Tag: ಪವಿತ್ರಾಗೌಡ

  • ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಅಂತಾ ಆರೋಪಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ರು. ಕಳೆದ ಎರಡೂವರೆ ತಿಂಗಳಿನಿಂದ ವಾದ ಪ್ರತಿವಾದ ಅಲಿಸಿದ್ದ ಕೋರ್ಟ್, ದರ್ಶನ್ ಗೆ ಜೈಲಿನ ಮ್ಯಾನ್ಯುಯಲ್ (Jail Manual) ಪ್ರಕಾರ ಕನಿಷ್ಠ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಇಂದು ಈ ಸಂಬಂಧ ಅದೇಶ ನೀಡಿದ್ದು, ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ನೀಡಿಕೆಗೆ ಸೂಚನೆ ನೀಡಿದೆ.

    ತಿಂಗಳಿಗೆ ಒಂದು ಸಾರಿ ಹೊಸ ಕಂಬಳಿ ನೀಡುವಂತೆ ಸೂಚಿಸಿ ಇದೇ 31 ರಂದು ಚಾರ್ಜಸ್‌ಫ್ರೇಮ್‌ ಮಾಡೋದಾಗಿ ಸೂಚಿಸಿದೆ. ಇದೇ ವೇಳೆ ಮಾತಾಡಿದ ದರ್ಶನ್ ಪರ ವಕೀಲ ಸುನೀಲ್, ಇದು ಬರೇ ಹಾಸಿಗೆ ತಲೆ ದಿಂಬು ವಿಚಾರ ಅಲ್ಲ. ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಬೇಕು ಅಂತಾ ಕೋರ್ಟ್ ಅದೇಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಅದೇಶ ಉಲ್ಲಂಘನೆ ಮಾಡಿದ್ರು. ಹಾಗಾಗಿ ಕೋರ್ಟ್ ಇವತ್ತು ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ ಅಂತ ತಿಳಿಸಿದ್ರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಜೈಲು ಮ್ಯಾನ್ಯುಯಲ್ ಫಾಲೋ ಮಾಡಿ, ಕನಿಷ್ಠ ಸೌಲಭ್ಯ ನೀಡಿ ಅಂತಾ ಆದೇಶ ನೀಡಿದೆ. ದರ್ಶನ್‌ಗೆ ಹಳೇ ಚಾದರ್ ನೀಡಲಾಗಿದೆ. ತಿಂಗಳಿಗೆ ಒಮ್ಮೆ ಅದನ್ನು ಬದಲಾವಣೆ ಮಾಡಿ ಅಂತಾ ಹೇಳಿದೆ ಎಂದರು.

    ಇನ್ನೂ ಸರ್ಕಾರಿ ಪರ ವಕೀಲರು, ಟ್ರಯಲ್ ತಡ ಮಾಡ್ತಿದ್ದಾರೆ ಅಂತಾ ಆರೋಪ ಮಾಡಿದ್ರು. ಇದು ಸತ್ಯಕ್ಕೆ ದೂರವಾದ ವಿಚಾರ, ಸುಪ್ರೀಂ ಕೋರ್ಟ್ ಅದಷ್ಟು ಬೇಗ ಟ್ರಯಲ್ ಶುರು ಮಾಡಿ ಅಂತಾ ಹೇಳಿದೆ. ಹೊರತುಪಡಿಸಿ, ಇಷ್ಟೇ ದಿನದಲ್ಲಿ ಟ್ರಯಲ್ ಮಾಡಿ ಅಂತಾ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

  • ತನ್ನ ಸ್ವಾರ್ಥಕ್ಕಾಗಿ ನಮ್ಮನ್ನಿಲ್ಲಿ ಕೊಳೆಯುವಂತೆ ಮಾಡಿದ್ದಾನೆ – ದರ್ಶನ್‌ ವಿರುದ್ಧವೇ ಗ್ಯಾಂಗ್‌ ಸದಸ್ಯರ ಅಸಮಾಧಾನ?

    ತನ್ನ ಸ್ವಾರ್ಥಕ್ಕಾಗಿ ನಮ್ಮನ್ನಿಲ್ಲಿ ಕೊಳೆಯುವಂತೆ ಮಾಡಿದ್ದಾನೆ – ದರ್ಶನ್‌ ವಿರುದ್ಧವೇ ಗ್ಯಾಂಗ್‌ ಸದಸ್ಯರ ಅಸಮಾಧಾನ?

    – ಬೇರೆ ಜೈಲಿಗೆ ಶಿಫ್ಟ್‌ ಆಗೋದಕ್ಕೂ ದರ್ಶನ್‌ ಅಡ್ಡಿ ಅಂತ ಬೇಸರ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ (Renukaswamy Murder Case) ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅಂಡ್ ಗ್ಯಾಂಗ್ (Darshan And Gang) ನಡುವೆ ಒಡಕು ಮೂಡಿದೆ. ಸ್ವತಃ ಗ್ಯಾಂಗ್‌ನ ಸದಸ್ಯರೇ ದರ್ಶನ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಅನ್ನೋದು ಮೂಲಗಳಿಂದ ತಿಳಿದುಬಂದಿದೆ.

    ಹೌದು. ದರ್ಶನ್, ಪ್ರದೋಷ್, ಲಕ್ಷ್ಮಣ್, ಅನ್ಬುಕುಮಾರ್, ಜಗದೀಶ್, ನಾಗರಾಜ್, ಪವಿತ್ರಾಗೌಡ (Pavithra Gowda) ಅವರ ಜಾಮೀನನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬಳಿಕ ಎಲ್ಲರನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ದರ್ಶನ್ ಅಂಡ್ ಗ್ಯಾಂಗ್ ನನ್ನ ಪರಪ್ಪನ ಅಗ್ರಹಾರದ ಜೈಲಿನ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    ಮೊದಲ ಬಾರಿ ಜೈಲಿಗೆ ಹೋಗಿದ್ದಾಗ ದರ್ಶನ್‌ಗೆ ಬಳ್ಳಾರಿ ಜೈಲು ಸೇರಿದಂತೆ ಉಳಿದ ಆರೋಪಿಗಳಿಗೆ ಬೇರೆ ಬೇರೆ ಜೈಲಿನಲ್ಲಿ ಇರಿಸಲಾಗಿತ್ತು. ಆದೇ ರೀತಿ ಆಡಳಿತ ಹಾಗೂ ಭದ್ರತೆ ದೃಷ್ಠಿಯಿಂದ ಕಳೆದ ಬಾರಿ ಇದ್ದ ಜೈಲುಗಳಿಗೆ ದರ್ಶನ್ ಸೇರಿದಂತೆ ಗ್ಯಾಂಗ್ ಸದಸ್ಯರುಗಳಿಗೆ ಆಯಾ ಜೈಲಿಗೆ ಶಿಫ್ಟ್ ಮಾಡಬೇಕೆಂದು ಸರ್ಕಾರಿ ಪರ ವಕೀಲರು ಅರ್ಜಿ ಹಾಕಿಕೊಂಡಿದ್ದರು. ಟ್ರಯಲ್ ದಿನಾಂಕ ನಿಗದಿಯಾಗುವುದರಿಂದ ಪ್ರತಿಭಾರಿ ದರ್ಶನ್ ಅಂಡ್ ಗ್ಯಾಂಗ್ ಕರೆದುಕೊಂಡು ಬರಲು ಕಷ್ಟವಾಗುತ್ತೆ ಹಾಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ವಾದ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾದೀಶರು ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ ಹೋದ ದಿನದಿಂದ ದುರ್ವರ್ತನೆ ತೋರದ ಕಾರಣ ಬೇರೆ ಜೈಲಿಗೆ ಶಿಫ್ಟ್ ಮಾಡಲು ಆಗಲ್ಲ ಎಂದು ಕೋರ್ಟ್ ದರ್ಶನ್ ಅಂಡ್ ಗ್ಯಾಂಗ್ ಅನ್ನ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲು ಕೋರ್ಟ್ ನಿರಾಕರಿಸಿತ್ತು. ಇದನ್ನೂ ಓದಿ: ರಾಯಚೂರಿನಲ್ಲಿ ಸರ್ಕಾರಿ ಬಸ್ ಪಲ್ಟಿ – ಪ್ರಯಾಣಿಕನ ಕಾಲು ಮುರಿತ, 15 ಮಂದಿಗೆ ಗಾಯ

    ಇದು ದರ್ಶನ್ ಅಂಡ್ ಗ್ಯಾಂಗ್ ನಡುವೆ ಒಡಕು ಮೂಡಲು ಕಾರಣವಾಗಿದೆ ಎಂದು ಹೇಳಲಾಗ್ತಿದೆ. ಬೇರೆ ಜೈಲಿಗೆ ಶಿಫ್ಟ್ ಆಗುವ ವಿಚಾರದಲ್ಲಿ ದರ್ಶನ್ ಅಡ್ಡಿ ಆಗ್ತಿದ್ದಾರೆಂದು ಗ್ಯಾಂಗ್‌ನ ಸದಸ್ಯರು ಮನಸ್ತಾಪ ಮಾಡಿಕೊಂಡಿದ್ದಾರಂತೆ. ದರ್ಶನ್ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನ ಇಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಚಿತ್ರದುರ್ಗದ ಆರೋಪಿಗಳಾದ ಅನ್ಬುಕುಮಾರ್ ಹಾಗೂ ಜಗದೀಶ್ ಅಸಮಾಧಾನ ಹೊರ ಹಾಕುತ್ತಿದ್ದಾರಂತೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದರೇ ನಮ್ಮ ಪೋಷಕರಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುತ್ತಿತ್ತು. ಇವರ ಅನುಕೂಲಕ್ಕೆ ಬೇರೆ ಜೈಲಿಗೆ ಹೋಗದಂತೆ ಮಾಡಿಕೊಂಡರು ಎಂದು ಆರೋಪಿಗಳಾದ ಜಗದೀಶ್, ಅನ್ಬುಕುಮಾರ್ ದರ್ಶನ್ ಗ್ಯಾಂಗ್ ಉಳಿದ ಸದಸ್ಯರ ಬಳಿ ಅಸಮದಾನ ಹೊರಹಾಕುತ್ತಿದ್ದಾರಂತೆ. ಇದನ್ನೂ ಓದಿ: ಪಿಜಿಯಲ್ಲಿ ಯುವತಿ ಅನುಮಾನಾಸ್ಪದ ಸಾವು – ನೇತಾಡುತ್ತಿದ್ದ ಶವ ಕಂಡು ಹೊರಗೆ ಓಡಿದ ವಿದ್ಯಾರ್ಥಿನಿಯರು

  • ನಟ ದರ್ಶನ್ & ಗ್ಯಾಂಗ್‌ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್‌

    ನಟ ದರ್ಶನ್ & ಗ್ಯಾಂಗ್‌ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್‌

    ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ (Pavithra Gowda) ಸೇರಿದಂತೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) 17 ಆರೋಪಿಗಳು ಇಂದು ಸಿಸಿಎಚ್ 64ರ ನ್ಯಾಯಾದೀಶರ (CCH 64 Court) ಮುಂದೆ ಹಾಜರಾಗಲಿದ್ದಾರೆ.

    ಎಲ್ಲಾ ಆರೋಪಿಗಳ ಹಾಜರಾತಿ ಬಳಿಕ ಚಾರ್ಜಸ್ ಫ್ರೇಮ್ ಪ್ರಕ್ರಿಯೆ ಶುರುವಾಗಲಿದೆ. ಎ೧ ಆರೋಪಿ ಪವಿತ್ರಾಗೌಡ (Pavithra Gowda) ಅಂತಾ ಕೂಗಿದಾಗ ಕಟಕಟೆಗೆ ಬರಬೇಕಿದೆ, ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 ಕೊಲೆಯತ್ನ, 364 ಕಿಡ್ನ್ಯಾಪ್, 202 ಸಾಕ್ಷಿನಾಶ ಕೇಸ್ ದಾಖಲಾಗಿದೆ. ಇದನ್ನ ನೀವು ಒಪ್ಕೊತೀರಾ ಅಥವಾ ಅಲ್ಲಗೆಳೆಯುತ್ತೀರಾ ಅಂತಾ ನ್ಯಾಯಾದೀಶರು ಕೇಳಲಿದ್ದಾರೆ.‌ ಇದನ್ನೂ ಓದಿ: ದೆಹಲಿಯಲ್ಲಿ ಅಕ್ರಮ ವಾಸ – 25 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಇಲ್ಲ ಸ್ವಾಮಿ ಇದೆಲ್ಲಾ ಸುಳ್ಳು ವಿಚಾರಣೆ ನಡೆಯಲಿ ಅಂತಾ ಆರೋಪಿಗಳು ಹೇಳಿಕೆ ನೀಡುವ ಸಾಧ್ಯತೆ ಇದೆ. ಇದೇ ರೀತಿ ಎಲ್ಲಾ 17 ಆರೋಪಿಗಳನ್ನ ಕರೆದು ಅವರ ಮೇಲೆ ದಾಖಲಾಗಿರೊ ಸೆಕ್ಷನ್ ಬಗ್ಗೆ ನ್ಯಾಯಾಧೀಶರು ವಿವರಣೆ ಕೇಳಲಿದ್ದಾರೆ. ಈ ಪ್ರಕ್ರಿಯೆ ಮುಗಿದ ಮೇಲೆ ದೊಷಾರೋಪ ನಿಗದಿ ಬಳಿಕ ಮುಂದೊಂದು ದಿನ ಟ್ರಯಲ್‌ಗೆ ದಿನಾಂಕ ನ್ಯಾಯಾಧೀಶರು ನಿಗದಿಪಡಿಸಲಿದ್ದಾರೆ. ಇದೇ ವೇಳೆ ಹಾಸಿಗೆ ತಲೆದಿಂಬು ನೀಡುವ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಛತ್ತೀಸ್‌ಗಢ ಮದ್ಯ ಹಗರಣ | ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಎಸಿಬಿ ಕಸ್ಟಡಿಗೆ

  • ಡಿ ಗ್ಯಾಂಗ್‌ಗೆ ಮತ್ತಷ್ಟು ಢವಢವ – ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ಪೊಲೀಸರ ತಯಾರಿ

    ಡಿ ಗ್ಯಾಂಗ್‌ಗೆ ಮತ್ತಷ್ಟು ಢವಢವ – ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ಪೊಲೀಸರ ತಯಾರಿ

    ಬೆಂಗಳೂರು: ಮತ್ತೆ ಜೈಲು ಸೇರಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಢವಢವ ಶುರುವಾಗಿದೆ. ಏಕೆಂದ್ರೆ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ (Fasttrack Court) ಮನವಿ ಸಲ್ಲಿಸಲು ಪೊಲೀಸರು (Bengaluru Police) ತಯಾರಿ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

    ಇತ್ತೀಚೆಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ (Supreme Court) ತ್ವರಿತಗತಿಯಲ್ಲಿ ಕೇಸ್‌ ಇತ್ಯರ್ಥಕ್ಕೆ ಸೂಚನೆ ನೀಡಿತ್ತು. ಹೀಗಾಗಿ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ರಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    6 ತಿಂಗಳ ಒಳಗೆ ಟ್ರಯಲ್‌ ಮುಗಿಸಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡುವುದಲ್ಲದೇ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪೊಲೀಸರು ಈ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಇಲಾಖೆ (Law Department) ಜೊತೆಗೆ ಚರ್ಚಿಸಿ ಸೋಮವಾರ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆಗಳಿಗೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ವಿಕ್ಷಿಪ್ತ ದೋಷ – ಸುಪ್ರೀಂ ತೀವ್ರ ಆಕ್ಷೇಪ, ತ್ವರಿತಗತಿಯಲ್ಲಿ ಕೇಸ್ ಇತ್ಯರ್ಥಕ್ಕೆ ಸೂಚನೆ

    ಜಾಮೀನು ರದ್ದುಗೊಳಿಸಿದ್ದ ಸುಪ್ರೀಂ
    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ-2 ದರ್ಶನ್, ಎ-1 ಪವಿತ್ರಾಗೌಡ (Darshan And Pavithra Gowda) ಸೇರಿದಂತೆ, 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕೊಟ್ಟಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ರದ್ದುಗೊಳಿಸಿತ್ತು. ಎಲ್ಲಾ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಅಂತ ಸುಪ್ರೀಂ (Supreme Court) ಸೂಚನೆ ನೀಡಿದ್ದರಿಂದ ಪೊಲೀಸರು ಬಂಧಿಸಿದ್ದರು. ಐವರು ಆರೋಪಿಗಳಿಗೆ ಠಾಣೆಯಲ್ಲೇ ವೈದ್ಯಕೀಯ ಪರೀಕ್ಷೆ (Medical test) ನಡೆಸಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಡಿಗ್ಯಾಂಗ್‌ನ ಐವರು ಆರೋಪಿಗಳನ್ನು ಕೋರಮಂಗಲದಲ್ಲಿರುವ ಜಡ್ಜ್‌ ನಿವಾಸದ ಎದುರು ಹಾಜರುಪಡಿಸಿ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.

  • ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ವಿಕ್ಷಿಪ್ತ ದೋಷ – ಸುಪ್ರೀಂ ತೀವ್ರ ಆಕ್ಷೇಪ, ತ್ವರಿತಗತಿಯಲ್ಲಿ ಕೇಸ್ ಇತ್ಯರ್ಥಕ್ಕೆ ಸೂಚನೆ

    ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ವಿಕ್ಷಿಪ್ತ ದೋಷ – ಸುಪ್ರೀಂ ತೀವ್ರ ಆಕ್ಷೇಪ, ತ್ವರಿತಗತಿಯಲ್ಲಿ ಕೇಸ್ ಇತ್ಯರ್ಥಕ್ಕೆ ಸೂಚನೆ

    – ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟ್‌, ಮದ್ಯ ಸೇವಿಸಿದ್ರೆ ರಾಜ್ಯ ಸರ್ಕಾರಕ್ಕೆ ಸಮನ್ಸ್ ಗ್ಯಾರಂಟಿ
    – ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ ನೀಡಕೂಡದು ಅಂತ ಎಚ್ಚರಿಕೆ

    ಬೆಂಗಳೂರು: ದರ್ಶನ್, ಪವಿತ್ರಾ ಸೇರಿ ಆರೋಪಿಗಳ ಬೇಲ್ ರದ್ದು ಮಾಡಿರುವ ಸುಪ್ರೀಂ ಕೋರ್ಟ್ (Supreme Court), ಈ ಹಿಂದೆ ಕರ್ನಾಟಕ ಹೈಕೋರ್ಟ್ (Karnataka Highcourt) ಆದೇಶದ ಹುಳುಕುಗಳನ್ನು ಎತ್ತಿ ತೋರಿದೆ. ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ಸಕಾರಣಗಳನ್ನು ನೀಡಿಲ್ಲ. ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ ಅಂತ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

    ಸುಪ್ರೀಂ ಆಕ್ಷೇಪಣೆಗಳೇನು? (ಆದೇಶ ಓದಿದ ನ್ಯಾ. ಮಹದೇವನ್)
    * ಹೈಕೋರ್ಟ್ ಆದೇಶವು ವಿಕ್ಷಿಪ್ತ ದೋಷಗಳಿಂದ ಕೂಡಿದೆ.
    * ಹೈಕೋರ್ಟ್ ಆದೇಶವು ಗಂಭೀರ ವೈರುಧ್ಯಗಳಿಂದ ಕೂಡಿದೆ.
    * ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ವಿಶೇಷ ಅಥವಾ ಸಕಾರಣಗಳನ್ನು ನೀಡಲಾಗಿಲ್ಲ.
    * ನ್ಯಾಯಾಲಯವು ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ.
    * ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನ ಕೈಬಿಟ್ಟಿದೆ.
    * ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ.
    * ಸಾಕ್ಷಿಗಳ ಪ್ರಾಮಾಣಿಕತೆ, ನಂಬಲರ್ಹತೆಯನ್ನು ನಿರ್ಧರಿಸಬೇಕಿರುವುದು ವಿಚಾರಣಾ ನ್ಯಾಯಾಲಯ ಮಾತ್ರ.
    * ಇಂಥ ಗಂಭೀರವಾದ ಪ್ರಕರಣದ ಸ್ವರೂಪ ಮತ್ತು ಆರೋಪಿಗಳ ಪಾತ್ರವನ್ನು ಪರಿಗಣಿಸಬೇಕು.
    * ಪರಿಗಣಿಸದೇ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವುದು ಅನಗತ್ಯವಾಗಿ ವ್ಯಾಪ್ತಿ ಮೀರಿದ ಚಟುವಟಿಕೆ.
    * ಸಕ್ಷಮ ಪ್ರಾಧಿಕಾರಿಗಳು ತಕ್ಷಣ ಆರೋಪಿಗಳನ್ನ ವಶಕ್ಕೆ ಪಡೆಯಬೇಕು.
    * ತುರ್ತಾಗಿ ವಿಚಾರಣೆ ನಡೆಸಿ, ಮೆರಿಟ್ ಮೇಲೆ ಪ್ರಕರಣವನ್ನ ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು.
    * ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಜಾಮೀನಿಗೆ ಸೀಮಿತವಾಗಿದೆ.

    ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ (Karnataka Government) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ಪೀಠ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ. ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಿರೋದಾಗಿ ಹೇಳಿದೆ. ಅಲ್ಲದೇ, ಫೈವ್ ಸ್ಟಾರ್ ಟ್ರೀಟ್‌ಮೆಂಟ್‌ಗೂ ವಾರ್ನಿಂಗ್ ಕೊಟ್ಟಿದೆ. ಮಹಾದೇವನ್ ಆದೇಶದ ಬಳಿಕ ಅದಕ್ಕೆ ಪೂರಕವಾಗಿ ನ್ಯಾ. ಪಾರ್ದಿವಾಲಾ… ನನ್ನ ಗೌರವಾನ್ವಿತ ಸಹೋದರ, ನ್ಯಾಯಮೂರ್ತಿ ಆರ್ ಮಹಾದೇವನ್ ಪ್ರೌಢಿಮೆಯಿಂದ ಕೂಡಿರುವ ತೀರ್ಪು ನೀಡಿದ್ದು, ಇದು ಅಮೋಘವಾದದ್ದಾಗಿದೆ ಅಂತ ಇದಕ್ಕೆ ಹೆಚ್ಚುವರಿ ಆದೇಶ ಸೇರ್ಪಡೆ ಮಾಡಿದ್ದಾರೆ.

    ನ್ಯಾ. ಪಾರ್ದಿವಾಲಾ ಪ್ರಸ್ತಾಪಿಸಿದ ಅಂಶಗಳೇನು…?
    * ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು/ಅವಳು ಕಾನೂನಿಗಿಂತ ಮೇಲಲ್ಲ.
    * ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ.
    * ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಹಂತದಲ್ಲಿ ಯಾವುದೇ ಬೆಲೆ ತೆತ್ತಾದರೂ ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿಯಬೇಕು.
    * ಎಲ್ಲಾ ಸಮಯದಲ್ಲೂ ಕಾನೂನಾತ್ಮಕ ಆಡಳಿತವನ್ನ ಕಾಪಾಡಿಕೊಳ್ಳುವುದು ಇಂದಿನ ಅಗತ್ಯ.
    * ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಿದ್ದು ನಮಗೆ ತಿಳಿದಿದೆ.
    * ಈ ಸಂಬಂಧ ಜೈಲು ಮೇಲ್ವಿಚಾರಕರು ಸೇರಿ ಎಲ್ಲರ ಅಮಾನತು ಕೂಡ ಗೊತ್ತಾಗಿದೆ.
    * ಇದು ಮತ್ತೆ ಪುನರಾವರ್ತನೆ ಆಗಬಾರದು.
    * ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟು, ಮದ್ಯಸೇವನೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಸಮನ್ಸ್ ಕೊಡ್ತೇವೆ

    ಇದಕ್ಕೆ ರಾಜ್ಯ ಸರ್ಕಾರಿ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು ಪೂರಕ ತೀರ್ಪಿನಲ್ಲಿ ನೀವು ಪ್ರಸ್ತಾಪಿಸಿರುವ ವಿಚಾರಗಳು ದೇಶಾದ್ಯಂತ ಪರಿಣಾಮ ಬೀರಲಿದ್ದು, ಈ ತೀರ್ಪನ್ನ ದೇಶದ ಎಲ್ಲಾ ಜೈಲುಗಳಿಗೆ ಕಳುಹಿಸಿಕೊಡಬೇಕಿದೆ. ಗಂಭೀರ ವಿಚಾರ ಇದಾಗಿದೆ ಅಂದ್ರು. ಅದಕ್ಕೆ ಪೀಠವು ಜೈಲು ಆತಿಥ್ಯದ ಫೋಟೊ, ವಿಡಿಯೋಗಳನ್ನ ನಾವು ನೋಡಿದ್ರೆ ನಿಮಗೆ ಮೊದಲು ಸಮನ್ಸ್ ನೀಡಲಾಗುತ್ತದೆ ಅಂದರು. ಈ ಸಂಬಂಧ ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿ, ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ರವಾನಿಸಲಾಗುವುದು ಅಂತ ಲೂಥ್ರಾ ಪೀಠಕ್ಕೆ ಹೇಳಿದರು.

  • ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    – ಮೆಡಿಕಲ್‌ ಕಂಡಿಷನ್ ಬೇಲ್‌ ಪಡೆದು ಸರ್ಜರಿಯನ್ನೇ ಮಾಡಿಸಲಿಲ್ಲ
    – ಜಾಮೀನಿನ ಸ್ವಾತಂತ್ರ್ಯ ದುರುಪಯೋಗ; ಕೋರ್ಟ್‌ ತೀವ್ರ ಆಕ್ಷೇಪ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ-2 ದರ್ಶನ್, ಎ-1 ಪವಿತ್ರಾಗೌಡ (Darshan And Pavithra Gowda) ಸೇರಿದಂತೆ, 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕೊಟ್ಟಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಎಲ್ಲಾ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಅಂತ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.

    ಐವರು ಆರೋಪಿಗಳಿಗೆ ಠಾಣೆಯಲ್ಲೇ ವೈದ್ಯಕೀಯ ಪರೀಕ್ಷೆ (Medical test) ನಡೆಸಿದರು. ಈ ವೇಳೆ, ಬೆನ್ನು ನೋವಿದೆ ಅಂತ ದರ್ಶನ್ ಹೇಳಿದ್ರು, ಒತ್ತಡದಿಂದ ಬಿಪಿ ಹೆಚ್ಚಾಗಿದೆ ಅಂತ ಡಾಕ್ಟರ್ ಹೇಳಿದರು ಅಂತ ತಿಳಿದುಬಂದಿದೆ. ವೈದ್ಯಕೀಯ ತಪಾಸಣೆ ಬಳಿಕ ಡಿಗ್ಯಾಂಗ್‌ನ ಐವರು ಆರೋಪಿಗಳನ್ನು ಕೋರಮಂಗಲದಲ್ಲಿರುವ ಜಡ್ಜ್‌ ನಿವಾಸದ ಎದುರು ಹಾಜರುಪಡಿಸಿ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

    ಇನ್ನೂ ಮುಖ್ಯವಾಗಿ ನೋಡೊದಾದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆಯೂ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ. ಕೊಲೆ ಕೇಸಲ್ಲಿ ದರ್ಶನ್ ಪಾತ್ರವೇನು? ಅಂತ ವಿವರವಾಗಿ ಹೇಳಿದೆ. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌

    ದರ್ಶನ್‌ ಪಾತ್ರದ ಬಗ್ಗೆ ಕೋರ್ಟ್‌ ಹೇಳಿದ್ದೇನು?
    ಈ ಕೊಲೆ ಹಠಾತ್ ಪ್ರಚೋದನೆ ಅಥವಾ ಭಾವನೆಗಳು ಸ್ಫೋಟಗೊಂಡು ಮಾಡಿರುವ ಪ್ರಕರಣ ಅಲ್ಲ. ಪುರಾವೆಗಳನ್ನ ನೋಡಿದಾಗ ಇದು, ಪೂರ್ವಯೋಜಿತ, ಸಂಘಟಿತ ಅಪರಾಧವನ್ನ ಸೂಚಿಸುತ್ತೆ. ಈ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದರೂ ಸಿಸಿಟಿವಿ ದೃಶ್ಯ ನಾಶವಾಗಿದೆ. ಅಲ್ಲದೇ ಇನ್ನಿತರ ಆರೋಪಿಗಳನ್ನ ಶರಣಾಗಲು ಹೇಳಿ ತನಿಖಾ ಹಾದಿ ತಪ್ಪಿಸಲು ಪ್ರಭಾವ ಬಳಸಿದ್ದಾರೆ.

    ಇದಕ್ಕೆ ದರ್ಶನ್‌ ಪರ ವಕೀಲರು ಜಾಮೀನು ದುರುಪಯೋಗ ಪಡೆಸಿಕೊಂಡಿಲ್ಲ ಅಂದಿದ್ದಾರೆ ಹೇಳಿದ್ದಕ್ಕೆ ಗರಂ ಆದ ನ್ಯಾಯಪೀಠ, ದರ್ಶನ್ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ದರ್ಶನ್ ಎ10 – ಎ14ಗೆ ಶರಣಾಗುವಂತೆ ಹೇಳಿದ್ದಾರೆ. ಇದಕ್ಕಾಗಿ ದರ್ಶನ್ ಹಣ ಪಾವತಿ ಮಾಡಿದ್ದಾರೆ. ಜಾಮೀನು ಪಡೆದ ಬಳಿಕ ಸಾಕ್ಷಿಧಾರರ ಜೊತೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡಿದ್ದಾರೆ, ಪವಿತ್ರಾಗೌಡ ಮನೆಯ ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಲಾಗಿದೆ ಎಂದು ಕೋರ್ಟ್‌ ದರ್ಶನ್‌ ಪಾತ್ರದ ಬಗ್ಗ ಹೇಳಿದೆ. ಇದನ್ನೂ ಓದಿ: 3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌

    ಅಲ್ಲದೇ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸಿರೋ ಸುಪ್ರೀಂ ಕೋರ್ಟ್ 4 ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಿದೆ. ವೈದ್ಯಕೀಯ ಆಧಾರದಡಿ ಕೊಟ್ಟಿರೋ ಜಾಮೀನಿಗೂ ಆಕ್ಷೇಪ ಎತ್ತಿದೆ. ಸುಪ್ರೀಂ ಕೋರ್ಟ್ ಯಾವ್ಯಾವ ಅಂಶಗಳನ್ನ ಪ್ರಮುಖವಾಗಿ ಪರಿಗಣಿಸಿದೆ. ಅವುಗಳನ್ನ ನೋಡೊದಾದ್ರೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಯಾವ್ಯಾವ ಆಯಾಮದಲ್ಲಿ ಸುಪ್ರೀಂ ಆದೇಶ?
    1. ಪ್ರಕರಣದ ಸ್ವರೂಪ ಮತ್ತು ತೀವ್ರತೆ
    2. ಸಾಕ್ಷ್ಯನಾಶ & ಸಾಕ್ಷಿಗಳ ಮೇಲೆ ಪ್ರಭಾವ ಸಾಧ್ಯತೆ
    3. ಸುಳ್ಳು ವೈದ್ಯಕೀಯ ಕಾರಣಗಳನ್ನ ನೀಡಿ ಪಡೆದ ಜಾಮೀನು
    4. ವಸ್ತುನಿಷ್ಠ ವಿಚಾರಗಳನ್ನ ಪರಿಗಣಿಸದೇ ಹೈಕೋರ್ಟ್ ನೀಡಿದ ಜಾಮೀನು ಆದೇಶ

    ವೈದ್ಯಕೀಯ ಕಾರಣದಡಿ ಕೊಟ್ಟ ಜಾಮೀನಿಗೆ ಆಕ್ಷೇಪ ಏನು..?
    * ಡಿ.13ಕ್ಕೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಮೆಡಿಕಲ್ ಕಂಡಿಷನ್ ಎಂದು ಹೇಳಿತ್ತು.
    * ಜಾಮೀನು ಪಡೆದ ನಂತರದ ದರ್ಶನ್ ನಡವಳಿಕೆ ದಾರಿತಪ್ಪಿಸುವ, ಉತ್ರ್ಪೇಕ್ಷಿತ ರೀತಿಯಲ್ಲಿತ್ತು.
    * ಡಿಸ್ಚಾರ್ಜ್ ರಿಪೋರ್ಟ್‌ನಲ್ಲಿ ಡಯಾಬಿಟಿಸ್, ಬಿಪಿ, ಹೃದ್ರೋಗ ಸಮಸ್ಯೆ & ಭವಿಷ್ಯದಲ್ಲಿ ಸರ್ಜರಿ ಬೇಕಾಗಬಹುದು ಎಂದಿತ್ತು.
    * ಆದರೆ, ಇದರಲ್ಲಿ ಎಲ್ಲೂ ಸರ್ಜರಿ ತಕ್ಷಣ ಅಗತ್ಯವಿದೆ, ಜೀವಕ್ಕೆ ಕುತ್ತಾಗಲಿದೆ ಎಂದು ಹೇಳಿರಲಿಲ್ಲ
    * ಹೀಗಾಗಿ, ಮೆಡಿಕಲ್ ಗ್ರೌಂಡಲ್ಲಿ ಜಾಮೀನು ಅಗತ್ಯವಿರಲಿಲ್ಲ.
    * ಹೈಕೋರ್ಟ್‌ನಲ್ಲಿ ಹೇಳಿದ್ದಕ್ಕೆ ವಿರುದ್ಧವಾಗಿ ದರ್ಶನ್ ಹಲವು ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡರು.
    * ಹೈಪ್ರೊಫೈಲ್ ಸೋಷಿಯಲ್ ಇವೆಂಟ್‌ಗಳಲ್ಲಿ ಪೂರ್ಣ ಆರೋಗ್ಯಯುತರಾಗಿರುವಂತೆ ಭಾಗಿಯಾದ್ರು.
    * ಜೈಲ್‌ನಿಂದ ಬಿಡುಗಡೆ ಬಳಿಕ ಸರ್ಜರಿಯೂ ಮಾಡಿಸಲಿಲ್ಲ.
    * ಸುಳ್ಳು ಮೆಡಿಕಲ್ ಕಾರಣಗಳನ್ನ ನೀಡಿ ದರ್ಶನ್ ಜಾಮೀನಿನ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡರು ಎಂದು ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

  • ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

    ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

    – ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯ್ತು: ರೇಣುಕಾಸ್ವಾಮಿ ತಾಯಿ

    ಚಿತ್ರದುರ್ಗ: ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಅನ್ವಯ ತಕ್ಕ ಶಿಕ್ಷೆ ಆಗಲಿ ಎಂದು ರೇಣುಕಾಸ್ವಾಮಿ (Renukaswamy) ಪತ್ನಿ ಸಹನಾ ಹೇಳಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ ಸೇರಿದಂತೆ ಎಲ್ಲಾ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ (Supreme Court) ರದ್ದುಗೊಳಿಸಿದೆ. ಅಲ್ಲದೇ ಎಲ್ಲಾ ಆರೋಪಿಗಳು ಕೂಡಲೇ ಶರಣಾಗುವಂತೆ ಕೋರ್ಟ್ ಸೂಚಿಸಿದೆ. ಶರಣಾಗದಿದ್ದರೆ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ರೇಣುಕಾಸ್ವಾಮಿ ಕುಟುಂಬ ಸ್ವಾಗತಿಸಿದೆ. ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್

    ಇನ್ನು ಈ ಕುರಿತು ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ, ಸರ್ಕಾರ ಮುಂದೆ ಹೋಗದಿದ್ದರೆ ತಪ್ಪು, ಸರಿ ಅರ್ಥ ಆಗ್ತಿರಲಿಲ್ಲ. ಶೀಘ್ರ, ತ್ವರಿತ ವಿಚಾರಣೆಗೆ ಸುಪ್ರೀಂ ಆದೇಶಿಸಿದೆ. ಟ್ರಯಲ್‌ಕೋರ್ಟ್ ವಿಚಾರಣೆಗೆ ನಾವು ಒತ್ತಾಯಿಸಿದ್ದೆವು. ಸುಪ್ರೀಂ ಕೂಡ ನಮಗೆ ನ್ಯಾಯ ಒದಗಿಸಿದೆ. ಕಾನೂನನ್ನು ಗೌರವಿಸುತ್ತೇವೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ. ಚಿಕ್ಕ ವಯಸ್ಸಿನ ರೇಣುಕಾಸ್ವಾಮಿ ಪತ್ನಿ ಸಹನ, ಚಿಕ್ಕ ಹೆಣ್ಣುಮಗಳು. ಆಕೆಗೆ ವಿಶೇಷ ಪ್ರಕರಣದಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ದರ್ಶನ್‌ಗೆ VIP ಟ್ರೀಟ್‌ಮೆಂಟ್ ಕೊಟ್ರೆ ಹುಷಾರ್ – ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ

    ಈ ಬಗ್ಗೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಮಾಲ, ಬೇಲ್ ರದ್ದುಪಡಿಸಿರೋದು ಸ್ವಾಗತಾರ್ಹ. ಮಗನ ಸಾವಿಗೆ ನ್ಯಾಯ ಸಿಕ್ಕಿದೆ. ಕೋರ್ಟ್, ಕಾನೂನಿನ ಬಗ್ಗೆ ನಂಬಿಕೆ ಇದೆ. ಇಂದು ಮನೆದೇವರಿಗೆ ಅಭಿಷೇಕ ಸಲ್ಲಿಸಲು ಹೊರಟಿದ್ದೆವು. ಇಂದೇ ತೀರ್ಪು ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಇಂದು ಒಳ್ಳೆಯ ತೀರ್ಪು ಬಂದಿದೆ. ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯ್ತು ಎಂದರು. ಇದನ್ನೂ ಓದಿ: ಕೊಲೆ ಕೇಸಲ್ಲಿ ಜಾಮೀನು ರದ್ದು – ಮತ್ತೆ ಜೈಲಿಗೆ ದರ್ಶನ್

  • ದರ್ಶನ್ ಅರೆಸ್ಟ್‌ನಿಂದ ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು? ಟೈಮ್‌ಲೈನ್ ಹೀಗಿದೆ

    ದರ್ಶನ್ ಅರೆಸ್ಟ್‌ನಿಂದ ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು? ಟೈಮ್‌ಲೈನ್ ಹೀಗಿದೆ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ನೀಡಿರುವ ಜಾಮೀನು ರದ್ದುಪಡಿಸಬೇಕೋ ಅಥವಾ ಮುಂದುವರಿಸಬೇಕೋ ಎಂಬುದರ ಕುರಿತು ಸುಪ್ರೀಂ ಕೋರ್ಟ್ (Supreme Court) ಇಂದು (ಗುರುವಾರ) ಮಹತ್ವದ ತೀರ್ಪು ನೀಡಲಿದೆ.

    ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ.ಜೆ.ಬಿ ಪರ್ದಿವಾಲಾ ಮತ್ತು ನ್ಯಾ.ಆರ್ ಮಹದೇವನ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು. ಜಾಮೀನು ರದ್ದತಿ ಮೇಲ್ಮನವಿ ತೀರ್ಪು ಇಂದು ಪ್ರಕಟಗೊಳ್ಳಲಿದೆ.

    ರೇಣುಕಾಸ್ವಾಮಿ ಕೊಲೆ, ದರ್ಶನ್ ಅರೆಸ್ಟ್‌ನಿಂದ ಹಿಡಿದು ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು ಎಂಬುದರ ಕುರಿತು ಕಂಪ್ಲೀಟ್ ಟೈಮ್‌ಲೈನ್ ಈ ಕೆಳಗೆ ನೀಡಲಾಗಿದೆ.

    ಜೂನ್ 8 ಶನಿವಾರ
    *ಬೆಳಗ್ಗೆ 11 ಗಂಟೆ ಸುಮಾರಿಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕಿಡ್ನಾಪ್
    *ಬೆಂಗಳೂರಿನ ಆರ್‌ಆರ್ ನಗರ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ.
    *ನಟ ದರ್ಶನ್, ಪವಿತ್ರಾ ಗ್ಯಾಂಗ್‌ನಿಂದ ನಡೆದಿದ್ದ ಹಲ್ಲೆ, ಕೊಲೆ

    ಜೂನ್ 9 ಭಾನುವಾರ
    *ಬೆಳಗ್ಗೆ 8 ಗಂಟೆಗೆ ಸುಮನಹಳ್ಳಿ ರಾಜಕಾಲುವೆ ಬಳಿ ಶವ ಪತ್ತೆ
    *ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸೆಕ್ಯೂರಿಟಿ ಗಾರ್ಡ್
    *ಅಪರಿಚಿತ ಶವದ ಬಗ್ಗೆ ಸೆಕ್ಯೂರಿಟಿ ಗಾರ್ಡ್‌ನಿಂದ ದೂರು ಪಡೆದು ಪೊಲೀಸರ ತನಿಖೆ.

    ಜೂನ್ 10 ಸೋಮವಾರ
    *ನಾಲ್ವರು ಆರೋಪಿಗಳು ಪೊಲೀಸರಿಗೆ ಸರೆಂಡರ್.
    *ರಾಘವೇಂದ್ರ, ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಸರೆಂಡರ್
    *ಬಳಿಕ ಸೋಮವಾರ ರಾತ್ರಿ ಕೊಲೆ ಕೇಸ್ ಗೆ ಮೇಜರ್ ಟ್ವಿಸ್ಟ್ ಕೊಟ್ಟ ಆರೋಪಿ ಹೇಳಿಕೆ
    *ನಟ ದರ್ಶನ್ ಹಾಗೂ ಪವಿತ್ರಾಗೌಡ ಹೆಸರು ಬಾಯ್ಬಿಟ್ಟ ಆರೋಪಿಗಳು

    ಜೂನ್ 11 ಮಂಗಳವಾರ
    *ದರ್ಶನ್ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅಂಡ್ ಎಸಿಪಿ ಚಂದನ್ ನೇತೃತ್ವದ ತಂಡ ಮೈಸೂರಿಗೆ ದೌಡು
    *ಹೋಟೇಲ್‌ನಿಂದ ದರ್ಶನ್ ವಶಕ್ಕೆ ಪಡೆದು ಕರೆತಂದ ಪೊಲೀಸರು
    *ನಂತರ ಆರ್‌ಆರ್ ನಗರ ಮನೆಯಿಂದ ಪವಿತ್ರಾಗೌಡ ಕಸ್ಟಡಿಗೆ
    *ಬಳಿಕ ನಟ ದರ್ಶನ್ ಹಾಗೂ ಪವಿತ್ರಾಗೌಡ ಬಂಧನ
    *ಆರೋಪಿಗಳನ್ನ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು
    *ಜೂನ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಪೊಲೀಸರು.

    ಜೂನ್ 15 ಶನಿವಾರ
    *ಕೋರ್ಟ್‌ಗೆ ಪುನಃ ಆರೋಪಿಗಳು ಹಾಜರುಪಡಿಸಿದ ಪೊಲೀಸರು.
    *ಜೂನ್ 20ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ.

    ಜೂನ್ 20 ಗುರುವಾರ
    *ಜೂನ್ 20ರಂದು ಸಂಜೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು
    *ದರ್ಶನ್ ಸೇರಿ ನಾಲ್ವರನ್ನ ಎರಡು ದಿನ ಕಸ್ಟಡಿಗೆ ಪಡೆದ ಪೊಲೀಸರು
    *ಜೂನ್ 22ರವರೆಗೆ ಪೊಲೀಸ್ ಕಸ್ಟಡಿಗೆ

    ಜೂನ್ 22 ಶನಿವಾರ
    *ಜೂನ್ 22ರಂದು ಎಸಿಎಂಎಂ ಕೋರ್ಟ್‌ಗೆ ದರ್ಶನ್ ಸೇರಿ ನಾಲ್ವರನ್ನ ಹಾಜರು
    *ವಿಚಾರಣೆ ನಡೆಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್.
    *2024 ಸೆಪ್ಟೆಂಬರ್ 3ರಂದು ಚಾರ್ಜ್ ಶೀಟ್ ಸಲ್ಲಿಕೆ
    *24ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ
    *ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್
    *3991 ಪುಟಗಳು, 7 ಸಂಪುಟ, 200ಕ್ಕೂ ಹೆಚ್ಚು ವಿಟ್ನೆಸ್ ಇರುವ ಚಾರ್ಜ್ ಶೀಟ್

    2024 ಸೆಪ್ಟೆಂಬರ್ 21
    *ಜಾಮೀನು ಕೋರಿ ದರ್ಶನ್ ಅರ್ಜಿ
    *ಸಿಟಿ ಸಿವಿಲ್ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ

    2024 ಅಕ್ಟೋಬರ್ 14
    *ದರ್ಶನ್, ಪವಿತ್ರಗೌಡ ಜಾಮೀನು ಅರ್ಜಿ ವಜಾ
    *57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಜಾಮೀನು ವಜಾ
    *ನಂತರ ಅನಾರೋಗ್ಯ ಕಾರಣ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ
    *ರಾಜ್ಯ ಸರ್ಕಾರದ ಪರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್ ವಾದ
    *ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ

    2024 ಅಕ್ಟೋಬರ್ 30
    *ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು
    *ಅನಾರೋಗ್ಯ ನಿಮಿತ್ತ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್
    *ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಸಲುವಾಗಿ ಮಧ್ಯಂತರ ಜಾಮೀನು
    *ಅಕ್ಟೋಬರ್ 30 ರಂದು ಸಂಜೆ 6 ಗಂಟೆಗೆ ಬಳ್ಳಾರಿ ಜೈಲಿನಿಂದ ದರ್ಶನ್ ರಿಲೀಸ್
    *131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಬಿಡುಗಡೆ

    ನವೆಂಬರ್ 1
    *ಬಿಜಿಎಸ್ ಆಸ್ಪತ್ರೆಗೆ ದರ್ಶನ್ ದಾಖಲು

    2024 ಡಿಸೆಂಬರ್ 13
    *ದರ್ಶನ್‌ಗೆ ರೆಗ್ಯುಲರ್ ಬೇಲ್ ಮಂಜೂರು
    *ಹೈಕೋರ್ಟ್‌ನಿಂದ ದರ್ಶನ್, ಪವಿತ್ರಾಗೌಡಗೆ ಜಾಮೀನು ಮಂಜೂರು

    2025 ಜನವರಿ 6
    *ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನು ರದ್ದತಿ ಕೋರಿ ಮೇಲ್ಮನವಿ

    ಜನವರಿ 10
    *ಸುಪ್ರೀಂಕೋರ್ಟ್‌ನಲ್ಲಿ ಕೇಸ್ ರಿಜಿಸ್ಟರ್
    *ನಟ ದರ್ಶನ್, ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಪ್ರದೂಷ್, ಜಗದೀಶ್, ಅನುಕುಮಾರ್ ಜಾಮೀನು ರದ್ದತಿ ಕೋರಿ ಮೇಲ್ಮನವಿ
    *ಏಳು ಆರೋಪಿಗಳ ಜಾಮೀನು ರದ್ದತಿ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್
    *ನ್ಯಾ.ಜೆಬಿ ಪರ್ದಿವಾಲಾ, ನ್ಯಾ ಆರ್ ಮಹದೇವನ್ ಅವರ ಪೀಠದಲ್ಲಿ ನಡೆದ ವಿಚಾರಣೆ

    ಜುಲೈ 24
    *ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
    *ರಾಜ್ಯ ಸರ್ಕಾರ ಪರವಾಗಿ ಸಿದ್ದಾರ್ಥ ಲೂತ್ರಾ ವಾದ
    *ದರ್ಶನ್ ಪರವಾಗಿ ಸಿದ್ದಾರ್ಥ ದವೆ ವಾದ

  • ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    – ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ, ದರ್ಶನ್ ಎದೆಗೆ ಒದ್ದಿದ್ದಾರೆ
    – ಆರೋಪಿಗಳ ಪಾತ್ರದ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ ಸಿದ್ಧಾರ್ಥ್‌ ಲೂಥ್ರಾ

    ನವದೆಹಲಿ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ್‌ (Darshan) ಅಭಿಮಾನಿ ಆಗಿದ್ದ. ಪ್ರಕರಣದ ಎ1 ಆರೋಪಿ ಪವಿತ್ರಾಗೌಡ (Pavithragowda) ದರ್ಶನ್‌ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದರು. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಹೀಗಾಗಿ ರೇಣುಕಾಸ್ವಾಮಿ ಅಸಭ್ಯವಾಗಿ ಮೆಸೇಜ್‌ ಮಾಡಿದ್ದ. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನ ಬಳಸಿಕೊಂಡು ಹತ್ಯೆ ಮಾಡಿದ್ದಾರೆ ಅಂತ ಸರ್ಕಾರದ ಪರ ವಕೀಲ ಸಿದ್ಧಾರ್ಥ್‌ ಲೂಥ್ರಾ (Sidharth Luthra) ಪ್ರಬಲ ವಾದ ಮಂಡಿಸಿದರು.

    ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ (Karnataka High Court) ನೀಡಿ‌ದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠದಲ್ಲಿ ನಡೆಸಿತು. ಈ ವೇಳೆ ಸುಮಾರು 1 ಗಂಟೆ ಪ್ರಬಲ ವಾದ ಮಂಡಿಸಿದ ಸಿದ್ಧಾರ್ಥ್‌ ಲೂಥ್ರಾ ಅವರು ಹಲವು ವಿಷಯಗಳನ್ನ ಕೋರ್ಟ್‌ ಗಮನಕ್ಕೆ ತಂದರು.

    ರೇಣುಕಾಸ್ವಾಮಿ (Renukaswamy) ಎನ್ನುವ ವ್ಯಕ್ತಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್‌ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿರುವ ಪಟ್ಟಣಗೆರೆ ಶೆಡ್ ನಲ್ಲಿ ಮಾರಾಣಾಂತಿಕ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಹಲ್ಲೆಗೂ ಮುನ್ನ ಥಳಿಸಿದ್ದಾರೆ, ಕರೆಂಟ್ ಶಾಕ್ ನೀಡಿದ್ದಾರೆ. ಕಬ್ಬಿಣ ರಾಡ್‌, ಕೋಲಿನಿಂದ ಹೊಡೆದಿದ್ದಾರೆ, ಎದೆಗೆ ಬಲವಾಗಿ ಒದೆಯಲಾಗಿದೆ. ಆರಂಭದಲ್ಲಿ ಹಣಕಾಸಿನ ಕಾರಣಕ್ಕೆ ಹತ್ಯೆ ಮಾಡಿದೆ ಎಂದು ನಾಲ್ವರು ಶರಣಾದರು. ಬಳಿಕ ತನಿಖಾಧಿಕಾರಿ ವಿಚಾರಣೆ ನಡೆಸಿದಾಗ ದೊಡ್ಡ ಜಾಲವೇ ಬಯಲಾಗಿದೆ. ಕೆಳ ಹಂತದ ನ್ಯಾಯಲಯ ಕೆಲವರಿಗೆ, ಹೈಕೋರ್ಟ್ ಈ ಏಳು ಮಂದಿಗೆ ಜಾಮೀನು ನೀಡಿದೆ. ಇದನ್ನು ನಾವು ಪ್ರಶ್ನೆ ಮಾಡಿ ಬಂದಿದ್ದೇವೆ. ಕೊಲೆ ಮಾಡಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸೇರಿ ಪ್ರಬಲ ಸಾಕ್ಷ್ಯಗಳಿವೆ. ಆದ್ದರಿಂದ ಆರೋಪಿಗಳ ಜಾಮೀನು ರದ್ದು ಮಾಡಬೇಕು ಎಂದು ವಾದಿಸಿದರು. ಸುಮಾರು ಒಂದು ತಾಸು ವಾದ ಮಂಡಿಸಿದ ಸಿದ್ಧಾರ್ಥ ಲೂಥ್ರಾ ಆರೋಪಿಗಳ ಪಾತ್ರದ ಬಗ್ಗೆ ಸುಪ್ರೀಂಗೆ ಇಂಚಿಂಚು ಮಾಹಿತಿ ನೀಡಿದರು.

    ಜಡ್ಜ್‌ ಕೇಳಿದ್ದೇನು – ವಕೀಲರು ಹೇಳಿದ್ದೇನು?

    ನ್ಯಾ. ಪರ್ದಿವಾಲ: ಕೊಲೆಗೆ ಕಾರಣ ಏನು?
    ಲೂಥ್ರಾ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ ಅಭಿಮಾನಿ.. ಪ್ರಕರಣದ ಎ1 ಆರೋಪಿ ಪವಿತ್ರಗೌಡ ದರ್ಶನ ಜೊತೆಗೆ ವಿವಾಹಯೇತರ ಸಂಬಂಧ ಹೊಂದಿದ್ದ ಹಿನ್ನೆಲೆ ಅಸಭ್ಯವಾಗಿ ರೇಣುಕಾಸ್ವಾಮಿ ಮೆಸೇಜ್‌ ಮಾಡಿದ್ದ. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನು ಬಳಸಿಕೊಂಡು ಹತ್ಯೆ ಮಾಡಿದ್ದಾರೆ.

    ನ್ಯಾ. ಪರ್ದಿವಾಲ: ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿದಿಯೇ?
    ಲೂಥ್ರಾ: ಹೌದು. ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಮುಖ್ಯವಾಗಿ ಎ2 ಆರೋಪಿ ದರ್ಶನ್ ಆರೋಗ್ಯ ಕಾರಣ ನೀಡಿ ಜಾಮೀನು ಪಡೆದರೂ ಬಳಿಕ ರೆಗ್ಯೂಲರ್ ಬೇಲ್ ಸಿಕ್ಕಿದೆ. ಜಾಮೀನು ಪಡೆದ ಬಳಿಕ ಅವರು ಆಸ್ಪತ್ರೆ ಬದಲು ಸಿನಿಮಾ ಶೂಟಿಂಗ್, ವಿದೇಶ ಪ್ರವಾಸ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

    ನ್ಯಾ. ಪರ್ದಿವಾಲ: ಚಾರ್ಜ್ ಪ್ರೇಮ್ ಆಗಿದ್ಯಾ? ಪ್ರತ್ಯಕ್ಷದರ್ಶಿಗಳಿದ್ದಾರ..?
    ಲೂಥ್ರಾ : ಚಾರ್ಜ್ ಇನ್ನು ಫ್ರೇಮ್ ಆಗಿಲ್ಲ, ಆದರೆ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ. ಆರೋಪಿಗಳು ನಿರಂತರ ಸಂಪರ್ಕದಲ್ಲಿದ್ದಾರೆ, ಎಲ್ಲರ ನಂಬರ್‌ಗಳು ಒಂದೇ ಕಡೆ ಟ್ರೇಸ್ ಆಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಇವರ ಚಲನವಲನಗಳಿವೆ. ಕೆಲವು ಆರೋಪಿಗಳು ಹಲ್ಲೆ ನಡೆಸಿ ಅದನ್ನು ಎ1-ಎ2 ಆರೋಪಿಗಳಿಗೆ ಕಳುಹಿಸಿದ್ದಾರೆ. ಅನೇಕ ದೂರವಾಣಿ ಸಂಭಾಷಣೆಗಳು ನಡೆದಿವೆ.

    ನ್ಯಾ. ಪರ್ದಿವಾಲ: ಸಿಸಿಟಿವಿಯಲ್ಲಿ ಆರೋಪಿಗಳ ಗುರುತು ಪತ್ತೆಯಾಗಿದೆಯೇ?
    ಲೂಥ್ರಾ: ಸ್ವಷ್ಟವಾಗಿಲ್ಲ, ಬಿಳಿ ಸ್ಕಾರ್ಪಿಯೋ ಮತ್ತು ರ‍್ಯಾಂಗ್ಲಾರ್‌ ಕಾರ್ ಬಳಸಿಕೊಂಡು ಓಡಾಡಿದ್ದಾರೆ, ಉದ್ದೇಶ ಪೂರ್ವಕವಾಗಿ ತಲೆ ಮರೆಸಿಕೊಂಡು ಓಡಾಡಿದ್ದಾರೆ. ಆರಂಭದಲ್ಲಿ ಶರಣಾದ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇದರಲ್ಲಿ ದೊಡ್ಡ ಜಾಲ ಇರುವುದು ಪತ್ತೆಯಾಗಿದೆ, ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ವೈಜ್ಞಾನಿಕ ಮತ್ತು ಡಿಜಿಟಲ್ ಸಾಕ್ಷ್ಯಗಳಿದೆ.

    ಮುಂದುವರಿದು… ರೇಣುಕಾಸ್ವಾಮಿ ಹಲ್ಲೆಯ 3 ನಿಮಿಷದ ವಿಡಿಯೋ ಇದೆ. ಪವಿತ್ರಾಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ದರ್ಶನ್ ಎದೆಗೆ ಒದ್ದಿದ್ದಾರೆ. ಸತ್ತ ಮೇಲೆ ಪವಿತ್ರಾಗೌಡಗೆ ಫೋಟೋ ಕಳುಹಿಸಿ ಡಿಲೀಟ್ ಮಾಡಲಾಗಿದೆ. ಆರೋಪಿಗಳ ಮೊಬೈಲ್‌ನಲ್ಲಿ ಹತ್ಯೆ ಫೋಟೋಗಳಿವೆ. ಪುನೀತ್ ಫೋನ್‌ನಿಂದ ಫೋಟೋ ರಿಕವರಿ ಮಾಡಲಾಗಿದೆ. ಲಾಠಿ ಮೇಲೆ ರಕ್ತದ ಕಲೆಗಳಿವೆ. ಆರೋಪಿಗಳ ಬಟ್ಟೆ, ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇದೆ. ಇಷ್ಟೆಲ್ಲ ಆದ್ಮೇಲೂ ದರ್ಶನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರತಿಯೊಬ್ಬ ಆರೋಪಿಯ ಡಿಎನ್‌ಎ ಮ್ಯಾಚ್ ಮಾಡಲಾಗಿದೆ. 7 ಕಿಮೀ ವರೆಗಿನ ವಿಡಿಯೋ ಪರಿಶೀಲಿಸಲಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

  • ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ

    ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ

    – ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ ಕಾರಣ, ಜಾಮೀನು ಯಾಕೆ ಕೊಟ್ರಿ?
    – ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ತೀವ್ರ ತರಾಟೆ

    ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿಂದು (Supreme Court) ಸುದೀರ್ಘ ವಿಚಾರಣೆ ನಡೆಯಿತು.

    ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ (Karnataka High Court) ನೀಡಿ‌ದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠ ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತು. ಈ ವೇಳೆ ನಡೆದ ವಾದ-ಪ್ರತಿವಾದ ಹಾಗೂ ಜಡ್ಜ್‌ ಎತ್ತಿದ ಲಾ ಪಾಯಿಂಟ್‌ಗಳು ಗಮನಸೆಳೆದಿವೆ.

    ಹೈಕೋರ್ಟ್‌ಗೆ ತೀವ್ರ ತರಾಟೆ:
    ಆರೋಪಿಗಳು ನಿರಪರಾಧಿ ಅನ್ನೋ ರೀತಿ ಹೈಕೋರ್ಟ್ ಬೇಲ್ ಕೊಟ್ಟಿದೆ. ನಿಮಗೂ ಕೂಡ ಈ ರೀತಿ ಅನ್ನಿಸುತ್ತಿಲ್ವಾ? ಎಲ್ಲಾ ಕೇಸ್‌ಗಳಲ್ಲೂ ಹೈಕೋರ್ಟ್ ಹೀಗೆ ಮಾಡುತ್ತಾ? ವಿಚಾರಣಾ ನ್ಯಾಯಾಲಯ ತಪ್ಪು ಮಾಡಿದ್ರೆ ತಪ್ಪಾಗಿದೆ ಅನ್ನಬಹುದು. ಹೈಕೋರ್ಟ್ ಹೀಗೆ ಮಾಡಿದ್ರೆ ಹೇಗೆ? ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡುವುದಿಲ್ಲ ಏಂದು ಸುಪ್ರೀಂ ಕೋರ್ಟ್‌ ಹೇಳಿದೆ.

    ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ ಕಾರಣ; ಸುಪ್ರೀಂ
    ಸುದೀರ್ಘ ವಿಚಾರಣೆಯಲ್ಲಿ ಪ್ರತಿಯೊಬ್ಬ ಆರೋಪಿಗಳ ಬಗ್ಗೆಯೂ ಆಳವಾದ ವಿಚಾರಣೆ ನಡೆದ ಕೋರ್ಟ್‌ ಎ-1 ಪವಿತ್ರಾಗೌಡ ಬಗ್ಗೆ ಗಂಭೀರವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಅನಾಹುತಕ್ಕೆ ಪವಿತ್ರಾಗೌಡ ಕಾರಣ ಅಂದಿದೆ.

    ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ (Pavithra Gowda) ಕಾರಣ. ಸಮಸ್ಯೆ ಮೂಲವೇ ನೀವು.. ನಿಮ್ಮಿಂದಲೇ ಆಗಿದ್ದು.. ಯಾಕೆ ನಿಮಗೆ ಬೇಲ್ ಕೊಡಬೇಕು? ಇಷ್ಟೆಲ್ಲಾ ‘ಸಾಕ್ಷ್ಯ ಇದ್ದರೂ.. ಬೇಲ್ ಯಾಕೆ ಕೊಡಬೇಕು? ಇದು ಬರೀ ಕೊಲೆ ಅಲ್ಲ.. ವ್ಯವಸ್ಥಿತ ಪಿತೂರಿ, ಷಡ್ಯಂತ್ರ. ಸಾಕ್ಷ್ಯ ಇದ್ದರೂ ಯಾಕೆ ಜಾಮೀನು ಮುಂದುವರಿಸಬೇಕು? ದರ್ಶನ್-ಪವಿತ್ರಾಗೌಡಗೆ ಏನು ಸಂಬಂಧ? ಎ1 ಪವಿತ್ರಾಗೌಡ ಪವನ್‌ಗೆ 55 ಬಾರಿ ಕರೆ ಮಾಡಿದ್ಯಾಕೆ? ಅಂತಲೂ ಜಡ್ಜ್ ಪಾರ್ದಿವಾಲ ಪ್ರಶ್ನೆ ಮಾಡಿದ್ರು.

    ಪವಿತ್ರಾಗೌಡ ಪರ ವಕೀಲರ ವಾದವೇನು?
    ಜಡ್ಜ್‌ ಪ್ರಶ್ನೆಗೆ ಉತ್ತರಿಸಿದ ಪವಿತ್ರಾಗೌಡ ಪರ ವಕೀಲರು, ಕೊಲೆಗೂ ಪವಿತ್ರಾಗೌಡಗೂ ಸಂಬಂಧ ಇಲ್ಲ. ರೇಣುಕಾಸ್ವಾಮಿ ಕಿಡ್ನ್ಯಾಪ್ ಪವಿ‌ತ್ರಾಗೆ ಗೊತ್ತಿರಲಿಲ್ಲ. ಪವಿತ್ರಾಗೆ ಅಪಹರಣಕಾರರ ಪರಿಚಯವೂ ಇಲ್ಲ. ರೇಣುಕಾಗೆ ಚಪ್ಪಲಿಯಲ್ಲಿ ಹೊಡೆದು ಪವಿತ್ರಾ ವಾಪಸ್ ಆಗಿದ್ದಾರೆ ಅಂತ ವಾದಿಸಿದ್ರು.