Tag: ಪವನ್ ಖೇರಾ

  • ಪವನ್‌ ಖೇರಾ ಬಳಿ 2 ವೋಟರ್‌ ಐಡಿ – ಬಿಜೆಪಿ ಬಾಂಬ್‌, EC ನೋಟಿಸ್‌ ಜಾರಿ

    ಪವನ್‌ ಖೇರಾ ಬಳಿ 2 ವೋಟರ್‌ ಐಡಿ – ಬಿಜೆಪಿ ಬಾಂಬ್‌, EC ನೋಟಿಸ್‌ ಜಾರಿ

    ನವದೆಹಲಿ: ಮತ ಕಳ್ಳತನ (Vote Chori) ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್‌ ಬಾಂಬ್‌ ಹಾಕಲಾಗುವುದು ಎಂದು ರಾಹುಲ್‌ ಗಾಂಧಿ ಹೇಳಿದ ಮರುದಿನವೇ ಬಿಜೆಪಿ ಈಗ ಕಾಂಗ್ರೆಸ್‌ ವಿರುದ್ಧವೇ ಬಾಂಬ್‌ ಹಾಕಿದೆ.

    ರಾಹುಲ್‌ ಗಾಂಧಿ (Rahul Gandhi) ಆಪ್ತ ಪವನ್‌ ಖೇರಾ ಎರಡು ಕಡೆ ವೋಟರ್‌ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ದೂರಿನ ಬೆನ್ನಲ್ಲೇ ಪವನ್ ಖೇರಾ(Pawan Khera) ಅವರಿಗೆ ಚುನಾವಣಾ ಆಯೋಗ (Election Commission) ನೋಟಿಸ್‌ ನೀಡಿ ಶಾಕ್‌ ನೀಡಿದೆ.

    ದೆಹಲಿಯಲ್ಲಿ ಎರಡು ಕಡೆ ವೋಟರ್‌ ಐಡಿ ಹೊಂದಿರುವುದಕ್ಕೆ ಚುನಾವಣಾ ಆಯೋಗ ಖೇರಾಗೆ ನೋಟಿಸ್‌ ನೀಡಿದೆ. ಎರಡು ಕಡೆ ವೋಟರ್‌ ಐಡಿ ಹೊಂದಿರುವುದು 1950ರ ಜನಪ್ರತಿನಿಧಿ ಕಾಯ್ದೆಯ ಅಡಿ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸೆಪ್ಟೆಂಬರ್ 8 ರ ಸೋಮವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾಗೆ ಪಕ್ಷದಿಂದ ಗೇಟ್ಪಾಸ್

    ನವದೆಹಲಿ ಮತ್ತು ಜಂಗ್ಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪವನ್ ಖೇರಾ ಹೆಸರಿದೆ ಎಂದು ಬಿಜೆಪಿ ದಾಖಲೆಯನ್ನು ಇರಿಸಿ ಗಂಭೀರ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

    ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್‌ ಮಾಳವೀಯ ಎಕ್ಸ್‌ನಲ್ಲಿ ಪವನ್‌ ಖೇರಾ ಎರಡು ವೋಟರ್‌ ಐಡಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಪವನ್ ಖೇರಾ ಎರಡು ಸಕ್ರಿಯ EPIC ಸಂಖ್ಯೆಗಳನ್ನು ಹೇಗೆ ಹೊಂದಿದ್ದಾರೆ? ಅವರು ಹಲವು ಬಾರಿ ಮತ ಚಲಾಯಿಸಿದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಈಗ ಚುನಾವಣಾ ಆಯೋಗದ ಜವಾಬ್ದಾರಿ.  ಇದು ಚುನಾವಣಾ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

  • ಕಾಂಗ್ರೆಸ್‌ ಯೂ-ಟರ್ನ್‌ – Exit Polls ಚರ್ಚೆಗಳಲ್ಲಿ INDIA ಒಕ್ಕೂಟ ಭಾಗವಹಿಸುತ್ತೆ: ಪವನ್‌ ಖೇರಾ

    ಕಾಂಗ್ರೆಸ್‌ ಯೂ-ಟರ್ನ್‌ – Exit Polls ಚರ್ಚೆಗಳಲ್ಲಿ INDIA ಒಕ್ಕೂಟ ಭಾಗವಹಿಸುತ್ತೆ: ಪವನ್‌ ಖೇರಾ

    ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election) ಸಂಬಂಧಿಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ (Exit Polls) ಭಾಗವಹಿಸಲು INDIA ಒಕ್ಕೂಟ ನಿರ್ಧರಿಸಿದೆ.

    ಇಂದು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸಲ್ಲಿ INDIA ಒಕ್ಕೂಟದ ಸದಸ್ಯರು ಭಾಗವಹಿಸಿ ಸಭೆ ನಡೆಸಿದರು. ಸಭೆಯ ಬಳಿಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಭಾಗವಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ (Pawan Khera), ಸಭೆಯ ನಂತರ ಮೊದಲೇ ಪೂರ್ವ ನಿರ್ಧರಿತವಾಗಿರುವ ಎಕ್ಸಿಟ್‌ ಪೋಲ್‌ ಮತ್ತು ಬಿಜೆಪಿ ವ್ಯವಸ್ಥೆಯನ್ನು ಬಹಿರಂಗ ಪಡಿಸಲು ನಾವು ನಿರ್ಧರಿಸಿದ್ದೇವೆ. ಮೈತ್ರಿಯ ಎಲ್ಲಾ ಪಕ್ಷಗಳು ಇಂದು ಸಂಜೆ ವಾಹಿನಿಗಳ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸುತ್ತವೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಶುಭ ಸುದ್ದಿ; ಪಿಒಕೆ ದೇಶದ ಅವಿಭಾಜ್ಯ ಅಂಗವಲ್ಲ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್!

    ಶುಕ್ರವಾರ ಪೋಸ್ಟ್‌ ಮಾಡಿದ್ದ ಪವನ್‌ ಖೇರಾ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಮತ ಚಲಾಯಿಸಿದ್ದು, ತೀರ್ಪು ಭದ್ರವಾಗಿದೆ. ಚುನಾವಣೋತ್ತರ ಸಮೀಕ್ಷೆ ಚರ್ಚೆಯಲ್ಲಿ (Debate) ನಾವು ಭಾಗವಹಿಸುವುದಿಲ್ಲ. ಜೂನ್ 4 ರಿಂದ ನಾವು ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ. ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದು ಆಗಿರಬೇಕು. ಆದರೆ ಆರ್‌ಪಿಗಾಗಿ ಊಹಾಪೋಹ ಮತ್ತು ಸ್ಲಗ್‌ಫೆಸ್ಟ್‌ನಲ್ಲಿ ಪಾಲ್ಗೊಳ್ಳಲು ನಮಗೆ ಇಷ್ಟವಿಲ್ಲ ಎಂದು ಬರೆದುಕೊಂಡಿದ್ದರು.

     

  • Exit Polls ಚರ್ಚೆಗಳಲ್ಲಿ ಭಾಗವಹಿಸಲ್ಲ: ಕಾಂಗ್ರೆಸ್‌ ಅಧಿಕೃತ ಪ್ರಕಟಣೆ

    Exit Polls ಚರ್ಚೆಗಳಲ್ಲಿ ಭಾಗವಹಿಸಲ್ಲ: ಕಾಂಗ್ರೆಸ್‌ ಅಧಿಕೃತ ಪ್ರಕಟಣೆ

    ನವದೆಹಲಿ: ಚುನಾವಣೋತ್ತರ ಸಮೀಕ್ಷೆ(Exit Polls) ಚರ್ಚೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್‌ (Congress) ಅಧಿಕೃತವಾಗಿ ತಿಳಿಸಿದೆ.

    ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ (Pawan Khera) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಮತ ಚಲಾಯಿಸಿದ್ದು, ತೀರ್ಪು ಭದ್ರವಾಗಿದೆ. ಚುನಾವಣೋತ್ತರ ಸಮೀಕ್ಷೆ ಚರ್ಚೆಯಲ್ಲಿ (Debate) ನಾವು ಭಾಗವಹಿಸುವುದಿಲ್ಲ. ಜೂನ್ 4 ರಿಂದ ನಾವು ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

    ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದು ಆಗಿರಬೇಕು. ಆದರೆ ಆರ್‌ಪಿಗಾಗಿ ಊಹಾಪೋಹ ಮತ್ತು ಸ್ಲಗ್‌ಫೆಸ್ಟ್‌ನಲ್ಲಿ ಪಾಲ್ಗೊಳ್ಳಲು ನಮಗೆ ಇಷ್ಟವಿಲ್ಲ ಎಂದು ಬರೆದುಕೊಂಡಿದ್ದಾರೆ.

    ಲೋಕಸಭಾ ಚುನಾವಣೆಯ ಕೊನೆಯ ಮತ್ತು 7ನೇ ಹಂತದ ಮತದಾನ ಶನಿವಾರ ನಡೆಯಲಿದೆ. ನಾಳೆ ಸಂಜೆ 6 ಗಂಟೆಯ ನಂತರ ಮಾಧ್ಯಮಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿದೆ.

     

  • ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ: ಅಸ್ಸಾಂ ಸಿಎಂ

    ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ: ಅಸ್ಸಾಂ ಸಿಎಂ

    ದಿಸ್ಪುರ್: ಕಾಂಗ್ರೆಸ್ ಮುಖಂಡ ಪವನ್ ಖೇರಾ (Pawan Khera) ಅವರ ಬಂಧನ ಹಾಗೂ ಬಿಡುಗಡೆಯ ಬಳಿಕ ಅವರು ನೀಡಿದ್ದ ಹೇಳಿಕೆಗೆ ಬೆಷರತ್ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರು ಗೌರವಕ್ಕೆ ಧಕ್ಕೆ ಬರುವಂತಹ ಯಾವ ಪದಗಳನ್ನು ಬಳಸುವದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಶುಕ್ರವಾರ ಟ್ವೀಟ್ ಮಾಡಿದ್ದಾರೆ.

    ರಾಯ್‍ಪುರದ (Raipur) ಕಾಂಗ್ರೆಸ್ ಮಾಹಾಧಿವೇಶನಕ್ಕೆ (Congress plenary session) ತೆರಳಲು ವಿಮಾನವೇರಿದ್ದ ಪವನ್ ಖೇರಾ ಅವರನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದರು. ಖೇರಾ ಅವರ ವಿರುದ್ಧ ಕ್ರಿಮಿನಲ್ ಸಂಚು, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕೋಮು ಸೌಹಾರ್ದತೆಗೆ ಪ್ರಚೋದಿಸಿದ ಆರೋಪ ದಾಖಲಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಐಜಿಪಿ ಮತ್ತು ವಕ್ತಾರ ಪ್ರಶಾಂತ ಕುಮಾರ್ ಭುಯಾನ್ ತಿಳಿಸಿದ್ದರು. ಇದನ್ನೂ ಓದಿ: ಸಿಟಿ ರವಿಗೆ ಮೂಳೆ ಬಿರಿಯಾನಿ, ಚಿಕನ್ ಪಾರ್ಸೆಲ್ ಮಾಡಿದ ಕೈ ಪಡೆ

     ಮುಂಬೈನ ಪತ್ರಿಕಾಗೋಷ್ಠಿಯೊಂದರಲ್ಲಿ ಫೆ.17ರಂದು ಖೇರಾ, ನರೇಂದ್ರ ಗೌತಮ್‍ದಾಸ್ ಮೋದಿ ಎಂದು ಉಚ್ಛರಿಸಿ ಬಳಿಕ ನರೇಂದ್ರ ದಾಮೋದರ ದಾಸ್ ಮೋದಿ (Narendra Modi) ಎಂದಿದ್ದರು. ಅಸ್ಸಾಂ ಪೊಲೀಸರು ಬಂಧಿಸಿದ ಕೂಡಲೇ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ತುರ್ತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಕೈ ನಾಯಕ ಪವನ್ ಖೇರಾಗೆ ಮಧ್ಯಂತರ ಜಾಮೀನು

    ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಕೈ ನಾಯಕ ಪವನ್ ಖೇರಾಗೆ ಮಧ್ಯಂತರ ಜಾಮೀನು

    ನವದೆಹಲಿ: ಕೆಲವೇ ಗಂಟೆಗಳ ಹಿಂದೆ ಅಸ್ಸಾಂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾಗೆ ಸುಪ್ರೀಂಕೋರ್ಟ್ (SupremeCourt) ಜಾಮೀನು ನೀಡಿದೆ. ಜಾಮೀನು (Bail) ಕೋರಿ ಅರ್ಜಿ ಸಲ್ಲಿಸುವವರೆಗೂ ಮಧ್ಯಂತರ ಜಾಮೀನು ನೀಡಲು ದ್ವಾರಕ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    ಇಂದು ದೆಹಲಿ ವಿಮಾನ ನಿಲ್ದಾಣ (Delhi Airport) ದಲ್ಲಿ ಪವನ್ ಖೇರಾ ಅವರನ್ನು ಬಂಧಿಸುತ್ತಿದ್ದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರವನ್ನು ಪ್ರಸ್ತಾಪಿಸಲಾಯಿತು. ಸಿಜೆಐ ಚಂದ್ರಚೂಡ್ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ (Abhishek Manu Singhvi) ದೇಶದ್ಯಾಂತ ದಾಖಲಾಗುತ್ತಿರುವ ಎಫ್‍ಐಆರ್‍ಗಳನ್ನು ಒಂದೂಗೂಡಿಸಬೇಕು ಮತ್ತು ಖೇರಾಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.

    ವಾದ ಆಲಿಸಿದ ಬಳಿಕ ಸಿಜೆಐ ಪೀಠ ಮಧ್ಯಂತರ ಜಾಮೀನು ನೀಡಲು ಸೂಚಿಸಿ, ಎಫ್‍ಐಆರ್ ಗಳನ್ನು ಕ್ಲಬ್ ಮಾಡುವ ಅಭಿಪ್ರಾಯ ತಿಳಿಸುವಂತೆ ಅಸ್ಸಾಂ ಮತ್ತು ಉತ್ತರಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ವಿಚಾರಣೆ ವೇಳೆಗೆ ಉತ್ತರಿಸಲು ಪೀಠ ಸೂಚಿಸಿದೆ. ಇದನ್ನೂ ಓದಿ: 1.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಜೀನ್ಸ್ – ಜೈಲಿನಲ್ಲಿ ಸುಕೇಶ್ ಐಷಾರಾಮಿ ಜೀವನ

    ಪವನ್ ಖೇರಾ ವಿರುದ್ಧ ಐಪಿಸಿ ಸೆಕ್ಷನ್ 153 ಎ ಧರ್ಮ, ಜನಾಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೆಕ್ಷನ್ 295 ಎ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಅಪರಾಧಗಳನ್ನು ದಾಖಲಿಸಲಾಗಿದೆ.

    ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ, ಪವನ್ ಖೇರಾ (Pawan Khera) ಅದಾನಿ-ಹಿಂಡೆನ್‍ಬರ್ಗ್ ಪ್ರಕರಣವನ್ನು ಬಗ್ಗೆ ಜಂಟಿ ಸಂಸದೀಯ ತನಿಖೆಗೆ ನೀಡಬೇಕು ಎಂದು ಒತ್ತಾಯಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್ ಅವರಿಗೆ ಏನು ಸಮಸ್ಯೆ? ಕ್ಷಮಿಸಿ ದಾಮೋದರದಾಸ್ ಮೋದಿಗೆ? ಎಂದು ಖೇರಾ ಹೇಳಿದ್ದರು. ನಂತರ ಅವರು ಮಧ್ಯದ ಹೆಸರನ್ನು ಸಹೋದ್ಯೋಗಿಯೊಂದಿಗೆ ದೃಢೀಕರಿಸಿಕೊಂಡರು.

    ಖೇರಾ ಅವರು ಉದ್ದೇಶಪೂರ್ವಕವಾಗಿ ಹೆಸರನ್ನು ತೇಲಿಬಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಅಸ್ಸಾಂ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುತ್ತಿದೆ. ಅಸ್ಸಾಂನಲ್ಲಿ ದಾಖಲಾದ ಎಫ್‍ಐಆರ್ ಅನ್ವಯ ಅವರನ್ನು ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ರಾಯ್‍ಪುರಕ್ಕೆ ಕಾಂಗ್ರೆಸ್ ನಾಯಕರು ತೆರಳುವ ವೇಳೆ ವಿಮಾನದಿಂದ ಇಳಿಸಿ ಅವರನ್ನು ಪೊಲೀಸರು ಬಂಧಿಸಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k