ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಹಾಗೂ ಗ್ಯಾಂಗ್‍ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರಹಸ್ಯ ಬಯಲಾಗಿದೆ.
ಮೃತ ರೇಣುಕಾಸ್ವಾಮಿ ಕಳೆದ 5 ತಿಂಗಳಿಂದ ಪವಿತ್ರಾಗೆ (Pavithra Gowda) ಮೆಸೇಜ್ ಮಾಡುತ್ತಿದ್ದರು. ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಬಂದಿದ್ದು, ಎಲ್ಲ ಮೆಸೇಜ್‍ಗಳು ಕೂಡ ಅಶ್ಲೀಲ ಮೆಸೇಜ್‍ಗಳಾಗಿವೆ ಎಂಬುದು ತನಿಖೆ ವೇಳೆ ಬಯಲಾಗಿದೆ.
ರೇಣುಕಾಸ್ವಾಮಿ (Renukaswamy) ಅಷ್ಟು ಮೆಸೇಜ್ ಮಾಡಿದ್ದರೂ ಪವಿತ್ರಾ ಗೌಡ ಮಾತ್ರ ರಿಪ್ಲೈ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೇಣುಕಾಸ್ವಾಮಿ ಮೆಸೇಜ್ ಜೊತೆ ಅಶ್ಲೀಲ ಫೋಟೋ ಕೂಡ ರವಾನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪವಿತ್ರಾ ಗೌಡ ಈ ವಿಷಯವನ್ನು ಪವನ್‍ಗೆ ಹೇಳಿದ್ದಾರೆ. ಇದನ್ನೂ ಓದಿ: ಯಾರೂ ಜೈಲಿನ ಬಳಿ ಬರಬೇಡಿ: ಅಭಿಮಾನಿಗಳಿಗೆ ನಟ ದರ್ಶನ್ ಮನವಿ
ಪವನ್, ಪವಿತ್ರಾ ಗೌಡ ರೀತಿ ಚಾಟ್ ಮಾಡಿದ್ದ. ರಿಪ್ಲೈ ಬಂದ ಖುಷಿಗೆ ರೇಣುಕಾಸ್ವಾಮಿ ಕೂಡ ಚಾಟ್ ಮಾಡ್ತಿದ್ದ. ಹೀಗೆ ಮಾತಾಡ್ತಾ ಮಾತಾಡ್ತಾ ರೇಣುಕಾಸ್ವಾಮಿ ಬಳಿ ಪವನ್ ಪೋಟೋ ಕಳುಹಿಸುವಂತೆ ಹೇಳಿದ್ದಾರೆ. ಅಂತೆಯೇ ರೇಣುಕಾಸ್ವಾಮಿ ತನ್ನ ಫೋಟೋವನ್ನು ಕಳುಹಿಸಿದ್ದಾನೆ. ಫೋಟೋ ಸಿಕ್ಕ ಮೇಲೆ ಡಿ ಗ್ಯಾಂಗ್ ಆಟ ಶುರುವಾಗಿದು, ರೇಣುಕಾಸ್ವಾಮಿ ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ (Renukaswamy Kidnap & Murder Case) ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಆರೋಪಿ ಪವನ್ (Accused Pavan) ಮನೆಯಿಂದ 4 ಲಕ್ಷ 50 ಸಾವಿರ ಹಣವನ್ನು ಸೀಜ್ ಮಾಡಿದ್ದಾರೆ.
ವಿನಯ್ ತಾಯಿಗೆ ಪವನ್ 1 ಲಕ್ಷ ಅಡ್ವಾನ್ಸ್ ಹಣ ನೀಡಿದ್ದ. ಬಳಿಕ ವಿನಯ್‍ಗೆ ನೀಡಬೇಕಾಗಿದ್ದ ಹಣವನ್ನ ಪವನ್ ತನ್ನ ಮನೆಯಲ್ಲಿಟ್ಟಿದ್ದ. ಇದೀಗ ಪೊಲೀಸರು ಒಟ್ಟು 4 ಲಕ್ಷ 50 ಸಾವಿರವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಹಿಂದೆ 30 ಲಕ್ಷ ಸೀಜ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಲು, ಮೃತದೇಹ ಸಾಗಿಸಲು ಮತ್ತು ನಟ ದರ್ಶನ್ ಹೆಸರನ್ನು ಬಾಯಿಬಿಡದಿರಲು ಬಂಧಿತರ ಪೈಕಿ ಐವರಿಗೆ 30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು 5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು.
ಪ್ರಕರಣ ಸಂಬಂಧ ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ 30 ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪೊಲೀಸರ ವಿಚಾರಣೆಯ ವೇಳೆ ಒಬ್ಬೊಬ್ಬ ಆರೋಪಿನೂ ಸತ್ಯ ವಿಚಾರಗಳನ್ನು ಕಕ್ಕುತ್ತಿದ್ದಾರೆ.
ಎ1 ಆರೋಪಿಯಾಗಿರುವ ದರ್ಶನ್ (Darshan) ಗೆಳತಿ ಪವಿತ್ರಾ ಗೌಡ (Pavithra Gowda) ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಕೊಲೆ ಮಾಡುತ್ತಾರೆ ಅಂತ ಗೊತ್ತಿದ್ದರೆ ನಾನೇ ಪೊಲೀಸ್ ಕಂಪ್ಲೆಂಟ್ ಕೊಡುತ್ತಿದ್ದೆ ಎಂದು ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪವಿತ್ರಾ ಗೌಡ ಹೇಳಿದ್ದೇನು..?: ರೇಣುಕಾಸ್ವಾಮಿಯ ಅಶ್ಲೀಲ ಫೋಟೋ ಮೆಸೇಜ್ ಅನ್ನು ನಾನು ಪವನ್‍ಗೆ ಕಳಿಸಿದ್ದೆ. ದರ್ಶನ್‍ಗೆ ಈ ವಿಚಾರ ಗೊತ್ತಾಗಬಾರದು ಅಂತಾ ಕೂಡ ಹೇಳಿದ್ದೆ. ದರ್ಶನ್‍ಗೆ ಗೊತ್ತಾದ್ರೆ ಏನಾದ್ರು ಅನಾಹುತ ಆಗಬಹುದು ಅಂದಿದ್ದೆ. ಆದರೆ ಅವನು ದರ್ಶನ್‍ಗೆ ಹೇಳಿದ್ದಾನೆ ಎಂದರು.
ಕೊಲೆ ಮಾಡ್ತಾರೆ ಅಂತಾ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ. ಅಶ್ಲೀಲ ಮೆಸೇಜ್ ಮಾಡಿದ್ನಲ್ಲಾ ಅಂತಾ ಚಪ್ಪಲಿಯಲ್ಲಿ ಹೊಡೆದು ವಾಪಸ್ಸಾಗಿದ್ದೆ. ಕೊಲೆ ಮಾಡ್ತಾರೆ ಅಂದ್ರೆ ನಾನೇ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ ಎಂದು ಪವಿತ್ರಾ ಪೊಲೀಸರ ಮುಂದೆ ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಡೀಲ್ ಮಾಡಲಾಗಿದ್ದ 30 ಲಕ್ಷ ಹಣ ಸೀಜ್
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಪುತ್ರ ಮಾಸ್ಟರ್ ಪವನ್ ಬಸ್ರೂರು ಕ್ಲಿಕ್ ಸಿನಿಮಾ ಮೂಲಕ ಪರಿಪೂರ್ಣವಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಗಿರ್ಮಿಟ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ಪವನ್, ಕ್ಲಿಕ್ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ. ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ (Shashikiran) ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ಶರಣ್ಯ ಫಿಲ್ಮಂಸ್ ನಡಿ ಕ್ಲಿಕ್ (Click) ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪವನ್ ಜೊತೆ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಮ್ಮಲ್ಲಿ ಹೆಚ್ಚಿನ ಪಾಲು ಪೋಷಕರು ಮಕ್ಕಳು ಡಾಕ್ಟರ್-ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ ಕ್ಲಿಕ್ ಸಿನಿಮಾ ಸಾಗುತ್ತದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಮೂಲತಃ ಬೆಂಗಳೂರಿನವರಾದ ಶಶಿಕಿರಣ್, ಐಟಿ ಉದ್ಯೋಗಿ. ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆಸಕ್ತಿ ಇದ್ದರೂ, ಮನೆಯವರ ಸಲಹೆಯ ಮೇರೆಗೆ ಇಂಜಿನಿಯರಿಂಗ್ ಮುಗಿಸಿ, ಕೆಲಸಕ್ಕೆ ಸೇರಿಕೊಂಡರು. ಆದರೂ ಶಶಿಗೆ ಸಿನಿಮಾ ಕಡೆಯೇ ಮನಸ್ಸು ಸೆಳೆಯುತ್ತಿತ್ತು. ಹೀಗಾಗಿ ಕೆಲಸದ ಜತೆ ಜತೆಗೆ ಸಿನಿಮಾದತ್ತ ಮುಖ ಮಾಡಿದರು ಶಶಿಕಿರಣ್.
“ಮೊದಲಿಗೆ ಫಿಲಂ ಮೇಕಿಂಗ್ ಬಗ್ಗೆ ತಿಳಿದುಕೊಳ್ಳಬೇಕು ಅಂತ ಶುರು ಮಾಡಿದ ಸಿನಿಮಾವಿದು. ಆದರೆ ತುಂಬಾ ದೊಡ್ಡ ಮಟ್ಟದಲ್ಲಿ ನನ್ನ ಕನಸು ಈಡೇರಿದ ಖುಷಿಯಲ್ಲಿದ್ದೇನೆ. ತುಂಬಾ ಸಿನಿಮಾ ನೋಡಿ ಪಾಠ ಕಲಿತಿದ್ದೀನಿ. ಒಳ್ಳೆ ಅನುಭವ ಕೊಟ್ಟಿದೆ. ಈ ಚಿತ್ರದಲ್ಲಿ ಸಾಕಷ್ಟು ಹೊಸತನವಿದೆ. ರವಿ ಬಸ್ರೂರು ಅವರಿಗೆ ಕಥೆ ಹೇಳಲು ಹೋಗಿದ್ದೆ. ಒನ್ ಲೈನ್ ಕೇಳಿದ್ರು. ಪವನ್ ಜತೆಯೂ ಮಾತನಾಡಿದ್ವಿ. “ನನ್ ಮಗ ಅಂತ ತಗೋಬೇಡಿ… ಆಡಿಷನ್ ಮಾಡಿಯೇ ಸೆಲೆಕ್ಟ್ ಮಾಡಿ” ಅಂತ ಹೇಳಿದ್ದರು ರವಿ ಬಸ್ರೂರು. ಆಡಿಷನ್ ಮೂಲಕ ಸೆಲೆಕ್ಟ್ ಆದ ನಂತರ ವರ್ಕ್ ಶಾಪ್ ಕೂಡಾ ಮಾಡಿದೆವು. ಪವನ್ ಅವರಿಗೆ ನಟನೆಯಲ್ಲಿ ಸೆಳೆಯುವ ಪವರ್ ಇದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹಂಬಲ ಪವನ್ ಅವರಿಗಿದೆ. ನಾನು ನಿರ್ಮಾಣ ಮಾಡಿದ್ದರೂ ಕಥೆ ಓಕೆ ಮಾಡುವುದರಿಂದ ಹಿಡಿದು ಆರ್ಟಿಸ್ಟ್ ಸೆಲೆಕ್ಷನ್, ಕಾಸ್ಟ್ಯೂಮ್, ಲೊಕೇಷನ್, ಎಡಿಟ್, ದಿ.ಐ, ಮ್ಯೂಸಿಕ್… ಎಲ್ಲದರಲ್ಲೂ ತೊಡಗಿಸಿಕೊಂಡು ಬಂದಿದ್ದೇನೆ. ಸಮಯ ತೆಗೆದುಕೊಂಡು, ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ಒದಗಿಸಿ ಕ್ವಾಲಿಟಿ ಕಾಪಾಡಿಕೊಂಡು ಕ್ಲಿಕ್ ಸಿನಿಮಾ ಮಾಡಿದ್ದೇನೆ” ಎನ್ನುತ್ತಾರೆ ನಿರ್ಮಾಪಕ ಶಶಿಕಿರಣ್.
ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕ್ಲಿಕ್ ಸಿನಿಮಾಗೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.
ಮಂಡ್ಯ: ಹೃದಯಾಘಾತವಾಗಿ 24 ವರ್ಷ ಯುವ ನಟ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಮೃತನನ್ನು ಪವನ್ ಎಂದು ಗುರುತಿಸಲಾಗಿದೆ. ಮೂಲತಃ ಇವರು ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದವರಾಗಿದ್ದು, ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ (Mumbai) ನೆಲೆಸಿದ್ದರು.
ಬೆಂಗಳೂರು: ಕನ್ನಡ ನಿರ್ದೇಶಕ, ನಿರ್ಮಾಪಕ, ನಟ ಆಗಿರವ ಎಸ್. ನಾರಾಯಣ್ ಅವರ 2ನೇ ಪುತ್ರ ಪವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಫೋಟೋವನ್ನು ನಟಿ ಸುಧಾರಾಣಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚಂದನವನದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಒಬ್ಬರ ಹಿಂದೆ ಒಬ್ಬರು ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳ ಮದುವೆ ಆಗುತ್ತಲೇ ಇದೆ. ಎಸ್. ನಾರಾಯಣ್ ಪುತ್ರ ಪವನ್ ಶುಭ ಮುಹೂರ್ತದಲ್ಲಿ ಪವಿತ್ರಾ ಅವರನ್ನು ವರಿಸಿದ್ದಾರೆ.
ಎಸ್. ನಾರಾಯಣ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡುವುದು ಯಾವಾಗಲೂ ಸಂತೋಷದ ಸಂಗತಿಯಾಗಿದೆ. ಅವರ ಪುತ್ರ ಪವನ್ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪವನ್, ಪವಿತ್ರಾ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದುಕೊಂಡು ಮದುವೆಯಲ್ಲಿ ಭಾಗಿಯಾಗಿದ್ದ ಫೋಟೋವನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ.
ಆರತಕ್ಷತೆಯಲ್ಲಿ ನಟ ಶರಣ್, ನಟ ಶ್ರೀಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಅಮೂಲ್ಯ, ರಾಕ್ ಲೈನ್ ವೆಂಟೇಶ್, ಸುಮಲತಾ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನವವಧುವರರನ್ನು ಆಶಿರ್ವಧಿಸಿದ್ದಾರೆ. ಮದುವೆ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರುವ ಬಡ್ಡಿ ಮಗನ್ ಲೈಫು ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಾವುದೇ ಪ್ರಚಾರದ ಅಬ್ಬರವೂ ಇಲ್ಲದೇ ಒಂದೇ ಒಂದು ಹಾಡಿನ ಮೂಲಕವೇ ಈ ಚಿತ್ರ ಪ್ರದರ್ಶನ ಮಾಡಿರುವ ಪ್ರಚಾದ ವಿರಾಟ್ ರೂಪ ಪ್ರದರ್ಶಿಸಿರುವ ಈ ಸಿನಿಮಾದ ಖದರ್ ಕಂಡು ಎಲ್ಲರೂ ಅವಾಕ್ಕಾಗಿದ್ದಾರೆ. ಇಂಥಾ ಮಹಾ ಮೋಡಿ ಸಾಧ್ಯವಾದದ್ದು ನವೀನ್ ಸಜ್ಜು ಹಾಡಿರುವ ಏನ್ ಚಂದಾನೋ ತಕ್ಕೋ ಎಂಬೊಂದು ಹಾಡಿನಿಂದ. ಈ ಹಾಡು ಪಡೆದುಕೊಂಡಿರೋ ವೀಕ್ಷಣೆ ಮತ್ತು ಅದರ ಸುತ್ತಾ ಹುಟ್ಟಿಕೊಂಡಿದ್ದ ಚರ್ಚೆ ಹಾಗೂ ಅದು ವೈರಲ್ ಆಗಿರುವ ರೀತಿಗಳೇ ನಿಜಕ್ಕೂ ಅಚ್ಚರಿ.
ಹೀಗೆ ಹಾಡುಗಳ ಮೂಲಕವೇ ಪ್ರಚಾರ ಪಡೆದುಕೊಂಡ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆದ ಅದೆಷ್ಟೋ ಉದಾಹರಣೆಗಳಿದ್ದಾವೆ. ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪವನ್ ನಿರ್ಮಾಣ ಮಾಡಿರುವ ಈ ಚಿತ್ರವೂ ಕೂಡಾ ಅಂಥಾದ್ದೇ ಗೆಲುವು ಕಾಣಲಿರುವ ಶುಭ ಸೂಚನೆಗಳೇ ದಟ್ಟವಾಗಿ ಕಾಣಿಸುತ್ತಿವೆ. ಈ ಚಿತ್ರದಲ್ಲಿ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ ಬಡ್ಡಿ ಸೀನಪ್ಪನಾಗಿ ವಿಭಿನ್ನ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಇದೆಲ್ಲದರ ಚಹರೆಗಳೂ ಕೂಡಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೇ ಸ್ಪಷ್ಟವಾಗಿ ಅನಾವರಣಗೊಂಡಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಈ ಪಾಟಿ ಕ್ಯೂರಿಯಾಸಿಟಿ ಹುಟ್ಟಿಕೊಂಡಿರುವುದಕ್ಕೂ ಇದೇ ಕಾರಣ.
ಈ ಟ್ರೇಲರ್ ಹರಿಕಥಾ ಸ್ವರೂಪದ ನಿರೂಪಣೆಯೊಂದಿಗೆ ಎಂಥವರನ್ನೂ ಸೆಳೆಯುವಂತೆ ಮೂಡಿ ಬಂದಿತ್ತು. ಇದನ್ನು ಈ ಶೈಲಿಯಲ್ಲಿ ನಿರೂಪಣೆ ಮಾಡಿರೋದಕ್ಕೂ ಕಥೆಗೂ ಕನೆಕ್ಷನ್ನುಗಳಿದ್ದಾವೆ. ಇದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕಾಲ್ಪನಿಕ ಹಳ್ಳಿಯೊಂದರಲ್ಲಿ ಘಟಿಸೋ ಕಥೆಯನ್ನೊಳಗೊಂಡಿರುವ ಚಿತ್ರ. ಇಂಥಾ ಹಳ್ಳಿಗಳಲ್ಲಿ ಅವರಿವರ ಮನೆ ಮ್ಯಾಟರುಗಳನ್ನು ಕೆದಕೋ ಕಸುಬಿನ ಹರಿಕಥೆ ಸದಾ ಚಾಲ್ತಿಯಲ್ಲಿರುತ್ತದೆ. ಇಂಥಾ ಮಜವಾದ ಹರಿಕಥಾ ಕಾಲಕ್ಷೇಪ ಈ ಸಿನಿಮಾದಲ್ಲಿದೆ. ಅದನ್ನು ನಿರ್ದೇಶಕರುಗಳು ಅತ್ಯಂತ ಮಜವಾದ ಸ್ವರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ. ಒಟ್ಟಾರೆಯಾಗಿ ಬಡ್ಡಿಮಗನ್ ಲೈಫು ಸೂಪರ್ ಆಗಿಯೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರೆಲ್ಲರಲ್ಲಿ ಮನೆ ಮಾಡಿಕೊಂಡಿದೆ.