Tag: ಪವರ್ ಸ್ಟಾರ್

  • ಪುನೀತ್ ಪುಣ್ಯಸ್ಮರಣೆ – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

    ಪುನೀತ್ ಪುಣ್ಯಸ್ಮರಣೆ – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

    ರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

    ಕಂಠೀರವ ಸ್ಟುಡಿಯೋಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್‌ ರಾಘಣ್ಣ ದಂಪತಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಆಗಮಿಸಿ, ಪೂಜೆಗೆ ಸಿದ್ಧತೆ ಮಾಡಿಕೊಂಡು ಬಳಿಕ ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ

    ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜೈಕಾರ ಹಾಕುತ್ತಿದ್ದು, ಕೈಯಲ್ಲಿ ರೋಸ್ ಹಿಡಿದು ಆಗಮಿಸುತ್ತಿದ್ದಾರೆ. ಇನ್ನೂ ಯುವ ರಾಜ್‌ಕುಮಾರ್‌ನ್ನು ನೋಡಿ ಜೂ.ಪವರ್ ಸ್ಟಾರ್‌ಗೆ ಎಂದು ಜೈ ಎಂದು ಜೈಕಾರ ಹಾಕುತ್ತಿದ್ದಾರೆ. ಈ ವರ್ಷ ವಿಶೇಷ ಅಂದ್ರೆ ಅಪ್ಪು ಅವರ ಫ್ಯಾನ್ ಡಮ್ ಆ್ಯಪ್ ಲಾಂಚ್ ಆಗಿದೆ.

    ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಕುಟುಂಬಸ್ಥರು ಪಾರ್ವತಮ್ಮ ಹಾಗೂ ಡಾ. ರಾಜ್‌ಕುಮಾರ್ ಸಮಾಧಿಗೆ ಪೂಜೆ ಮಾಡಿದ್ದಾರೆ.

    ಪುನೀತ್ ಸಮಾಧಿಗೆ ಬಿಳಿ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ, ನೇತ್ರದಾನ ಶಿಬಿರವನ್ನು ಅಭಿಮಾನಿಗಳು ಅಯೋಜಿಸಿದ್ದಾರೆ. ಬೆಟ್ಟದ ಹೂವು ಅಪ್ಪು ಎಂದಿಗೂ ಬಾಡದ ಹೂವಾಗಿ ಅಭಿಮಾನಿಗಳ ಹೃದಯಮಂದಿರದಲ್ಲಿ ನೆಲೆಸಿದ್ದಾರೆ. ದೈಹಿಕವಾಗಿ ನಮ್ಮ ಜೊತೆಗೆ ಅಪ್ಪು ಇಲ್ಲದಿದ್ದರೂ, ತಾವು ಮಾಡಿದ ಸಮಾಜಮುಖಿ ಕಾರ್ಯಗಳು, ಸಿನಿಮಾಗಳ ಮೂಲಕ ನಮ್ಮೊಂದಿಗೆ ಅಜರಾಮರವಾಗಿ ಉಳಿದಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ ಫ್ಯಾನ್ಸ್. ಅವರ ಈ ಪುಣ್ಯಸ್ಮರಣೆಯ ದಿನವನ್ನ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.ಇದನ್ನೂ ಓದಿ:ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

  • ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ

    ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ

    ಗುಮೊಗದ ಅರಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಮ್ಮನ್ನಗಲಿ ಇಂದಿಗೆ 4 ವರ್ಷ.

    ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪುನೀತ್ ಸಮಾಧಿಗೆ ಬಣ್ಣ ಬಣ್ಣದ ಗುಲಾಬಿ ಹೂವಿನ ಅಲಂಕಾರ ಮಾಡಲಾಗಿದೆ. ದೊಡ್ಮನೆ ಕುಟುಂಬ ಬೆಳಗ್ಗೆ 9:30ರ ಸುಮಾರಿಗೆ ಪುನೀತ್ ಸಮಾಧಿಗೆ ಪೂಜೆ ನೆರವೇರಿಸಲಿದ್ದು, ಇಷ್ಟದ ಖಾದ್ಯಗಳನ್ನಿಟ್ಟು ಪೂಜೆ ಮಾಡಲಿದ್ದಾರೆ.ಇದನ್ನೂ ಓದಿ:ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ

    ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಇಂದು ಇಡೀ ದಿನ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳ ಆಯೋಜನೆ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲಗಳಿಂದ ಅಭಿಮಾನಿಗಳು ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಲಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಅವರ ಅಭಿಮಾನಿಗಳು ತಾವಿರುವ ಸ್ಥಳದಿಂದಲೇ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.

  • ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

    ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

    ಟ ಪುನೀತ್ ರಾಜ್ ಕುಮಾರ್ (Puneeth Raj Kumar) ಅರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ವರ್ಷವಾಗಿದೆ. ಅಂದಿನಿಂದಲೂ ಇಂದಿನವರೆಗೂ ಅಭಿಮಾನಿಗಳು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಅಭಿಮಾನಿಗಳ ದಂಡು ಸಮಾಧಿಯತ್ತ ಹರಿದುಬರುತ್ತಿದ್ದು, ಕಣ್ಣೀರಾಕುತ್ತಿದ್ದಾರೆ.

    ಕಂಠೀರವ ಸ್ಟುಡಿಯೋ (Kanteerava Studio) ಮುಂಭಾಗದಲ್ಲಿ ಅಭಿಮಾನಿಗಳು ನೆರೆದಿದ್ದು, ಅಪ್ಪು ಫೋಟೋ ನೋಡಿಕೊಂಡು ಮಹಿಳಾ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಅಂತೆಯೇ ಶಿವಮೊಗ್ಗದಿಂದ ಬಂದಿರುವ ವೃದ್ಧೆಯೊಬ್ಬರು ಮತ್ತೊಮ್ಮೆ ಹುಟ್ಟಿ ಬನ್ನಿ. ಯಾರ ಹೊಟ್ಟೆಯಲ್ಲಾದರೂ ಸರಿ ಮತ್ತೊಮ್ಮೆ ಹುಟ್ಟಿ ಬಾರಪ್ಪ ಅಂತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ

    ಇತ್ತ ಗುಬ್ಬಿಯಿಂದ ಬಂದಿರುವ ವೃದ್ಧೆ ಸುಮಿತ್ರಾ ಬಾಯಿ ಕಡ್ಲೆಪುರಿ ಹಾಗೂ ಬತ್ತಾಸು ಹಾರ ತಂದಿದ್ದಾರೆ. 20 ದಿನಗಳ ಕಾಲ ಸೂಕ್ಷ್ಮವಾಗಿ ಕಡ್ಲೆಪುರಿಗಳನ್ನು ಪೋಣಿಸಿ ಇದರ ಮಧ್ಯೆ ಬತ್ತಾಸು ಸೇರಿಸಿ ಅಜ್ಜಿ ಹಾರ ತಯಾರಿಸಿದ್ದಾರೆ. ಇದೀಗ ಈ ಹಾರದೊಂದಿಗೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದು, ಅಶ್ವಿನ್ ಪುನೀತ್ ರಾಜ್ ಕುಮಾರ್ ಅವರಿಂದ ಸಮಾಧಿಗೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಅಸೌಇನಿ ಅವರ ಬರುವಿಕೆಗಾಗಿ ಅಜ್ಜಿ ಕಾಯುತ್ತಾ ಕುಳಿತಿದ್ದಾರೆ.

    ಇನ್ನೊಂದೆಡೆ ಬೆಣ್ಣೆಯಲ್ಲಿ ಅಪ್ಪು ಪುತ್ಥಳಿ ಕೆತ್ತನೆ ಮಾಡಿ ಕಲಾವಿದರು ಸಮಾಧಿ ಬಳಿ ತಂದಿದ್ದಾರೆ. ಬೆಂಗಳೂರಿನ ಚೆನ್ನೈಸ್ ಅಮೃತಾ ಕಲಾ ಸಂಸ್ಥೆಯ ಕಲಾವಿದರ ಕೈ ಚಳಕದಿಂದ 46 ಕೆಜಿ ಬೆಣ್ಣೆಯಲ್ಲಿ ಪುನೀತ್ ಫೋಟೋ ಅರಳಿದೆ. ಬೆಣ್ಣೆಯ ಪುತ್ಥಳಿಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಇಂದು ಕರ್ನಾಟಕ ರತ್ನಿಗೆ ಗೌರವ ಸಲ್ಲಿಸುತ್ತಿದ್ದಾರೆ.

    ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ತಿಂಗಳುಗಳೇ ಕಳೆದರೂ ಅವರ ಮೇಲಿನ ಅಭಿಮಾನ ಇನ್ನೂ ಕರಗಿಲ್ಲ. ಈ ಮಧ್ಯೆ ಪುನೀತ್ ಸಿನಿಮಾ ಡೈಲಾಗ್‍ಗಳು, ಕಾರ್ಯಕ್ರಮದಲ್ಲಿ ಅವರು ಮಾತಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅದೇ ರೀತಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ಪು, ಅಲ್ಲಿ ತಮ್ಮ ಅಮ್ಮನ ಬಗ್ಗೆ ಮಾತಾನಾಡಿರುವ ಸ್ಫೂರ್ತಿದಾಯಕ ಮಾತುಗಳು ವೈರಲ್ ಆಗುತ್ತಿದೆ.

    ಹೌದು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಮಾತಾನಾಡುತ್ತಾ ಅಪ್ಪು ಹೆಮ್ಮೆ ವ್ಯಕ್ತಪಡಿಸಿದರು. ನಾನು ನನ್ನ ಅಮ್ಮನಂತೆ ಆಗಬೇಕು. ಕೈಯಲ್ಲಿ ಪರ್ಸ್ ಇಟ್ಟುಕೊಂಡರೆ ತುಂಬಾ ಹಣ ಇದೆ ಅಂತ ಅನಿಸೋದು. ಅಮ್ಮನಂತೆ ಚೆನ್ನಾಗಿ ಸಂಪಾದನೆ ಮಾಡ್ಬೇಕು. ನಮ್ಮಮ್ಮ ಸಂಪಾದನೆ ಅನ್ನೋದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹಲವಾರು ಮಂದಿಯನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ ಎಂದಿದ್ದರು.  ಇದನ್ನೂ ಓದಿ: 88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

    ನನಗೆ ಇಬ್ಬರು ಹೆಣ್ಣುಮಕ್ಕಳು. ಆದರೆ ಇಲ್ಲಿ ಹೆಣ್ಣು ಬೇರೆ ಅಲ್ಲ, ಗಂಡು ಬೇರೆ ಅಲ್ಲ, ಇಲ್ಲಿ ಎಲ್ಲಾರು ಸಮಾನರು ಎಂದು ಹೇಳಿದರು. ಸಮಾಜಕ್ಕೆ ಹೆಣ್ಣು ಮಗಳು ಅಂತ ಬಂದಾದ ಬಳಿಕ ಅವರೂ ಕೆಲಸ ಮಾಡಲೇಬೇಕು. ನಮ್ಮ ಅಮ್ಮನೂ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾನು ಯಾರನ್ನು ನೋಡಿದರೂ ಯಾವಾಗ್ಲೂ ಕೆಲಸ ಮಾಡಿ, ಜೀವನದಲ್ಲಿ ಚೆನ್ನಾಗಿರಿ ಅಂತ ಹೇಳುತ್ತೇನೆ. ಇದಕ್ಕೆ ನಮ್ಮ ಅಮ್ಮನೇ ಸ್ಫೂರ್ತಿ ಅಂತ ಅಪ್ಪು ಸಂತಸ ವ್ಯಕ್ತಪಡಿಸಿದ್ದರು.

    ನಾನೆಷ್ಟು ಒಳ್ಳೆಯ ಕೆಲಸ ಮಾಡುರುತ್ತೀನೋ, ಅಷ್ಟು ಕೆಟ್ಟ ಕೆಲಸನೂ ಮಾಡಿರುತ್ತೇನೆ. ಯಾಕೆಂದರೆ ಇದು ಜೀವನ ಎಂದ ಅವರು, ಈ ಜೀವನದಲ್ಲಿ ನನ್ನ ತಿದ್ದಿ, ಬೆಳೆಸಿರುವವರೆಂದರೆ ನನ್ನ ತಾಯಿ ಎಂದಿದ್ದರು. ಅಪ್ಪು ಅವರ ಈ ಮಾತುಗಳು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

    ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬವಾಗಿದ್ದು, ಅಂದೇ ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿದೆ. ಅದ್ಯ ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

  • ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರ

    ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರ

    ಬೆಂಗಳೂರು: ಕರ್ನಾಟಕ ರತ್ನ ಡಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ದಾಖಲೆ ಬರೆದಿದೆ. ಜೇಮ್ಸ್ ನಾ ಆರ್ಭಟಕ್ಕೆ ದಾಖಲೆಗಳು ಉಡೀಸ್ ಆಗಿವೆ. ಒಂದೇ ದಿನದಲ್ಲಿ ಸಿನಿಮಾದ ಕಲೆಕ್ಷನ್ ಹಿಸ್ಟರಿ ಕ್ರಿಯೇಟ್ ಮಾಡಿದೆ. ಹೀಗಾಗಿ ಚಿತ್ರತಂಡ ಸಕ್ಸಸ್ ಮೀಟ್‍ಗೆ ಪ್ಲ್ಯಾನ್ ಕೂಡ ಮಾಡ್ತಿದೆ.

    ಹೌದು. ಪ್ರೀತಿಯ ಅಪ್ಪು ಕರ್ನಾಟಕ ರತ್ನ, ಡಾ. ಪುನೀತ್ ರಾಜ್‍ಕುಮಾರ್ ಅಗಲಿಕೆ ನೋವಿನಿಂದ ನಾಡಿನ ಜನ ಇನ್ನೂ ಹೊರಬಂದಿಲ್ಲ. ಈ ಮಧ್ಯೆ ಅಪ್ಪು ಕೊನೆಯ ಸಿನಿಮಾ ಜೇಮ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೀತಿದೆ. ಇದನ್ನೂ ಓದಿ: ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

    ಜೇಮ್ಸ್ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ನಿನ್ನೆ ಒಂದೇ ದಿನ 30 ಕೋಟಿ ಕಲೆಕ್ಷನ್ ಆಗಿದೆ. ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಮೊದಲ ದಿನ ಕಲೆಕ್ಷನ್ ಸೇರಿ ಜೇಮ್ಸ್ ಈಗ 100 ಕೋಟಿ ಕ್ಲಬ್ ಸೇರಿದೆಯಂತೆ. ಇನ್ನೂ ಜೇಮ್ಸ್ ಸಿನಿಮಾ ಸಕ್ಸಸ್ ಅನ್ನು ವಿಜಯಾತ್ರೆ ಮಾಡ್ತೆವೆ. ಸಕ್ಸಸ್ ಮೀಟ್ ಮಾಡೋ ಪ್ಲಾನ್‍ನಲ್ಲಿ ಚಿತ್ರತಂಡ ಇದೆ. ಈ ಬಗ್ಗೆ ಶಿವಣ್ಣನ ಜೊತೆ ಮಾತನಾಡಿ ನಿರ್ಧಾರ ಮಾಡಲಿದೆ.

    ಅಪ್ಪು ಅಭಿಮಾನಿಗಳು, ದೊಡ್ಮನೆ ಕುಟುಂಬಸ್ಥರಿಗೆ ನಿರ್ದೇಶಕ ಚೇತನ್ ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಾರೆ ಜೇಮ್ಸ್ ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ದಾಖಲೆಗಳನ್ನ ಉಡೀಸ್ ಮಾಡಿದೆ. ಸಕ್ಸಸ್ ಮೀಟ್ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡ ಮಾಡ್ತಿದ್ದು. ಸಕ್ಸಸ್ ಮೀಟ್ ಎಲ್ಲಿ ಯಾವ ರೀತಿ ಇರುತ್ತೋ ಕಾದು ನೋಡಬೇಕಿದೆ. ಇದನ್ನೂ ಓದಿ: ಜೇಮ್ಸ್ ರಿಲೀಸ್ ಬಳಿಕ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

  • ರಾಜಕುಮಾರನ ಜೇಮ್ಸ್ ಜಾತ್ರೆ – ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು ಬದುಕಲ್ಲಿ ಗೆಲ್ಲಬಾರದಿತ್ತೇ..!

    ರಾಜಕುಮಾರನ ಜೇಮ್ಸ್ ಜಾತ್ರೆ – ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು ಬದುಕಲ್ಲಿ ಗೆಲ್ಲಬಾರದಿತ್ತೇ..!

    * ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

    ಶಿಳ್ಳೆ , ಚಪ್ಪಾಳೆ, ಹರ್ಷೋದ್ಘಾರ, ಪಟಾಕಿಯ ಸದ್ದು, ಹಾಲಿನ ಅಭಿಷೇಕ ಇಡೀ ಬೆಂಗಳೂರಿನಲ್ಲಿ ಇಂದು ಪುನೀತೋತ್ಸವ. ಆದ್ರೇ ಇವೆಲ್ಲವನ್ನೂ ಮೀರಿ ಪ್ರತಿಯೊಬ್ಬರ ಮನದಲ್ಲಿ ದುಃಖದ ಕಾರ್ಮೋಡವಿತ್ತು. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಖಡಕ್ ಲುಕ್, ಫಿಟ್ ಆಂಡ್ ಫೈನ್ ಆಗಿ ರಾಯಲ್ ಆಗಿ ಕಾಣ್ತಿರುವ ಅಪ್ಪು ನಿಜವಾಗಲೂ ಇನ್ನಿಲ್ವಾ… ಸಿನಿಮಾದಲ್ಲಿ ಅಬ್ಬರಿಸ್ತಾ ಇರುವ ಈ ರಾಜ ನಮ್ಮನ್ನು ಹೀಗೆ ಬಿಟ್ಟು ಹೋಗೇಬಿಟ್ರಾ ಎನ್ನುವ ನೋವಿನ ಭಾವ ಪ್ರತಿ ಕ್ಷಣದಲ್ಲಿ ಮತ್ತೆ ಮತ್ತೆ ಕಾಡಿ ಎದೆ ಭಾರವೆನಿಸುವ ಕ್ಷಣವದು.

    ಅಪ್ಪುವಿನ ಫುಲ್ ಪ್ರೇಮ್ ಥಿಯೇಟರ್ ಪರದೆಯಲ್ಲಿ ಬಂದಾಗೆಲ್ಲ ದುಃಖ ತಡೆಯಲಾರದೇ ಅದೆಷ್ಟೋ ಜನ ಸ್ಕ್ರೀನ್ ತಬ್ಬಿ ಹಿಡಿದು ಅಪ್ಪು ಅಪ್ಪು ಅಂತಾ ಮೌನವಾಗಿ ಕಣ್ಣೀರಾದ್ರು. ಹೀಗೆ ನಡುನೀರಿನಲ್ಲಿ ತಾನು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋಗುತ್ತೇನೆ, ಇವರೆಲ್ಲ ನನ್ನ ಸಾವನ್ನು ಅರಗಿಸಿಕೊಳ್ಳಲಾರರು ಅಂತಾ ಅಪ್ಪುವಿಗೆ ಮೊದಲೇ ಗೊತ್ತಿದ್ದು, ಆ ನೋವಿಗೆ ಮುಲಾಮು ಹಚ್ಚೋಕೆ ಜೇಮ್ಸ್ ಸಿನಿಮಾ ಮಾಡಿದ್ರಾ ಅನ್ನೋವಷ್ಟು ಕಾಡಿಬಿಡುತ್ತೆ ಸಿನಿಮಾ. ಇದನ್ನೂ ಓದಿ: ಗುರುವಾರಕ್ಕೂ ಪುನೀತ್ ಸಿನಿಮಾ ರಿಲೀಸಿಗೂ ಏನದು ನಂಟು?

    ಜೇಮ್ಸ್ ಇಡೀ ಸಿನಿಮಾದ ಕಥೆ, ಸಂದೇಶ, ಡ್ಯಾನ್ಸು ಸಾಂಗ್ಸ್.. ಊಹೂ ಅದ್ಯಾವುದೂ ಅಭಿಮಾನಿಗಳ ಪಾಲಿಗೆ ಮುಖ್ಯವಾಗಲೇ ಇಲ್ಲ. ಕೇವಲ ಅಪ್ಪು ಜಪ. ಅಪ್ಪುವನ್ನು ಕಣ್ಣುತುಂಬಿಸಿಕೊಳ್ಳುವ ತವಕ. ಮತ್ತೆ ಎಂದೂ ತೆರೆಯ ಮೇಲೆ ಈ ‘ರಾಜಕುಮಾರ’ನ ನೋಡಲಾರೆವು ಎನ್ನುವ ಕಹಿ ಸತ್ಯ ಪದೇ ಪದೇ ಕಣ್ಣೀರಾಗಿಸುವ ಸಂದರ್ಭದಲ್ಲಿಯೂ ಜೇಮ್ಸ್ ಕೋಟಿ ಕಂಗಳ ಕಣ್ಣೀರು ಒರೆಸುವ ಪುಟ್ಟ ಕರ್ಚೀಫಿನಂತೆ, ಥೇಟು ಅಪ್ಪುವಿನ ನಿಷ್ಕಲ್ಮಷ ನಗೆಯಂತೆ ಕಾಣಿಸಿದೆ.

    ಅಪ್ಪು ಕೊನೆಯ ಸಿನಿಮಾ ಹೇಗಿದೆ..!?: ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ನಲ್ಲಿ ಅಪ್ಪುವಿನದ್ದು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಹಾಗೂ ಸೈನಿಕನಾಗಿ ಡಬಲ್ ಶೇಡ್ ಇರುವ ಪಾತ್ರ. ಇಡೀ ಸಮಾಜವನ್ನು ಡ್ರಗ್ಸ್ ಮಾಫಿಯವನ್ನು ಕಿತ್ತೊಗೆಯಲು ನಾಯಕನ ಶ್ರಮ ಸಿನಿಮಾದ ಹೈಲೈಟ್ಸ್. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಸೈನಿಕ ಹಾಗೂ ಏಜೆನ್ಸಿ ಸೆಕ್ಯೂರಿಟಿ ಆಗಿ ಡಬಲ್ ಶೇಡ್‍ನಲ್ಲಿ ಪಾತ್ರ ನಿರ್ವಹಿಸಿದ ಪುನೀತ್‍ಗೆ ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಆರಂಭದಲ್ಲಿಯೇ ಕಾರ್ ಚೇಸಿಂಗ್ ನಲ್ಲಿ ಪವರ್ ಸ್ಟಾರ್ ಮಾಸ್ ಎಂಟ್ರಿ ಅಭಿಮಾನಿಗಳ ಮೈಯಲ್ಲಿ ಮಿಂಚು ಹರಿಸುತ್ತೆ. ಇನ್ನು ಅಪ್ಪು ಫೈಟಿಂಗ್, ಯಾರೂ ಬೀಟ್ ಮಾಡಲು ಆಗದ ಸಕತ್ ಡ್ಯಾನ್ಸ್, ಜೇಮ್ಸ್ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅಪ್ಪುವಿನ ಧ್ವನಿಯನ್ನು ಕೊಂಚ ಮಿಸ್ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವಣ್ಣನ ಧ್ವನಿ ಕೊಂಚ ಸಮಾಧಾನ ಕೊಡುತ್ತೆ.

    ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು..! ರಿಯಲ್ ಲೈಫ್ ನಲ್ಲಿ ಚಾನ್ಸ್ ಕೊಡದ ವಿಧಿ.!: ರಿಯಲ್ ಲೈಫ್ ನಲ್ಲಿ ಕೊಂಚವೂ ವಿನಾಯಿತಿ ತೋರದಂತೆ ಅಪ್ಪುವನ್ನು ವಿಧಿ ಕಿತ್ತುಕೊಂಡಿತ್ತು. ಆದ್ರೆ ಸಿನಿಮಾದಲ್ಲಿ ಅಪ್ಪು ಇಪ್ಪತ್ತು ದಿನಗಳ ಕಾಲ ಐಸಿಯುನಲ್ಲಿದ್ದು ಸಾವು ಬದುಕಿನ ಮಧ್ಯೆ ಹೋರಾಡಿ ಸಾವು ಗೆಲ್ಲುವ ಸೀನ್ ಅಭಿಮಾನಿಗಳನ್ನು ಕಣ್ಣೀರಗಾಗಿಸಿತು. ನಿಜ ಜೀವನದಲ್ಲೂ ಹೀಗಾಗಬಾರದಾಗಿತ್ತೇ.., ಅಪ್ಪು ಒಂದು ಬಾರಿ ಎದ್ದು ಬರಬಾರದಿತ್ತೇ ಅಂತಾ ಅನಿಸುವಂತಿತ್ತು. ಅಭಿಮಾನಿಗಳ ಕಣ್ಮನ ತಣಿಸುವ ಪುನೀತ್ ಸಂಭ್ರಮ ಜೇಮ್ಸ್ ಜಾತ್ರೆಯನ್ನು ತಡಮಾಡದೇ ಕಣ್ತುಂಬಿಸಿಕೊಳ್ಳಿ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

  • ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ: ಸಿದ್ದರಾಮಯ್ಯ

    ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ: ಸಿದ್ದರಾಮಯ್ಯ

    ಬೆಂಗಳೂರು: ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಎಲ್ಲಾರು ಜೇಮ್ಸ್ ಚಿತ್ರ ನೋಡಿ. ನಾನು ಸಾಮಾನ್ಯವಾಗಿ ಚಲಚಿತ್ರ ನೋಡಲು ಥಿಯೇಟರ್ ಗೆ ಹೋಗಲ್ಲ. ಯಾರಾದರೂ ಒತ್ತಾಯ ಮಾಡಿ ಕರೆದಾಗ ಹೋಗಿದ್ದೇನೆ. ಸ್ವಲ್ಪ ನೋಡಿ ಎದ್ದು ಬಂದಿದ್ದು ಇದೆ. ಜೇಮ್ಸ್ ಚಿತ್ರ ನೋಡ್ತೀನಿ ಟಿವಿಯಲ್ಲಿ ಬಂದಾಗ ಎಂದರು. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಜೇಮ್ಸ್ ಸಿನಿಮಾಗೆ ಟ್ಯಾಕ್ಸ್ ವಿನಾಯಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಬೊಮ್ಮಾಯಿಗೆ ಅವರ ಮೇಲೆ ಪ್ರೀತಿ ಇದೆ. ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ. ಪುನೀತ್ ಜನಪ್ರಿಯ ನಾಯಕ. ರಾಜ್ ಕುಮಾರ್ ಇದ್ದಾಗ ನನ್ನನ್ನು ನಮ್ಮ ಕಾಡಿನವರು ಅಂತ ಹೇಳುತ್ತಿದ್ರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

  • ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.

    ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

  • ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ

    ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 3 ತಿಂಗಳು ಕಳೆದ್ರೂ ಇಂದಿಗೂ ಕೋಟ್ಯಂತರ ಮನಗಳು ಪುನೀತ್‍ಗಾಗಿ ಮಿಡಿಯುತ್ತಿವೆ.

    ಪುನೀತ್ ಅಗಲಿದ ಬಳಿಕ ಪ್ರತಿಮೆ ಸ್ಥಾಪನೆ ಮಾಡಿದ್ದು ಆಯ್ತು, ನೂರಾರು ಸಮಾಜ ಸೇವೆ ಮಾಡಿದ್ದೂ ಆಯ್ತು. ಇದೀಗ ಬೆಂಗಳೂರಿನ ಪುಲಕೇಶಿ ನಗರದ ಪಾಟರಿ ರಸ್ತೆಯಲ್ಲಿರೋ ಫೆದರ್ ಲೈಟ್ ಶಾಲೆ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗ್ತಿದ್ದು, ಇದಕ್ಕೆ ಅಪ್ಪು ಹೆಸರಿಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೀಗಾಗಿ ಕರ್ನಾಟಕ ಬಹುಜನ ಫೆಡರೇಷನ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಬಿಎಂಆರ್ ಸಿಎಲ್ ಗೂ ಪತ್ರ ಬರೆದಿದೆ. ಇದನ್ನೂ ಓದಿ: ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ

    ಮನವಿ ಪುರಸ್ಕರಿಸಿ ವಿಚಾರ ಮಾಡೋದಾಗಿ ಪ್ರಧಾನಿ ಕಚೇರಿ ಉತ್ತರ ಕೊಟ್ರೆ, ಇತ್ತ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಛೋಪ್ರಾ ಕೂಡ ಅಪ್ಪು ಹೆಸರಿಡೋದಾಗಿ ಭರವಸೆ ನೀಡಿದ್ದಾರೆ. ಆದರೆ ಬಿಬಿಎಂಪಿ, ಬಿಡಿಎಜೊತೆ ಚರ್ಚಿಸಿ ಬಿಎಂಆರ್ ಸಿಎಲ್ ಒಪ್ಪಿಗೆ ಪಡೆಯಬೇಕಿದೆ. ಇದಾದ ಬಳಿಕ ಕಮಿಟಿ ಓಕೆ ಅಂದ್ರೆ ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತೆ.