Tag: ಪಾಕಿಸ್ತಾನ ನಟಿ

  • ಪಾಕ್ ನಟಿಯಿಂದ ಸುಷ್ಮಾ ಸ್ವರಾಜ್​​ಗೆ ಅವಮಾನ- ಭಾರತೀಯರಿಂದ ಖಡಕ್ ತಿರುಗೇಟು

    ಪಾಕ್ ನಟಿಯಿಂದ ಸುಷ್ಮಾ ಸ್ವರಾಜ್​​ಗೆ ಅವಮಾನ- ಭಾರತೀಯರಿಂದ ಖಡಕ್ ತಿರುಗೇಟು

    ಇಸ್ಲಾಮಾಬಾದ್: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಪಾಕಿಸ್ತಾನದ ನಟಿ ಅವಮಾನ ಮಾಡಿದ್ದು, ಭಾರತೀಯರು ಅವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

    ವೀಣಾ ಬುಧವಾರ ತಮ್ಮ ಟ್ವಿಟ್ಟರಿನಲ್ಲಿ RIH ಎಂದು ಟ್ವೀಟ್ ಮಾಡಿದ್ದಾರೆ. RIH ಎಂದರೆ ರೆಸ್ಟ್ ಇನ್ ಹೆಲ್ (ನಿಮಗೆ ನರಕ ಸಿಗಲಿ) ಎಂದರ್ಥ. ವೀಣಾ ಅವರು ತಮ್ಮ ಟ್ವೀಟ್‍ನಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಸುಷ್ಮಾ ಸ್ವರಾಜ್ ಅವರ ನಿಧನದ ಸಂದರ್ಭದಲ್ಲಿ ಈ ರೀತಿ ಟ್ವೀಟ್ ಮಾಡಿದ್ದಕ್ಕೆ ಅವರ ಮೇಲೆ ಅನುಮಾನ ಶುರುವಾಗಿದೆ.

    ಈ ಟ್ವೀಟ್ ನೋಡಿ ಭಾರತೀಯರು ವೀಣಾ ಮಲ್ಲಿಕ್‍ಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ. ಕೆಲವರು, ನೀನು ಈ ದೇಶದಲ್ಲಿದ್ದೆ. ನೀನು ಈಗ ಏನೇ ಆಗಿದ್ದರು ಅದಕ್ಕೆ ಈ ದೇಶ ಕಾರಣ. ಆದರೆ ನೀನು ಅಸಹ್ಯಕರ ಅಲೋಚನೆ ದ್ವೇಷ ತುಂಬಿದ ವ್ಯಕ್ತಿ. ನಿಧನ ಹೊಂದಿದ್ದ ಮಹಿಳೆಯನ್ನು ಸಹ ನೀನು ಬಿಡುವುದಿಲ್ಲ. ನಿನಗೆ ನಾಚಿಕೆಯಾಗಬೇಕು. ನೀನು ಖಂಡಿತವಾಗಿಯೂ ನರಕಕ್ಕೆ ಹೋಗುತ್ತೀಯಾ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದ್ದರು.

    ಮತ್ತೆ ಕೆಲವರು, ನೀನು ಈಗಾಗಲೇ ನರಕದಲ್ಲಿ ಅಂದರೆ ಪಾಕಿಸ್ತಾನದಲ್ಲಿ ಇದ್ದೀಯಾ. ನಿನಗೆ ಶುಭಾಶಯಗಳು ಎಂದು ಪ್ರತಿಕ್ರಿಯಿಸಿದ್ದಾರೆ. ವೀಣಾ ಮಲ್ಲಿಕ್ ಟ್ವೀಟ್ ಭಾರತೀಯರು ರೀ-ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ರಾತ್ರಿ 9.35ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ರಾತ್ರಿ 10 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು.

  • ಕ್ಯಾಪ್ಟನ್ ಕೂಲ್ ಧೋನಿ ನಡೆಗೆ ಪಾಕಿಸ್ತಾನದ ನಟಿ ಫಿದಾ

    ಕ್ಯಾಪ್ಟನ್ ಕೂಲ್ ಧೋನಿ ನಡೆಗೆ ಪಾಕಿಸ್ತಾನದ ನಟಿ ಫಿದಾ

    ಇಸ್ಲಾಮಾಬಾದ್: ಭಾರತ ಕ್ರಿಕೆಟ್ ತಂಡದ ಆಟಗಾರ ಎಂ.ಎಸ್ ಧೋನಿ ಅವರು ನಡೆಗೆ ಪಾಕಿಸ್ತಾನದ ನಟಿ ಫಿದಾ ಆಗಿದ್ದಾರೆ. ಅಲ್ಲದೆ 1998ರಲ್ಲಿ ನಡೆದ ಒಂದು ಘಟನೆಯೊಂದು ಹಂಚಿಕೊಂಡಿದ್ದಾರೆ.

    ಪಾಕಿಸ್ತಾನದ ನಟಿ ಮತಿರಾ ಖಾನ್ ಅವರು ಏಷ್ಯಾ ಕಪ್ ಸಂದರ್ಭದಲ್ಲಿ ಧೋನಿ ತಮ್ಮ ಜೊತೆ ಹೇಗೆ ನಡೆದುಕೊಂಡರು ಎಂಬುದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡ ತಂಗಿದ್ದ ಹೋಟಿಲಿನಲ್ಲಿ ಮತಿರಾ ಖಾನ್ ತಂಗಿದ್ದರು. ಈ ವೇಳೆ ಮತಿರಾ ತಮ್ಮ ನೆಚ್ಚಿನ ಪಾಕಿಸ್ತಾನದ ಆಟಗಾರನ ಆಟೋಗ್ರಾಫ್ ಪಡೆಯಲು ಹೋಗಿದ್ದರು.

    ನಾನು ಪಾಕಿಸ್ತಾನ ಕ್ರಿಕೆಟಿಗರ ಬಳಿ ಆಟೋಗ್ರಾಫ್ ಕೇಳಲು ಹೋಗಿದೆ. ಈ ವೇಳೆ ಕೆಲವು ಆಟಗಾರರು ನನಗೆ ಆಟೋಗ್ರಾಫ್ ನೀಡಿದ್ದರು. ಆದರೆ ಕೆಲವರು ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದು ನನ್ನ ಮೇಲೆ ರೇಗಿದ್ದರು. ಅವರು ನನ್ನ ಮೇಲೆ ರೇಗಾಡಿದ್ದರಿಂದ ನನ್ಮ ಮನಸ್ಸಿಗೆ ನೋವಾಗಿ ಅತ್ತುಬಿಟ್ಟಿದ್ದೆ. ಬಳಿಕ ನಾನು ನನ್ನ ಟೇಬಲ್ ಬಳಿ ಹೋಗುತ್ತಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ನಾವು ಕೂಡ ಕ್ರಿಕೆಟ್ ಆಟಗಾರರು. ನಮ್ಮ ಆಟೋಗ್ರಾಫ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.

    ನಾನು ಅವರ ಧ್ವನಿ ಕೇಳಿ ಹಿಂದೆ ತಿರುಗಿ ನೋಡಿದ್ದಾಗ ಅಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದರು. ಧೋನಿ ನನಗೆ ಆಟೋಗ್ರಾಫ್ ಮಾತ್ರವಲ್ಲದೆ ಅವರ ಪಕ್ಕದಲ್ಲಿ ಇದ್ದ ಸೀಟ್‍ನಲ್ಲಿ ಕುಳಿತುಕೊಳ್ಳಲು ಹೇಳಿ ನನ್ನ ಜೊತೆ ಮಾತುಕತೆ ನಡೆಸಿದ್ದರು ಎಂದು ಮತಿರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

  • ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

    ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

    ಮುಂಬೈ: ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಅಂತಾ ಪಾಕಿಸ್ತಾನದ ನಟಿ ಸಜಲ್ ಅಲಿ ಇನ್ ಸ್ಟಾಗ್ರಾಂನಲ್ಲಿ ನಟಿ ಶ್ರೀದೇವಿ ಜೊತೆಯಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

    ಸಜಲ್ ಅಲಿ ಈ ಹಿಂದೆ ತೆರೆಕಂಡಿದ್ದ ಶ್ರೀದೇವಿಯವರ ‘ಮಾಮ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಮಲ ಮಗಳಾಗಿ ಸಜಲ್ ಅಭಿನಯ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಜಲ್ ಮೊದಲ ಚಿತ್ರದಲ್ಲೇ ಶ್ರೀದೇವಿಯಂತಹ ದೊಡ್ಡ ನಟಿಯ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತಾ ಹೇಳಿಕೊಂಡಿದ್ರು.

    2017ರಲ್ಲಿ ಮಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಜಲ್ ಅವರ ಸ್ವಂತ ತಾಯಿ ವಿಧಿವಶರಾಗಿದ್ದರು. ಅನಂತರ ಶ್ರೀದೇವಿ ಸಜಲ್ ಗೆ ಧೈರ್ಯ ತುಂಬಿ ಸ್ವಂತ ಮಗಳಂತೆ ಕಾಣುತ್ತಿದ್ದರು. ಶ್ರೀದೇವಿ ಸೆಟ್‍ನಲ್ಲಿ ತುಂಬಾ ಪ್ರೊಫೆಷನಲ್ ಆಗಿರುತ್ತಿದ್ದರು. ಆದ್ರೆ ಸಜಲ್ ಜೊತೆ ಅವರಿಗಿದ್ದ ಬಾಂಧವ್ಯವೇ ಬೇರೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಸಜಲ್ ತಾಯಿ ಮರಣ ಹೊಂದಿದಾಗ ಶ್ರೀದೇವಿಗೆ ಕರೆ ಮಾಡಿ ಸಜಲ್ ಅತ್ತಿದ್ದರು.

    ಆದ್ರೆ ಚಿತ್ರದಲ್ಲಿ ತಾಯಿಯಾಗಿದ್ದ ಶ್ರೀದೇವಿ ಶನಿವಾರದಂದು ದುಬೈನಲ್ಲಿ ಸಾವನ್ನಪ್ಪಿದ್ದಕ್ಕೆ, ನಾನು ಮಗದೊಮ್ಮ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಸಜಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ರವಿ ಉದಯವಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾಮ್, 2017 ಜುಲೈ ನಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಶ್ರೀದೇವಿ, ಸಜಲ್ ಅಲಿ, ನವಾಜುದ್ದೀನ್ ಸಿದ್ದೀಕಿ, ಅಕ್ಷಯ್ ಖನ್ನಾ ಮತ್ತು ಅದ್ನಾನ್ ಸಿದ್ದೀಕಿ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿತ್ತು.