Tag: ಪವಿ ಪೂವಪ್ಪ

  • ಮುದ್ದಿನ ನಾಯಿಗೋಸ್ಕರ ಪವಿ ಪೂವಪ್ಪ ಲವ್ ಬ್ರೇಕಪ್ – ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

    ಮುದ್ದಿನ ನಾಯಿಗೋಸ್ಕರ ಪವಿ ಪೂವಪ್ಪ ಲವ್ ಬ್ರೇಕಪ್ – ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

    ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಪವಿ ಪೂವಪ್ಪ (Pavi Poovappa) ಅವರು ಮೊದಲ ಬಾರಿಗೆ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಾಯಿ ವಿಚಾರಕ್ಕೆ ಬಾಯ್‌ಫ್ರೆಂಡ್ ಡಿಜೆ ಮ್ಯಾಡಿ ಅವರೊಂದಿಗೆ ಬ್ರೇಕಪ್ (Breakup) ಮಾಡಿಕೊಂಡಿದ್ದರ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ‘ಭರ್ಜರಿ ಬ್ಯಾಚುಲರ್ 2’ ಕಾರ್ಯಕ್ರಮದಲ್ಲಿ ಬ್ರೇಕಪ್ ಸ್ಟೋರಿಯನ್ನು ಹೇಳುತ್ತಾ ಪವಿ ಪೂವಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾವು ಐದು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ವಿ. ಅವರು ನಾರ್ಥ್ ಇಂಡಿಯನ್ ನಾನು ಸೌತ್ ಇಂಡಿಯನ್. ನನಗೆ ನನ್ನ ನಾಯಿ ಅಂದರೆ ಪಂಚಪ್ರಾಣ. ನನ್ನ ಹುಟ್ಟುಹಬ್ಬಕ್ಕೆ ಆ ನಾಯಿಯನ್ನು ಅವರೇ ಉಡುಗೊರೆಯಾಗಿ ನೀಡಿದ್ದರು. ಆದರೆ ನನ್ನನ್ನು ಬಿಟ್ಟು ಹೋಗಲು ನಾಯಿ ಕಾರಣವನ್ನು ಕೊಟ್ಟರು. ನಾಯಿಯನ್ನು ಮಾರಿಬಿಡು ಆಗಲೇ ನಿನ್ನನ್ನು ಮನೆಗೆ ಸೇರಿಸಿಕೊಳ್ಳುವುದು ಅಂತೆಲ್ಲಾ ಹೇಳಿದ್ದರು. ಇಲ್ಲ ಅಂದ್ರೆ ಮದುವೆ ಆಗಲ್ಲ ಎಂದು ಹೇಳಿದ್ದರು. ಆ ನಾಯಿ ನನಗೆ ಎಷ್ಟು ಇಷ್ಟ ಅನ್ನೋದು ಅವರಿಗೂ ಚೆನ್ನಾಗಿ ಗೊತ್ತಿತ್ತು. ಈಗಲೂ ಅವನು ನನ್ನನ್ನು ಬಿಟ್ಟು ಇರೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

     

    View this post on Instagram

     

    A post shared by Zee Kannada (@zeekannada)

    ಬ್ರೇಕಪ್ ಮಾಡಿಕೊಳ್ಳುವ ಉದ್ದೇಶದಿಂದಲೇ ನಾಯಿ ವಿಚಾರ ಹೇಳಿ ಹೀಗೆ ಮಾಡಿದರಬಹುದು. ಬಹುಶಃ ಅವರಿಗೆ ಮದುವೆ ಆದಮೇಲೆ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಹಾಗಾಗಿ ನಾಯಿ ಕಾರಣ ಕೊಟ್ಟು ಬ್ರೇಕಪ್ ಮಾಡಿಕೊಂಡಿದ್ದಾರೆ. ಇದಾಗಿ 8 ತಿಂಗಳುಗಳಾಗಿದೆ. ಎರಡು ದಿನದ ಹಿಂದೆ ನಾನು ಅವರನ್ನು ನೋಡಿದೆ ಎನ್ನುತ್ತಾ ಪವಿ ಪೂವಪ್ಪ ಗಳಗಳನೆ ಅತ್ತಿದ್ದಾರೆ. ಆಗ `ಭರ್ಜರಿ ಬ್ಯಾಚುಲರ್ಸ್‌’ ತಂಡದವರು ಅವರನ್ನು ಸಂತೈಸಿದ್ದಾರೆ.

     

    View this post on Instagram

     

    A post shared by Pavi Poovappa (@pavipoovappa3)

    ‘ಬಿಗ್ ಬಾಸ್’ ಕನ್ನಡ 10ರಲ್ಲಿ ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ದಿನ ಇದ್ದರೂ ಜನರ ಮನಗೆದ್ದಿದ್ದರು. ಇದೀಗ ‘ಭರ್ಜರಿ ಬ್ಯಾಚುಲರ್ 2’ ಉಲ್ಲಾಸ್‌ಗೆ ಪವಿ ಮೆಂಟರ್ ಆಗಿದ್ದಾರೆ.

  • ಬಾಯ್ ಫ್ರೆಂಡ್ ಜೊತೆ ಗೋವಾಗೆ ಹಾರಿದ ಬಿಗ್ ಬಾಸ್ ಸ್ಪರ್ಧಿ ಪವಿ

    ಬಾಯ್ ಫ್ರೆಂಡ್ ಜೊತೆ ಗೋವಾಗೆ ಹಾರಿದ ಬಿಗ್ ಬಾಸ್ ಸ್ಪರ್ಧಿ ಪವಿ

    ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಪವಿ ಪೂವಪ್ಪ ಮೊನ್ನೆಯಷ್ಟೇ ಆರು ತಿಂಗಳ ನಂತರ ಬಾಯ್ ಫ್ರೆಂಡ್ ಮೀಟ್ ಮಾಡಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಯ್ ಫ್ರೆಂಡ್ (Boyfriend) ಡಿಜೆ ಮ್ಯಾಡಿ (Maddy) ಅನ್ನು ಸ್ವತಃ ಪವಿ ಅವರೇ ಸ್ವಾಗತಿಸಿ, ಕಾರಿನಲ್ಲಿ ಕರೆದೊಯ್ದಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಆರು ತಿಂಗಳ ಮಟ್ಟಿಗೆ ಮ್ಯಾಡಿ ವಿದೇಶದಲ್ಲಿ ಕೆಲಸಕ್ಕೆ ಹೋಗಿದ್ದರು. ಈ ವಿಷಯವನ್ನು ಪವಿ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದರು. ಹಲವು ವರ್ಷಗಳಿಂದ ಒಟ್ಟಿಗೆ ಇರುವ ವಿಚಾರವನ್ನೂ ಅವರು ಹೇಳಿಕೊಂಡಿದ್ದರು. ಆರು ತಿಂಗಳು ಕಳೆದ ನಂತರ ಮ್ಯಾಡಿ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಪವಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

    ಬೆಂಗಳೂರಿಗೆ ಬಾಯ್ ಫ್ರೆಂಡ್ ಬರುತ್ತಿದ್ದಂತೆಯೇ ಆತನೊಂದಿಗೆ ಗೋವಾಗೆ (Goa) ಹಾರಿದ್ದಾರೆ. ಗೋವಾದ ಕಡಲ ಕಿನಾರೆಯಲ್ಲಿ ಬಿಕಿನಿ (Bikini) ಹಾಕಿಕೊಂಡು ಪವಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಬಾಯ್ ಫ್ರೆಂಡ್ ಜೊತೆ ಪಬ್ ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂದಿ ಮೂಲಕ ಪವಿ ಪೂವಪ್ಪ (Pavi Poovappa) ಬಂದಾಗ, ಅವರು ಹೆಸರು ಕೇಳುತ್ತಿದ್ದಂತೆಯೇ ಅನೇಕ ನೆಟ್ಟಿಗರು ಆ ಹೆಸರಿಗಾಗಿ ಹುಡುಕಾಡಿದ್ದರು. ಹುಡುಕಿದವರಿಗೆಲ್ಲ ಸಿಕ್ಕಿದ್ದು, ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು, ಪವಿ ಪೂವಪ್ಪ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಶೋಗಳಿಗೆ ಹೆಜ್ಜೆ ಹಾಕಿದ್ದಾರೆ.

    ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಅವರು ಹೊಂದಿದ್ದಾರೆ. ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಇವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಆಗಿ ಬದಲಾಗಿದ್ದಾರೆ.

     

    ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ ಇವರು, ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳನ್ನೂ ಪಡೆದುಕೊಂಡಿದ್ದಾರೆ.

  • ಕೊನೆಗೂ ಬಾಯ್ ಫ್ರೆಂಡ್ ಮೀಟ್ ಮಾಡಿದ ಬಿಗ್ ಬಾಸ್ ‍ಸ್ಪರ್ಧಿ ಪವಿ ಪೂವಪ್ಪ

    ಕೊನೆಗೂ ಬಾಯ್ ಫ್ರೆಂಡ್ ಮೀಟ್ ಮಾಡಿದ ಬಿಗ್ ಬಾಸ್ ‍ಸ್ಪರ್ಧಿ ಪವಿ ಪೂವಪ್ಪ

    ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಪವಿ ಪೂವಪ್ಪ ಆರು ತಿಂಗಳ ನಂತರ ಬಾಯ್ ಫ್ರೆಂಡ್ ಮೀಟ್ ಮಾಡಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಯ್ ಫ್ರೆಂಡ್ (Boyfriend) ಡಿಜೆ ಮ್ಯಾಡಿ (Maddy) ಅನ್ನು ಸ್ವತಃ ಪವಿ ಅವರೇ ಸ್ವಾಗತಿಸಿ, ಕಾರಿನಲ್ಲಿ ಕರೆದೊಯ್ದಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಆರು ತಿಂಗಳ ಮಟ್ಟಿಗೆ ಮ್ಯಾಡಿ ವಿದೇಶದಲ್ಲಿ ಕೆಲಸಕ್ಕೆ ಹೋಗಿದ್ದರು. ಈ ವಿಷಯವನ್ನು ಪವಿ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದರು. ಹಲವು ವರ್ಷಗಳಿಂದ ಒಟ್ಟಿಗೆ ಇರುವ ವಿಚಾರವನ್ನೂ ಅವರು ಹೇಳಿಕೊಂಡಿದ್ದರು. ಆರು ತಿಂಗಳು ಕಳೆದ ನಂತರ ಮ್ಯಾಡಿ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಪವಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂದಿ ಮೂಲಕ ಪವಿ ಪೂವಪ್ಪ (Pavi Poovappa) ಬಂದಾಗ, ಅವರು ಹೆಸರು ಕೇಳುತ್ತಿದ್ದಂತೆಯೇ ಅನೇಕ ನೆಟ್ಟಿಗರು ಆ ಹೆಸರಿಗಾಗಿ ಹುಡುಕಾಡಿದ್ದರು. ಹುಡುಕಿದವರಿಗೆಲ್ಲ ಸಿಕ್ಕಿದ್ದು, ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು, ಪವಿ ಪೂವಪ್ಪ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಶೋಗಳಿಗೆ ಹೆಜ್ಜೆ ಹಾಕಿದ್ದಾರೆ.

    ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಅವರು ಹೊಂದಿದ್ದಾರೆ.

    ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಇವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಆಗಿ ಬದಲಾಗಿದ್ದಾರೆ.

    ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ ಇವರು, ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳನ್ನೂ ಪಡೆದುಕೊಂಡಿದ್ದಾರೆ.

     

    ಪವಿ ಸಾಂಪ್ರದಾಯಿಕ ಉಡುಗೆಗಿಂತ ತುಂಡುಡುಗೆ, ಬಿಕಿನಿ ತೊಟ್ಟಿದ್ದೇ ಹೆಚ್ಚು. ಅದರಲ್ಲೂ ಫ್ಯಾಷನ್ ಶೋಗಳಲ್ಲಿ ಹಾಟ್ ಹಾಟ್ ಆಗಿ ಕಂಡಿದ್ದೂ ಇದೆ. ಹಾಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪವಿ ಅಂದರೆ ಅಚ್ಚುಮೆಚ್ಚು.

  • ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇನ್ನೂ 2 ವಾರಗಳ ಕಾಲ ಮುಂದೂಡಲಾಗಿದೆ. ಕಳೆದ ವಾರಾಂತ್ಯ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಮೈಕಲ್ ತಮ್ಮ ಸ್ನೇಹಿತರಾದ ನೀತು ವನಜಾಕ್ಷಿ ಮತ್ತು ಪವಿ ಪೂವಪ್ಪ ಅವರನ್ನು ಭೇಟಿಯಾಗಿದ್ದಾರೆ.

    ದೊಡ್ಮನೆ ಆಟ 90 ದಿನಗಳನ್ನು ಪೂರೈಸಿ ಹೊರಬರುತ್ತಿದ್ದಂತೆ ಮೈಕಲ್ ಅವರು ಪವಿ- ನೀತುರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋವನ್ನು ಮೈಕಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ ಇಶಾನಿ ಎಲ್ಲಿ? ಅವರನ್ನು ಭೇಟಿ ಮಾಡಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಈಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಅಫಿಷಿಯಲ್ ಆಗಿ ಮೈಕಲ್ ಹೇಳಿದ್ದರು. ಇಶಾನಿ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದರು. ಇಬ್ಬರ ಲವ್ ಸ್ಟೋರಿ ಈ ಸೀಸನ್‌ನಲ್ಲಿ ಹೆಚ್ಚು ಹೈಲೆಟ್ ಆಗಿತ್ತು. ಹಾಗಾಗಿಯೇ ಪವಿ, ನೀತುರನ್ನು ಭೇಟಿಯಾಗಿದ್ದೀರಾ ಆದರೆ ಇಶಾನಿ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ನೆಟ್ಟಿಗರು ಮೈಕಲ್ ಮುಂದಿಟ್ಟಿದ್ದಾರೆ.

    ಕನ್ನಡ ಬರದ ಮೈಕಲ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್ ದೊಡ್ಮನೆಗೆ ಕಾಲಿಟ್ಟ ಮೇಲೆಯೇ ಕನ್ನಡ ಕಲಿತಿದ್ದರು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಹೈಲೆಟ್‌ ಆಗಿದ್ದರು.

    ಕಳೆದ ವಾರಾಂತ್ಯ ಮೈಕಲ್‌ಗೆ ಕಿಚ್ಚ ಸುದೀಪ್ ಕಡೆಯಿಂದ ಖಡಕ್ ಕ್ಲಾಸ್ ಆಗಿತ್ತು. ಕ್ಯಾಪ್ಟನ್‌ಗೆ ಗೌರವ ನೀಡದೇ ರೂಲ್ಸ್ ಫಾಲೋ ಮಾಡದೇ ತನ್ನದೇ ಸರಿ ಎಂದು ಬೀಗುತ್ತಿದ್ದ ಮೈಕಲ್ ಆಟಕ್ಕೆ ಸುದೀಪ್ ತಕ್ಕ ಪಾಠ ಕಲಿಸಿದ್ದರು.  ಭಾನುವಾರದ (ಜ.7) ಎಪಿಸೋಡ್‌ನಲ್ಲಿ ಮೈಕಲ್ ಎಲಿಮಿನೇಟ್ ಆದರು.

  • Bigg Boss-ಕಾರ್ತಿಕ್ ವಿನ್ನರ್ ಆಗಬಹುದು: ಭವಿಷ್ಯ ನುಡಿದ ಪವಿ ಪೂವಪ್ಪ

    Bigg Boss-ಕಾರ್ತಿಕ್ ವಿನ್ನರ್ ಆಗಬಹುದು: ಭವಿಷ್ಯ ನುಡಿದ ಪವಿ ಪೂವಪ್ಪ

    ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ (Pavi Poovappa) ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಹಳೆಯ ಎಪಿಸೋಡ್‌ಗಳನ್ನು ನೋಡಿಕೊಂಡು, ಸದಸ್ಯರ ವರ್ತನೆಗಳನ್ನು ಅರಿತುಕೊಂಡು ಲೆಕ್ಕಾಚಾರ ಮಾಡಿ ಆಡುವ ಅವಕಾಶ ಇರುವುದರಿಂದ ಅವರಿಂದ ಮನೆಯ ಪರಿಸ್ಥಿತಿಯೇ ಬದಲಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಮನೆಯೊಳಗೆ ಪವಿತ್ರಾ ಅಂದುಕೊಂಡಷ್ಟೇನೂ ಸದ್ದು ಮಾಡಲಿಲ್ಲ. ಒಂದು ವಾರ ಉತ್ತಮ ಪಡೆದುಕೊಂಡು ಇನ್ನೊಂದು ವಾರ ಜೈಲುಶಿಕ್ಷೆಯನ್ನೂ ಅನುಭವಿಸಿದ್ದು ಅವರ ಆಟದ ಏರಿಳಿತವನ್ನು ಸೂಚಿಸುವಂತಿದೆ. ಒಳಗೆ ಹೋಗಿ ಮೂರೇ ವಾರಕ್ಕೆ ಮರಳಿ ಬಂದಿರುವ ಅವರು ಮನೆಯಿಂದ ಹೊರಬಿದ್ದಿದ್ದೇ JioCinemaಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ಮೂರು ವಾರಗಳ ಪುಟ್ಟ ಜರ್ನಿಯ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

     

    ‘ನಾನು ಪವಿ ಪೂವಪ್ಪ. ಈವಾಗ ಜಸ್ಟ್ ಬಿಗ್‌ಬಾಸ್‌ ಸೀಸನ್‌ 10 ಮನೆಯಿಂದ ಹೊರಗೆ ಬಂದಿದ್ದೇನೆ. ಮನೆಯಿಂದ ಹೊರಬರುವ ನಿರೀಕ್ಷೆ ಸಣ್ಣದಾಗಿ ಇತ್ತು. ಆದರೆ ಖಚಿತವಾಗಿ ಗೊತ್ತಿರಲಿಲ್ಲ. 80% ಹೊರಗೆ ಬರಬಹುದು ಅಂದುಕೊಂಡಿದ್ದೆ. ಎಲ್ಲರೂ ನನ್ನ ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿ, ಈ ವಾರ ಹೊಗಬಹುದು ಅಂದುಕೊಂಡಿದ್ದೆ. ಈ ವಾರ ನಾನು ಸ್ವಲ್ಪ ಲ್ಯಾಕ್ ಆದೆ. ಸ್ವಲ್ಪ ಕಮ್ಮಿ ಪ್ರಯತ್ನಪಟ್ಟಿದ್ದೂ ಇದಕ್ಕೆ ಕಾರಣವಾಯ್ತು.

     

    ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಾಗ ಸಡನ್‌ ಆಗಿ ಯಾರನ್ನೂ ಫ್ರೆಂಡ್ಸ್ ಮಾಡ್ಕೊಂಡಿಲ್ಲ. ಎಲ್ಲರ ಜೊತೆಗೂ ಚೆನ್ನಾಗೇ ಇದ್ದೆ. ಒಂದು ಸೆಟ್‌ ಆಫ್‌ ಪೀಪಲ್‌, ನನಗೆ ಕಂಪರ್ಟಬಲ್ ಅನಿಸಿದ್ರು. ಹಾಗಾಗಿ ಅವರ ಜೊತೆಗೆ ಚೆನ್ನಾಗಿದ್ದೆ. ಸಂಗೀತಾ, ಕಾರ್ತಿಕ್ ತಂಡ ನನ್ನನ್ನು ಟಾರ್ಗೆಟ್ ಮಾಡುತ್ತಿದ್ರು. ಅವಿನಾಶ್‌ ಅವರನ್ನು ಅವರ ಕಡೆ ಎಳ್ಕೊಂಡು, ವಿನಯ್ ತಂಡದಲ್ಲಿದ್ದೀನಿ ಅಂದ್ಕೊಂಡು ನನ್ನ ಮೇಲೆ ಟಾರ್ಗೆಟ್ ಮಾಡ್ಕೊಂಡು ಬಂದ್ರು. ವಿನಯ್ ಮೇಲಿರುವ ಕೋಪಕ್ಕೆ ನಾನು ಬಲಿಯಾದೆ ಅನಿಸುತ್ತದೆ.

    ರಕ್ಕಸ-ಗಂಧರ್ವರ ಬಗ್ಗೆ

    ಮೊದಲು ರಾಕ್ಷಸರು ಸಂಗೀತಾ ತಂಡದವರಾಗಿದ್ದರು. ಆಗ ಅವರು ಹೇಳಿದ್ದೆಲ್ಲವನ್ನೂ ನಾವು ಕೇಳಿದ್ದೆವು. ಆದರೆ ನಂತರ ನಾವು ರಕ್ಕಸರಾದಾಗ ಅವರು ನಮ್ಮ ಯಾವ ಮಾತನ್ನೂ ಕೇಳಲಿಲ್ಲ. ಅದರಿಂದ ನಾವು ಪ್ರವೋಕ್ ಆಗುವ ಹಾಗಾಯ್ತು. ನನಗೆ ನೀರು ಹಾಕಬೇಕಾದರೂ, ‘ನನಗೆ ಉಸಿರಾಡಲು ಆಗುತ್ತಿಲ್ಲ’ ಎಂದು ಹೇಳುತ್ತಿದ್ದೆ. ಆದರೆ ಕಾರ್ತಿಕ್, ಸಂಗೀತಾ ಮತ್ತು ತನಿಷಾ ಮೂವರೂ ನನಗೆ ಉಸಿರಾಡಲೂ ಅವಕಾಶ ಕೊಡದ ಹಾಗೆ ನೀರು ಎರೆಚಿದರು. ಅದು ಸ್ವಲ್ಪ ಕೋಪ ಇತ್ತು. ಮರುದಿನ ಆ ಟಾಸ್ಕ್ ಮತ್ತೆ ಬಂದಾಗ, ಅವರಿಗೂ ಆ ಪೇನ್ ಗೊತ್ತಾಗ್ಲಿ ಎಂದು ನಾನು ಅವರಿಗೆ ಎರೆಚಿದೆವು. ಅವರಿಗೆ ಹದಿನೈದು ನಿಮಿಷವೂ ಮಾಡಲು ಸಾಧ್ಯವಾಗಲಿಲ್ಲ. ನಾನು ಎರಡು ತಾಸು ಗೊತ್ತಿದ್ದೆ. ಸಂಗೀತಾ ಮತ್ತು ಕಾರ್ತಿಕ್‌ಗೆ ತೊಂದರೆಯಾಯ್ತು. ಅದರ ಬಗ್ಗೆ ನನಗೆ ವಿಷಾದವಿದೆ.

    ಕಳಪೆ-ಉತ್ತಮ

    ಉತ್ತಮ ಪಡೆದುಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ. ನಾನು ನನ್ನನ್ನು ಆ ವಾರದಲ್ಲಿ ಪ್ರೂವ್ ಮಾಡಿಕೊಂಡಿದ್ದೆ. ಚೆನ್ನಾಗಿ ಆಡಿದ್ದೆ. ಹಾಗೆಯೇ ಕಳಪೆಯನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಜೈಲಿನಲ್ಲಿದ್ದುಕೊಂಡೂ ಸುದೀಪ್‌ ಸರ್ ಊಟ ತಿಂದಿದ್ದು ನನಗೆ ತುಂಬ ಖುಷಿಯಾದ ವಿಷಯ. ನನಗೆ ಜೈಲಿನಲ್ಲಿದ್ದೇನೆ ಎಂದೇ ಅನಿಸಲಿಲ್ಲ.

    ಯಾರು ಜೆನ್ಯೂನ್-ಯಾರು ಫೇಕ್?:

    ಮನೆಯಲ್ಲಿ ನಮ್ರತಾ ಹೆಚ್ಚು ಜೆನ್ಯೂನ್ ಅನಿಸುತ್ತಾರೆ ನನಗೆ. ಹಾಗೆಯೇ ಸಂಗೀತಾ ಕೂಡ ಓಕೆ. ಆದ್ರೆ ನನಗೆ ಒಂಥರಾ ಪ್ಲಿಪ್ ಆಗ್ತಾರೆ ಅಲ್ಲಿ ಇಲ್ಲಿ ಅನಿಸುತ್ತದೆ. ಕಾರ್ತೀಕ್ ಕೂಡ ಓಕೆ.

    ತನಿಷಾ ಫೇಕ್ ಅನಿಸುತ್ತಾರೆ ನನಗೆ. ಟಾಸ್ಕ್‌ ಟೈಮ್‌ನಲ್ಲಿಯೇ ಒಂದು ಥರ ಇರ್ತಾರೆ. ಮನೆಯೊಳಗೇ ಒಂಥರ ಇರುತ್ತಾರೆ. ಟಾಸ್ಕ್‌ ಅನ್ನು ಮನೆಯಲ್ಲಿಯೇ ಬಿಟ್ಟುಬಿಡೋಣ ಅಂತಾರೆ. ಅದೇ ಬೇರೆಯವರು ಹಾಗೆ ಮಾಡಿದಾಗ ಅದನ್ನು ಒಂದೆರಡು ವಾರವಾದರೂ ಮರೆಯದೇ ಅದೇ ರೀಸನ್ ಹೇಳುತ್ತಿರುತ್ತಾರೆ.

     

    ಟಾಪ್‌ 5

    ನನಗೆ ಟಾಪ್‌ 5ನಲ್ಲಿ ಇರಬೇಕಾದ ಸ್ಪರ್ಧಿಗಳು ಅಂತಿರುವುದು, ಕಾರ್ತಿಕ್, ವಿನಯ್, ನಮ್ರತಾ, ಸಂಗೀತಾ ಇರಬೇಕು ಎಂದಿತ್ತು. ಆದರೆ ಈಗ ಆಡುತ್ತಿರುವ ರೀತಿ ನೋಡಿದರೆ ನನಗೆ ಅನುಮಾನ. ಮುಂದೆ ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ. ಕಾರ್ತಿಕ್ ವಿನ್ನರ್ ಆಗಬಹುದು ಅನಿಸುತ್ತದೆ. ವಿನಯ್ ಮತ್ತು ನಮ್ರತಾ ನನ್ನ ಫ್ರೆಂಡ್ ಆಗಿದ್ದರೂ, ಕಾರ್ತೀಕ್ ಏನೋ ಪಾಸಿಟಿವ್ ವೈಬ್ ಕೊಡ್ತಾರೆ. ಬಹುಶಃ ನೋಡುವವರಿಗೂಹಾಗೆಯೇ ಅನಿಸಬಹುದು. ಎಷ್ಟೇ ಚೆನ್ನಾಗಿ ಆಡಿದರೂ, ಅಗ್ರೆಸಿವ್ ಆಗಿ ಆಡಿದರೂ ಕುಟುಂಬಕ್ಕೆ ಹೋಲುತ್ತಾರೆ. ಆದರೆ ವಿನಯ್‌ ಅವರನ್ನು ಎಲ್ಲರೂ ಅಗ್ರೆಸಿವ್ ಆಗುತ್ತಾರೆ ಎನ್ನುತ್ತಾರೆ. ಆದರೆ ಅವರು ಹಾಗೆ ಇಲ್ಲ.

    ನಾವು ಮನೆಯೊಳಗೆ ಹೋಗುವಾಗ ನಮಗೊಂದು ವಿಶೇಷಾಧಿಕಾರ ಸಿಕ್ಕಿತ್ತು. ಯಾರನ್ನಾದರೂ ಸೇವ್ ಮಾಡಬಹುದು ಎಂದು. ಆಗ ನಾವು ಸಿರಿ ಮತ್ತು ತುಕಾಲಿ ಅವರನ್ನು ಸೇವ್ ಮಾಡಿದ್ವಿ. ನಾವು ಮಾಡಿರುವ ಮೊದಲ ತಪ್ಪು ಅದು. ಅವರನ್ನು ಸೇವ್ ಮಾಡಿರದಿದ್ದರೆ ಅವರು ಈ ಜಾಗದಲ್ಲಿರುತ್ತಿದ್ರು. ನಾವು ಮಾಡಿದ ಮೊದಲ ತಪ್ಪು ಅದು. ಅವಿನಾಶ್ ಒಳ್ಳೆಯ ಮನುಷ್ಯ. ಗೊಂದಲ ತುಂಬ ಇದೆ. ಸೋಲೋ ಆಗಿ ಆಟಕ್ಕೆ ಟ್ರೈ ಮಾಡ್ತಿಲ್ಲ. ಯಾವ ಗ್ರೂಪಿನಲ್ಲಿ ಸೇರಿಕೊಳ್ಳಲಿ ಎಂದು ಯೋಚಿಸುತ್ತಿದ್ದಾರೆ. ಏನೋ ಭಯ ಕಾಡುತ್ತಿರುವ ಹಾಗಿದೆ ಅವರಿಗೆ. ಇನ್ನೂ ಟೈಮ್ ಬೇಕು ಅನಿಸುತ್ತದೆ. ಆದರೆ ಅವರಿಗೆ ಅಷ್ಟು ಟೈಮ್ ಇಲ್ಲ. ಈಗ ಚೆನ್ನಾಗಿ ಆಡಿದ್ರೆ ಇರ್ತಾರೆ. ಇಲ್ಲಾಂದ್ರೆ ಅಲ್ಲಿರೋರೆಲ್ರೂ ಅವ್ರನ್ನು ತಿಂದ್ಕೊಂಡುಬಿಡ್ತಾರೆ.

    ಜಿಯೊ ಸಿನಿಮಾ ಫನ್ ಫ್ರೈಡೆ

    ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್ ಎರಡು ಇತ್ತು. ನನಗೆ ಈ ಸಲ ಆಡಿರುವ ಕಾಟನ್ ಟಾಸ್ಕ್ ತುಂಬ ಮಜವಾಗಿತ್ತು. ಟಾಪ್‌2ದಲ್ಲಿಯೂ ಇದ್ದೆ. ಅದಕ್ಕಿಂತ ಮೊದಲಿನ ಟಾಸ್ಕ್‌ನಲ್ಲಿ ನನಗೆ ಕಾಲು ತೊಂದರೆ ಇತ್ತು. ಹಾಗಾಗಿ ಸರಿಯಾಗಿ ಆಡಕ್ಕಾಗಿಲ್ಲ.

    ಮಿಸ್ ಮಾಡಿಕೊಳ್ಳುವುದೇನು?

    ಬಿಗ್‌ಬಾಸ್ ಮನೆಯಲ್ಲಿ ರಾತ್ರಿ ಎಲ್ಲರಿಗೂ ಅಡುಗೆ ಮಾಡಿಕೊಡ್ತಿದ್ದೆ. ತುಕಾಲಿ ಅವರ ಜೊತೆಗೆ ಅಡುಗೆ ವಿಷಯದಲ್ಲಿ ಜಗಳ ಆಡ್ತಿದ್ವಿ. ಅದು ಬಿಟ್ರೆ, ಪ್ರತಿದಿನ ಊಟ ಆದ್ಮೇಲೆ ನಾನು, ನಮ್ರತಾ, ವಿನಯ್, ಮೈಕಲ್ ಆಚೆ ಬಂದು ಒಂದು ತಾಸು ಗಾಳಿಯಲ್ಲಿ ಕೂತು ಮಾತಾಡ್ತಿದ್ವಿ. ಅದನ್ನು ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್ ಈ ಜರ್ನಿಯನ್ನು ನಾನು ಯಾವತ್ತೂ ಮರೆಯಲ್ಲ. ಮರೆಯಲು ಯತ್ನಿಸಿದರೂ ಮರೆಯಲಾಗುವುದಿಲ್ಲ. ಅಷ್ಟು ಅಮೂಲ್ಯವಾಗಿದೆ ಇದು.

  • ಬಿಗ್ ಬಾಸ್ ಮನೆಯಿಂದ ಹೊರ ಬಂದ ಪವಿ ಪೂವಪ್ಪ

    ಬಿಗ್ ಬಾಸ್ ಮನೆಯಿಂದ ಹೊರ ಬಂದ ಪವಿ ಪೂವಪ್ಪ

    ವಾರ ದೊಡ್ಮನೆಯ ಪಯಣ ಮುಗಿಸೋರು ಯಾರು ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅಚ್ಚರಿಯನ್ನುವಂತೆ ಪವಿ ಪೂವಪ್ಪ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಪವಿ (Pavi Poovappa) ಈ ವಾರ ಬಿಗ್ ಬಾಸ್ (Bigg Boss Kannada) ಪಯಣ ಮುಗಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದ ಪವಿ, ಇಷ್ಟು ಬೇಗ ಆಚೆ ಬರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ.

    ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ಇಬ್ಬರೂ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಆನೆಯನ್ನು ಪಳಗಿಸಲು ಅವಿನಾಶ್ ಬಂದಿದ್ದಾರೆ ಎಂದೇ ಹೇಳಲಾಗಿತ್ತು. ಪವಿ ಪೂವಪ್ಪ ಮನೆಯ ಮಹಿಳಾ ಸದಸ್ಯರಿಗೆ ಮತ್ತಷ್ಟು ಉತ್ತೇಜ ನೀಡಲಿದ್ದಾರೆ ಎನ್ನುವ ನಂಬಿಕೆ ಇತ್ತು. ಇವೆರಡೂ ಸುಳ್ಳಾಗಿವೆ. ಅವಿನಾಶ್ ತಾವು ಬಿಗ್ ಬಾಸ್ ಮನೆಗೆ ಯಾಕೆ ಬಂದಿದ್ದು ಎನ್ನುವುದನ್ನೇ ಮರೆತಿದ್ದಾರೆ. ಅತೀ ವೀಕ್ ಕಂಟೆಸ್ಟೆಂಟ್ ಆಗಿ ಬದಲಾಗಿದ್ದಾರೆ. ಪವಿ ಕಡಿಮೆ ಸಮಯದಲ್ಲೇ ಮನೆಯಿಂದ ನಿರ್ಗಮಿಸುತ್ತಿದ್ದಾರೆ.

    ಬಿಗ್ ಬಾಸ್ ಮನೆಯ ಇತರ ಮಹಿಳಾ ಸದಸ್ಯರಿಗೆ ಹೋಲಿಸಿದರೆ, ಪವಿ ವೀಕ್ ಕಂಟೆಸ್ಟೆಂಟ್ ಆಗಿದ್ದರು. ಈ ವಾರ ಚೆನ್ನಾಗಿ ಆಟ ಆಡಿದ್ದರೂ, ಹೇಳಿಕೊಳ್ಳುವಂತಹ ಗೆಲುವು ಅವರದ್ದಾಗಿರಲಿಲ್ಲ. ಸಿರಿ ಅವರಿಗಿಂತಲೂ ಪವಿ ಓಕೆ ಎಂದೇ ನಂಬಲಾಗಿತ್ತು. ಆದರೆ, ಸಿರಿಯನ್ನೂ ಸೋಲಿಸಲು ಅವರಿಂದ ಆಗಿಲ್ಲವೆಂದು ಹೇಳಲಾಗುತ್ತಿದೆ. ಜೊತೆಗೆ ಕಡಿಮೆ ವೋಟು ಬಂದ ಕಾರಣದಿಂದಾಗಿ ಪವಿ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

     

    ಬಿಗ್ ಬಾಸ್ ನೋಡುಗರ ಪ್ರಕಾರ ಈ ವಾರ ಸಿರಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎಂದೇ ನಂಬಲಾಗಿತ್ತು. ಈ ನಂಬಿಕೆ ಸುಳ್ಳಾದಂತೆ ಕಾಣುತ್ತಿದೆ. ಪವಿಗಿಂತೂ ಸಿರಿ ಅವರು ಚೆನ್ನಾಗಿ ಆಟವಾಡಿದ್ದಾರೆ ಮತ್ತು ಬಿಗ್ ಬಾಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಸಿರಿ ಮನೆಯಲ್ಲಿ ಉಳಿದುಕೊಂಡು ಪವಿ ಅವರು ಹೊರ ಬರುವಂತಾಗಿದೆ.  ಇದು ನಿಜವಾ ಅಥವಾ ಸುಳ್ಳಾ ಎನ್ನುವುದು ರಾತ್ರಿಯೇ ಗೊತ್ತಾಗಲಿದೆ.

  • ಕಳಪೆ ಕಾರಣದಿಂದ ಜೈಲು ಪಾಲಾದ ಪವಿ ಪೂವಪ್ಪ

    ಕಳಪೆ ಕಾರಣದಿಂದ ಜೈಲು ಪಾಲಾದ ಪವಿ ಪೂವಪ್ಪ

    ತ್ತೊಂದು ವೀಕೆಂಡ್ ಬಂದಿದೆ. ಅದಕ್ಕೂ ಮೊದಲು ಮತ್ತೊಬ್ಬ ಕಂಟೆಸ್ಟೆಂಟ್ ಜೈಲು ಪಾಲಾಗಿದ್ದಾರೆ. ಹೌದು, ಬಿಗ್ ಬಾಸ್ (Bigg Boss Kannada) ಮನೆಯ ಹಾಪ್ ಸೆಂಚುರಿ ಮುಗಿಯುತ್ತಿದ್ದಂತೆ ಪವಿ (Pavi Poovappa)- ಅವಿನಾಶ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಮನೆಗೆ ಬಂದು 20 ದಿನಕ್ಕೆ ಕಳಪೆ ಎಂದು ಜೈಲಿಗೆ (Jail) ಸೇರಿದ್ದಾರೆ ಪವಿ ಪೂವಪ್ಪ.

    ಕಳೆದ ವಾರ ಆಟ ಸಾಕಷ್ಟು ಟ್ವಿಸ್ಟ್ & ಟರ್ನ್ ಪಡೆದು ಮುನ್ನುಗ್ಗತ್ತಿತ್ತು. ಸಂಗೀತಾ- ಡ್ರೋನ್ ಮುಂದೆ ಮಾನವೀಯತೆ ಇಲ್ಲದೆ ಆಟವಾಡಿದ ವಿನಯ್ & ಟೀಮ್ ವಿರುದ್ಧ ಫ್ಯಾನ್ಸ್ ಗುಡುಗಿದ್ದರು. ಈ ಪರಿಣಾಮ ಸಂಗೀತಾ- ಪ್ರತಾಪ್ ಕಣ್ಣೀಗೆ ಪೆಟ್ಟು ಆಗುವ ಹಾಗೇ ಆಯ್ತು.

    ಬಳಿಕ ಈ ವಾರ ಬಿಗ್ ಬಾಸ್ ಮನೆನೇ ಸ್ಕೂಲ್ ಆಗಿ ಬದಲಾಗಿತ್ತು. ಸ್ಪರ್ಧಿಗಳೆಲ್ಲಾ ಮಕ್ಕಳಾಗಿ, ಪ್ರಾಧ್ಯಾಪಕರಾಗಿ ಬದಲಾದರು. ಈ ವೇಳೆ, ಪವಿ ಯೋಗ ಟೀಚರ್ ಆಗಿದ್ದರು. ಆದರೆ ಯೋಗ ಟೀಚರ್ ಆಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನಗೆಲ್ಲೋದ್ರಲ್ಲಿ ಯಡವಿದ್ದರು ಪವಿ.

    ಇದನ್ನೇ ಕಾರಣವಿಟ್ಟುಕೊಂಡು ಮನೆ ಮಂದಿಯೆಲ್ಲಾ ಪವಿಗೆ ಕಳಪೆ ಹಣೆಪಟ್ಟಿ ಕೊಟ್ಟು ಜೈಲಿಗೆ ಅಟ್ಟಿದ್ದಾರೆ. ಇನ್ನೂ ತುಕಾಲಿ ಸಂತೂ ಈ ವಾರ ಇಂಗ್ಲೀಷ್ ಟೀಚರ್ ಆಗಿ ಮತ್ತು ಶಿಕ್ಷಕರಾಗಿ ಎರಡರಲ್ಲೂ ಮನಗೆದ್ದಿದ್ದಾರೆ. ಅಷ್ಟರಮಟ್ಟಿಗೆ ತುಕಾಲಿ ಕಾಮಿಡಿ ಪಂಚ್ ಎಲ್ಲರಿಗೂ ಕಿಕ್ ಕೊಟ್ಟಿತ್ತು. ಈ ನಡೆ ನೋಡಿಯೇ ಮನೆಮಂದಿ ತುಕಾಲಿ ಉತ್ತಮ ಎಂದು ಹಣೆಪಟ್ಟಿ ಕೊಟ್ಟಿದ್ದಾರೆ.

    ಸ್ನೇಹಿತ್ ಎಲಿಮಿನೇಷನ್ ನಂತರ ಈ ವಾರ ಯಾರಿಗೆ ಆಟ ಕೊನೆಗೊಳ್ಳುತ್ತದೆ ಎಂಬುದನ್ನ ಕಾದುನೋಡಬೇಕಿದೆ. ಮೈಕಲ್, ಸಿರಿ, ವಿನಯ್, ಪವಿ, ಸಂಗೀತಾ, ಡ್ರೋನ್ ಇವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬುದು ಕೌತುಕ ಮೂಡಿಸಿದೆ.

  • Bigg Boss: ಪವಿ ಮಾಡಿದ ಯಡವಟ್ಟಿಗೆ ಸುದೀಪ್‌ ಖಡಕ್‌ ಕ್ಲಾಸ್

    Bigg Boss: ಪವಿ ಮಾಡಿದ ಯಡವಟ್ಟಿಗೆ ಸುದೀಪ್‌ ಖಡಕ್‌ ಕ್ಲಾಸ್

    ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ 50 ದಿನ ಕಳೆಯುತ್ತಿದ್ದಂತೆ ಅವಿನಾಶ್ ಶೆಟ್ಟಿ- ಪವಿ ಪೂವಪ್ಪ ಎಂಟ್ರಿಯಾಗಿದೆ. ಮೊದಲ ವಾರವೇ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದಾರೆ. ಬಳೆ ವಿಚಾರ ಮಾತೆತ್ತಿದ ಪವಿ ಪೂವಪ್ಪಗೆ(Pavi Poovappa)  ಸುದೀಪ್ ಕಡೆಯಿಂದ ಸ್ಪೆಷಲ್ ಕ್ಲಾಸ್ ಆಗಿದೆ. ಇದನ್ನೂ ಓದಿ:ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

    ಪವಿ ಪೂವಪ್ಪ- ಅವಿನಾಶ್ ಶೆಟ್ಟಿ (Avinash Shetty) ಅವರಿಗೆ ಹೊರಗಡೆಯ ಯಾವ ವಿಚಾರವನ್ನೂ ದೊಡ್ಮನೆಯಲ್ಲಿ ಚರ್ಚೆ ಮಾಡುವಂತಿಲ್ಲ ಎಂದು ಬಿಗ್ ಬಾಸ್ ಮೊದಲೇ ತಾಕೀತು ಮಾಡಿದ್ದರು. ಆದರೆ ಪವಿ ಅವರು ಬಾಯಿ ತಪ್ಪಿ ಟ್ರೋಲ್ ಪೇಜ್‌ಗಳಲ್ಲಿ ವಿನಯ್ ಗೌಡ ಬಳೆ ವಿಚಾರ ಚರ್ಚೆ ಆಗಿದ್ದನ್ನು ವಿನಯ್ ಮುಂದೆ ಹೇಳಿದ್ದರು. ರೂಲ್ಸ್ ಮರೆತು ಮನೆಯ ಹೊರಗಿನ ವಿಚಾರವನ್ನ ಪವಿ ರಿವೀಲ್ ಮಾಡಿದ್ದರು. ಈ ವಿಷಯ ತಿಳಿದ ಮೇಲೆ ವಿನಯ್, ನಾನು ಮಾಡಿದ ತಪ್ಪಿನಿಂದ ನನ್ನ ಹೆಂಡತಿ- ಮಗ ಅನುಭವಿಸುವ ಹಾಗಾಯ್ತು ಎಂದು ಬಾತ್‌ರೂಮ್‌ನಲ್ಲಿ ಕಣ್ಣೀರು ಹಾಕಿದರು. ಆನಂತರ ಏನೂ ಆಗಿಲ್ಲ ಎಂದು ಬಿಗ್ ಬಾಸ್ ವಿನಯ್‌ರನ್ನು (Vinay Gowda) ಸಂತೈಸಿದರು. ಹೊರಗೆ ಎಲ್ಲವೂ ಕ್ಷೇಮವಾಗಿದೆ ಎಂದು ಭರವಸೆ ನೀಡಿದ್ದರು.

    ಬಿಗ್ ಬಾಸ್ ಶೋ ಶುರುವಾಗಿ 50 ದಿನ ಆಗಿದೆ. ಎಲ್ಲರೂ ಬಳೆ ವಿಚಾರವನ್ನು ಮರೆತಿದ್ದಾರೆ. 50 ದಿನಗಳನ್ನು ಕಳೆದ ಸ್ಪರ್ಧಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ನನ್ನ ಸ್ಪರ್ಧಿಯ ಬಗ್ಗೆ ನೀವು ಹೇಗೆ ಮಾತನಾಡಿದ್ರಿ ಎಂದು ಕಿಚ್ಚ ಸುದೀಪ್ (Sudeep) ಅವರು ಪವಿಗೆ ಕ್ಲಾಸ್ ತಗೊಂಡಿದ್ದಾರೆ. ವಿನಯ್ ಗೌಡ ಹೆಂಡತಿ, ಮಗ ಹೇಗಿದ್ದಾರೆ? ಅವರು ಎಲ್ಲಿದ್ದಾರೆ? ಅವರ ಮನೆಗೆ ಹೋಗಿ ಬಂದಿದ್ದೀರಾ? ಏನೂ ನಿಮಗೆ ಗೊತ್ತಿಲ್ಲ. ಏನೂ ವಿಷಯ ಗೊತ್ತಿಲ್ಲದೆ ನೀವು ವಿನಯ್ ಬಳಿ ಹೋಗಿ ಟ್ರೋಲ್ ಪೇಜ್‌ಗಳಲ್ಲಿ ಬಳೆ ಬಗ್ಗೆ ಏನೋ ಬಂತು ಎಂದು ಹೇಳಿದ್ದೀರಿ. ಯಾವ ಎಪಿಸೋಡ್ ನೋಡದೆ ಒಂದು ವಿಷಯದ ಬಗ್ಗೆ ಹೇಗೆ ಕಾಮೆಂಟ್ ಪಾಸ್ ಮಾಡ್ತೀರಿ? ಒಂದು ಪಾಸಿಂಗ್ ಕಾಮೆಂಟ್‌ನಿಂದ ಒಬ್ಬ ವ್ಯಕ್ತಿಯ ಮನಸ್ಥಿತಿ ಬದಲಾಗತ್ತೆ. 100 ಕಿಮೀ ವೇಗದಲ್ಲಿ ಹೋಗುವ ಸ್ಪರ್ಧಿಗೆ ಅರ್ಧ ದಾರಿಗೆ ಎಂಡ್ ಬೋರ್ಡ್ ಹಾಕಿದರೆ ಏನಾಗುವುದು? ಎಂದು ಸುದೀಪ್ ಹೇಳಿದ್ದಾರೆ.

    ನನಗೋಸ್ಕರ ಟ್ರೋಲ್ ಪೇಜ್ ಆರಂಭ ಮಾಡಿಸಿ ನಾನು ಬೆಳಗ್ಗೆ ಗುಡ್ ಮಾರ್ನಿಂಗ್ ಅಂತ ಹೇಳಿದರೂ ಕೂಡ, ಸುದೀಪ್ ಗುಡ್ ಮಾರ್ನಿಂಗ್ ಅಂತ ಹೇಳ್ತಾನೆ ಅಂತ ಬೈತಾರೆ. ನನ್ನಿಂದ ಅವರು ಊಟ ಮಾಡುತ್ತಿದ್ದಾರೆ. ಅವರ ಟ್ರೋಲ್ ಪೇಜ್‌ಗಳನ್ನು ನೋಡಿ ನಾನು ಎಂಜಾಯ್ ಮಾಡ್ತೀನಿ. ನಾನು ಯಾವುದೋ ಕಿತ್ತೋದ ಕೆಲಸ ಮಾಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.

    ನೀವು ಕೊನೆಯದಾಗಿ ಇಲ್ಲಿಗೆ ಬಂದು ಟ್ರೋಫಿ ಪಡೆಯುವ ಬಗ್ಗೆ ಯೋಚನೆ ಮಾಡಿ, ಅದನ್ನು ಬಿಟ್ಟು ಬೇರೆ ಏನೂ ತಲೆಕೆಡಿಸಿಕೊಳ್ಳಬೇಡಿ. ನೀವು ಯಾವ ಘಟನೆ ನಡೆಯಿತು ಅಂತ ಅಂದುಕೊಂಡಿದ್ದೀರೋ ಅದೆಲ್ಲ ಮುಗಿದು ಜನರು ಮರೆತಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಕಳೆದ 10 ಸೀಸನ್‌ಗಳಲ್ಲಿ ಯಾವ ವೈಲ್ಡ್ ಕಾರ್ಡ್ ಎಂಟ್ರಿಗೂ ನಾನು ಈ ರೀತಿಯ ಸ್ವಾಗತ ನೀಡಿರಲಿಲ್ಲ ಎಂದು ಹೇಳಿದ್ದಾರೆ.

  • Bigg Boss: ವೈಲ್ಡ್ ಕಾರ್ಡ್‌ನಿಂದ ಬಂದರೆ ಗೆಲ್ಲಲ್ಲ ಅನ್ನೋದು ಸುಳ್ಳು- ಪವಿ

    Bigg Boss: ವೈಲ್ಡ್ ಕಾರ್ಡ್‌ನಿಂದ ಬಂದರೆ ಗೆಲ್ಲಲ್ಲ ಅನ್ನೋದು ಸುಳ್ಳು- ಪವಿ

    ಬಿಗ್ ಬಾಸ್ ಮನೆಗೆ (Bigg Boss Kannada 10) ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ಕೊಟ್ಟಿರೋ ಕೊಡಗಿನ ಕುವರಿ ಪವಿ ಪೂವಪ್ಪ (Pavi Poovappa) ಅವರು ಬಿಗ್ ಬಾಸ್‌ನಿಂದ ಬಂದಿರುವ ಅವಕಾಶದ ಬಗ್ಗೆ ಜಿಯೋ ಸಿನಿಮಾ ಸಂದರ್ಶನದಲ್ಲಿ ದೊಡ್ಮನೆಗೆ ಕಾಲಿಡುವ ಮುನ್ನ ಮಾತನಾಡಿದ್ದಾರೆ.

    ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪವಿ ಪೂವಪ್ಪ, ಬಿಗ್‌ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು, ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗುವುದಕ್ಕೂ ಕ್ಷಣಕಾಲ ಮೊದಲು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ನಾನು ಮಾಡೆಲ್ ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದೀನಿ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ತುಂಬ ಖುಷಿಯ ವಿಷಯ. ಎಕ್ಸೈಟ್‌ಮೆಂಟ್ ತುಂಬಾನೇ ಇದೆ. ಆದರೆ ಭಯ ಇಲ್ಲ. ಬಿಗ್‌ಬಾಸ್ ಮನೆಯೊಳಗೆ ಹೋದಮೇಲೇ ಗೊತ್ತಾಗತ್ತೆ ಏನು ಎತ್ತ ಅಂತ. ಮನೆಯಲ್ಲಿ ಅಮ್ಮ ಅಣ್ಣನಿಗೆ ಎಲ್ಲಾ ತುಂಬ ಖುಷಿಯಾಯ್ತು.

    ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ನನ್ನ ಕ್ಯಾರೆಕ್ಟರ್ ಬಿಹೇವಿಯರ್ ಎಲ್ಲವನ್ನು ಇಡೀ ಕರ್ನಾಟಕದ ಜನರು ನೋಡಬಹುದು ಇಲ್ಲಿ. ಜನರು ನನ್ನಿಂದ ಮನರಂಜನೆ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ. ನಾನು ಶಾರ್ಟ್ ಟೆಂಪರ್ಡ್. ಆದ್ರೆ ಸಂದರ್ಭದ ಮೇಲೆ ಹೋಗತ್ತದೆ.‌ ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ

    ವೈಲ್ಡ್ ಕಾರ್ಡ್ ಎಂಟ್ರಿ ಅಂತ ಹೋದಾಗ ಎಲ್ಲ ಸ್ಪರ್ಧಿಗಳು ಡಾಮಿನೆಂಟ್ ಮಾಡ್ತಾರೆ ಅಂತೆಲ್ಲ ಕೇಳಿದೀನಿ. ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೆ. ಅಲ್ಲಿ ಹೋದ ಮೇಲೆ ಯಾರು ಯಾವ ಥರ ಬಿಹೇವ್ ಮಾಡ್ತಾರೆ ಅನ್ನೋದ್ರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ. ನಾನು ಫಿಜಿಕಲಿ ಸ್ಟ್ರಾಂಗ್ ಇದ್ದೀನಿ. ಅದು ನನ್ನ ಸ್ಟ್ರೈಂಥ್ ಯಾರಾದ್ರೂ ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್ ಟೆಂಪರ್ ಆಗ್ತೀನಿ. ಅದು ನನ್ನ ವೀಕ್‌ನೆಸ್ ಆಗಿದೆ.

    ಸದ್ಯಕ್ಕೆ ನನ್ನ ಫೇವರೇಟ್ ಸ್ಪರ್ಧಿ ಕಾರ್ತಿಕ್. ಯಾರೂ ಇಷ್ಟ ಇಲ್ಲ ಅಂತ ಹೇಳಕ್ಕಾಗಲ್ಲ. ಆದರೆ ನನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುವುದು ತನಿಷಾ ಕುಪ್ಪಂಡ ಜೊತೆಗೆ. ಯಾಕಂದ್ರೆ ನನ್ನ ಕ್ಯಾರೆಕ್ಟರ್ ಅವರ ಕ್ಯಾರೆಕ್ಟರಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಅವರಿಂದ ದೂರ ಇರಬೇಕಾಗುತ್ತದೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್‌ಬಾಸ್ ಮನೆಗೆ ಹೋಗ್ತಿದೀನಿ. ಆದಷ್ಟೂ ಗೆಲ್ಲಲು ಪ್ರಯತ್ನಪಡ್ತೀನಿ. ವೈಲ್ಡ್‌ ಕಾರ್ಡ್‌ನಲ್ಲಿ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದ್ದೀನಿ ಎಂದು ಪವಿ ಮಾತನಾಡಿದ್ದಾರೆ.