Tag: ಪವಿತ್ರಾಗೌಡ

  • ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

    ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A1 ಆರೋಪಿಯಾಗಿರುವ ಪವಿತ್ರಾ ಗೌಡ (Pavithra Gowda) ಅವರ ಮನೆಯಲ್ಲಿಂದು ಪೊಲೀಸರು (Bengaluru Police) ಸ್ಥಳ ಮಹಜರು ನಡೆಸಿದರು.

    ವಿಧಿವಿಜ್ಞಾನ ಪ್ರಯೋಗಾಲಯ (FSL) ಅಧಿಕಾರಿಗಳ ತಂಡದೊಂದಿಗೆ ತೆರಳಿದ್ದ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಆರ್.ಆರ್ ನಗರದಲ್ಲಿರುವ ಪವಿತ್ರಾಗೌಡ ಅವರ ನಿವಾಸಕ್ಕೆ ಪವನ್ ಮತ್ತು ಪವಿತ್ರಾ ಇಬ್ಬರನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ಮನೆಯ ಮೂಲೆ ಮೂಲೆಯನ್ನೂ ಜಾಲಾಡಿ ಸಾಕ್ಷ್ಯಗಳನ್ನೂ ಸಂಗ್ರಹಿಸಿದರು. ಇದನ್ನೂ ಓದಿ:  ದರ್ಶನ್‍ಗೆ ಮತ್ತಷ್ಟು ಸಂಕಷ್ಟ- ಸ್ವಾಮಿ ಹತ್ಯೆ ದಿನ ಧರಿಸಿದ್ದ ಬಟ್ಟೆ, ಶೂ ಸೀಜ್

    ರೇಣುಕಾಸ್ವಾಮಿ ಕೊಲೆಯಾದ ದಿನ ಪವಿತ್ರಾಗೌಡ ಪಟ್ಟಣಗೆರೆ ಶೆಡ್‌ನಿಂದ ನೇರವಾಗಿ ತಮ್ಮ ನಿವಾಸಕ್ಕೆ ಬಂದಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ಶೆಡ್‌ಗೆ ಹೋದಾಗ ಅವರು ಯಾವ ಬಟ್ಟೆ ಧರಿಸಿದ್ದರು, ಚಪ್ಪಲಿ ಹಾಕಿದ್ದರು? ಎಂಬೆಲ್ಲಾ ಸಾಕ್ಷ್ಯಗಳ ಪರಿಶೀಲನೆ ನಡೆಸಲಾಯಿತು. ಜೊತೆಗೆ ಪವಿತ್ರಾಗೌಡ ನಿವಾಸದಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನ ಸಂಗ್ರಹಿಸಿದ ಪೊಲೀಸರು, ಪವಿತ್ರಾ ಓಡಾಡುತ್ತಿದ್ದ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳನ್ನೂ ತಪಾಸಣೆ ನಡೆಸಿದರು.

    ಮೂರು ಹಂತದ ಡುಪ್ಲೆಕ್ಸ್ ಮನೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಲಾಯಿತು. ಪೊಲೀಸರು ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ ಮನೆಯ ಇಂಚಿಂಚನ್ನೂ ತೀವ್ರವಾಗಿ ತಪಾಸಣೆ ನಡೆಸಿದರು. ಈ ವೇಳೆ ಮನೆಯ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಸೋಲಿನಿಂದಾಗಿ ಜನರ ಮೇಲೆ ಸರ್ಕಾರ ಸೇಡು; ಇಂಧನ ದರ ಇಳಿಸುವವರೆಗೂ ಬಿಜೆಪಿ ಹೋರಾಟ- ಆರ್.ಅಶೋಕ್

  • ಎಸ್‌ಪಿಪಿ ವಾದದಲ್ಲಿ ಸ್ಪಷ್ಟತೆಯಿರಲಿಲ್ಲ, ಎಲ್ಲ ಆರೋಪ ದರ್ಶನ್‌ ಮೇಲೆ ಹೊರಿಸಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

    ಎಸ್‌ಪಿಪಿ ವಾದದಲ್ಲಿ ಸ್ಪಷ್ಟತೆಯಿರಲಿಲ್ಲ, ಎಲ್ಲ ಆರೋಪ ದರ್ಶನ್‌ ಮೇಲೆ ಹೊರಿಸಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

    ಬೆಂಗಳೂರು: ಸರ್ಕಾರದ ವಿಶೇಷ ಅಭಿಯೋಜಕರ (SPP) ರಿಮ್ಯಾಂಡ್‌ ಅರ್ಜಿಯಲ್ಲಿ ಸ್ಪಷ್ಟತೆಯಿರಲಿಲ್ಲ. ಅಲ್ಲದೇ ಅಭಿಯೋಜಕರು ಮಂಡಿಸಿದ ವಾದದಲ್ಲಿ ಯಾವುದೂ ಎ2 ಆರೋಪಿಗೆ ಸಂಬಂಧಿಸಿದ್ದಲ್ಲ. ಹಾಗಾಗಿ ಎಲ್ಲ ಆರೋಪಗಳನ್ನು ದರ್ಶನ್‌ (Darshan) ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ದರ್ಶನ್‌ ಪರ ವಕೀಲ ಅನಿಲ್‌ ಬಾಬು ತಿಳಿಸಿದರು.

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಎ2 ಆರೋಪಿ ದರ್ಶನ್‌ (Accused Darshan) ಪರ ವಕೀಲರು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದರು. ಸರ್ಕಾರದ ವಿಶೇಷ ಅಭಿಯೋಜಕರ ರಿಮ್ಯಾಂಡ್‌ ಅರ್ಜಿಯಲ್ಲಿ ಸ್ಪಷ್ಟತೆಯಿರಲಿಲ್ಲ. ಅಲ್ಲದೇ ಅಭಿಯೋಜಕರು ಮಂಡಿಸಿದ ವಾದದಲ್ಲಿ ಯಾವುದೂ ಎ2 ಆರೋಪಿಗೆ ಸಂಬಂಧಿಸಿದ್ದಲ್ಲ. ಆದ ಕಾರಣ ಎಲ್ಲ ಆರೋಪಗಳನ್ನು ದರ್ಶನ್‌ ಅವರ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತಲಕಾವೇರಿ, ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಸದ ಯದುವೀರ್

    ಆರೋಪಿಗಳ ಮೊಬೈಲ್‌ ಡೇಟಾಗಳನ್ನ ರಿಟ್ರೀವ್‌ (Mobile Data Retrieve) ಮಾಡಬೇಕು. ಮೃತದೇಹ ಪತ್ತೆಯಾದ ಸ್ಥಳದಲ್ಲಿದ್ದ ಆರೋಪಿಗಳ ಬಟ್ಟೆ, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು. ಜೊತೆಗೆ ರೇಣುಕಾಸ್ವಾಮಿ ಹತ್ಯೆಗೆ ಎಲೆಕ್ಟ್ರಿಕ್‌ ಶಾಕಿಂಗ್‌ ಮಿಷಿನ್‌ ಬಳಸಿದ್ದಾರೆ. ಅದನ್ನು ವಶಪಡಿಸಿಕೊಳ್ಳಬೇಕು. ಜೊತೆಗೆ ಆರೋಪಿಗಳ ವಾಟ್ಸಪ್‌ ಚಾಟ್‌ ಡಿಟೇಲ್ಸ್‌ ರಿಟ್ರೀವ್‌ ಮಾಡಬೇಕು. ಅದಕ್ಕಾಗಿ ಆರೋಪಿಗಳು ಪಾಸ್‌ವರ್ಡ್‌ ನೀಡಬೇಕು ಎಂಬುದು ಅಭಿಯೋಜಕರ ಮುಖ್ಯವಾದವಾಗಿತ್ತು. ಅದಕ್ಕಾಗಿ 9 ದಿನಗಳ ಕಾಲ ವಿಚಾರಣೆಗೆ ಅವಕಾಶ ಮಾಡಿಕೊಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ನಟ ದರ್ಶನ್‌, ಪವಿತ್ರಾ ಗೌಡ ಸೇರಿ 12 ಆರೋಪಿಗಳು ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ

    ಅಲ್ಲದೇ ವಿಶೇಷ ಅಭಿಯೋಜಕರ ರಿಮ್ಯಾಂಡ್‌ ಅರ್ಜಿಯಲ್ಲಿ ಸ್ಪಷ್ಟತೆ ಇರಲಿಲ್ಲ. ಯಾವ ಆರೋಪಿಗಳಿಂದ ಏನು ವಸ್ತು? ವಾಟ್ಸಪ್‌ ಚಾಟ್‌? ಬಟ್ಟೆ ವಶಪಡಿಸಿಕೊಳ್ಳಬೇಕು? ಎಲೆಕ್ಟ್ರಿಕ್‌ ಮಿಷನ್‌ ಯಾರಿಂದ ವಶಕ್ಕೆ ಪಡೆಯಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದ್ದರಿಂದ ಅಭಿಯೋಜಕರ ವಾದಕ್ಕೆ ನಮ್ಮ ತಕರಾರು ಇತ್ತು. ಯಾವುದೇ ಆರೋಪಿಗಳಿಂದ ಬಲವಂತವಾಗಿ ಮೊಬೈಲ್‌ ಪಾಸ್‌ವರ್ಡ್‌ಗಳನ್ನು ಪಡೆದು ಡೇಟಾ ರಿಟ್ರೀವ್‌ ಮಾಡೋದಕ್ಕೆ ಅವಕಾಶ ಇಲ್ಲ. ಅದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೋರ್ಟ್‌ ನೀಡಿದ್ದ ಆದೇಶಗಳನ್ನು ಉಲ್ಲೇಖಿಸಿ ತಕರಾರು ಮಂಡಿಸಿದೆವು. ನಮ್ಮ ವಾದವನ್ನು ನ್ಯಾಯಾಲಯ ಮಾನ್ಯಮಾಡಿತು. ಹಾಗಾಗಿ 9 ದಿನಗಳ ಬದಲಿಗೆ 5 ದಿನ ಮಾತ್ರ ವಿಚಾರಣೆಗೆ ಅವಕಾಶ ಮಾಡಿಕೊಟ್ಟಿತು ಎಂದು ತಿಳಿಸಿದರು.

    ಇನ್ನೂ ಎ6 ಆರೋಪಿ ಜಗ್ಗ, ಎ7 ಆರೋಪಿ ಅನುಕುಮಾರ್‌ ಪರ ವಕೀಲ ಹೆಚ್‌.ಬಿ ಶಿವರಾಜು ಮಾತನಾಡಿ, ಆರೋಪಿಯ ತಂದೆ ಅಂತ್ಯಕ್ರಿಯೆಗೆ ಕೋರ್ಟ್‌ ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನೂ ಇಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ಕಸ್ಟಡಿಯಲ್ಲಿರುವಾಗ ಅವರ ಭೇಟಿಗೆ ಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಮತ ಹಾಕಿದ್ದಕ್ಕೆ‌ ಕಾಂಗ್ರೆಸ್‌ ಸರ್ಕಾರ ಸೇಡು ತೀರಿಸಿಕೊಳ್ತಿದೆ – ಅಶೋಕ್‌

  • ಕಾನೂನಿಗಿಂತ ಯಾರೂ ದೊಡ್ಡವರಲ್ಲ – ದರ್ಶನ್‌, ಪವಿತ್ರಾಗೌಡಗೆ ನಟಿ ರಮ್ಯಾ ಕ್ಲಾಸ್‌!

    ಕಾನೂನಿಗಿಂತ ಯಾರೂ ದೊಡ್ಡವರಲ್ಲ – ದರ್ಶನ್‌, ಪವಿತ್ರಾಗೌಡಗೆ ನಟಿ ರಮ್ಯಾ ಕ್ಲಾಸ್‌!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾಗೌಡ ಹಾಗೂ ಎ2 ಆರೋಪಿ ನಟ ದರ್ಶನ್‌ಗೆ ನಟಿ ರಮ್ಯಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ದರ್ಶನ್‌ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಾಜಿ ಸಂಸದರೂ ಆಗಿರುವ ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದು, ಆರೋಪಿಗಳಾದ ಪವಿತ್ರಾಗೌಡ ಹಾಗೂ ನಟ ದರ್ಶನ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ರಮ್ಯಾ ಇನ್‌ಸ್ಟಾಗ್ರಾಮ್‌ ನಲ್ಲಿ ಏನಿದೆ?
    ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಉದ್ದೇಶದಿಂದಾಗಿಯೇ ಬ್ಲಾಕ್‌ ಎಂಬ ಆಯ್ಕೆಯನ್ನು ನೀಡಲಾಗಿದೆ. ಅತಿರೇಕದ ಟ್ರೋಲ್‌ ಮಾಡಿದಾಗ ನೀವು ದೂರು ನೀಡಬಹುದು. ಅತಿ ಕೆಟ್ಟ ಭಾಷೆಯನ್ನು ಬಳಸಿ ನನ್ನ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಬೇರೆ ನಟರ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಟ್ರೋಲ್‌ ಮಾಡುವವರು ಬೇರೆಯವರ ಹೆಂಡತಿಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಇಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ನಾನೇ ಒಂದಷ್ಟು ಟ್ರೋಲಿಗರ ವಿರುದ್ಧ ಕೇಸ್‌ ದಾಖಲಿಸಿದ್ದೇನೆ. ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಇವರು ಸಾಮಾಜಿಕ ಜಾಲತಾಣದಲ್ಲಿ ಹೀಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ಅವರ ಭವಿಷ್ಯದ ಮೇಲೆಯೇ ಏಕೆ ಕಲ್ಲು ಹಾಕಿಕೊಳ್ತಿದ್ದಾರೆ ಎಂಬುದಾಗಿ ಅನಿಸಿದ್ದು ಇದೆ ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

    “ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಾಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ಯಾರನ್ನೋ ಕೊಲ್ಲಬಾರದು. ನೀವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇ ಆದರೆ, ಒಂದು ದೂರು ದಾಖಲಿಸಿ ಅಷ್ಟೆ. ಹಾಗೆಯೇ, ಥ್ಯಾಂಕ್‌ಲೆಸ್‌ ಜಾಬ್‌ ಮಾಡುತ್ತಿರುವ ಪೊಲೀಸರ ಅವಿರತ ಶ್ರಮವನ್ನೂ ನಾವು ಸ್ಮರಿಸಬೇಕಿದೆ ಹಾಗೆಯೇ, ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ರಮ್ಯಾ ಪೋಸ್ಟ್‌ ಮಾಡಿದ್ದಾರೆ.

    ಹಾಗೆಯೇ, ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ, ದರ್ಶನ್‌, ಯಡಿಯೂರಪ್ಪ ಹಾಗೂ ಪ್ರಜ್ವಲ್‌ ರೇವಣ್ಣ ಎಂಬ ಹ್ಯಾಶ್‌ಟ್ಯಾಗ್‌ಅನ್ನೂ ಬಳಸಿದ್ದಾರೆ.

  • ಪೊಲೀಸ್‌ ಠಾಣೆಯಲ್ಲಿ ದರ್ಶನ್‌ ಫ್ಯಾನ್ಸ್‌ ದಂಡು; ಪೊಲೀಸರಿಂದ ಲಾಠಿ ಚಾರ್ಜ್‌

    ಪೊಲೀಸ್‌ ಠಾಣೆಯಲ್ಲಿ ದರ್ಶನ್‌ ಫ್ಯಾನ್ಸ್‌ ದಂಡು; ಪೊಲೀಸರಿಂದ ಲಾಠಿ ಚಾರ್ಜ್‌

    ಬೆಂಗಳೂರು: ಕೊಲೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ನನ್ನು (Darshan) ನೋಡಲು ಪೊಲೀಸ್‌ ಠಾಣೆ ಮುಂದೆ ಜಮಾಯಿಸಿರುವ ಅಭಿಮಾನಿಗಳನ್ನು ಓಡಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಿಸಿ ಕೊಲೆ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಅವರನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. ನೆಚ್ಚಿನ ನಟನನ್ನು ನೋಡಲು ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಇದನ್ನೂ ಓದಿ: ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

    ಪ್ರಕರಣ ಸಂಬಂಧ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ನೆರೆದಿರುವುದರಿಂದ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

    ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿದರು. ಎಲ್ಲರನ್ನೂ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿತು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ನಂದೀಶ್ ಕುಟುಂಬಸ್ಥರ ಕಣ್ಣೀರು

    ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಇರಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

  • ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು: ಕೊಲೆಯಾದ ರೇಣುಕಾಸ್ವಾಮಿ ತಾಯಿ ಹಿಡಿಶಾಪ

    ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು: ಕೊಲೆಯಾದ ರೇಣುಕಾಸ್ವಾಮಿ ತಾಯಿ ಹಿಡಿಶಾಪ

    ಚಿತ್ರದುರ್ಗ: ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ (Darshan) ಸಾಯಬೇಕು. ಪವಿತ್ರಾಗೌಡಳನ್ನು (Pavithra Gowda) ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕೊಲೆಯಾದ ರೇಣುಕಾಸ್ವಾಮಿ (Renukaswamy) ತಾಯಿ ರತ್ನಮ್ಮ ಹಿಡಿಶಾಪ ಹಾಕಿದ್ದಾರೆ.

    ರೇಣುಕಾಸ್ವಾಮಿ ಅಂತ್ಯಕ್ರಿಯೆ ಬಳಿಕ ರುದ್ರಭೂಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ದಿನದೊಳಗೆ ದರ್ಶನ್ ಸಾಯಲಿ. ನಮ್ಮ ವಂಶ ನಿರ್ವಂಶ ಮಾಡಿದ ದರ್ಶನ್‌ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ: ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಹೇಳಿಕೆ

    ಗಂಡ ಬರುತ್ತಾನೆ ಎಂದು ನನ್ನ ಸೊಸೆ ಕಾದು ಕುಳಿತಿದ್ದಳು. ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪವಿತ್ರಾಗೌಡ ವಿರುದ್ಧ ರೇಣುಕಾಸ್ವಾಮಿ ಹೆತ್ತಮ್ಮ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ