Tag: ಪಾಂಡಾ

  • ಪುಡ್  ಡೆಲಿವರಿ ಕೊಡಲು ಪಾಂಡಾದೊಂದಿಗೆ ಹೋದ ಯುವಕ

    ಪುಡ್ ಡೆಲಿವರಿ ಕೊಡಲು ಪಾಂಡಾದೊಂದಿಗೆ ಹೋದ ಯುವಕ

    ಕೌಲಾಲಂಪುರ: ಆನ್ ಲೈನ್ ಫುಡ್ ಡೆಲಿವರಿ ಕಂಪನಿಯಾದ ಫುಡ್ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು ಬೈಕ್ ಹಿಂದೆ ಕೂರಿಸಿಕೊಂಡು ಹೋಗುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

    ಉಜೈರ್(22) ಪಾಂಡಾ ಜೊತಗೆ ಫುಡ್ ಡೆಲಿವರಿ ಕೊಡಲು ಹೋಗುತ್ತಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

    ಯವಕ ತನ್ನೊಂದಿಗೆ ಪಾಂಡಾ ಇರುವಂತೆ ಪೋಟೋಗಳನ್ನು ಎಡಿಟ್ ಮಾಡಿದ್ದಾರೆ. ಹೌದು, ಆತ ನಿಜವಾದ ಪಾಂಡಾವನ್ನು ತನ್ನ ಬೈಕ್‍ನ ಹಿಂದೆ ಕೂರಿಸಿಕೊಂಡಿಲ್ಲ. ಬದಲಾಗಿ ತನ್ನ ಬೈಕ್‍ನ ಹಿಂದೆ ಪಾಂಡಾ ಕುಳಿತಿರುವ ಹಾಗೆ ಪೋಟೋಗಳನ್ನು ಎಡಿಟ್ ಮಾಡಿಕೊಂಡು ಬುದ್ದಿವಂತಿಕೆಯಿಂದ ಜನರನ್ನು ಮರಳು ಮಾಡಿದ್ದಾನೆ.

    ಪೋಟೋ ಎಡಿಟ್ ಮಾಡುವ ಕೌಶಲ್ಯತೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಹೀಗಾಗಿಯೇ ನನ್ನ ಬೈಕ್ ಹಿಂದೆ ಪಾಂಡಾ ಕುಳಿತಿರುವ ಹಾಗೆ ಪೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇನೆ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೆನೆ ನಾನು ನನ್ನು ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಗಿದೆ. ಹೀಗಾಗಿ ಕೆಲಸದ ಕೊನೆಯದಿನವನ್ನು ವಿಶೇಷವಾಗಿ ಕಳೆಯಬೇಕು ಎಂದು ಇಂತಹ ವಿಶೇಷ ಆಲೋಚನೆಯನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

    ನೆಟ್ಟಿಗರು ಯುವಕನ ಎಡಿಟಿಂಗ್ ನೋಡಿ ಆಶ್ಚರ್ಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.