Tag: ಪಾಕ್ ನಿವೃತ್ತ ಏರ್ ಮಾರ್ಷಲ್

  • ಪಾಕಿಸ್ತಾನದ ಮೇಲೆ ಭಾರತದ ಬ್ರಹ್ಮೋಸ್ ದಾಳಿಯಾಗಿದೆ: ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್

    ಪಾಕಿಸ್ತಾನದ ಮೇಲೆ ಭಾರತದ ಬ್ರಹ್ಮೋಸ್ ದಾಳಿಯಾಗಿದೆ: ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್

    ಭಾರತದ ದಾಳಿಯನ್ನು ಪಾಕ್ ಸೇನಾ ಮುಖ್ಯಸ್ಥ ಒಪ್ಪಿಕೊಳ್ತಿಲ್ಲ – ಅಕ್ತರ್ ಟೀಕೆ

    ಇಸ್ಲಾಮಾಬಾದ್: `ಆಪರೇಷನ್ ಸಿಂಧೂರ’ (Operation Sindoor) ವೇಳೆ ಪಾಕಿಸ್ತಾನದ (Pakistan) ಮೇಲೆ ಭಾರತ (India) ಬ್ರಹ್ಮೋಸ್ ದಾಳಿ (BrahMos Missile) ಮಾಡಿದೆ. ಆದರೆ, ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್ (Masood Akthar) ತಿಳಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತ ನಡೆಸಿದ `ಆಪರೇಷನ್ ಸಿಂಧೂರ’ದ ಅಡಿಯಲ್ಲಿ ಪಾಕ್‌ನ 9 ಉಗ್ರರ ನೆಲೆಗೆಳು ಸೇರಿದಂತೆ ಕರಾಚಿ ಬಳಿಯಿರುವ ಭೋಲಾರಿಯ ವಾಯುನೆಲೆ ಮೇಲೆ ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿದೆ. ಮೊದಲು ಇದೇ ಜಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ವಾಯುನೆಲೆಯ ಹ್ಯಾಂಗರ್‌ಗೂ ಹಾನಿಯಾಗಿದೆ. ಜೊತೆಗೆ ವಾಯುಪಡೆ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ (AWACS) ವಿಮಾನವು ಕೂಡ ಇದೇ ಸಮಯದಲ್ಲಿ ಪತನಗೊಂಡಿದೆ ಎಂದು ಒಪ್ಪಿಕೊಂಡಿದ್ದಾರೆ.ಇದನ್ನೂ ಓದಿ: ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ

    ದಾಳಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟ ಅವರು, ಪಾಕಿಸ್ತಾನದ ವಾಯುನೆಲೆಗಳ ಪೈಕಿ ಭೋಲಾರಿಯು ಒಂದು. ಇದು ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಿಂದ 270 ಕಿ.ಮೀ ದೂರದಲ್ಲಿದೆ. ಭಾರತದ ಪಡೆಗಳು ಒಂದರ ನಂತರ ಒಂದರಂತೆ ನಾಲ್ಕು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿವೆ. ದಾಳಿಯ ವೇಳೆ ಒಂದು ಕ್ಷಿಪಣಿ ಭೋಲಾರಿ ವಾಯುನೆಲೆಯ ಹ್ಯಾಂಗರ್‌ಗೆ ಡಿಕ್ಕಿ ಹೊಡೆದಿದ್ದು, ಸಾವು-ನೋವುಗಳು ಕೂಡ ವರದಿಯಾಗಿವೆ. ಪಾಕಿಸ್ತಾನದ ಮೂರು ವಾಯುನೆಲೆಗಳಾದ ಉತ್ತರ ವಾಯು ಕಮಾಂಡ್, ಕೇಂದ್ರ ವಾಯುನೆಲೆ ಮತ್ತು ದಕ್ಷಿಣ ವಾಯುನೆಲೆಗಳ ಅಡಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಅಲ್ಲದೆ ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಸ್ಯಾಟ್‌ಲೈಟ್ ಚಿತ್ರಗಳಲ್ಲಿ ದಾಳಿಯಾಗಿರುವುದು ಸಾಬೀತಾಗಿದ್ದು, ಹಾನಿಯ ದೃಶ್ಯಗಳನ್ನು ತೋರಿಸಿದೆ. ಆದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    PIB ಮಾಹಿತಿ ಪ್ರಕಾರ, ಈ ದಾಳಿಯಿಂದಾಗಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಮತ್ತು ನಾಲ್ವರು ವಾಯುಪಡೆ ಸಿಬ್ಬಂದಿ ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನಿ ವಿಮಾನಗಳು ನಾಶವಾಗಿವೆ. ಅದಲ್ಲದೇ ಪಾಕ್ ವಾಯುಪಡೆಯ ಮೂಲಸೌಕರ್ಯದ ಸುಮಾರು ಶೇಕಡ 20ರಷ್ಟು ನಾಶವಾಗಿದೆ ಎಂದು ವರದಿ ಮಾಡಿದೆ.

    ಬ್ರಹ್ಮೋಸ್ ಇಂಡೋ-ರಷ್ಯಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು ಭೂ, ವಾಯು ಹಾಗೂ ಜಲ ಮೂರು ಸೇನೆ ಬಳಸಬಹುದಾಗಿದೆ. ಭಾರತವು SU-30 MKI ಯುದ್ಧವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿದೆ ಎನ್ನಲಾಗಿದೆ.ಇದನ್ನೂ ಓದಿ: ‘‌ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ

  • ಭಾರತದೊಂದಿಗಿನ ಯುದ್ಧದಲ್ಲಿ ನಮಗೆ ಉಳಿಗಾಲವಿಲ್ಲ: ಪಾಕ್ ನಿವೃತ್ತ ಏರ್ ಮಾರ್ಷಲ್

    ಭಾರತದೊಂದಿಗಿನ ಯುದ್ಧದಲ್ಲಿ ನಮಗೆ ಉಳಿಗಾಲವಿಲ್ಲ: ಪಾಕ್ ನಿವೃತ್ತ ಏರ್ ಮಾರ್ಷಲ್

    ಇಸ್ಲಮಾಬಾದ್: ಇದೀಗ ಪಾಕಿಸ್ತಾನ(Pakistan) ಮತ್ತು ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು, ಭಾರತದೊಂದಿಗಿನ ಯುದ್ಧದಲ್ಲಿ ನಾವು ಉಳಿಯುವುದಿಲ್ಲ ಎಂದು ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಖ್ತರ್(Masood Akhtar) ಅಲ್ಲಿನ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

    ಭಾರತದ ಪ್ರತಿದಾಳಿಗೆ ಇಡೀ ಪಾಕಿಸ್ತಾನವೇ ನಡುಗಿ ಹೋಗಿದೆ. ಇದರ ಬೆನ್ನಲ್ಲೇ ಪಾಕ್ ಮಾಜಿ ಏರ್ ಮಾರ್ಷಲ್ ಮಸೂದ್ ಅಖ್ತರ್ ಭಾರತದೊಂದಿಗೆ ಯುದ್ಧ ಮಾಡಿದರೆ ನಮಗೆ ಉಳಿಗಾಲವಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಪಾಕ್‌ : ಭಾರತ

    ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತದಲ್ಲಿ 16 ಲಕ್ಷ ಸೈನಿಕರಿದ್ದಾರೆ. ಆದರೆ ನಮ್ಮಲ್ಲಿ ಬರೀ 6 ಲಕ್ಷವಷ್ಟೇ ಸೈನಿಕರಿದ್ದಾರೆ. ಹಾಗಾಗಿ ಭಾರತದೊಂದಿಗಿನ ಯಾವುದೇ ಯುದ್ಧವು ನಮ್ಮನ್ನು ಉಳಿಸುವುದಿಲ್ಲ ಎಂದು ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಸಿಮ್ ಮುನೀರ್‌ನಿಂದ ದೇಶ ನಾಶ – ರೊಚ್ಚಿಗೆದ್ದ ಪಾಕ್‌ ಜನ

    ಈಗಿನ ದೇಶದ ಪರಿಸ್ಥತಿಯನ್ನು ನೋಡಿದರೆ ಚಿಂತಾಜನಕವಾಗಿವೆ. ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ನಮ್ಮಲ್ಲಿ ದಿನೇದಿನೇ ಪರಿಸ್ಥಿತಿ ಹದಗೆಡುತ್ತಿದೆ. ಅಮೆರಿಕ ಒತ್ತಡ ಹೇರುವವರೆಗೆ ಉದ್ವಿಗ್ನತೆ ಕಡಿಮೆಯಾಗುವುದಿಲ್ಲ. ನಾಲ್ಕು ಸಂದರ್ಭಗಳಲ್ಲಿ, ಭಾರತ ಬೃಹತ್ ದಾಳಿಗಳನ್ನು ನಡೆಸಲು ಯೋಜಿಸಿತ್ತು. ನಾವು ನಿಜವಾಗಿಯೂ ಏನು ಮಾಡಬೇಕೆಂದು ಯೋಚಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದ್ದಾರೆ. ಮಸೂದ್ ಅಖ್ತರ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪಾಕ್‌ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್‌

    ಏ.33ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ(Pahalgam Terror Attack) ಮಾಡಿ 26 ಮಂದಿ ಅಮಾಯಕರ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ(Operation Sindoor) ಎಂಬ ಹೆಸರಿನಡಿ ಪಾಕ್‌ನ 9 ಸ್ಥಳಗಳಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ವಿಚಲಿತಗೊಂಡ ಪಾಕ್ ಭಾರತದ ಮೇಲೆ ಡ್ರೋನ್, ಶೆಲ್ ದಾಳಿಗೆ ಯತ್ನಿಸಿತ್ತು. ಆದರೆ ಭಾರತೀಯ ಸೇನೆ ಪಾಕ್‌ನ ಎಲ್ಲಾ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುವ ಮೂಲಕ ತಕ್ಕ ಉತ್ತರ ನೀಡಿದೆ.