Tag: ಪಲಾವ್

  • ಚಳಿಗೆ ಬಿಸಿಬಿಸಿಯಾದ ಅವರೆಕಾಳು ಪಲಾವ್

    ಚಳಿಗೆ ಬಿಸಿಬಿಸಿಯಾದ ಅವರೆಕಾಳು ಪಲಾವ್

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಅವರೆಕಾಳು ಪಲಾವ್ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಅವರೆಕಾಳು ಪಲಾವ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 2 ಕಪ್
    * ಅವರೆಕಾಳು- 1 ಕಪ್
    * ಕ್ಯಾರೇಟ್- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಚಕ್ಕೆ, ಲವಂಗಾ- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್
    * ಸೋಂಪು- ಸ್ವಲ್ಪ
    * ಜೀರಿಗೆ- ಸ್ವಲ್ಪ
    * ಈರುಳ್ಳಿ- 1
    * ಹಸಿಮೆಣಸಿನಕಾಯಿ-4
    * ಶುಂಠಿ ಬಳ್ಳುಳ್ಳಿ ಪೇಸ್ಟ್- 1 ಚಮಚ
    * ಅರಿಶಿಣ ಪುಡಿ- ಸ್ವಲ್ಪ
    * ಟೊಮೆಟೋ-2
    * ಕೊತ್ತಂಬರಿ ಸೊಪ್ಪು- ಸ್ವಲ್ಪ

     

    ಮಾಡುವ ವಿಧಾನ:
    * ಒಂದು ಕುಕ್ಕರ್ ಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಕರಿಬೇವು, ಸೋಂಪು, ಜೀರಿಗೆ, ಚಕ್ಕೆ, ಲವಂಗಾ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಬೇಕು.

    * ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.  ಅವರೆಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಟ್ ಮಾಡಿಟ್ಟುಕೊಂಡ ಟೊಮೆಟೋ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಅಕ್ಕಿ ಹಾಕಿ ಅಳತೆಗೆ ತಕ್ಕಂತೆ ನೀರು, ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿಕೊಂಡರೆ ರುಚಿಯಾದ ಅವರೆ ಕಾಳು ಪಲಾವ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಫಟ್​ ಅಂತ ಮಾಡಬಹುದು ಮೈದಾ ದೋಸೆ

  • ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ವಾರ ಕಿಚನ್ ಡಿಪಾರ್ಟ್ ನಲ್ಲಿರುವ ಶುಭಾ ಹಾಗೂ ನಿಧಿ ಸುಬ್ಬಯ್ಯ ಅಡುಗೆ ಮಾಡುವ ವೇಳೆ ಸಣ್ಣ ಮಕ್ಕಳಂತೆ ಕಿತ್ತಾಡಿದ್ದಾರೆ.

    ಬೆಳಗ್ಗೆ ಇಬ್ಬರು ಸ್ಟವ್ ಮುಂದೆ ನಿಂತು ಅಡುಗೆ ಮಾಡುವಾಗ ನಿಧಿ ಸುಬ್ಬಯ್ಯ ಶುಭಾ ನನಗೆ ಮಾತ್ರ ಯಾಕೆ ನಾಲ್ಕು ಪೀಸ್ ಆಲೂಗಡ್ಡೆ ಕೊಟ್ಟಿದ್ಯಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶುಭಾ ವಾಟ್ ನಾನ್ ಸೆನ್ಸ್ ಸಮವಾಗಿ ಕೊಟ್ಟಿದ್ದೇನೆ ಎಂದಿದ್ದಾರೆ. ಇದಕ್ಕೆ ನಿಧಿ ಇದು ಸರಿಯಾಗಿರುವುದಿಲ್ಲ. ಪಕ್ಕದ ಸ್ಟವ್‍ನಲ್ಲಿ ಬೇಯಿಸುತ್ತಿರುವ ಆಲೂಗಡ್ಡೆಯಲ್ಲಿ ಸ್ವಲ್ಪ ತೆಗೆದು ಕೊಡು ಎಂದು ಕೇಳುತ್ತಾರೆ.

    ಆಗ ಶುಭಾ, ಗೂಬೆ ತರ ಆಡಬೇಡ ನೋಡಲ್ಲಿ ಅಷ್ಟು ತರಕಾರಿ ನೀಡಿದ್ದೇನೆ ಎನ್ನುತ್ತಾ ನಿಧಿ ಕೈನಲ್ಲಿದ್ದ ಪ್ಲೇಟ್‍ನಿಂದ ತಮ್ಮ ಕುಕ್ಕರ್‍ಗೆ ತರಕಾರಿಯನ್ನು ಸುರಿದುಕೊಳ್ಳುತ್ತಾರೆ. ನಂತರ ಈ ಕುಕ್ಕರ್ ಪಲಾವ್ ಆ ಕುಕ್ಕರ್ ಪಲಾವ್ ಅಂತ ಸಪರೇಟ್ ಆಗಿ ನಾವೇನು ಮಾಡುತ್ತಿಲ್ಲ ಮಾಡುತ್ತಿರುವುದು ಒಂದೇ ಪಲಾವ್ ಸಮನಾಗಿರಬೇಕು ಎಂದು ಬುದ್ದಿ ಹೇಳಿ, ಗುದ್ದು ಬಿಡುತ್ತೇನೆ ನಿನಗೆ ಎಂದು ಶುಭಾ ನಿಧಿಗೆ ಬಯ್ಯುತ್ತಾರೆ. ಇದಕ್ಕೆ ನಿಧಿ ನಿನಗೆ ಗುದ್ದಿ ಬಿಡುತ್ತೇನೆ ಅಂದಾಗ ಶುಭಾ ಇರಿಟೆಶನ್ ಫೆಲೋ ಅಂದಾಗ ಅದಕ್ಕೆ ನಿಧಿ ಸ್ಟುಪಿಡ್ ಎನ್ನುತ್ತಾರೆ.

    ಬಳಿಕ ಶುಭಾ ನಿಧಿ ಬೇಯಿಸುತ್ತಿದ್ದ ಕುಕ್ಕರ್‍ನಲ್ಲಿ ಅಷ್ಟು ಕ್ಯಾರೆಟ್ ಇದೆ ಕೊಡು ಎಂದು ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ನಿಧಿ ಅಲ್ಲೆ ಇದ್ದ ಅರವಿಂದ್ ಬಳಿ ಅವಳು ಬೇಯಿಸುತ್ತಿರುವ ಕುಕ್ಕರ್‍ನಲ್ಲಿ ಜಾಸ್ತಿ ಆಲೂಗಡ್ಡೆ ಇಲ್ಲಾವಾ ನೋಡು ಎಂದು ವಾದ ಒಪ್ಪಿಸುತ್ತಾರೆ. ಇದಕ್ಕೆ ಶುಭಾ ನಿಧಿಗೆ ಇರಿಟೇಟಿಂಗ್ ಫೀಮೇಲ್ ಎಂದರೆ ನಿಧಿ ಇರಿಟೇಟಿಂಗ್ ಮೇಲ್ ಎನ್ನುತ್ತಾರೆ.

    ಆಗ ಅರವಿಂದ್ ಇಬ್ಬರು ಜುಟ್ಟು ಎಳೆದುಕೊಂಡು ಹೊಡೆದುಕೊಳ್ಳಿ ಎಂದು ಅಣುಕಿಸುತ್ತಾರೆ. ಹೀಗೆ ಇಬ್ಬರು ಜಗಳ ಮುಂದುವರೆಸಿ ನಂತರ ನಿಧಿ ಹಾಗೂ ಶುಬಾ ಪೂಂಜಾ ಕ್ಯಾರೆಟ್ ಹಾಗೂ ಆಲೂಗಡ್ಡೆಯನ್ನು ಹಂಚಿಕೊಳ್ಳುವುದರ ಮೂಲಕ ಕೊನೆಗೆ ರಾಜಿಯಾಗುತ್ತಾರೆ.