Tag: ಪಾಕ್ ಸೈನಿಕ

  • ಪಾಕ್ ಸೈನಿಕನ ಸಮಾಧಿ ಮರುಸ್ಥಾಪಿಸಿ ಗೌರವ ಸಲ್ಲಿಸಿದ ಭಾರತೀಯ ಸೇನೆ

    ಪಾಕ್ ಸೈನಿಕನ ಸಮಾಧಿ ಮರುಸ್ಥಾಪಿಸಿ ಗೌರವ ಸಲ್ಲಿಸಿದ ಭಾರತೀಯ ಸೇನೆ

    – ಈ ಹಿಂದೆ ಭಾರತೀಯ ಸೈನಿಕನ ತಲೆ ಕಡಿದಿದ್ದ ಪಾಕ್
    – ತಲೆ ತೆಗೆದುಕೊಂಡು ಹೋಗಿ ಎಂದು ವಿಕೃತಿ ಮೆರೆದಿತ್ತು

    ಶ್ರೀನಗರ: ವಿಶ್ವದ ಅತ್ಯಂತ ವೃತ್ತಿಪರ ಹಾಗೂ ನೈತಿಕತೆ ಹೊಂದಿದ ಸೇನೆಗಳಲ್ಲಿ ಭಾರತೀಯ ಸೇನೆ ಒಂದು ಎಂದು ಗುರುತಿಸಿಕೊಂಡಿದೆ. ಇದೀಗ ಇದು ಮತ್ತೊಮ್ಮೆ ಸಾಬೀತಾಗಿದ್ದು, ಹಾನಿಗೊಳಗಾಗಿದ್ದ ಪಾಕಿಸ್ತಾನ ಸೈನಿಕನ ಸಮಾಧಿಯನ್ನು ಪುನಃ ಸ್ಥಾಪಿಸುವ ಮೂಲಕ ಸೈನಿಕನಿಗೆ ಗೌರವ ಸಲ್ಲಿಸಲಾಗಿದೆ.

    ‘ಸೈನಿಕನೇ ಮೊದಲು ಉಳಿದದ್ದೆಲ್ಲ ನಂತರ’ ಎಂಬ ಧ್ಯೇಯ ವಾಕ್ಯದ ಬದ್ಧತೆಯನ್ನು ಭಾರತೀಯ ಸೇನೆ ಪ್ರದರ್ಶಿಸಿದ ಬಳಿಕ ಇದೀಗ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಜಮ್ಮು-ಕಾಶ್ಮೀರದ ನೌಗಮ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಅಧಿಕಾರಿಯ ಸಮಾಧಿ ಹಾಳಾಗಿದ್ದನ್ನು ಕಂಡು ಭಾರತೀಯ ಸೈನಿಕರು, ಮರು ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಈ ಸಮಾಧಿ ದಿವಂಗತ ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ಅವರದ್ದು. 1972ರಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಸೈನಿಕರ ದಾಳಿಗೆ ತುತ್ತಾಗಿ, ಸಾವನ್ನಪ್ಪಿದ್ದರು. ಖಾನ್ ಪಾಕಿಸ್ತಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಸೀತಾರಾ-ಎ-ಜುರಾತ್ ಪಡೆದವರಾಗಿದ್ದಾರೆ.

    ದಿವಂಗತ ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಮಾಧಿಯನ್ನು ಭಾರತೀಯ ಸೈನಿಕರು ಪುನಃ ಸ್ಥಾಪಿಸಿದ್ದು, ಹುತಾತ್ಮ ಸೈನಿಕ ಯಾವುದೇ ದೇಶಕ್ಕೆ ಸೇರಿದ್ದರೂ ಗೌರವಕ್ಕೆ ಅರ್ಹ ಎಂದು ಶ್ರೀನಗರ ಮೂಲದ ಸೈನ್ಯದ ಚಿನಾರ್ ಕಾರ್ಪ್ಸ್ ತಿಳಿಸಿದೆ. ಅಲ್ಲದೆ ಅವರ ಸಮಾಧಿಯನ್ನು ಮರು ಸ್ಥಾಪಿಸಿದೆ.

    ಸಮಾಧಿಯನ್ನು ಮರು ಸ್ಥಾಪಿಸಿದ ಫೋಟೋಗಳನ್ನು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದ್ದು, ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ನೆನಪಿನಾರ್ಥವಾಗಿ ಸಿತಾರ್-ಎ-ಜುರತ್ ಶಾಹಿದ್ 5 ಮೇ, 1972, 1630 ಎಚ್ ಅವರು ಇ ಸಿಖ್ಖರ ಪ್ರತಿ ದಾಳಿ ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ಬರೆಯಲಾಗಿದೆ.

    ಭಾರತೀಯ ಸೇನೆಯ ಸಂಪ್ರದಾಯ ಹಾಗೂ ನೀತಿಯಂತೆ ಚಿನಾರ್ ಕಾರ್ಪ್ಸ್ ಪಾಕಿಸ್ತಾನ ಸೇನೆಯ ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್, ಸಿತಾರಾ-ಎ-ಜುರತ್ ಅವರ ಹಾನಿಗೊಂಡಿದ್ದ ಸಮಾಧಿಯನ್ನು ಪುನಃ ಸ್ಥಾಪಿಸಲಾಗಿದೆ. ಅವರು 5 ಮೇ, 1972ರಂದು ನೌಗಮ್ ಸೆಕ್ಟರ್ ನಲ್ಲಿ ಎಲ್‍ಸಿ ಉದ್ದಕ್ಕೂ ಇದ್ದ ಕಿಲ್ಲ್ಡ್ ಇನ್ ಆ್ಯಕ್ಷನ್(ಕೆಐಎ) ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.

    ಮತ್ತೊಂದು ಟ್ವೀಟ್ ಮಾಡಿರುವ ಚಿನಾರ್ ಕಾರ್ಪ್ಸ್, ಹುತಾತ್ಮರದ ಸೈನಿಕ ಯಾವುದೇ ದೇಶಕ್ಕೆ ಸೇರಿದ್ದರೂ, ಅದನ್ನು ಲೆಕ್ಕಿಸದೆ ಸಾವಿನ ಬಳಿಕ ಅವರು ಗೌರವಕ್ಕೆ ಅರ್ಹರು. ಭಾರತೀಯ ಸೇನೆ ಈ ನಂಬಿಕೆಯೊಂದಿಗೆ ನಿಂತಿದೆ. ಭಾರತೀಯ ಸೇನೆ ಜಗತ್ತಿಗಾಗಿ ಇದೆ ಎಂದು ಟ್ವೀಟ್‍ನಲ್ಲಿ ಸಾಲುಗಳನ್ನು ಬರೆಯಲಾಗಿದೆ.

    ಪಾಕ್ ಕ್ರೂರ ಕೃತ್ಯ:
    ಭಾರತೀಯ ಸೇನೆಯ ಕ್ರಮ ಈ ಹಿಂದೆ ಪಾಕಿಸ್ತಾನ ಸೇನೆ ಅನಾಗರಿಕವಾಗಿ ನಡೆದುಕೊಂಡ ಕ್ರಮಕ್ಕೆ ತದ್ವಿರುದ್ಧವಗಿದೆ. 2020ರ ಜನವರಿಯಲ್ಲಿ ಪಾಕಿಸ್ತಾನಿ ಬಾರ್ಡರ್ ಆಕ್ಷನ್ ಟೀಮ್(ಬಿಎಟಿ) ಭಾರತದ ಪೋರ್ಟರ್ ಶಿರಚ್ಛೇದನ ಮಾಡಿ ತಲೆ ತೆಗೆದುಕೊಂಡು ಹೋಗಿ ಎಂದು ವಿಕೃತವಾಗಿ ವರ್ತಿಸಿತ್ತು. ಪಾಕಿಸ್ತಾನದ ಬಿಎಟಿ ಪಾಕಿಸ್ತಾನ ಸೇನಾ ಸಿಬ್ಬಂದಿ ಹಾಗೂ ಭಯೋತ್ಪಾದಕರನ್ನೂ ಒಳಗೊಂಡಿದೆ.

  • ದಾಳಿಗೂ ನಮಗೂ ಸಂಬಂಧ ಕಲ್ಪಿಸೋದು ಸರಿಯಲ್ಲ- ಪಾಕ್ ಮೊಂಡುತನ

    ದಾಳಿಗೂ ನಮಗೂ ಸಂಬಂಧ ಕಲ್ಪಿಸೋದು ಸರಿಯಲ್ಲ- ಪಾಕ್ ಮೊಂಡುತನ

    ಪುಲ್ವಾಮಾ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿ ವಿಚಾರದಲ್ಲಿ ಪಾಕಿಸ್ತಾನ ತನ್ನ ಹಳೇ ರಾಗ ಮುಂದುವರಿಸಿದೆ. ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಉಗ್ರರ ದಾಳಿಗೂ ನಮಗೂ ಸಂಬಂಧ ಕಲ್ಪಿಸೋದು ಸರಿಯಲ್ಲ ಅಂತ ಮೊಂಡುತನ ಮುಂದುವರಿಸಿದೆ.

    ಈ ಬೆನ್ನಲ್ಲೆ ಪಾಕಿಸ್ತಾನ ಸೈನಿಕರು ಪೂಂಛ್ ವಯಲದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಭದ್ರತಾ ಸಂಪುಟ ಸಮಿತಿ ಸಭೆ ನಡೆಸುತ್ತಿದ್ದು, ಈ ಮಧ್ಯೆ ಇಂದು ಜಮ್ಮು ಕಾಶ್ಮೀರದ ಪುಲ್ವಾಮಾಗೆ ಗೃಹಸಚಿವ ರಾಜನಾಥ್ ಸಿಂಗ್ ಮತ್ತು ಎನ್‍ಐಎ ತಂಡ ಭೇಟಿ ನೀಡಲಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಬಂದ್‍ಗೆ ಕರೆ ನೀಡಲಾಗಿದೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ದಾಳಿಯ ಬಗ್ಗೆ ಮುನ್ಸೂಚನೆ ಇತ್ತು. ಆದ್ರೂ ಸರಿಯಾದ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ದಾಳಿಗೆ ಕಾರಣ ಅಂತಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv