Tag: ಪಾಟ್ನಾ ಪೊಲೀಸ್‌

  • ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ಪಾಟ್ನಾ: ಪುಣೆಯಿಂದ ಬರುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್‌ ಸಮಯದಲ್ಲಿ ಡಿಜೆ ಲೇಸರ್‌ ಬೆಳಕು (Laser light) ಹಾಯಿಸಿದ ಪರಿಣಾಮ ಲ್ಯಾಂಡಿಂಗ್‌ ಕಾರ್ಯಾಚರಣೆ ವೇಳೆ ಸಮತೋಲನ ತಪ್ಪಿದ ಘಟನೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ (Patna Airport) ನಡೆದಿದೆ. ಆದ್ರೆ ಪೈಲಟ್‌ನ ಸಾಹಸದಿಂದಾಗಿ ಯಾವುದೇ ದುರಂತ ಸಂಭವಿಸಿದೇ ನೂರಾರು ಜೀವಗಳು ಬದುಕುಳಿದಿವೆ.

    ಹೌದು.. ಗುರುವಾರ (ನಿನ್ನೆ) ಪುಣೆಯಿಂದ ಹೊರಟಿದ್ದ ಇಂಡಿಗೋ ವಿಮಾನ (IndiGo flight) ಪಾಟ್ನಾ ಏರ್‌ಪೋರ್ಟ್‌ನಲ್ಲಿ ಸಂಜೆ 6:40ಕ್ಕೆ ಲ್ಯಾಂಡ್‌ ಆಗಬೇಕಿತ್ತು. ಈ ವೇಳೆ ಯಾರೋ ಡಿಜೆ ಲೇಸರ್ ಬೆಳಕು ಹಾಯಿಸಿದ್ದಾರೆ. ಲೇಸರ್‌ ಬೆಳಕು ಕಾಕ್‌ಪಿಟ್‌ಗೆ ರಾಚಿದ್ದರಿಂದ ಪೈಲಟ್‌ಗೆ ಗೊಂದಲ ಉಂಟಾಗಿದೆ. ಜೊತೆಗೆ ವಿಮಾನ ನಿಯಂತ್ರಣ ಕಳೆದುಕೊಂಡಿದೆ, ಈ ವೇಳೆ ಸಮಯಪ್ರಜ್ಞೆ ತೋರಿದ ಪೈಲಟ್‌ ವಿಮಾನವನ್ನು ಹತೋಟಿಗೆ ತಂದು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    AI Photo

    ಘಟನೆ ಸಂಬಂಧ ಲೇಸರ್‌ ಬೆಳಕು ಹಾಯಿಸಿದ ಅಪರಿಚಿತನ ಪತ್ತೆಗೆ ಪಾಟ್ನಾ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಅತ್ತ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಡಿಜಿಸಿಎ ಆದೇಶಿಸಿದೆ.

  • ಕೋರ್ಟ್‌ ಆವರಣದಲ್ಲೇ ಭೀಕರ ಗುಂಡಿನ ದಾಳಿ – ವಿಚಾರಣಾಧೀನ ಕೈದಿಯ ಹತ್ಯೆ, ಇಬ್ಬರು ಅರೆಸ್ಟ್‌

    ಪಾಟ್ನಾ: ವಿಚಾರಣಾಧೀನ ಕೈದಿಯೊಬ್ಬನನ್ನ ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಟ್ನಾದಲ್ಲಿ (Patna) ನಡೆದಿದೆ.

    ಪಾಟ್ನಾದ ದಾನಪುರ ಕೋರ್ಟ್ ಕ್ಯಾಂಪಸ್​ನಲ್ಲಿ ಬೇರ್​ ಜೈಲಿನಿಂದ ವಿಚಾರಣೆಗೆ ಕರೆತಂದಿದ್ದ ಕೈದಿಯನ್ನ ಪೊಲೀಸರ ಎದುರಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಕೊಲೆಯಾದ ವ್ಯಕ್ತಿಯನ್ನ ಅಭಿಷೇಕ್ ಕುಮಾರ್ ಅಲಿಯಾಸ್ ಛೋಟೆ ಸರ್ಕಾರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ ಲಿವ್-ಇನ್-ಪಾರ್ಟ್ನರ್‌ನ ಕುತ್ತಿಗೆಗೆ ಕತ್ತರಿಯಿಂದ ಇರಿದ!

    ಛೋಟೆ ಸರ್ಕಾರ್ ಸಿಕಂದರ್‌ಪುರದ ನಿವಾಸಿಯಾಗಿದ್ದು ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದ. ಆತನನ್ನು ನಗರದ ಬೇರ್‌ ಜೈಲಿನಲ್ಲಿ ಇರಿಸಲಾಗಿದ್ದು, ಇಂದು ಕೋರ್ಟ್‌ಗೆ ಹಾಜರುಪರಿಸಲು ಕರೆತರಲಾಗುತ್ತಿತ್ತು. ವಿಚಾರಣಾಧೀನ ಕೈದಿಯಾಗಿದ್ದ ಛೋಟೆ ಸರ್ಕಾರ್‌ನನ್ನು ದಾನಪುರ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ

    ಸದ್ಯ ವಿಚಾರಣಾಧೀನ ಕೈದಿಯನ್ನ ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನ ಬಂಧಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಅವರನ್ನು ಯಾರು ಕಳುಹಿಸಿದ್ದಾರೆ, ಈ ಕೊಲೆಯ ಹಿಂದಿನ ಉದ್ದೇಶವೇನು ಅನ್ನೋ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಟ್ನಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

    ದಾಳಿಕೋರರು ಮುಜಾಫರ್‌ಪುರದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಆರೋಪಿಗಳ ಬಳಿಯಿದ್ದ 4 ಬುಲೆಟ್‌ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದ್ರೆ ಎಷ್ಟು ಬುಲೆಟ್‌ಗಳನ್ನ ಹಾರಿಸಲಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.