Tag: ಪಾಕಿಸ್ತಾನ ಜಿಂದಾಬಾದ್‌

  • ಭದ್ರಾವತಿ ಈದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ

    ಭದ್ರಾವತಿ ಈದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ

    ಶಿವಮೊಗ್ಗ: ಭದ್ರಾವತಿಯಲ್ಲಿ (Bhadravathi) ನಡೆದ ಈದ್ ಮಿಲಾದ್ ಮೆರವಣಿಗೆ (Eid Procession) ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲ ಯುವಕರು ಪಾಕಿಸ್ತಾನ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ್ದಾರೆ.

    ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಸತ್ಯಾಸತ್ಯತೆ ಜೊತೆಗೆ ಘೋಷಣೆ ಕೂಗಿದವರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಈದ್‌ಮಿಲಾದ್ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಹಾಡು ಪ್ರಸಾರ ಮೂವರ ವಿರುದ್ಧ ಕೇಸ್ ದಾಖಲು

     

    ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಮೊಗ್ಗ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಇಂದು ಬೆಳಗ್ಗೆಯಿಂದ 12 ಸೆಕೆಂಡ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ್ದೇವೆ ಎಂದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಲು ಪ್ರಚೋದನೆ ಏನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈಗಾಗಲೇ ಕಳುಹಿಸಲಾಗಿದೆ. ಯಾವಾಗ, ಯಾರು, ಎಲ್ಲಿ ವಿಡಿಯೋ ಮಾಡಿದ್ದಾರೆ. ಅದರ ಪರಿಶೀಲನೆ ಆಗಲಿದೆ. ಪ್ರಕರಣದ ತನಿಖೆಗಾಗಿ 3 ಇನ್ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 3 ಟೀಂ ರಚಿಸಿದ್ದೇವೆ. ವಿಡಿಯೋದಲ್ಲಿ ಇರುವವರನ್ನು ಗುರುತಿಸುತ್ತಿದ್ದೇವೆ. ವಿಡಿಯೋದಲ್ಲಿರುವವರ ಶೋಧಕ್ಕಾಗಿಯೇ ಒಂದು ಟೀಂ ಟೀಮ್ ಕೆಲಸ ಮಾಡಲಿದೆ. ಈದ್ ಮೆರವಣಿಗೆ ವೇಳೆ ವಿಡಿಯೋ ರೆಕಾರ್ಡಿಂಗ್ ಸಹ ಮಾಡಲಾಗಿತ್ತು. ಎಲ್ಲವನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

  • ವಿಧಾನಸೌಧದಲ್ಲೇ ಪಾಕ್‌ ಜಿಂದಾಬಾದ್‌ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ

    ವಿಧಾನಸೌಧದಲ್ಲೇ ಪಾಕ್‌ ಜಿಂದಾಬಾದ್‌ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ

    ಬೆಂಗಳೂರು: ರಾಜ್ಯಸಭೆ ಚುನಾವಣಾ (Rajya Sabha Election) ವೇಳೆ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣ ನಡೆದು 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದೆ.

    ಕಾಂಗ್ರೆಸ್‌ ಸದಸ್ಯ ನಾಸಿರ್ ಹುಸೇನ್ (Nasir Hussain) ಅವರು ಗೆದ್ದ ಖುಷಿಯಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ್ದರು.ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ಮೂವರು ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದರು.  ಇದನ್ನೂ ಓದಿ: ಮಣಿಪುರದ ನೂತನ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇಮಕ

    ಪೊಲೀಸರು ದೋಷಾರೋಪ ಪಟ್ಟಿಯನ್ನು (Chargesheet) ಸಲ್ಲಿಸಿಲ್ಲ ಅಷ್ಟೇ ಅಲ್ಲದೇ ಇಲ್ಲಿಯವರೆಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

    ನವ ಮಾಸಗಳೇ ಕಳೆದರೂ ಅವರು ಪೊಲೀಸರ ಮುಂದೆ ಹಾಜರಾಗುವ ಸಾಹಸ ಮಾಡಿಲ್ಲ. ಸದ್ಯ ಪೊಲೀಸರು (Police) ಏನು ಮಾಡಲು ಆಗದೇ ಒದ್ದಾಡುತ್ತಿದ್ದಾರೆ. ಪೊಲೀಸರ ಈ ನಡೆ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

     

  • ನಾಸೀರ್ ಹುಸೇನ್‌ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳೇ ಇಲ್ಲ: ಸಚಿವ ನಾಗೇಂದ್ರ

    ನಾಸೀರ್ ಹುಸೇನ್‌ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳೇ ಇಲ್ಲ: ಸಚಿವ ನಾಗೇಂದ್ರ

    ಬಳ್ಳಾರಿ: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್‌ (Nasser Hussain) ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ (Pakistan Zindbad) ಎಂದು ಹೇಳಿಯೇ ಇಲ್ಲ. ನೂರಕ್ಕೆ ನೂರು ಪರ್ಸೆಂಟ್ ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ. ನೂರಕ್ಕೆ ಸಾವಿರ ಪರ್ಸೆಂಟ್ ಅಂದಿಲ್ಲ ಎಂದು ಬಳ್ಳಾರಿ (Ballari) ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ (Nagendra) ಹೇಳಿದ್ದಾರೆ.  ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್‌ ಕೇಸ್‌… ಆರೋಪಿಗಳ ಪತ್ತೆಗೆ ಭಾರೀ ಕಸರತ್ತು – 15 ಜನರ ಧ್ವನಿ ಪರೀಕ್ಷೆ ನಡೆಸಿದ್ದ ಎಫ್‌ಎಸ್‌ಎಲ್ – ಕೊನೆಗೆ ಅರೆಸ್ಟ್‌

    ಕಳೆದ ಮೂರು ದಿನಗಳ ಹಿಂದೆ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್‌ಗೆ ಬಳ್ಳಾರಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ನಾಗೇಂದ್ರ ಅವರು, ಯಾರು ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ. ವಿಡಿಯೋವನ್ನು ಕೆಲವರು ಎಡಿಟ್ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್‌

     

    ವಿಧಿವಿಜ್ಞಾನ ಪ್ರಯೋಗಾಲಯದ ವರದಿ (FSL) ಇನ್ನೂ ಬಂದೇ ಇಲ್ಲ ಎಂದು ಮಾಧ್ಯಮದವರ ಜೊತೆ ವಾದ ಮಾಡಿದ ಅವರು, ಸಾಮಾನ್ಯವಾಗಿ ಅಂತಹ ಪ್ರಕರಣವಾದಾಗ ನಡೆದಾಗ ಬಂಧನ ಮಾಡುವುದು ಒಂದು ಅಭ್ಯಾಸ. ಮಗ್ದರನ್ನು ತೆಗೆದುಕೊಂಡು ಹೋಗಿ ಒಳಗೆ ಹಾಕಿ ಆಮೇಲೆ ಜಾಮೀನು ಕೊಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ

    ನಮ್ಮ ಭಾರತದಲ್ಲಿ ಯಾವನಾದರೂ ಪಾಕಿಸ್ತಾನ್ ಜಿಂದಾಬಾದ್ ಅಂದಿದ್ದರೆ ಅವನನ್ನ ಗಲ್ಲಿಗೇರಿಸಿದರಲ್ಲಿ ತಪ್ಪಿಲ್ಲ. ಅವರು ಹೇಳಿದ್ದು ನಾಸಿರ್ ಸಾಬ್ ಅಂದಿದ್ದಾರೆ. ಫಾಸ್ಟ್ ಆಗಿ ತೋರಿಸಿದಾಗ ಹಾಗೆ ಕೇಳುತ್ತದೆ. ಇದು ನಾನು ನೋಡಿರುವ ಸತ್ಯ. ಎಫ್‌ಎಸ್‌ಎಲ್‌ ವರದಿಯಲ್ಲಿ ಸತ್ಯ ಬರತ್ತದೆ. ನಮ್ಮ ಕರ್ನಾಟಕದಲ್ಲಿ ಯಾರು ಹಂಗೆ ಮಾಡಲ್ಲ, ಮಾಡಿದ್ರೆ ಅವನನ್ನ ಗಲ್ಲಿಗೇರಿಸಿದ್ರು ತಪ್ಪಿಲ್ಲ ಎಂದಿದ್ದಾರೆ.

     

  • ಐಎಎಸ್‌ ಅಧಿಕಾರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಪಾಕ್‌ ಪ್ರೇಮಿ ಮುನಾವರ್!

    ಐಎಎಸ್‌ ಅಧಿಕಾರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಪಾಕ್‌ ಪ್ರೇಮಿ ಮುನಾವರ್!

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿ ಪಾಕ್ ಪ್ರೇಮ ಮೆರೆದಿದ್ದ ಮುನಾವರ್ ಅಹಮದ್‌ (Munawar Ahmad) ಐಎಎಸ್‌ ಅಧಿಕಾರಿಯ (IAS Officer) ಮನೆಯಲ್ಲಿ ಬಾಡಿಗೆ ಇದ್ದ.

    ಹೌದು. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿರುವ ಜಯಮಹಲ್ 1ನೇ ಕ್ರಾಸ್‌ನ ನಂಬರ್ 27ಸಿ ನಂಬರ್‌ನ ಮನೆಯಲ್ಲಿ ಆರೋಪಿ ಮುನಾವರ್ ಕುಟುಂಬದೊಂದಿಗೆ ವಾಸವಾಗಿದ್ದ.

    ಮುನಾವರ್ ನೆಲೆಸಿದ್ದ ಮನೆ ಜೆ.ಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ ಆರೋಪಿ ಮನೆಗೆ ಜೆಸಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುನಾವರ್‌ ಬಂಧನದ ಬೆನ್ನಲ್ಲೇ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದಾರೆ. ಇದನ್ನೂ ಓದಿ: ಮುಕ್ಕಾಲು ಗಂಟೆಯಲ್ಲಿ ಬರೋಬ್ಬರಿ 10 ಬಸ್ಸಿನಲ್ಲಿ ಬಾಂಬರ್‌ ಸಂಚಾರ!

    ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ (Syed Naseer Hussain) ಬೆಂಬಲಿಗರಾದ ಬ್ಯಾಡಗಿಯ ಮೊಹಮ್ಮದ್‌ ಶಾಫಿ ನಾಶಿಪುಡಿ, ಬೆಂಗಳೂರಿನ ಮುನಾವರ್ ಅಹ್ಮದ್, ದೆಹಲಿಯ ಮೊಹಮ್ಮದ್‌ ಇಲ್ತಾಜ್ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದರು. ಬಂಧಿತ ಮೂವರ ಪೈಕಿ ನಾಶೀಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್‌ಗೆ ಇಬ್ಬರು ಆರೋಪಿಗಳಿಗೂ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್‌ ನೀರು!

    ಸದ್ಯ ಮೂವರನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವ ಪರ ಏನು? ಅವರ ಉದ್ದೇಶ ಏನಾಗಿತ್ತು? ಈ ವೇಳೆ ಬೇರೆ ಯಾರಾದರೂ ಇವರಿಗೆ ಬೆಂಬಲ ನೀಡಿದ್ರಾ? ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಆಕಸ್ಮಿಕವೇ? ಅಥವಾ ಉದ್ದೇಶ ಪೂರ್ವಕವೇ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ.

     

  • ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್‌ ಮೂಲಗಳು

    ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್‌ ಮೂಲಗಳು

    – ಆಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಲಾಗಿದೆ
    – ಪಬ್ಲಿಕ್‌ ಟಿವಿಗೆ ಖಾಸಗಿ ಎಫ್‌ಎಸ್‌ಎಲ್‌ ತಜ್ಞ ಫಣೀಂದ್ರ ಹೇಳಿಕೆ

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ (Pakistan Zindabad) ಘೋಷಣೆ ಕೂಗಿದ ಸಂಬಂಧ ಇನ್ನೂ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಯ ಬಗ್ಗೆ ಸರ್ಕಾರ ಅಧಿಕೃತವಾಗಿ ಹೇಳಿಲ್ಲ. ಆದರೆ ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ ಎಂದು ಪಬ್ಲಿಕ್‌ ಟಿವಿಗೆ ಉನ್ನತ ಪೊಲೀಸ್‌ ಮೂಲಗಳು (Police Source) ತಿಳಿಸಿವೆ. ಅಷ್ಟೇ ಅಲ್ಲದೇ ಖಾಸಗಿ ಎಫ್‌ಎಸ್‌ಎಲ್‌ ತಜ್ಞರ ಪರೀಕ್ಷೆಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ ವಿಚಾರ  ದೃಢಪಟ್ಟಿದೆ.

    ಹೌದು. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸರ್ಕಾರ ಎಫ್‌ಎಸ್‌ಎಲ್‌ಗೆ ವಿಡಿಯೋವನ್ನು ಕಳುಹಿಸಿಕೊಟ್ಟಿತ್ತು. ಎಫ್‌ಎಸ್‌ಎಲ್‌ಗೆ ಕಳುಹಿಸಿದ ಬಳಿಕ ಇಲ್ಲಿಯವರೆಗೆ ವಿಡಿಯೋದಲ್ಲಿ ಘೋಷಣೆ ಕೂಗಲಾಗಿದ್ಯಾ? ಇಲ್ಲವೇ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.

     

    ಗೃಹ ಸಚಿವ ಪರಮೇಶ್ವರ್‌ (Parameshwar) ಜೊತೆ ಈ ಬಗ್ಗೆ ಕೇಳಿದಾಗ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಮೇಲೆ‌ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆದು ತನಿಖೆ ಮಾಡಿ ವಾಯ್ಸ್ ರೆಕಾರ್ಡ್ ಸಹಾ ಮಾಡಿದ್ದೇವೆ. ಧ್ವನಿ (Voice) ತಾಳೆಯಾಗಬೇಕು. ಒಂದು ವಾಹಿನಿಯದ್ದು ಅಲ್ಲ ಸಾಕಷ್ಟು ಕ್ಲಿಪ್ ಇದೆ. ಎಲ್ಲವನ್ನೂ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ – ಎನ್‌ಐಎಗೆ ಕೇಸ್‌ ವರ್ಗಾವಣೆ

    ಸರ್ಕಾರದ ಕಡೆಯಿಂದ ಧ್ವನಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಾರದೇ ಇದ್ದರೂ ಉನ್ನತ ಪೊಲೀಸ್‌ ಮೂಲಗಳ ಪ್ರಕಾರ ವಿಡಿಯೋ ಅಸಲಿಯಾಗಿದ್ದು ತಿರುಚಿಲ್ಲ. ಪಾಕ್‌ ಪರ ಘೋಷಣೆ ಕೂಗಿದ್ದು ನಿಜ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ  ಸಿಕ್ಕಿದೆ. ಈ ಮಾಹಿತಿಗೆ ಪೂರಕ ಎಂಬಂತೆ ಒಟ್ಟು 8 ಮಂದಿ ನಾಸೀರ್‌ ಹುಸೇನ್‌ ಬೆಂಬಲಿಗರನ್ನು ವಶಕ್ಕೆ ಪಡೆದು ಧ್ವನಿಯನ್ನು ಪರೀಕ್ಷಿಸಲಾಗಿದೆ. ಪರೀಕ್ಷೆ ಮಾಡಿದ್ದರಿಂದಲೇ ಅನುಮಾನ ಜಾಸ್ತಿಯಾಗಿದೆ. ಒಂದು ವೇಳೆ ಧ್ವನಿ ಪರೀಕ್ಷೆ ಮಾಡದೇ ಇದ್ದಿದ್ದರೆ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಿಲ್ಲ ಎನ್ನುವುದು ದೃಢಪಡುತ್ತಿತ್ತು. ಆದರೆ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆನ್ನಲ್ಲೇ ವಿಡಿಯೋದಲ್ಲಿರುವ ಘೋಷಣೆ ಅಸಲಿ ಎಂಬ ವಿಶ್ಲೇಷಣೆ ವ್ಯಕ್ತವಾಗುತ್ತದೆ.

     

    ಪಾಕ್‌ ಪರ ಘೋಷಣೆ ಕೂಗಿದ್ದು ನಿಜ
    ರಾಜ್ಯ ಸರ್ಕಾರ ಸರ್ಕಾರಿ ಎಫ್‌ಎಸ್‌ಎಲ್‌ಗೆ ವಿಡಿಯೋ ಕಳುಹಿಸಿದರೆ ಅದೇ ವಿಡಿಯೋವನ್ನು ಖಾಸಗಿಯವರು ಪರೀಕ್ಷೆ ನಡೆಸಿದ್ದಾರೆ. ಖಾಸಗಿಯವರು ನಡೆಸಿದ ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ನಾಸೀರ್‌ ಸಾಬ್‌ ಜಿಂದಾಬಾದ್‌ ಜೊತೆಗೆ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಿದ ವಿಡಿಯೋ ಅಸಲಿ ಎಂದು ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಹೇಳಿದ್ದಾರೆ. ಇದನ್ನೂ ಓದಿ: ಬಾಂಬ್ ಬ್ಲಾಸ್ಟ್ ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ – ಭರವಸೆ ಕೊಟ್ಟು ಸರ್ಕಾರ ಸೈಲೆಂಟ್

    ಈ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಫಣೀಂದ್ರ ಅವರು, ವಿಡಿಯೋ ಸಾಚಾತನ ತಿಳಿಯಲು ಫ್ರೇಂ ಬೈ ಫ್ರೇಂ ಪರೀಕ್ಷೆ ಮಾಡಲಾಗಿದೆ. ವಿಡಿಯೋದಲ್ಲಿರುವ ಧ್ವನಿಯ ಸಾಚಾತನ ತಿಳಿಯಲು ಪದ, ಉಚ್ಛಾರಗಳ ಪರೀಕ್ಷೆ ಮಾಡಲಾಗಿದೆ. ಶಬ್ದ ವಿಜ್ಞಾನ ಅಥವಾ ಧ್ವನಿ ವಿಜ್ಞಾನ ವಿಶ್ಲೇಷಣೆಯಲ್ಲಿ ಕಂಡು ಬಂದ ಅಂಶ ಏನೆಂದರೆ ವಿಡಿಯೋದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿರುವ ಸಾಧ್ಯತೆಯೇ ಹೆಚ್ಚು ಹಾಗೂ ಸಂಭವನೀಯ ಎಂದು ತಿಳಿಸಿದ್ದಾರೆ.

    ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

     

  • ಪಾಕ್‌ ಪರ ಘೋಷಣೆ – ಎಫ್‌ಎಸ್‌ಎಲ್‌ ವರದಿ ಇನ್ನೂ ಬಂದಿಲ್ಲ : ಪರಮೇಶ್ವರ್

    ಪಾಕ್‌ ಪರ ಘೋಷಣೆ – ಎಫ್‌ಎಸ್‌ಎಲ್‌ ವರದಿ ಇನ್ನೂ ಬಂದಿಲ್ಲ : ಪರಮೇಶ್ವರ್

    ಬೆಂಗಳೂರು: ವಿಧಾನಸೌಧದಲ್ಲಿ ಪಾಕ್‌ ಘೋಷಣೆ (Pakistan Zindabad Slogan) ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ (FSL Report) ಇನ್ನೂ ಬಂದಿಲ್ಲ ವರದಿ ಇನ್ನೂ ವರದಿ ಬರಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr Parmeshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು ವರದಿ ಬಂದ ಮೇಲೆ‌ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆದು ತನಿಖೆ ಮಾಡಿ ವಾಯ್ಸ್ ರೆಕಾರ್ಡ್ ಸಹಾ ಮಾಡಿದ್ದೇವೆ. ಧ್ವನಿ (Voice) ತಾಳೆಯಾಗಬೇಕು.ಒಂದು ವಾಹಿನಿಯದ್ದು ಅಲ್ಲ ಸಾಕಷ್ಟು ಕ್ಲಿಪ್ ಇದೆ. ಎಲ್ಲವನ್ನೂ ಪರೀಕ್ಷೆ ಮಾಡಬೇಕಾಗುತ್ತದೆ ಎಂದರು.  ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಸ್ಫೋಟ: ತೇಜಸ್ವಿ ಸೂರ್ಯ ಅನುಮಾನ

     

    ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿಯಲ್ಲಿ ಏನಿದೆ ಗೊತ್ತಿಲ್ಲ. ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದರಂತೆ ಮುಂದುವರಿಯೋಣ ಎಂದು ಸಿಎಂ ಹೇಳಿದ್ದಾರೆ. ಡೇಟಾ ಹೊರಗೆ ಬರುವವರೆಗೂ ಏನೂ ಹೇಳಲಾಗದು ಎಂದು ಹೇಳಿದರು. ಇದನ್ನೂ ಓದಿ: ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!

    ಜಾತಿ ಗಣತಿ ವರದಿಗೆ ಲಿಂಗಾಯತ, ಒಕ್ಕಲಿಗ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಸಂಖ್ಯೆ ಕಡಿಮೆ ಇರಬಹುದು ಎಂಬ ಆತಂಕ ಇರಬಹುದು. ಈಗ ನೀಡಿರುವ ವರದಿ ಆಯೋಗದ ವರದಿ ಅಂತ ರಿಪೋರ್ಟ್ ಅಂತ ಆಗುತ್ತದೆ. ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ವರದಿ ಅಂತ ಬರುವುದಿಲ್ಲ ಎಂದಿದ್ದಾರೆ.

     

  • ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

    ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

    ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ (Pakistan Zindabad) ಘೋಷಣೆ ಆರೋಪದ ತನಿಖೆ ಚುರುಕುಗೊಂಡಿದೆ. ಪೊಲೀಸರು (Police) ಮಾಧ್ಯಮಗಳಿಂದ ಘಟನೆಯ ಮೂಲ ದೃಶ್ಯಾವಳಿಗಳನ್ನು ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು (PUBLiC TV) ಸಂಪರ್ಕಿಸಿದ ವಿಧಾನಸೌಧ ಠಾಣೆ ಪೊಲೀಸರು ಮೂಲ ದೃಶ್ಯಾವಳಿ ಒದಗಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ, ಎಡಿಟ್ ಮಾಡದ ಮೂಲ ವಿಡಿಯೋ ತುಣಕನ್ನು ಪೊಲೀಸರಿಗೆ ನೀಡಿದೆ. ಇದನ್ನೂ ಓದಿ: BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್‌ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?

     

    2024ರ ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ (Nasser Hussain) ಅವರು ಬೆಂಬಲಿಗರೊಂದಿಗೆ ವಿಧಾನಸೌಧದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಇದನ್ನು ನಮ್ಮ ವರದಿಗಾರರು ಚಿತ್ರೀಕರಿಸುತ್ತಿದ್ದರು. ಇದನ್ನೂ ಓದಿ: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ

     

    ಈ ಸಂದರ್ಭದಲ್ಲಿ ನಾಸೀರ್ ಹುಸೇನ್ ಅವರ ಕಿರು ಸಂದರ್ಶನ ಮಾಡಲು ಮುಂದಾದಾಗ ಅವರ ಬೆಂಬಲಿಗರಿದ್ದ ಗುಂಪುನಿಂದ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿದೆ. ಆ ಮೂಲ ದೃಶ್ಯಾವಳಿಯನ್ನು ತಮಗೆ ನೀಡುತ್ತಿದ್ದೇವೆ ಮತ್ತು ಈ ಮೂಲಕ ತನಿಖೆಗೆ ಸಹಕರಿಸುತ್ತಿದ್ದೇವೆ ಎಂದು ಲಿಖಿತ ರೂಪದಲ್ಲಿ ಪೊಲೀಸರಿಗೆ ವಿವರಣೆ ಕೊಟ್ಟಿದ್ದೇವೆ. ಪೊಲೀಸರು ಆ ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಸಿದ್ದಾರೆ.