Tag: ಪಲ್ಲವಿ

  • ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಹತ್ಯೆಗೆ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಒಂದು ವಾರದಿಂದ ಪ್ಲ್ಯಾನ್‌ ಮಾಡಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಓಂ ಪ್ರಕಾಶ್‌ ಒಂದಷ್ಟು ದಿನ ಬೇರೆ ಕಡೆ ಇದ್ದರು. ನಂತರ ಬಲವಂತವಾಗಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಗೆ ಕರೆದುಕೊಂಡು ಬಂದ ನಂತರವೂ ಗಲಾಟೆ ನಡೆದಿತ್ತು. ಗಲಾಟೆ ಜೋರಾದ ಕಾರಣ ಓಂ ಪ್ರಕಾಶ್‌ ಅವರು ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಶುಕ್ರವಾರ ಪುತ್ರಿ ಕೃತಿ ಸರಿತಾ ಅವರ ಮನೆಗೆ ಹೋಗಿ ಪೀಡಿಸಿ ಕರೆ ತಂದಿದ್ದಳು.

    ಮನೆಗೆ ಕರೆ ತಂದ ಬಳಿಕ ಮತ್ತೆ ಗಲಾಟೆ ನಡೆದಿದೆ. ಗಲಾಟೆ ನಡೆಯುತ್ತಿದ್ದಂತೆ ಈ ಮನುಷ್ಯನನ್ನು ಹೇಗಾದರೂ ಮಾಡಿ ಮುಗಿಸಿಬಿಡಬೇಕು ಎಂದು ಪ್ಲ್ಯಾನ್‌ ಮಾಡಿದ್ದಾರೆ. ಈ ಪ್ಲ್ಯಾನ್‌ನಂತೆ ಭಾನುವಾರ ಮಧ್ಯಾಹ್ನ ಮತ್ತೆ ಗಲಾಟೆ ಮಾಡಿದ್ದಾರೆ.

    ಗಲಾಟೆಯ ಬಳಿಕ ಓಂ ಪ್ರಕಾಶ್‌ ಅವರು ಊಟಕ್ಕೆ ಎರಡು ಮೀನು ತರಿಸಿದ್ದರು. ಮಧ್ಯಾಹ್ನ ಮೀನಿನ ಊಟ ಮಾಡುತ್ತಿದ್ದಾಗ ಪಲ್ಲವಿ (Pallavi) ಮತ್ತು ಕೃತಿ ದಾಳಿ ನಡೆಸಿ ಓಂ ಪ್ರಕಾಶ್‌ ಅವರನ್ನು ಹತ್ಯೆ ಮಾಡಿರುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಕೇಸ್‌ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?

     

    ಕೊಲೆ ಹೇಗಾಯ್ತು?
    ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ (ಹೊಸೂರು ಸರ್ಜಾಪುರ ಲೇಔಟ್‌) ನಿವಾಸದಲ್ಲಿ ಮಧ್ಯಾಹ್ನ ಊಟಕ್ಕೆ ಓಂ ಪ್ರಕಾಶ್‌ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್‌ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ.

    ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ (Murder)‌ ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪೊಲೀಸರು (Police) ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್‌ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

    ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂ ಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.

  • ಒಂದು ವಾರದಿಂದ ಬೆದರಿಕೆ  – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    – ತಾಯಿ, ತಂಗಿಯ ವಿರುದ್ಧ ಪುತ್ರ ಕಾರ್ತಿಕೇಶ್‌ ದೂರು

    ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಪುತ್ರಿಯ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಪುತ್ರ ಕಾರ್ತಿಕೇಶ್‌ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ (Pallavi), ಸಹೋದರಿ ಕೃತಿ (Kruthi) ವಿರುದ್ಧ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 103(ಕೊಲೆ) 3(ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಎಸಗಿದ ಅಪರಾಧ) ಅಡಿ ಪ್ರಕರಣ ದಾಖಲಾಗಿದೆ.  ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಪತ್ನಿ ಪಲ್ಲವಿ ಮತ್ತು ಕೃತಿಯನ್ನು  ಪೊಲೀಸರು ಬಂಧಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಕಳೆದ ಒಂದು ವಾರದಿಂದ ತಾಯಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ಅವರ ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಎರಡು ದಿನಗಳ ಹಿಂದೆ ಕೃತಿ  ಸರಿತಾ ಅವರ ಮನೆಗ ಹೋಗಿ ಪೀಡಿಸಿ ಕರೆ ತಂದಿದ್ದಳು.

    ಏ.20ರ ಸಂಜೆ 5 ಗಂಟೆಯ ವೇಳೆ ನಾನು ದೊಮ್ಮಲೂರಿನಲ್ಲಿರುವ ಗಾಲ್ಫ್‌ ಅಸೋಸಿಯೇಷನ್‌ನಲ್ಲಿ ಇದ್ದಾಗ ನಮ್ಮ ಮನೆಯೆ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ತಂದೆಯ ದೇಹ ಕೆಳಗಡೆ ಬಿದ್ದಿರುತ್ತದೆ ಎಂದು ತಿಳಿಸಿದರು.

    ಕೂಡಲೇ ದೊಮ್ಮಲೂರಿನಿಂದ ಹೊರಟು ಸಂಜೆ 5:45ಕ್ಕೆ ಮನೆಗೆ ಆಗಮಿಸಿದೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರು ಇದ್ದರು. ತಂದೆಯ ತಲೆಯಿಂದ ರಕ್ತ ಬರುತ್ತಿತ್ತು. ದೇಹದ ಪಕ್ಕದಲ್ಲಿ ಬಾಟಲ್‌ ಮತ್ತು ಚಾಕು ಇತ್ತು. ನನ್ನ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು ಅವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಅವರ ವಿರುದ್ಧ ಕಾನೂ ಕ್ರಮಗಳನ್ನು ಕೈಗೊಳ್ಳಬೇಕು.

  • ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    – ವಾರದ ಹಿಂದೆ ವಾಟ್ಸಪ್‌ನಲ್ಲಿ ಪಲ್ಲವಿ ಮೆಸೇಜ್‌
    – ಪತಿ ವಿರುದ್ಧ ಗ್ರೂಪಿನಲ್ಲಿ ಗಂಭೀರ ಆರೋಪ

    ಬೆಂಗಳೂರು: ಓಂ ಪ್ರಕಾಶ್‌ (Om Prakash) ಅವರಿಗೆ ಉಗ್ರರ ಸಂಪರ್ಕ ಇದ್ದು, ಅವರ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಕೇಸ್‌ ದಾಖಲಿಸಬೇಕು. ನಮಗೆ ಕೇಂದ್ರ ಸರ್ಕಾರದಿಂದ ಸಹಾಯ ಬೇಕಿದೆ ಎಂದು ಪತ್ನಿ ಪಲ್ಲವಿ (Pallavi) ಅವರು ಈ ಹಿಂದೆ ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಪತ್ನಿ ಪಲ್ಲವಿ ಒಂದು ವಾರದ ಹಿಂದಿನ ವಾಟ್ಸಪ್‌ ಚಾಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪೊಲೀಸ್ ಆಫೀಸರ್ಸ್ ವೈಫ್ ಅಸೋಸಿಯೇಷನ್ ಗ್ರೂಪ್‌ನಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆರೋಪ ಮಾಡಿದ ಬಳಿಕ ಆ ಗ್ರೂಪ್‌ನಿಂದ ಪಲ್ಲವಿ ಹೊರ ನಡೆದಿದ್ದರು. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

     

    ಪಲ್ಲವಿ ಆರೋಪ ಏನು?
    ನನ್ನ ಗಂಡನ ಡಿಜಿಪಿ ಹುದ್ದೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಎಲ್ಲಾ ಪ್ರಕರಣಗಳನ್ನು ಮಾನಸಿಕ ಅಸ್ಥಿರತೆಯ ಕಾರಣಗಳನ್ನು ನೀಡಲಾಗುತ್ತಿತ್ತು.

    ಓಂಪ್ರಕಾಶ್ ರಿವಾಲ್ವರ್ ಹೊಂದಿದ್ದು ಅದನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು. ನಮ್ಮ ಮೊಬೈಲ್‌ ಹ್ಯಾಕ್‌ ಆಗುವ ಮೊದಲು ಈ ಸಂದೇಶವನ್ನು ಉಳಿಸಿಕೊಳ್ಳಿ. ನನ್ನನ್ನು ಒತ್ತೆಯಾಳುವಿನಂತೆ ನೋಡಲಾಗುತ್ತಿದೆ. ನಾನು ಎಲ್ಲಿಗೆ ಹೋದರೂ ಓಂಪ್ರಕಾಶ್ ಅವರ ಏಜೆಂಟ್‌ಗಳ ಕಣ್ಗಾವಲಿನಲ್ಲಿರುತ್ತೇನೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    ನಾನು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಕೇಳುತ್ತಾ ಬಂದಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಮೇಲೆ ಮತ್ತು ಮಗಳ ಮೇಲೆ ವಿಷಪ್ರಾಶನ ಮಾಡಲಾಗಿದ್ದು ನಾವಿಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದೇವೆ.

     

    ಓಂಪ್ರಕಾಶ್ ಗೆ ಮಸ್ತಾನ್ ಎಂಬ ಉಗ್ರನ ಸಂಪರ್ಕ ಇದ್ದು, ಪತಿ ಎನ್‌ಐಎ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಓಂ ಪ್ರಕಾಶ್‌ಗೆ ಹಣ ಬರುತ್ತಿದೆ. ರನ್ಯಾ ರಾವ್‌ಗಿಂತಲೂ ದೊಡ್ಡ ಪ್ರಕರಣ ಇದಾಗಿದ್ದು ಮುಂದೆ ನಾನು ಅಜಿತ್ ದೋವಲ್ ಅವರ ಗಮನಕ್ಕೆ ತರುತ್ತೇನೆ. ನನ್ನ ಮಗಳು ಮತ್ತು ನನಗೆ ಏನಾದರೂ ಸಂಭವಿಸಿದರೆ ಅದಕ್ಕೆ ಪತಿಯೇ ಹೊಣೆಯಾಗುತ್ತಾರೆ.

    ಈ ಗುಂಪಿನಲ್ಲಿರುವ ಅಧಿಕಾರಿಗಳು ಮತ್ತು ಇತರರು ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಎಲ್ಲರಿಗೆ ಕಳುಹಿಸಿ. ನಾನು ನನ್ನ ಪತಿಯ ಬಗ್ಗೆ ಹೇಳಿದ ಎಲ್ಲಾ ವಿಚಾರಗಳು ಸರಿಯಾಗಿದೆ.

  • ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ತೆಲುಗಿನ ನಟ ನಿಖಿಲ್ ಸಿದ್ಧಾರ್ಥ್ (Actor Nikhil Siddarth) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ನಿಖಿಲ್ ಪತ್ನಿ ಪಲ್ಲವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಗನ ಹೆಸರು ನಿಖಿಲ್ ರಿವೀಲ್ ಮಾಡಿದ್ದಾರೆ. ‌’ಧೀರ’ (Dheera Film) ಎಂದು ಮಗನಿಗೆ ಹೆಸರು ಇಟ್ಟಿರುವುದಾಗಿ ತಿಳಿಸಿದ್ದಾರೆ.

     

    View this post on Instagram

     

    A post shared by Nikhil Siddhartha (@actor_nikhil)

    ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ಮಗನಿಗೆ ಸಮಯ ಮೀಸಲಿಡುವುದಾಗಿ ನಿಖಿಲ್ ಮಾತನಾಡಿದ್ದಾರೆ. ಮಗನಿಗೆ ‘ಧೀರ ಸಿದ್ಧಾರ್ಥ್’ (Dheera Siddarth) ಎಂದು ಹೆಸರಿಟ್ಟಿದ್ದೇವೆ. ನಾನು ಪ್ರತಿದಿನ ಮಗನ ಜೊತೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ. ಮಕ್ಕಳು ಬೇಗನೆ ಬೆಳೆಯುತ್ತಾರೆ. ನಾನು ಕೂಡ ನನ್ನ ಪತ್ನಿಯ ಜವಾಬ್ದಾರಿಯನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ನಿಖಿಲ್ ಮಾತನಾಡಿದ್ದಾರೆ.

    ನಿಖಿಲ್ ಸಿದ್ಧಾರ್ಥ್ ಮತ್ತು ಪಲ್ಲವಿ 2020ರಲ್ಲಿ ಮದುವೆಯಾಗಿದ್ದಾರೆ. ಈ ವರ್ಷ ಫೆ.21ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ:ಇಡಿಯಿಂದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಸೇರಿದ 97 ಕೋಟಿ ರೂ. ಆಸ್ತಿ ಜಪ್ತಿ

    ಸದ್ಯ ನಿಖಿಲ್ ಸಿದ್ಧಾರ್ಥ್ ಅವರು ನಭಾ ನಟೇಶ್ ಜೊತೆಗಿನ ‘ಸ್ವಯಂಭು’ (Swayambu Film) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ತೆಲುಗು ಸಿನಿಮಾಗಳು ನಟನ ಕೈಯಲ್ಲಿದೆ.

  • ‘ಮಹಾನ್ ಕಲಾವಿದ’ನಾದ ಹಿಟ್ಲರ್ ಕಲ್ಯಾಣದ ನಟ ದಿಲೀಪ್ ರಾಜ್

    ‘ಮಹಾನ್ ಕಲಾವಿದ’ನಾದ ಹಿಟ್ಲರ್ ಕಲ್ಯಾಣದ ನಟ ದಿಲೀಪ್ ರಾಜ್

    ನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ (Dilip Raj) ಈಗ ಕಿರುತೆರೆಯಲ್ಲೂ ಜನಪ್ರಿಯ. “ಹಿಟ್ಲರ್ ಕಲ್ಯಾಣ”ದ A J ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಪ್ರಸ್ತುತ ಇವರು  “ಮಹಾನ್ ಕಲಾವಿದ” (Mahan kalavida) ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದೆ. ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.

    ನಾನು ಪತ್ರಕರ್ತ ಸುರೇಶ್ಚಂದ್ರ ಅವರ ಪುತ್ರ. ಇದು ನನ್ನ ಎರಡನೇ ಚಿತ್ರ.  ಈ ಕಥೆಯನ್ನು ಸಿದ್ದಪಡಿಸಿಕೊಂಡು “ಕಲಾವಿದ” ಅಂತ ಶೀರ್ಷಿಕೆಯಿಟ್ಟಿದೆ. ಈ ವಿಷಯವನ್ನು ರವಿಚಂದ್ರನ್ ಸರ್ ಗೆ ತಿಳಿಸಿದೆ. ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ ಬರೀ “ಕಲಾವಿದ” ಅಂತ ಬೇಡ. ಏನಾದರೂ ಸೇರಿಸು ಅಂದರು. ನಾನು “ಮಹಾನ್ ಕಲಾವಿದ” ಅಂತ ಇಟ್ಟೆ. ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ.‌ ಅವರೆ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ   ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಸಿಕ್ಕ ಗೆಳೆಯ ಭರತ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಅಭಯ್ ಚಂದ್ರ (Abhay Chandra) ತಿಳಿಸಿದರು.

    ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ದಿಲೀಪ್ ರಾಜ್ ಹೇಳಿದರು. ಇದನ್ನೂ ಓದಿ:ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

     ಈ ಚಿತ್ರದಲ್ಲಿ ದಿಲೀಪ್ ರಾಜ್ ಅವರ ಪತ್ನಿ ಪಾತ್ರ ಮಾಡುತ್ತಿರುವುದಾಗಿ ಜಾಹ್ನವಿ ರಾಯಲ (Jahnavi) ತಿಳಿಸಿದರು. ಲಾಕ್ ಡೌನ್ ನಂತರ ನನ್ನ ಮೊದಲ ಪತ್ರಿಕಾಗೋಷ್ಠಿ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ಪಲ್ಲವಿ ರಾಜು (Pallavi). ನಾನು ಮೂಲತಃ ಹಾಸನದವನು. ಈಗ ಮಂಡ್ಯ ನಿವಾಸಿ. ಅಪ್ಪ-ಅಮ್ಮನ ಸಹಕಾರದಿಂದ ನಿರ್ಮಾಪಕನಾಗಿದ್ದೇನೆ.‌ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಪಕ ಭರತ್ ಬಿ ಗೌಡ.

    Live Tv
    [brid partner=56869869 player=32851 video=960834 autoplay=true]

  • “ನನ್ನ ಮನದರಸಿ ಪಲ್ಲವಿ”: ಹೆಂಡ್ತಿ ಬಗ್ಗೆ ಸಿ.ಟಿ.ರವಿ ಮನದಾಳದ ಮಾತು

    “ನನ್ನ ಮನದರಸಿ ಪಲ್ಲವಿ”: ಹೆಂಡ್ತಿ ಬಗ್ಗೆ ಸಿ.ಟಿ.ರವಿ ಮನದಾಳದ ಮಾತು

    – ಫೇಸ್ ಬುಕ್ ನಲ್ಲಿ ವಿವಾಹ ವಾರ್ಷಿಕೋತ್ಸವದ ಅಕ್ಷರ ಶುಭಾಶಯ
    – ಮನೆಯಲ್ಲೇ ಅವಳದ್ದೇ ಕಾರು-ಬಾರು

    ಬೆಂಗಳೂರು: ಚಿಕ್ಕಮಗಳೂರು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಪಲ್ಲವಿ ದಂಪತಿ ಇಂದು 20ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದು ಫೇಸ್‍ಬುಕ್‍ನಲ್ಲಿ ಪತ್ನಿಗೆ ಅಕ್ಷರದ ಮೂಲಕ ಸಿಟಿ ರವಿ ಅವರು ಶುಭಾಶಯ ಹೇಳಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ನಾನು ಚತುರ್ಭುಜನಾಗಿ ಇಂದಿಗೆ ಸಾರ್ಥಕ 20 ವಸಂತ ತುಂಬಿತು. ವಿವಾಹ ಬಂಧನವೆ ಬೇಡವೆಂದು ಅಂದುಕೊಂಡಿದ್ದ ನನ್ನನ್ನು ತನ್ನೊಲವಿನಿಂದ ಆಕರ್ಷಿಸಿ, ಆವರಿಸಿಕೊಂಡು ನನ್ನ ಮನಸ್ಸನ್ನು ಬದಲಾಯಿಸಿ, ಹಿರೇಮಗಳೂರಿನ ಶ್ರೀ ಕೋದಂಡರಾಮನ ಸನ್ನಿಧಿಯಲ್ಲಿ ಕನ್ನಡದ ಪೂಜಾರಿ ಶ್ರೀ ಕಣ್ಣನ್ ಅವರ ಪೌರೋಹಿತ್ಯದಲ್ಲಿ, ಕನ್ನಡದ ಮಂತ್ರದೊಂದಿಗೆ, ಗುರುಹಿರಿಯರ ಸಮ್ಮುಖದಲ್ಲಿ ನಡೆದ ಸರಳ ವಿವಾಹದಲ್ಲಿ, ಸಪ್ತಪದಿ ತುಳಿದು ನನ್ನ ಬಾಳ ಸಂಗಾತಿಯಾಗಿ ಬಂದವಳು ನನ್ನ ಮನದರಸಿ ಪಲ್ಲವಿ.

    ಮನಕದ್ದ ದಿನದಿಂದ ಈ ದಿನದವರೆಗೆ ನನ್ನ ಸುಖ ದುಃಖದಲ್ಲಿ, ಬಾಳ ಏಳಿಗೆಯಲ್ಲಿ ಸಹಭಾಗಿಯಾಗಿ ನನ್ನ ಅಧಾರ್ಂಗಿಯಾಗಿ ಪಲ್ಲವಿ ನನ್ನ ಬದುಕಿನಲ್ಲಿ ಪಲ್ಲವಿಸಿದ್ದಾಳೆ. ನಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಪುತ್ರರತ್ನರನ್ನು (ಸಮರ್ಥ ಸೂರ್ಯ, ಸಾರ್ಥಕ್ ಸೂರ್ಯ) ದಯಪಾಲಿಸಿದ್ದಾಳೆ. ನಮ್ಮದು ಬೇವು-ಬೆಲ್ಲದ ಸಂಸಾರವೇ ಆದರೂ ಭಗವಂತ ನಮಗೆ ಬೆಲ್ಲವನ್ನೇ ಜಾಸ್ತಿ ದಯಪಾಲಿಸಿದ್ದಾನೆ. ಯಾಕೆಂದರೆ ನಮ್ಮ ಮನೆಯಲ್ಲಿ ಎಲ್ಲವೂ ಅವಳದೇ ಕಾರು-ಬಾರು. ನನಗೆ ಮಡದಿ, ಮಕ್ಕಳಿಗೆ ತಾಯಿಯಾಗಿ ಮಾತ್ರ ಅಲ್ಲ ನಮ್ಮೆಲ್ಲಾ ಕಾರ್ಯಕರ್ತರಿಗೆ ಪ್ರೀತಿಯ ಅಕ್ಕನಾಗಿ ನನ್ನ ಸಾರ್ವಜನಿಕ ಜೀವನದ ಒತ್ತಡವನ್ನೂ ಹಂಚಿಕೊಂಡಿದ್ದಾಳೆ.

    “ಅಯ್ಯೋ ನನಗೆ ಸಾಕ್ ಆಯ್ತಪ್ಪ ಇನ್ಮುಂದೆ ನಾನು ಎಲ್ಲೂ ಹೋಗಲ್ಲ. ನೀವುಂಟು, ನಿಮ್ಮ ಜನ ಉಂಟು, ಅದು ಹೆಂಗೆ ಸುತ್ತುತ್ತಿರಾ ನನಗೆ ಆಗಲ್ಲ” ಎಂದು ಹುಸಿಕೋಪ ತೋರಿಸಿದರೂ, ನಾನು ಸಂಘಟನೆಯ ಜವಾಬ್ದಾರಿಯಿಂದ ದೇಶ ಪರ್ಯಟನೆ ನಡೆಸುವಾಗ, ನಮ್ಮೂರ ಕಾರ್ಯಕರ್ತರು ಬಂದು “ಅಕ್ಕ, ಅಣ್ಣ ಊರಲ್ಲಿ ಇಲ್ಲ ಕಣಕ್ಕ ನೀನು ಬರಲೇಬೇಕು” ಎಂದಾಗ, ಹೋಗಿಬಂದು ನಾನು ಊರಲ್ಲಿಲ್ಲದ ಕೊರತೆಯನ್ನು ನೀಗಿಸಿದವಳು.

    ಮನೆಗೆ ಬಂದವರಿಗೆ ಭೇದವೆಣಿಸದೆ ಬಂಧುಗಳು ಎಂದು ಪರಿಗಣಿಸಿ ಪ್ರೀತಿಯಿಂದ ಕಂಡವಳು ಪಲ್ಲವಿ. ಇನ್ನು ಊಟೋಪಚಾರದ ವಿಚಾರಕ್ಕೆ ಬಂದರೆ ಆಕೆ ಸಾಕ್ಷಾತ್ ಅನ್ನಪೂರ್ಣೇಶ್ವರಿ, ಅಡುಗೆಯಲ್ಲಿ ಇವಳದ್ದು ನಳಪಾಕ, ಪ್ರವಾಸದಲ್ಲಿರುವಾಗ ಅವಳ ಕೈರುಚಿಯಡುಗೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಹಾಕುವ ಡ್ರೆಸ್ ಗಳ ಆಯ್ಕೆ ಅವಳದ್ದೇ, ಹಲವು ಬಾರಿ ನನ್ನುಡುಗೆ ಸರಿ ಕಾಣುತ್ತಿಲ್ಲವೆಂದು ಹುಸಿಮುನಿಸು ತೋರಿಸಿ ಬದಾಲಾಯಿಸುವವಳೂ ಇವಳೆ. ಹಾಗೆಯೇ ನನ್ನ ರಾಜಕೀಯ ಹೇಳಿಕೆಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ಮಾಡುವ ವಿಮರ್ಶಕಿಯೂ ಅಗಿದ್ದಾಳೆ.

    ಇಪ್ಪತ್ತು ವರ್ಷಗಳ ವೈವಾಹಿಕ ಜೀವನದಲ್ಲಿ ನನಗಿದು ಬೇಕು, ನನಗದು ಬೇಕು ಎಂಬ ಬೇಡಿಕೆಯ ಪಟ್ಟಿ ಇಟ್ಟವಳಲ್ಲ ನನ್ನ ಮಡದಿ, ಹಾಗೆಯೇ ಇಂದಿನವರೆಗೂ ಆಕೆಗೊಂದು ಉಡುಗೊರೆ ಕೊಟ್ಟವನೂ ನಾನಲ್ಲ. ನನ್ನ ಗಂಡ ಶಾಸಕ, ಮಂತ್ರಿ ಎಂದು ಮೆರೆದವಳೂ ಅಲ್ಲ. ನನ್ನ ಧರ್ಮಪತ್ನಿಯ ಒಂದೇ ಆಗ್ರಹ ಒಂದಿಡೀ ವರ್ಷದಲ್ಲಿ ಹತ್ತು ದಿನ ಮಡದಿ ಮಕ್ಕಳಿಗಾಗಿ ಮೀಸಲಿಟ್ಟು ಆ ಹತ್ತುದಿನ ಎಲ್ಲಿಯಾದರೂ ಪ್ರವಾಸ ಹೋಗೋಣ ಎಂಬುದು. ಅದನ್ನು ನಾನು ಒಪ್ಪಿಕೊಂಡು ಪ್ರತಿವರ್ಷ ಅಲ್ಲದಿದ್ದರೂ, ಹಲವು ವರ್ಷ ಅದನ್ನು ಈಡೇರಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿದ್ದಾಗ ಎಲ್ಲವನ್ನೂ ಈಡೇರಿಸಲು ಸಾಧ್ಯವೇ? ಒಂದು ವರ್ಷ ಹೋರಾಟ ,ಇನ್ನೊಂದು ವರ್ಷ ಚುನಾವಣೆ, ಮತ್ತೊಂದು ವರ್ಷ ಮೀಟಿಂಗು, ಆಗ ಅವಳು ನಿಮಗೆ ಕುಟುಂಬಕ್ಕಿಂತ ಪಕ್ಷವೇ ದೊಡ್ಡದು ಎಂದು ಹಿತವಾಗಿ ಕುಟುಕಿದ್ದುಂಟು. ಒಂದು ರೀತಿಯಲ್ಲಿ ಅದು ನಿಜವೂ ಕೂಡಾ,ನಮ್ಮ ಪಕ್ಷ, ಸಂಘಟನೆ ನಮಗೆ ಕಲಿಸಿರುವುದೂ ಅದೇ ಅಲ್ಲವೇ. “ನೇಶನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್” ಎಂಬ ಮೂಲ ಮಂತ್ರ ಹೊಂದಿರುವ ಪಾರ್ಟಿ ನಮ್ಮದು.

    ನಮ್ಮ ಸಾಂಸಾರಿಕ ಜೀವನದಲ್ಲಿ ಸರಸವೆ ಎಲ್ಲ, ವಿರಸವೆ ಇಲ್ಲವೆಂದಿಲ್ಲ, ರುಚಿಗೆ ತಕ್ಕಷ್ಟು ಉಪ್ಪಿನ ಹಾಗೆ ಅದೂ ಇದೆ. ಎಲ್ಲಾ ಸುಖ ಸಂಸಾರಗಳ ಸೂತ್ರದಂತೆ ಆ ಕಡೆಯಿಂದ ಬರುವ ಎಲ್ಲಾ ಅಸ್ತ್ರಗಳಿಗೆ ನನ್ನುತ್ತರ ಮೌನ ಮಾತ್ರ, ಯಾಕೆಂದರೆ ಅವಳು ವಿನಾಕಾರಣ ಜಗಳವಾಡುವವಳಲ್ಲ, ಏನೋ ತಪ್ಪಾಗಿರುತ್ತದೆ ಹಾಗಾಗಿ ಈ ಪ್ರತಿಕ್ರಿಯೆ ಎಂದು ಸುಮ್ಮನಿರುತ್ತೇನೆ. ಇದೆಲ್ಲ ಮುಗಿದ ಮೇಲೆ ನಾನು ಮುಂದಿನ ಜನ್ಮದಲ್ಲೂ ನೀನೇ ನನ್ನ ಸತಿ ಅಂದಾಗ, “ಅಯ್ಯೋ ನನಗೆ ಬೇಡಪ್ಪ ರಾಜಕಾರಣಿಯ ಸಹವಾಸ, ನನಗಂತೂ ಮುಂದಿನ ಜನ್ಮ ಬೇಡವೇ ಬೇಡ ಮುಂದಿನ ಜನ್ಮದಲ್ಲಿ ನಿಮಗೆ ಒಬ್ಬಳು ಗಯ್ಯಾಳಿ ಹೆಂಡತಿ ಸಿಗಬೇಕು” ಅಂದು ಹುಸಿಕೋಪ ತೋರಿಸಿದವಳು.

    ನನ್ನ ಮಡದಿ ಪಲ್ಲವಿ, ಸಾರ್ವಜನಿಕ ಜೀವನದ ಇತಿಮಿತಿ ಅರಿತು ಬದುಕುತ್ತಿರುವವಳು, ನನ್ನ ಹೆಸರಿಗೆ ಕೆಟ್ಟ ಹೆಸರು ಬರಬಾರದೆಂದು ಕಳವಳಿಸುತ್ತಿರುವವಳು. ನನ್ನ ಹೆತ್ತವರ ಪಾಲಿಗೆ ಮಗಳಾಗಿರುವವಳು. ನಮಗಾಗಿ ವ್ರತ ಮಾಡುವವಳು,ತಾನು ಕಷ್ಟಪಡುತ್ತಾ ನಮ್ಮ ಸಂತೋಷಕ್ಕೆ ಸಂಭ್ರಮಿಸುವವಳು. ಮನಸ್ಸಿನಲ್ಲಿ ಏನು ಇಟ್ಟುಕೊಳ್ಳದೆ, ಭಾವನೆಗಳನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಬಿಚ್ಚಿಟ್ಟು ಮನಸ್ಸು ಹಗುರ ಮಾಡಿಕೊಳ್ಳುವವಳು.

    ಗುಣಸಂಪನ್ನೆ ಮಗಳು, ಸೊಸೆ ,ತಾಯಿ, ಅತ್ತಿಗೆ, ಮಡದಿಯಾಗಿರುವ ಪಲ್ಲವಿಯೇ ಮುಂದಿನ ಜನ್ಮಕ್ಕೂ ನನ್ನ ಮಡದಿಯಾಗಲಿ ಎಂದು ಬಯಸುವುದು ಸಹಜ ಅಲ್ಲವೇ?

  • `ಹನಿಗಳು ಏನನ್ನು ಹೇಳಲು ಹೊರಟಿವೆ’ ಈ ವಾರ ಬಿಡುಗಡೆ

    `ಹನಿಗಳು ಏನನ್ನು ಹೇಳಲು ಹೊರಟಿವೆ’ ಈ ವಾರ ಬಿಡುಗಡೆ

    ಬೆಂಗಳೂರು: ಹೊನ್ನಾದೇವಿ ಕ್ರೀಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನಿಗಳು ಏನನ್ನು ಹೇಳಲು ಹೊರಟಿವೆ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿ ಹುಡುಗನೊಬ್ಬ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಾನೆ. ಹಾಗೆ ಕಾಲೇಜು ಸೇರಿದ ಹುಡುಗ ಪ್ರೀತಿಯ ಬಲೆಗೆ ಬಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗುತ್ತಾನೆ. ಆ ನಂತರ ಆತನ ಬದುಕಿನಲ್ಲಿ ಏನೆಲ್ಲಾ ತಿರುವುಗಳು ಎದುರಾಗುತ್ತವೆ ಅನ್ನೋದು ಈ ಚಿತ್ರದ ಸಾರಾಂಶ.

    ಈ ಚಿತ್ರಕ್ಕೆ ನಾಗರಾಜ್.ಬಿ.ಹೆಚ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಾಣದ ಜೊತೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ, ಅರುಣ್ ಗೂಳೂರು ಛಾಯಾಗ್ರಹಣ, ಅಜಯ್, ನಾಗೇಶ್ ಸಾಹಿತ್ಯ, ಅವಿನಾಶ್ ಶರತ್ ಬೈಂದೂರು, ಚಿರು ಸಂಕಲನವಿದೆ, ನಾಗೇಶ್, ಪಲ್ಲವಿ, ಚಂದ್ರ, ಅರುಣ್ ಶಿವಲಿಂಗೇಗೌಡ ಪಾಂಡವಪುರ, ಮಧು, ಬಸವರಾಜ್, ಜೀವನ್, ಅಭಿಷೇಕ್ ಮುಂತಾದವರ ತಾರಾಬಳಗವಿದೆ.