Tag: ಪಲ್ಲವಿ ಡೇ

  • ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ಟಿ ಕಂ ಮಾಡೆಲ್ ಗಳ ಆತ್ಮಹತ್ಯೆಗೆ ಸ್ವತಃ ಪಶ್ಚಿಮ ಬಂಗಾಳದ ಪೊಲೀಸ್ ಬೆಚ್ಚಿ ಬಿದ್ದಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ ನಾಲ್ವರು ನಟಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡೆ ಬಣ್ಣದ ಪ್ರಪಂಚದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಸರಣಿಯನ್ನು ಬೇಧಿಸಲು ಪೊಲೀಸ್ ತಂಡವನ್ನೇ ರಚಿಸಲು ಸರಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಪಶ್ಚಿಮ ಬಂಗಾಲ ಮೂಲದ ಮೂವರು ನಟಿಯರು ಕೋಲ್ಕತ್ತಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದೀಗ ಬೆಂಗಾಲಿ ಮಾಡೆಲ್ ಮತ್ತು ಮೇಕಪ್ ಕಲಾವಿದೆಯೂ ಆಗಿದ್ದ ಸರಸ್ವತಿ ದಾಸ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ 18 ವರ್ಷದ ಸರಸ್ವತಿಯ ಶವವು ಕಸ್ಬಾ ಪ್ರದೇಶದ ಬೆಡಿಯಾದಂಗದಲ್ಲಿರುವ ಅವರ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಇತ್ತೀಚೆಗಷ್ಟೇ ಮಂಜುಷಾ ನಿಯೋಗಿ, ಪಲ್ಲವಿ ಡೇ ಮತ್ತು ಬಿದಿಶಾ ಮಜುಂದಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಸರಸ್ವತಿ ದಾಸ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ. ಕೊಠಿಯಲ್ಲಿ ಮೊಮ್ಮಗಳ ಶವ ಕಂಡ ಅವರ ಅಜ್ಜಿಯು ಮೊಮ್ಮಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಾಗಲೇ ಅವರು ನಿಧನ ಹೊಂದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಸರಸ್ವತಿ ಅವರ ಶವವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದೆ ನಿಜ. ಹಾಗಂತ ನಾವು ಅದನ್ನು ಬರೀ ಆತ್ಮಹತ್ಯೆ ಕೇಸ್ ಎಂದು ನೋಡದೇ ಬೇರೆ ದೃಷ್ಟಿ ಕೋನದಿಂದ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಸಾಲು ಸಾಲು ನಟಿಯರ ಆತ್ಮಹತ್ಯೆ : ಏನಾಗ್ತಿದೆ ಬಣ್ಣದ ಜಗತ್ತಿನೊಳಗೆ?

    ಸಾಲು ಸಾಲು ನಟಿಯರ ಆತ್ಮಹತ್ಯೆ : ಏನಾಗ್ತಿದೆ ಬಣ್ಣದ ಜಗತ್ತಿನೊಳಗೆ?

    ಣ್ಣದ ಜಗತ್ತು ಆತ್ಮಹತ್ಯೆಯ ತವರುಮನೆ ಆಗುತ್ತಿದೆಯಾ ಎನ್ನುವ ಚರ್ಚೆ ಇದೀಗ ಶುರುವಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಆತ್ಮಹತ್ಯೆ ಕೇಸ್ ಗಳು ಕೇವಲ ಬಣ್ಣದ ಜಗತ್ತಿನಲ್ಲಿ ಆಗಿವೆ. ಅದರಲ್ಲೂ ಕಳೆದ ಇಪ್ಪತ್ತು ದಿನಗಳಲ್ಲಿ ಮೂವರು ನಟಿಯರು ನೇಣಿಗೆ ಶರಣಾಗುವ ಮೂಲಕ ಕಲರ್ ಫುಲ್ ಜಗತ್ತಿನೊಳಗಿನ ಕರಾಳಮುಖವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ಕೇರಳದ ಕೋಯಿಕ್ಕೋಡ್ ನಲ್ಲಿ ರೂಪದರ್ಶಿ ಶಹನಾ ಗುರುವಾರ ರಾತ್ರಿ 11.30ಕ್ಕೆ ಪರಂಬಿಲ್ ಬಜಾರ್ ನಲ್ಲಿರುವ ತಮ್ಮ ಅಪಾರ್ಟಮೆಂಟ್ ನಲ್ಲಿ ಕಿಟಕಿಯ ಗ್ರೀಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಪತಿಯೇ ಕಾರಣವೆಂದು ಕುಟುಂಬ ಆರೋಪಿಸಿತ್ತು. ಕೇವಲ ಇಪ್ಪತ್ತರ ವಯಸ್ಸಿನ ಈ ಹುಡುಗಿ ಕೌಟುಂಬಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸುದ್ದಿ ಆಯಿತು. ಇವರ ಪತಿಯನ್ನು ಪೊಲೀಸ್ ನವರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ನಡೆದದ್ದು 12 ಮೇ 2022ರಲ್ಲಿ.

    ಬಂಗಾಳಿ ಮೂಲದ ನಟಿ ಪಲ್ಲವಿ ಡೇ ಕೂಡ ಕೋಲ್ಕತ್ತಾದ ಅಪಾರ್ಟ್ಮೆಂಟ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಳೆದ ವಾರವಷ್ಟೇ ಓದಿದ್ದೇವೆ. ಕೇವಲ 21 ವರ್ಷದ ಪಲ್ಲವಿ ಕೋಲ್ಕತ್ತಾದ ಅಪಾರ್ಟಮೆಂಟ್ ಬಾಡಿಗೆ ಪಡೆದು ಸ್ನೇಹಿತರೊಂದಿಗೆ ವಾಸಿವಿದ್ದರು. ಅವರ ಜೀವನದಲ್ಲಿ ಅದೇನು ಬಿರುಗಾಳಿ ಎದ್ದಿತ್ತೋ, ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಲೂ ಅವರ ಸಾವಿಗೆ ಕಾರಣ ಸಿಕ್ಕಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ಪಲ್ಲವಿ ಡೇ ಆತ್ಮಹತ್ಯೆಯ ಕೇಸು ಇನ್ನೂ ಮಾಸಿಲ್ಲ, ನಟಿ ಮತ್ತು ರೂಪದರ್ಶಿಯಾಗಿ  ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿದಿಶಾ, ಕೋಲ್ಕತ್ತಾದ ದಮ್ ಡಮ್‍ ನಲ್ಲಿರುವ ತಮ್ಮ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮಾಡೆಲ್ ಪಲ್ಲವಿ ಡೇ ಕೂಡ ಆತ್ಮಹತ್ಯೆಗೆ ಶರಣಾಗಿ ದಿಗ್ಭ್ರಮೆ ಮೂಡಿಸಿದ್ದರು. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಕೇವಲ 21 ವರ್ಷದ ಈ ನಟಿ ಕಮ್ ಮಾಡೆಲ್, ನಾಲ್ಕು ತಿಂಗಳ ಹಿಂದೆಯಷ್ಟೇ ಬಾಡಿಗೆ ಪಡೆದು, ಈ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರೆ, ಇದೀಗ ಮೇ 25 ರಂದು ಬುಧವಾರ ಸಂಜೆ ನಾಗರ್ ಬಜಾರ್ ಪ್ರದೇಶದಲ್ಲಿರುವ ಆಕೆ ಫ್ಲಾಟ್ ನಿಂದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಆಕೆ ಡೇಟ್ ನಲ್ಲಿದ್ದರು ಎನ್ನಲಾಗುತ್ತಿದೆ. ಇತ್ತೀಷೆಗಷ್ಟೇ ಅವರು ಗೆಳೆಯನಿಂದ ದೂರವಾಗಿ, ಆ ಖಿನ್ನತೆಯಲ್ಲಿ ಬಳಲುತ್ತಿದ್ದರು ಎನ್ನುವ ಸುದ್ದಿಯಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಪೊಲೀಸ್ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ

  • ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ

    ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ

    ಬಂಗಾಳಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ನಟಿ ಪಲ್ಲವಿ ಡೇ ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದ ಗರ್ಫಾದ ತಮ್ಮ ನಿವಾಸದಲ್ಲಿ ನಟಿ ಪಲ್ಲಿವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ʻಮೊನ್ ಮನೆ ನಾʼ ಸೀರಿಯಲ್‌ನ ಜನಪ್ರಿಯ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿ ಶವ ಪತ್ತೆಯಾಗಿದ್ದು, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಪಲ್ಲವಿ ನೇಣು ಹಾಕಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಟಿಯ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ನಟಿ ಅಸಹಜ ಸಾವಿಗೆ ಬಂಗಾಳದ ಪೊಲೀಸರು ಪ್ರಕರಣ ದಾಖಾಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾ.ರಾ ಗೋವಿಂದ್

    ಬಂಗಾಳಿಯ `ಮೊನ್ ಮನೆ ನಾ’ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿದ್ದ ಪಲ್ಲವಿ ಸಾವು ಕುಟುಂಬಸ್ಥರಿಗೆ ಆಘಾತವುಂಟು ಮಾಡಿದೆ. 20ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟಿ ಪಲ್ಲವಿ ಸಾವಿಗೆ ಸಹಕಲಾವಿದರು, ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.