Tag: ಪಶು ಇಲಾಖೆ

  • ಕೇರಳದ ಆನೆ ಸಾವು ಮಾಸುವ ಮುನ್ನವೇ ಯಾದಗಿರಿಯಲ್ಲಿ ಅಮಾನವೀಯ ಘಟನೆ

    ಕೇರಳದ ಆನೆ ಸಾವು ಮಾಸುವ ಮುನ್ನವೇ ಯಾದಗಿರಿಯಲ್ಲಿ ಅಮಾನವೀಯ ಘಟನೆ

    – ಕಾಲು ಕಳ್ಕೊಂಡು ನದಿಯಲ್ಲಿ ನರಳುತ್ತಿರೋ ಎಮ್ಮೆ

    ಯಾದಗಿರಿ: ಇತ್ತೀಚೆಗೆ ಕೇರಳದಲ್ಲಿ ಆನೆಯೊಂದು ದುಷ್ಟರ ಕೃತ್ಯಕ್ಕೆ ನದಿಯಲ್ಲಿ ನರಳಿ ಪ್ರಾಣ ಬಿಟ್ಟಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆಯುತ್ತಿದೆ.

    ಎಮ್ಮೆಯೊಂದು ಜಿಲ್ಲೆಯ ವಡಗೇರಾ ತಾಲೂಕಿನ ಕೊಡಲ ಗ್ರಾಮದ ಸಮೀಪದ ಕೃಷ್ಣಾ ನದಿ ತೀರದಲ್ಲಿ ಮೊಸಳೆ ಹೊಡೆತಕ್ಕೆ ಸಿಕ್ಕು ಕಾಲು ಕಳೆದುಕೊಂಡಿದೆ. ಆದರೆ ಎಮ್ಮೆ ಕಳೆದ ಎರಡು ದಿನಗಳಿಂದ ನರಳುತ್ತಿದೆ. ಈ ವಿಷಯ ಸ್ಥಳೀಯ ಪಶು ಚಿಕಿತ್ಸಾಲಯ ಕ್ಕೆ ಗೊತ್ತಿದ್ದರೂ ಪಶು ವೈದ್ಯರು ಮಾತ್ರ ಎಮ್ಮೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಇದರಿಂದ ಅತೀವ ನೋವಿನಿಂದ ನರಳುತ್ತಿರುವ ಎಮ್ಮೆ ನೋವು ತಗ್ಗಿಸಿಕೊಳ್ಳಲು ನದಿಯ ನೀರಿನಲ್ಲಿ ಕಾಲ ಕಳೆಯುತ್ತಿದೆ.

    ಕಳೆದ ಎರಡು ದಿನಗಳ ಹಿಂದೆ ನೀರು ಕುಡಿಯಲು ನದಿ ತೀರಕ್ಕೆ ಎಮ್ಮೆ ತೆರಳಿತ್ತು. ಈ ಸಮಯದಲ್ಲಿ ಮೊಸಳೆಯೊಂದು ಎಮ್ಮೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಲ್ಲಿ ಎಮ್ಮೆಯ ಕಾಲು ಕಟ್ ಆಗಿದ್ದು, ಮೊಸಳೆ ಬಾಯಿಂದ ತಪ್ಪಿಸಿಕೊಂಡು ಎಮ್ಮೆ ಜೀವ ಉಳಿಸಿಕೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಎಮ್ಮೆಯ ರಕ್ಷಣೆಗೆ ಯಾರೂ ಧಾವಿಸದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನದಿಯ ನೀರಿನಲ್ಲಿ ಎಮ್ಮೆ ಕುಳಿತಿದೆ.

    ಇನ್ನೂ ನದಿಯಲ್ಲಿ ಮೊಸಳೆ ಇರುವುದರಿಂದ ನದಿಗಿಳಿದು ಎಮ್ಮೆ ಕಾಪಾಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಎರಡು ದಿನವಾದರೂ ಎಮ್ಮೆ ಮಾಲಿಕ ಪತ್ತೆಯಾಗಿಲ್ಲ. ವಿಷಯ ತಿಳಿದಿದ್ದರೂ ಇನ್ನೂ ಸ್ಥಳಕ್ಕೆ ಧಾವಿಸಿದ ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮೂರು ಹಕ್ಕಿಗಳ ಸಾವು – ಆತಂಕದಲ್ಲಿ ಶಿವಮೊಗ್ಗ ಜನತೆ

    ಮೂರು ಹಕ್ಕಿಗಳ ಸಾವು – ಆತಂಕದಲ್ಲಿ ಶಿವಮೊಗ್ಗ ಜನತೆ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯ ಜೊತೆಯಲ್ಲೇ ಶಿವಮೊಗ್ಗದ ಜನತೆಗೆ ಹಕ್ಕಿಜ್ವರದ ಭೀತಿ ಎದುರಾಗಿದೆ. ನಗರದ ಬಿ.ಎಚ್.ರಸ್ತೆಯಲ್ಲಿರುವ ಸರಕಾರಿ ಡಯಟ್ ಕಾಲೇಜಿನಲ್ಲಿ ಇಂದು ಮೂರು ಹಕ್ಕಿಗಳು ಮೃತಪಟ್ಟಿದ್ದು ಕಾಲೇಜಿನ ಸುತ್ತಮುತ್ತಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಪಾಂಡು ಎರಾನ್ ಎಂಬ ಜಾತಿಗೆ ಸೇರಿದ ಮೂರು ಹಕ್ಕಿಗಳು ಕಾಲೇಜಿನ ಆವರಣದಲ್ಲೇ ಸತ್ತು ಬಿದ್ದಿವೆ. ಹಕ್ಕಿಗಳು ಮೃತಪಟ್ಟಿರುವ ಬಗ್ಗೆ ಕಾಲೇಜಿನ ಸಿಬ್ಬಂದಿ ಪಶು ವೈದ್ಯರಿಗೆ ತಿಳಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಹಕ್ಕಿಗಳ ಮೃತದೇಹ ಪರಿಶೀಲನೆ ನಡೆಸಿದ್ದಾರೆ.

    ಈ ಹಕ್ಕಿಗಳು ಸಹಜ ರೀತಿಯಲ್ಲಿ ಮೃತಪಟ್ಟಿವೆ. ಈ ಬಗ್ಗೆ ನಾಗರೀಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಮೃತ ಹಕ್ಕಿಗಳನ್ನು ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸುತ್ತೇವೆ. ಈಗಾಗಿ ವರದಿ ಬಂದ ನಂತರ ಈ ಹಕ್ಕಿಗಳು ಜ್ವರದಿಂದ ಮೃತಪಟ್ಟಿದ್ದ, ಅಥವಾ ಇಲ್ಲವೋ ಎಂಬುದನ್ನು ವರದಿ ಬಂದ ನಂತರ ತಿಳಿಸುವುದಾಗಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಜಯಪ್ರಕಾಶ್ ತಿಳಿಸಿದ್ದಾರೆ.

  • ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಸಾಕಿ ಬೆಳೆಸಿದ ಜಾನುವಾರುಗಳನ್ನ ಸ್ವತಃ ಗ್ರಾಮಸ್ಥರೇ ಜೀವಂತ ಸಮಾಧಿ ಮಾಡಿದ ಘಟನೆ ನಡೆದಿದೆ.

    ಹುಚ್ಚು ನಾಯಿ ಕಡಿತಕ್ಕೊಳಗಾದ ಗ್ರಾಮದ ಸುಮಾರು 10 ರಾಸುಗಳು ಬುದ್ಧಿ ಸ್ವಾಧೀನ ಕಳೆದುಕೊಂಡಿದ್ದವು. ಹುಚ್ಚು ನಾಯಿ ಗ್ರಾಮದ ಜನ ಹಾಗೂ ದನಗಳ ಮೇಲೆ ದಾಳಿ ಮಾಡುತ್ತಿದ್ದವು. ಕೆಲ ದಿನಗಳಿಂದ ಹುಚ್ಚು ನಾಯಿಗಳ ಕಡಿತಕ್ಕೆ ಎಮ್ಮೆಯೊಂದು ಆಕಳುಗಳ ಮೇಲೆ ದಾಳಿ ಮಾಡಿತ್ತು. ಜೀವ ಭಯದಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಪ್ರಾಣಿಗಳ ಜೀವಂತ ಸಮಾಧಿ ಮಾಡಿದ್ದಾರೆ.

    ಕೆಲವು ಜಾನುವಾರುಗಳು ಅನಾರೋಗ್ಯದಿಂದ ಸಾವನ್ನಪ್ಪಿವೆ. ಪಶುವೈದ್ಯರಿಗೆ ಮಾಹಿತಿ ನೀಡಿದರೂ ಸರಿಯಾದ ಸಮಯಕ್ಕೆ ಔಷಧಿ ವಿತರಣೆ ಮಾಡದ ಹಿನ್ನೆಲೆಯಲ್ಲಿ ಪಶು ಇಲಾಖೆ ಅಧಿಕಾರಿಗಳ ಹಾಗೂ ವೈದ್ಯರ ನಿಷ್ಕಾಳಜಿಯಿಂದ ಚಿಕಿತ್ಸೆ ಸಿಗದೆ ಪ್ರಾಣಿಗಳು ಸ್ವಾಧೀನ ಕಳೆದುಕೊಂಡು ದಾಳಿಮಾಡುತ್ತಿದ್ದವು.

    ಹೀಗಾಗಿ ಬೇರೆದಾರಿಯಿಲ್ಲದೆ ಗ್ರಾಮಸ್ಥರೇ ನಾಲ್ಕೈದು ಜಾನುವಾರುಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆ ನೀಡದ ಪಶು ವೈಧ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹಾವೇರಿ: ವಿಷಕಾರಿ ಮೇವು ಸೇವಿಸಿ 30 ಕುರಿಗಳ ಸಾವು

    ಹಾವೇರಿ: ವಿಷಕಾರಿ ಮೇವು ಸೇವಿಸಿ 30 ಕುರಿಗಳ ಸಾವು

    ಹಾವೇರಿ: ವಿಷಕಾರಿ ಮೇವು ಸೇವಿಸಿದ ಹಿನ್ನೆಲೆಯಲ್ಲಿ 30 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗುಡ್ಡದಚನ್ನಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಾಗಪ್ಪ, ನಿಂಗಪ್ಪ ಮತ್ತು ಗುಡ್ಡಪ್ಪ ಸೇರಿದಂತೆ ಒಟ್ಟು ಆರು ಜನ ಕುರಿಗಾಹಿಗಳ ಕುರಿಗಳು ಸಾವನ್ನಪ್ಪಿವೆ. ಕುರಿಗಳನ್ನು ಮೇಯಿಸಲು ತೆರಳಿದ್ದ ವೇಳೆ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯದಲ್ಲಿಯ ವಿಷ ಮೇವಿನ ಸೇವನೆಯಿಂದ ಕುರಿಗಳು ಮೃತಪಟ್ಟಿವೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

    ಅಧಿಕಾರಿಗಳು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

     

  • ಮೇವು ಕೇಂದ್ರದಿಂದ ವಿತರಿಸಿದ ಮೇವು ತಿಂದು 6 ಹಸುಗಳು ಸಾವು

    ಮೇವು ಕೇಂದ್ರದಿಂದ ವಿತರಿಸಿದ ಮೇವು ತಿಂದು 6 ಹಸುಗಳು ಸಾವು

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯನಪುರ ಗ್ರಾಮದಲ್ಲಿ ಮೇವು ಕೇಂದ್ರದಿಂದ ವಿತರಿಸಿದ ಮೇವನ್ನು ತಿಂದು ಆರು ಹಸುಗಳು ಸಾವನ್ನಪ್ಪಿವೆ.

    ಗ್ರಾಮದ ಶಿವಯ್ಯ, ಬೆಲ್ಲಯ್ಯ, ಚಂದ್ರ, ಮರಿಸಿದ್ದಯ್ಯ ಮತ್ತು ದೊಡ್ಡಬಳ್ಳಯ್ಯ ಎಂಬ ರೈತರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸುಗಳಿಗೆ ಮೇವಿಲ್ಲದ ಕಾರಣ ಕೃಷಿ ಇಲಾಖೆಯಿಂದ ಮೇವು ಕೇಂದ್ರದ ಮೂಲಕ ವಿತರಿಸಲಾಗಿದ್ದ ಜೋಳದ ಪುಡಿಯನ್ನು ತಿಂದ ಆರು ಹಸುಗಳು ಸಾವನ್ನಪ್ಪಿವೆ.

    ಹಸುಗಳು ಸಾವನ್ನಪ್ಪಿದ್ದರಿಂದ ರೈತರಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಇದಲ್ಲದೆ ಇನ್ನೂ ಕೆಲವು ಹಸುಗಳು ಮೇವನ್ನು ತಿಂದು ಅಸ್ವಸ್ಥಗೊಂಡಿವೆ. ಮೇವಿಲ್ಲದ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರಿಗೆ ಮೇವು ಒದಗಿಸಿ ರೈತರ ಮುಖದಲ್ಲಿ ಮಂದಹಾಸ ತಂದಿತ್ತು. ಆದರೆ ಇಂದು ನಡೆದಿರುವ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ. ಸದ್ಯ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.