Tag: ಪಾಟ್ನಾ

  • ಅಪ್ರಾಪ್ತ ಬಾಲಕಿ ಮೇಲೆ ರೈಲ್ವೇ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಯತ್ನ

    -ಕುಟುಂಬಸ್ಥರು, ಪ್ರಯಾಣಿಕರ ಥಳಿತಕ್ಕೆ ಸಾವು

    ಪಾಟ್ನಾ: 11 ವರ್ಷದ ಬಾಲಕಿ ಮೇಲೆ 34 ವರ್ಷದ ರೈಲ್ವೇ ಸಿಬ್ಬಂದಿ ದೌರ್ಜನ್ಯ ಎಸಗಿರುವ ಘಟನೆ ಬಿಹಾರದ ಹಮ್‌ಸಫರ್ ಎಕ್ಸ್‌ಪ್ರೆಸ್‌ನಲ್ಲಿ (Hamsafar Express) ಮಂಗಳವಾರ ರಾತ್ರಿ ನಡೆದಿದೆ.

    ಆರೋಪಿ ರೈಲ್ವೇ ಸಿಬ್ಬಂದಿಯನ್ನು ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಬಳಿಕ ಪ್ರಯಾಣಿಕರು ಹಾಗೂ ಕುಟುಂಬದವರ ಹೊಡೆತಕ್ಕೆ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

    ಲಕ್ನೋ ಮತ್ತು ಕಾನ್ಪುರಗೆ ಪ್ರಯಾಣಿಸುತ್ತಿದ್ದ ಹಮ್‌ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ 11 ವರ್ಷದ ಬಾಲಕಿ ಮೇಲೆ 34 ವರ್ಷದ ರೈಲ್ವೇ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾನೆ.

    ಸಂತ್ರಸ್ತೆಯ ತಾಯಿ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಬಾಲಕಿ ತನ್ನ ತಾಯಿಗೆ ನಡೆದ ವಿಷಯವನ್ನು ಹೇಳಿದ್ದಾಳೆ. ಇದರಿಂದ ಆಕೆಯ ಕುಟುಂಬದವರು ಹಾಗೂ ಪ್ರಯಾಣಿಕರು ಸೇರಿ ಆರೋಪಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

    ಕಾನ್ಪುರದ (Kanpur) ಜಿಆರ್‌ಪಿ (GRP) ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು. ಆದರೆ ಹೊಡೆತಕ್ಕೊಳಗಾದ್ದರಿಂದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವನು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.ಇದನ್ನೂ ಓದಿ: ಭಾರತಕ್ಕೆ ಮತ್ತೆ ವಾಪಸ್ ಬರಲಿದೆ ಫೋರ್ಡ್

  • ಯೂಟ್ಯೂಬ್ ವೀಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ- 17ರ ಬಾಲಕ ಸಾವು

    ಯೂಟ್ಯೂಬ್ ವೀಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ- 17ರ ಬಾಲಕ ಸಾವು

    ಪಾಟ್ನಾ: ಯೂಟ್ಯೂಬ್ ನೋಡಿ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

    ಬಿಹಾರದ ಸರನ್ ಎಂಬಲ್ಲಿ ನಕಲಿ ವೈದ್ಯ ಯೂಟ್ಯೂಬ್ ವೀಡಿಯೋವನ್ನು ಅನುಸರಿಸಿ ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಆಪರೇಷನ್ ಮಾಡಿದ್ದಾರೆ.ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಾಲಕನನ್ನು ಪಾಟ್ನಾದ (Patna) ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದು, ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ವೈದ್ಯರು ಹಾಗೂ ಜೊತೆಗಿದ್ದವರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ: ಸಿಎಂ ವಿರುದ್ಧ ಈಶ್ವರಪ್ಪ ಗರಂ

    ಬಾಲಕನು ಪದೇ ಪದೇ ವಾಂತಿ ಮಾಡುತ್ತಿದ್ದ. ಆದ್ದರಿಂದ ಆತನನ್ನು ಸರನ್ (Saran) ನಗರದಲ್ಲಿರುವ ಗಣಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿಸಿದೆವು. ವಾಂತಿ ನಿಂತಿತ್ತು. ಆದರೆ ವೈದ್ಯ ಅಜಿತ್ ಕುಮಾರ್ ಪುರಿ ಈತನಿಗೆ ಆಪರೇಷನ್ ಅಗತ್ಯ ಇದೆ. ಆಪರೇಷನ್ ಮಾಡಬೇಕು ಎಂದರು. ಆದರೆ ಅವರು ಯೂಟ್ಯೂಬ್ ವೀಡಿಯೋವನ್ನು ನೋಡಿ ಆಪರೇಷನ್ ಮಾಡಿದ್ದರಿಂದ ನನ್ನ ಮಗ ಜೀವ ಕಳೆದುಕೊಂಡ ಎಂದು ಚಂದನ್ ಶಾ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ – ಅಭಿಮಾನಿಗಳ ಅಭಿಯಾನ

    ಮೃತ ಬಾಲಕನ ಅಜ್ಜ ಮಾತನಾಡಿ, ಬಾಲಕನ ತಂದೆಯನ್ನು ಬೇರೆ ಕೆಲಸದ ಮೇರೆಗೆ ಹೊರಗಡೆ ಕಳುಹಿಸಿದ್ದರು. ಕುಟುಂಬದವರ ಅನುಮತಿ ಪಡೆಯದೇ ಅವರು ಬಾಲಕನನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡಿದ್ದಾರೆ. ಬಾಲಕ ನೋವಿನಿಂದ ಕಿರುಚಿದ್ದನ್ನು ನೋಡಿ ಏನಾಯಿತು ಎಂದು ವೈದ್ಯರನ್ನು ಪ್ರಶ್ನಿಸಿದರೆ, ನಾವು ವೈದ್ಯರು ಎಂದು ಎದುರುತ್ತರಿಸಿದರು. ಸಂಜೆಯ ಸುಮಾರಿಗೆ ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.

    ಈ ಘಟನೆಯ ಕುರಿತಾಗಿ ಪೊಲೀಸರು ವೈದ್ಯರ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ವೈದ್ಯ ಮತ್ತು ಆತನ ತಂಡದವರನ್ನು ಹುಡುಕುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ತನಗೆ ಸೇರಿದ ಜಾಗದ 848 ಖಾತೆ ಮಾಡಿಸಿಕೊಂಡ ಮುಡಾ ಮಾಜಿ ಅಧ್ಯಕ್ಷ

  • ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನ- ಲಾಲು ಪ್ರಸಾದ್‌ ಯಾದವ್‌ ಭವಿಷ್ಯ

    ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನ- ಲಾಲು ಪ್ರಸಾದ್‌ ಯಾದವ್‌ ಭವಿಷ್ಯ

    ಪಾಟ್ನಾ: ಆಗಸ್ಟ್‌ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಪತನವಾಗಲಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ವರಿಷ್ಠ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ (Lalu Prasad Yadav) ಭವಿಷ್ಯ ನುಡಿದಿದ್ದಾರೆ.

    ಪಕ್ಷದ 28ನೇ ಸಂಸ್ಥಾಪನಾ ದಿನದ ಆಚರಣೆಯ ವೇಳೆ ಪಾಟ್ನಾದ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸವಿದೆ ಎಂದರು. ಜೊತೆಗೆ ಕೇಂದ್ರದ ಮೋದಿ (Narendra Modi) ಸರ್ಕಾರ ಅತ್ಯಂತ ದುರ್ಬಲವಾಗಿದ್ದು, ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನವಾಗಲಿದೆ ಎಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇದೇ ವೇಳೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav), ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು. ನಮ್ಮ ಪಕ್ಷಕ್ಕೆ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಇದ್ದವು. ನಮ್ಮ ಸಿದ್ಧಾಂತದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಮ್ಮ ಹೋರಾಟವನ್ನು ಮುಂದುವರಿಸಿದೆವು. ಕೆಲವೊಮ್ಮೆ ನಾವು ಯಶಸ್ವಿಯಾಗಿದ್ದೇವೆ ಮತ್ತು ಕೆಲವೊಮ್ಮೆ ನಾವು ವಿಫಲರಾಗಿದ್ದೇವೆ. ಆದರೆ ನಮ್ಮ ಕಾರ್ಯಕರ್ತರು ದೃಢವಾಗಿ ಉಳಿದರು ಎಂದು ಹೇಳಿದರು.

    ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲು ನಾವು ಜನತಾದಳದ ಭಾಗವಾಗಿದ್ದೆವು. ಈಗ ನಾವು ಬೇರ್ಪಟ್ಟಿದ್ದೇವೆ. ನಮ್ಮ ಪಕ್ಷ ಅಪ್ಪನ ಪಕ್ಷ. ಆರ್‌ಜೆಡಿ ಮತಗಳಲ್ಲಿ 9%ರಷ್ಟು ಏರಿಕೆ ದಾಖಲಾಗಿದ್ದರೆ, ಎನ್‌ಡಿಎ ಪಾಲು ಕಡಿಮೆಯಾಗಿದೆ ಎಂದರು. ಇದನ್ನೂ ಓದಿ: 15‌ ದಿನಗಳಲ್ಲಿ 10 ಸೇತುವೆ ಕುಸಿತ – ಜಲಸಂಪನ್ಮೂಲ ಇಲಾಖೆಯ 11 ಎಂಜಿನಿಯರ್‌ಗಳು ಅಮಾನತು

  • 3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!

    3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!

    ಪಾಟ್ನಾ: ವೈದ್ಯೆಯೊಬ್ಬರು ತನ್ನ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿದ ಅಮಾನವೀಯ ಘಟನೆಯೊಂದು ಬಿಹಾರದ (Bihar) ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ವೈದ್ಯೆಯನ್ನು (Woman Doctor) ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆಕೆ ಪ್ರಿಯಕರ ತನಗೆ ಅನ್ಯಾಯ ಮಾಡಿದ್ದರಿಂದ ನಾನು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾಳೆ. ಘಟನೆಯ 2 ವೀಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೈರಲ್‌ ವೀಡಿಯೋದಲ್ಲಿ ವೈದ್ಯೆ, ಆತ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಮೂರು ಬಾರಿ ನಾನು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ಹೇಳಿದ್ದಾಳೆ. ಅಲ್ಲದೇ ಮರ್ಮಾಂಗ ಕತ್ತರಿಸಿದ್ದು ಯಾಕೆ ಎಂದು ಕೇಳಿದಾಗ, ಅವನು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಕೋಪದಲ್ಲಿ ಈ ಕೃತ್ಯ ಎಸಗಿದ್ದೇನೆ. ಸಾಯಿಸಬೇಕು ಎಂದು ಮಾಡಿಲ್ಲ. ಅಲ್ಲದೇ ಮುಂದೆ ಬೇರೆ ಯಾವುದೇ ಯುವತಿಗೂ ಇಂತಹ ದ್ರೋಹ ಅವನು ಎಸಗಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳುತ್ತಿರುವುದನ್ನು ಗಮನಿಸಬಹುದು.

    ಇನ್ನೊಂದು ವೀಡಿಯೋದಲ್ಲಿ ವೈದ್ಯೆ ಹಾಗೂ ಸಂತ್ರಸ್ತ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ನೋವಿನಿಂದ ಅಳುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಮಗುವಿಗೆ ಔಷಧಿ ತರಲು ತೆರಳಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು!

    ವೈದ್ಯೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಲ್ಲದೇ ಬಳಿಕ ಶೌಚಾಲಯದಲ್ಲಿ ಫ್ಲಶ್ ಮಾಡಿದ್ದಾಳೆ. ಸಂತ್ರಸ್ತ ಮಧುರಾ ಬ್ಲಾಕ್‌ನ ವಾರ್ಡ್‌ ನಂ.12ರ ಕೌನ್ಸಿಲರ್‌ ಆಗಿದ್ದು, ಸದ್ಯ ಪಾಟ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (PMCH) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

    NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

    ನವದೆಹಲಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಿಯ ತನಿಖಾ ದಳ (CBI) ಬಿಹಾರದಲ್ಲಿ (Bihar) ಇಬ್ಬರು ಆರೋಪಿಗಳನ್ನು ಬಂಧಿಸಿದೆ.

    ಪಾಟ್ನಾದ ಮನೀಶ್ ಕುಮಾರ್ ಮತ್ತು ಅಶುತೋಷ್ ಬಂಧಿತ ಆರೋಪಿಗಳು. ಸಿಬಿಐ ಮೂಲಗಳ ಪ್ರಕಾರ, ಮನೀಶ್ ಕುಮಾರ್ ತನ್ನ ಕಾರಿನಲ್ಲಿ ವಿದ್ಯಾರ್ಥಿಗಳನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾನೆ ಮತ್ತು ಕನಿಷ್ಠ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾನೆ. ಅಶುತೋಷ್ ವಿದ್ಯಾರ್ಥಿಗಳಿಗೆ ವಸತಿ ಒದಗಿಸಿದ್ದಾನೆ.

    ಗುರುವಾರ ಇಬ್ಬರನ್ನು ವಿಚಾರಣೆಗಾಗಿ ಸಿಬಿಐ ಕರೆದಿತ್ತು. ವಿಚಾರಣೆಯ ಬಳಿಕ ಇಬ್ಬರ ಬಂಧನ ನಡೆದಿದೆ. ಇಬ್ಬರನ್ನು ಬಂಧನ ಮಾಡುವ ಮೊದಲು ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ತಾನು ಮತ್ತು ಇತರ ಕೆಲವರು ಪಡೆದುಕೊಂಡಿದ್ದೇವೆ ಎಂದು ಹೇಳಿದ ಅಭ್ಯರ್ಥಿಯನ್ನು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್

    ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಮೇ 5 ರಂದು ನಡೆಸಿದ ಪರೀಕ್ಷೆಯಲ್ಲಿ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮತ್ತು 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು.

     

  • ವೋಟ್‌ ಮಾಡಿದ ಮೋದಿ ಕೈ ಬೆರಳು ನೋಡಿದ ನಿತೀಶ್‌ ವೀಡಿಯೋ ವೈರಲ್‌

    ವೋಟ್‌ ಮಾಡಿದ ಮೋದಿ ಕೈ ಬೆರಳು ನೋಡಿದ ನಿತೀಶ್‌ ವೀಡಿಯೋ ವೈರಲ್‌

    ಪಾಟ್ನಾ: ನೂತನ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರ ನಡುವಿನ ಸಂಭಾಷಣೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ರಾಜ್‌ಗಿರ್‌ನಲ್ಲಿ ನೂತನ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಉಭಯ ನಾಯಕರು ಭಾಗವಹಿಸಿದ ಬಳಿಕ ಈ ಪ್ರಸಂಗ ನಡೆದಿದೆ. ವೀಡಿಯೋದಲ್ಲಿ ಇಬ್ಬರು ನಾಯಕರು ವೇದಿಕೆ ಮೇಲೆ ಕುಳಿತಿದ್ದಾರೆ. ಈ ವೇಳೆ ನಿತೀಶ್‌ ಅವರು ಏಕಾಏಕಿ ಮೋದಿಯವರ ಕೈ ಹಿಡಿದು ಬೆರಳು ನೋಡಿ ಏನೋ ಹೇಳಿ ನಗುತ್ತಾರೆ. ಈ ಘಟನೆಯು ನಾಯಕರ ಹಿಂದೆ ಕುಳಿತಿದ್ದ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿತು.

    ಬಿಹಾರದ ರಾಜ್‌ಗೀರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ (Nalanda University) ಹೊಸ ಕ್ಯಾಂಪಸ್ ನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಉದ್ಘಾಟನೆ ಮಾಡಿದರು. ಈ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ರಾಜೇಂದ್ರ ವಿ ಅರ್ಲೇಕರ್ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್ ಜೈಶಂಕರ್ ಉಪಸ್ಥಿತರಿದ್ದರು.

    ನಳಂದ ಭೇಟಿಗೆ ಮುನ್ನ ಪ್ರಧಾನಿಯವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಇದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಬಹಳ ವಿಶೇಷವಾದ ದಿನವಾಗಿದೆ. ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ರಾಜಗೀರ್‌ನಲ್ಲಿ ಉದ್ಘಾಟನೆಯಾಗಲಿದೆ. ನಳಂದವು ನಮ್ಮ ಅದ್ಭುತ ಗತಕಾಲದ ಬಾಂಧವ್ಯ ಹೊಂದಿದೆ. ಈ ವಿಶ್ವವಿದ್ಯಾನಿಲಯವು ಯುವಕರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವಲ್ಲಿ ಖಂಡಿತವಾಗಿಯೂ ಬಹು ದೂರ ಸಾಗುತ್ತದೆ ಎಂದು ಬರೆದಿದ್ದರು.

  • ನಿತೀಶ್‌, ಯಾದವ್‌ ಒಂದೇ ವಿಮಾನದಲ್ಲಿ ಪ್ರಯಾಣ- ಊಹಾಪೋಹ ಅಲ್ಲಗೆಳೆದ ಜೆಡಿಯು

    ನಿತೀಶ್‌, ಯಾದವ್‌ ಒಂದೇ ವಿಮಾನದಲ್ಲಿ ಪ್ರಯಾಣ- ಊಹಾಪೋಹ ಅಲ್ಲಗೆಳೆದ ಜೆಡಿಯು

    ಪಾಟ್ನಾ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಆರ್‌ಜೆಡಿ (RJD) ನಾಯಕ ತೇಜಸ್ವಿ ಯಾದವ್‌ (Tejaswi Yadav) ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ ಭಾರೀ ಚರ್ಚೆಗೀಡು ಮಾಡಿದ ಬೆನ್ನಲ್ಲೇ ಜೆಡಿಯು ಸ್ಪಷ್ಟನೆ ನೀಡಿದೆ.

    ಜೆಡಿಯು ನಾಯಕ ಕೆಸಿ ತ್ಯಾಗಿ (KC Tyagi) ಅವರು ಪ್ರತಿಕ್ರಿಯಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು. ವಿಮಾನದಲ್ಲಿ ನಿತೀಶ್‌ ಜಿ (Nitish Kumar) ಅವರು ಮುಂದೆ ಕುಳಿತಿದ್ದಾರೆ. ಅವರ ಮುಂದೆ ಪೈಲಟ್‌ ಕುಳಿತಿದ್ದಾರೆ ಎಂದು ಹೇಳಿದ್ದಾರೆ. ಈ ಊಹಾಪೋಹಗಳೆಲ್ಲವೂ ಅಸಂಬದ್ಧವಾಗಿದ್ದು, ಈ ವದಂತಿಗಳನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ಕೆ.ಸಿ.ತ್ಯಾಗಿ ಹೇಳಿದ್ದಾರೆ. ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌

    ನಮಗೆ ಯಾವುದೇ ವಿಶೇಷ ಬೇಡಿಕೆ. ಮೊದಲಿನಿಂದಲೂ ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಆ ಬೇಡಿಕೆ ಈಗಲೂ ಹಾಗೆಯೇ ಇರುತ್ತದೆ. ಭಾರತ ಒಕ್ಕೂಟದ ಮೂಲದವರು ನಾವೇ ಆದರೆ ಅವರ ಅಪ್ರಾಯೋಗಿಕ ಕೆಲಸದಿಂದಾಗಿ ಇದೆಲ್ಲ ಸಂಭವಿಸಿದೆ ಎಂದು ಕೆ.ಸಿ.ತ್ಯಾಗಿ ಹೇಳಿದರು. ಇಂದು ಅವರು ನಿತೀಶ್ ಜೀ ನಮ್ಮೊಂದಿಗಿದ್ದರೆ ಪರಿಸ್ಥಿತಿ ವಿಭಿನ್ನವಾಗುತ್ತಿತ್ತು ಎಂದು ಭಾವಿಸುತ್ತಾರೆ. ಆದರೆ ಇಂಡಿಯಾ ಒಕ್ಕೂಟವನ್ನು ಈ ರೀತಿ ನಿರಾಶೆಗೊಳಿಸುವುದನ್ನು ನಾವು ಮುಂದುವರಿಸುವುದಾಗಿ ಹೇಳಿದರು.

    ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದದ್ದು, ಸದ್ಯ ಕೇಂದ್ರದಲ್ಲಿ ಸರ್ಕಾರ ರಚನೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಬಿಜೆಪಿಗೆ ಬಹುಮತ ಇಲ್ಲದ ಕಾರಣ ಎನ್‌ಡಿಎ ಮೈತ್ರಿಕೂಟದ ಅಗತ್ಯವಿದೆ. ಪ್ರಸ್ತುತ ಎನ್‌ಡಿಎಯಲ್ಲಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ದೆಹಲಿಗೆ ವಿಮಾನದಲ್ಲಿ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಜಂಟಿ ಪ್ರಯಾಣವು ಎಲ್ಲರನ್ನು ಆಶ್ಚರ್ಯಗೊಳಿಸಿತು.

  • ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    – ಆರ್‍ಜೆಡಿ ಮುಖ್ಯಸ್ಥನ ವಿರುದ್ಧ ಮೋದಿ ಕಿಡಿ

    ಪಾಟ್ನಾ: ಮುಸ್ಲಿಮ್ ಮೀಸಲಾತಿ ರಾಜಕೀಯ ಜೋರಾಗಿದೆ. ಎಲ್ಲಾ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡ್ಬೇಕು ಎಂದು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

    ಪ್ರಧಾನಿ ಮೋದಿಯವರು (Narendra Modi) ಐಎನ್‍ಡಿಐಎ ಒಕ್ಕೂಟದ ನಾಯಕರೊಬ್ರು ಎಲ್ಲಾ ಮೀಸಲಾತಿ ಮುಸ್ಲಿಮರಿಗೆ ಸಿಗಬೇಕು ಎಂದಿದ್ದಾರೆ. ಇಂತಹ ಹೇಳಿಕೆ ನೀಡಿದ್ರೂ ಕಾಂಗ್ರೆಸ್ ಸುಮ್ಮನಿದೆ ಅಂದ್ರೆ ಆ ಒಕ್ಕೂಟದ ಆಶಯ ಎಸ್‍ಸಿ-ಎಸ್‍ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡುವುದೇ ಆಗಿದೆ ಅಂತಲೇ ಅರ್ಥ ಎಂದು ಕುಟುಕಿದ್ದಾರೆ. ಇದನ್ನೂ ಓದಿ: NDAಗೆ 400ಕ್ಕೂ ಹೆಚ್ಚು ಸೀಟುಗಳು ಯಾಕೆ ಬೇಕು..?: ಪ್ರಚಾರದಲ್ಲಿ ಮೋದಿ ರಿವೀಲ್‌

    ಈ ನಡುವೆ ಕರ್ನಾಟಕ ಬಿಜೆಪಿ ಹಂಚಿಕೊಂಡಿದ್ದ ಮೀಸಲಾತಿ ಕುರಿತ ವೀಡಿಯೋವನ್ನು ತೆಗೆದು ಹಾಕುವಂತೆ ಟ್ವಿಟ್ಟರ್‍ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಇದೇ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಉಗ್ರರಿಗೆ ಕಾಂಗ್ರೆಸ್ ಕ್ಲೀನ್‍ಚಿಟ್ ಕೊಡ್ತಿದೆ ಅಂತಾನೂ ಮೋದಿ ಆರೋಪಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿ, ದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಲಾಗ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

  • ಪಾಟ್ನಾ ಜಂಕ್ಷನ್‌ ಬಳಿಯ ಹೋಟೆಲ್‌ಗಳಲ್ಲಿ ಅಗ್ನಿ ಅವಘಡ – 6 ಮಂದಿ ಸಾವು

    ಪಾಟ್ನಾ ಜಂಕ್ಷನ್‌ ಬಳಿಯ ಹೋಟೆಲ್‌ಗಳಲ್ಲಿ ಅಗ್ನಿ ಅವಘಡ – 6 ಮಂದಿ ಸಾವು

    ಪಾಟ್ನಾ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿದ್ದ ಹೋಟೆಲ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಹತ್ತಾರು ಜನರು ಗಾಯಗೊಂಡಿದ್ದಾರೆ.

    ಪಾಲ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದನ್ನು ನಂದಿಸುವಷ್ಟರಲ್ಲಿ ಪಕ್ಕದ ಕಟ್ಟಡಗಳಿಗೆ ಹರಡಿತು. ಹೋಟೆಲ್ ಪಾಲ್ ಮತ್ತು ಪಕ್ಕದ ಅಮೃತ್ ಹೋಟೆಲ್‌ನಲ್ಲಿ ಬೆಂಕಿ ಅವಘಡದಿಂದ ಸಾವಿಗೀಡಾದವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮ ಅಪಮಾನಿಸುವವರ ವಿರುದ್ಧ ನನ್ನ ಹೋರಾಟ – ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ ಬಿಜೆಪಿ ಸೇರ್ಪಡೆ

    ಬೆಂಕಿಯಿಂದ ರಕ್ಷಿಸಿದ ಜನರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. 100% ಮತ್ತು 95% ಸುಟ್ಟ ಗಾಯಗಳೊಂದಿಗೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು, ಪೂನಂ ದೇವಿ, ಆಮ್ಲೇಶ್ ತಿವಾರಿ, ಗೋರಖ್ ಕುಮಾರ್, ಅನುರಾಗ್ ಸಿಂಗ್, ಜಿತೇಂದ್ರ ಕುಮಾರ್, ರೋಹಿತ್ ಕುಮಾರ್, ಅರವಿಂದ್ ತಿವಾರಿ ಎಂದು ಗುರುತಿಸಲಾಗಿದೆ.

    ಮೇಲ್ಛಾವಣಿಯಲ್ಲಿ ಸಿಲುಕಿದ್ದ 45 ಕ್ಕೂ ಹೆಚ್ಚು ಜನರನ್ನು ಅಗ್ನಿಶಾಮಕ ದಳದ ತಂಡಗಳು ರಕ್ಷಿಸಿದ್ದಾರೆ. ಎಲ್ಲರನ್ನೂ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಹೆಚ್) ದಾಖಲಿಸಲಾಗಿದೆ ಎಂದು ಡೈರೆಕ್ಟರ್ ಜನರಲ್ ಕಮ್ ಕಮಾಂಡೆಂಟ್, ಹೋಮ್ ಗಾರ್ಡ್ ಮತ್ತು ಅಗ್ನಿಶಾಮಕ ಸೇವೆಗಳ ಶೋಭಾ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಂದ ಬಿಜೆಪಿಗೆ ಒಂದೇ ಒಂದು ವೋಟು ಸಹ ಬರಲ್ಲ: ದೀದಿ ಕೆಂಡ

  • ಪಾಸ್ ಮಾಡಿ, ಇಲ್ದಿದ್ರೆ ನನ್ನ ತಂದೆ ಮದುವೆ ಮಾಡ್ತಾರೆ – ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯ ಮನವಿ

    ಪಾಟ್ನಾ: ಬಿಹಾರದ (Bihar) 10ನೇ ತರಗತಿಯ ಉತ್ತರ ಪತ್ರಿಕೆಯಲ್ಲಿ (BSEB 10th Board Exam) ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಪಾಸ್ ಮಾಡಿ ಇಲ್ಲದಿದ್ದರೆ, ನನ್ನ ತಂದೆ ಮದುವೆ ಮಾಡ್ತಾರೆ ಎಂದು ಬರೆದಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿದ್ಯಾರ್ಥಿನಿ (Student) ಉತ್ತರ ಪತ್ರಿಕೆಯಲ್ಲಿ, ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ ಪಾಸ್ ಮಾಡದಿದ್ದರೆ ತನ್ನನ್ನು ಮದುವೆ ಮಾಡುತ್ತಾರೆ. ಈಗ ಮದುವೆಯಾಗಲು ಇಷ್ಟವಿಲ್ಲ ಎಂದು ಆಕೆ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಅಟ್ಟಾಡಿಸಿ ಹೊಡೆದು, ನೇಣು ಬಿಗಿದು ಹತ್ಯೆ

    ಇನ್ನೂ ಕೆಲವರು ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು ಹಾಗೂ ದೇವರ ನಾಮಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಯೊಬ್ಬ ಸಲ್ಮಾನ್ ಖಾನ್ ನಟನೆಯ ಸಾಜನ್ ಚಿತ್ರದ ಹಾಡನ್ನು ಉತ್ತರ ಪತ್ರಕಿಯಲ್ಲಿ ಬರೆದಿದ್ದಾನೆ. ಇದೀಗ ಈ ಎಲ್ಲಾ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕರೊಬ್ಬರು, ಉತ್ತರ ಸರಿಯಾಗಿದ್ದರೆ ಅಂಕಗಳನ್ನು ನೀಡುತ್ತೇವೆ. ಇಂತಹ ಅನಗತ್ಯ ಬರವಣಿಗೆಗೆ ಅಂಕ ನೀಡಲಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೆಗಡೆ ಮುಂದೆ ಅಸಮಾಧಾನ ಹೊರಹಾಕಿದ ಶಾಸಕಿ ರೂಪಾಲಿ ನಾಯ್ಕ!