Tag: ಪಲ್ಟಿ

  • ದೇವರ ದರ್ಶನ ಪಡೆದು ಬರುತ್ತಿದ್ದ ಕ್ರೂಸರ್ ಪಲ್ಟಿ- 12 ಮಂದಿ ಗಂಭೀರ

    ದೇವರ ದರ್ಶನ ಪಡೆದು ಬರುತ್ತಿದ್ದ ಕ್ರೂಸರ್ ಪಲ್ಟಿ- 12 ಮಂದಿ ಗಂಭೀರ

    ವಿಜಯಪುರ: ದೇವರ ದರ್ಶನ ಪಡೆದು ವಾಪಾಸ್ ಬರುತ್ತಿದ್ದ ವೇಳೆ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಕ್ರೂಸರ್ ಪಲ್ಟಿಯಾಗಿದೆ.

    ಇಂಡಿ ತಾಲೂಕಿನ ಧೂಳಖೇಡ ಬಳಿಯ ಚಾಚಾ ದಾಬಾದ ಹತ್ತಿರ ಈ ಅಪಘಾತ ಸಂಭವಿಸಿದೆ. ತುಳಜಾಪುರಕ್ಕೆ ಹೋಗಿ ವಾಪಸ್ಸು ಬರುವಾಗ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ಮದುವೆಯ ನಂತರ ದೇವಸ್ಥಾನಕ್ಕೆ ಹೋಗಿದ್ದ ನವ ದಂಪತಿ ಕೂಡ ಗಾಯಗೊಂಡಿದ್ದಾರೆ. ಜೊತೆಗೆ ವಾಹನದಲ್ಲಿದ್ದ 12 ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ರಾಷ್ಟೀಯ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಕ್ರೂಸರ್ ಚಾಲಕ ಮುಂದಾಗಿದ್ದನು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಏಕಾಏಕಿ ಪಲ್ಟಿಯಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

    ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

    – ಶಾಸಕ ಹರತಾಳು ಹಾಲಪ್ಪ ಸಹಾಯ

    ಶಿವಮೊಗ್ಗ: ಸಾಗರಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಪಲ್ಟಿಯಾಗಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಈ ಘಟನೆ ಸಾಗರ ಸಮೀಪದ ಉಳ್ಳೂರು ಎಂಬಲ್ಲಿ ನಡೆದಿದೆ. ಹೊನ್ನಾವರದ ಕೀರ್ತನಾ, ಸುಜಾತ, ಚಿತ್ರದುರ್ಗ ಜಿಲ್ಲೆಯ ಮೊಹಮ್ಮದ್ ಮೃತ ದುರ್ದೈವಿಗಳಾಗಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು.

    ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಪಲ್ಟಿಯಾದ ಬಳಿಕ ಬಸ್ ಒಳಗೆ ಸಿಲುಕಿಕೊಂಡಿದ್ದವರನ್ನು ಹರಸಾಹಸಪಟ್ಟು ಸ್ಥಳೀಯರು, ಪೊಲೀಸರು ಹೊರತೆಗೆದಿದ್ದಾರೆ. ಬಳಿಕ ಗಾಯಾಳುಗಳನ್ನು ಕೂಡಲೇ ಸಾಗರ, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.

    ಗಾಯಾಳುಗಳನ್ನು ಸಾಗಿಸುತ್ತಿದ್ದಾಗ ಅದೇ ಮಾರ್ಗವಾಗಿ ಶಾಸಕ ಹರತಾಳು ಹಾಲಪ್ಪ ಬರುತ್ತಿದ್ದರು. ಈ ವೇಳೆ ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ್ರು.

    ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

    ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

    ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಅದರಿಂದ ಸೋರಿಕೆಯಾಗುತ್ತಿದ್ದ ಡೀಸೆಲ್‍ಗಾಗಿ ಜನರು ಮುಗಿಬಿದ್ದಿದ್ದ ದೃಶ್ಯ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮ ಬಳಿ ಕಂಡುಬಂದಿದೆ.

    ಇಂದು ಬೆಲಗೂರು ಬಳಿಕ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ ಟ್ಯಾಂಕರ್ ನಿಂದ ಸೋರಿದ ಡೀಸೆಲ್ ತುಂಬಿಕೊಂಡು ಹೋಗಲು ಜನರು ಮುಗಿಬಿದ್ದಿದ್ದರು. ತಾ ಮುಂದು ನಾ ಮುಂದು ಎಂದು ಡೀಸೆಲ್‍ಗಾಗಿ ಜನ ಮುಗಿಬಿದ್ದಿದ್ದು, ಸಿಕ್ಕ ಸಿಕ್ಕ ಬಾಟಲಿ, ಕೊಡ, ಬಕೆಟ್, ಕ್ಯಾನ್‍ಗಳನ್ನು ತಂದು ಡೀಸೆಲ್ ಹೊತ್ತೊಯ್ದ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕದಳ ಭೇಟಿ ನೀಡಿದ್ದು, ಟ್ಯಾಂಕರ್ ಅನ್ನು ಎತ್ತಿ ನಿಲ್ಲಿಸಿ ಡೀಸೆಲ್ ಸೋರಿಕೆಗೆ ಬ್ರೇಕ್ ಹಾಕಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅಲ್ಲದೆ ಗಾಯಾಳು ಚಾಲಕ ಹಾಗೂ ಸಹಾಯಕನನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ- ಮಧ್ಯರಾತ್ರಿಯಲ್ಲಿ ತಪ್ಪಿದ ಭಾರೀ ಅನಾಹುತ

    ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ- ಮಧ್ಯರಾತ್ರಿಯಲ್ಲಿ ತಪ್ಪಿದ ಭಾರೀ ಅನಾಹುತ

    ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾಗಿ ಮಧ್ಯರಾತ್ರಿಯಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ರಾಯಚೂರಿನ ಶಕ್ತಿನಗರದ KPC ಮೇನ್ ಗೇಟ್ ನ ಬಳಿ ನಡೆದಿದೆ.

    ಮಂಗಳವಾರ ರಾತ್ರಿ ಸಾರಿಗೆ ಬಸ್ ರಾಯಚೂರಿನಿಂದ ಬಳ್ಳಾರಿಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಆಗಿದೆ. ಬಸ್‍ನಲ್ಲಿ ಸುಮಾರು 35ಕ್ಕೂ ಅಧಿಕ ಪ್ರಯಾಣಿಕರಿದ್ದರು. ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

    ಬಸ್ ಪಲ್ಟಿ ಆಗಿದ್ದರಿಂದ ಕಂಡಕ್ಟರ್ ಹಾಗೂ ಡ್ರೈವರ್ ಸೇರಿದಂತೆ ಎಂಟು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಅಪಘಾತದಲ್ಲಿ ಗಾಯಗೊಂಡವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೊರವನಹಳ್ಳಿ ದೇಗುಲಕ್ಕೆ ಹೋಗುವಾಗ ಕಾರು ಪಲ್ಟಿ- ಓರ್ವ ದುರ್ಮರಣ

    ಗೊರವನಹಳ್ಳಿ ದೇಗುಲಕ್ಕೆ ಹೋಗುವಾಗ ಕಾರು ಪಲ್ಟಿ- ಓರ್ವ ದುರ್ಮರಣ

    ಚಿತ್ರದುರ್ಗ: ಮಹೀಂದ್ರ ಜೈಲೋ ಕಾರು ಪಲ್ಟಿಯಾಗಿ ಒಬ್ಬ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೋಹನ್ (45) ಮೃತ ದುರ್ದೈವಿ. ಮೋಹನ್ ಮೂಲತಃ ಚಳ್ಳಕೆರೆ ಪಟ್ಟಣ ನಿವಾಸಿಯಾಗಿದ್ದಾರೆ. ಇವರು ಚಳ್ಳಕೆರೆಯಿಂದ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಲಕ್ಷ್ಮೀ ದೇಗುಲಕ್ಕೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿದೆ.

    ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

    ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

    ಕಾರವಾರ: ಅತಿವೇಗದ ಚಾಲನೆಯಿಂದ ಕಾರು ಪಲ್ಟಿಯಾಗಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟು, ಮೂರು ವಿದ್ಯಾರ್ಥಿಗಳಿಗೆ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಶಮ್ಮಾಸ್(19) ಅಪಘಾತದಲ್ಲಿ ಮೃತ ವಿದ್ಯಾರ್ಥಿ. ಶಮ್ಮಾಸ್ ಭಟ್ಕಳ ಪಟ್ಟಣದ ಜಾಮೀಯಾ ಸ್ಟ್ರೀಟ್ ನಿವಾಸಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅಪಘಾತದ ನಂತರ ಪರೀಕ್ಷೆಯನ್ನು ಬರೆಯಲು ತೆರಳಿದ್ದಾರೆ.

    ಮದರಸಾದಲ್ಲಿ ಓದುತಿದ್ದ ವಿದ್ಯಾರ್ಥಿಗಳು ಭಟ್ಕಳದಿಂದ ಕಾರವಾರದ ಕಡೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯಲು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿ ಕಾರು ಚಲಾಯಿಸಿ ನಿಯಂತ್ರಿಸಲಾಗದೇ ಪಲ್ಟಿ ಹೊಡೆದಿದೆ. ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 40ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ಬಸ್ ಪಲ್ಟಿ- ಓರ್ವ ಸಾವು

    40ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ಬಸ್ ಪಲ್ಟಿ- ಓರ್ವ ಸಾವು

    ಮಂಡ್ಯ: ಬೆಳಗ್ಗೆ 40ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ಬಸ್ ಅಯತಪ್ಪಿ ಹಳ್ಳಕ್ಕೆ ಬಿದ್ದಿದ್ದು, ಎದುರಿನಿಂದ ಬರುತ್ತಿದ್ದ ಸ್ಕೂಟಿ ಸವಾರ ಬಸ್ಸಿಗೆ ಗುದ್ದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಮದ್ದೂರು ಆರ್.ಕೆ ವಿದ್ಯಾ ಸಂಸ್ಥೆಯ ಶಾಲಾ ಬಸ್ ಹಳ್ಳಕ್ಕೆ ಬಿದ್ದಿದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಬಸ್ಸಿನಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಈ ವೇಳೆ ಅಯತಪ್ಪಿ ಬಸ್ ಹಳ್ಳಕ್ಕೆ ಬಿದ್ದಿದೆ. ಅಪಘಾತದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸಲಾಗಿದೆ.

    ಇದೇ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ವ್ಯಕ್ತಿಯೊರ್ವ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಡಿ.ಹೊಸುರು ಗ್ರಾಮದ ಕರಿಯಪ್ಪ ಅವರ ಪುತ್ರ ಮಧು(21) ಮೃತಪಟ್ಟ ದುರ್ದೈವಿ. ಬೆಳಗ್ಗೆ ಮಗುವನ್ನು ಸ್ಕೂಟಿಯಲ್ಲಿ ಶಾಲೆಗೆ ಬಿಟ್ಟು ಬರುತ್ತಿದ್ದ ವೇಳೆ ಈ ಅಪಘಾತವಾಗಿ ಸಾವನ್ನಪ್ಪಿದ್ದಾನೆ.

    ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕೆ. ಹೊನ್ನಲಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿದ್ಯುತ್ ಕಂಬಗಳನ್ನ ಸಾಗಿಸ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಇಂಜಿನ್ ಕೆಳಗಡೆ ಸಿಲುಕಿ ನರಳಾಡಿದ ಚಾಲಕ

    ವಿದ್ಯುತ್ ಕಂಬಗಳನ್ನ ಸಾಗಿಸ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಇಂಜಿನ್ ಕೆಳಗಡೆ ಸಿಲುಕಿ ನರಳಾಡಿದ ಚಾಲಕ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳನ್ನ ಸಾಗುಸುತ್ತಿದ್ದ ಟ್ರ್ಯಾಕ್ಟರೊಂದು ಪಲ್ಟಿಯಾಗಿದ್ದು, ಇಂಜಿನ್ ಕೆಳಗಡೆ ಸಿಲುಕಿ ಚಾಲಕ ನರಳಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ನಡೆದಿದೆ.

    ಹೊಸಕೋಟೆ ಚಿಂತಾಮಣಿ ಹೆದ್ದಾರಿಯ ಸಿದಾರ್ಥ ನಗರ ಬಳಿ ಈ ಅಪಘಾತ ಸಂಭವಿಸಿದೆ. ವಿದ್ಯುತ್ ಕಂಬಗಳನ್ನ ಸಾಗುಸುತ್ತಿದ್ದ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾಗಿದೆ. ಏಕಾಏಕಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಇಂಜಿನ್ ಕೆಳಗಡೆ ಸಿಲುಕಿ ನರಳಾಡುತ್ತಿದ್ದನು. ಇದನ್ನು ಗಮನಿಸಿದ ಸಾರ್ವಜನಿಕರು ಚಾಲಕನನ್ನು ಹೊರಕ್ಕೆ ತೆಗೆದು ಸಹಾಯ ಮಾಡಿದ್ದಾರೆ.

    ಸರಿಯಾದ ಸಮಯಕ್ಕೆ ಚಾಲಕನ ನೆರವಿಗೆ ಬಂದ ಸಾರ್ವಜನಿಕರು ಆತನನ್ನು ರಕ್ಷಣೆ ಮಾಡಿದ್ದಾರೆ. ಆದ್ದರಿಂದ ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸದ್ಯ ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಕರ್ನಾಟಕದವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಲು ಸಿಎಂ ಮನವಿ

    ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಕರ್ನಾಟಕದವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಲು ಸಿಎಂ ಮನವಿ

    ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಓರ್ವಕಲ್ ಎಂಬಲ್ಲಿ ಅಪಘಾತಕ್ಕೆ ಒಳಗಾದ ಮಂಡ್ಯ ಜಿಲ್ಲೆ ಬೆಳ್ಳೂರು ಗ್ರಾಮದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗಿದೆ.

    ಅಪಘಾತದ ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಫಕೀರಪ್ಪ ಕಾಗಿನೆಲೆ ಅವರನ್ನು ಸಂಪರ್ಕಿಸಿ ಇವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಸದ್ಯ ಕರ್ನಾಟಕ ಮೂಲದವರೇ ಆಗಿರುವ ಫಕೀರಪ್ಪ ಅವರು ಪ್ರಯಾಣಿಕರನ್ನು ಬಸ್ ವ್ಯವಸ್ಥೆ ಮಾಡಿ ಕಳುಹಿಸಲು ಕ್ರಮವಹಿಸಿದ್ದಾರೆ. ಈ ಬಗ್ಗೆ ಸಿಎಂ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಆಗಿದೆ.

    ಏನಿದು ಘಟನೆ:
    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮಸ್ಥರು ಒಂದು ಬಸ್‍ನಲ್ಲಿ ಇದೇ ತಿಂಗಳ 18ರಂದು ಪ್ರವಾಸ ಹೊರಟಿದ್ದರು. ಮಹಾನಂದಿ ದರ್ಶನ ಮುಗಿಸಿಕೊಂಡು ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಬಸ್ ಬಲ್ಟಿಯಾಗಿ ಗೋವಿಂದ ಸ್ವಾಮಿ ಎಂಬವರು ಮೃತಪಟ್ಟಿದ್ದಾರೆ. ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳು ಕರ್ನೂಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಹೈದರಾಬಾದ್/ಮಂಡ್ಯ: ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ನಿವಾಸಿಗಳು ಖಾಸಗಿ ಬಸ್‍ನಲ್ಲಿ ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಮಂತ್ರಾಲಯ ಕರ್ನೂಲ್ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.

    ಎದುರುಗಡೆಯಿಂದ ಬಂದ ಕಾರನ್ನು ಅವಾಯ್ಡ್ ಮಾಡಲು ಹೋಗಿ ಬಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ಒಬ್ಬರು ಮೃತರಾಗಿದ್ದಾರೆ. ಬಸ್‍ನಲ್ಲಿ 45 ಜನ ಪ್ರಯಾಣಿಕರಿದ್ದು 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ.

    ಮಂಡ್ಯ ಜಿಲ್ಲೆಗೆ 2018-19 ಕರಾಳ ವರ್ಷವಾಗಿ ಕಾಡುತ್ತಿದೆಯಾ..!? ಬಸ್ ದುರಂತದಲ್ಲಿ ಹತ್ತಾರು ಜೀವ ಕಳೆದುಕೊಳ್ಳಲಾಯಿತು. ಅಂಬರೀಶ್ ಮೃತಪಟ್ಟರು, ವೀರಯೋಧ ಗುರು ಹುತಾತ್ಮರಾದರು. ಆ ಬಳಿಕ ಮಂಡ್ಯದಲ್ಲಿ ಬಸ್ ಅಪಘಾತದಲ್ಲಿ ನವವಿವಾಹಿತೆ ಮೃತಪಟ್ಟಿದ್ದಾರೆ. ಇದೀಗ ಮಂತ್ರಾಲಯ ಪ್ರವಾಸ ಹೋಗಿ ವಾಪಸ್ ಬರುವಾಗ ಭೀಕರ ದುರಂತ ಸಂಭವಿಸಿ ಓರ್ವ ಮೃತಪಟ್ಟರೆ, 20 ಜನ ಗಾಯಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv