Tag: ಪಾಕಿಸ್ತಾನ ಉಗ್ರರು

  • ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ

    ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ

    ಶ್ರೀನಗರ: ಜುಲೈ 28ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ಆಪರೇಷನ್ ಮಹಾದೇವದಲ್ಲಿ (Operation Mahadev) ಮೃತಪಟ್ಟ ಮೂವರು ಉಗ್ರರು ಪಾಕಿಸ್ತಾನದವರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ.

    ಭಾರತೀಯ ಭದ್ರತಾ ಏಜೆನ್ಸಿಗಳು ಕಲೆಹಾಕಿದ ಮಾಹಿತಿಗಳು ಸೇರಿದಂತೆ ಪಾಕಿಸ್ತಾನ ಸರ್ಕಾರ ನೀಡಿದ ದಾಖಲೆ ಮತ್ತು ಬಯೋಮೆಟ್ರಿಕ್ ದಾಖಲೆಗಳನ್ನು ತನಿಖೆ ನಡೆಸಿದ ವೇಳೆ ಪಹಲ್ಗಾಮ್‌ನಲ್ಲಿ ದಾಳಿ (Pahalgam Terrorists) ನಡೆಸಿದ್ದ ಈ ಮೂವರು ಪಾಕಿಸ್ತಾನದವರು ಎಂಬುದು ತಿಳಿದುಬಂದಿದೆ. ಉಗ್ರರನ್ನು ಎಲ್‌ಇಟಿ ಹಿರಿಯ ಕಾರ್ಯಕರ್ತರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ ನಿಲ್ಲಿಸಲು KSRTC, BMTC ಕೊನೆಯ ಕಸರತ್ತು

    ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಈ ಉಗ್ರರು ಡಚಿಗಮ್-ಹರ್ವಾನ್ ಅರಣ್ಯ ಪ್ರದೇಶದಲ್ಲಿ (Dachigam-Harwan Forest) ಅಡಗಿಕೊಂಡಿದ್ದರು. ಇದನ್ನೂ ಓದಿ: ಸಾರಿಗೆ ಮುಷ್ಕರ – ಸಿಎಂ ಸಭೆಯಲ್ಲಿ ಏನಾಯ್ತು? ಸಾರಿಗೆ ಮುಖಂಡರು ಸಂಧಾನ ತಿರಸ್ಕರಿಸಿದ್ದು ಯಾಕೆ?

    ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರದ ಬಯೋಮೆಟ್ರಿಕ್ ದಾಖಲು, ಮತದಾರರ ಗುರುತಿನ ಚೀಟಿಗಳು ಮತ್ತು ಡಿಜಿಟಲ್ ಸ್ಯಾಟಲೈಟ್ ಫೋನ್ ಮಾಹಿತಿ, ಲಾಗ್‌ಗಳು ಮತ್ತು ಜಿಪಿಎಸ್ ವೇ ಪಾಯಿಂಟ್‌ಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ಸಂಗ್ರಹಿಸಿದ ಪ್ರಮುಖ ಪುರಾವೆಗಳಲ್ಲಿ ಮೂವರು ಭಯೋತ್ಪಾದಕರು ಪಾಕಿಸ್ತಾನದವರು ಎಂಬುದು ದೃಢಪಟ್ಟಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರ್ಕಾರವೇ ನೀಡಿರುವ ದಾಖಲೆಗಳು ದೊರೆತಿದ್ದು, ಯಾವುದೇ ಸಂಶಯವಿಲ್ಲದೇ ಉಗ್ರರು ಪಾಕಿಸ್ತಾನಿಗಳು ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಕೆ ಬಿಹಾರಿ ದೇವಾಲಯ ಕೇಸ್ – ಯುಪಿ ಸರ್ಕಾರಕ್ಕೆ ಸುಪ್ರೀಂ ತೀವ್ರ ತರಾಟೆ

    ಸುಲೇಮಾನ್ ಶಾ ಅಲಿಯಾಸ್ ‘ಫೈಜಲ್ ಜತ್’ ಎ ಗ್ರೇಡ್ ಉಗ್ರನಾಗಿದ್ದು, ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ಈತನ ಆಪ್ತ ಅಬು ಹಮಾಜಿ ಅಲಿಯಾಸ್ ಅಫ್ಘಾನ್ ಕೂಡ ಎ ಗ್ರೇಡ್ ಕಮಾಂಡರ್ ಆಗಿದ್ದ. ಮತ್ತೋರ್ವ ಯಾಸಿರ್ ಅಲಿಯಾಸ್ ಜಿಬ್ರಾನ್ ಕೂಡ ಎ ಗ್ರೇಡ್ ಕಮಾಂಡರ್ ಆಗಿದ್ದು, ಮೂವರನ್ನು ಕೂಡ ಆಪರೇಷನ್ ಮಹಾದೇವ ಕಾರ್ಯಾಚರಣೆ ವೇಳೆ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Dharmasthala | 13 ವರ್ಷದ ಹಿಂದಿನ ಕೇಸ್ ಬಗ್ಗೆ ಮತ್ತೊಂದು ದೂರು – ದೂರುದಾರ ಹೇಳಿದ್ದೇನು?

  • ಆಪರೇಷನ್ ಸಿಂಧೂರದಲ್ಲಿ ಭಾರತಕ್ಕೆ ಬೇಕಿದ್ದ 5 ಉಗ್ರರು ಮಟಾಶ್

    ಆಪರೇಷನ್ ಸಿಂಧೂರದಲ್ಲಿ ಭಾರತಕ್ಕೆ ಬೇಕಿದ್ದ 5 ಉಗ್ರರು ಮಟಾಶ್

    – ಲಷ್ಕರ್-ಎ-ತೈಬಾದ ಇಬ್ಬರು, ಜೈಶ್-ಎ-ಮೊಹಮ್ಮದ್‌ನ ಮೂವರು ಉಗ್ರರು ಬಲಿ

    ನವದೆಹಲಿ: ಪಹಲ್ಗಾಮ್ ದಾಳಿಗೆ(Pahalgam Attack) ಪ್ರತೀಕಾರವಾಗಿ ಮೇ 7ರಂದು `ಆಪರೇಷನ್ ಸಿಂಧೂರ'(Operation Sindoor) ಹೆಸರಿನಡಿಯಲ್ಲಿ ಭಾರತ ಮಾಡಿದ್ದ ದಾಳಿಗೆ ಭಾರತಕ್ಕೆ ಬೇಕಾಗಿದ್ದ 5 ಉಗ್ರರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಏ.22ರಂದು ಪಾಕ್‌ನ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ಮಾಡಿ 26 ಮಂದಿ ಅಮಾಯಕರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರ ದಾಳಿಯಾದ ಮೇ 7ರಂದು ಪಾಕ್ 9 ಸ್ಥಳಗಳಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಭಾರತಕ್ಕೆ ಬೇಕಿದ್ದ ಐವರು ಉಗ್ರರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಯುದ್ಧ ಭೀತಿ – ಕರ್ನಾಟಕದ ಪೊಲೀಸರಿಗೆ ರಜೆ ರದ್ದು: ಪರಮೇಶ್ವರ್‌

    ಮುದಸ್ಸರ್ ಖಾದಿಯಾನ್ ಖಾಸ್(Mudassar Khadian Khas) ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬು ಹತನಾಗಿದ್ದಾನೆ. ಈತ ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ಮುರಿಡ್ಕೆಯ ಮರ್ಕಜ್ ತೈಬಾದ ಉಸ್ತುವಾರಿಯಾಗಿದ್ದ. ಈತನ ಅಂತ್ಯಕ್ರಿಯೆ ವೇಳೆ ಪಾಕಿಸ್ತಾನ ಸೇನೆಯು ಗೌರವ ವಂದನೆ ಸಲ್ಲಿಸಿತ್ತು. ಪಾಕ್ ಸೇನಾ ಮುಖ್ಯಸ್ಥ ಮತ್ತು ಪಂಜಾಬ್ ಸಿಎಂ ಮರ್ಯಮ್ ನವಾಜ್ ಪರವಾಗಿ ಮಾಲಾರ್ಪಣೆ ಮಾಡಲಾಯಿತು. ಜೆಯುಡಿನ ಹಫೀಜ್ ಅಬ್ದುಲ್ ರೌಫ್ ನೇತೃತ್ವದಲ್ಲಿ ಸರ್ಕಾರಿ ಶಾಲೆಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆ ಸಲ್ಲಿಸಲಾಯಿತು. ಈತನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಐಜಿ ಭಾಗವಹಿಸಿದ್ದರು. ಇದನ್ನೂ ಓದಿ: ಪಾಕ್ ಶೆಲ್ ದಾಳಿಗೆ ಜಮ್ಮು ಕಾಶ್ಮೀರದ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು

    ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಹಫೀಜ್ ಮುಹಮ್ಮದ್ ಜಮೀಲ್(Hafiz Muhammed Jameel) ಮೃತಪಟ್ಟಿದ್ದಾನೆ. ಈತ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸೋದರ ಮಾವನಾಗಿದ್ದ. ಅಲ್ಲದೇ ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾದ ಉಸ್ತುವಾರಿಯಾಗಿದ್ದ. ಯುವಕರ ಮೂಲಭೂತ ಬೋಧನೆ ಮತ್ತು ಜೆಇಎಂಗೆ ನಿಧಿಸಂಗ್ರಹಣೆಯಲ್ಲಿ ಹಫೀಜ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ.

    ಜೈಶ್-ಎ-ಮೊಹಮ್ಮದ್‌ನಲ್ಲಿ ಸಕ್ರಿಯನಾಗಿದ್ದ ಮತ್ತೊಬ್ಬ ಉಗ್ರ ಮೊಹಮ್ಮದ್ ಯೂಸುಫ್ ಅಜರ್(Mohammad Yusuf Azhar) ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಘೋಸಿ ಸಹಾಬ್ ಸಾವನ್ನಪ್ಪಿದ್ದಾನೆ. ಈತನೂ ಸಹ ಮೌಲಾನಾ ಮಸೂದ್ ಅಜರ್‌ನ ಸೋದರ ಮಾವನಾಗಿದ್ದ. ಈತ ಜೆಇಎಂಗಾಗಿ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ವಹಿಸಿದ್ದ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಈತ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ. ಇದನ್ನೂ ಓದಿ: Video | ರಾಜಸ್ಥಾನದ ಪೋಖ್ರಾನ್‌ ಮೇಲೆ ಪಾಕ್‌ ಬಳಸಿದ ಬೃಹತ್‌ ಮಿಸೈಲ್‌ ಉಡೀಸ್‌!

    ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದ ಉಗ್ರ ಅಬು ಆಕಾಶಾ(Abu Akasha) ಅಲಿಯಾಸ್ ಖಾಲಿದ್ ಹತನಾಗಿದ್ದಾನೆ. ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಫೈಸಲಾಬಾದ್‌ನಲ್ಲಿ ನಡೆದ ಈತನ ಅಂತ್ಯಕ್ರಿಯೆಯಲ್ಲಿ ಹಿರಿಯ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಪೊಲೀಸರೇ ಅರೆಸ್ಟ್‌ – ಪಾಕ್‌ ಹಿಡಿತದಲ್ಲಿದ್ದ ನಗರ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಜೈಶ್-ಎ-ಮೊಹಮ್ಮದ್‌ನಲ್ಲಿ ಸಕ್ರಿಯನಾಗಿದ್ದ ಮೊಹಮ್ಮದ್ ಹಸನ್ ಖಾನ್(Mohammad Hassan Khan) ಮೃತಪಟ್ಟಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಅವರ ಮಗನಾಗಿದ್ದ. ಹಸನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದನ್ನೂ ಓದಿ: ಆಸ್ಪತ್ರೆ, ಮೂಲಸೌಕರ್ಯ ಗುರಿಯಾಗಿಸಿ ಪಾಕ್‌ ಮಿಸೈಲ್‌ ದಾಳಿ, ತಕ್ಕ ಉತ್ತರ ಕೊಟ್ಟಿದ್ದೇವೆ: ವ್ಯೋಮಿಕಾ ಸಿಂಗ್

    ಪ್ರಮುಖ ಉಗ್ರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಈ 5 ಉಗ್ರರು ಆಪರೇಷನ್ ಸಿಂಧೂರದಲ್ಲಿ ಮೃತಪಟ್ಟಿದ್ದಾರೆ. ಇದೀಗ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.

  • ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ (Security Forces) ನಡೆದ ಗುಂಡಿನ ಚಕಮಕಿಯಲ್ಲಿ (Gunfight) ಪಾಕಿಸ್ತಾನ ಮೂಲದ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ.

    ಭಾರತೀಯ ಸೇನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾದ ಉಪಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಇಬ್ಬರು ಟಾಪ್‌ ಕಮಾಂಡರ್‌ಗಳು (Lashkar Commander), ಮನೆಯೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಂಧಿಸಿದ ಕಾಶ್ಮೀರ ಪೊಲೀಸರು

    ಪುಲ್ವಾಮಾದ (Pulwama) ನೆಹಮಾ ಪ್ರದೇಶದಲ್ಲಿ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿದ್ದಾರೆ ಎಂಬುದರ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಗುಂಡಿನ ದಾಳಿ ನಡೆಸಿದ್ದವು. ಈ ವೇಳೆ ಪಾಕ್‌ ಮೂಲದ ಉಗ್ರರರಿಂದಲೂ ಪ್ರತಿದಾಳಿ ನಡೆದಿದ್ದು, ಕೊನೆಗೆ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಸೇನಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.

    ಭಯೋತ್ಪಾದಕರಾದ ರಯೀಸ್ ಅಹ್ಮದ್ ಮತ್ತು ರಿಯಾಜ್ ಅಹ್ಮದ್ ದಾರ್ ಇಬ್ಬರೂ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು ಎಂದು ಸೇನೆ ಖಚಿತಪಡಿಸಿದೆ. ಇದನ್ನೂ ಓದಿ:  Election Results – ಟ್ರೆಂಡ್‌ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ವಲಯದ ಪೊಲೀಸರು, ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಎನ್‌ಕೌಂಟರ್‌ ಪ್ರಾರಂಭವಾಗಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿವೆ. ಈವರೆಗೆ ಸಾವು ನೋವುಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ಮೇ 7ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರಯಾ ಪಡೆದಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆಗೀಡಾಗಿದ್ದರು. ಇದನ್ನೂ ಓದಿ: ಇಂದಿನಿಂದ ದೇಶಾದ್ಯಂತ ಎಕ್ಸ್‌ಪ್ರೆಸ್‌ವೇ, ಹೈವೇಗಳಲ್ಲಿ ಟೋಲ್‌ ದರ ಏರಿಕೆ