Tag: ಪಲ್ಟಿ

  • ಮದುವೆಗೆ ಹೋಗಿದ್ದ ಮಿನಿ ಬಸ್ ಪಲ್ಟಿ – 30 ಜನರಿಗೆ ಗಾಯ

    ಮದುವೆಗೆ ಹೋಗಿದ್ದ ಮಿನಿ ಬಸ್ ಪಲ್ಟಿ – 30 ಜನರಿಗೆ ಗಾಯ

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಮಿನಿ ಬಸ್ (Mini Bus) ಪಲ್ಟಿಯಾಗಿದ್ದು, 30ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯವಾಗಿದೆ. ಈ ಪೈಕಿ ನಾಲ್ವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

    ಘಟನೆ ಹಾವೇರಿ (Haveri) ತಾಲೂಕಿನ ದೇವಗಿರಿ (Devagiri) ಗ್ರಾಮದ ಎಂಜಿನಿಯರಿಂಗ್ ಕಾಲೇಜು ಬಳಿ ನಡೆದಿದೆ. ಕರ್ಜಗಿ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಊರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ದೇವಗಿರಿ ಗ್ರಾಮದ ಬಳಿ ಇರುವ ಕೆರೆ ಪಕ್ಕದ ತಗ್ಗು ಪ್ರದೇಶಕ್ಕೆ ಮಿನಿ ಬಸ್ ಉರುಳಿ ಬಿದ್ದಿದೆ.

    ತಕ್ಷಣ ಸ್ಥಳೀಯರು ಹಾಗೂ ಅಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಲ್ಲದೆ ಗಂಭೀರವಾಗಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿ – ಬಾಲಕಿ ದಾರುಣ ಸಾವು

    ಪ್ರಯಾಣಿಕರು ಗ್ರಾಮದಿಂದ ತಡಸ ಗ್ರಾಮಕ್ಕೆ ಹೊರಟ್ಟಿದ್ದರು. ಕೆಲ ಸಂಬಂಧಿಕರನ್ನು ತಡಸ ಗ್ರಾಮಕ್ಕೆ ಬಿಟ್ಟು ಬಾಗಲಕೋಟೆಗೆ ಮಿನಿ ಬಸ್ ಹೋಗಬೇಕಿತ್ತು. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಮನೆಯಲ್ಲಿರುವಾಗಲೇ ಎನ್‌ಸಿಪಿ ಶಾಸಕರ ಬಂಗಲೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿಗಾಗಿ ಮಂಡ್ಯದಲ್ಲಿ ಬಿಜೆಪಿಯಿಂದ ಪಲ್ಟಿ ಚಳವಳಿ

    ಕಾವೇರಿಗಾಗಿ ಮಂಡ್ಯದಲ್ಲಿ ಬಿಜೆಪಿಯಿಂದ ಪಲ್ಟಿ ಚಳವಳಿ

    ಮಂಡ್ಯ: ಕಾವೇರಿ (Cauvery) ನೀರಿನ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದ ಧೋರಣೆಯಿಂದ ಹಾಗೂ ಕೋರ್ಟ್‌ನ ಆದೇಶದಿಂದ ರೈತರು ಪಲ್ಟಿ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಇಂದು (ಶುಕ್ರವಾರ) ಮಂಡ್ಯದಲ್ಲಿ (Mandya) ಬಿಜೆಪಿ (BJP) ಕಾರ್ಯಕರ್ತರು ಪಲ್ಟಿ ಚಳವಳಿ (Palti Movement) ನಡೆಸಿದರು.

    ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು 53ನೇ ದಿನದ ಕಾವೇರಿ ಹೋರಾಟದ ಪ್ರಯುಕ್ತ ಪಲ್ಟಿ ಚಳವಳಿ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಸದ್ಯ ಕೆಆರ್‌ಎಸ್ ಅಣೆಕಟ್ಟಿನಲ್ಲಿ 100 ಅಡಿಗಿಂತ ಕಡಿಮೆ ನೀರು ಇದೆ. ಹೀಗಿದ್ದರೂ ಸಹ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಸಮ್ಮತಿ ನೀಡುತ್ತಾ ಇದೆ. ಇತ್ತ ಕೋರ್ಟ್ ತಮಿಳುನಾಡಿಗೆ ನೀರು ಬಿಡಿ ಎಂದು ಮಂಡ್ಯ ರೈತರನ್ನು ಪಲ್ಟಿ ಹೊಡೆಸುತ್ತಿದೆ. ಇದನ್ನೂ ಓದಿ: ಹುಲಿ ಉಗುರು ಕೇಸ್‌ – ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಕಿಡಿ

    ಇದಕ್ಕೆ ವಿಡಂಬನೆ ಮಾಡಲು ಬಿಜೆಪಿ ಕಾರ್ಯಕರ್ತರು ಪಲ್ಟಿ ಹೊಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ನೀರು ನಿಲ್ಲಿಸಲು ಮನವಿ ಪತ್ರ ನೀಡಿದರು. ಇದನ್ನೂ ಓದಿ: 3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಡುಗೆ ಎಣ್ಣೆ ತುಂಬಿದ ಟ್ಯಾಂಕರ್ ಪಲ್ಟಿ – ಕೊಡ ಹಿಡಿದು ಎಣ್ಣೆ ಒಯ್ಯಲು ಮುಗಿಬಿದ್ದ ಜನ

    ಅಡುಗೆ ಎಣ್ಣೆ ತುಂಬಿದ ಟ್ಯಾಂಕರ್ ಪಲ್ಟಿ – ಕೊಡ ಹಿಡಿದು ಎಣ್ಣೆ ಒಯ್ಯಲು ಮುಗಿಬಿದ್ದ ಜನ

    ವಿಜಯನಗರ: ಅಡುಗೆ ಎಣ್ಣೆ (Cooking Oil) ತುಂಬಿದ ಟ್ಯಾಂಕರ್ ಪಲ್ಟಿಯಾದ (Tanker Overturn) ಹಿನ್ನೆಲೆಯಲ್ಲಿ ಅದರಲ್ಲಿದ್ದ ಅಡುಗೆ ಎಣ್ಣೆ ಒಯ್ಯಲು ಜನ ಮುಗಿಬಿದ್ದಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ನಡೆದಿದೆ.

    ಭಾನುವಾರ ಬೆಳಗ್ಗಿನ ಜಾವ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿಯಾಗಿದೆ. ಜನರು ಮೊದಲು ಇದು ಪೆಟ್ರೋಲ್ ತುಂಬಿದ ಟ್ಯಾಂಕರ್ ಎಂದುಕೊಂಡು ಹತ್ತಿರ ಹೋಗಲು ಹೆದರಿದ್ದರು. ಬಳಿಕ ಟ್ಯಾಂಕರ್‌ನಲ್ಲಿದ್ದ ಎಣ್ಣೆ ಕೆಳಗೆ ಚೆಲ್ಲಿದ್ದು, ಅದು ಅಡುಗೆ ಎಣ್ಣೆ ಎಂಬುದು ತಿಳಿದು ಬಂದಿದೆ. ತಕ್ಷಣ ಅದನ್ನು ತೆಗೆದುಕೊಂಡು ಹೋಗಲು ಮುಗಿಬಿದಿದ್ದಾರೆ.

    ಜನರು ಟ್ಯಾಂಕರ್‌ನಿಂದ ಸೋರುತ್ತಿದ್ದ ಎಣ್ಣೆಯನ್ನು ತೆಗೆದುಕೊಂಡು ಹೋಗಲು ತಕ್ಷಣ ಕ್ಯಾನ್, ಬಕೆಟ್, ಕೊಡಗಳನ್ನು ತಂದಿದ್ದಾರೆ. ಜನರು ನಾ ಮುಂದು ತಾ ಮುಂದು ಎಂದು ಎಣ್ಣೆ ತುಂಬಿಕೊಂಡು ಮನೆಗೆ ಹೋಗಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸ್ನೇಹಿತನ ಆರೋಗ್ಯ ಸುಧಾರಣೆಗೆ ಹಿಂದೂ ವ್ಯಕ್ತಿಯಿಂದ ಧರ್ಮಸ್ಥಳದಲ್ಲಿ ತುಲಾಭಾರ

    ವಿಷಯ ತಿಳಿದು ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಅಡುಗೆ ಎಣ್ಣೆ ತುಂಬಲು ಮುಂದಾಗಿದ್ದ ಜನರನ್ನು ಚದುರಿಸಿದ್ದಾರೆ. ಸದ್ಯ ಅಪಘಾತದಿಂದ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ. ಇದನ್ನೂ ಓದಿ: ನಾನು ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡಿದ್ದೆ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುರುಡೇಶ್ವರದಲ್ಲಿ ದೋಣಿ ಪಲ್ಟಿ- ಏಳು ಮೀನುಗಾರರ ರಕ್ಷಣೆ

    ಮುರುಡೇಶ್ವರದಲ್ಲಿ ದೋಣಿ ಪಲ್ಟಿ- ಏಳು ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಪಲ್ಟಿಯಾಗಿ ಏಳು ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

    ಮುರುಡೇಶ್ವರದಿಂದ ಜಲಗಂಗಾ ಎಂಬ ಹೆಸರಿನ ದೋಣಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಅಲೆಗಳ ಅಬ್ಬರಕ್ಕೆ ಬೋಟ್ ತಳಭಾಗಕ್ಕೆ ಅಲೆಯಿಂದ ಹಾನಿಯಾಗಿ ಪಲ್ಟಿಯಾಗಿದೆ. ತಕ್ಷಣ ಸ್ಥಳೀಯ ಮೀನುಗಾರರು ಇವರನ್ನು ರಕ್ಷಿಸಿದ್ದಾರೆ.

    ಜನಾರ್ಧನ್ ಪುರ್ಸು, ಹರಿಕಾಂತ ಗದ್ದೆಮನೆ ಅವರಿಗೆ ಸೇರಿದ ಬೋಟ್ ಇದಾಗಿದ್ದು, ಬೋಟ್ ಪಲ್ಟಿಯಾಗಿ ಬಲೆಗಳು ಕೊಚ್ಚಿಹೋಗಿವೆ. ಬೋಟ್ ಮತ್ತು ಇಂಜಿನ್ ಹಾಳಾಗಿದ್ದು 1,50,000 ರೂ. ಹಾನಿಯಾಗಿದೆ.

  • ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ- ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಪಾರು

    ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ- ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಪಾರು

    ದಾವಣಗೆರೆ: ಜಾತ್ರೆಗೆ ಹೋಗುತ್ತಿರುವಾಗ ಟ್ರ್ಯಾಕ್ಟರ್ ಮಗುಚಿದ್ದು, ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಚಾಲಕನ ಜೀವ ಉಳಿಸಲಾಗಿದೆ.

    ಜಿಲ್ಲೆಯ ಹರಿಹರ ತಾಲೂಕಿನ ಇಂಗಳಗುಂದಿ ಬಳಿ ಘಟನೆ ನಡೆದಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಚಾಲಕ ಪಾರಾಗಿದ್ದಾನೆ. ಇಂಗಳಗುಂದಿಯಿಂದ ಹುಲಿಗಿನಹೊಳೆಯ ಬಸವೇಶ್ವರ ಜಾತ್ರೆಗೆ ಯುವಕ ಹೊರಟಿದ್ದ. ಈ ವೇಳೆ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದು, ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿತ್ತು. ಚಾಲಕ ಇಂಜಿನ್ ಅಡಿ ಸಿಲುಕಿ ನರಳುತ್ತಿದ್ದ.

    ಇದನ್ನು ಗಮನಿಸಿದ ಅಲ್ಲೇ ಇದ್ದ ಕೆಲ ಗ್ರಾಮಸ್ಥರು, ಟ್ರ್ಯಾಕ್ಟರ್ ಇಂಜಿನ್ ಅಡಿ ಸಿಲುಕಿ ಸಾವು ಬದುಕಿನ ಮಧ್ಯೆ ಚಾಲಕನನ್ನು ಅರ್ಧಗಂಟೆಗೂ ಅಧಿಕ ಕಾಲ ಸಾಹಸಪಟ್ಟು, ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್ ಮೇಲೆತ್ತಿ ರಕ್ಷಿಸಿದ್ದಾರೆ. ಬಳಿಕ ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ಚಾಲಕ ಹೊರ ಬಂದಿದ್ದು, ಗ್ರಾಮಸ್ಥರೇ ಪ್ರಥಮ ಚಿಕಿತ್ಸೆ ನೀಡಿದರು. ಚಾಲಕನನ್ನು ಇಂಗಳಗುಂದಿ ಗ್ರಾಮದ ಯೋಗೇಶ್ ಎಂದು ಗುರುತಿಸಲಾಗಿದ್ದು, ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಟೈರ್ ಒಡೆದು ಬಸ್ ಪಲ್ಟಿ- 10ಕ್ಕೂ ಹೆಚ್ಚು ಜನರಿಗೆ ಗಾಯ

    ಟೈರ್ ಒಡೆದು ಬಸ್ ಪಲ್ಟಿ- 10ಕ್ಕೂ ಹೆಚ್ಚು ಜನರಿಗೆ ಗಾಯ

    – ಮದುವೆಗೆ ತೆರಳುತ್ತಿದ್ದ ಮಿನಿ ಬಸ್

    ಚಿಕ್ಕೋಡಿ/ಬೆಳಗಾವಿ: ಚಲಿಸುತ್ತಿದ್ದ ವಾಹನದ ಟೈರ್ ಒಡೆದ ಪರಿಣಾಮ ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಂಚನಾಳ ಕ್ರಾಸ್ ಬಳಿ ನಡೆದಿದೆ.

    ಮಿನಿ ಬಸ್ ಪಲ್ಟಿ ಆದ ಪರಿಣಾಮ ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೆ ಸಣ್ಣ ಪುಟ್ಟ ಗಾಯಗೊಂಡ ಗಾಯಾಳುಗಳಿಗೆ ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದಿಂದ ಹುಕ್ಕೇರಿ ಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಜನರನ್ನ ಕರೆದು ತರುತ್ತಿದ್ದ ಮಿನಿ ಬಸ್ ಟೈರ್ ಒಡೆದಿದ್ದು, ಬಳಿಕ ನಿಯಂತ್ರಣ ಸಿಗದೆ ಬಸ್ ಪಲ್ಟಿಯಾಗಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಬೀದರ್: ಕಾರಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್ಸೊಂದು ಪಲ್ಟಿಯಾಗಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯವಾಗಿರುವ ಘಟನೆ ಬೀದರಿನ ಹುಮನಾಬಾದ್ ತಾಲೂಕಿನ ದುಬಲಗುಂಡಿಯಲ್ಲಿ ನಡೆದಿದೆ.

    ಸುಮಾರು 27 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ದುಬಲಗುಂಡಿ ಕ್ರಾಸಿನ ಬಳಿ ಕಾರೊಂದು ಅಡ್ಡ ಬಂದಿದೆ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾರೆ. ಈ ಕಾರಣದಿಂದ ಬಸ್ ರಸ್ತೆಯ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ.

    ಈ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಂದಿಗೆ ಸಣ್ಣ ಪುಟ್ಟಗಾಯಗಳು ಆಗಿವೆ. ಆದರೆ ಅದೃಷ್ಟವಾಶತ್ ಯಾವುದೇ ಸಾವು ಸಂಭವಿಸಿಲ್ಲ. ಗಾಯಗೊಂಡ ಎಲ್ಲರನ್ನು ಹುಮನಾಬಾದ್ ಹಾಗೂ ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಾಸಕ ರಾಜಶೇಖರ್ ಪಾಟೀಲ್ ಬಂದು ಗಾಯಗೊಂಡವರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಲಿನ ಟ್ಯಾಂಕರ್ ಪಲ್ಟಿ- ರಸ್ತೆಯಲ್ಲೇ ಪೋಲಾಯ್ತು ಲಕ್ಷಾಂತರ ಮೌಲ್ಯದ ಹಾಲು

    ಹಾಲಿನ ಟ್ಯಾಂಕರ್ ಪಲ್ಟಿ- ರಸ್ತೆಯಲ್ಲೇ ಪೋಲಾಯ್ತು ಲಕ್ಷಾಂತರ ಮೌಲ್ಯದ ಹಾಲು

    ಬೆಳಗಾವಿ(ಚಿಕ್ಕೋಡಿ): ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಜಿಲ್ಲೆಯ ನಿಪ್ಪಾಣಿ ಹೊರವಲಯದ ತವದಿ ಘಾಟ್‍ನಲ್ಲಿ ಪಲ್ಟಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಹಾಲು ರಸ್ತೆಯಲ್ಲಿಯೇ ಹೊಳೆಯಂತೆ ಹರಿದು ಪೋಲಾಗಿದೆ.

    ಬೆಳಗಾವಿಯಿಂದ ಮುಂಬೈಗೆ ಟ್ಯಾಂಕರ್ ನಲ್ಲಿ ಹಾಲನ್ನು ಸಾಗಿಸಲಾಗುತ್ತಿತ್ತು. ತವದಿ ಘಾಟ್‍ನಲ್ಲಿ ಟ್ಯಾಂಕರ್ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲು ಟ್ಯಾಂಕರ್ ನಿಂದ ಸೋರಿ, ರಸ್ತೆಯಲ್ಲಿ ಹೊಳೆಯಂತೆ ಹರಿದು ಹೋಗುತ್ತಿದೆ. ಸದ್ಯ ಅಪಘಾತದಲ್ಲಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯರು ಆಸ್ಪತ್ರಗೆ ದಾಖಲಿಸಿದ್ದಾರೆ.

    ಬರೋಬ್ಬರಿ 16 ಸಾವಿರ ಲೀಟರ್ ಹಾಲನ್ನು ಹೊತ್ತೊಯ್ಯುವ ಸಾಮರ್ಥ್ಯದ ಟ್ಯಾಂಕರ್ ಇದಾಗಿದ್ದು, ಈ ಬೃಹತ್ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿಯಾಗಿರುವುದಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

  • ಬೊಲೆರೋ ವಾಹನ ಪಲ್ಟಿ – ಓರ್ವ ಸಾವು, 15 ಮಂದಿಗೆ ಗಾಯ

    ಬೊಲೆರೋ ವಾಹನ ಪಲ್ಟಿ – ಓರ್ವ ಸಾವು, 15 ಮಂದಿಗೆ ಗಾಯ

    ಕಾರವಾರ: ಬೊಲೆರೋ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು 15 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿಯ ಬನವಾಸಿ ಬಳಿ ನಡೆದಿದೆ.

    ಈರಣ್ಣ ಹೊಸಗಟ್ಟಿ ಕುರಸಾಪುರ ಶಿಗ್ಗಾಂವ (25) ಮೃತ ದುರ್ದೈವಿ. ಘಟನೆಯಲ್ಲಿ ಸೋಮಣ್ಣವಡ್ಡರ್, ಸುದೀಪ್, ಸಂತೋಷ್ ಜವಳಗಿ, ತುಕಾರಾಮ ತಳಹಳ್ಳಿ, ಜ್ಯೋತ್ಯಪ್ಪ, ವಿಶ್ವನಾಥ್, ವಾಲ್ಮೀಕಿ, ಈರಣ್ಣ, ಪರಶುರಾಮ ಹಾಗೂ ಗಣೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.

    ಇವರು ಶಿಗ್ಗಾಂವ ತಾಲೂಕಿನ ಕುರಸಾಪುರದವರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ. ವಿದ್ಯುತ್ ತಂತಿ ಎಳೆಯುವ ಕೆಲಸದ ನಿಮಿತ್ತ ಬರುವಾಗ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದಿಂದ ವಾಹನ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ವಾಹನ ಪಲ್ಟಿಯಾಗಿದ್ದರಿಂದ ಓರ್ವ ಸ್ಥಳದಲ್ಲಿಯೇ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ.

    ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟಾಟಾ ಏಸ್ ಪಲ್ಟಿ- ಅಂತ್ಯಕ್ರಿಯೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು!

    ಟಾಟಾ ಏಸ್ ಪಲ್ಟಿ- ಅಂತ್ಯಕ್ರಿಯೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು!

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರು ಗ್ರಾಮದ ಬಳಿ ಟಾಟಾ ಏಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದು, ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಇಬ್ಬರು ಮಹಿಳೆಯರು, 4 ಮಂದಿ ಪುರುಷರು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ ಒಬ್ಬರು ಆಸ್ಪತ್ರೆಗೆ ರವಾನಿಸುತ್ತಿದ್ದ ವೇಳೆ ಅಸುನೀಗಿದ್ದಾರೆ. ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳೆಲ್ಲರೂ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.

    ಸದ್ಯ ಗಾಯಾಳುಗಳಿಗೆ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟಾಟಾ ಏಸ್‍ನಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.