Tag: ಪಾಕಿಸ್ತಾನ ಸೂಪರ್ ಲೀಗ್

  • ಆಪರೇಷನ್ ಸಿಂಧೂರ ಬಳಿಕ ಪಾಕ್ ಸೂಪರ್ ಲೀಗ್ ತೊರೆಯಲು ಮುಂದಾದ್ರಾ ವಿದೇಶಿ ಪ್ಲೇಯರ್ಸ್‌?

    ಆಪರೇಷನ್ ಸಿಂಧೂರ ಬಳಿಕ ಪಾಕ್ ಸೂಪರ್ ಲೀಗ್ ತೊರೆಯಲು ಮುಂದಾದ್ರಾ ವಿದೇಶಿ ಪ್ಲೇಯರ್ಸ್‌?

    ಇಸ್ಲಾಮಾಬಾದ್: ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ (Indian Army) ನಡೆಸಿದ `ಆಪರೇಷನ್ ಸಿಂಧೂರ’ (Operation Operation) ಬಳಿಕ ವಿದೇಶಿ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ (Pakistan Supre League) ತೊರೆಯಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಏ.22ರಂದು ಪಹಲ್ಗಾಮ್‌ನ (Pahalgam Terrorist Attack) ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ಉಗ್ರರ ದಾಳಿಯಲ್ಲಿ 26 ಜನರು ಪ್ರಾಣತೆತ್ತರು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸೇಡು ತೀರಿಸಿಕೊಂಡಿದೆ.ಇದನ್ನೂ ಓದಿ:ಮಾದಕ ಲುಕ್‌ನಲ್ಲಿ ಮಿಂಚಿದ ವೈಷ್ಣವಿ – ಕೊಲ್ತಾಳಲ್ಲಪ್ಪೋ… ಅಂದ್ರು ನೆಟ್ಟಿಗರು

    ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೂ ಪಾಕಿಸ್ತಾನ ಸೂಪರ್ ಲೀಗ್ ಪ್ರಕಟಗೊಂಡ ವೇಳಾಪಟ್ಟಿಯಂತೆ ಮುಂದುವರಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಿಳಿಸಿದೆ. ಈ ಕುರಿತು ಲೀಗ್‌ನಲ್ಲಿರುವ ಆರು ಫ್ರಾಂಚೈಸಿಗಳ ಮೂವರು ಮಾಧ್ಯಮ ವ್ಯವಸ್ಥಾಪಕರು ಮಾತನಾಡಿ, ಪ್ರತಿಯೊಂದು ಫ್ರಾಂಚೈಸಿಯೂ ಕನಿಷ್ಠ 5-6 ವಿದೇಶಿ ಆಟಗಾರರನ್ನು ಹೊಂದಿದ್ದು, `ಆಪರೇಷನ್ ಸಿಂಧೂರ’ ಬಳಿಕ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

    ಇಂದು ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ಪಂದ್ಯ ನಡೆಯುತ್ತಿದ್ದು, ಇನ್ನೂ 8, 9 ಮತ್ತು 10 ರಂದು ಇದೇ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಅರ್ಹತಾ ಪಂದ್ಯವು ಮೇ 13 ರಂದು ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ಎಲಿಮಿನೇಟರ್ ಪಂದ್ಯ 1 ಮತ್ತು 2, ಮಾರ್ಕ್ಯೂ ಈವೆಂಟ್‌ನ ಫೈನಲ್ ಎರಡೂ ಕ್ರಮವಾಗಿ ಮೇ 14, 16 ಮತ್ತು 18 ರಂದು ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ.

    ಆದರೆ ಇಲ್ಲಿಯವರೆಗೆ ಯಾವುದೇ ವಿದೇಶಿ ಆಟಗಾರರು ಲೀಗ್ ತೊರೆಯುವ ಕುರಿತು ಮಾತನಾಡಿಲ್ಲ ಹಾಗೂ ಯಾವುದೇ ಮನವಿಯನ್ನು ಸಲ್ಲಿಸಿಲ್ಲ ಎಂದು ಪಿಸಿಬಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.ಇದನ್ನೂ ಓದಿ: ಶಿವನ ದೇಗುಲದಲ್ಲಿ ಮಂಡಿಯೂರಿ 108 ಮೆಟ್ಟಿಲು ಹತ್ತಿದ ಉರ್ಫಿ

  • Pahalgam Terror Attack – ಭಾರತದಲ್ಲಿ ಪಾಕ್ ಟಿ20 ಲೀಗ್ ಪ್ರಸಾರ ಬಂದ್

    Pahalgam Terror Attack – ಭಾರತದಲ್ಲಿ ಪಾಕ್ ಟಿ20 ಲೀಗ್ ಪ್ರಸಾರ ಬಂದ್

    ಮುಂಬೈ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು (Pahalgam Terror Attack) ಖಂಡಿಸಿ ಭಾರತದಲ್ಲಿ, ಪಾಕಿಸ್ತಾನ ಸೂಪ‌ರ್ ಲೀಗ್ (Pakistan Super League) ಟಿ20 ಟೂರ್ನಿಯ ಪ್ರಸಾರವನ್ನು ಬಂದ್ ಮಾಡಲು ಫ್ಯಾನ್ ಕೋಡ್ ನಿರ್ಧರಿಸಿದೆ.

    ಮುಂಬೈ ಮೂಲದ ಡ್ರಮ್ ಸ್ಪೋರ್ಟ್ಸ್ ಮಾಲಿಕತ್ವದ ಫ್ಯಾನ್‌ ಕೋಡ್‌ನಲ್ಲಿ ಪಿಎಸ್ಎಲ್ ಪಂದ್ಯಗಳು ಪ್ರಸಾರಗೊಳ್ಳುತ್ತಿದ್ದವು. ಇದೇ ವೇಳೆ, ಟೂರ್ನಿಯ ಮೂಲ ಪ್ರಸಾರ ಹಕ್ಕು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಳಿ ಇದ್ದು, 20ಕ್ಕೂ ಹೆಚ್ಚು ಭಾರತೀಯರು ಕ್ಯಾಮೆರಾ, ಪ್ರೊಡಕ್ಷನ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

    ಪಹಲ್ಗಾಮ್‌ ದಾಳಿಯ ಬಳಿಕ ಉಭಯ ದೇಶಗಳ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಭಾರತೀಯ ಸಿಬ್ಬಂದಿಗೆ ತಕ್ಷಣ ಪಾಕಿಸ್ತಾನ ತೊರೆಯುವಂತೆ ಪಿಸಿಬಿ ಸೂಚಿಸಿದೆ ಎಂದು ವರದಿಯಾಗಿದೆ.

    ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದರು. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಏ. 24ರಂದು ಸರ್ವಪಕ್ಷಗಳ ಸಭೆಯನ್ನು ನಡೆಸಿತ್ತು. ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

  • ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಇಸ್ಲಾಮಾಬಾದ್‌: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಐಪಿಎಲ್‌ನಿಂದಾಗಿ ಪ್ರೇರಿತಗೊಂಡ ವಿದೇಶಿ ಕ್ರಿಕೆಟ್‌ ಮಂಡಳಿಗಳು ತಮ್ಮ ದೇಶಗಳಲ್ಲೂ ಟಿ20 ಲೀಗ್‌ಗಳನ್ನ ಆಯೋಜಿಸಲು ಪ್ರಾರಂಭಿಸಿವೆ. ಆದ್ರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌ (Wasim Akram) ತನ್ನ ದೇಶದ ಸೂಪರ್‌ ಲೀಗ್‌ಗಿಂತಲೂ ಭಾರತದ ಐಪಿಎಲ್‌ ದೊಡ್ಡದು ಎಂದು ಬಣ್ಣಿಸಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಾಸಿಂ ಅಕ್ರಮ್‌, ಪಾಕಿಸ್ತಾನದ ಸೂಪರ್‌ ಲೀಗ್‌ (Pakistan Super League) ಗಿಂತ ಐಪಿಎಲ್‌ ದೊಡ್ಡದು. ನಾನು ಐಪಿಎಲ್‌ ಹಾಗೂ ಪಿಎಸ್‌ಎಲ್‌ನಲ್ಲಿ ಕೆಲಸ ಮಾಡಿದ್ದೇನೆ. ಎರಡನ್ನ ಹೋಲಿಸೋದಕ್ಕೇ ಸಾಧ್ಯವಿಲ್ಲ, ಏಕೆಂದರೆ ಐಪಿಎಲ್‌ ತುಂಬಾ ದೊಡ್ಡ ಕ್ರೀಡೆ. ಆದ್ರೆ ಪಾಕಿಸ್ತಾನದ ಸೂಪರ್‌ ಲೀಗ್‌ ಅನ್ನು ಮಿನಿ ಐಪಿಎಲ್‌ ಎಂದು ಕರೆಯಬಹುದು, ಪಾಕ್‌ಗೆ ಅದೇ ದೊಡ್ಡದು ಎಂದಿದ್ದಾರೆ.

    ವಿಶ್ವದ ದುಬಾರಿ ಕ್ರೀಡೆ:
    2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ವಿಶ್ವದ ದುಬಾರಿ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ದೇಶ-ವಿದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಗಳನ್ನೂ ಮಾಡುತ್ತಿದ್ದಾರೆ. ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಗಳಿಗೆ ಸೇರಲು ಇದು ಉತ್ತಮ ವೇದಿಕೆಯೂ ಆಗಿದೆ.

    IPL

    ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌:
    ಪ್ರತಿಷ್ಠಿತ ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ, ಐಪಿಎಲ್‌ಗಿಂತಲೂ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಸಿದ್ಧತೆ ನಡೆಯುತ್ತಿದೆ. ಈಗಾಗಲೇ 2024ರ ಐಪಿಎಲ್‌ ಟೂರ್ನಿಗೂ ಸಾಕಷ್ಟು ಹಣ ಹೂಡಿಕೆ ಮಾಡಿರುವುದಾಗಿ ಪ್ರಮುಖ ಮೂಲಗಳು ತಿಳಿಸಿವೆ.

    2024ರ ಐಪಿಎಲ್‌ಗೆ ಭಾರೀ ಸಿದ್ಧತೆ:
    2024ರ ಐಪಿಎಲ್‌ ಟೂರ್ನಿಯೂ ಮಾರ್ಚ್‌ ತಿಂಗಳಿನಿಂದ, ಮೇ ಅಂತ್ಯದ ವರೆಗೆ ನಡೆಯುವ ಸಾಧ್ಯತೆಗಳಿವೆ. 2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ನೋಡಿಕೊಂಡು ಐಪಿಎಲ್‌ ಟೂರ್ನಿಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇನ್ನೂ 2024ರ ಐಪಿಎಲ್‌ಗೆ ಆಸೀಸ್‌ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಪಾಲಾಗಿದ್ದಾರೆ. ಮತ್ತೊಬ್ಬ ಆಸೀಸ್‌ ಆಲ್‌ರೌಂಡರ್‌ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್‌ ಪಾಲಾಗಿದ್ದು, ಐಪಿಎಲ್‌ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

  • ಫೀಲ್ಡರ್ ಕಡೆಗೆ ಬಾಲ್ ಎಸೆದು ಕೋಪ ಪ್ರದರ್ಶಿಸಿದ ಬೌಲರ್ : ವಿಡಿಯೋ ನೋಡಿ

    ಫೀಲ್ಡರ್ ಕಡೆಗೆ ಬಾಲ್ ಎಸೆದು ಕೋಪ ಪ್ರದರ್ಶಿಸಿದ ಬೌಲರ್ : ವಿಡಿಯೋ ನೋಡಿ

    ದುಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿರುವ ಸೂಪರ್ ಲೀಗ್ ಸರಣಿಯ ಪಂದ್ಯದ ವೇಳೆ ಖಾಲಿ ಕ್ರೀಡಾಂಗಣದ ಫೋಟೋ ವೈರಲ್ ಆದ ಬಳಿಕ, ಈ ಬಾರಿ ಆನ್ ಫೀಲ್ಡ್ ನಲ್ಲಿ ಬೌಲರ್ ಒಬ್ಬ ತನ್ನ ಸಹ ಆಟಗಾರನ ಮೇಲೆ ಕೋಪ ಪ್ರದರ್ಶಿಸಿದ ವಿಡಿಯೋ ವೈರಲ್ ಆಗಿದೆ.

    ಲೀಗ್ ನಲ್ಲಿ ಬುಧವಾರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಲಾಹೋರ್ ತಂಡಗಳ ನಡುವಿನ ಪಂದ್ಯದ ವೇಳೆ ಈ ವಿಶೇಷ ಘಟನೆ ನಡೆದಿದೆ.

    ಗೆಲುವಿನ ಸನಿಹದಲ್ಲಿದ್ದ ಲಾಹೋರ್ ತಂಡದ ಬೌಲರ್ ಸೊಹೈಲ್ ಖಾನ್, ಬೌಂಡರಿಯ ಗೆರೆ ಬಳಿ ಇದ್ದ ಯಾಸಿರ್ ಷಾ ಗಮನ ಸೆಳೆಯಲು ಪ್ರಯತ್ನಿಸಿ ವಿಫಲರಾಗಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸೊಹೈಲ್, ಯಾಸಿರ್ ಕಡೆಗೆ ಬಾಲ್ ಎಸೆದಿದ್ದಾರೆ.

    ಅದೃಷ್ಟವಶಾತ್ ಸೊಹೈಲ್ ಎಸೆದ ಬಾಲ್ ಯಾಸಿರ್ ತಲೆಗೆ ಬೀಳದೇ ಪಕ್ಕದಲ್ಲಿ ಬಿದ್ದಿದೆ. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಬಳಿಕ ಯಾಸಿರ್ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಚೆಂಡನ್ನು ಬೌಲರ್ ಕಡೆ ಎಸೆದಿದ್ದಾರೆ.

    ಈ ವೇಳೆ ಕ್ರೀಡಾಂಗಣದಲ್ಲಿದ್ದ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಇಬ್ಬರು ಆಟಗಾರರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ಕೊನೆಗೆ ಲಾಹೋರ್ ತಂಡ 17 ರನ್ ಗೆಲುವು ಪಡೆಯಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವಿನ ಸನ್ನಿವೇಶದ ವಿಡಿಯೋ ಹೆಚ್ಚು ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.

    ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಲೀಗ್ ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ ಸನ್ ಈ ಘಟನೆಯನ್ನು ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ತಮಾಷೆಯ ಸನ್ನಿವೇಶ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    https://twitter.com/KP24/status/974031507919720449