Tag: ಪಲ್ಟಿ

  • ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಶಿವಮೊಗ್ಗ: ಪುರಾಣ ಪ್ರಸಿದ್ಧ ಯಾತ್ರ ಸ್ಥಳ ಕೊಡಚಾದ್ರಿಗೆ ಹೋಗುವಾಗ ಜೀಪ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಮೃತ ಮಹಿಳೆಯನ್ನು ಕೇರಳ ತ್ರಿಶ್ಯೂರ್ ಮೂಲದ 38 ವರ್ಷದ ಸರಿತಾ ಎಂದು ಗುರುತಿಸಲಾಗಿದೆ. ಜೀಪಿನಲ್ಲಿ ಇದ್ದ ಇನ್ನಿತರರಿಗೆ ಗಾಯಗಳಾಗಿದ್ದು, ಅವರನ್ನು ಕುಂದಾಪುರ ಆಸ್ಪತ್ರೆಗೆ ಸೇರಿಸಲಾಗಿದೆ

    ಕೇರಳದಿಂದ ಬಂದಿದ್ದ ಎಂಟು ಜನ ಯಾತ್ರಿಕರು ಇದ್ದ ಈ ಜೀಪ್ ಕೊಡಚಾದ್ರಿಯ ದುರ್ಗಮ ಮಾರ್ಗದಲ್ಲಿ ಹತ್ತುವಾಗ ಆಕ್ಸಲ್ ಕಟ್ಟಾಗಿದೆ. ಇದರಿಂದಾಗಿ ಜೀಪ್ ನಿಯಂತ್ರಣ ತಪ್ಪಿದಾಗ ಮುಂದಿನ ಸೀಟಿನಲ್ಲಿ ಕೂತಿದ್ದ ಮಹಿಳೆ ಕೆಳಗೆ ಉರುಳಿ, ಅವರ ಮೇಲೆ ಜೀಪು ಪಲ್ಟಿಯಾಗಿ ಬಿದ್ದಿದೆ.

    ಕೊಲ್ಲೂರಿಗೆ ಬಂದು ಮೂಕಾಂಬಿಕೆ ದರ್ಶನ ಪಡೆದು ಅಲ್ಲಿಂದ ಹೊಸನಗರ ತಾಲೂಕಿನಲ್ಲಿರುವ ಕೊಡಚಾದ್ರಿಯ ತುದಿಯಲ್ಲಿ ಇರುವ ಸರ್ವಜ್ಞ ಪೀಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವುದು ವಾಡಿಕೆ.

    ಈ ಮಾರ್ಗ ಅತ್ಯಂತ ದುರ್ಗಮವಾಗಿದ್ದು, ಜೀಪು ಸೇರಿ ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ, ಅರಣ್ಯ ಇಲಾಖೆ ಜೀಪ್ ಮಾಲೀಕರಿಂದ ಹಣ ಕಟ್ಟಿಸಿಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಹಲವು ಬಾರಿ ಈ ರೀತಿಯ ಅವಘಡಗಳು ನಡೆದಿದ್ದರೂ, ಪ್ರಾಣಾಪಾಯ ಸಂಭವಿಸಿರಲಿಲ್ಲ. ಈಗ ಜೀಪ್ ಚಾಲಕರ ಹಣದಾಸೆ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಯಾತ್ರೆಗೆ ಬಂದಿದ್ದ ಮಹಿಳೆ ಜೀವ ಬಲಿ ಪಡೆದಿದೆ.

    ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟನೆ ನಡೆದಿದೆ.

  • ಗ್ರಾನೈಟ್ ತುಂಬಿದ್ದ ಲಾರಿ ಪಲ್ಟಿ- ಚಾಲಕನ ದುರ್ಮರಣ

    ಗ್ರಾನೈಟ್ ತುಂಬಿದ್ದ ಲಾರಿ ಪಲ್ಟಿ- ಚಾಲಕನ ದುರ್ಮರಣ

    ದಾವಣಗೆರೆ: ಗ್ರಾನೈಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಹರಿಹರ ತಾಲೂಕಿನ ಕೋಮರನಹಳ್ಳಿ ಕಣಿವೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕ್ಲೀನರ್ ಗೆ ಗಂಭೀರ ಗಾಯಗಳಾಗಿವೆ. ಇವರಿಬ್ಬರು ಹೊಸಪೇಟೆ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಸದ್ಯ ಕ್ಲೀನರ್ ಹರಿಹರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗ್ರಾನೈಟ್ ತುಂಬಿಕೊಂಡು ಲಾರಿ ಹೊಸಪೇಟೆ ಕಡೆಯಿಂದ ಶಿವಮೊಗ್ಗ ಕಡೆ ತೆರಳುತ್ತಿತ್ತು, ಓವರ್ ಲೋಡ್ ಆದ ಪರಿಣಾಮ ತಿರುವು ಹಾಗೂ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

    ಘಟನೆ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿ – 15 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿ – 15 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಕೊಪ್ಪಳ: ಸ್ಟೇರಿಂಗ್ ಕಟ್ ಆದ ಪರಿಣಾಮ ಸರ್ಕಾರಿ ಬಸ್ಸೊಂದು ಪಲ್ಟಿಯಾಗಿ 15 ಪ್ರಯಾಣಿಕರು ಗಾಯಗೊಂಡು, ಮೂವರ ಸ್ಥಿತಿ ಗಂಭೀರವಾಗಿರೋ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

    ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಬಳಿ ಬಸ್ ಪಲ್ಟಿಯಾಗಿದೆ. ತಾವರಗೇರಾದಿಂದ ಕುಷ್ಟಗಿ ಕಡೆಗೆ ಹೊರಟಿದ್ದ ಬಸ್ ನಲ್ಲಿ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸ್ತಿದ್ರು. ದೋಟಿಹಾಳ ಗ್ರಾಮದ ಬಳಿ ಬಸ್ ಬರುತ್ತಿದ್ದಂತೆ ಸ್ಟೇರಿಂಗ್ ಕಟ್ ಆಗಿ ಬುಡಮೇಲಾಗಿ ಬಿದ್ದಿದೆ. ಮೂವರ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.

    ಘಟನೆಯಿಂದ ಕೆಲ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕುಷ್ಟಗಿ ಸರ್ಕಾರಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಕಾಡುಹಂದಿ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಅಂಬುಲೆನ್ಸ್-ಇಬ್ಬರಿಗೆ ಗಾಯ

    ಕಾಡುಹಂದಿ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಅಂಬುಲೆನ್ಸ್-ಇಬ್ಬರಿಗೆ ಗಾಯ

    ಮಂಡ್ಯ: ಅಂಬುಲೆನ್ಸ್ ಪಲ್ಟಿ ಹೊಡೆದು ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಆಂಬ್ಯುಲೆನ್ಸ್ ಚಾಲಕ ರವಿ ಮತ್ತು ಸಹಾಯಕ ಸುರೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ಮಂಗಳವಾರ ರಾತ್ರಿ ನಾಗಮಂಗಲದಿಂದ ರೋಗಿಯೊಬ್ರನ್ನ ಕರೆದುಕೊಂಡು ಬಂದು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಾತ್ರಿ 2:30 ಸುಮಾರಿಗೆ ಬಸರಾಳು ಬಳಿ ಹೋಗುತ್ತಿದ್ದ ವೇಳೆ ಕಾಡುಹಂದಿ ಅಡ್ಡ ಬಂದಿದೆ. ಈ ಕಾಡುಹಂದಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ ಪಲ್ಟಿ ಹೊಡೆದಿದೆ.

    ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ವಾಹನದೊಳಗೆ ಸಿಲುಕಿ ಒದ್ದಾಡುತ್ತಿದ್ದ ಇಬರನ್ನು ನೈಟ್ ಬೀಟ್ ಪೊಲೀಸರು ರಕ್ಷಣೆ ಮಾಡಿ ಬಸರಾಳು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

  • ಮರಳು ಚೀಲದ ಮೇಲೆ ಮೆಡಿಕಲ್ ಕಾಲೇಜು ಬಸ್ ಹತ್ತಿ ಪಲ್ಟಿ: ಓರ್ವನಿಗೆ ಗಾಯ

    ಮರಳು ಚೀಲದ ಮೇಲೆ ಮೆಡಿಕಲ್ ಕಾಲೇಜು ಬಸ್ ಹತ್ತಿ ಪಲ್ಟಿ: ಓರ್ವನಿಗೆ ಗಾಯ

    ಧಾರವಾಡ: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿದ್ದ ಬಸ್ ಪಲ್ಟಿಯಾದ ಘಟನೆ ಧಾರವಾಡ ಹೊರವಲಯದ ಓಝೋನ್ ಹೋಟೆಲ್ ಬಳಿ ನಡೆದಿದೆ.

    ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಬಿ ಡಿ ಜತ್ತಿ ವೈದ್ಯಕೀಯ ಕಾಲೇಜಿಗೆ ಸೇರಿದ ಬಸ್‍ನಲ್ಲಿ ಬಿಎಚ್‍ಎಂಎಸ್ ವಿದ್ಯಾರ್ಥಿಗಳು ಎಸ್‍ಡಿಎಂ ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗುವ ವೇಳೆ ಈ ಘಟನೆ ನಡೆದಿದೆ.

    ರಸ್ತೆ ಕಾಮಗಾರಿ ನಡೆಯುತ್ತಿರುವ ಈ ರಸ್ತೆಯಲ್ಲಿ ಮರಳು ಚೀಲದ ಮೇಲೆ ಬಸ್ ಹತ್ತಿದ್ದರಿಂದ ಬಸ್ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಬಸ್‍ನಲ್ಲಿ 20 ವಿದ್ಯಾರ್ಥಿಗಳು ಇದ್ದರು ಎಂದು ತಿಳಿದು ಬಂದಿದ್ದು, ವಿದ್ಯಾರ್ಥಿಗೆ ಸಣ್ಣ ಪುಟ್ಟ ಗಾಯವಾಗಿತ್ತು. ಆತನನ್ನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಬಿದ್ದ ಬಸ್ ತೆರವುಗೊಳಿಸಿದರು.

  • ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಓರ್ವ ಸಾವು

    -ಶಾಲೆಗೆ ಹೋಗುತ್ತಿದ್ದ ಬಾಲಕಿಯರ ಮೇಲೂ ಬಿದ್ದ ಸಿಲಿಂಡರ್‍ಗಳು

    ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಾಣದಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಬಸವರಾಜ್ (42) ಮೇಲೆ ಗ್ಯಾಸ್ ಸಿಲಿಂಡರ್‍ಗಳು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ವೇಳೆ ಶಾಲೆಗೆ ತೆರಳುತ್ತಿದ್ದ ಶಾಲಾ ಬಾಲಕಿಯರ ಮೇಲೆಯೂ ಗ್ಯಾಸ್ ಸಿಲಿಂಡರ್‍ಗಳು ಬಿದ್ದದರಿಂದ ಅಕ್ಷತಾ ಮತ್ತು ತನುಶ್ರೀ ಎಂಬ ಇಬ್ಬರು ಶಾಲಾ ಬಾಲಕಿಯರಿಗೆ ಗಂಭೀರ ಗಾಯಗಳಾಗಿವೆ. ಅಕ್ಷತಾಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮತ್ತು ತನುಶ್ರೀಯನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

    ಬೆಳಗ್ಗೆ ಮಂಜು ಕವಿದಿದ್ದರಿಂದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಲಾರಿ ಭದ್ರಾವತಿಯಿಂದ ಚನ್ನಗಿರಿ ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚನ್ನಗಿರಿ ಠಾಣಾ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಲಾರಿಯಿಂದ ಬಿದ್ದ ಗ್ಯಾಸ್ ಸಿಲಿಂಡರ್‍ಗಳು ಲೀಕ್ ಆಗುತ್ತಿರುವುದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.