Tag: ಪವನ್ ಕುಮಾರ್

  • ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರ ಸಾಮ್ರಾಟ್’ (Dheera Samrat) ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ ಕುಮಾರ್(ಪಚ್ಚಿ) (Pawan Kumar) ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಸರದಿಯಂತೆ ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕರು “ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‌ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವ ಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಎಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ಸಾವಿಗೆ ಸಾವಿಲ್ಲ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೆ ಸಮಾಜದಲ್ಲಿ ಯಾವುದೋ ಒಂದು  ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ” ಎಂದರು.

    ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು, ಯಾತಕ್ಕೆ ಈ ಟೈಟಲ್ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಕೊನೆಯಲ್ಲಿ ಮಾತನಾಡಿದ ಧ್ರುವ ಸರ್ಜಾ, “ಸಿನಿಮಾ ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು. ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ಅದ್ದೂರಿ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂಥವರನ್ನು ಬೆಳೆಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ.  ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ” ಎಂದು ಮಾತಿಗೆ ವಿರಾಮ ಹಾಕಿದರು.

    ತಾರಾಗಣದಲ್ಲಿ ಶಂಕರ ಭಟ್, ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‌ ಭಟ್, ಯತಿರಾಜ್, ಮನಮೋಹನ್‌ ರೈ, ಇಂಚರ, ಸಂಕಲ್ಪ್‌ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‌ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ ಹಾಗೂ ಅರುಣ್‌ಸುರೇಶ್, ಸಂಕಲನ ಸತೀಶ್‌ ಚಂದ್ರಯ್ಯ, ಹಿನ್ನಲೆ ಶಬ್ದ ವಿನು ಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವ ವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • Hombale Films ನಿರ್ಮಾಣದ  ‘ಧೂಮಂ’ ಫಸ್ಟ್ ಲುಕ್ ಔಟ್

    Hombale Films ನಿರ್ಮಾಣದ ‘ಧೂಮಂ’ ಫಸ್ಟ್ ಲುಕ್ ಔಟ್

    ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್- ಫಹಾದ್ ಫಾಸಿಲ್ ಕಾಂಬಿನೇಷನ್ ‘ಧೂಮಂʼ ಸಿನಿಮಾ ಫಸ್ಟ್ ಲುಕ್ ಇದೀಗ ಹೊಂಬಾಳೆ ಫಿಲ್ಮ್ಸ್ (Hombale Films) ರಿವೀಲ್ ಮಾಡಿದೆ. ಪೋಸ್ಟರ್ ಲುಕ್‌ನಿಂದ ‘ಧೂಮಂ’ ಸಿನಿಮಾ ಗಮನ ಸೆಳೆಯುತ್ತಿದೆ.

    ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನಿರ್ಮಾಣದ ಕೆಜಿಎಫ್. ಕೆಜಿಎಫ್ 2, ಕಾಂತಾರ ಸಿನಿಮಾ ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸದ್ದು ಮಾಡ್ತಿದೆ. ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರ ‘ಧೂಮಂ’ (Dhoomam) ಸಿನಿಮಾಗೆ ಸಾಥ್ ನೀಡಿದೆ. ಈ ಚಿತ್ರವನ್ನ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್‌ ಕುಮಾರ್ (Pawan Kumar) ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಫಹಾದ್ ಫಾಸಿಲ್ – ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ (Aparna Balamurali) ನಟನೆಯ ‘ಧೂಮಂ’ ಸಿನಿಮಾದ ಫಸ್ಟ್ ಲುಕ್ ಏ.17ರಂದು ರಿವೀಲ್ ಆಗಿದೆ. ಡಿಫರೆಂಟ್ ಕಂಟೆಂಟ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ತಮಿಳು ಭಾಷೆಯಲ್ಲೂ ಚಿತ್ರ ಮೂಡಿ ಬಂದಿದೆ. ಇದನ್ನೂ ಓದಿ:ಬಿರುಕಿನ ಸಂಬಂಧಕ್ಕೆ ‘ಮಾವು-ಬೇವು’ ಸಿನಿಮಾ ಅಮೃತ ದಾರ

     

    View this post on Instagram

     

    A post shared by Hombale Films (@hombalefilms)

    ಪೋಸ್ಟರ್ ಫಸ್ಟ್ ಲುಕ್‌ನಲ್ಲಿ ನಟ ಫಹಾದ್, ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಲುಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಕಿಯಿಲ್ಲದೇ ಹೊಗೆ ಇಲ್ಲ, ಇಲ್ಲಿ ಮೊದಲ ಕಿಡಿ ಎಂದು ಅಡಿಬರಹದೊಂದಿಗೆ ಚಿತ್ರದ ಲುಕ್ ರಿವೀಲ್ ಮಾಡಲಾಗಿದೆ.

    ಪವನ್ ಕುಮಾರ್ ಕೂಡ ವಿಭಿನ್ನ ಕಥೆಯನ್ನ ಫಹಾದ್- ಅಪರ್ಣಾ ಜೋಡಿಯೊಂದಿಗೆ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ‘ಧೂಮಂʼ ಸಿನಿಮಾ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಎರಡನೇ ತಿಂಗಳಿಗೆ ಧೂಮಂ ಶೂಟಿಂಗ್ ಮುಗಿಸಿದ ಹೊಂಬಾಳೆ ಫಿಲ್ಮ್ಸ್

    ಎರಡನೇ ತಿಂಗಳಿಗೆ ಧೂಮಂ ಶೂಟಿಂಗ್ ಮುಗಿಸಿದ ಹೊಂಬಾಳೆ ಫಿಲ್ಮ್ಸ್

    ಲೂಸಿಯಾ ಪವನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಲಯಾಳಂ ‘ಧೂಮಂ’ ಸಿನಿಮಾ ಕೇವಲ ಎರಡೇ ಎರಡು ತಿಂಗಳಲ್ಲಿ ಚಿತ್ರೀಕರಣ ಮುಗಿಸಿದೆ. ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ತಮ್ಮ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ ಎಂದು ಘೋಷಿಸಿದ್ದಾರೆ. ಈಗಾಗಲೇ ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಸಾಲಿಗೆ ಧೂಮಂ ಕೂಡ ಸೇರಿಕೊಂಡಿದೆ.

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಾಹದ್ ಫಾಸಿಲ್ ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣ ಬಾಲಮುರಳಿ ಜೊತೆಯಾಗಿದ್ದಾರೆ. ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾ ಕೂಡ ಇನ್ನೇನು ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಶ್ರೀಮುರುಳಿ ನಟನೆಯ ಬಘೀರ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಯುವ ರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಇನ್ನಷ್ಟೇ ಶೂಟಿಂಗ್ ಶುರು ಮಾಡಬೇಕು. ಜೊತೆಗೆ ತಮಿಳು ಮತ್ತು ಹಿಂದಿಯಲ್ಲೂ ಸಿನಿಮಾ ಮಾಡುವುದಾಗಿ ಹೊಂಬಾಳೆ ಘೋಷಣೆ ಮಾಡಿದೆ.

    ಐದು ವರ್ಷದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಂಡವಾಳವನ್ನು ಸಿನಿಮಾ ರಂಗದಲ್ಲಿ ಹೂಡುವುದಾಗಿ ಹೇಳಿರುವ ನಿರ್ಮಾಪಕ ವಿಜಯ ಕಿರಗಂದೂರು, ಈಗಾಗಲೇ ಹಲವು ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಕಾಂತಾರ 2 ಸಿನಿಮಾ ಮಾಡಲು ಯೋಜನೆ ಈಗಾಗಲೇ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ 3 ಸಿನಿಮಾ ಕೂಡ ಶುರು ಮಾಡಲಿದ್ದಾರಂತೆ. ಅಲ್ಲದೇ, ಬಾಲಿವುಡ್ ನಲ್ಲಿ ಸ್ಟಾರ್ ನಟನ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನುವುದು ಹೊಸ ವರ್ತಮಾನ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಧೂಮಂ’ ಸೆಟ್ ಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು

    ‘ಧೂಮಂ’ ಸೆಟ್ ಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು

    ಹೊಂಬಾಳೆ ಫಿಲಂಸ್​ನಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ‘ಧೂಮಂ’ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಜಯ್ ಕುಮಾರ್​ ಕಿರಗಂದೂರು, ರಿಷಭ್​ ಶೆಟ್ಟಿ, ಸಪ್ತಮಿ ಗೌಡ ಮುಂತಾದವರು ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಚಿತ್ರೀಕರಣದಲ್ಲಿ ಫಹಾದ್​ ಫಾಸಿಲ್​, ಅಪರ್ಣಾ ಬಾಲಮುರಳಿ ಮತ್ತಿತರರು ಭಾಗವಹಿಸಿದ್ದು ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.

    ‘ಧೂಮಂ’ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ. ಇದನ್ನೂ ಓದಿ: ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಒಂದು ವಾರಗಳಿಂದ ಸತತವಾಗಿ ಚಿತ್ರೀಕರಣವಾಗುತ್ತಿದ್ದು, ಫಹಾದ್ ಫಾಸಿಲ್ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ನಡೆದ ಕಾಂತಾರ ಸಿನಿಮಾದ 50 ದಿನದ ಸಂಭ್ರಮದಲ್ಲೂ ಫಾಸಿಲ್ ಭಾಗಿಯಾಗಿದ್ದರು. ಅಲ್ಲದೇ, ಸಿನಿಮಾದ ಬಗ್ಗೆ ಈ ಹಿಂದೆಯೂ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಾಳೆಯೇ ಜೀ ಕನ್ನಡದಲ್ಲಿ ಯೋಗರಾಜ್ ಭಟ್ಟರ ‘ಗಾಳಿಪಟ 2 ‘ ಹಾರಾಟ

    ನಾಳೆಯೇ ಜೀ ಕನ್ನಡದಲ್ಲಿ ಯೋಗರಾಜ್ ಭಟ್ಟರ ‘ಗಾಳಿಪಟ 2 ‘ ಹಾರಾಟ

    ಗಾಳಿಪಟ 2 (Gaalipata 2) ಈ ವರ್ಷ ಬಿಡುಗಡೆಗೊಂಡು ಭರ್ಜರಿಯಾಗಿ ಪ್ರೇಕ್ಷಕರ ಮನಗೆದ್ದ ಸೂಪರ್ ಹಿಟ್ ಸಿನಿಮಾ. ಕನ್ನಡ ಭಾಷಾ ವಿಶೇಷತೆ , ಅಸ್ಮಿತೆಯನ್ನು ಸಾರುವ ಈ ಚಿತ್ರ ಇದೇ ಶನಿವಾರ ಮತ್ತು ಭಾನುವಾರ ಸಂಜೆ 4:30ಕ್ಕೆ ಕನ್ನಡದ ನವೆಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.

    ತನ್ನ ವೀಕ್ಷಕರಿಗೆ ವಿಶೇಷ ಕಾರ್ಯಕ್ರಮಗಳು ನೀಡುವುದರ ಮೂಲಕ ಸದಾ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿ ಈಗಾಗಲೇ ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ಪ್ರಸಾರ ಮಾಡಿದ್ದು ಇದೀಗ ಗಾಳಿಪಟ 2 ಚಲನಚಿತ್ರವನ್ನು ತನ್ನ ವೀಕ್ಷಕರ ಮುಂದಿಡಲು ಸಜ್ಜಾಗಿದೆ. ಇದನ್ನೂ ಓದಿ:Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    ವಿಕಟ ಕವಿ, ಯೋಗರಾಜ್ ಭಟ್ (Yogaraj Bhatt) ನಿರ್ದೇಶನವಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) , ದಿಗಂತ್ (Diganth), ಪವನ್ ಕುಮಾರ್ (Pawan Kumar), ಹಿರಿಯನಟ ಅನಂತ್ ನಾಗ್ (Ananth Nag) , ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜನೆ ಮಾಡಿದ್ದು ಹಾಡುಗಳು ಸಂಗೀತಪ್ರಿಯರ ಹೃದಯಕ್ಕೆ ಹತ್ತಿರವಾಗಿರುವುದು ವಿಶೇಷ.

    ಅಳು, ನಗು ಸಂಬಂಧಗಳ ಮೌಲ್ಯವನ್ನು ತಿಳಿಸುವ ಬದುಕಿನ ಭಾವುಕತೆ ತೆರೆದಿಡುತ್ತಲೇ ತಾಜಾ ಅನುಭವ ನೀಡುವ ಸಿನಿಮಾ ಇದ್ದಾಗಿದ್ದು ಬಾಕ್ಸ್ ಆಫೀಸ್‌ನ್ನೂ ಲೂಟಿ ಮಾಡಿತ್ತು. ಅಷ್ಟೇ ಅಲ್ಲದೆ ಜೀ5 ನಲ್ಲೂ 100Cr+ ವೀಕ್ಷಣೆ ಪಡೆದ ಚಲನಚಿತ್ರವಾಗಿದೆ ಈ ಗಾಳಿಪಟ 2. ಇನ್ನೂ ಇದೇ ಶನಿವಾರ ಮತ್ತು ಭಾನುವಾರ ಸಂಜೆ 4:30ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಹೊಂಬಾಳೆ ಬ್ಯಾನರ್‌ನ (Hombale Films) ಬಹುನಿರೀಕ್ಷಿತ ‘ಧೂಮ್’ (Dhoom) ಚಿತ್ರದ ಅದ್ಧೂರಿ ಮುಹೂರ್ತ ನೆರವೇರಿದೆ. ಪವನ್ ಕುಮಾರ್ (Pawan Kumar) ಮತ್ತು ಸೌತ್ ಸ್ಟಾರ್ ಫಾಸಿಲ್ (Fahadh Faasil) ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

     

    View this post on Instagram

     

    A post shared by Hombale Films (@hombalefilms)

    ಸಾಕಷ್ಟು ಸಿನಿಮಾಗಳನ್ನ ಅದರಲ್ಲೂ ಕೆಜಿಎಫ್ (KGF) ಅಂತಹ ಅದ್ಭುತ ಚಿತ್ರವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಬ್ಯಾನರ್‌ನಲ್ಲಿ ‘ಧೂಮ್’ ಸಿನಿಮಾ ಮೂಡಿ ಬರುತ್ತಿದೆ. ʼಪುಷ್ಪʼ ಸ್ಟಾರ್ ಫಹಾದ್ ಫಾಸಿಲ್‌ಗೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಧೂಮ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಇದನ್ನೂ ಓದಿ: `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ

    ಈ ಚಿತ್ರದ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಪರ್ಣಾ ಬಾಲಮುರಳಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡಕ್ಕೆ ಶುಭಹಾರೈಸಲು ಪ್ರಶಾಂತ್ ನೀಲ್ ಕೂಡ ಪಾಲ್ಗೊಂಡಿದ್ದಾರೆ.

    ಅಪ್ಪುಗಾಗಿ ಮಾಡಿರುವ ಕಥೆಯಲ್ಲಿ ಫಾಸಿಲ್ ನಟಿಸುತ್ತಿದ್ದಾರಾ ಅಥವಾ ಫಾಸಿಲ್‌ಗೆ ಬೇರೆಯದ್ದೇ ಕಥೆಯನ್ನ ಪವನ್ ಕುಮಾರ್ ಸಿದ್ಧಪಡಿಸಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮನೆಯಲ್ಲಿ ಮಾಡಿದ ಛತ್ರಿ ಕೆಲಸದ ಬಗ್ಗೆ ಬಾಯ್ಬಿಟ್ಟ ಅಮೂಲ್ಯ ಗೌಡ

    Live Tv
    [brid partner=56869869 player=32851 video=960834 autoplay=true]

  • ಒಟಿಟಿಯಲ್ಲೂ ಕಮಾಲ್ ಮಾಡಿದ ಗಣಿ ಅಂಡ್ ಭಟ್ರ ಗಾಳಿಪಟ 2 ಕಾಂಬಿನೇಶನ್

    ಒಟಿಟಿಯಲ್ಲೂ ಕಮಾಲ್ ಮಾಡಿದ ಗಣಿ ಅಂಡ್ ಭಟ್ರ ಗಾಳಿಪಟ 2 ಕಾಂಬಿನೇಶನ್

    ಗೋಲ್ಡನ್ ಸ್ಟಾರ್ ಗಣೇಶ್’ (Ganesh), ಯೋಗರಾಜ್ ಭಟ್ ಹಿಟ್ ಕಾಂಬಿನೇಶನ್ ಒಳಗೊಂಡ ‘ಗಾಳಿಪಟ-2’ ಸಿನಿಮಾ ತೆರೆಮೇಲೆ ಮೋಡಿ ಮಾಡಿತ್ತು. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಚಿತ್ರಕ್ಕೆ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆಕಂಡ  ‘ಗಾಳಿಪಟ 2′ ಸಿನಿಮಾ ಹೊಸ ದಾಖಲೆ ಬರೆದಿತ್ತು. ಸ್ನೇಹ, ಪ್ರೇಮ, ವಿರಹ, ತ್ಯಾಗ ಒಳಗೊಂಡ ಸಿನಿಮಾ ಚಿತ್ರಮಂದಿರದ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ದಸರಾ ಹಬ್ಬಕ್ಕೆ ಜೀ5 ಒಟಿಟಿಗೆ ಕಾಲಿಟ್ಟಿದ್ದ ಗಣಿ ಗ್ಯಾಂಗ್ ಕಡಿಮೆ ಅವಧಿಯಲ್ಲಿ ಇಲ್ಲೂ ಕೂಡ ದಾಖಲೆ ಬರೆದಿದೆ.

    ಹೌದು, ದಸರಾ ಹಬ್ಬಕ್ಕೆ ‘ಗಾಳಿಪಟ-2’ ಜೀ5 ಒಟಿಟಿಗೆ ಲಗ್ಗೆ ಇಟ್ಟಿತ್ತು. ಬಿಡುಗಡೆಯಾದ 48 ಗಂಟೆಯಲ್ಲಿ ಗಾಳಿಪಟ-2 (Galipata 2)ಸಿನಿಮಾ ದಾಖಲೆ ಬರೆದಿದೆ.  ಕೇವಲ 48 ಗಂಟೆಯಲ್ಲಿ ಬರೋಬ್ಬರಿ 10ಕೋಟಿ ಸ್ಟ್ರೀಮಿಂಗ್ ಮಿನಿಟ್ ಕಂಡಿದೆ. ಈ ಮೂಲಕ ಗಣಿ ಅಂಡ್ ಭಟ್ರ (Yogaraj Bhatt) ಕಾಂಬಿನೇಶನ್ ಒಟಿಟಿಯಲ್ಲೂ ಹೊಸ ದಾಖಲೆ ಬರೆದು ಕಮಾಲ್ ಮಾಡಿದೆ.

    ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ (Digant) ಹಾಗೂ ನಿರ್ದೇಶಕ ಪವನ್ ಕುಮಾರ್ (Pawan Kumar)ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಹಿರಿಯ ನಟ ಅನಂತ್ ನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರ ತಾರಾಬಳಗವಿದೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕಿದ್ದು, ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿದ್ದ ಗಾಳಿಪಟ 2 ಸಿನಿಮಾ ಚಿತ್ರಮಂದಿರ ಹಾಗೂ ಒಟಿಟಿ ಎರಡೂ ಕಡೆ ದಾಖಲೆ ಬರೆದಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

    ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

    ಲೂಸಿಯಾ ಖ್ಯಾತಿಯ ಪವನ್ ಕುಮಾರ್ (Pawan Kumar) ಮತ್ತು ಮಲಯಾಳಂ ಹೆಸರಾಂತ ನಟ ಫಹಾದ್ ಫಾಸಿಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಮೊದಲ ಬಾರಿಗೆ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಅದೀಗ ನಿಜವಾಗಿದೆ. ಈ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿನ್ನೆಯಷ್ಟೇ ಹೊಸ ಸುದ್ದಿಯೊಂದನ್ನು ಕೊಡಲಿದ್ದೇವೆ ಎಂದು ಹೊಂಬಾಳೆ ಹೇಳಿಕೊಂಡಿತ್ತು.

    ಅಂದುಕೊಂಡಂತೆ ಆಗಿದ್ದರೆ, ಪವನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ದ್ವಿತ್ವ ಸಿನಿಮಾ ಆಗಬೇಕಿತ್ತು. ಪುನೀತ್ ಅವರ ಹಠಾತ್ ನಿಧನದಿಂದಾಗಿ ದ್ವಿತ್ವ ಸೆಟ್ಟೇರಲಿಲ್ಲ. ಈಗ ಅದೇ ಕಥೆಯನ್ನು ಫಾಸಿಲ್ ಗೆ ಮಾಡಲಿದ್ದಾರಾ ಅಥವಾ ಬೇರೆ ಕಥೆಯನ್ನು ಪವನ್ ಆಯ್ಕೆ ಮಾಡಿಕೊಂಡಿದ್ದಾರಾ ಅವರೇ ಹೇಳಬೇಕು. ಒಟ್ಟಿನಲ್ಲಿ ಫಾಸಿಲ್ ಗಾಗಿ ಪವನ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಧೂಮ್ (Dhoom) ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಧೂಮ್ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ (Hombale Films), ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದಿದೆ. ಕ್ರಮವಾಗಿ ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕನ್ನಡ ಮತ್ತು ಇತರ ಭಾಷೆಗೆ ಸಿನಿಮಾವನ್ನು ಡಬ್ ಮಾಡುತ್ತಾರಾ ಕಾದು ನೋಡಬೇಕು.

    ಫಹಾದ್ ಫಾಸಿಲ್ (Fahadh Faasil) ನಾಯಕನಾಗಿ ನಟಿಸುತ್ತಿದ್ದರೆ, ಸೂರರೈ ಪೋಟ್ರು ನಾಯಕಿ ಅಪರ್ಣಾ ಬಾಲಮುರಳಿ (Aparna Balamurali) ಈ ಸಿನಿಮಾದ ನಾಯಕಿ. ಅಕ್ಟೋಬರ್ 9 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಫಹಾದ್ ಪ್ರತಿಭಾವಂತ ನಟ, ಪವನ್ ಕುಮಾರ್ ಹೊಸ ಬಗೆಯ ಯೋಚಿಸುವ ನಿರ್ದೇಶಕ. ಹಾಗಾಗಿ ಧೂಮಂ ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ದುಪ್ಪಟ್ಟಾಗಿದೆ. ಹೊಂಬಾಳೆ ಫಿಲ್ಸ್ಮ್ ನಿಂದ ಈಗಾಗಲೇ ಸಲಾರ್, ಬಘೀರ್, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳು ರೆಡಿಯಾಗಿದ್ದು, ಈ ಸಿನಿಮಾ ಸಾಲಿಗೆ ಧೂಮ್ ಕೂಡ ಸೇರ್ಪಡೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ಆ್ಯಕ್ಷನ್ ಕಟ್

    ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ಆ್ಯಕ್ಷನ್ ಕಟ್

    ʻಲೂಸಿಯಾʼ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಲಿವುಡ್ ಸ್ಟಾರ್ ಫಯಾದ್ ಫಾಸಿಲ್‌ಗೆ ನಿರ್ದೇಶನ ಮಾಡುತ್ತಿರುವ ಬೆನ್ನಲ್ಲೇ ತಮಿಳಿನ ಸ್ಟಾರ್ ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

    ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಪವನ್ ಕುಮಾರ್, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿ ಫಯಾದ್‌ಗೆ ಪವನ್ ನಿರ್ದೇಶನ ಮಾಡುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿಯಾನ್ ವಿಕ್ರಮ್ ಮತ್ತು ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕಾಗಿ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.

    ಇತ್ತೀಚೆಗಷ್ಟೇ ಸಿನಿಮಾ ಪ್ರಚಾರಕ್ಕೆ ಚಿಯಾನ್ ವಿಕ್ರಮ್ ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಪವನ್ ಕುಮಾರ್ ಅವರು ಭೇಟಿಯಾಗಿ, ತಮಗೆ ಕಥೆ ಹೇಳಿರುವುದರ ಬಗ್ಗೆ ಚಿಯಾನ್ ವಿಕ್ರಮ್ ರಿವೀಲ್ ಮಾಡಿದ್ದಾರೆ. ಪವನ್ ಕುಮಾರ್ ಬರೆದಿರುವ ಕಥೆ ತುಂಬಾ ಇಷ್ಟವಾಗಿದೆ. ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ವಿಕ್ರಮ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪವರ್‌ಫುಲ್‌ ಪಾತ್ರದಲ್ಲಿ ವಿಕ್ರಮ್‌ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಪವನ್ ಕುಮಾರ್ ದಕ್ಷಿಣದ ಸಿನಿಮಾಗಳಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಚಿಯಾನ್ ವಿಕ್ರಮ್ ಮತ್ತು ಪವನ್ ಕುಮಾರ್‌ಗೆ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಗಾಳಿಪಟ 2’ ಹಾರಾಟ : ಮತ್ತೆ ಗೋಲ್ಡನ್ ಡೇಸ್ ಗೆ ಮರಳಿದ ಗಣೇಶ್

    ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಗಾಳಿಪಟ 2’ ಹಾರಾಟ : ಮತ್ತೆ ಗೋಲ್ಡನ್ ಡೇಸ್ ಗೆ ಮರಳಿದ ಗಣೇಶ್

    ಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್  ಮತ್ತೆ ವರ್ಕೌಟ್ ಆಗಿದೆ. ಗಾಳಿಪಟ 2 ಸಿನಿಮಾ ಸಾವಿರಾರು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಗಣೇಶ್ ಮತ್ತೆ ಗೋಲ್ಡನ್ ಡೇಸ್ ಗೆ ಮರಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ವೀಕೆಂಡ್ ಮತ್ತು ಸ್ವಾತಂತ್ರ್ಯ ದಿನದ ರಜೆಗಳನ್ನು ಚಿತ್ರತಂಡ ಸಮರ್ಥವಾಗಿ ಬಳಸಿಕೊಂಡು ದಾಖಲೆ ನಿರ್ಮಿಸಲು ಮುಂದಾಗಿದೆ.

    ಮುಂಗಾರು ಮಳೆ ಮೂಲಕ ಗಣೇಶ್ ಮತ್ತು ಯೋಗರಾಜ್ ಭಟ್ ಕನ್ನಡ ಸಿನಿಮಾ ರಂಗದಲ್ಲಿ ದಾಖಲೆ ಬರೆದಿದ್ದರೆ, ಗಾಳಿಪಟ 2 ಮೂಲಕ ತಮ್ಮ ದಾಖಲೆಯನ್ನೇ ತಾವೇ ಬ್ರೇಕ್ ಮಾಡಿದ್ದಾರೆ. ಗಣೇಶ್ ಅವರ ವೃತ್ತಿ ಜೀವನದಲ್ಲಿ ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲೇ ಗಾಳಿಪಟ 2 ದಾಖಲೆ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಥಿಯೇಟರ್ ಸಂಖ್ಯೆಯನ್ನೂ ಅದು ಹೆಚ್ಚಿಸಿಕೊಳ್ಳುತ್ತಿದೆ. ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

    ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಥಿಯೇಟರ್ ಸಂಖ್ಯೆ ಹೆಚ್ಚುವುದನ್ನು ಕೇಳಿದ್ದೇವೆ. ಆದರೆ, ವೀಕ್ ಡೇಸ್ ನಲ್ಲೂ ಈ ಸಿನಿಮಾ ಥಿಯೇಟರ್ ಸಂಖ್ಯೆ ಹೆಚ್ಚಿಸಿಕೊಂಡಿದೆ. ಈ ಸೋಮವಾರ ಮೂವತ್ತಕ್ಕೂ ಹೆಚ್ಚು ಸ್ಕ್ರೀನ್ ಗಳು ಮತ್ತೆ ಸೇರ್ಪಡೆಯಾಗಿವೆ. ‘ನಿರೀಕ್ಷೆಗೂ ಮೀರಿ ಜನರು ಸಿನಿಮಾಗೆ ಸ್ಪಂದಿಸುತ್ತಿದ್ದಾರೆ. ಈ ಸೋಮವಾರದಿಂದ ಮತ್ತಷ್ಟು ಸ್ಕ್ರೀನ್ ಗಳಲ್ಲಿ ಗಾಳಿಪಟ 2 ರಿಲೀಸ್ ಆಗಿದೆ ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.

    ಗಾಳಿಪಟ 2 ಸಿನಿಮಾದ ಟ್ರೈಲರ್ ರಿಲೀಸ್ ಆದಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಹಾಡುಗಳು ಕೂಡ ಮೋಡಿ ಮಾಡಿದ್ದವು. ಇದೀಗ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಯೋಗರಾಜ್ ಭಟ್ ಮತ್ತು ರಮೇಶ್ ರೆಡ್ಡಿ ಅವರ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಒಂದಾಗಿದ್ದರೂ, ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಈ ಜೋಡಿ ಗೆದ್ದಿದೆ.

    Live Tv