Tag: ಪಹಲ್ಗಾಮ್ ದಾಳಿ

  • ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ (Pehalgam Terrorist Attack) ಮೆರೆದಿದ್ದು, ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ರು. ಇದರ ಎಫೆಕ್ಟ್ ನಿಂದಾಗಿ ಕಾಶ್ಮೀರದಿಂದ ಬೆಂಗಳೂರಿಗೆ ಬರಬೇಕಾಗಿದ್ದ ಡ್ರೈಫ್ರೂಟ್ಸ್‌ (Dry Fruits) ಹಾಗೂ ಹಣ್ಣುಗಳ ಸರಬರಾಜಿನಲ್ಲಿ ಕೆಲವೆಡೆ ವ್ಯತ್ಯಯವಾಗ್ತಿದೆ.

    ಕಾಶ್ಮೀರ ಭೂ ಲೋಕದ ಸ್ವರ್ಗ.., ಹಿಮನದಿಗಳ ಭೂಸಿರಿಯಂತಲೇ ಫೇಮಸ್ ಆಗಿದೆ. ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಮಸಾಲೆ ಪದಾರ್ಥಗಳು, ಡ್ರೈ ಫ್ರೂಟ್ಸ್‌ ಹಾಗೂ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದಿಂದ ದೇಶದ ನಾನಾ ಭಾಗಗಳಿಗೆ ಡ್ರೈಫ್ರೂಟ್ಸ್‌ಗಳು ಸರಬರಾಜು ಆಗ್ತಿದ್ದವು. ಆದ್ರಲ್ಲೂ ಶ್ರೀನಗರ, ಜಮ್ಮು ಹಾಗೂ ಪಹಲ್ಗಾಮ್ ನಿಂದ ಒಣಹಣ್ಣುಗಳು ಪೂರೈಕೆಯಾಗ್ತಿದ್ದವು. ಅದ್ಯಾವಾಗ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದ್ರೋ.. ಅಲ್ಲಿಂದ ಭಾರತ ಆಮದು-ರಪ್ತುಗಳ ವಿಚಾರದಲ್ಲಿ ಕಡಿವಾಣ ಹಾಕಿದೆ. ಇದರಿಂದ ಭಾರತದ ವಿವಿಧೆಡೆಗೆ ಬರುತ್ತಿದ್ದ ಕೆಲ ಡ್ರೈಫ್ರೂಟ್ಸ್‌ ಹಣ್ಣಗಳ ಬೆಲೆ ಗಗನಕ್ಕೇರಿದೆ.

    ಹಾಗಿದ್ರೆ.., ಯಾವೆಲ್ಲ ಡ್ರೈಫ್ರೂಟ್ಸ್‌ಗಳ ಬೆಲೆ ದುಬಾರಿಯಾಗಲಿದೆ.. ಅವುಗಳ ಜೊತೆ ಬೇರೆ ವಸ್ತುಗಳು ಗಗನಕ್ಕೇರುವ ಸಾಧ್ಯತೆಗಳಿವೆ ಅನ್ನೋದರ ಡಿಟೇಲ್ಸ್‌ ಇಲ್ಲಿದೆ. ಇದನ್ನೂ ಓದಿ: ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    ಯಾವೆಲ್ಲಾ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ?
    ಪಾಕ್‌ನಿಂದ ಭಾರತಕ್ಕೆ ಆಮದು ಆಗ್ತಿದ್ದ ಡ್ರೈಫ್ರೂಟ್ಸ್‌ ಪೈಲಿ ಬಾದಾಮಿ, ಗೋಡಂಬಿ, ಪಿಸ್ತಾ, ಕರ್ಜೂರ, ಒಣದ್ರಾಕ್ಷಿ, ವಾಲ್‌ನಟ್ಸ್, ಒಣ ಅಪ್ರಿಕಾಟ್‌ಗಳೂ ದುಬಾರಿಯಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಜೊತೆಗೆ ಕಲ್ಲು ಉಪ್ಪು, ಕನ್ನಡಕದಲ್ಲಿ ಬಳಸಲಾಗುವ ಆಪ್ಟಿಕಲ್ ಲೆನ್ಸ್‌, ಗೋಧಿ, ಅಕ್ಕಿ, ದ್ವಿದಳ ಧಾನ್ಯಗಳು, ಸಿಮೆಂಟ್ ಕಲ್ಲು, ಸುಣ್ಣ, ಹತ್ತಿ, ಉಕ್ಕು, ಚರ್ಮದ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಇನ್ನು, 20-25 ತರಹದ ಒಣಹಣ್ಣುಗಳು ಕಾಶ್ಮೀರದಿಂದ ಬೆಂಗಳೂರಿಗೆ ಬರುತ್ತಿದ್ದವು. ಇದೀಗ ಆಮದು ಬಂದ್ ಆಗಿರೋದ್ರಿಂದ ಗ್ರಾಹಕರ ಡಿಮ್ಯಾಂಡ್ ಹೆಚ್ಚಾಗಿದ್ದು, ಪೂರೈಕೆಯಲ್ಲಿ ವ್ಯತ್ಯಾಯವಾಗಿದೆ. ಹೀಗೆ ಮುಂದುವರೆದ್ರೇ ಬೆಲೆ ಏರಿಕೆಯಾಗಲಿದೆ ಅಂತಾರೆ ಡ್ರೈ ಪ್ರೂಟ್ಸ್ ವ್ಯಾಪಾರಿಗಳು. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

  • ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಶ್ರೀನಗರ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ತನಿಖೆ ಶುರು ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಪ್ರಮುಖ ಸಾಕ್ಷಿ ಸಿಕ್ಕಿದೆ. ದಾಳಿ ನಡೆಯುವ ವೇಳೆ ಬೈಸರನ್‌ನಲ್ಲಿ (Baisaran) ಪ್ರವಾಸಿಗರಿಗಾಗಿ ರೀಲ್ಸ್‌ ಚಿತ್ರೀಕರಿಸುತ್ತಿದ್ದ ಸ್ಥಳೀಯ ವಿಡಿಯೋ ಗ್ರಾಫರ್‌ ಪ್ರಮುಖ ಸಾಕ್ಷಿದಾರನಾಗಿ ಮುಂದೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಹೌದು. ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಸಿಕ್ಕಿದೆ. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್‌ ಅಫ್ರಿದಿ

    ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆಯುತ್ತಿದ್ದಂತೆ ಭಯಕ್ಕೆ ಮರ ಏರಿದ್ದ ರೀಲ್ಸ್‌ ವಿಡಿಯೋ ಗ್ರಾಫರ್‌ ಇಡೀ ಕೃತ್ಯವನ್ನು ಮರದ ಮೇಲೆ ಕುಳಿತುಕೊಂಡೆ ಸೆರೆ ಹಿಡಿಯುತ್ತಿದ್ದರು. ಇದೀಗ ಎನ್‌ಐಎಗೆ ಆ ವಿಡಿಯೋ ಗ್ರಾಫರ್‌ (Reels Videographer) ಪ್ರಮುಖ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ ಇರ್ತಾರೆ ಹೋಗ್ತಾರೆ, ಆದ್ರೆ ನಮ್ಗೆ ದೇಶ ರಕ್ಷಣೆ ಮುಖ್ಯ: ಮಲ್ಲಿಕಾರ್ಜುನ ಖರ್ಗೆ

    ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ:
    ಸದ್ಯ ಲಭ್ಯವಾಗಿರುವ ವಿಡಿಯೋ ಪ್ರಕಾರ, ನಾಲ್ವರು ಉಗ್ರರು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದರು. ಇಬ್ಬರು ಹುಲ್ಲುಗಾವಲು ಪ್ರದೇಶದ ಎರಡೂ ಬದಿ ಅವಿತುಕೊಂಡಿದ್ದರೆ, ಮತ್ತಿಬ್ಬರು ಅಲ್ಲೇ ಇದ್ದ ತಿಂಡಿ ಅಂಗಡಿ ಬಳಿ ಅವಿತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಆಗ ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನ ಧರ್ಮದ ಬಗ್ಗೆ ಕೇಳುತ್ತಾ ಬಂದವರು. ಕೆಲವರು ತಪ್ಪಿಸಿಕೊಳ್ಳು ತಾನು ಮುಸ್ಲಿಂ ಎಂದು ಹೇಳಿದಾಗ ಕಲಿಮಾ ಪಠಿಸಲು ಹೇಳಲಾಯಿತು. ಬಳಿಕ ಕಲಿಮಾ ಪಠಿಸಲು ಸಾಧ್ಯವಾಗದವರನ್ನ ಪಾಯಿಂಟ್‌ ಬ್ಲಾಕ್‌ನಲ್ಲಿ ಶೂಟ್‌ ಮಾಡುತ್ತಾ ಬಂದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.

    ಪ್ರತ್ಯಕ್ಷದರ್ಶಿಗಳ ವಿಚಾರಣೆ
    ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್‌ಐಎ ತಂಡ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದೆ. ಜೊತೆಗೆ ಉಗ್ರರ ಕ್ರಿಯಾಯೋಜನೆಯ ಬಗ್ಗೆ ಸುಳಿವು ಪಡೆಯಲು ಎಂಟ್ರಿ, ಎಕ್ಸಿಟ್‌ ಸ್ಥಳಗಳನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗೋದು ಒಳ್ಳೆದು: ಜಗದೀಶ್ ಶೆಟ್ಟರ್

  • ಮತ್ತೊಬ್ಬ ಉಗ್ರನ ಮನೆ ಉಡೀಸ್‌ – ಇಲ್ಲಿಯವರೆಗೆ 8 ಉಗ್ರರ ನಿವಾಸ ಧ್ವಂಸ

    ಮತ್ತೊಬ್ಬ ಉಗ್ರನ ಮನೆ ಉಡೀಸ್‌ – ಇಲ್ಲಿಯವರೆಗೆ 8 ಉಗ್ರರ ನಿವಾಸ ಧ್ವಂಸ

    ಶ್ರೀನಗರ: ಪಹಲ್ಗಾಮ್‌ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭದ್ರತಾ ಪಡೆಗಳ ಸಚ್ಛ ಕಾಶ್ಮೀರ (Jammu Kashmir) ಅಭಿಯಾನ ಮತ್ತಷ್ಟು ತೀವ್ರಗೊಂಡಿದೆ. ಉಗ್ರರ ಮನೆಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿರುವ ಭದ್ರತಾ ಈಗ ಮತ್ತೊಬ್ಬ ಉಗ್ರನ ಮನೆಯನ್ನು (House) ಸ್ಫೋಟಿಸಿದೆ.

    ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ ಭಯೋತ್ಪಾದಕ ಜಮೀಲ್ ಅಹ್ಮದ್‌ನ ಮನೆಯನ್ನು ಭದ್ರತಾ ಪಡೆಗಳು ಸ್ಫೋಟಿಸಿವೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ 8 ಉಗ್ರರ ಮನೆಗಳನ್ನು ಧ್ವಂಸಗೊಳಿಸಿದಂತಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

     

    ಕಳೆದ ಮೂರು ದಿನಗಳಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ, ಭದ್ರತಾ ಪಡೆಗಳು ಕಣಿವೆಯಾದ್ಯಂತ ಹಲವಾರು ಭಯೋತ್ಪಾದಕರ ಆಸ್ತಿಗಳನ್ನು ಧ್ವಂಸಗೊಳಿಸಿವೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ – NIA ಹೆಗಲಿಗೆ ತನಿಖೆಯ ಹೊಣೆ

    ಭದ್ರತಾ ಪಡೆಗಳು ಈಗ ಅನುಮಾನ ಬಂವರ ಮನೆಗಳನ್ನು ಹುಡುಕಿ ಶಸ್ತ್ರಸ್ತ್ರ ಪತ್ತೆ ಮಾಡುತ್ತಿದ್ದಾರೆ. ಉಗ್ರರಿಗೆ ಸಹಕಾರ ನೀಡಿದ ಆರೋಪದ ಅಡಿ ನೂರಾರು ಮಂದಿ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

    ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು (Pahalgam Terror Attack) ಬೆಂಬಲಿಸಿ ಪೋಸ್ಟ್‌ ಹಾಕಿದ್ದ ನಿವೃತ್ತ ಶಿಕ್ಷಕ, ವಕೀಲ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ 19 ಜನರನ್ನು ಬಂಧಿಸಲಾಗಿದೆ.

    ಅಸ್ಸಾಂನ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ ಶಾಸಕ ಅಮೀನುಲ್ ಇಸ್ಲಾಂ ಅವರನ್ನು ಗುರುವಾರ ಬಂಧಿಸಲಾಗಿತ್ತು. ಅವರು, 2019ರ ಪುಲ್ವಾಮಾ ದಾಳಿ ಮತ್ತು ಪಹಲ್ಗಾಮ್ ದಾಳಿಯು ಕೇಂದ್ರ ಸರ್ಕಾರದ ಪಿತೂರಿ ಎಂದು ಆರೋಪಿಸಿದ್ದರು. ಅವರನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ – NIA ಹೆಗಲಿಗೆ ತನಿಖೆಯ ಹೊಣೆ

    ಶುಕ್ರವಾರದವರೆಗೆ ಅಸ್ಸಾಂನಲ್ಲಿ ಬಂಧಿಸಲಾದ ಇತರರಲ್ಲಿ ಹೈಲಕಂಡಿಯ ಎಂಡಿ ಜಬೀರ್ ಹುಸೇನ್, ಸಿಲ್ಚಾರ್‌ನ ಎಂಡಿ ಎಕೆ ಬಹಾವುದ್ದೀನ್ ಮತ್ತು ಎಂಡಿ ಜಾವೇದ್ ಮಜುಂದಾರ್, ಮೋರಿಗಾಂವ್‌ನ ಎಂಡಿ ಮಹಾಹರ್ ಮಿಯಾ ಮತ್ತು ಶಿವಸಾಗರ್‌ನ ಎಂಡಿ ಸಾಹಿಲ್ ಅಲಿ ಸೇರಿದ್ದಾರೆ. ಕರೀಂಗಂಜ್‌ನ ಎಂಡಿ ಮುಸ್ತಾ ಅಹ್ಮದ್ ಅಲಿಯಾಸ್ ಸಹೇಲ್ ಶುಕ್ರವಾರ ರಾತ್ರಿ ಫೇಸ್‌ಬುಕ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪೋಸ್ಟ್ ಮಾಡಿದ್ದ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಬಂಧಿತ ಹುಸೇನ್ ಪತ್ರಕರ್ತನಾಗಿದ್ದಾನೆ. ಬಹಾವುದ್ದೀನ್ ಸಿಲ್ಚಾರ್‌ನಲ್ಲಿರುವ ಅಸ್ಸಾಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾನೆ. ಮಜುಂದಾರ್ ವಕೀಲನಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಎಂಡಿ ಜರೀಫ್ ಅಲಿ ಮತ್ತು ವಿದ್ಯಾರ್ಥಿ ಸಂಘಟನೆಯಾದ ಸತ್ರ ಮುಕ್ತಿ ಸಂಗ್ರಾಮ್ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಅನಿಲ್ ಬನಿಯಾನನ್ನು ಶನಿವಾರ ಬಿಸ್ವಾನಾಥ್‌ನಲ್ಲಿ ಬಂಧಿಸಲಾಗಿತ್ತು. ಸುಮನ್ ಮಜುಂದಾರ್ ಅಲಿಯಾಸ್ ಬುಲ್ಬುಲ್ ಅಲೋಮ್ ಮಜುಂದಾರ್‌ನನ್ನು ಹೈಲಕಂಡಿಯಲ್ಲಿ, ಮಶುದ್ ಅಜರ್‌ನನ್ನು ನಾಗಾಂವ್‌ನಲ್ಲಿ ಮತ್ತು ಗುವಾಹಟಿ ಬಳಿಯ ಹಜೋದಿಂದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವರೆಲ್ಲ ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಕಾಮೆಂಟ್‌ಗಳನ್ನು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತ್ರಿಪುರದಲ್ಲಿ ಇಬ್ಬರು ನಿವೃತ್ತ ಶಿಕ್ಷಕರನ್ನು ಒಳಗೊಂಡಂತೆ ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಮೇಘಾಲಯದಲ್ಲಿ, ಗುವಾಹಟಿಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ವೀಡಿಯೊಗೆ ದೇಶ ವಿರೋಧಿ ಕಾಮೆಂಟ್ ಮಾಡಿದವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ದೇಶದಲ್ಲಿ ಇದುವರೆಗೂ ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ ಹಾಗೂ ಕಾಮೆಂಟ್‌ ಮಾಡಿದ 19 ಜನರ ಬಂಧನವಾಗಿದೆ.

    ಅಗತ್ಯವಿದ್ದರೆ ಬಂಧಿತರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಬಂಧನೆಗಳನ್ನು ಹೇರುತ್ತೇವೆ. ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆ ಉಡೀಸ್!

  • ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ – ಕಾರವಾರ ಕದಂಬ ನೌಕಾ ನೆಲೆಯಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿರುವ ನೌಕೆಗಳು

    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ – ಕಾರವಾರ ಕದಂಬ ನೌಕಾ ನೆಲೆಯಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿರುವ ನೌಕೆಗಳು

    ಕಾರವಾರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಹಿಂದೂಗಳ ಹತ್ಯೆ ಬೆನ್ನಲ್ಲೇ ಕೇಂದ್ರ ಸರ್ಕಾರ ಮಿಲಿಟರಿ ಆಪರೇಷನ್‌ಗೆ ಸಿದ್ಧತೆ ಮಾಡಿಕೊಂಡಿದೆ.

    ಕಾರವಾರದ ಕದಂಬ ನೌಕಾ ನೆಲೆಯಲ್ಲಿ (Karwar Kadamba Naval Base) ಹೈಯಸ್ಟ್ ಸ್ಟೇಟ್ ಆಫ್ ರೆಡಿನಸ್ ಅಲರ್ಟ್‌ (ರೆಡ್ ಅಲರ್ಟ್‌) ನೀಡಲಾಗಿದ್ದು, ನೌಕಾ ನೆಲೆ ಸಿಬ್ಬಂದಿಗಳಿಗೆ ರಜೆಯನ್ನು ಮೊಟಕುಗೊಳಿಸಲಾಗಿದೆ. ಯುದ್ಧ ಹಡಗುಗಳು ಹಾಗೂ ಸಬ್ ಮೆರಿನ್‌ಗಳು ಪಾಕಿಸ್ತಾನದ ಗಡಿಗೆ ತೆರಳಲು ಸಿದ್ಧವಾಗಿವೆ. ಕಾರವಾರ ನೌಕಾ ನೆಲೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್‌ಎಸ್ ವಿಶಾಕ ಪಟ್ಟಣಮ್ ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಸಿದ್ಧವಾಗಿವೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ

    ಅರಬ್ಬೀ ಸಮುದ್ರದ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಡಿಗೆ ತೆರಳಲು ಸನ್ನದ್ಧವಾಗಿದ್ದು, ಫ್ಲಾಗ್ ಆಫೀಸರ್‌ಗಳ ಸೂಚನೆಗೆ ಕಾಯುತ್ತಿವೆ. ಇನ್ನು ಕಾರವಾರ ಕದಂಬ ನೌಕಾನೆಲೆಯೇ ಬೇಸ್ ಮಾಡಿಕೊಂಡಿರುವ ವಿಶ್ವದ ಅತೀ ದೊಡ್ಡ ಏರ್ ಕ್ರಾಪ್ಟ ನೌಕೆ ಎಂಬ ಹೆಸರು ಪಡೆದಿರುವ ಐಎನ್‌ಎಸ್ ವಿಕ್ರಮಾದಿತ್ಯ ಹಡಗು ಕೊಚ್ಚಿಯ ರಿಪೇರಿ ಯಾರ್ಡ್‌ನಲ್ಲಿದ್ದು ಯದ್ಧಕ್ಕೆ ತೆರಳಲು ಸಿದ್ಧಪಡಿಸಲಾಗುತ್ತಿದೆ. ಮೇ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದ ಗಡಿಗೆ ತೆರಳಲಿದೆ.

    ಸದ್ಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐಎನ್‌ಎಸ್ ಸುಭದ್ರ, ಐಎನ್‌ಎಸ್ ಜ್ಯೋತಿ, ಐಎನ್‌ಎಸ್ ವಿಶಾಕಪಟ್ಟಣಂ, ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಅರಬ್ಬೀ ಸಮುದ್ರದ ಪಂಜಾಬ್ ಪ್ರಾಂತ್ಯದ ಗಡಿ ಭಾಗಕ್ಕೆ ತೆರಳಲು ಅಣಿಯಾಗಿದೆ. ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

  • ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಸಂಬಂಧ ಕಡಿದುಕೊಳ್ಳಬೇಕು: ಸೌರವ್ ಗಂಗೂಲಿ ಒತ್ತಾಯ

    ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಸಂಬಂಧ ಕಡಿದುಕೊಳ್ಳಬೇಕು: ಸೌರವ್ ಗಂಗೂಲಿ ಒತ್ತಾಯ

    ನವದೆಹಲಿ: ಪಾಕಿಸ್ತಾನದ (Pakistan) ಜೊತೆಗೆ ಭಾರತ ಕ್ರಿಕೆಟ್ (Cricket) ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಒತ್ತಾಯಿಸಿದ್ದಾರೆ.

    ಪಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ಖಂಡಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು. ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಲ್ಲಿಯೂ ಆಡಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ನೆಲೆಸಿದ್ದ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಬಂಧನ

    ಪ್ರತಿ ವರ್ಷವೂ ಭಾರತದ ನೆಲದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು. ಖಂಡಿತವಾಗಿಯೂ ಭಾರತ ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿರುವುದು ತಮಾಷೆಯಾಗಿ ಮಾರ್ಪಟ್ಟಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: Uttar Pradesh| ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಮೂವರು ಕಾರ್ಮಿಕರು ದುರ್ಮರಣ

  • ದೇಶಕ್ಕೇನಾದರೂ ಪರವಾಗಿಲ್ಲ, ವೋಟ್ ಬಿದ್ದರೆ ಸಾಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ ಸಿಎಂ: ಅಶೋಕ್

    ದೇಶಕ್ಕೇನಾದರೂ ಪರವಾಗಿಲ್ಲ, ವೋಟ್ ಬಿದ್ದರೆ ಸಾಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ ಸಿಎಂ: ಅಶೋಕ್

    ಬೆಂಗಳೂರು: ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ (CM Siddaramaiah) ಇಂದು ನಮ್ಮ ಮುಂದೆ ಇದ್ದಾರೆ, ದೇಶಕ್ಕೆ ಏನಾದರೂ ಪರವಾಗಿಲ್ಲ, ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಸಿಎಂ ಬಂದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ಕಿಡಿಕಾರಿದ್ದಾರೆ.

    ವಿಧಾನಸಭೆಯಲ್ಲಿ ಪಹಲ್ಗಾಮ್ (Pahalgam) ಉಗ್ರರ ದಾಳಿ ಪ್ರಕರಣದಲ್ಲಿ ಯುದ್ಧದ ಅನಿವಾರ್ಯತೆ ಇಲ್ಲವೆಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಪೂರ್ತಿ ಮುಸ್ಲಿಮರ ಮತದ ಬಗ್ಗೆಯೇ ಯೋಚಿಸುವ ರೀತಿ ಆಗಿರುವುದು ದುರದೃಷ್ಟಕರ. ಹಾಗಾದರೆ ಸತ್ತಿರುವವರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಹಮಾಸ್ ಉಗ್ರರು ಬಂದು ತರಬೇತಿ ನೀಡಿ ಕಳುಹಿಸಿದ್ದರು ಎಂಬುದು ಮಾಹಿತಿಗಳ ಮೂಲಕ ಹೊಂದಾಣಿಕೆ ಆಗುತ್ತಿದೆ. ಅದನ್ನು ಸಿದ್ದರಾಮಯ್ಯ ಅವರು ಮಾತ್ರ ಕ್ಷಮಿಸಬಹುದಷ್ಟೇ. ದೇಶಕ್ಕೆ ಏನು ಆದರೂ ಪರವಾಗಿಲ್ಲ, ತಮಗೆ ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ ಇಂದು ನಮ್ಮ ಮುಂದೆ ಇದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ

    ನಿಮ್ಮ ಮನೆಯಲ್ಲಿ ಈ ರೀತಿ ಉಗ್ರರು ಬಂದು ಹೊಡೆದು ಹಾಕಿರುತ್ತಿದ್ದರೆ ಈ ರೀತಿ ಹೇಳುತ್ತಿದ್ದರಾ? ಹಾಗಾದರೆ ಸತ್ತವರ ಮನೆ ಬಾಗಿಲಿಗೆ ಹಾರ ಹಾಕಲು ಯಾಕೆ ಹೋಗಿದ್ರಿ? ಇಲ್ಲಿ ಬಂದು ಸತ್ತವರು ಸತ್ತರು ಎನ್ನುವುದು ನಾಚಿಕೆಗೇಡಿನ ಸಂಗತಿ. ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಮನೆ ಮುರಿಯುವ ಮಾತಾಡಿದ್ದಾರೆ. ಯಾವುದೇ ಪಾಕಿಸ್ತಾನಿ ಭಾರತದಲ್ಲಿ ಇರಬಾರದು ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಭಟ್ಕಳದಲ್ಲಿ 10ಕ್ಕಿಂತ ಹೆಚ್ಚು ಪಾಕಿಸ್ತಾನದವರು ಇದ್ದಾರೆ. ಆದರೆ ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯರನ್ನು ಹೊರ ಹಾಕಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ. ಕೂಡಲೇ ಭಟ್ಕಳದಲ್ಲಿರುವ ಪಾಕಿಸ್ತಾನದವರನ್ನು ಒದ್ದು ಹೊರ ಹಾಕಬೇಕು. ಮೀರ್ ಸಾಧಿಕ್‌ನಂತವರು ನಮ್ಮಲ್ಲೇ ಇದ್ದಾರೆ ಎಂದು ಆರೋಪಿಸಿದರು.

    ಕಾಶ್ಮೀರದಲ್ಲಿ ಇರುವುದು ಐಎನ್‌ಡಿಐ ಮೈತ್ರಿ ಸರ್ಕಾರ, ಯಾವುದೇ ಸೆಕ್ಯುರಿಟಿ ಬಗ್ಗೆ ಅಲ್ಲಿನ ರಾಜ್ಯ ಸರ್ಕಾರ ಕೊಡುವ ಸಲಹೆ ಮೇರೆಗೆ ಆಗುತ್ತದೆ. ರಾಮೇಶ್ವರಂ ಕೆಫೆ, ಕುಕ್ಕರ್ ಬಾಂಬ್ ಸ್ಫೋಟ ಆದಾಗ ಏನು ಮಣ್ಣು ತಿನ್ನುತ್ತಿದ್ರಾ? ದೇಶದ ಪ್ರಶ್ನೆ ಬಂದಾಗ ಎಲ್ಲರೂ ಒಂದೇ ವಾಯ್ಸ್‌ನಲ್ಲಿ ಮಾತಾಡಬೇಕು. ಆದರೆ ಸಿದ್ದರಾಮಯ್ಯ ವೋಟ್ ವಾಯ್ಸ್‌ನಲ್ಲಿ ಮಾತಾಡುತ್ತಾರೆ. ಕಲಬುರ್ಗಿಯ ರಸ್ತೆಯಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದರೆ ಮುಸ್ಲಿಂ ಮಹಿಳೆಯರು ಅದಕ್ಕೆ ಗೌರವ ತೋರಿಸಿದ್ದಾರೆ. ದೇಶದ ಒಳಗೆ ಇರುವ ದೇಶ ದ್ರೋಹಿಗಳನ್ನು ಮಟ್ಟ ಹಾಕಬೇಕು. ಸಿದ್ದರಾಮಯ್ಯ ಹೇಳಿಕೆ ಮೃತಪಟ್ಟವರಿಗೆ ಅವಮಾನವಾಗುವಂತಹದ್ದು, ಕೂಡಲೇ ಸಿದ್ದರಾಮಯ್ಯ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಕೇಂದ್ರ ಗುಪ್ತಚರ ವ್ಯವಸ್ಥೆ ವೈಫಲ್ಯ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸಂತೋಷ್ ಲಾಡ್ (Santosh Lad) ಇನ್ನಷ್ಟು ಮೆಚ್ಯೂರ್ ಆಗಬೇಕು. ಸೈನ್ಯದ ಬಗ್ಗೆಯೇ ಅನುಮಾನ ಪಡುತ್ತಾರಲ್ಲಾ? ಸೈನಿಕರು ಅಲ್ಲಿ ಪ್ರಾಣದ ಹಂಗು ತೊರೆದು ಇರುವುದರಿಂದ ಇಲ್ಲಿ ಸಂತೋಷ್ ಲಾಡ್ ಆರಾಮಾಗಿ ಮಜಾ ಹೊಡೆದುಕೊಂಡು ಇದ್ದಾರೆ. ಇದೇ ರೀತಿ ಪಕ್ಷಗಳು ಪಾಕಿಸ್ತಾನದಲ್ಲೂ (Pakistan) ಮಾಡುತ್ತಿದ್ದಾರಾ? ದೇಶಕ್ಕೆ ಸಂಕಷ್ಟ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಲಿಯಬೇಕು. ಸಿದ್ದರಾಮಯ್ಯ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಇವರೆಲ್ಲರ ಹೇಳಿಕೆಗೆ ಜನ ಪಾಠ ಕಲಿಸಿಯೇ ಕಲಿಸುತ್ತಾರೆ ಎಂದರು.ಇದನ್ನೂ ಓದಿ: ನಡು ರಸ್ತೆಯಲ್ಲೇ ಕಾರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿ ಮಹಿಳೆಯ ದರ್ಪ

  • ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ

    ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ

    – ಪಹಲ್ಗಾಮ್ ವಿಚಾರದಲ್ಲಿ ಸರ್ಕಾರದ ನಿರ್ಣಯಕ್ಕೆ ನಮ್ಮ ಬೆಂಬಲ: ಎಐಸಿಸಿ ಅಧ್ಯಕ್ಷ

    ಬೆಂಗಳೂರು: ಸರ್ಕಾರ ಒಂದು ಸಭೆ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಆದರೆ, ಅವರ ಹಾಜರಾತಿ ಇರಲಿಲ್ಲ. ಪ್ರಧಾನ ಮಂತ್ರಿಗಳ ಈ ವರ್ತನೆ ಸರಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದರು.

    ನಗರದ ಕೆಜೆ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿ (Pahalgam Terror Attack) ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು. ನಾವು ಎಲ್ಲರೂ ಹೋಗಿದ್ದೆವು. ಎಲ್ಲರೂ ಭಾಗಿಯಾಗಿದ್ದೆವು. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಕೂಡ ಇದ್ದರು. ಸರ್ಕಾರ ಒಂದು ಸಭೆಯನ್ನ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಆದರೆ, ಅವರ ಹಾಜರಾತಿ ಇರಲಿಲ್ಲ. ಈ ನಡೆ ಸರಿಯಲ್ಲ. ಇಂತಹ ಘಟನೆ ನಡೆದಿದೆ. ಸುಮಾರು 26 ಜನರು ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಾಳುಗಳಾಗಿದ್ದಾರೆ. ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿ ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ: ಸಿದ್ದರಾಮಯ್ಯ

    ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗಿದ್ದೀರಿ. ದೆಹಲಿಯಲ್ಲಿ ಬರಲು ಆಗುವುದಿಲ್ಲ. ಅವರು ಸೀರಿಯಸ್ ಇಲ್ಲ ಅಂತ ಅರ್ಥ. ಅವರು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಬೇರೆ ಕಡೆ ಭಾಷಣ ಮಾಡುವ ಬದಲು ಇಲ್ಲಿ ಬಂದು ಸಮಜಾಯಿಷಿ ಹೇಳಬೇಕಿತ್ತು. ಏನೇನು ಘಟನೆ ನಡೆಯಿತು, ಯಾಕೆ ನಡೆಯಿತು, ಯಾರು ಹೊಣೆ ಹೊತ್ತಿದ್ದಾರೆ? ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆಯಾ? ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆಯಾ? ಐಬಿ ಲ್ಯಾಪ್ಸ್ ಆಗಿದೆಯಾ? ಇನ್ಫಾರ್ಮರ್ಸ್ ಲ್ಯಾಪ್ಸ್ ಆಗಿದೆಯಾ, ಪೊಲೀಸರ ಲ್ಯಾಪ್ಸ್ ಆಗಿದೆಯಾ? ಯಾರದ್ದು ಅನ್ನೋದು ನಮಗೆ ತಿಳಿಸಬೇಕು. ಆದರೆ, ಅವರು ಬರಲೇ ಇಲ್ಲ. ಅದಕ್ಕೆ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಬೇಸರಿಸಿದರು.

    ಪಹಲ್ಗಾಮ್‌ನಲ್ಲಿ ಏನಾಯ್ತು? ಜಾತಿ ಕೇಳಿ, ಧರ್ಮ ಕೇಳಿ ಬಲಿ ಹಾಕಿದರು. ಆ ರೀತಿ ನಡೆಯಬಾರದು. ಈ ರಾಜ್ಯದಲ್ಲೂ ಕೂಡ ಕೆಲವರು ಜಾತಿಯನ್ನು ಆಧರಿಸಿ, ಧರ್ಮವನ್ನೇ ಆಧರಿಸಿ ಮಾತನಾಡುತ್ತಾರೆ. ಅದು ಯಾವುದೇ ಕಾರಣಕ್ಕೂ ನಡೆಯಬಾರದು. ಶಿಕ್ಷಣ ಸಂಸ್ಥೆಯಲ್ಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ನೀವು ವಿದ್ಯಾರ್ಥಿಗಳು ಕೂಡ ಜಾತಿ-ಧರ್ಮದ ಬಗ್ಗೆ ಮಾತನಾಡಬಾರದು ಎಂದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಕೋರನ ಮನೆ ಧ್ವಂಸ – 24 ಗಂಟೆಗಳಲ್ಲಿ 3ನೇ ಮನೆ ಉಡೀಸ್

    ಸ್ವತಃ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಇದು ಸೆಕ್ಯೂರಿಟಿ ಲ್ಯಾಪ್ಸ್ ಅಂತ. ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ ಅಂತ ಅಮಿತ್ ಶಾ ಹೇಳಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿ ಎಂದು ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೇವೆ. ಎಲ್ಲವನ್ನೂ ವ್ಯವಸ್ಥೆ ಮಾಡಬೇಕಿತ್ತು. ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು. ಇನ್ಮುಂದೆ ಈ ರೀತಿ ಆಗೋದಿಲ್ಲ ಅಂತ ಅಮಿತ್ ಶಾ ತಿಳಿಸಿದ್ದಾರೆ. ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಕೂಡ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ. ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಅಂತ ತಿಳಿಸಿದ್ದೇವೆ. ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಅಂತ ತಿಳಿಸಿದ್ದೇವೆ ಎಂದರು.

  • ಪಹಲ್ಗಾಮ್ ದಾಳಿಕೋರನ ಮನೆ ಧ್ವಂಸ – 24 ಗಂಟೆಗಳಲ್ಲಿ 3ನೇ ಮನೆ ಉಡೀಸ್

    ಪಹಲ್ಗಾಮ್ ದಾಳಿಕೋರನ ಮನೆ ಧ್ವಂಸ – 24 ಗಂಟೆಗಳಲ್ಲಿ 3ನೇ ಮನೆ ಉಡೀಸ್

    ಶ್ರೀನಗರ: ಪಹಲ್ಗಾಮ್ ದಾಳಿಯಲ್ಲಿ (Pahalgam Attack) ಭಾಗಿಯಾಗಿರುವ ಶಂಕೆಯ ಮೇಲೆ ಮತ್ತೊಬ್ಬ ಭಯೋತ್ಪಾದಕ (Terrorist) ಎಹ್ಸಾನ್ ಉಲ್ ಹಕ್‌ನ ಮನೆಯನ್ನು ಭದ್ರತಾ ಪಡೆಯು ಧ್ವಂಸ ಮಾಡಿದೆ. ಸೇನೆಯು ಈವರೆಗೆ 24 ಗಂಟೆಯಲ್ಲಿ ಮೂವರು ಉಗ್ರರ ಮನೆಯನ್ನು ಉಡೀಸ್ ಮಾಡಿದೆ.

    ಪುಲ್ವಾಮದಲ್ಲಿರುವ (Pulwama) ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಎಹ್ಸಾನ್‌ನ ಮನೆಯನ್ನು ಸೇನೆಯು ಕೆಡವಿದೆ. ಪೆಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಮನೆ ನಾಶ ಮಾಡಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ನಡೆದಿದ್ದು ಘೋರ ದುರಂತ – ಭಾರತ, ಪಾಕ್‌ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ: ಟ್ರಂಪ್

    ಉಗ್ರ ಎಹ್ಸಾನ್ 2018ರಲ್ಲಿ ಪಾಕಿಸ್ತಾನದಿಂದ ತರಬೇತಿ ಪಡೆದಿದ್ದನೆಂದು ಹೇಳಲಾಗಿದ್ದು, ಇತ್ತೀಚೆಗೆ ಕಾಶ್ಮೀರದ ಕಣಿವೆಯನ್ನು ಮತ್ತೆ ಪ್ರವೇಶಿಸಿದ್ದನು. ಇದನ್ನೂ ಓದಿ: ಬಲೂಚ್ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – ಆಕ್ರಮಿತ ಪಾಕಿಸ್ತಾನಿ ಸೇನೆಯ 10 ಸಿಬ್ಬಂದಿ ಹತ್ಯೆ

    ಶುಕ್ರವಾರ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದ ಟ್ರಾಲ್‌ನ ಗೋರಿ ಪ್ರದೇಶದಲ್ಲಿ ಸೇನೆಯು ಸಕ್ರಿಯ ಭಯೋತ್ಪಾದಕನ ಮನೆಯನ್ನು ಬಾಂಬ್‌ನಿಂದ ಸ್ಫೋಟಿಸಿತ್ತು. ಮತ್ತೊಬ್ಬ ಶಂಕಿತ ಉಗ್ರನ ಮನೆಯನ್ನು ಬುಲ್ಡೋಜರ್‌ನಿಂದ ಕೆಡವಲಾಗಿತ್ತು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ – ಜಮ್ಮು ಸರ್ಕಾರ ಅಲರ್ಟ್; ವೈದ್ಯಕೀಯ ಸಿಬ್ಬಂದಿ ರಜೆ ರದ್ದು

    ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ನಿವಾಸಿ ಲಷ್ಕರ್ ಭಯೋತ್ಪಾದಕ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಾಯ ಮನೆಯನ್ನೂ ಸಹ ಧ್ವಂಸ ಮಾಡಲಾಗಿದೆ. ಈತ ಕಳೆದ ನಾಲ್ಕು ವರ್ಷಗಳಿಂದ ಉಗ್ರ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ದೇಶ ವಿರೋಧಿ ಕಾರ್ಯಗಳಿಗೆ ಬೆಂಬಲಿಸುತ್ತಿದ್ದನು ಎಂದು ಮೂಲಗಳು ತಿಳಿಸಿವೆ.

  • Pahalgam Attack | 11 ವರ್ಷದಿಂದ ದಿನದ 24 ಗಂಟೆ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. – ಕೇಂದ್ರದ ವಿರುದ್ಧ ಸಂತೋಷ್‌ ಲಾಡ್‌ ಸಿಡಿಮಿಡಿ

    Pahalgam Attack | 11 ವರ್ಷದಿಂದ ದಿನದ 24 ಗಂಟೆ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. – ಕೇಂದ್ರದ ವಿರುದ್ಧ ಸಂತೋಷ್‌ ಲಾಡ್‌ ಸಿಡಿಮಿಡಿ

    – ಅಲ್ಲಿ 2,000 ಜನರನ್ನ ಹೆಗಲಮೇಲೆ ಹೊತ್ಕೊಂಡು ಬಂದವರು ಮುಸ್ಲಿಮರೇ
    – 2014ರಿಂದ ಆಗಿರುವ ಹಿಂದೂಗಳ ಸಾವಿನ ಹೊಣೆ ಕೇಂದ್ರವೇ ಹೊರಬೇಕೆಂದ ಸಚಿವ

    ಬೆಂಗಳೂರು: ಕಳೆದ 11 ವರ್ಷಗಳಿಂದಲೂ ಕೇಂದ್ರ ಸರ್ಕಾರ ದಿನದ 24 ಗಂಟೆಯೂ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. ಅಂತ ಬೈಯೋದು ಬಿಟ್ರೆ ಬೇರೇನು ಮಾಡಿಲ್ಲ ಎಂದು ಸಚಿವ ಸಂತೋಷ್‌ ಲಾಡ್‌ (Santosh Lad) ಸಿಡಿಮಿಡಿಗೊಂಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಜಿಕಲ್‌ ಸ್ಟ್ರೈಕ್‌ ಏನಾಯ್ತು? ಪುಲ್ವಾಮಾ ದಾಳಿ ಏನಾಯ್ತು? ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಯಾಕೆ ಮೆರವಣಿಗೆ ಮಾಡ್ತೀರ, ನೀವು ಹಿಂದೂಗಳನ್ನ ಕೊಂದಿರೋದು. 2014ರಿಂದ ಆಗಿರುವ ಹಿಂದೂಗಳ ಹತ್ಯೆಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು. 20 ರಾಜ್ಯಗಳಲ್ಲಿ ನಿಮ್ಮ ಪಕ್ಷದವರೇ ಸಿಎಂ, ನೀವೆ ಪಿಎಂ, ಬರೀ ಹಿಂದೂ ಮುಸ್ಲಿಂ (Hindu – Muslim) ಬಿಟ್ರೆ ಬೇರೆ ಏನೂ ಇಲ್ಲ. ಸರ್ಕಾರ ಬಂದು ಇವತ್ತು ವೈಫಲ್ಯ ಅಂತ ಹೇಳಿದೆ. ಇವರೇ ಆರ್ಟಿಕಲ್ 370 ರದ್ದು ಮಾಡಿದ್ರು, ಎಲ್ಲಾ ನಮ್ಮ ಕಂಟ್ರೋಲ್‌ನಲ್ಲೇ ಇದೆ ಅಂದ್ರು. ನಾನು ನೋಡಿದಂತೆ ಅಲ್ಲಿನ ಲೋಕಲ್ ಜನ ಬ್ಯೂಟಿಫುಲ್ ಆಗಿದ್ದಾರೆ. ಆದ್ರೆ ನಮಗಿಂತ ಹೆಚ್ಚಾಗಿ ಅಲ್ಲಿನ ಜನ ರಕ್ತ ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೇಗೆ ಬಂದೂಕು ಬಂತು, ಅವರು ಹೇಗೆ ಬಂದ್ರು ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಎಂದು ಕಿಡಿ ಕಾರಿದರು.

    ಕಳೆದ 11 ವರ್ಷಗಳಿಂದ ದಿನಬೆಳಗಾದ್ರೆ ಹಿಂದೂ ಮುಸ್ಲಿಂ ವಿಚಾರ ಬಿಟ್ಟರೆ ಬೇರೇನಿಲ್ಲ. ಅಲ್ಲಿ ಉಗ್ರರ ದಾಳಿಯಾದಾಗ 2000 ಪ್ರವಾಸಿಗರನ್ನು ಸ್ಥಳಾಂತರ ಮಾಡಿದ್ದು, ಅದೇ ಮುಸ್ಲಿಮರು. ಇನ್ನಾದ್ರೂ ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆ ಮಾಡೋಣ ಅಂತ ಮನವಿ ಮಾಡಿದರು.

    ಪಹಲ್ಗಾಮ್ ಘಟನೆ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಪ್ರವಾಸಿಗರಿಗೆ ಆಗಿದ್ದು ಭಯಾನಕ ಘಟನೆ. ರಾಜಕೀಯ ಮಾತನಾಡಬಾರದು ಅಂದುಕೊಂಡಿದ್ದೇವೆ. ಆದರೆ ಕೆಲವಾರು ಪ್ರಶ್ನೆ ನಮ್ಮನ್ನ ಕಾಡುತ್ತಿವೆ. ಇಂತಹ ಘಟನೆಗಳು ನಡೆದಾಗ ಯಾವ ಕೇಂದ್ರ ಸಚಿವರೂ ಪ್ರತಿಕ್ರಿಯೆ ನೀಡಲ್ಲ. ನೇರವಾಗಿ ಬಂದು ಉತ್ತರ ಕೊಟ್ಟಿರೋದು ಬೆರಳೆಣಿಕೆಯಷ್ಟು ಸಚಿವರು ಮಾತ್ರ. ಕೇವಲ ಸ್ಟುಡಿಯೋಗಳಲ್ಲಿ ಪರ ವಿರೋಧ ಚರ್ಚೆಗಳು ಆಗ್ತಿವೆ. ಕೇಂದ್ರ ಸರ್ಕಾರದಲ್ಲಿ ಆದ ವೈಫಲ್ಯದ ಬಗ್ಗೆ ಯಾರೂ ಮಾತನಾಡ್ತಿಲ್ಲ. 2 ದಿನಗಳ ಬಳಿಕ ಕೇಂದ್ರ ಸರ್ಕಾರ ಭದ್ರತಾ ಲೋಪ ಆಗಿದೆ ಅಂತ ಒಪ್ಪಿಕೊಳ್ಳುವಷ್ಟರಲ್ಲಿ, ಆಗಬಾರದ್ದೆಲ್ಲ ಚರ್ಚೆ ಆಗಿ ಹೋಗಿತ್ತು ಎಂದು ಅಸಮಾಧಾನ ಹೊರಹಾಕಿದರು.

    ಕೇಂದ್ರ ಗೃಹ ಸಚಿವರ ರಾಜೀನಾಮೆ ಯಾರೂ ಕೇಳ್ತಿಲ್ಲ. ನಮ್ಮ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಕೇಳ್ತಿದ್ದಾರೆ. ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ. ಒಂದು ಹುಳನೂ ತಪ್ಪಿಸಿಕೊಂಡು ಹೋಗೋಕೆ ಆಗಲ್ಲ. ಗೃಹ ಸಚಿವರನ್ನ ಕೇಳ್ತೇನೆ, ದಾಳಿ ನಡೆದಾಗ ಯಾಕೆ ಒಬ್ಬ ಸೆಕ್ಯೂರಿಟಿನೂ ಇಲ್ಲ ಯಾಕೆ..? ಇದರ ಬಗ್ಗೆ ಚರ್ಚೆ ಆಗಬೇಕೇ ವಿನಃ ಬೇರೆಯದ್ದಕ್ಕಲ್ಲ. ಮಾತಿಗೆ ಮುನ್ನ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ-ಮುಸ್ಲಿಂ ಅಂತಾರೆ. ಹಾಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ. ಇಂತಹ ದೊಡ್ಡ ಘಟನೆ ನಡೆದರೂ ಪ್ರಧಾನಿ ಮೋದಿ ಬಿಹಾರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸ್ತಾರೆ ಅಂತ ಕೇಂದ್ರದ ವಿರುದ್ಧ ಹರಿಹಾಯ್ದರು.