Tag: ಪಹಲ್ಗಾಮ್ ದಾಳಿ

  • ಪಹಲ್ಗಾಮ್ ದಾಳಿ ಹಿಂದಿನ ‘ನೀನು ಹಿಂದೂನಾ’ ಅಂತ ಒಬ್ಬ ನನಗೆ ಕೇಳಿದ್ದ – ಉಗ್ರನ ಬಗ್ಗೆ ಪ್ರವಾಸಿಗರೊಬ್ಬರ ಸ್ಫೋಟಕ ಹೇಳಿಕೆ

    ಪಹಲ್ಗಾಮ್ ದಾಳಿ ಹಿಂದಿನ ‘ನೀನು ಹಿಂದೂನಾ’ ಅಂತ ಒಬ್ಬ ನನಗೆ ಕೇಳಿದ್ದ – ಉಗ್ರನ ಬಗ್ಗೆ ಪ್ರವಾಸಿಗರೊಬ್ಬರ ಸ್ಫೋಟಕ ಹೇಳಿಕೆ

    – ತನಿಖಾ ತಂಡ ರಿಲೀಸ್ ಮಾಡಿದ ರೇಖಾಚಿತ್ರದಲ್ಲಿ ಇರುವವರ ಪೈಕಿ ಒಬ್ಬ ನನ್ನ ಮಾತಾಡಿಸಿದ್ದ

    ಶ್ರೀನಗರ: ಆ ದಿನ ಉಗ್ರನೊಬ್ಬ ಇವತ್ತು ಜನದಟ್ಟಣೆ ಕಡಿಮೆ ಇದೆ ಎಂದು ನನ್ನ ಜೊತೆ ಮಾತನಾಡಿದ ಎಂದು ಮಹಾರಾಷ್ಟ್ರ (Maharashtra) ಪ್ರವಾಸಿಗ ಆದರ್ಶ್ ಸ್ಫೋಟಕ ಮಾಹಿತಿ ನೀಡಿದ್ದಾರೆ.

    ಏ.21ರಂದು ನಾನು ಕುದುರೆ ತೆಗೆದುಕೊಂಡು ಬೈಸರನ್ ವ್ಯಾಲಿಗೆ ಹೋಗಿದ್ದೆ. ಅಲ್ಲಿ ಮ್ಯಾಗಿ ಅಂಗಡಿ ಬಳಿ ನಿಂತಿದ್ದೆ. ಆಗ ನಾಲ್ಕೈದು ಜನ ಇದ್ದರು. ಆ ಪೈಕಿ ಓರ್ವ ಬಂದು, ನೀನು ಕಾಶ್ಮೀರದವನಾ? ಹಿಂದೂನಾ? ನೀನು ಇಲ್ಲಿಯವರಾ ಥರ ಕಾಣುವುದಿಲ್ಲ ಎಂದು ಕೇಳಿದ್ದ. ಆದರೆ ನಾನು ಇಲ್ಲಾ ನಾನು ಇಲ್ಲಿಯವನೇ ಎಂದು ಹೇಳಿದ್ದೆ. ಹಾಗೆಯೇ ಮಾತನಾಡುತ್ತಾ ಇವತ್ತು ಜನದಟ್ಟಣೆ ತುಂಬಾ ಕಡಿಮೆ ಇದೆ ಎಂದು ಹೇಳಿ ಅಲ್ಲಿಂದ ಹೊರಟುಹೋದರು ಎಂದರು.ಇದನ್ನೂ ಓದಿ: ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – LOCಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ

    ಅಲ್ಲಿ ನೆಟ್‌ವರ್ಕ್ ಇಲ್ಲದ ಕಾರಣ ಮ್ಯಾಗಿ ಅಂಗಡಿಯವರ ನಂಬರ್ ತೆಗೆದುಕೊಂಡು ಕೆಳಗೆ ಹೋಗಿ ಪೇಮೆಂಟ್ ಮಾಡಿದ್ದೆ. ಮಾರನೇ ದಿನ ಅಲ್ಲಿ ಉಗ್ರರ ದಾಳಿ ಆಯ್ತು. ಅದಾದ ನಂತರ ರೇಖಾಚಿತ್ರ ರಿಲೀಸ್ ಮಾಡಿದ್ದರು. ಈ ಬಗ್ಗೆ ನಾನು ನನ್ನ ತಂದೆಗೆ ಹೇಳಿದೆ. ತನಿಖಾ ತಂಡ ರಿಲೀಸ್ ಮಾಡಿದ ರೇಖಾಚಿತ್ರದ ಪೈಕಿ ಒಬ್ಬ ನನ್ನ ಜೊತೆ ಮಾತನಾಡಿದ್ದ. ಆಗ ನನ್ನ ತಂದೆ ತನಿಖಾ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದರು. ಆಗ ನಾನು ಇ-ಮೇಲ್ ಮೂಲಕ ಎನ್‌ಐಎಗೆ ಮಾಹಿತಿ ನೀಡಿದೆ ಎಂದು ತಿಳಿಸಿದರು.

    ಏ.22 ರಂದು ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ ಒಟ್ಟು 26 ಜನರು ಪ್ರಾಣಕಳೆದುಕೊಂಡಿದ್ದರು. ಈ ಪೈಕಿ ಕರ್ನಾಟಕದ ಮೂವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಸದ್ಯ ಈ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ.ಇದನ್ನೂ ಓದಿ: Fashion | ನಾರಿಯರ ಮನಗೆದ್ದ ಚೋಕರ್ ನೆಕ್ಲೆಸ್!

  • ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು  ಕಾರಣ – ಪಾಕ್‌ ನಟಿ ಕೆಂಡಾಮಂಡಲ

    ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

    ನವದೆಹಲಿ/ಇಸ್ಲಾಮಾಬಾದ್‌: ಭಾರತ (India) ಸರ್ಕಾರ  ಇನ್‌ಸ್ಟಾ ಖಾತೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌ (Asif Munir) ವಿರುದ್ಧ ಪಾಕಿಸ್ತಾನದ ಖ್ಯಾತ ನಟಿ ಹನಿಯಾ ಆಮಿರ್ (Hania Aamir)  ಕೆಂಡ ಕಾರಿದ್ದಾರೆ.

    ಪಹಲ್ಗಾಮ್‌ ದಾಳಿಗೆ ಅಸಿಮ್‌ ಮುನೀರ್‌ ಕಾರಣ. ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯ (Pakistan Army) ಮತ್ತು ಇಸ್ಲಾಮಿಕ್ ಭಯೋತ್ಪಾದಕರು (Islamist Terrorists) ಇದ್ದಾರೆ ಎಂದು ನೇರಾನೇರವಾಗಿ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

    ಪೋಸ್ಟ್‌ನಲ್ಲಿ ಏನಿದೆ?
    ಕಾಶ್ಮೀರದಲ್ಲಿ ಜನರಲ್ ಅಸಿಮ್ ಮುನೀರ್ ಅವರ ಕ್ರಮಗಳಿಂದಾಗಿ ಭಾರತದಲ್ಲಿ ಇಡೀ ಪಾಕಿಸ್ತಾನಿ ಮನರಂಜನಾ ಉದ್ಯಮವನ್ನು ನಿಷೇಧಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ

    ಭಾರತದ ಪ್ರಧಾನ ಮಂತ್ರಿಯವರಲ್ಲಿ ನಾನು ಗೌರವದಿಂದ ವಿನಂತಿ ಮಾಡುತ್ತಿದ್ದೇನೆ. ಪಾಕಿಸ್ತಾನದ ಸಾಮಾನ್ಯ ಜನರಾದ ನಾವು ಭಾರತಕ್ಕೆ ಯಾವುದೇ ತಪ್ಪು ಮಾಡಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯ ಮತ್ತು ಇಸ್ಲಾಮಿಕ್ ಭಯೋತ್ಪಾದಕರು ಇದ್ದಾರೆ.

     

    ನೀವು ಸಾಮಾನ್ಯ ಪಾಕಿಸ್ತಾನಿ ಜನರನ್ನು ಯಾಕೆ ಶಿಕ್ಷಿಸುತ್ತಿದ್ದೀರಿ? ದಯವಿಟ್ಟು ಪಾಕಿಸ್ತಾನಿ ಸೈನ್ಯ ಮತ್ತು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ, ಅಮಾಯಕ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

    ಭಾರತ ಸರ್ಕಾರ ಮಂಗಳವಾರ ಪಾಕಿಸ್ತಾನ ಮಾಧ್ಯಮಗಳ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ಬಂಧಿಸಿತ್ತು. ಮುಂದುವರಿದ ಭಾಗವಾಗಿ ಪಾಕ್‌ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ಬಂಧಿಸಿದೆ.

    ಇನ್‌ಸ್ಟಾದಲ್ಲಿ ಸುಮಾರು 1.8 ಕೋಟಿ ಫಾಲೋವರ್ಸ್‌ ಹೊಂದಿರುವ ಮಹಿರಾ ಖಾನ್ 2017 ರಲ್ಲಿ ಶಾರುಖ್ ಖಾನ್ ಅಭಿನಯದ ರಯೀಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

    ಪಾಕಿಸ್ತಾನ ಬಹುತೇಕ ಯೂಟ್ಯೂಬ್‌ ಖಾತೆಗಳಿಗಳಿಗೆ, ಸೆಲೆಬ್ರೆಟಿಗಳಿಗೆ ಆದಾಯ ಭಾರತದ ವೀಕ್ಷಕರಿಂದ ಬರುತ್ತಿದೆ. ಇವರಿಗೆ ಬರುವ ಆದಾಯವನ್ನು ನಿಲ್ಲಿಸಬೇಕಾದರೆ ಈ ಖಾತೆಗಳನ್ನು ಭಾರತದಲ್ಲಿ ನಿರ್ಬಂಧ ವಿಧಿಸಬೇಕೆಂದು ನೆಟ್ಟಿಗರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

  • ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

    ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

    ನವದೆಹಲಿ: ಪಾಕಿಸ್ತಾನದ (Pakistan) ಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ. ಭಾರತದ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸಯೀದ್ (Hafiz Saeed) ಪಾಕಿಸ್ತಾನದ ಭದ್ರತೆಯಲ್ಲಿರೋದು ಬಯಲಾಗಿದೆ.

    ಪಹಲ್ಗಾಮ್ ಹತ್ಯಾಕಾಂಡದ (Pahalgam Terror Attack) ಕಿಂಗ್ ಪಿನ್ ಮಾಸ್ಟರ್ ಮೈಂಡ್ ರಕ್ಕಸ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸೇಫ್‌ ಆಗಿದ್ದಾನೆ ಅನ್ನೋದು ವಿಡಿಯೋ ಸಮೇತ ಬಹಿರಂಗವಾಗಿದೆ.

    ಪಾಕಿಸ್ತಾನದ ಲಾಹೋರ್‌ ನಗರದಲ್ಲಿ 24*7 ಟೈಟ್ ಸೆಕ್ಯೂರಿಟಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಜನರ ಮಧ್ಯೆ ಖಾಸಗಿ ಪಾರ್ಕ್, ಮದರಸ ಹೊಂದಿರುವ ದೊಡ್ಡ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದಾನೆ. ಈತ ವಾಸಿಸುತ್ತಿರುವ ಜಾಗದ ಉಪಗ್ರಹ ಇಮೇಜ್‌, ವಿಡಿಯೋ ಈಗ ಲಭ್ಯ ವಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್‌ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್‌ ಸಂಸದೆ

    ಪಾಕಿಸ್ತಾನದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಪಹಲ್ಗಾಮ್ ದಾಳಿಯ ಕಿಂಗ್ ಪಿನ್ ಆಗಿದ್ದಾನೆ. ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಆಗಿರುವ ಈತನನ್ನು ಹಸ್ತಾಂತರ ಮಾಡುವಂತೆ ಭಾರತ ಸಾಕಷ್ಟು ಬಾರಿ ಬೇಡಿಕೆ ವ್ಯಕ್ತಪಡಿಸಿದರೂ ಪಾಕ್‌ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

  • ಟೈಂ ನೋಡಿ ಪಾಕ್‌ಗೆ ಹೊಡೆಯಿರಿ- ಸೇನೆಗೆ ಪರಮಾಧಿಕಾರ ಕೊಟ್ಟ ಮೋದಿ

    ಟೈಂ ನೋಡಿ ಪಾಕ್‌ಗೆ ಹೊಡೆಯಿರಿ- ಸೇನೆಗೆ ಪರಮಾಧಿಕಾರ ಕೊಟ್ಟ ಮೋದಿ

    ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack ) ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.

    ಇಂದು ಮೋದಿ ಅವರು  ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್‌ ಜನರಲ್ ಅನಿಲ್ ಚೌಹಾಣ್, ಭೂಸೇನೆ, ವಾಯುಸೇನೆ, ನೌಕಾಸೇನೆಯ ಮುಖ್ಯಸ್ಥರ ಜೊತೆ ಸಭೆ ನಡೆಸಿದರು.

    ಭಯೋತ್ಪಾದನೆಯನ್ನು ಸಂಪೂರ್ಣ ತೊಡೆದು ಹಾಕುವುದು ನಮ್ಮ ರಾಷ್ಟ್ರೀಯ ಸಂಕಲ್ಪ. ಭಾರತೀಯ ಸೇನೆಯ ವೃತ್ತಿಪರ ಸಾಮರ್ಥ್ಯದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ ಎಂದು ಹೇಳಿದರು.

    ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 121 ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಪಹಲ್ಗಾಮ್ ದಾಳಿಯ ಸಂತ್ರಸ್ತರು ದುಃಖಿಸುತ್ತಿರುವ ದೃಶ್ಯಗಳನ್ನು ನೋಡಿದರೆ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

    ಪಹಲ್ಗಾಮ್ ದಾಳಿಯಿಂದ ನನಗೆ ತುಂಬಾ ನೋವಾಗಿದೆ. ಇದು ಭಯೋತ್ಪಾದನೆಯ ಬೆಂಬಲಿಗರ ಹತಾಶೆ ಅವರ ಹೇಡಿತನವನ್ನು ತೋರಿಸುತ್ತದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಅಪರಾಧ ಎಸಗಿದವರಿಗೆ, ಬೆಂಬಲಿಗರಿಗೆ, ಸೂತ್ರಧಾರಿಗಳವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದ್ದರು.

  • ಹಿಂದೂಗಳ ನರಮೇಧದಲ್ಲೂ ಪೋಸ್ಟರ್ ವಾರ್; ಕಾಂಗ್ರೆಸ್‌ನಿಂದ ಮೋದಿ ʻಗಾಯಬ್ʼ ಗೇಲಿ – ನೀವು ಪಾಕ್ ಏಜೆಂಟ್‌ಗಳು ಅಂತ ಬಿಜೆಪಿ ತಿರುಗೇಟು

    ಹಿಂದೂಗಳ ನರಮೇಧದಲ್ಲೂ ಪೋಸ್ಟರ್ ವಾರ್; ಕಾಂಗ್ರೆಸ್‌ನಿಂದ ಮೋದಿ ʻಗಾಯಬ್ʼ ಗೇಲಿ – ನೀವು ಪಾಕ್ ಏಜೆಂಟ್‌ಗಳು ಅಂತ ಬಿಜೆಪಿ ತಿರುಗೇಟು

    ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್ ಹಾಕಿದ ಪೋಸ್ಟರ್ ವಿವಾದಕ್ಕೆ (Poster War) ಕಾರಣವಾಗಿದೆ.

    `ಬಂಧ್‌ಗಲಾ ಕುರ್ತಾ, ಚೂಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ ʻಗಾಯಾಬ್ʼ (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್ ಹಾಕಿ ಕಾಂಗ್ರೆಸ್ (congress) ಅಧಿಕೃತವಾಗಿ ಟ್ವೀಟ್ ಮಾಡಿದೆ. ಈ ಪೋಸ್ಟರ್‌ನಲ್ಲಿ ಯಾರ ಮುಖವೂ ಇಲ್ಲ. ಆದರೆ, ಫೋಟೋ ಶೈಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೋಲುವಂತಿದೆ.

    ಪಹಲ್ಗಾಮ್ ದಾಳಿ ಬಳಿಕ ನಡೆದ ಸರ್ವಪಕ್ಷ ಸಭೆಗೆ ಗೈರಾಗಿದ್ದ ಹಿನ್ನೆಲೆ ಪ್ರಧಾನಿ ಮೋದಿಯನ್ನು ಟೀಕಿಸಿ, ಜವಾಬ್ದಾರಿ ಸಮಯದಲ್ಲಿ ನಾಪತ್ತೆ ಅಂತ ಕ್ಯಾಪ್ಶನ್ ಕೊಟ್ಟಿದೆ. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

    ಇನ್ನೂ ಕಾಂಗ್ರೆಸ್ ಮಾಡಿರುವ ಈ ಪೋಸ್ಟನ್ನು ಪಾಕಿಸ್ತಾನದ (Pakistan) ಮಾಜಿ ಸಚಿವ ಫವಾದ್ ಅಹ್ಮದ್ ಹುಸೇನ್ ಚೌಧರಿ ಶೇರ್ ಮಾಡಿದ್ದು, ʻಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆʼ ಅಂತ ಅಣಕಿಸಿದ್ದಾನೆ. ಅಲ್ಲದೇ, ಹ್ಯಾಷ್ ಟ್ಯಾಗ್‌ನಲ್ಲಿ ʻನಾಟಿ ಕಾಂಗ್ರೆಸ್ʼ ಎಂದು ಪೋಸ್ಟ್ ಮಾಡಿದ್ದಾನೆ. ಈ ಬೆಳವಣಿಗೆ ಬಿಜೆಪಿ ಹಾಗೂ ಜನರನ್ನು ಸಿಟ್ಟಿಗೇಳುವಂತೆ ಮಾಡಿದೆ. ಇದನ್ನೂ ಓದಿ: Pegasus Case | ದೇಶ ಸ್ಪೈವೇರ್‌ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್‌

    ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿ, ಕಾಂಗ್ರೆಸ್‌ಗೆ ʻಲಷ್ಕರ್ ಇ ಪಾಕಿಸ್ತಾನ್‌ ಕಾಂಗ್ರೆಸ್ʼ ಅಂದಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ ನಾಯಕರನ್ನು ಒಟ್ಟಿಗೆ ಸೇರಿಸಿ, ʻಕಾಂಗ್ರೆಸ್ ಕೇ ಹಾತ್, ಪಾಕಿಸ್ತಾನ್ ಕೆ ಸಾಥ್ʼ (ಕಾಂಗ್ರೆಸ್ ಕೈ ಪಾಕಿಸ್ತಾನದ ಜೊತೆಗೆ) ಎಂದು ಪೋಸ್ಟ್ ಮಾಡಿ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಪದ್ಧತಿಗಳು ಇಸ್ಲಾಮಾಬಾದ್‌ನಂತೆಯೇ ಇವೆ ಎಂದು ಟೀಕಿಸಿದೆ. ಇತ್ತ, ರಾಜ್ಯ ನಾಯಕರಾದ ಆರ್‌. ಅಶೋಕ್, ಸಿ.ಟಿ ರವಿ ಕೂಡ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಕಾರ್ಯಾಚರಣೆ – 74 ಬುಲ್ಡೋಜರ್, 200 ಟ್ರಕ್, 1800 ಕಾರ್ಮಿಕರು, 3000 ಪೊಲೀಸರ ಬಳಕೆ

  • ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

    ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

    ಬಾಗಲಕೋಟೆ: ಪಹಲ್ಗಾಮ್ ದಾಳಿಯಲ್ಲಿ ಉಗ್ರರು (Pahalgam Terror Attack) ಹಿಂದೂಗಳನ್ನ ಹುಡುಕಿ ಹುಡುಕಿ ಕೊಂದ್ರು ಎಂಬ ಆರೋಪಕ್ಕೆ ಆಕ್ಷೇಪವೆತ್ತಿದ್ದ ಸಚಿವ ಆರ್‌ಬಿ ತಿಮ್ಮಾಪುರ (RB Timmapur), ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ ಎಂದು ಇದೀಗ ಯೂ ಟರ್ನ್ ಹೊಡೆದಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಖಡಾಖಂಡಿತವಾಗಿ ಹಾಗೆ ಮಾಡಿಲ್ಲ ಎಂದು ಹೇಳಿಲ್ಲ. ನಾನು ನೋಡಿದ ಟಿವಿ ಚಾನೆಲ್‌ಗಳಲ್ಲಿ ಅದು ಬಂದಿರಲಿಲ್ಲ. ಹಾಗಾಗಿ ನಾನು ಸಂಶಯ ವ್ಯಕ್ತಪಡಿಸಿದ್ದೇನೆ ವಿನಃ ಹಿಂದೂಗಳನ್ನು ನೋಡಿ ಮಾಡಿಲ್ಲ ಎಂದು ನಾನು ಹೇಳಿಲ್ಲ. ನಾನು ಭಯೋತ್ಪಾದಕರ ಪರವಾಗಿಯೇ ಮಾತನಾಡಿದ್ದೇನೆ ಎಂಬ ರೀತಿ ಬಿಂಬಿತವಾಗಿದೆ. ನಾನು ಭಯೋತ್ಪಾದನೆಯನ್ನು ಖಂಡನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ

    ಅಲ್ಲಿನ ಪ್ರವಾಸಿಗರಿಗೆ ರಕ್ಷಣೆ ಕೊಡೋದು ನಮ್ಮ ಧರ್ಮ. ಅದು ಪಾಲನೆಯಾಗಿಲ್ಲ ಎಂಬ ನೋವಿದೆ. ನಾವು ಎಲ್ಲರೂ ದೇಶದ ಪಕ್ಷ, ಪಂಗಡ, ರಾಜಕಾರಣ ತರದೇ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕೆ ವಿನಃ ಅದರಲ್ಲಿ ಸಣ್ಣಪುಟ್ಟ ವಿಷಯಗಳನ್ನ ತರುವುದು ದೇಶಕ್ಕೆ ಒಳ್ಳೆಯದಲ್ಲ. ಧರ್ಮ ನೋಡಿ ಹೊಡಿದಿಲ್ಲ ಎಂದು ನಾನು ಹೇಳಿಯೇ ಇಲ್ಲ. ನಾನು ಕಾರವಾರದ ಘಟನೆ ಬಗ್ಗೆ ಹೇಳಿದೆ. ಕಾರವಾರದಲ್ಲಿ ಹಿಂದೂ ಕೊಲೆ ಆಯ್ತು ಅಂದ್ರು, ನಂತರ ಸಹಜ ಸಾವು ಅಂತಾ ಬಂತು. ಹಾಗೆಯೇ ಇಂತಹದರಲ್ಲಿ ರಾಜಕಾರಣ ಬೇಡ ಅಂದಿದ್ದೆ. ನಾನು ನೋಡಿದ ಚಾನೆಲ್ ಪ್ರಕಾರ ನನಗೆ ಡೌಟ್ ಇದೆ ಅಂತಾ ಹೇಳಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    ಪಾಕ್ ಮೇಲೆ ಯುದ್ಧ ಬೇಕೋ ಬೇಡವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ದೇಶದ ಪರಿಸ್ಥಿತಿ ಇದೆ. ನಮ್ಮ ದೇಶದ ಪ್ರಧಾನಿಗಳು ನಿರ್ಧರಿಸಲಿ. ನಾವೆಲ್ಲ ಬದ್ಧತೆ ತೋರಿಸಬೇಕಲ್ಲ. ಯುದ್ಧ ಎಷ್ಟರಮಟ್ಟಿಗೆ ಬೇಕು ಬೇಡಾ ಎಂದು ಯೋಚನೆ ಮಾಡಿ ಅಂತಾ ಹೇಳಿರಬೇಕೆ ವಿನಃ ಯುದ್ಧ ಬೇಡ ಅಂತಾ ಯಾರೂ ಹೇಳಲ್ಲ. ಬೇಹುಗಾರಿಕೆಯನ್ನ ಬಲಪಡಿಸಲಿ. ನಾಗರಿಕರು ಹಾಗೂ ಪ್ರವಾಸಿಗರ ಮೇಲೆ ಈ ರೀತಿ ಆದರೆ ಹೇಗೆ? ಈಗ ಹೋಗಿ ನಾವು ಹೊಡೆದು ಹಾಕಿದ್ದೇವೆ ಅಂದ್ರೆ ಹೇಗೆ?
    ನಾನು ಈ ಹಿಂದೆಯೂ ಹೇಳಿದ್ದೆ, ಪುಲ್ವಾಮಾ ಏನಾಯ್ತು ಅಂತಾ ಹೇಳಿದ್ದೇನೆ. ಈ ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ವಿನಃ ರಾಜಕಾರಣ ಬೇಡ ಎಂದಿದ್ದೇನೆ. ಅದನ್ನ ಬಿಟ್ಟು ಸಣ್ಣಪುಟ್ಟ ವಿಚಾರಗಳನ್ನ ದೇಶಕ್ಕೆ ತೋರಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ಸಿಎಂ (CM Siddaramaiah) ಎಎಸ್‌ಪಿ ಮೇಲೆ ಕೈ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಏಯ್ ನೀನ್ಯಾಕೆ ಹೀಗೆ ಮಾಡಿದೆ ಅಂದಿರಬೇಕು. ಅವರ ಮೇಲೆ ಕೈ ಮಾಡಿದ್ದು ಅಂತಾ ಯಾಕೆ ಹೇಳ್ತೀರಿ? ನೀವು ಕೈ ಮಾಡಿದ್ದಾರೆ ಅಂತಾ ಯಾಕೆ ಅಂದುಕೊಳ್ಳುತ್ತೀರಿ? ಹಿಂದೆ ಯಡಿಯೂರಪ್ಪನವರು ಐಎಎಸ್ ಅಧಿಕಾರಿಗಳ ಮೇಲೆ ಕೈ ಮಾಡಿದ್ದೂ ಗೊತ್ತಿದೆ. ಎಮೋಷನ್‌ನಲ್ಲಿ ಮಾಡಿದ್ದರೂ ಮಾಡಿರಬಹುದು. ಹಿಂದೆ ಯಡಿಯೂರಪ್ಪನವರು ಈ ರೀತಿ ಮಾಡಿಲ್ಲ ಎಂದು ವಿಜಯೇಂದ್ರ ಅವರು ಹೇಳಲಿ ನೋಡೋಣ ಎಂದರು. ಇದನ್ನೂ ಓದಿ: ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ

  • Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸವು (Pahalgam Terrorist Attack) ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶವೇ ಒಗ್ಗೂಡುವಂತೆ ಮಾಡಿದೆ. ಈ ಕೃತ್ಯಕ್ಕೆ ಕಾರಣರಾದವರನ್ನ ಶಿಕ್ಷಿಸಲು ಸರ್ಕಾರ ಮಾಡುವ ಎಲ್ಲ ಪ್ರಯತ್ನಗಳಿಗೆ ಇಡೀ ದೇಶ ಬೆಂಬಲವಾಗಿ ನಿಂತಿದೆ. ದೇಶದ ಜನ, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಬಲವಾದ ಸಂದೇಶ ರವಾನಿಸಿವೆ.

    ಭಾರತ ಸರ್ಕಾರ ಪಾಕಿಸ್ತಾನದ (Pakistan) ವಿರುದ್ಧ ಹೆಜ್ಜೆ ಹೆಜ್ಜೆಗೂ ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಇಡೀ ಪಾಕಿಸ್ತಾನದಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಉಭಯ ದೇಶಗಳ ನಡುವೆ ಯಾವುದೇ ಸಂದರ್ಭದಲ್ಲೂ ಯುದ್ಧ ಘೋಷಣೆಯಾಗುವ ಸಾಧ್ಯತೆಗಳು ಮುನ್ನೆಲೆಗೆ ಬಂದಿವೆ. ಹೀಗಾಗಿ ಮೂರು ಸೇನಾ ಪಡೆಗಳಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ, ವಾಯುಸೇನೆ ನೌಕಾಸೇನೆಗಳು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ತಾಲೀಮು ಪ್ರಾರಂಭಿಸಿ ಶತ್ರು ರಾಷ್ಟ್ರವನ್ನು ಬಗ್ಗು ಬಡಿಯಲು ಸಿದ್ಧರಿದ್ದೇವೆ ಎಂಬ ಸಂದೇಶ ರವಾನಿಸಿವೆ. ಮತ್ತೊಂದೆಡೆ ಗಡಿಯಲ್ಲಿ ಜನ ಬಂಕರ್‌ಗಳನ್ನು ಸ್ವಯಂಪ್ರೇರಿತವಾಗಿ ಶುಚಿಗೊಳಿಸುತ್ತಿದ್ದಾರೆ. ಇಷ್ಟೆಲ್ಲ ಉದ್ವಿಗ್ನತೆಗೆ ಕಾರಣವಾದ ʻಟಿಆರ್‌ಎಫ್‌ʼ (ದಿ ರೆಸಿಸ್ಟೆಂಟ್‌ ಫ್ರಂಟ್‌ – TRF) ಫಾಲ್ಕನ್‌ ಸ್ಕ್ವಾಡ್‌ ಹೇಗೆ ಕೆಲಸ ಮಾಡುತ್ತೆ? ಯುವಕರಿಗೆ ಹೇಗೆ ಬ್ರೈನ್‌ ವಾಶ್‌ ಮಾಡಿ ಸಂಘಟನೆಗೆ ಸೇರಿಸಿಕೊಳ್ಳುತ್ತೆ? ಇದರ ಮಾಸ್ಟರ್‌ ಮೈಂಡ್‌ ಯಾರು? ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವೆಲ್ಲ ಸಂಘಟನೆಗಳು ಈಗಲೂ ಸಕ್ರೀಯವಾಗಿವೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಜಮ್ಮುವಿನಿಂದ ಪಥ ಬದಲಿಸಿದ ಉಗ್ರರು

    2014 ರಿಂದ 2018ರ ಅವಧಿ ಜಮ್ಮು ಮತ್ತು ಕಾಶ್ಮೀರ ಸ್ಥಳಗಳು ಉಗ್ರರ ಸ್ವರ್ಗವಾಗಿತ್ತು. 2014ರಿಂದ 2018ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 1,708 ಉಗ್ರರ ದಾಳಿಗಳು ನಡೆದಿದ್ದವು, 2018ರಿಂದ 2022ರ ವರೆಗೆ 761 ಉಗ್ರರ ದಾಳಿಗಳು ನಡೆದು 174 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ್ದ ಸೇನೆ (Indian Army) 626 ಉಗ್ರರನ್ನು ಬಲಿ ಪಡೆದಿತ್ತು. 2023ರಲ್ಲಿ ಜಮ್ಮು ಪ್ರದೇಶದಲ್ಲಿ ಮಾತ್ರವೇ ಸುಮಾರು 40 ಭಯೋತ್ಪಾದಕ ದಾಳಿಗಳು ನಡೆದಿರುವುದಾಗಿ ಸೇನೆ ಹೇಳಿದೆ. ಆದ್ರೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಭಯೋತ್ಪಾದಕರು ತಮ್ಮ ಕಾರ್ಯತಂತ್ರ ಬದಲಿಸಿದ್ದರು. ಆಗ ಕಾಶ್ಮೀರವನ್ನು ಬಿಟ್ಟು ಜಮ್ಮುವಿನಲ್ಲಿ ದಾಳಿಗಳನ್ನು ನಡೆಸತೊಡಗಿದರು. 2021ರಿಂದ ಜುಲೈ 2024ರ ವರೆಗೆ ಜಮ್ಮುವಿನ ವಿವಿಧ ಭಾಗಗಳಲ್ಲಿ 33 ಉಗ್ರ ದಾಳಿಗಳು ನಡೆದಿದ್ದವು. 2024ರ ಮಧ್ಯಭಾಗದವರೆಗೆ ಜಮ್ಮುವಿನಲ್ಲಿ 8 ದಾಳಿಗಳು ನಡೆದು, 11 ಮಂದಿ ಸಾವಿಗೀಡಾಗಿದ್ದರು; ವರ್ಷದ ಮೊದಲ ಆರು ತಿಂಗಳಲ್ಲಿ ನಡೆದ ದಾಳಿಗಳಿಂದ 12 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಕೆಲವು ಸೈನಿಕರನ್ನು ಚೀನಾದ ಗಡಿಗೆ ಕಳಿಸಿದ್ದು ಕೂಡ ಇಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗಿತ್ತು.

    ಭದ್ರತಾ ಪಡೆಗಳನ್ನು ತಪ್ಪು ದಾರಿಗೆಳೆಯುವುದು, ಗುಪ್ತಚರ ಅಧಿಕಾರಿಗಳ ದಿಕ್ಕುತಪ್ಪಿಸುವುದು ಸೇರಿದಂತೆ ಉಗ್ರರ ಹಲವು ತಂತ್ರಗಾರಿಕೆ ಇದರ ಹಿಂದಿತ್ತು. ಕಾಶ್ಮೀರಕ್ಕೆ ಹೋಲಿಸಿದರೆ, ಜಮ್ಮುವಿನಲ್ಲಿ ಕಡಿಮೆ ಸೇನಾ ನಿಯೋಜನೆ ಇದ್ದದ್ದು ಕೂಡ ಅಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗಿತ್ತು. ಹಾಗಾಗಿ ಜಮ್ಮುವಿನ ಕಥುವಾ ಸೇರಿದಂತೆ ಅನೇಕ ಪ್ರದೇಶಗಳನ್ನೇ ಉಗ್ರರು ಟಾರ್ಗೆಟ್‌ ಮಾಡಿದ್ದರು. ಆದರೆ, 2019ರ ಬಳಿಕ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದಿರುವ ಭೀಕರ ದಾಳಿಯು, ಉಗ್ರರು ಮತ್ತೆ ಕಾಶ್ಮೀರದತ್ತ ದೃಷ್ಟಿ ನೆಟ್ಟಿರಬಹುದೇ ಎನ್ನುವ ಅನುಮಾನ ಮೂಡಿಸಿದೆ.

    ಇದೇ ಏ.17ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಮಾತನಾಡುತ್ತಾ, ಹಿಂದೂ ಹಾಗೂ ಮುಸ್ಲಿಂ ಧರ್ಮಗಳು ಹೇಗೆ ಭಿನ್ನ ಎಂದು ವಿವರಿಸಿದ್ದರು. ಕಾಶ್ಮೀರ ಎಂದೆಂದಿಗೂ ಪಾಕಿಸ್ತಾನದ ʻಕಂಠನಾಳ’ ಎಂದಿದ್ದರು. ಆದರೀಗ ಅವರ ಈ ಮಾತುಗಳಿಗೂ ಪಹಲ್ಲಾಮ್ ದಾಳಿಗೂ ನಂಟು ಇದೆ ಎನ್ನಲಾಗುತ್ತಿದೆ. ಪಾಕಿಸ್ತಾನವು ಆಂತರಿಕ ಸಂಘರ್ಷ ಮತ್ತು ಆರ್ಥಿಕ ಕುಸಿತದಂತಹ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲಿನ ಜನರ ವಿಶ್ವಾಸ ಗಳಿಸುವ ಸಲುವಾಗಿ ಸೇನೆ ಮತ್ತು ರಾಜಕಾರಣಿಗಳು ಕಾಶ್ಮೀರ ವಿವಾದವನ್ನು ಜೀವಂತವಾಗಿಡಲು ಬಯಸುತ್ತಿದ್ದು, ಅದರ ಭಾಗವಾಗಿಯೇ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ತಜ್ಞರ ವಿಶ್ಲೇಷಣೆ.

    ಯಾವ್ಯಾವ ಉಗ್ರ ಸಂಘಟನೆಗಳು ಸಕ್ರೀಯ?

    ಜಮ್ಮುವಿನ ವಿಸ್ತಾರ ಪ್ರದೇಶವನ್ನು ಪಾಕ್‌ ಮೂಲದ ಉಗ್ರರು ಈ ಹಿಂದೆಯೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದಾರೆ. ಸುರಂಗಗಳ ಮೂಲಕ ಉಗ್ರರು ದೇಶಕ್ಕೆ ನುಸುಳುತ್ತಿದ್ದು, ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ದೇಶದ ಗಡಿ ಭಾಗದಲ್ಲಿ ಹಿಂಸಾಚಾರ ಹೆಚ್ಚಿಸಲು ನಿಗೂಢ ಹತ್ಯೆ ಮಾಡುತ್ತಿದ್ದರು. ಈಗಲೂ ಅನೇಕ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ಸಕ್ರೀಯವಾಗಿವೆ. ಅದರಲ್ಲಿ ಟಿಆರ್‌ಎಫ್ ಪ್ರಮುಖವಾಗಿದೆ, ಇದನ್ನ ಜೈಶ್-ಎ-ಮೊಹಮ್ಮದ್‌ನ ಪ್ರಾಕ್ಸಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಜಮ್ಮು ಮತ್ತು ಕಾಶ್ಮೀರ ಘಜ್ವಾನಿ ಫೋರ್ಸ್, ಕಾಶ್ಮೀರ ಟೈಗರ್ಸ್ ಮತ್ತು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಇವು ಆರ್ಟಿಕಲ್‌ 370 ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದಿವೆ.

    ಟಿಆರ್‌ಎಫ್‌ ಕೆಲಸ ಹೇಗೆ?

    ಕಾಶ್ಮೀರದಲ್ಲಿ ಸಕ್ರೀಯವಾಗಿರುವ ʻದಿ ರೆಸಿಸ್ಟಂಟ್‌ ಫ್ರಂಟ್‌ʼ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ತಿಂಗಳಾನುಗಟ್ಟಲೆ ಕಠಿಣ ತರಬೇತಿ ನೀಡುವುದು, ಬಳಿಕ ಕಣಿವೆ ಪ್ರದೇಶಗಳಲ್ಲಿ ದಾಳಿ ನಡೆಸುವುದು ಇದರ ಕಾರ್ಯತಂತ್ರ. ಒಂದು ವೇಳೆ ದಾಳಿಕೋರರು ಭಾರತೀಯ ಸೇನೆಗೆ ಸಿಕ್ಕಿಬಿದ್ದರೆ ಆತ್ಮಾಹುತಿ ಬಾಂಬ್‌ ಸ್ಫೋಟಿಕೊಳ್ಳುವುದಕ್ಕೂ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಕಟ್ಟುಮಸ್ತಾದ ಯುವಕರ ತಲೆಗೆ ಮತಾಂಧತೆ ಚಿಂತನೆಗಳನ್ನ ತುಂಬುತ್ತಾರೆ. ಬ್ರೈನ್‌ ವಾಶ್‌ ಮಾಡಿ ತಮ್ಮ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತದೆ. ನಿರುದ್ಯೋಗಿಗಳು, ತೀರಾ ಬಡತನ ಕುಟುಂಬದ ಯುವಕರಿಗೆ ಹಣದ ಆಮಿಷ ತೋರಿಸಿ, ನೀನೊಂದು ನಿರ್ದಿಷ್ಟ ಗುರಿ ಸಾಧಿಸಲು ಈ ಭೂಮಿಮೇಲೆ ಹುಟ್ಟಿದ್ದೀಯಾ ಎಂದು ಬ್ರೈನ್‌ ವಾಶ್‌ ಮಾಡುವುದು, ಬಳಿಕ ಅವರಿಗೆ ತರಬೇತಿ ನೀಡಿ ಭಾರತದ ವಿರುದ್ಧವೇ ದಾಳಿಗೆ ನಿಯೋಜಿಸುವುದು ಟಿಆರ್‌ಎಫ್‌ನ ಕೆಲಸ. ಆದ್ರೆ ಇತ್ತೀಚಿನ ದಿನಗಳಲ್ಲಿ ಟಿಆರ್‌ಎಫ್‌ ಆಧುನಿಕ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು, ಭದ್ರತಾ ಪಡೆಗಳು ಹಾಗೂ ಸಾಮಾನ್ಯ ಜನರ ಮೇಲಿನ ದಾಳಿಗಾಗಿ ಬಸಳಸುತ್ತಿದೆ. ಇತ್ತೀಚಿನ ಪಹಲ್ಗಾಮ್‌ ದಾಳಿಗೂ ಸಹ ಎಕೆ-47 ಮತ್ತು M4 ರೈಫಲ್‌ಗಳನ್ನ ಬಳಸಲಾಗಿತ್ತು ಅನ್ನೋದು ಗಮನಾರ್ಹ.

    ಹಣಕಾಸಿನ ನೆರವು ಹೇಗೆ?

    ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಸಂಘಟನೆಗಳು ಜೈಶ್‌ ಎ ಮೊಹಮ್ಮದ್‌ನಿಂದ ಹಣಕಾಸಿನ ನೆರವನ್ನು ಪಡೆಯುತ್ತಿವೆ. ಜೊತೆಗೆ ಭಾರತದ ಮೇಲೆ ಯಾವ ಯಾವ ರೀತಿ ದಾಳಿಗಳನ್ನ ನಡೆಸಬೇಕು ಅನ್ನೋ ರೂಪುರೇಷೆಯೂ ಈ ಸಂಘಟನೆ ಸಿದ್ಧಮಾಡಿಕೊಡುತ್ತದೆ. ಹಿಂದೆಲ್ಲಾ ಗಡಿ ನಿಯಂತ್ರಣ ರೇಖೆ ದಾಟಿ ಬರುತ್ತಿದ್ದ ಉಗ್ರರು, ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಸುತ್ತಿದ್ದರು, ದಾಳಿ ಮಾಡಿ ದಟ್ಟ ಕಾಡುಗಳಲ್ಲಿ ಕಣ್ಮರೆಯಾಗುತ್ತಿದ್ದರು. ಆದ್ರೆ ಉಗ್ರರು ಹೈಬ್ರಿಡ್‌ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಚೀನಾ ನಿರ್ಮಿತ ಆಪ್‌ಗಳನ್ನ ಬಳಸಿಕೊಂಡು ದಾಳಿಯ ರೂಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಆಪ್‌ಗಳ ಟ್ರ್ಯಾಕಿಂಗ್‌ ಮಾಡೋದು ಕಷ್ಟವಾಗಿರುವುದರಿಂದ ಭಾರತೀಯ ಸೇನೆಗೂ ಇದು ಸವಾಲಾಗಿದೆ.

    ಭಾರತೀಯ ಸೇನೆಗೆ ಸವಾಲಾಗಿರುವುದು ಏಕೆ?

    ಇತ್ತೀಚೆಗೆ ಜಮ್ಮುವಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಯಲ್ಲಿ ಸೈನಿಕರು ಉಗ್ರರನ್ನು ಮಟ್ಟಹಾಕಲು ಹರಸಾಹಸ ಪಡುತ್ತಿದ್ದಾರೆ, ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಈ ಸಂಘಟನೆಗಳು ಅತ್ಯುನ್ನತ ತರಬೇತಿ ಪಡೆದ ಭಯೋತ್ಪಾದಕರನ್ನ ಉಗ್ರ ಕೃತ್ಯಗಳಿಗೆ ನಿಯೋಜಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳಲ್ಲಿ ತರಬೇತಿ ಪಡೆದ ಉಗ್ರರನ್ನು ಇಲ್ಲಿಗೆ ಕಳಿಸಲಾಗುತ್ತಿದೆ. ಅಲ್ಲದೇ ಅಮೆರಿಕ ನಿರ್ಮಿತ ಎಂ4 ಅತ್ಯಾಧುನಿಕ ರೈಫಲ್‌ ಅನ್ನು ಕೃತ್ಯಕ್ಕೆ ಬಳಸುತ್ತಿದ್ದಾರೆ.

    ಕೃತ್ಯದ ಮಾಸ್ಟರ್‌ ಮೈಂಡ್‌ ಯಾರು?

    ಈ ದಾಳಿಯನ್ನು ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ. ಲಷ್ಕರ್‌ ಸಂಘಟನೆಯ ಟಾಪ್‌ ಕಮಾಂಡರ್‌ ಆಗಿರುವ ಸೈಫುಲ್ಲಾ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರು ಈ ಕೃತ್ಯದ ಮಾಸ್ಟರ್‌ ಮೈಂಡ್‌ ಆಗಿದ್ದಾನೆಂದು ತಿಳಿದುಬಂದಿದೆ. ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ (Mumbai Attack) ಸೂತ್ರಧಾರ ಹಫೀಜ್ ಸಯೀದ್‌ ಆಪ್ತ ವ್ಯಕ್ತಿಯಾಗಿದ್ದಾನೆ. ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್‌ ಉಗ್ರರು ಭದ್ರತೆ ನೀಡುತ್ತಾರೆ.

    ಯಾವಾಗಲೂ ಭಾರತದ ವಿರುದ್ಧವೇ ಕೆಲಸ ಮಾಡುವುದರಿಂದ ಸೇನಾ ಅಧಿಕಾರಿಗಳ (Pakistan Army) ಜೊತೆಗೂ ಈತ ಉತ್ತಮ ಸಂಬಂಧ ಹೊಂದಿದ್ದಾನೆ. ಎರಡು ತಿಂಗಳ ಹಿಂದೆ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರಕ್ಕೆ ಭೇಟಿ ನೀಡಿದ್ದ. ಕಂಗನ್‌ಪುರದಲ್ಲಿ ಪಾಕ್‌ ಸೇನೆಯ ದೊಡ್ಡ ಬೆಟಾಲಿಯನ್‌ ನೆಲೆಗೊಂಡಿದೆ. ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಭಾರತದ ವಿರುದ್ಧ ಜಿಹಾದಿ ಭಾಷಣ ಮಾಡಲು ಈತನನ್ನು ಕರೆಸಿದ್ದ.ಭಾಷಣದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತದ ವಿರುದ್ಧದ ಕೃತ್ಯಕ್ಕೆ ಪ್ರಚೋದಿಸಿದ್ದ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ ಭಾರತದ ವಿರುದ್ಧ ವಿಷಕಾರಿದ್ದ. ಇಂದು ಫೆಬ್ರವರಿ 2, 2025. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಮುಜಾಹಿದ್ದೀನ್ ದಾಳಿ ತೀವ್ರಗೊಳ್ಳಲಿದೆ. ಫೆಬ್ರವರಿ 2, 2026 ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಭರವಸೆ ನೀಡಿದ್ದ ಅನ್ನೋದು ಗಮನಾರ್ಹ.

  • ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್‌ ಸಚಿವ

    ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್‌ ಸಚಿವ

    ಇಸ್ಲಾಮಾಬಾದ್‌: ಪಹಲ್ಗಾಮ್‌ ಉಗ್ರರ ದಾಳಿ (Pahalgam Terrorist Attack) ಬಳಿಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಷ್ಟ್ರ ನಾಯಕರು ನೀಡುತ್ತಿರುವ ಹೇಳಿಕೆಗಳು ಯುದ್ಧದ ಆತಂಕವನ್ನು ಸೃಷ್ಟಿಸಿವೆ. ಈ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ (Khawaja Muhammad Asif) ಭಾರತೀಯ ಸೇನೆ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು ಎಂದು ಹೇಳಿದ್ದಾರೆ.

    ಭಾರತೀಯ ಸೇನೆ (Indian Army) ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು. ಹಾಗಾಗು ಗಡಿಯಲ್ಲಿ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ. ಏಕೆಂದರೆ ಸೇನಾ ಸಿದ್ಧತೆ ನಮಗೂ ಅನಿವಾರ್ಯವಿದೆ. ಈ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಆಸಿಫ್‌ ತಿಳಿಸಿದ್ದಾರೆ. ಸಚಿವರ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪಸುರಿದಂತಾಗಿದೆ.

    ಭಾರತೀಯ ಸೇನೆ ಗಡಿಯಲ್ಲಿ ಸಕ್ರಿಯ
    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನೆತ್ತರು ಹರಿಸಿದ ಘಟನೆಯು ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶವೇ ಒಗ್ಗೂಡುವಂತೆ ಮಾಡಿದೆ. ಈ ಕೃತ್ಯಕ್ಕೆ ಕಾರಣರಾದವರನ್ನ ಶಿಕ್ಷಿಸಲು ಸರ್ಕಾರ ಮಾಡುವ ಎಲ್ಲ ಪ್ರಯತ್ನಗಳಿಗೆ ಇಡೀ ದೇಶ ಬೆಂಬಲವಾಗಿ ನಿಂತಿದೆ. ದೇಶದ ಜನ, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಬಲವಾದ ಸಂದೇಶ ರವಾನಿಸಿವೆ.

    ಇನ್ನೂ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಪಾಕ್‌ ನಾಯಕರು ಸಹ ನಾಲಿಗೆ ಹರಿಬಿಡಲು ಶುರು ಮಾಡಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲೂ ಯುದ್ಧ ಸಂಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಭಾರತೀಯ ಮೂರು ರಕ್ಷಣಾ ಪಡೆಗಳು ಗಡಿಯಲ್ಲಿ ಯುದ್ಧಕ್ಕೆ ಸಿದ್ಧವಾಗಿವೆ. ಈಗಾಗಲೇ ತಾಲೀಮು ನೀಡಿ ಶತ್ರು ರಾಷ್ಟ್ರಕ್ಕೆ ಹುಟ್ಟಡಗಿಸುವ ಎಚ್ಚರಿಕೆಯನ್ನೂ ನೀಡಿವೆ.

  • ಪ್ಯಾಂಟ್ ಬಿಚ್ಚಿಸಿದ್ರು, ಮತ್ತೊಂದು ಬಿಚ್ಚಿಸಿದ್ರು ಅನ್ನೋದು ನನ್ಗೆ ಗೊತ್ತಿಲ್ಲ: ಆರ್‌.ಬಿ ತಿಮ್ಮಾಪೂರ

    ಪ್ಯಾಂಟ್ ಬಿಚ್ಚಿಸಿದ್ರು, ಮತ್ತೊಂದು ಬಿಚ್ಚಿಸಿದ್ರು ಅನ್ನೋದು ನನ್ಗೆ ಗೊತ್ತಿಲ್ಲ: ಆರ್‌.ಬಿ ತಿಮ್ಮಾಪೂರ

    – ಹಿಂದೂಗಳನ್ನ ಹುಡುಕಿ ಕೊಂದ್ರು ಅಂತ ಬಿಜೆಪಿ ರಾಜಕಾರಣ ಮಾಡ್ತಿದೆ ಎಂದು ಸಚಿವ ಅಸಮಾಧಾನ

    ಬೆಳಗಾವಿ: ಪಹಲ್ಗಾಮ್‌ ದಾಳಿ (Pahalgam Terrorist Attack) ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಹಿಂದೂಗಳನ್ನ ಹುಡುಕಿ ಕೊಂದರು ಅಂತ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಆರ್‌.ಬಿ ತಿಮ್ಮಾಪೂರ (RB Timmapur) ಹೇಳಿದ್ದಾರೆ.

    ಬೆಳಗಾವಿಯಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ಪ್ಯಾಂಟ್ ಬಿಚ್ಚಿಸಿದ್ರು ಅಂತ ಮೃತರ ಪತ್ನಿಯೇ ಹೇಳಿದ್ದಾರೆ, ಇದಕ್ಕೆ ನೀವೇನು ಹೇಳ್ತೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿ, ಪ್ಯಾಂಟ್ ಬಿಚ್ಚಿಸಿದರು ಮತ್ತೊಂದು ಬಿಚ್ಚಿಸಿದರು ಎಂಬುದು ನನಗೆ ಗೊತ್ತಿಲ್ಲ. ಆದ್ರೆ ರಾಜಕಾರಣದಲ್ಲಿ ಧರ್ಮ ಬೆರೆಸದೇ ರಕ್ಷಣೆ ಕಡೆ ಗಮನ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ – ತಿಮ್ಮಾಪೂರ್‌ ವಿರುದ್ಧ ಸೂರ್ಯ ಆಕ್ರೋಶ 

    ಇಂತಹ ಕೃತ್ಯವನ್ನು ನಾವೆಲ್ಲರೂ ಖಂಡಿಸುತ್ತೇವೆ. ಅಂತಹವರ ಮೇಲೆ ತುರ್ತು ಕ್ರಮ ಕೈಗೊಳ್ಳಬೇಕು. ಉಗ್ರರು ಬಂದು ನನ್ನ ದೇಶದ ಪ್ರಜೆಯನ್ನ ಹೊಡೆದಾಗ ಕೆಲವರು ಧರ್ಮ ಕೇಳಿ ಮಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ಗಮನಿಸಿದೆ. ಇಂತಹ ಕೃತ್ಯಕ್ಕೆ ಸಪೋರ್ಟ್‌ ಮಾಡುವವರ ವಿರುದ್ಧವೂ ಕ್ರಮ ಆಗಬೇಕು. ಅವರನ್ನ ಸದೆಬಡಿಯುವ ಕಡೆ ಗಮನಕೊಡಬೇಕು. ಬೇಹುಗಾರಿಕೆ ಗಟ್ಟಿಗೊಳಿಸಿದ್ರೆ, ಈ ಸ್ಥಿತಿ ಬರುತ್ತಿರಲಿಲ್ಲ. ಯುದ್ಧಕ್ಕೆ ಹೊರಟಿದ್ದೀವಿ ಅನ್ನೋ ಮಾತೇ ಬರುತ್ತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ

    ಆದ್ರೆ ದೇಶದ ಪ್ರಜೆಗಳ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ, ಧರ್ಮವನ್ನ ಇದರಲ್ಲಿ ತರಬೇಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬರಿದಾದ ತುಂಗಭದ್ರಾ; ಕಲ್ಯಾಣ ಕರ್ನಾಟಕ, ಆಂಧ್ರ-ತೆಲಂಗಾಣದ ಜಿಲ್ಲೆಗಳಿಗೆ ನೀರಿನ ಅಭಾವ ಸಾಧ್ಯತೆ

  • ಭಾರತ – ಪಾಕ್‌ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ

    ಭಾರತ – ಪಾಕ್‌ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ

    ಶ್ರೀನಗರ/ಇಸ್ಲಾಮಾಬಾದ್‌/ಬೀಜಿಂಗ್‌: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ (Pahalgam Terrorist Attack) ಬಳಿಕ ಭಾರತ ಸರ್ಕಾರ ಪಾಕ್‌ ವಿರುದ್ಧ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ, ಇದರಿಂಧ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಈ ಬೆಳವಣಿಗೆಯನ್ನು ಚೀನಾ (China) ಸೂಕ್ಮವಾಗಿ ಗಮನಿಸುತ್ತಿದೆ.

    ಈ ನಡುವೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಜೊತೆಗೆ ಮಾತನಾಡಿದ್ದು, ಪಾಕಿಸ್ತಾನದ ಬೇಡಿಕೆಯೊಂದಕ್ಕೆ ಬೆಂಬಲ ನೀಡಿರುವುದಾಗಿ ವರದಿಗಳು ತಿಳಿಸಿವೆ.

    ಹೌದು. ಪಹಲ್ಗಾಮ್ ದಾಳಿಯ ಕುರಿತು ತಟಸ್ಥ ತನಿಖೆ ನಡೆಸಬೇಕೆಂಬ ಪಾಕಿಸ್ತಾನದ ಬೇಡಿಕೆಗೆ ಚೀನಾ ಬೆಂಬಲ ವ್ಯಕ್ತಪಡಿಸಿದೆ ಎನ್ನಲಾಗಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ.

    ಚೀನಾ – ಪಾಕ್‌ ನಡುವೆ ಮಾತುಕತೆ
    ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕ್‌ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಏತನ್ಮಧ್ಯೆ, ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸುತ್ತಿರುವುದಾಗಿ ಚೀನಾ ಹೇಳಿದೆ.

    ಪಾಕ್‌ ಬೇಡಿಕೆ ಏನು?
    ಪಹಲ್ಗಾಮ್ ದಾಳಿಯ ತನಿಖೆಯಲ್ಲಿ ರಷ್ಯಾ ಮತ್ತು ಚೀನಾವನ್ನ ಸೇರಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳುತ್ತಿದ್ದಾರೋ ಅಥವಾ ಸುಳ್ಳು ಹೇಳುತ್ತಿದ್ದಾರೋ ಎಂಬುದನ್ನ ಅಂತಾರಾಷ್ಟ್ರೀಯ ತಂಡ ತನಿಖೆ ಮಾಡಬೇಕು ಎಂದು ಹೇಳಿತ್ತು.