Tag: ಪಶ್ಚಿಮ ಬಂಗಾಲ

  • ಹಿರಿ ಜೀವಗಳಿಗೆ ಮೋಸ: ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್

    ಹಿರಿ ಜೀವಗಳಿಗೆ ಮೋಸ: ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್

    ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ (Nusrat Jahan) ಇಂದು ಇಡಿ (ED) ಅಧಿಕಾರಿಗಳ ಮುಂದೆ ಹಾಜರಾದರು. ಹಿರಿ ಜೀವಗಳಿಗೆ ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ನುಸ್ರತ್ ಹಾಜರಾಗಿದ್ದಾರೆ.

    ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ ಹಾಗೂ ಸಂಸೆಯೂ ಆಗಿರುವ ನುಸ್ರತ್ ಜಹಾನ್, ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.

    ಇಡಿಯಿಂದ ನೋಟಿಸ್ ಪಡೆದುಕೊಂಡಿದ್ದ ನುಸ್ರತ್ ಸಾಲ್ಟೆಲೇಕ್ ನಲ್ಲಿರುವ ಸಿಜಿಓ ಆಫೀಸಿಗೆ ಇಂದು ಹಾಜರಾಗಿದ್ದರು. ಇಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಕಂಪನಿಯೊಂದರ ನಿರ್ದೇಶಕಿಯಾಗಿರುವ ನುಸ್ರತ್, ಆ ಕಂಪನಿಯು ಫ್ಲ್ಯಾಟ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಯಶ್ 19 ಚಿತ್ರಕ್ಕೆ ಸಂಯುಕ್ತಾ ಮೆನನ್ ನಾಯಕಿ: ಈ ತಿಂಗಳಲ್ಲೇ ಘೋಷಣೆ?

    ಪಶ್ಚಿಮ ಬಂಗಾಳದ (West Bengal) ಬಸಿರಹತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಭಾರೀ ಅಂತರದಿಂದಲೇ ಗೆಲುವು ಸಾಧಿಸಿರುವ ನುಸ್ರತ್, ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.  ಹಲವಾರು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

    ನುಸ್ರತ್ ಅವರನ್ನು ಇಡಿ ವಿಚಾರಣೆಗೆ ಕರೆಯುತ್ತಿದ್ದಂತೆಯೇ ವಿರೋಧ ಪಕ್ಷಗಳು ಭಾರೀ ಗಲಾಟೆ ಎಬ್ಬಿಸಿವೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯ ಕೂಡ ಮಾಡಲಾಗುತ್ತಿದೆ. ಎಷ್ಟೇ ಪ್ರಭಾವಿ ಆಗಿದ್ದರೂ, ಅವರನ್ನು ಬಿಡಬೇಡಿ ಎಂದು ಹಲವರು ಒತ್ತಾಯ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ

    ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ

    ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವನ್ನು ತಮಿಳು ನಾಡು ಸರಕಾರ ನಿಷೇಧ ಮಾಡಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ (West Bengal) ಸರ್ಕಾರವು ಕೂಡ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಈ ವಿವಾದಾತ್ಮಕ ಚಿತ್ರದ ಪದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು. ದಿದಿ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಬಹುತೇಕ ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಧ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ವಿನಾಯತಿಯನ್ನೂ ಘೋಷಣೆ ಮಾಡಿವೆ. ಆದರೂ, ಪಶ್ಚಿಮ ಬಂಗಾಲ ಸರಕಾರ ಈ ರೀತಿ ಸಿನಿಮಾವೊಂದನ್ನು ನಿಷೇಧ ಮಾಡುವುದು ಸರಿಯಲ್ಲ ಎಂದು ಬಿಜೆಪಿ (BJP) ಪ್ರತಿಕ್ರಿಯಿಸಿದೆ. ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನೂ ಕೊಟ್ಟಿದೆ. ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರವು ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ:ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

    ಕಾಶ್ಮೀರ ಫೈಲ್ಸ್ ಎಂಬುದು ಒಂದು ಪ್ರದೇಶವನ್ನು ಅವಮಾನಿಸುತ್ತದೆ. ಅಂತೆಯೇ ದಿ ಕೇರಳ ಸ್ಟೋರಿ ಚಲನಚಿತ್ರವು ತಿರುಚಿದ ಕಥೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲನಚಿತ್ರ ನಿರ್ಮಾಪಕ ವಿಪುಲ್ ಶಾ, ಅವರು ಹಾಗೆ ಮಾಡಿದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿ ಹೋರಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಶ್ಚಿಮ ಬಂಗಾಳದ ಯಾವುದೇ ಥಿಯೇಟರ್‌ನಲ್ಲಿ (Theater) ಚಿತ್ರ ಪ್ರದರ್ಶನ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅದೇ ರೀತಿ ತಮಿಳುನಾಡಿನಲ್ಲಿಯೂ (Tamil Nadu) ಈ ಚಿತ್ರಪದರ್ಶನ ಮಾಡದಂತೆ ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ನಿರ್ಧಾರ ಕೈಗೊಂಡಿದೆ. ಶುಕ್ರವಾರ ತೆರೆಗೆ ಬಂದ ಈ ಸಿನೆಮಾ ಸಾಕಷ್ಟು ವಾದ-ವಿವಾದಗಳನ್ನು ಹುಟ್ಟಿಹಾಕುತ್ತಿದೆ. ದೇಶದ ಹಲವೆಡೆ ಈ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಈ ಚಿತ್ರದ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ.

  • ಸಚಿವ ಸಂಪುಟದಿಂದ ಗೇಟ್ ಪಾಸ್- ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ರಾಜಕೀಯಕ್ಕೆ ಗುಡ್ ಬೈ

    ಸಚಿವ ಸಂಪುಟದಿಂದ ಗೇಟ್ ಪಾಸ್- ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ರಾಜಕೀಯಕ್ಕೆ ಗುಡ್ ಬೈ

    ನವದೆಹಲಿ: ಮಾಜಿ ಕೇಂದ್ರ ಸಚಿವ ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಕೇಂದ್ರ ಸಂಪುಟದಿಂದ ಕೂಕ್ ಪಡೆಯುತ್ತಿದ್ದಂತೆ ರಾಜಕೀಯ ನಿವೃತ್ತಿಗೆ ಮುಂದಾಗಿದ್ದಾರೆ.

    ಪಶ್ಚಿಮ ಬಂಗಾಳದಿಂದ ಸಂಸದರಾಗಿ ಆಯ್ಕೆಯಾಗಿದ್ದ ಹಾಡುಗಾರ ಬಬುಲ್ ಸುಪ್ರಿಯೋ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಕೆಲದಿನಗಳ ಹಿಂದೆ ಸಚಿವ ಸಂಪುಟ ಪುನರ್ ರಚನೆಯಾದಾಗ ಸಚಿವ ಸ್ಥಾನ ಕಳೆದುಕೊಂಡಿದ್ದರು. ಬಳಿಕ ರಾಜಕೀಯ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಇದಕ್ಕೆಲ್ಲ ತೆರೆ ಎಳೆದು ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ಗೇಮ್ 40 ಸಾವಿರ ಕಳ್ಕೊಂಡು ಪ್ರಾಣ ಬಿಟ್ಟ ಬಾಲಕ

    ಗುಡ್ ಬೈ ನಾನು ಬೇರೆ ಯಾವುದೇ ಪಕ್ಷಕ್ಕೂ ಕೂಡ ಸೇರುವುದಿಲ್ಲ, ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವುದಕ್ಕೂ ಹೋಗಲಾರೆ. ನನ್ನನ್ನು ಯಾರು ಕೂಡ ಬನ್ನಿ ಎಂದು ಕರೆದು ಕೂಡ ಇಲ್ಲ. ನಾನು ಬೆಂಬಲಿಸಿದ್ದು ಒಂದೇ ಪಕ್ಷವನ್ನು. ಪಾರ್ಟಿಯಲ್ಲಿ ಹಲವು ಕಾಲಗಳವರೆಗೆ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ. ಇದೀಗ ನಾನು ರಾಜೀನಾಮೆಗೆ ಮುಂದಾಗಿದ್ದೇನೆ. ನಾಳೆ ಸ್ಪೀಕರ್ ಬಳಿ ತೆರಳಿ ನನ್ನ ರಾಜೀನಾಮೆ ಪತ್ರವನ್ನು ನೀಡಲಿದ್ದೇನೆ. ಒಂದು ತಿಂಗಳ ಒಳಗಾಗಿ ನನ್ನ ಸರ್ಕಾರಿ ನಿವಾಸವನ್ನು ಕೂಡ ಖಾಲಿ ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಬಬುಲ್ ಸುಪ್ರಿಯೋ ಅವರು ಪಶ್ಚಿಮ ಬಂಗಾಳದಿಂದ 2014 ಮತ್ತು 2019ರಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅರೂಪ್ ಬಿಸ್ವಾಸ್ ವಿರುದ್ಧ ಜಯಗಳಿಸಿದ್ದರು.

  • ಈ ಥಿಯೇಟರ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 30 ರೂ. ಅಷ್ಟೇ!

    ಈ ಥಿಯೇಟರ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 30 ರೂ. ಅಷ್ಟೇ!

    ಕೋಲ್ಕತ್ತಾ: ಬಾಹುಬಲಿ ಸಿನಿಮಾ ವೀಕ್ಷಿಸಲು ಮಲ್ಟಿಪ್ಲೆಕ್ಸ್ ಗಳು ದುಬಾರಿ ಟಿಕೆಟ್ ದರ ವಿಧಿಸಿರುವುದು ನಿಮಗೆ ಗೊತ್ತೆ ಇದೆ. ಆದರೆ ಕೋಲ್ಕತ್ತದಲ್ಲಿರುವ ನಂದನ್ ಥಿಯೇಟರ್ ನಲ್ಲಿ 30 ರೂ. ನೀಡಿ ಬಾಹುಬಲಿ ಸಿನಿಮಾವನ್ನು ವೀಕ್ಷಿಸಬಹುದು.

    ಕಡಿಮೆ ಬೆಲೆ ಎಂದು ತಿಳಿದು ಈ ಥಿಯೇಟರ್ ಕಳಪೆ ದರ್ಜೆ ಎಂದು ತಿಳಿಯಬೇಡಿ. ಮಲ್ಟಿಪ್ಲೆಕ್ಸ್ ಗಳಲ್ಲಿರುವ ಸೌಲಭ್ಯವನ್ನು ಹೊಂದಿರುವ ನಂದನ್ ಥಿಯೇಟರ್ ನಲ್ಲಿ ಕೇವಲ 30 ರೂ. ನೀಡಿ ಮುಂದುಗಡೆ ಸೀಟ್ ನಲ್ಲಿ ಕುಳಿತು ಸಿನಿಮಾವನ್ನು ವೀಕ್ಷಿಸಬಹುದು.

    30 ರೂ.ಗೆ ಮುಂದುಗಡೆ ಸೀಟ್ ಸಿಕ್ಕರೆ, ಹಿಂದುಗಡೆಯ ಸೀಟ್ ಗೆ 50 ರೂ. ನೀಡಬೇಕು. 70 ರೂ. ನೀಡಿದರೆ ನೀವು ಬಾಲ್ಕನಿಯಲ್ಲಿ ಕುಳಿತು ಸಿನಿಮಾ ವೀಕ್ಷಿಸಬಹುದು. ದೇಶದ ಪ್ರತಿಷ್ಠಿತ ಥಿಯೇಟರ್ ಗಳಲ್ಲಿ ಒಂದಾಗಿರುವ ಈ ಥಿಯೇಟರ್ ನಲ್ಲಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳು ನಡೆದಿದೆ.

    ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

    ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ