Tag: ಪಶ್ಚಿಮ ಬಂಗಾಳ ಸಿಎಂ

  • ಪತ್ನಿಗೆ ಕೋವಿಡ್‌ ಬಂದಿದ್ರೂ ನೀನು ಹೊರಗಡೆ ಸುತ್ತಾಡ್ತಿದ್ದೀಯಾ: ತಮ್ಮನಿಗೆ ಛೀಮಾರಿ ಹಾಕಿದ ಬ್ಯಾನರ್ಜಿ

    ಪತ್ನಿಗೆ ಕೋವಿಡ್‌ ಬಂದಿದ್ರೂ ನೀನು ಹೊರಗಡೆ ಸುತ್ತಾಡ್ತಿದ್ದೀಯಾ: ತಮ್ಮನಿಗೆ ಛೀಮಾರಿ ಹಾಕಿದ ಬ್ಯಾನರ್ಜಿ

    ಕೋಲ್ಕತ್ತಾ: ಮನೆಯವರಿಗೆ ಕೋವಿಡ್‌ ದೃಢಪಟ್ಟಿದ್ದರೂ ಲೆಕ್ಕಿಸದೇ ನೀನು ಹೊರಗಡೆ ಸುತ್ತಾಡುತ್ತಿದ್ದೀಯಾ ಎಂದು ಸಹೋದರನಿಗೆ ಸಾರ್ವಜನಿಕ ವೇದಿಕೆಯಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಛೀಮಾರಿ ಹಾಕಿದ್ದಾರೆ.

    ನಮ್ಮ ಮನೆಯಲ್ಲೇ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್‌ ಆಗದೇ ಕೋವಿಡ್‌ ನಿಯಮ ಉಲ್ಲಂಘಿಸಿ ಹೊರಗಡೆ ಸುತ್ತಾಡುತ್ತಿದ್ದಾರೆ. ಈ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಪ್ರವೇಶಿಸಿದ್ದ ಬಿಂದು ಮೇಲೆ ನಡು ರಸ್ತೆಯಲ್ಲಿ ದಾಳಿ – ಆರೋಪಿ ಅರೆಸ್ಟ್

    ನನ್ನ ಕಿರಿಯ ಸಹೋದರನ ಹೆಂಡತಿಗೆ ಕೋವಿಡ್‌ ದೃಢಪಟ್ಟಿದೆ. ಆದರೆ ನನ್ನ ಸಹೋದರ ಬಾಬುನ್‌ ಹೊರಗಡೆ ಸುತ್ತಾಡುತ್ತಿದ್ದಾನೆ. ಈ ನಡೆ ನನಗೆ ಹಿಡಿಸುವುದಿಲ್ಲ. ನಾನು ತುಂಬಾ ಮುಕ್ತವಾಗಿ ಮಾತನಾಡುವ ವ್ಯಕ್ತಿ. ನಾಳೆಯಿಂದ ಎಲ್ಲಿಯೂ ಹೋಗಬೇಡ ಎಂದು ತಮ್ಮನಿಗೆ ಸಿಎಂ ಬ್ಯಾನರ್ಜಿ ಖಡಕ್‌ ಸೂಚನೆ ನೀಡಿದ್ದಾರೆ.

    ನನ್ನ ಏಳು ದಿನಗಳ ಪ್ರತ್ಯೇಕ ವಾಸ ಮುಗಿದಿದೆ ಎಂದು ಹೊರಗಡೆ ಓಡಾಡುವುದಲ್ಲ. ಪರೀಕ್ಷೆ ವರದಿಯಲ್ಲಿ ನೆಗೆಟಿವ್‌ ಬಂದಿರಬಹುದು. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಾಸ್ಕ್‌ ಧರಿಸಬೇಕು, ಆಗಾಗ ಕೈ ತೊಳೆಯಬೇಕು. ನಾಳೆ ನಮಗೇ ಕೋವಿಡ್‌ ಬಂದರೆ? ಕೋವಿಡ್‌ ಬಂದರೆ ನಾವು ಜವಾಬ್ದಾರರಾಗುತ್ತೇವೆಯೇ? ಇಲ್ಲ, ಅದಾಗಬಾರದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮುಂದಿನ 15 ದಿನಗಳು ಪ್ರಮುಖವಾಗಿವೆ. ಈ ಸಂದರ್ಭದಲ್ಲಿ ಕೋವಿಡ್‌ ನಿರ್ಬಂಧಗಳು ಕಠಿಣವಾಗಬಹುದು ಎಂದು ಸಿಎಂ ತಿಳಿಸಿದ್ದಾರೆ.

    ಕೋವಿಡ್‌ ಸ್ಥಿತಿಗತಿ ಕುರಿತು ನಾಳೆ ಪ್ರಧಾನಿ ಮೋದಿ ಅವರು ಸಿಎಂಗಳೊಂದಿಗೆ ವರ್ಚುವಲ್‌ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ದಿನದ ಕೋವಿಡ್‌ ಪ್ರಕರಣಗಳ ಸಂಖ್ಯೆ 14,022ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

  • ಶೇ.40.5 ರಷ್ಟು ಟಿಕೆಟ್ ಮಹಿಳೆಯರಿಗೆ ಮೀಸಲು: ಮಮತಾ ಬ್ಯಾನರ್ಜಿ

    ಶೇ.40.5 ರಷ್ಟು ಟಿಕೆಟ್ ಮಹಿಳೆಯರಿಗೆ ಮೀಸಲು: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಬಿಜು ಜನತಾದಳ (ಬಿಜೆಡಿ) ನಾಯಕ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವ ಕುರಿತು ಪ್ರಸ್ತಾಪ ಮಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.40.5 ರಷ್ಟು ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಘೋಷಿಸಿದ್ದಾರೆ. ಇದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

    ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹೊಸ ಅಲೆಯನ್ನೇ ಎಬ್ಬಿಸಿದೆ. ಅಷ್ಟೇ ಅಲ್ಲದೆ ಟಿಎಂಸಿ ಈ ಬಾರಿ ಒಡಿಶಾ, ಅಸ್ಸಾಂ, ಜಾರ್ಖಂಡ್, ಬಿಹಾರ್ ಹಾಗೂ ಅಂಡಮಾನ್‍ನ ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಈ ಬಾರಿ ಹಂಚಿಕೆಯಾಗಲಿರುವ ಲೋಕಸಭಾ ಟಿಕೆಟ್ ಗಳಲ್ಲಿ ಶೇ.33 ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ಪ್ರಕಟಿಸಿದ್ದರು. ಕಳೆದ ವರ್ಷ ಒಡಿಶಾ ವಿಧಾನಸಭೆಯಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಶೇ.33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾತಿ ಸಂಬಂಧ ಮಂಡನೆಯಾಗಿದ್ದ ಮಸೂದೆ ಅವಿರೋಧವಾಗಿ ಪಾಸ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv