Tag: ಪಶು ವಿವಿ

  • ರಾಹುಲ್ ಗಾಂಧಿ ಒಬ್ಬ ಚೈಲ್ಡ್: ಭಗವಂತ್ ಖೂಬಾ

    ರಾಹುಲ್ ಗಾಂಧಿ ಒಬ್ಬ ಚೈಲ್ಡ್: ಭಗವಂತ್ ಖೂಬಾ

    ಬೀದರ್: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಒಬ್ಬ ಚೈಲ್ಡ್. ಮೊದಲನೆಯದಾಗಿ ಅವರಿಗೆ ಪ್ರಬುದ್ಧತೆ ಇಲ್ಲ ಎಂದು ಬೀದರ್‌ನ (Bidar) ಪಶು ವಿವಿಯಲ್ಲಿ  (Veterinary, Animal and Fisheries Sciences University) ಕೇಂದ್ರ ಸಚಿವ ಭಗವಂತ್ ಖೂಬಾ (Bhagawanth Khuba) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಹುಲ್ ಗಾಂಧಿಯವರಿಗೆ ದೇಶದ ಮೇಲೆ ಅಭಿಮಾನ ಹಾಗೂ ದೇಶದ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ

    ದೇಶದ ಹೊರಗಡೆ ಹೋಗಿ ಪ್ರಚಾರವನ್ನು ಅನೇಕ ರೀತಿ ಪಡೆಯುತ್ತಾರೆ. ಇನ್ನೂ ಕೆಲವರು ಬಟ್ಟೆ ಬಿಚ್ಚಿ ಪ್ರಚಾರ ಪಡೆಯುತ್ತಾರೆ. ನಮ್ಮ ದೇಶವನ್ನು ನಿಂದಿಸಿ, ಸಂವಿಧಾನ (Constitution) ಹಾಗೂ ಪ್ರಜಾಪ್ರಭುತ್ವಕ್ಕೆ (Democrosy) ಪ್ರಶ್ನೆ ಮಾಡುತ್ತಾರೆ. ಒಬ್ಬ ನಾಗರಿಕನ ಜವಾಬ್ದಾರಿಯನ್ನೂ ರಾಹುಲ್ ನಿರ್ವಹಣೆ ಮಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಯುವತಿಯ ಹತ್ಯೆ – ದಲಿತಳು ಎಂದು ಕೊಲೆ ಆರೋಪ

  • ಪಶು ವಿವಿ ಘಟಿಕೋತ್ಸವ – ಸೈನಿಕನ ಮಗಳಿಗೆ 13, ರೈತನ ಮಗನಿಗೆ 9 ಚಿನ್ನದ ಪದಕ

    ಪಶು ವಿವಿ ಘಟಿಕೋತ್ಸವ – ಸೈನಿಕನ ಮಗಳಿಗೆ 13, ರೈತನ ಮಗನಿಗೆ 9 ಚಿನ್ನದ ಪದಕ

    ಬೀದರ್: ನಂದಿ ನಗರದಲ್ಲಿ ನಡೆದ ಪಶು ವಿವಿಯ 12ನೇ ಘಟಿಕೋತ್ಸವದಲ್ಲಿ ರೈತನ ಮಗ ಹಾಗೂ ಸೈನಿಕನ ಮಗಳು ಅತಿ ಹೆಚ್ಚು ಬಂಗಾರದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಶಿವಮೊಗ್ಗದ ಪಶು ವಿವಿಯಲ್ಲಿ ಅಧ್ಯಯನ ನಡೆಸಿದ ಕನಿಕ ಯಾದವ್ ಸೈನಿಕನ ಮಗಳಾಗಿದ್ದು 13 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಪಶು ವಿವಿಯಲ್ಲಿ ಓದಿದ ಕಿರಣ್ ದದೂರ್ ರೈತನ ಮಗನಾಗಿದ್ದು 9 ಚಿನ್ನದ ಪದಕ ಪಡೆದು ಸಾಧನೆ ಗೈದಿದ್ದಾರೆ. ಪಶು ವೈದ್ಯಕೀಯ ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಮಾಡಿದ ಪಶು ವಿವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕಗಳನ್ನು ನೀಡಿ ಅಭಿನಂದಿಸಿದರು. ಇದನ್ನೂ ಓದಿ: ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ

    ಈ ವೇಳೆ ಮಾತನಾಡಿದ ಬಂಗಾರದ ಪದಕ ಪಡೆದ ಕಿರಣ್ ದದೂರ್, ನಮ್ಮ ತಂದೆ ರೈತನಾಗಿದ್ದು, ನಮ್ಮದು ಬಡ ಕುಟುಂಬವಾಗಿದೆ. ಒಳ್ಳೆಯ ಪಶು ವೈದ್ಯನಾಗಬೇಕು ಎಂದು ಕಷ್ಟ ಪಟ್ಟು ಓದಿ ಇಂದು ಚಿನ್ನದ ಪದಕ ಪಡೆದಿದ್ದು ಬಹಳ ಖುಷಿಯಾಗುತ್ತಿದೆ. ನಾಳೆ ವೈದ್ಯನಾಗಿ ರೈತರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಸಹಾಯ ಮಾಡುತ್ತೇವೆ ಎಂದರು.

    ಘಟಿಕೋತ್ಸವದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ಪಶು ವಿವಿ ಕುಲಪತಿಗಳು, ಡೀನ್‍ಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.‌ ಇದನ್ನೂ ಓದಿ: ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ