Tag: ಪಾಕಿಸ್ತಾನಿ

  • ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿಯ ಹತ್ಯೆ: ಬಿಎಸ್‌ಎಫ್‌

    ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿಯ ಹತ್ಯೆ: ಬಿಎಸ್‌ಎಫ್‌

    ಶ್ರೀನಗರ: ಭಾರತದ ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿಯನ್ನು (Pakistan) ಹತ್ಯೆ ಮಾಡಲಾಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ.

    ಗಡಿ ಭದ್ರತಾ ಪಡೆ (BSF) ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಹೊಡೆದುರುಳಿಸಿದೆ. ಅಧಿಕಾರಿಗಳ ಪ್ರಕಾರ, ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯ ಬಳಿ ಆತ ಒಳನುಗ್ಗಲು ಯತ್ನಿಸಿದ್ದನು.

    ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ರಾತ್ರಿ 8.20 ರ ಸುಮಾರಿಗೆ ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸಿದಾಗ ಪಾಕಿಸ್ತಾನಿ ಒಳನುಸುಳುಕೋರನ ಮೇಲೆ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಬಾರ್ಡರ್ ಔಟ್‌ಪೋಸ್ಟ್ ರೀಗಲ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಿಹೆಚ್‌ಡಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು

  • ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ರಣಬೀರ್

    ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ರಣಬೀರ್

    ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಎರಡು ತಿಂಗಳು ಹಿಂದೆ ಹೇಳಿದ್ದಾರೆ ಎನ್ನಲಾದ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ (Controversy). ರಣಬೀರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ವಿವಾದ ಭುಗಿಲೇಳುತ್ತಿದ್ದಂತೆಯೇ ನಟ ಉಲ್ಟಾ ಹೊಡೆದಿದ್ದಾರೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳುವ ಮೂಲಕ ವಿವಾದವನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ರಣಬೀರ್ ಕಪೂರ್ ಡಿಸೆಂಬರ್ ನಲ್ಲಿ ನಡೆದ ಚಿತ್ರೋತ್ಸವವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನಿ (Pakistani) ನಿರ್ದೇಶಕರೊಬ್ಬರು ‘ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸಲು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಒಪ್ಪುತ್ತೀರಾ?’ ಎಂದು ಪ್ರಶ್ನೆಯನ್ನು ಕೇಳಿದ್ದರು. ಒಬ್ಬ ನಟನಾಗಿ ಯಾಕೆ ಮಾಡಬಾರದು? ಎನ್ನುವ ಉತ್ತರವನ್ನು ರಣಬೀರ್ ನೀಡಿದ್ದರು. ಈ ಮಾತೇ ಸದ್ಯ ಅವರಿಗೆ ಮುಳುವಾಗಿದೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಸದ್ಯ ರಣಬೀರ್ ‘ತು ಜೂತಿ ಮೇನ್ ಮಕ್ಕರ್’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಅವರನ್ನು ಪಾಕಿಸ್ತಾನಿ ಕುರಿತಾಗಿ ಪ್ರಶ್ನೆಯನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಹೇಳಿದ ರೀತಿಯೇ ಬೇರೆ ಇದೆ. ಅದನ್ನು ತಗೆದುಕೊಂಡು ರೀತಿ ನನಗೆ ಅಚ್ಚರಿ ಮೂಡಿಸಿದೆ. ನಾನೊಬ್ಬ ಕಲಾವಿದ. ಕಲಾವಿದನ ರೀತಿಯಲ್ಲೇ ನೋಡಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ’ ಎಂದು ಉತ್ತರಿಸಿದ್ದಾರೆ.

    ಪಾಕಿಸ್ತಾನಿ ನಟ ಫವಾದ್ ಖಾನ್ ಜೊತೆ ರಣಬೀರ್ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದರು. ಆಗ ಪಾಕಿಸ್ತಾನಿ, ಇಂಡಿಯಾ ಅಂತ ಇರಲಿಲ್ಲ. ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನ ಜೊತೆ ನಟಿಸಿದ್ದೇವೆ ಎನ್ನುವುದೇ ಆಗಿತ್ತು ಎನ್ನುವ ಮಾತುಗಳನ್ನು ಆಡಿದ್ದಾರೆ. ಕಲೆ ದೇಶಕ್ಕಿಂತ ದೊಡ್ಡದಲ್ಲ ಎನ್ನುವ ಅರಿವು ನನಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಆದರೂ, ವಿವಾದದ ಕಿಡಿ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ.

  • ಈ ಪಾಕ್ ನಟಿಯ ಗ್ರಹಚಾರ ನೆಟ್ಟಗಿಲ್ಲ: ಪಾಕಿಸ್ತಾನದಲ್ಲಿ ತಿನ್ನೋಕೆ ಏನೂ ಇಲ್ಲವಾ ಎಂದ ನೆಟ್ಟಿಗರು

    ಈ ಪಾಕ್ ನಟಿಯ ಗ್ರಹಚಾರ ನೆಟ್ಟಗಿಲ್ಲ: ಪಾಕಿಸ್ತಾನದಲ್ಲಿ ತಿನ್ನೋಕೆ ಏನೂ ಇಲ್ಲವಾ ಎಂದ ನೆಟ್ಟಿಗರು

    ಪಾಕಿಸ್ತಾನಿ ನಟಿ ಹೀರಾ ಸಲ್ಮಾನ್ ಸಲ್ಲದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದರು. ತನ್ನ ಪತಿಯು ತನಗೆ ದಪ್ಪ ಇದ್ದಾಳೆ ಎಂದು ಹೇಳಿದ ಕಾರಣಕ್ಕಾಗಿ ಹತ್ತು ಕೇಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ ಹೀರಾ. ತೂಕ ಕಳೆದುಕೊಂಡು ತೆಪ್ಪಗಿದ್ದರೆ, ಅಲ್ಲಿಗೆ ಕತೆಯೇ ಮುಗಿದಿರೋದು. ಆದರೆ, ತಾನು ತಳ್ಳಗೆ ಆಗುವುದಕ್ಕೂ ಬಾಲಿವುಡ್ ನಟಿ ಕರೀನಾ ಕಪೂರ್ ದಪ್ಪಗಿರುವುದಕ್ಕೂ ಹೋಲಿಕೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಪಾಕ್ ನಟಿಯ ಜನ್ಮಜಾಲಾಡಿದ್ದಾರೆ ಕರೀನಾ ಅಭಿಮಾನಿಗಳು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ನನ್ನ ಗಂಡ ನಾನು ದಪ್ಪಗಿದ್ದೇನೆ ಎಂದು ಹೇಳಿದ್ದಕ್ಕೆ ಅದನ್ನೇ ಸವಾಲಾಗಿ ತಗೆದುಕೊಂಡು ಹತ್ತು ಕೆಜಿ ತೂಕ ಕಡಿಮೆಮಾಡಿಕೊಂಡು ಇದೀಗ ಬಳುಕುವ ಬಳ್ಳಿ ಆಗಿದ್ದೇನೆ. ಪಾಪ, ಕರೀನಾ ಕಪೂರ್ ದಪ್ಪಗಿದ್ದಾರೆ. ಅವರಿಗೆ ಯಾರೂ, ಏನೂ ಹೇಳುವುದಿಲ್ಲವೆ? ಎಂದು ಈ ಹಿಂದೆ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹೀರಾ ಹರಿಬಿಟ್ಟಿದ್ದರು. ಇದೀಗ ಆ ವಿಡಿಯೋ ಕುರಿತಾಗಿ ಕರೀನಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಕರೀನಾ ದಪ್ಪ ಎಂದು ಹೇಳಿ ಸುಮ್ಮನಿದ್ದರೂ ಇಷ್ಟೊಂದು ವಿವಾದ ಆಗುತ್ತಿರಲಿಲ್ಲ. ತನ್ನನ್ನು ಕರೀನಾ ವಿರೋಧಿ ನಟಿಯರಿಗೆ ಹೋಲಿಸಿಕೊಂಡಿದ್ದ ಕರೀನಾ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಅಲ್ಲದೇ, ಬಾಲಿವುಡ್ ಕೆಲ ನಟಿಯರಂತೆ ನಾನೂ ಕೂಡ ಫಿಗರ್ ಮೆಂಟೇನ್ ಮಾಡಿಕೊಂಡಿದ್ದೇನೆ ಎಂದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರ ಹೆಸರು ಹೇಳಿದ್ದಾರೆ. ಹೀಗಾಗಿ ಹೀರಾ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಈ ಕುರಿತು ಕರೀನಾ ಕಪೂರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗಂತ ಕರೀನಾ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಹೀರಾ ಅವರ ಹತ್ತಾರು ಫೋಟೋಗಳನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಆ ಟ್ರೋಲ್ ಆಗುತ್ತಿರುವ ಫೋಟೋದಲ್ಲಿ ಹೀರಾ ದಪ್ಪಗಿದ್ದಾರೆ.

  • ಸುಶಾಂತ್ ಸಿಂಗ್ ಪ್ರೇರಣೆ – ಚಂದ್ರನ ಮೇಲೆ ಭೂಮಿ ಖರೀದಿಸಿ ಮಡದಿಗೆ ಗಿಫ್ಟ್ ಕೊಟ್ಟ!

    ಸುಶಾಂತ್ ಸಿಂಗ್ ಪ್ರೇರಣೆ – ಚಂದ್ರನ ಮೇಲೆ ಭೂಮಿ ಖರೀದಿಸಿ ಮಡದಿಗೆ ಗಿಫ್ಟ್ ಕೊಟ್ಟ!

    – ವಿವಾಹ ವಾರ್ಷಿಕೋತ್ಸವಕ್ಕೆ ಪತಿ ಉಡುಗೊರೆ

    ರಾವಲ್ಪಿಂಡಿ(ಇಸ್ಲಾಮಾಬಾದ್): ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರಿಂದ ಪ್ರೇರಿತರಾಗಿ ಪಾಕಿಸ್ತಾನದ ವ್ಯಕ್ತಿಯೊಬ್ಬ ಚಂದ್ರನಲ್ಲಿ ಭೂಮಿ ಖರೀದಿಸಿ ತನ್ನ ಮಡದಿಗೆ ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ ನೀಡಿದ ಘಟನೆ ನಡೆದಿದೆ.

    ರಾವಲ್ಪಿಂಡಿ ನಿವಾಸಿ ಸೋಯೇಬ್ ಅಹ್ಮದ್, ಚಂದ್ರನಲ್ಲಿ ಸೀ ಆಫ್ ವೆಪೌರ್’ ಎಂಬ ಪ್ರದೇಶವನ್ನು ಖರೀದಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಹ್ಮದ್, ಇತ್ತೀಚೆಗೆ ಅಗಲಿರುವ ನಟ ಸುಶಾಂತ್ ಸಿಂಗ್ ಅವರು ಚಂದ್ರನಲ್ಲಿ ಭೂಮಿ ಖರೀದಿಸಿರುವುದು ನನಗೆ ಪ್ರೇರಣೆಯಾಗಿದೆ ಎಂದರು.

    ಸುಶಾಂತ್ ಸಿಂಗ್ ಅವರು ಚಂದ್ರನ ಮೇಲಿರುವ ಒಂದು ತುಂಡು ಭೂಮಿಯನ್ನು ಖರೀದಿಸಿದ್ದರು. ಚಂದ್ರನ ಮಾರ್ ಮ್ಯುಸ್ಕೊವೀನ್ಸ್ ಅಥವಾ ಸೀ ಆಫ್ ಸುಸ್ಕೋವಿ ಎಂಬ ಪ್ರಾಂತ್ಯದಲ್ಲಿ ಈ ಜಾಗವನ್ನು ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ರ್ಟಾರ್ ನಿಂದ ಖರೀದಿಸಿದ್ದಲ್ಲದೇ ಅದನ್ನು 2018ರ ಜೂನ್ 25ರಂದು ನೋಂದಾವಣೆ ಮಾಡಿಕೊಂಡಿದ್ದರು.

    ಕೇವಲ ಸುಶಾಂತ್ ಸಿಂಗ್ ಮಾತ್ರವಲ್ಲದೇ ಶಾರೂಖ್ ಖಾನ್ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳು ಚಂದ್ರನ ಮೇಲೆ ಭೂಮಿಯನ್ನು ಹೊಂದಿದ್ದಾರೆ.

    ಅಹ್ಮದ್ ಪತ್ನಿ ಈ ಬಗ್ಗೆ ತನ್ನ ಗೆಳೆಯರಲ್ಲಿ ಹೇಳಿಕೊಂಡಾಗ ಮೊದಲು ಅವರು ಆಕೆಯ ಮಾತನ್ನು ನಂಬಲೇ ಇಲ್ಲ. ಅಲ್ಲದೆ ಅವರೆಲ್ಲರೂ ಈಕೆ ಜೋಕ್ ಹೇಳುತ್ತಿದ್ದಾಳೆ ಅಂತ ಅಂದುಕೊಂಡರು. ಆದರೆ ಭೂಮಿ ಖರೀದಿ ಮಾಡಿರುವ ಸಂಬಂಧ ದಾಖಲೆಗಳನ್ನು ತೋರಿಸಿದಾಗ ಅವರು ನಂಬಿದರು ಎಂದು ಹೇಳಿದ್ದಾರೆ. ಸದ್ಯ ಯುಸ್ ಪೋರ್ಟಲ್ ಸರ್ವಿಸ್ ಮೂಲಕ ದಂಪತಿ ಭೂಮಿ ಖರೀದಿಸಿರುವ ಬಗ್ಗೆ ದಾಖಲೆಗಳನ್ನು ಸ್ವೀಕರಿಸಿದ್ದಾರೆ.

    ಈ ಹಿಂದೆ ಸುಶಾಂತ್ ಸಿಂಗ್ ನಿಂದ ಪ್ರೇರಿತರಾಗಿ ಬಿಹಾರ ಮೂಲದ ಉದ್ಯಮಿಯೊಬ್ಬರು ಚಂದ್ರನ ಮೇಲೆ ಒಂದು ಎಕರೆ ಭೂಮಿ ಖರೀದಿ ಮಾಡಿದ್ದರು. ಬೋಧ್ ಗಯಾ ನಿವಾಸಿ ನೀರಜ್ ಕುಮಾರ್, ಅಲ್ಲಿ ಭೂಮಿ ಬೆಲೆ ಹೆಚ್ಚೇನೂ ಇಲ್ಲ. ಆದರೆ ಪ್ರಕ್ರಿಯೆ ಕಷ್ಟಕರವಾಗಿದೆ ಎಂದು ಹೇಳಿದ್ದರು.

    ಇವರು 2019ರ ಅಕ್ಟೋಬರ್ ತಿಂಗಳಿನಲ್ಲಿ ಇಂಟರ್ ನ್ಯಾಷನಲ್ ಲೂನಾ ಸೊಸೈಟಿಯನ್ನು ಸಂಪರ್ಕಿಸಿ ಒಂದು ಎಕರೆ ಜಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು 48,000 ರೂ. ನೀಡಿದ್ದೆ. ಹಣವನ್ನು ಡಾಲರ್ ಗೆ ಪರಿವರ್ತಿಸಿ ನೀಡಲಾಗಿದೆ. ಸಾಕಷ್ಟು ಆನ್‍ಲೈನ್ ಪತ್ರಗಳ ನಂತರ 2020 ಜುಲೈ 4ರಂದು ನನ್ನ ಪತ್ರ ಪೂರ್ಣಗೊಂಡಿರುವುದಾಗಿ ಸಂದೇಶ ಬಂದಿತ್ತು ಎಂದು ಅವರು ತಿಳಿಸಿದ್ದರು.

  • ಜಮ್ಮು-ಕಾಶ್ಮೀರದಲ್ಲಿ ಜೀವಂತ ಸೆರೆ ಸಿಕ್ಕ ಪಾಕಿಸ್ತಾನಿ ಉಗ್ರ

    ಜಮ್ಮು-ಕಾಶ್ಮೀರದಲ್ಲಿ ಜೀವಂತ ಸೆರೆ ಸಿಕ್ಕ ಪಾಕಿಸ್ತಾನಿ ಉಗ್ರ

    – 2017ರಲ್ಲಿ ಭಾರತದ ಪ್ರವೇಶಿಸಿದ್ದ

    ಶ್ರೀನಗರ: ಜಮ್ಮು-ಕಾಶ್ಮೀರದ ಭದ್ರತಾ ಪಡೆ ಪಾಕಿಸ್ತಾನದ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

    ಈ ಕುರಿತು ಮಾತನಾಡಿದ ಬಾರಾಮುಲ್ಲಾ ಎಸ್‍ಎಸ್‍ಪಿ ಅಬ್ದುಲ್ ಕಾಯೂಮ್, ಬಂಧಿತ ಪಾಕಿಸ್ತಾನದ ಉಗ್ರನ ಹೆಸರು ಮೊಹಮ್ಮದ್ ವಕಾರ್. ಬಂಧಿತ ಉಗ್ರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾವಾಲಿಯ ನಿವಾಸಿಯಾಗಿದ್ದು, 2017ರಲ್ಲಿ ಭಾರತದ ಗಡಿಯನ್ನು ಪ್ರವೇಶಿಸಿದ್ದ. ಕಳೆದ ಒಂದು ವರ್ಷದಿಂದ ಮೊಹಮ್ಮದ್ ವಕಾರ್ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು ಎಂದು ತಿಳಿಸಿದರು.

    ಒಂದು ವರ್ಷದಿಂದ ಶ್ರೀನಗರದಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವಕಾರ್, ಬಾರಾಮುಲ್ಲಾ ಪ್ರದೇಶದ ಯುವಕರನ್ನು ಸಂಘಟನೆಯತ್ತ ಸೆಳೆಯುವ ಮೂಲಕ ಉಗ್ರವಾದ ಜೀವಂತವಾಗಿರುವಂತೆ ಪ್ರಯತ್ನಿಸುತ್ತಿದ್ದನು. ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವಕರು ಉಗ್ರ ಸಂಘಟನೆಗೆ ಸೇರಲು ಹಿಂದೇಟು ಹಾಕುತ್ತಿದ್ದರಿಂದ ವಕಾರ್ ಭಾರತ ಪ್ರವೇಶಿಸಿದ್ದ ಎಂದು ವರದಿಯಾಗಿದೆ.

    ಉಗ್ರ ಸಂಘಟನೆಯಲ್ಲಿ ಸೇರಲು ಸ್ಥಳೀಯ ಯುವಕರು ಹಿಂದೇಟು ಹಾಕುತ್ತಿದ್ದು, ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ದೇಶದ ರಕ್ಷಣೆಯ ವಿಷಯದಲ್ಲಿ ಸಂತೋಷದ ಸುದ್ದಿಯಾಗಿದೆ. 2018ರಲ್ಲಿ ಪೊಲೀಸರು 272 ಉಗ್ರರನ್ನು ಹೊಡೆದುರುಳಿಸಿದ್ದರು. ಹಾಗೆಯೇ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಸೆರೆ ಹಿಡಿಯಲಾಗಿತ್ತು ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್‍ಬಾಗ್ ಸಿಂಗ್ ತಿಳಿಸಿದ್ದಾರೆ.

  • ತ್ರಿವರ್ಣ ಧ್ವಜ ಹಿಡಿದು ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಬೆಡಗಿ: ವಿಡಿಯೋ ವೈರಲ್

    ತ್ರಿವರ್ಣ ಧ್ವಜ ಹಿಡಿದು ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಬೆಡಗಿ: ವಿಡಿಯೋ ವೈರಲ್

    ದುಬೈ: ಭಾನುವಾರದ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತದ ಗೆಲುವನ್ನು ಕಂಡು ಪಾಕ್‍ನ ಯುವತಿಯೊಬ್ಬಳು ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

    ಕಪ್ಪು ಬುರ್ಖಾ ತೊಟ್ಟಿದ್ದ ಪಾಕ್ ಯುವತಿಯೊಬ್ಬಳು ರೋಹಿತ್ ಶರ್ಮ ತಂಡದ ಗೆಲುವನ್ನು ಕಂಡು ಭಾರತದ ಬಾವುಟವನ್ನು ಹಿಡಿದು ಹಾರಿಸಿದ್ದಾಳೆ. ಅಕ್ಕಪಕ್ಕದಲ್ಲಿ ಕುಳಿತ್ತಿದ್ದವರು ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದರೂ ಕ್ಯಾರೇ ಅನ್ನದೇ ಯುವತಿ ಭಾರತದ ಬಾವುಟವನ್ನು ಹರ್ಷದಿಂದ ಹಾರಿಸಿದ್ದಾಳೆ.

    ಪಾಕ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕರಾದ ಧವನ್ ಹಾಗೂ ರೋಹಿತ್ ಶರ್ಮಾ ಅತ್ಯುತ್ತಮ ಆರಂಭ ನೀಡಿದರು. ಪಂದ್ಯದ 5ನೇ ಓವರ್ ಶಹೇನ್ ಬೌಲಿಂಗ್ ನಲ್ಲಿ ಇಮಾಮ್ ರಿಂದ ಜೀವದಾನ ಪಡೆದ ರೋಹಿತ್ ಶರ್ಮಾ ವೃತ್ತಿ ಜೀವನದ 19ನೇ ಶತಕ ಪೂರೈಸಿದರು. ಪಾಕ್ ಬೌಲರ್ ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ ಟೀಂ ಇಂಡಿಯಾ ಪರ 210 ದಾಖಲೆ ರನ್ ಜೊತೆಯಾಟ ನೀಡಿತು. ಅಲ್ಲದೇ ಕೇವಲ 39.3 ಓವರ್ ಗಳಲ್ಲಿ 238 ರನ್ ಸಿಡಿಸಿ 9 ವಿಕೆಟ್ ಗಳ ಗೆಲುವಿನ ಸಿಹಿ ಪಡೆಯಿತು. ಇದನ್ನು ಓದಿ: ಇಂಡೋ ಪಾಕ್ ಕದನದಲ್ಲಿ ಭಾರತೀಯರ ಮನಗೆದ್ದ ಪಾಕ್ ಬೆಡಗಿ

    https://twitter.com/Pathan_007_/status/1043946817069756422

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಜವಾದ ಪಾಕಿಸ್ತಾನಿಗಳು ಬಿಜೆಪಿಗರೇ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

    ನಿಜವಾದ ಪಾಕಿಸ್ತಾನಿಗಳು ಬಿಜೆಪಿಗರೇ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

    ಕೊಪ್ಪಳ: ನಿಜವಾದ ಪಾಕಿಸ್ತಾನಿಗಳು ಬಿಜೆಪಿಯವರು. ನಾವುಗಳ ನಿಜವಾದ ಭಾರತೀಯರು ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯನ್ನು ಹರಿಹಾಯ್ದಿರುವ ಅನ್ಸಾರಿ, ಭಾರತದಲ್ಲಿ ನಿಜವಾದ ದೇಶದ್ರೋಹಿಗಳು ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ. ಬಿಜೆಪಿಯವರ ದೇಶದ್ರೋಹಿಗಳು. ಅವರು ಪಾಕಿಸ್ತಾನಿಗಳು. ನಾವು ನಿಜವಾದ ಭಾರತೀಯರು. ಭಾರತಕ್ಕಾಗಿ ನಾವು ತಲೆ ತಗ್ಗಿಸುವುದಕ್ಕೂ ಸಿದ್ಧ. ರುಂಡ ಕತ್ತರಿಸಲು ಸಿದ್ಧರಿದ್ದೇವೆ. ಆದರೆ ಕೆಲವು ಬಿಜೆಪಿ ನಾಯಕರು, ನನ್ನನ್ನು ಗೆಲ್ಲಿಸಿದರೆ ಗಂಗಾವತಿಯನ್ನು ಪಾಕಿಸ್ತಾನ ಮಾಡುತ್ತಾನೆಂದು ಟೀಕಿಸುತ್ತಾರೆ. ನನಗೇನು ಬೇರೆ ಕೆಲಸವಿಲ್ಲವೇನು? ಅವರಿಗೆ ಮಾನ ಮರ್ಯಾದೆ ಇದ್ದರೆ ಅವರೇ ಪಾಕಿಸ್ತಾನಕ್ಕೆ ಹೋಗಲಿ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಇದನ್ನೂ ಓದಿ: ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಗೂಂಡಾಗಿರಿ – ಆ ನನ್ಮಗನಿಗೆ ಒದಿರಲೇ ಎಂದ ಕೈ ಮಾಜಿ ಶಾಸಕ

    ಇದೇ ವೇಳೆ ಶಾಸಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಗ್ಗೆ ಏಕವಚನದಲ್ಲೇ ಮಾತನಾಡಿದ ಅವರು, ಪರಣ್ಣ ಈಶ್ವರಪ್ಪ ಮುನವಳ್ಳಿ ಬೆಳಗ್ಗೆ 5 ಗಂಟೆಯಿಂದಲೇ ಲಂಚ ತೆಗೆದುಕೊಳ್ಳುತ್ತಾನೆ. ಇಂತಹವರನ್ನು ನಮ್ಮ ಗಂಗಾವತಿ ಜನ ಗೆಲ್ಲಿಸುತ್ತಿದ್ದಾರೆ. ಪರಿಹಾರ ಹಣದಲ್ಲೂ ಪರ್ಸೆಂಟೇಜ್ ತೆಗೆದುಕೊಳ್ತಾನೆ. ಜನರಿಗೆ ಖೋಟಾ ನೋಟು ಕೊಟ್ಟು ವೋಟ್ ಹಾಕಿಸಿಕೊಂಡಿದ್ದಾನೆ. ಖೋಟಾ ನೋಟು ದಂಧೆಯಲ್ಲಿ ಸ್ವತಃ ಶಾಸಕನೇ ಭಾಗಿಯಾಗಿದ್ದಾನೆ. ಅವನನ್ನು ಎಸ್ಪಿ ಮಹಾಶಯ ಡಾ.ಅನೂಪ್ ಶೆಟ್ಟಿ ಬಚಾವ್ ಮಾಡುತ್ತಿದ್ದಾನೆ. ಎಸ್ಪಿ ಆರ್‍ಎಸ್‍ಎಸ್ ನವನು ಆಗಿದ್ದಾನೆ. ಅವನು ಸಂಬಂಧಪಡದವರನ್ನು ಒಳಗೆ ಹಾಕಿದ್ದಾನೆ ಅಷ್ಟೇ. ಇಂಥ ಪೊಲೀಸ್ ಗಿರಿ ಮಾಡುವ ಪೊಲೀಸರಿಗೆ ನಾನು ಹೆದರುವುದಿಲ್ಲ. ಮೊದಲು ಶಾಸಕ ಪರಣ್ಣನನ್ನು ಮತ್ತು ಆ ಎಸ್ಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೇ ಆತನ ಹಿಂಬಾಲಕರನ್ನು ವಿಚಾರಣೆಗೆ ಒಳಪಡಿಸಬೇಕು. ಆವಾಗ ಸತ್ಯ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆದ್ರೆ ಜೈಲು ಶಿಕ್ಷೆ ವಿಧಿಸಿ: ಓವೈಸಿ

    ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆದ್ರೆ ಜೈಲು ಶಿಕ್ಷೆ ವಿಧಿಸಿ: ಓವೈಸಿ

    ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಯಾರಾದ್ರು ಪಾಕಿಸ್ತಾನಿ ಅಂತ ಕರೆದ್ರೆ ಅವರನ್ನು ಜೈಲು ಶಿಕ್ಷೆಗೆ ಒಳಪಡಿಸಿ ಅಂತ ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ವೇಳೆ ಮಾತನಾಡಿದ ಓವೈಸಿ, ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆಯುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಅಂತ ಹೇಳಿದ್ರು.

    ಅಂತಹ ಹೇಳಿಕೆ ನೀಡುವವರನ್ನು ಕೂಡಲೇ ಜೈಲಿಗಟ್ಟುವ ಕಾನೂನು ತರಬೇಕು. ಆದ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಕಾನೂನು ತರುವುದಿಲ್ಲ. ಭಾರತದಲ್ಲಿರುವ ಮುಸ್ಲಿಮರು ಮೊಹಮ್ಮದ್ ಅಲಿ ಜಿನ್ನಾರವರ ಎರಡು ರಾಷ್ಟ್ರಗಳ ನೀತಿಯನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ರು.

    ಇದೇ ವೇಳೆ ತ್ರಿವಳಿ ತಲಾಖ್ ಕುರಿತಂತೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರ ಮಹಿಳಾ ವಿರೋಧಿಯಾಗಿದೆ ಎಂದರು. ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವ ಮಸೂದೆಯಿಂದ ತ್ವರಿತ ತ್ರಿವಳಿ ತಲಾಖ್ ಕಾನೂನು ಬಾಹಿರವಾಗುತ್ತದೆ. ಪತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತಾದರೂ, ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

    ಫೆ 9 ಮತ್ತು 10ರಂದು ಹೈದರಾಬಾದ್ ನಲ್ಲಿರೋ ಓವೈಸಿ ಆಸ್ಪತ್ರೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್(ಎಐಎಂಪಿಎಲ್‍ಬಿ) ವತಿಯಿಂದ ಸಮಗ್ರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗಣ್ಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಕಾಪಾಡಲು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ವರದಿಯಾಗಿದೆ.