಶಾಕ್ ಆಗಿದೆ. ವಿದ್ಯಾರ್ಥಿಗಳಿಂದ ಇಂಥ ವರ್ತನೆ ನಿರೀಕ್ಷೆ ಮಾಡಿರಲಿಲ್ಲ. ಡ್ಯಾನ್ಸ್ ಮಾಡಿದ ಮೂವರಿಗೂ ವರ್ಗಾವಣೆ ಪತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಇದು ಅನಿವಾಸಿ ಭಾರತೀಯರ ಕನ್ನಡ ನಾಡಿನ ಪ್ರೀತಿ. ತಮ್ಮ ಮಕ್ಕಳು ಕನ್ನಡ ಕಲಿಯಬೇಕು. ಹುಟ್ಟೂರಿನಲ್ಲಿರುವ ಅಜ್ಜಿ-ತಾತನ ಜೊತೆ ಚೆನ್ನಾಗಿ ಕನ್ನಡದಲ್ಲಿಯೇ ಮಾತನಾಡಬೇಕು. ನಾವಾಡಿದ ಆಟ, ಹಬ್ಬಗಳ ಬಗ್ಗೆ ಮಕ್ಕಳೂ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿರುವ ಅನಿವಾಸಿ ಭಾರತೀಯರು ತಮ್ಮ ಮಕ್ಕಳಿಗೆ ನಿರಂತರ ಕನ್ನಡ ಪಾಠ ಜೊತೆಗೆ ಸ್ವಾತಂತ್ರ್ಯೋತ್ಸವದಂದು ವಿಶೇಷ ಪಾಠ ಹೇಳಿಕೊಟ್ಟಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನಿವಾಸಿ ಕನ್ನಡಿಗರು, ಐರ್ಲೆಂಡ್‍ನಲ್ಲಿದ್ದರು ಕೂಡ ನಮ್ಮ ಮಕ್ಕಳು ನಮ್ಮ ಜೊತೆ ಕನ್ನಡ ಸಿನಿಮಾ, ಹಾಡು ಕೇಳಿಸಿಕೊಳ್ಳಬೇಕು ತಮ್ಮ ಮಕ್ಕಳು ಕನ್ನಡದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕೆಂಬ ಹೆಬ್ಬಯಕೆಯಿಂದ “ಕನ್ನಡ ಕಲಿ” ಅಥವಾ “ಕನ್ನಡ ಕ್ರಿಯೇಟಿವ್ ಲರ್ನಿಂಗ್” ತರಗತಿ ಆರಂಭವಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್
ಕಳೆದ ನಾಲ್ಕು ದಿನದ ಹಿಂದಷ್ಟೇ ನಡೆದ ಸ್ವಾತಂತ್ರ್ಯ ದಿನವನ್ನು ಐರ್ಲೆಂಡಿನಲ್ಲೂ ಕನ್ನಡದ ಮಕ್ಕಳು ಆಚರಿಸಿದರು. ಬಂಟ್ವಾಳದ ಚಿತ್ರ ಕಲಾವಿದರಾದ ಶಿವಾನಂದ ಡಿ. ಉಳಿಕಕ್ಕೆಪದವು ತಮ್ಮ ಚಿತ್ರಕಲೆಯ ಮೂಲಕವೇ ಸ್ವಾತಂತ್ರ್ಯ ದಿನದ ಕುರಿತು ಐರ್ಲೆಂಡ್‍ನ ಕನ್ನಡಿಗರ ಮಕ್ಕಳಿಗೆ ವರ್ಚುವಲ್ ಮೂಲಕ ಪಾಠ ಮಾಡಿದರು. 30 ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದಲೇ ಸ್ವಾತಂತ್ರ್ಯದ ಹೋರಾಟ, ಬಲಿದಾನ, ಸಧ್ಯದ ಪರಿಸ್ಥಿತಿಯಲ್ಲೂ ಯೋಧರ ಹೋರಾಟ, ತಾಯಿ ನಾಡಿನ ಬಗ್ಗೆ ಇರಬೇಕಾದ ಗೌರವದ ಬಗ್ಗೆ ಹೆಮ್ಮೆಯಿಂದ ತಿಳಿದುಕೊಂಡರು.
ಕಳೆದ ಮೂರು ವರ್ಷಗಳಿಂದ ಐರ್ಲೆಂಡ್ ಮಕ್ಕಳ ಕನ್ನಡ ಕಲಿಕೆ ಆರಂಭವಾಗಿದೆ. ಮೂರು ವರ್ಷಗಳಿಂದ ಇಂದಿಗೂ ನಿರಂತರವಾಗಿ ಯಶಸ್ಸು ಕಾಣುವಲ್ಲಿ ಶ್ರಮಿಸಿದವರು. ಐರ್ಲೆಂಡಿನಲ್ಲಿ ನೆಲೆಸಿರುವ ದಾವಣಗೆರೆಯ ಕಾಂತೇಶ್, ಬೆಂಗಳೂರಿನ ಪ್ರಕಾಶ್ ಹಾಗೂ ಗೆಳೆಯರು. ನಮ್ಮ ದೇಶ ಹಾಗೂ ಐರ್ಲೆಂಡ್ ದೇಶದಲ್ಲಿ ನಾಲ್ಕು ಗಂಟೆಗಳ ಸಮಯದ ವ್ಯತ್ಯಾಸವಿರುತ್ತದೆ. ಈ ಸಮಯ ತಿಳಿದುಕೊಂಡು, ಮಕ್ಕಳಿಗೆ ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆ ಬಳಸಿ ಅರ್ಥವಾಗುವ ರೀತಿಯಲ್ಲಿ ಕಥೆ ಹಾಗೂ ಚಿತ್ರದ ಮೂಲಕ ಸ್ವಾತಂತ್ರ್ಯ ದಿನವನ್ನು ಅರ್ಥ ಮಾಡಿಸುವುದು ಬಹಳ ಖುಷಿ ಕೊಟ್ಟ ವಿಷಯ ಎಂದು ಶಿವಾನಂದ್ ತಿಳಿಸಿದರು. ಇದನ್ನೂ ಓದಿ: ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ
ಐರ್ಲೆಂಡಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಕನ್ನಡಿಗ ಕಾಂತೇಶ್ ಮಾತನಾಡಿ, ಐರ್ಲೆಂಡಿನಲ್ಲಿ ಹುಟ್ಟಿದ ಕನ್ನಡಿಗರ ಮಕ್ಕಳಿಗೆ ಕನ್ನಡ ಬರುತ್ತಿರಲಿಲ್ಲ. ಅಜ್ಜಿ, ತಾತ ಹತ್ತಿರ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ಅಂತರ ಸೃಷ್ಟಿಯಾಗುತ್ತದೆ. ಮನೆಯಲ್ಲಿ ತಂದೆ-ತಾಯಿ ಕನ್ನಡ ಕಲಿಸಿಕೊಟ್ಟರು, ಮಕ್ಕಳು ತಮ್ಮ ವಯಸ್ಸಿನವರ ಜೊತೆ ಹೆಚ್ಚು ಬೆರೆಯುವುದರಿಂದ ಇಂಗ್ಲೀಷ್‍ನ್ನು ಹೆಚ್ಚು ಕಲಿತಿರುತ್ತಾರೆ. ಹೀಗಾಗಿ ಕನ್ನಡ ಕಲಿಸಲು ಡಬ್ಲಿನ್ ಸಿಟಿ ಸೇರಿದಂತೆ ಮೂರು ಕಡೆ ಲೈಬ್ರೆರಿಗಳಲ್ಲಿ ಕನ್ನಡ ತರಗತಿ ಮೂರು ವರ್ಷದ ಹಿಂದೆ ಆರಂಭಿಸಲಾಯಿತು.
ಇದೀಗ ಕೋವಿಡ್ ಹಿನ್ನೆಲೆ ಆನ್‍ಲೈನ್ ಮೂಲಕ ತಿಂಗಳಿಗೆ ನಾಲ್ಕು ತರಗತಿಗಳನ್ನು ಒಂದು ಗಂಟೆಯ ಕಾಲ ನಡೆಸಲಾಗುತ್ತಿದೆ. ಸುಮಾರು 20-30 ಸ್ವಯಂಸೇವಕರು ಮುಂದೆ ಬಂದು ಉಚಿತವಾಗಿ ಕನ್ನಡದ ವಿವಿಧ ತರಗತಿಗಳನ್ನು ಕಲಿಸುತ್ತಿದ್ದಾರೆ. ಯುಎಸ್ ನಲ್ಲಿ ಕನ್ನಡದ ಶಿವಗೌಡರು ಬರೆದಿರುವ ಪುಸ್ತಕದ ಪ್ರಕಾರ ಕಲಿಸಲಾಗುತ್ತಿದೆ. 4 ರಿಂದ 14 ವಯಸ್ಸಿನ ಸುಮಾರು 40 ಮಕ್ಕಳು ಕನ್ನಡ ಕಲಿಕೆಯಲ್ಲಿದ್ದಾರೆ. ಅವರಿಗಿರುವ ಕನ್ನಡ ಜ್ಞಾನಕ್ಕೆ ತಕ್ಕಂತೆ ಬೇರೆ ಬೇರೆ ತಂಡಗಳನ್ನು ಮಾಡಿ ಕಲಿಸಲಾಗುತ್ತಿದೆ ಎಂದರು.
ಐರ್ಲೆಂಡ್ ನಿವಾಸಿಯಾಗಿರುವ ಬೆಂಗಳೂರಿನ ಪ್ರಕಾಶ್ ಮಾತನಾಡಿ, ಕನ್ನಡಿಗರ ಮಕ್ಕಳ ಕನ್ನಡ ಕಲಿಕೆಗೆ ಹೆತ್ತವರಿಂದಲೂ ಉತ್ತಮ ಸ್ಪಂದನೆ ಇದೆ. ಮಕ್ಕಳಿಗೂ ಒಂದು ಗಂಟೆ ಕ್ಲಾಸ್ ಆಗಿರುವುದರಿಂದ, ಪಠ್ಯಗಳನ್ನು ಹೊರತುಪಡಿಸಿ ಹೊಸ ವಿಷಯ ಕಲಿಯುವುದನ್ನು ಉತ್ಸಾಹದಿಂದ ಕಲಿಯುತ್ತಿದ್ದಾರೆ. ಮಕ್ಕಳಿಗೂ ಕನ್ನಡದವರೇ ಆದ ಹೊಸ ಗೆಳೆಯರ ಬಳಗ ಸಿಕ್ಕಿದೆ. ತರಗತಿಗಳು ಕೂಡ ಚಟುವಟಿಕೆಯಿಂದ ಕೂಡಿರುತ್ತವೆ. ಹೀಗಾಗಿ ಕಳೆದ ಮೂರು ವರ್ಷದಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಅನಿವಾಸಿ ಭಾರತೀಯರ, ಕನ್ನಡ ನೆಲದ ಪ್ರೀತಿ, ಭಾಷೆಯ ನಂಟು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್
– ಹೃದಯಕ್ಕೆ ಹತ್ತಿರವಾದ ಕೆಲಸವೆಂದ ಎಂಎಲ್‍ಎ
– ಮಕ್ಕಳ ಕಷ್ಟ ನೋಡಲಾಗದೆ ಪಾಠ
ದಿಸ್ಪುರ್: ಕೊರೊನಾ ಸಂದರ್ಭದಲ್ಲಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದ್ದ ಅಸ್ಸಾಂನ ವಿಶ್ವನಾಥ್ ಜಿಲ್ಲೆಯ ವಿಶ್ವನಾಥ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಮೋದ್ ಬೋರ್ತಕೂರ್, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮುಂದಾಗಿದ್ದಾರೆ.
ತಮ್ಮ ಇತರ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದು, ಇದು ಅವರ ಹೃದಯಕ್ಕೆ ಹತ್ತಿರವಾದ ಕೆಲಸ ಎಂದು ಹೇಳಿಕೊಂಡಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬುತ್ತಿದ್ದಾರೆ.
ಕೊರೊನಾದಿಂದಾಗಿ ಕಲಿಕೆಗೆ ತೀವ್ರ ಅಡ್ಡಿಯುಂಟಾಗಿದ್ದರಿಂದ ಅವರಿಗೆ ಸಹಾಯ ಮಾಡುವುದು ಶಾಸಕರ ಉದ್ದೇಶವಾಗಿದೆ. ಇತ್ತೀಚೆಗೆ ಬೋರ್ತಕೂರ್ ಅವರು ವಿಶ್ವನಾಥ್ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಮಾಜ ಅಧ್ಯಯನವನ್ನು ಬೋಧಿಸಿದ್ದಾರೆ. ಈ ಮೊದಲು ಬೋರ್ತಕೂರ್ ಅವರು ವಿಶ್ವನಾಥ್ ಚರಿಯಾಲಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಅರ್ಥಶಾಸ್ತ್ರ ಶಿಕ್ಷಕರಾಗಿದ್ದರು. ಬಳಿಕ 2016ರಲ್ಲಿ ವಿಶ್ವನಾಥ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
ಶಾಸಕನಾದ ಬಳಿಕ ಸಹ ನನ್ನ ಶಾಲೆಗೆ ತುಂಬಾ ಸಲ ಭೇಟಿ ನೀಡಿ ಮಕ್ಕಳಿಗೆ ಸಹಾಯವಾಗಲು ಪಾಠ ಮಾಡಿದ್ದೇನೆ. ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ಯಾವಾಗಲೂ ಸಹಾಯ ಮಾಡಲು ಇಚ್ಛಿಸುತ್ತೇನೆ. ಇತ್ತೀಚೆಗೆ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ನಾನು ಅರ್ಥಶಾಸ್ತ್ರ ಬೋಧಿಸಿದ್ದೇನೆ. ಇಂದು 9ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜ ಅಧ್ಯಯನ ತರಗತಿಯನ್ನು ತೆಗೆದುಕೊಂಡಿದ್ದೇನೆ ಎಂದು ಪ್ರಮೋದ್ ಬೋರ್ತಕೂರ್ ತಿಳಿಸಿದ್ದಾರೆ.
ಕೊರೊನಾದಿಂದಾಗಿ ಎಂಟು ತಿಂಗಳ ಬಳಿಕ ಅಸ್ಸಾಂ ಸರ್ಕಾರ ಮರಳಿ ಶಾಲಾ-ಕಾಲೇಜುಗಳನ್ನು ತೆರೆದಿದೆ. ನವೆಂಬರ್ 2ರಿಂದ ಆಫ್‍ಲೈನ್ ತರಗತಿಗಳನ್ನು ಸರ್ಕಾರ ಪ್ರಾರಂಭಿಸಿದೆ.
ಉಡುಪಿ: ಕೊರೊನಾ ಸಾಂಕ್ರಾಮಿಕ ನಂತರ ರಾಜ್ಯಾದ್ಯಂತ ಕಾಲೇಜುಗಳು ಓಪನ್ ಆಗಿದ್ದು ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 9,072 ವಿದ್ಯಾರ್ಥಿಗಳ ಪೈಕಿ ಸುಮಾರು 300 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಬರುತ್ತಿದ್ದಾರೆ. ಈ ಪೈಕಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳದ್ದೇ ಸಿಂಹಪಾಲು.
ಕೊರೊನಾದ ನಡುವೆ ರಾಜ್ಯಾದ್ಯಂತ ಪದವಿ ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತೀರಾ ನೀರಸ ಪ್ರತಿಕ್ರಿಯೆಯನ್ನು ತೋರಿದ್ದಾರೆ. ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ 55 ಕಾಲೇಜುಗಳಿವೆ. ಅಂತಿಮ ಪದವಿ ವಿಭಾಗದಲ್ಲಿ 9,072 ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿದ್ದಾರೆ. ಈ ಪೈಕಿ ಕೇವಲ 307 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದಾರೆ.
ಈ ಮೂಲಕ ರೆಗ್ಯುಲರ್ ಕ್ಲಾಸ್ ಬೇಡ, ನಮಗೆ ಮನಸ್ಸಿಲ್ಲ ಎಂಬೂದನ್ನು ಪ್ರದರ್ಶನ ಮಾಡಿದಂತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ 36 ಖಾಸಗಿ ಕಾಲೇಜಿನಲ್ಲಿ 3,766 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಕೇವಲ 38 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 9 ಸರ್ಕಾರಿ ಕಾಲೇಜುಗಳಿದ್ದು 2,829 ವಿದ್ಯಾರ್ಥಿಗಳ ಪೈಕಿ 232 ಮಂದಿ ಹಾಜರಾಗಿದ್ದಾರೆ.
ಅನುದಾನಿತ ಕಾಲೇಜುಗಳು ಲೆಕ್ಕಾಚಾರ ನೋಡೋದಾದರೆ ಜಿಲ್ಲೆಯ 10 ಅನುದಾನಿತ ಕಾಲೇಜಲ್ಲಿ 2,577 ವಿದ್ಯಾರ್ಥಿಗಳ ಪೈಕಿ ಕೇವಲ 37 ಜನ ಮಾತ್ರ ತರಗತಿಗೆ ಬಂದಿದ್ದಾರೆ. ಕೆಲ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿ ಬಾರದ ಉದಾಹರಣೆ ಇದೆ. ಜಿಲ್ಲೆಯಲ್ಲಿ 6,000 ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ಆಗಿದ್ದು, 7 ಜನರಲ್ಲಿ ಕೊರೊನಾ ಕಾಣಿಸಿದೆ. ಸಾಂಕ್ರಾಮಿಕ ರೋಗದ ಅಬ್ಬರ ಇಳಿಕೆಯಾದರೂ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಮನಸ್ಸು ಮಾಡುತ್ತಿಲ್ಲ. ಆನ್‍ಲೈನ್ ಕ್ಲಾಸಿಗೆ ಒಗ್ಗಿಕೊಂಡಂತೆ ಕಾಣುತ್ತಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಆನ್‍ಲೈನ್ ಮೂಲಕ ಪಾಠಗಳು ನಡೆಯುತ್ತಿದ್ದು, ಈಗ ಆಫ್‍ಲೈನ್ ಕ್ಲಾಸ್‍ಗಳು ಆರಂಭವಾಗಿದೆ. ಬೇರೆ ಅವಕಾಶಗಳು ಇಲ್ಲದ ಕಾರಣ ಅದಕ್ಕೆ ಒಗ್ಗಿ ಕೊಂಡಿದ್ದೆವು. ಈಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ತರಗತಿಗೆ ಹಾಜರಾಗಿದ್ದೇವೆ. ಆ ಸಂದರ್ಭದಲ್ಲಿ ಆಡಿಯೋ ಸಮಸ್ಯೆ ನೆಟ್‍ವರ್ಕ್ ಸಮಸ್ಯೆಗಳು ಇತ್ತು. ಕ್ಲಾಸ್‍ನಲ್ಲಿ ಡೌಟ್‍ಗಳಿದ್ದರೆ ನೇರವಾಗಿ ನಾವು ಪರಿಹರಿಸಿಕೊಳ್ಳಬಹುದು. ಆರೋಗ್ಯ ಸಮಸ್ಯೆಗಳು ಇದ್ದರೆ ಆನ್‍ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳುವುದು ಒಳ್ಳೆಯದು. ನಮ್ಮ ಕ್ಲಾಸ್‍ನಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ಆದರೆ ಈಗ 12 ಜನ ಮಾತ್ರ ತರಗತಿಗೆ ಹಾಜರಾಗಿದ್ದಾರೆ. ಆನ್‍ಲೈನ್ ಕ್ಲಾಸ್‍ಗಿಂತ ಆಫ್ ಲೈನ್ ಕ್ಲಾಸೆ ನಮಗೆ ಬೆಟರ್ ಅಂತ ಅನಿಸುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆ ಸರ್ಕಾರಿ ಮತ್ತು ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರುವುದು ಅನಿವಾರ್ಯ ಆಗಿದೆ. ನಮ್ಮ ಕಾಲೇಜಿನಲ್ಲಿ ಮಾನವ ಸಂಪನ್ಮೂಲ ಜಾಸ್ತಿ ಇರುವುದರಿಂದ ಸೌಕರ್ಯಗಳು ಜಾಸ್ತಿ ಇರುವುದರಿಂದ ನೇರವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಸೋಮವಾರದ ನಂತರ ಮಕ್ಕಳ ಹಾಜರಾತಿ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಜಿ ಶಂಕರ್ ಸರ್ಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಚಂದ್ರ ಅಡಿಗ ಹೇಳಿದ್ದಾರೆ.
– ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಪಾಠ
– ರಾತ್ರಿ- ಹಗಲೆನ್ನದೆ ದಣಿವರಿಯದೆ ಕಾಯಕ
ಭುವನೇಶ್ವರ್: ಕಳೆದ 75 ವರ್ಷಗಳಿಂದ ವೃದ್ಧರೊಬ್ಬರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.
ವೃದ್ಧನನ್ನು ನಂದ ಪ್ರಾಸ್ತಿ ಎಂದು ಗುರುತಿಸಲಾಗಿದೆ. ಇವರು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ದೊಡ್ಡವರಿಗೆ ಮಾತ್ರ ರಾತ್ರಿ ಸಮಯದಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.
ತಮ್ಮ ಶಿಕ್ಷಣ ಪೂರ್ಣಗೊಳಿಸಲು 4 ನೇ ತರಗತಿ ಬಳಿಕ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಬೋಧನೆ ಮೇಲಿನ ಉತ್ಸಾಹ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ. ಹೀಗಾಗಿ ಅವರು ಬರೋಬ್ಬರಿ 75 ವರ್ಷಗಳಿಂದ ನಿರಂತರವಾಗಿ ದಣಿವರಿಯದೇ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಜೊತೆಗೆ ಜಜ್ಪುರ್ ಜಿಲ್ಲೆಯ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು.
ವೃದ್ಧ ಬರ್ತಂಡ ಗ್ರಾಮದವರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಸರ್ಕಾರ ನೆರವು ನೀಡಲು ಮುಂದಾಗಿತ್ತು. ಆದರೆ ನಂದಾ ಅವರು ಮಾತ್ರ ಸರ್ಕಾರದ ನೆರವನ್ನು ಪಡೆಯಲು ನಿರಾಕರಿಸಿದ್ದಾರೆ. ಅಲ್ಲದೆ ಹಳೆಯ ಮರದ ಕೆಳಗೆಯೇ ಕುಳಿತು ತನ್ನ ಕೆಲಸವನ್ನು ಮುಂದುವರಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ನಂದಾ, ನಾನು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಹಳ್ಳಿಯನ್ನು ಹಲವಾರು ಮಂದಿ ಅನಕ್ಷರಸ್ಥರು ಇರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಹಳ್ಳಿಯ ಜನ ಹೆಬ್ಬೆಟ್ಟು ಒತ್ತುತ್ತಾರೆಯೇ ಹೊರತು ಯಾರಿಗೂ ತಮ್ಮ ಹೆಸರಿನ ಸಹಿ ಹಾಕಲು ಬರುತ್ತಿರಲಿಲ್ಲ. ಹೀಗಾಗಿ ಒಂದು ದಿನ ಅವರನ್ನೆಲ್ಲ ಕರೆದು ಸಹಿ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟೆ. ಈ ವೇಳೆ ಅನೇಕರು ಆಸಕ್ತಿಯಿಂದ ಬಂದು ಸಹಿ ಹಾಕುವುದನ್ನು ಕಲಿತುಕೊಂಡರು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದರು. ಸದ್ಯ ನನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ನಾನು ಪಾಠ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದರು.
ಇನ್ನು ಈ ಸಂಬಂಧ ಬರ್ತಂಡಾ ಪಂಚಾಯತ್ ಅಧ್ಯಕ್ಷ ಮಾತನಾಡಿ, ಕಳೆದ 75 ವರ್ಷಗಳಿಂದ ವೃದ್ಧ ನಿರಂತರವಾಗಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ಹೇಳಿಕೊಡುತ್ತಿರುವುದು ಇವರಿಗೆ ತುಂಬಾನೇ ಇಷ್ಟವಾಗಿದ್ದು, ಇದಕ್ಕಾಗಿ ಅವರು ಸರ್ಕಾರದಿಂದ ಯಾವುದೇ ಸಹಾಯ ಪಡೆದುಕೊಳ್ಳುತ್ತಿಲ್ಲ. ಆದರೆ ಅವರು ಮಕ್ಕಳಿಗೆ ಆರಾಮಾಗಿ ಕಲಿಸುವ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಇವರು ಮಳೆ, ಚಳಿ ಹಾಗೂ ಬಿಸಿಲು ಎನ್ನದೇ ಮಕ್ಕಳಿಗೆ ಅತ್ಯಂತ ಉತ್ಸಾಹದಿಂದ ಪಾಠ ಹೇಳಿಕೊಡುತ್ತಿದ್ದಾರೆ. ಅವರ ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡಲು ಅವರಿಗೆ ಬೇಕಾದ ಸೌಲಭ್ಯವನ್ನು ಕಲ್ಪಿಸಿಕೊಡಲು ಗ್ರಾಮ ಪಂಚಾಯತ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು: ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಇಲ್ಲದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಓದಿ: 3 ಕಿ.ಮೀ ಕಾಲುವೆಯನ್ನು 30 ವರ್ಷ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತ
Bengaluru: Shanthappa Jademmanavr, Sub-Inspector, Annapurneshwari Nagar, teaches children of migrant workers who don't have access to smartphones, laptops to attend online classes, before reporting for police duty#Karnatakapic.twitter.com/o2pwojCrEK
ಪ್ರತಿದಿನ ಶಾಂತಪ್ಪ ಅವರು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಾರೆ. ಆದರೆ ಇದಕ್ಕೂ ಮುಂಚೆ ಅವರು, ಪಶ್ಚಿಮ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿರುವ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಾರೆ. ಸುಮಾರು 30 ಮಕ್ಕಳಿಗೆ ಒಂದು ಗಂಟೆ ಪಾಠ ಮಾಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಯ ಪಠ್ಯಕ್ಕೆ ಅನುಗುಣವಾಗಿ ಪಾಠ ಮಾಡಲು ಸಾಧ್ಯವಾಗದೇ ಇರುವ ಕಾರಣ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಗಣಿತದ ಬಗ್ಗೆ ಪಾಠವನ್ನು ಮಾಡುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಶಾಂತಪ್ಪ, ನಾನು 20 ದಿನಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿರುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಪಡೆದುಕೊಳ್ಳುವ ಸೌಲಭ್ಯವಿಲ್ಲ. ಈ ಕಾರಣದಿಂದ ನಾನು ಡ್ಯೂಟಿಗೆ ಹೋಗುವ ಒಂದು ಗಂಟೆ ಮುಂಚಿತವಾಗಿ ಇಲ್ಲಿಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ ಎಂದಿದ್ದಾರೆ. ಶಾಂತಪ್ಪ ಪಾಠ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿಗೆ ಹೆಚ್ಚು ಕಾರ್ಮಿಕರು ಬರುವುದು ಉತ್ತರ ಕರ್ನಾಟಕ ಬಳ್ಳಾರಿ, ಗದಗ, ಕೊಪ್ಪಳ ಮತ್ತು ರಾಯಚೂರು ಭಾಗಗಳಿಂದ. ನಾನು ಅದೇ ಭಾಗದವನಾದ ಕಾರಣ ಅಲ್ಲಿನ ಕಾರ್ಮಿಕರ ಮಕ್ಕಳ ಕಷ್ಟಗಳೇನು ಎಂಬುದು ನನಗೆ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ನಾನು ಈ ಮಕ್ಕಳಿಗೆ ಪಾಠ ಮಾಡಲೂ ನಿರ್ಧಾರ ಮಾಡಿದ್ದೇನೆ ಎಂದು ಶಾಂತಪ್ಪ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಇವರನ್ನು ಭೇಟಿ ಮಾಡಿದ್ದಾರೆ.