Tag: ಪಾಕ್ ಪ್ರಜೆ

  • ಪಹಲ್ಗಾಮ್ ಅಟ್ಟಹಾಸದ ಬಳಿಕ ಪಾಕ್ ಪ್ರಜೆಗಳ ಗಡೀಪಾರು – 55,000 ಮಂದಿಗಿಲ್ಲ ಗಡೀಪಾರಿನ ಆತಂಕ!

    ಪಹಲ್ಗಾಮ್ ಅಟ್ಟಹಾಸದ ಬಳಿಕ ಪಾಕ್ ಪ್ರಜೆಗಳ ಗಡೀಪಾರು – 55,000 ಮಂದಿಗಿಲ್ಲ ಗಡೀಪಾರಿನ ಆತಂಕ!

    ನವದೆಹಲಿ: ಪಹಲ್ಗಾಮ್ (Pahalgam Terrorist Attack) ಉಗ್ರರ ಅಟ್ಟಹಾಸದ ಬೆನ್ನಲ್ಲೇ ಪಾಕ್ (Pakistan) ಜೊತೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವ ಭಾರತ (India), ಕಟ್ಟುನಿಟ್ಟಿನ ಸೂಚನೆ ಹೊರಡಿಸಿ ಅಲ್ಪಾವಧಿ ವೀಸಾ ಹೊಂದಿರುವ ಪಾಕ್ ಪ್ರಜೆಗಳ ಗಡೀಪಾರು ಮಾಡುವ ಕೆಲಸ ಮಾಡುತ್ತಿದೆ. ಹೀಗಿದ್ದು ಭಾರತದಲ್ಲಿ (India) ಇನ್ನೂ 55,000 ಪಾಕ್ ಪ್ರಜೆಗಳಿದ್ದಾರೆ ಎಂದು ತಿಳಿದು ಬಂದಿದೆ.

    ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕ್ ಪ್ರಜೆಗಳ 14 ರೀತಿಯ ವೀಸಾಗಳನ್ನು ರದ್ದುಗೊಳಿಸಿತ್ತು. ಜೊತೆಗೆ 48 ಗಂಟೆಯೊಳಗೆ ಭಾರತ ಬಿಟ್ಟು ತೆರಳುವಂತೆ ಸೂಚನೆ ನೀಡಿತ್ತು.ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್‌’ ಅಂತ ಕೂಗಿದ ಜಿಪ್‌ಲೈನ್‌ ಆಪರೇಟರ್‌

    ಕೇಂದ್ರದ ಕಟ್ಟುನಿಟ್ಟಿನ ಸೂಚನೆ ಬಳಿಕ ದೇಶದಲ್ಲಿ ಇನ್ನೂ 55,000 ಪಾಕ್ ಪ್ರಜೆಗಳಿದ್ದಾರೆ. ಈ 55,000 ಪಾಕ್ ಪ್ರಜೆಗಳು ದೀರ್ಘಾವಧಿ ವೀಸಾ ಹೊಂದಿದ್ದು, ಈ ಪೈಕಿ 54 ಸಾವಿರ ಮಂದಿ ಜನ ರಾಜಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಅಲ್ಪಾವಧಿ ವೀಸಾ ಹೊಂದಿದ್ದವರನ್ನು ರಾಜ್ಯ ಸರ್ಕಾರಗಳು ಹೊರಹಾಕಿವೆ. ಆದರೂ ಕೂಡ ಇನ್ನೂ ದೇಶದಲ್ಲಿ 55,000 ಪಾಕ್ ಪ್ರಜೆಗಳಿದ್ದಾರೆ.

    ಪಾಕಿಸ್ತಾನದಿಂದ ಬಂದು ಭಾರತೀಯರನ್ನು ಮದುವೆಯಾದವರಿಗೆ ಭಾರತ ಸರ್ಕಾರ ದೀರ್ಘಾವಧಿ ವೀಸಾ ನೀಡಿದೆ. ರಾಜಸ್ಥಾನದ ಗಡಿಯ ಹಳ್ಳಿಗಳಲ್ಲಿ ಈಗಲೂ ಕೂಡ ಪಾಕಿಸ್ತಾನದಿಂದ ಹೆಣ್ಣು ತಂದು ಮದುವೆ ಮಾಡಿಕೊಳ್ಳುವ ಸಂಸ್ಕೃತಿಯಿದೆ. ಹೀಗಾಗಿ ದೀರ್ಘಾವಧಿ ವೀಸಾ ಹೊಂದಿದ ಪಾಕ್ ಪ್ರಜೆಗಳ ಗಡೀಪಾರು ಮಾಡಲು ಕಾನೂನು ತೊಡಕು ಉಂಟಾಗಿದೆ.ಇದನ್ನೂ ಓದಿ: ಉಡುಪಿಯ ಕಾರ್ಕಳದಲ್ಲಿ ಉದ್ಯಮಿ ಆತ್ಮಹತ್ಯೆ – ಕಾರಿನೊಳಗೆ ಗುಂಡು ಹಾರಿಸಿಕೊಂಡ ವ್ಯಕ್ತಿ

  • ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

    ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

    ದುಬೈ: ಪಾಕಿಸ್ತಾನದ ಪ್ರಜೆಯೊಬ್ಬ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದುಬೈ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

    ಪಾಕ್ ಮೂಲದ 35 ವರ್ಷದ ಡೆಲಿವರಿ ಸಿಬ್ಬಂದಿ ಮೇಲೆ ಆರೋಪ ಕೇಳಿಬರುತ್ತಿದೆ. ದುಬೈನಲ್ಲಿ ವಸತಿ ಕಟ್ಟಡದ ಲಿಫ್ಟ್‌ವೊಂದರಲ್ಲಿ ಡೆಲಿವರಿ ಸಿಬ್ಬಂದಿ 12 ವರ್ಷದ ಭಾರತೀಯ ಬಾಲಕಿಗೆ ಕಿರುಕುಳ ನೀಡಿದ್ದಾನೆ.

    ಪತ್ರಿಕೆಯೊಂದರ ವರದಿ ಪ್ರಕಾರ, ಜೂನ್ 16ರಂದು ಈ ಘಟನೆ ನಡೆದಿದೆ. ಡೆಲಿವರಿ ಸಿಬ್ಬಂದಿ ಭಾರತದ ಬಾಲಕಿ ವಾಸಿಸುತ್ತಿದ್ದ ವಸತಿ ನಿಲಯಕ್ಕೆ ಡೆಲಿವರಿ ನೀಡಲು ಬಂದಿದ್ದನು. ಅಂದು ಬಾಲಕಿ ಹಾಗೂ ಆತ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಅಪ್ರಾಪ್ತೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ದೂರು ದಾಖಲಾಗಿದೆ. ಆದರೆ ಈ ಆರೋಪವನ್ನು ಆರೋಪಿ ತಳ್ಳಿ ಹಾಕಿದ್ದಾನೆ.

    ಪೊಲೀಸ್ ತನಿಖೆಯ ವೇಳೆ ಭಾರತೀಯ ಮೂಲದ 34 ವರ್ಷದ ಶಿಕ್ಷಕಿ ಸಾಕ್ಷ್ಯ ಹೇಳಿದ್ದಾರೆ. ಗಣಿತ ಕಲಿಯಲು ಬಾಲಕಿ ನನ್ನ ಮನೆಗೆ ಟ್ಯೂಷನ್‍ಗೆ ಬರುತ್ತಾಳೆ. ಜೂನ್ 16ರಂದು ಕೂಡ ಎಂದಿನಂತೆ ಬಾಲಕಿ ಟ್ಯೂಷನ್‍ಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅವಳು ಕೆಲ ವಸ್ತುಗಳನ್ನು ಮನೆಯಲ್ಲಿಯೇ ಮರೆತು ಬಂದಿದ್ದಳು. ಆದ್ದರಿಂದ ಅವುಗಳನ್ನು ತೆಗೆದುಕೊಂಡು ಬರುತ್ತೇನೆಂದು ಬಾಲಕಿ ಮನೆ ಕಡೆಗೆ ಹೋಗಿದ್ದಳು. ಬಳಿಕ ಅವಳು ವಾಪಸ್ ಮರಳಿ ಬಂದಾಗ ಆಕೆಯ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು, ನಡಗುತ್ತಾ, ಅಳುತ್ತಿದ್ದಳು. ನಂತರ ಬಾಲಕಿಯನ್ನು ವಿಚಾರಿಸಿದಾಗ, ನಾನು ಲಿಫ್ಟ್‌ನಲ್ಲಿ ಬರುವಾಗ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು ಎಂದು ಬಾಲಕಿ ನನ್ನ ಬಳಿ ಹೇಳಿಕೊಂಡಳು ಎಂದು ತಿಳಿಸಿದ್ದಾರೆ.

    ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸೆಪ್ಟೆಂಬರ್ 16ರಂದು ಆರೋಪಿಗೆ ದುಬೈ ನ್ಯಾಯಾಲಯ ಶಿಕ್ಷೆ ವಿಧಿಸಲಿದೆ.