Tag: ಪಾಂಡೇಶ್ವರ

  • ಬೀಡಾಡಿ ಬೆಕ್ಕಿಗೊಂದು ಸುಂದರ ಮನೆ – ಮಂಗಳೂರಿನ ಮಾಲ್‌ಗೆ ಬರೋರ ಕಣ್ಮಣಿಯಾದ ವೈಟ್ ಕ್ಯಾಟ್

    ಬೀಡಾಡಿ ಬೆಕ್ಕಿಗೊಂದು ಸುಂದರ ಮನೆ – ಮಂಗಳೂರಿನ ಮಾಲ್‌ಗೆ ಬರೋರ ಕಣ್ಮಣಿಯಾದ ವೈಟ್ ಕ್ಯಾಟ್

    ಮಂಗಳೂರು: ಊರೂರು ಸುತ್ತಾಡುತ್ತಿದ್ದ ಬೆಕ್ಕೊಂದು ಇದೀಗ ಮಂಗಳೂರಿನ ಮಾಲ್‌ವೊಂದರ ಸೆಲೆಬ್ರಿಟಿ ಕ್ಯಾಟ್ (White Cat) ಆಗಿ ಬದಲಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಆ ಬೆಕ್ಕು ಅದ್ಹೇಗೋ ಸಂದರ್ಶಕರ ಜೊತೆ ಮಾಲ್‌ಗೆ ಅಚಾನಕ್ ಆಗಿ ಎಂಟ್ರಿ ಕೊಟ್ಟಿತ್ತು. ಬಳಿಕ ಅಲ್ಲೇ ವಾಸ ಮಾಡತೊಡಗಿತು. ದಿನ ಹೋದಂತೆ ಸಿಬ್ಬಂದಿಯ ಸ್ನೇಹ ಸಂಪಾದಿಸಿದ ಆ ಬೆಕ್ಕು ಮಾಲ್‌ನಲ್ಲಿ ‘ಮಿಂಚು’ ಹರಿಸಿದ್ದಲ್ಲದೆ, ಸೆಲೆಬ್ರಿಟಿಯಾಗಿ ಮಾರ್ಪಾಡಾಗಿದೆ. ಪ್ರಸ್ತುತ ಇದರ ವಾಸಕ್ಕೊಂದು ಕ್ಯಾಟ್ ಹೌಸ್ ನಿರ್ಮಿಸಲಾಗಿದೆ.

    ಮಂಗಳೂರಿನ ಪಾಂಡೇಶ್ವರದಲ್ಲಿರುವ (Pandeshwara) ಫೋರಂ ಮಾಲ್‌ನ (Forum Mall) ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡ್ಡಾಡುತ್ತಿರುವ ಈ ಬೆಕ್ಕು ಮುದ್ದು ಮುದ್ದಾಗಿದೆ. ಒಂದೇ ನೋಟಕ್ಕೆ ಸೆಳೆಯುವ ಅದರ ಕಣ್ಣುಗಳು, ತಳುಕು-ಬಳುಕಿನ ನಡಿಗೆಯಿಂದ ಮಾಲ್‌ಗೆ ಭೇಟಿ ನೀಡುವವರನ್ನು ಆಕರ್ಷಿಸುತ್ತಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಎನ್‌ಕೌಂಟರ್ – ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

    ಮಾಲ್‌ಗೆ ಭೇಟಿ ನೀಡುವ ಕೆಲವರು ಒಂದು ಕ್ಷಣ ಬೆಕ್ಕಿನತ್ತ ಆಗಮಿಸಿ ಫೋಟೋ, ಸೆಲ್ಫಿ ತೆಗೆದು ಸಂಭ್ರಮಿಸುತ್ತಾರೆ. ಇದರ ಚಲನವಲನ ಕಂಡ ಮಾಲ್ ಸಿಬ್ಬಂದಿ ‘ಮಿಂಚು’ ಅಂತ ಹೆಸರು ಇಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಬೆಕ್ಕಿಗಾಗಿ ಸಿಬ್ಬಂದಿ ಕ್ಯಾಟ್ ಹೌಸ್ (ಬೆಕ್ಕಿನ ಮನೆ) ನಿರ್ಮಿಸಿದ್ದಾರೆ. ಇದನ್ನೂ ಓದಿ: Anti Drugs Day | ಡ್ರಗ್ಸ್‌ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸಿ – ನಿರ್ಮಾಪಕ ದಿಲ್‌ರಾಜ್

    ತಿಂಡಿ-ತಿನಿಸಲ್ಲೂ ಶಿಸ್ತು:
    ಮಾಲ್‌ಗೆ ಭೇಟಿ ನೀಡುವವರೆಲ್ಲರಲ್ಲೂ ಕೆಲ ಕ್ಷಣಗಳು ಖುಷಿಯನ್ನು ನೀಡುತ್ತವೆ. ಬೆಳಗ್ಗೆ ಹಾಗೂ ಸಂಜೆ ಕನಿಷ್ಠ ಐದು ನಿಮಿಷವಾದರೂ ಆಟವಾಡುತ್ತೇನೆ. ಅದರ ಜೊತೆ ಮಾತನಾಡದಿದ್ದರೆ ದಿನವೇ ಅಪೂರ್ಣವೆನಿಸುತ್ತದೆ. ತಿಂಡಿ-ತಿನಿಸಲ್ಲೂ ಶಿಸ್ತು ಕಾಪಾಡಿಕೊಂಡ ಮಿಂಚು ತನಗೆ ಮನಸ್ಸಾದರೆ ಮಾತ್ರ ಸಂದರ್ಶಕರು ಕೊಟ್ಟ ತಿಂಡಿ ಸ್ವೀಕರಿಸುತ್ತಾಳೆ, ಇಲ್ಲಾಂದ್ರೆ ನೋ ಚಾನ್ಸ್ ಅನ್ನುತ್ತಾರೆ ಮಾಲ್‌ನ ಸಿಬ್ಬಂದಿಯೋರ್ವರು. ಇದನ್ನೂ ಓದಿ: ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್

    ಈ ಮಿಂಚು ಬೆಕ್ಕಿಗೆ ಬೆಳಗ್ಗಿನ ನಿಯಮಿತ ಆಹಾರವನ್ನು ಮಾಲ್‌ನ ಸಿಬ್ಬಂದಿ ನೀಡಿದರೆ, ಸಂಜೆ ಸ್ಥಳೀಯರೊಬ್ಬರು ತಿಂಡಿಗಳನ್ನು ಹಾಕಿ ಪೋಷಿಸುತ್ತಾರೆ. ಎಲ್ಲೋ ಸುತ್ತಾಡಿಕೊಂಡು ಇರಬೇಕಾದ ಈ ಸುಂದರ ಬೆಕ್ಕು ಇದೀಗ ಮಾಲ್‌ನಲ್ಲಿ ತನ್ನ ಮನೆಯಲ್ಲೇ ವಾಸವಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

  • ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

    ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

    ಮಂಗಳೂರು (Mangalore) ಮೂಲದ ನಟಿಯೊಬ್ಬರ (Actress) ತಾಯಿ (Mother) ಬಳಿ ವ್ಯಕ್ತಿಯೊಬ್ಬ ಹಣ ಪೀಕಿದ ಘಟನೆ ಮಂಗಳೂರಿನ ಪಾಂಡೇಶ್ವರ (Pandeshwar) ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಯೂನಿಫಾರಂನಲ್ಲೇ ಬಂದಿದ್ದ ವ್ಯಕ್ತಿಯೊಬ್ಬ ‘ತಾನು ಪೊಲೀಸ್. ನೀವು ಹಣ ಕೊಡದೇ ಇದ್ದರೆ ನಿಮ್ಮ ಮನೆಯ ಮೇಲೆ ದಾಳಿ ಮಾಡಲಾಗುತ್ತದೆ’ ಎಂದು ನಟಿಯ ತಾಯಿಗೆ ಹೆದರಿಸಿ ಅವರಿಂದ 38 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡಿದ್ದಾನೆ. ಈ ಕುರಿತು ನಟಿಯ ತಾಯಿ ದೂರು ಕೂಡ ನೀಡಿದ್ದಾರೆ.

    ನಟಿಯ ತಾಯಿಯ ಮನೆಗೆ ಬಂದಿದ್ದ ವ್ಯಕ್ತಿಯು ತನ್ನನ್ನು ತಾನು ಮಹಿಳಾ ಠಾಣೆ ಪೊಲೀಸ್ ಶಿವರಾಜ್ ದೇವಾಡಿಗ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಸಾಹೇಬ್ರು ಈಗ ರೈಡ್ ಮಾಡ್ತಾರೆ. ಗೂಗಲ್ ಪೇ ಮಾಡಿದ್ರೆ ರೈಡ್ ಮಾಡಲ್ಲ ಎಂದು ಬೆದರಿಕೆ ಹಾಕಿದ್ದಾನೆ. ತನ್ನ ನಂಬರಿನಿಂದ ಕರೆ ಮಾಡಿ ಅದೇ ನಂಬರ್ ಗೆ ಆನ್ ಲೈನ್ ಹಣ ಹಾಕಿಸಿಕೊಂಡಿದ್ದಾನೆ. ಸಾಹೇಬ್ರ ಜೊತೆ ಸಹಕರಿಸಿದ್ರೆ ದಂಧೆಗೆ ತೊಂದರೆ ಆಗಲ್ಲ ಅಂತಾ ಹೇಳಿದ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ನಟಿಯ ತಾಯಿ. ಇದನ್ನೂ ಓದಿಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್

    ‘ಬಂದವನು ಖಾಕಿ ಪ್ಯಾಂಟ್, ಖಾಕಿ ಶೂ ಹಾಕಿದ್ದ. ಅವನು ಪೊಲೀಸ್ ಹೌದಾ ಅಥವಾ ಅಲ್ಲವೊ ಅನ್ನೋದು ಇನ್ನು ಗೊತ್ತಾಗಿಲ್ಲ. ಆದ್ರೆ ಬಂದವನು ಪೊಲೀಸ್ ಹಾಗೆ ಇದ್ದ. ಹೊಸ ಕಮಿಷನರ್ ಬಂದಿದ್ದಾರೆ ಅವರ ಟೇಬಲ್ ಮೇಲೆ ಫೈಲ್ ಇದೆ, ಸಿಸಿಟಿವಿ ಆಫ್ ಮಾಡಿಸಿ ಫೈಲ್ ತಗಿಯೋಕೆ 10 ಸಾವಿರ ಸಿಬ್ಬಂದಿಗೆ ಕೊಡಬೇಕು. ಕಮಿಷನರ್ ಕಚೇರಿಯ 22 ಸಿಬ್ಬಂದಿಗೆ ಹಣ ನೀಡಬೇಕೆಂದು ಹೇಳಿದ’ ಎಂದಿದ್ದಾರೆ ಆ ಮಹಿಳೆ.

  • ಬೆಂಗಳೂರು ಮಕ್ಕಳು ಮಂಗಳೂರಿನಲ್ಲಿ ಪತ್ತೆ ಪ್ರಕರಣ- ನಾಲ್ವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

    ಬೆಂಗಳೂರು ಮಕ್ಕಳು ಮಂಗಳೂರಿನಲ್ಲಿ ಪತ್ತೆ ಪ್ರಕರಣ- ನಾಲ್ವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

    – ಡಸ್ಟ್ ಬಿನ್‍ಗೆ ಚಿನ್ನ ಎಸೆದಿದ್ದ ಯುವತಿ

    ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 7 ಮಂದಿಯಲ್ಲಿ ಇದೀಗ ಉಳಿದ ನಾಲ್ವರು ಕೂಡ ಪತ್ತೆಯಾಗಿದ್ದಾರೆ. ಮಕ್ಕಳನ್ನು ಯುವತಿ ಎಲ್ಲೆಡೆ ಸುತ್ತಾಡಿಸಿದ್ದು, ಈ ಮಕ್ಕಳ ಟ್ರಾವೆಲ್ ಹಿಸ್ಟರಿ ಇಲ್ಲಿದೆ.

    ಹೌದು. ಮಕ್ಕಳು ಹಾಗೂ ಯುವತಿಯನ್ನು ಪಾಂಡೇಶ್ವರ ಠಾಣೆಯಲ್ಲಿ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ, ಮಕ್ಕಳನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿರುವುದು ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

    ಬೆಂಗಳೂರಿನಿಂದ ಬೆಳಗಾವಿಗೆ ನಂತರ ಬೆಳಗಾವಿಯಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಮತ್ತೆ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರು ಮೆಜೆಸ್ಟಿಕ್ ಗೆ ತೆರಳಿದ್ದಾರೆ. ಪುನಃ ಮೆಜೆಸ್ಟಿಕ್ ನಿಂದ ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸಿರುವುದಾಗಿ ಯುವತಿ ಬಾಯ್ಬಿಟ್ಟಿದ್ದಾಳೆ.

    ಡಸ್ಟ್ ಬಿನ್‍ಗೆ ಚಿನ್ನ ಎಸೆದ ಯುವತಿ:
    ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಯುವತಿ ಚಿನ್ನಾಭರಣವನ್ನು ಡಸ್ಟ್‍ಬಿನ್‍ಗೆ ಎಸೆದಿರುವುದಾಗಿ ತಿಳಿಸಿದ್ದಾಳೆ. ಮಕ್ಕಳು ಮನೆಯಿಂದ ತಂದಿದ್ದ ಚಿನ್ನಾಭರಣದೊಂದಿಗೆ ಯುವತಿ ನಾಪತ್ತೆಯಾಗುವ ಪ್ಲಾನ್ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಸ್ಸಿನಿಂದ ಇಳಿದು ಕೈಯಲ್ಲಿದ್ದ ಚಿನ್ನಾಭರಣವನ್ನು ಡಸ್ಟ್ ಬಿನ್‍ಗೆ ಎಸೆದಿದ್ದು, ಸದ್ಯ ಚಿನ್ನಾಭರಣವನ್ನು ಡಸ್ಟ್ ಬಿನ್ ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

    ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

    ಮಂಗಳೂರು: ಸಿಲಿಕಾನ್ ಸಿಟಿಯ 7 ಮಂದಿ ನಾಪತ್ತೆ ಪ್ರಕರಣ ಸಂಬಂದ ಈಗಾಗಲೇ ಮೂವರು ನಿನ್ನೆಯೇ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಇಂದು ಉಳಿದ ನಾಲ್ವರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

    21 ವರ್ಷದ ಯುವತಿ ಸೇರಿದಂತೆ ನಾಲ್ವರು ಇಂದು ಮಂಗಳೂರಿನ ಅತ್ತಾವರದಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಎಲ್ಲರೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿದ್ದಾರೆ. ಚಿಂತನ್, ಭೂಮಿ, ಅಮೃತವರ್ಷಿಣಿ ಹಾಗೂ ರಾಯನ್ ಇಂದು ಪತ್ತೆಯಾಗಿರುವ ಮಕ್ಕಳು. ಇವರು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಒಂದೇ ಅಪಾರ್ಟ್ ಮೆಂಟ್  ನಿವಾಸಿಗಳು. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಚಿಂದಿ ಆಯುವ ವ್ಯಕ್ತಿ ಮಾಹಿತಿ – ಬಾಗಲಗುಂಟೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆ

    ಈ ನಾಲ್ವರು ರೈಲಿನ ಮೂಲಕ ಮಂಗಳೂರಿಗೆ ತಲುಪಿದ್ದಾರೆ. ರೈಲು ನಿಲ್ದಾಣ ಸುತ್ತಮುತ್ತ ತಿರುಗಾಟುತ್ತಿದ್ದ ವರನ್ನು ನೋಡಿ ಅನುಮಾಗೊಂಡ ಆಟೋ ಚಾಲಕ, ವಿಶ್ವಾಸಕ್ಕೆ ತಗೆದುಕೊಂಡಿದ್ದಾರೆ. ನಂತರ ಆಟೋದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸದ್ಯ ಯುವತಿ ಹಾಗೂ ಮಕ್ಕಳು ಎಲ್ಲರೂ ಸುರಕ್ಷಿತವಾಗಿದ್ದು, ಡಿಸಿಪಿ ಹರಿರಾಮ ಶಂಕರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.