Tag: ಪರ್ವೇಜ್ ಮುಷರಫ್

  • ಮುಷರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದ ಕೇರಳ ಬ್ಯಾಂಕ್‌ ನೌಕರರ ಸಂಘ!

    ಮುಷರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದ ಕೇರಳ ಬ್ಯಾಂಕ್‌ ನೌಕರರ ಸಂಘ!

    ತಿರುವನಂತಪುರಂ: ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾದ (Bank Of India) ಕೇರಳದ ನೌಕರರ ಸಂಘಟನೆ ಪಾಕಿಸ್ತಾನ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಕಾರ್ಗಿಲ್‌ ವಿಜಯದ (Kargil Vijay Diwas) 25ನೇ ವರ್ಷದ ಮರು ದಿನ ಜುಲೈ 27 ರಂದು ಬ್ಯಾಂಕ್‌ ಆಫ್‌ ಇಂಡಿಯಾದ ಕಮ್ಯೂನಿಸ್ಟ್‌ ಬೆಂಬಲಿತ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘ ಅಲಪ್ಪುಳದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿತ್ತು.

    ಈ ಕಾರ್ಯಕ್ರಮದಲ್ಲಿ ನಟರು, ಗಾಯಕರು, ನೃತ್ಯಗಾರರು, ಕ್ರೀಡಾಪಟುಗಳು, ಕಾರ್ಯಕರ್ತರು ಮತ್ತು ಇತರರನ್ನು ಒಳಗೊಂಡಂತೆ ಸನ್ಮಾನಿಸಲ್ಪಡುವ ವ್ಯಕ್ತಿಗಳ ಹೆಸರನ್ನು ಸಂಘ ಬಿಡುಗಡೆ ಮಾಡಿತ್ತು. ಮಲಯಾಳಂನಲ್ಲಿ ಆಹ್ವಾನ ಪತ್ರಿಕೆಯ ಶ್ರದ್ಧಾಂಜಲಿ ಸಲ್ಲಿಸುವ ಗಣ್ಯರ ಪಟ್ಟಿಯಲ್ಲಿ ಪರ್ವೇಜ್‌ ಮುಷರಫ್‌ ಹೆಸರನ್ನು ಸೇರಿಸಿತ್ತು.  ಇದನ್ನೂ ಓದಿ: ಕಾಶ್ಮೀರದಲ್ಲಿ ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಲಪ್ಪುಳದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಯೂನಿಯನ್ ಕಾನ್ಫರೆನ್ಸ್ ಹಾಲ್‌ನ ಸ್ಥಳದ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಕೊನೆ ಕ್ಷಣದಲ್ಲಿ ಮುಷರಫ್‌ ಹೆಸರನ್ನು ತೆಗೆಯಲಾಯಿತು. ಮುದ್ರಣ ದೋಷದಿಂದ ಮುಷರಫ್‌ ಹೆಸರು ಪ್ರಕಟವಾಗಿದೆ ಎಂದು ಸಂಘಟಕರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ಕಾರ್ಯಕ್ರಮವನ್ನು ಸಂಸದ ಕೆಸಿ ವೇಣುಗೋಪಾಲ್‌ ಉದ್ಘಾಟಿಸಬೇಕಿತ್ತು. ಆದರೆ ವೇಣುಗೋಪಾಲ್‌ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಈಗ ಭಾರೀ ಚರ್ಚೆ ಆಗುತ್ತಿದ್ದು ಯಾವ ಕಾರಣಕ್ಕೆ ಮುಷರಫ್‌ ಹೆಸರು ಆಹ್ವಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ? ನೌಕರರ ಸಂಘದ ನಾಯಕರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಆಗ್ರಹವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

     

  • ಪರ್ವೇಜ್ ಮುಷರಫ್ ಶಾಂತಿಗೆ ಶ್ರಮಿಸಿದ ವ್ಯಕ್ತಿ – ಶಶಿ ತರೂರ್ ಹೇಳಿಕೆಗೆ ಬಿಜೆಪಿ ಗರಂ

    ಪರ್ವೇಜ್ ಮುಷರಫ್ ಶಾಂತಿಗೆ ಶ್ರಮಿಸಿದ ವ್ಯಕ್ತಿ – ಶಶಿ ತರೂರ್ ಹೇಳಿಕೆಗೆ ಬಿಜೆಪಿ ಗರಂ

    ಲಕ್ನೋ: ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಸಾವಿನ ಕುರಿತಾಗಿ ಕಾಂಗ್ರೆಸ್ ನೇತಾರ ಶಶಿ ತರೂರ್ (Shashi Tharoor) ನೀಡಿದ ಹೇಳಿಕೆಗೆ ಬಿಜೆಪಿ ಗರಂ ಆಗಿದೆ.

    ಮುಷರಫ್‌ನನ್ನ ಶಾಂತಿದೂತನಿಗೆ ಹೋಲಿಸಿದ್ದಕ್ಕೆ ಕೇಸರಿ ಪಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮ ದೇಶದ ಸೈನಿಕರನ್ನ ಚಿತ್ರಹಿಂಸೆಗೆ ಗುರಿಮಾಡಿದ ವ್ಯಕ್ತಿಯನ್ನು ಶಾಂತಿಗಾಗಿ ಶ್ರಮಿಸಿದ ವ್ಯಕ್ತಿ ಎನ್ನಲು ಹೇಗಾದ್ರೂ ಮನಸ್ಸು ಬರುತ್ತೆ ಎಂದು ಬಿಜೆಪಿ (BJP) ಕಿಡಿಕಾರಿದೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    ಇದಕ್ಕೆ ಶಶಿ ತರೂರ್ (Shashi Tharoor) ಮತ್ತೆ ತಿರುಗೇಟು ನೀಡಿದ್ದಾರೆ. ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡಿರುವ ಶಶಿ ತರೂರ್, ಸತ್ತವರ ಬಗ್ಗೆ ಎರಡು ಒಳ್ಳೆ ಮಾತುಗಳನ್ನು ಆಡಬೇಕೆಂಬ ಪರಂಪರೆ ನಮ್ಮ ದೇಶದಲ್ಲಿದೆ. ಮುಷರಫ್ ಬದ್ಧ ಶತ್ರು ಆಗಿರಬಹುದು, ಕಾರ್ಗಿಲ್ ಯುದ್ಧದ (Kargil War) ಕಾರಣಕರ್ತನೂ ಆಗಿರಬಹುದು. ಆದರೂ 2002ರಿಂದ 2007ರವರೆಗೂ ಭಾರತದ ಜೊತೆ ಶಾಂತಿಗಾಗಿ ಮುಷರಫ್ ಪ್ರಯತ್ನಿಸಿದ್ದರು ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

    ಫೆಬ್ರವರಿ 5ರಂದು ನಿಧನರಾದ ಪರ್ವೇಜ್ ಮುಷರಫ್ ಮೃತದೇಹವನ್ನು ಪಾಕಿಸ್ತಾನಕ್ಕೆ ತರಲಾಗಿದ್ದು, ಫೆಬ್ರವರಿ 7ರಂದು ಕರಾಚಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    ನವದಹೆಲಿ: ʼಶಾಂತಿಗಾಗಿ ಬದಲಾದ ನಿಜವಾದ ಶಕ್ತಿʼ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ (Pervez Musharraf) ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್‌ ನಾಯಕ ಶಶಿ ತರೂರ್‌ (Rahul Gandhi) ವಿರುದ್ಧ ಬಿಜೆಪಿ ತಿರುಗೇಟು ನೀಡಿದೆ. ಒಸಾಮಾ ಬಿನ್‌ ಲಾಡೆನ್‌ನನ್ನು (Osama Bin Laden) ಶ್ಲಾಘಿಸಿದ್ದ ವ್ಯಕ್ತಿಯಲ್ಲಿ ಶಾಂತಿ ಹುಡುಕುತ್ತಿದ್ದಾರೆ ಎಂದು ಕಾಂಗ್ರೆಸ್‌ಗೆ (Congress) ಬಿಜೆಪಿ (BJP) ಟಾಂಗ್‌ ಕೊಟ್ಟಿದೆ.

    ಬಾಲಾಕೋಟ್ (Balakot) ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್, ತನ್ನದೇ ಆದ ಸೇನಾ ಮುಖ್ಯಸ್ಥನ ವಿರುದ್ಧ ಮಾತನಾಡಿತ್ತು. ಈಗ ಮುಷರಫ್ ಅವರನ್ನು ಶ್ಲಾಘಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ (Shehzad Poonawalla) ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ

    ಒಮ್ಮೆ ಮುಷರಫ್‌ ಅವರು ರಾಹುಲ್‌ ಗಾಂಧಿಯನ್ನು ಸಂಭಾವಿತ ವ್ಯಕ್ತಿ ಎಂದು ಹೊಗಳಿದ್ದರು. ಅಷ್ಟೇ ಅಲ್ಲ, ರಾಹುಲ್‌ ಗಾಂಧಿ ಈ ದೇಶದ ಪ್ರಧಾನಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು ಎಂದು ಪೂನಾವಾಲಾ ಟ್ವೀಟ್‌ ಮಾಡಿ ಟೀಕಾಪ್ರಹಾರ ನಡೆಸಿದ್ದಾರೆ.

    ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಹೊಗಳಿದ್ದ ಪರ್ವೇಜ್ ಮುಷರಫ್ ಅವರು ರಾಹುಲ್ ಗಾಂಧಿಯವರನ್ನೂ ಹಾಡಿ ಹೊಗಳಿದ್ದರು. ರಾಹುಲ್‌ ಗಾಂಧಿಯನ್ನು ಸಂಭಾವಿತ ಎಂದು ಕರೆದಿದ್ದರು. ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಬಹುಶಃ ಇದೇ ಕಾರಣಕ್ಕಾಗಿಯೇ ಶಶಿ ತರೂರ್, ಕಾರ್ಗಿಲ್‌ನ ವಾಸ್ತುಶಿಲ್ಪಿ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡಿದ್ದ ವ್ಯಕ್ತಿಯನ್ನು ಬೆಂಬಲಿಗನನ್ನು ಶ್ಲಾಘಿಸಿದ್ದಾರೆ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ

    79 ವರ್ಷ ವಯಸ್ಸಿನ ಪರ್ವೇಜ್‌ ಮುಷರಫ್‌ ಅವರು ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದರು.

    “ಮುಷರಫ್ ಒಮ್ಮೆ ಭಾರತದ ನಿಷ್ಕಪಟ ವೈರಿಯಾಗಿದ್ದರು. ಆದರೆ ಅವರು 2002 ಮತ್ತು 2007 ರ ನಡುವೆ ಶಾಂತಿಗಾಗಿ ನಿಜವಾದ ಶಕ್ತಿಯಾದರು. ನಾನು ಒಮ್ಮೆ ಯುಎನ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಚುರುಕತನ, ಬದ್ಧತೆ, ಕಾರ್ಯತಂತ್ರದ ಚಿಂತನೆಯಲ್ಲಿ ಸ್ಪಷ್ಟತೆಯ ಗುಣಗಳನ್ನು ಅವರು ಹೊಂದಿದ್ದರು. RIP” ಎಂದು ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಇಂದು (ಭಾನುವಾರ) ದುಬೈನ (Dubai) ಆಸ್ಪತ್ರೆಯಲ್ಲಿ ನಿಧನರಾದರು.

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‌ (79) ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮುಷರಫ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದೆರಡು ವಾರಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

    ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಷರಫ್ : ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು. ಈ ಸಂಬಂಧ ನವೆಂಬರ್ 19ರಂದು ವಿಚಾರಣೆ ನಂತರದಲ್ಲಿ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿತ್ತು. ಅದರಂತೆ ಡಿಸೆಂಬರ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಉಳಿದುಕೊಂಡೇ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಸ್ಕೆಚ್!

    ಸೇನಾ ಮುಖ್ಯಸ್ಥರಾಗಿದ್ದ ಅವರು 1999ರಲ್ಲಿ ಸೇನಾ ಬಲ ಬಳಸಿಕೊಂಡು ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ರಕ್ತಪಾತರಹಿತ ದಂಗೆ ನಡೆಸಿ, ಅಧಿಕಾರವನ್ನು ಕಿತ್ತುಕೊಂಡಿದ್ದರು. ಬಳಿಕ 2001ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಭಾರತದ ವಿರುದ್ಧ ಕಾರ್ಗಿಲ್ ಯುದ್ಧವನ್ನು ಆರಂಭಿಸಿ ಮುಖಭಂಗ ಅನುಭವಿಸಿದ್ದರು. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯದ ಬಗ್ಗೆ ಕುಟುಂಬದವರು ಹೇಳೋದೇನು?

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯದ ಬಗ್ಗೆ ಕುಟುಂಬದವರು ಹೇಳೋದೇನು?

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ 3 ವಾರಗಳಿಂದ ಮುಷರಫ್ ಅನಾರೋಗ್ಯದ ಹಿನ್ನೆಲೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಆರೋಗ್ಯ ಹದಗೆಡುತ್ತಿದೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ, ಬುರ್ಕಾ ಧರಿಸಿ ಬೀದಿಗಿಳಿದ ಮಹಿಳೆಯರು

    ಕುಟುಂಬದವರು ಹೇಳೋದೇನು?
    ಪರ್ವೇಜ್ ಮುಷರಫ್ ವೆಂಟಿಲೇಟರ್‌ನಲ್ಲಿ ಇಲ್ಲ. ಕಳೆದ 3 ವಾರಗಳಿಂದ ಅವರು ಅನಾರೋಗ್ಯದ ಹಿನ್ನೆಲೆ(ಅಮಿಲೋಡೋಸಿನ್) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಚೇತರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಹಾಗೂ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ. ಅವರು ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ಮುಷರಫ್ ಅಧಿಕೃತ ಟ್ವಿಟ್ಟರ್ ಖಾತೆ ಬರೆಯಲಾಗಿದೆ. ಇದನ್ನೂ ಓದಿ: ಕೆಸಿಆರ್‌ಗೆ ಅವಹೇಳನ – ತೆಲಂಗಾಣ ಬಿಜೆಪಿ ಮುಖಂಡನ ಬಂಧನ

    ಪರ್ವೇಜ್ ಮುಷರಫ್ 1999ರಲ್ಲಿ ಫೆಡರಲ್ ಮಿಲಿಟರಿ ಸ್ವಾಧೀನದ ಬಳಿಕ ಪಾಕಿಸ್ತಾನದ 10ನೇ ಅಧ್ಯಕ್ಷರಾದರು. 2001 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬಳಿಕ ತಮ್ಮ ಮೇಲಿನ ದೋಷಾರೋಪಣೆಗಳನ್ನು ತಪ್ಪಿಸಲು ರಾಜೀನಾಮೆ ನೀಡಿದ್ದರು.

  • ಉಗ್ರರಿಗೆ ನಾವು ತರಬೇತಿ ನೀಡಿದ್ದೇವೆ, ಲಾಡೆನ್ ನಮ್ಮ ಹೀರೋ – ಪರ್ವೇಜ್ ಮುಷರಫ್

    ಉಗ್ರರಿಗೆ ನಾವು ತರಬೇತಿ ನೀಡಿದ್ದೇವೆ, ಲಾಡೆನ್ ನಮ್ಮ ಹೀರೋ – ಪರ್ವೇಜ್ ಮುಷರಫ್

    – ಭಾರತೀಯ ಸೇನೆ ವಿರುದ್ಧ ಹೋರಾಡಲು ತರಬೇತಿ
    – ಶಸ್ತ್ರಾಸ್ತ್ರಗಳನ್ನು ನಾವೇ ನೀಡುತ್ತೇವೆ

    ಇಸ್ಲಾಮಾಬಾದ್: ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ.

    ಸಂದರ್ಶನವೊಂದರಲ್ಲಿ ಮುಷರಫ್ ಈ ಕುರಿತು ಮಾತನಾಡಿರುವ ವಿಡಿಯೋವನ್ನು ಪಾಕಿಸ್ತಾನದ ರಾಜಕಾರಣಿ ಫರ್ಹತುಲ್ಲಾ ಬಾಬರ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜಿಹಾದಿಗಳನ್ನು ಪಾಕಿಸ್ತಾನದ ಹೀರೋಗಳು ಎಂದು ಕರೆದಿದ್ದಾರೆ.

    ಪಾಕಿಸ್ತಾನಕ್ಕೆ ಆಗಮಿಸಿದ್ದ ಕಾಶ್ಮೀರಿಗಳನ್ನು ಇಲ್ಲಿ ಹೀರೋಗಳಂತೆ ಸ್ವಾಗತಿಸಲಾಗಿದೆ. ಅವರಿಗೆ ತರಬೇತಿ ನೀಡಿ ಬೆಂಬಲ ನೀಡುತ್ತಿದ್ದೇವೆ. ಅವರನ್ನು ಮುಜಾಹಿದ್ದೀನ್‍ಗಳೆಂದು ಪರಿಗಣಿಸಿದ್ದು, ಭಾರತೀಯ ಸೈನಿಕರೊಂದಿಗೆ ಹೋರಾಡಲಿದ್ದಾರೆ. ನಂತರ ಲಷ್ಕರ್-ಎ-ತೋಯ್ಬಾದಂತಹ ವಿವಿಧ ಭಯೋತ್ಪಾದಕ ಸಂಘಟನೆಗಳು ಹೆಚ್ಚಳವಾಗಲಿವೆ. ಈ ಮೂಲಕ ಜಿಹಾದಿಗಳು ನಮ್ಮ ಹೀರೋಗಳಾಗುತ್ತಾರೆ ಎಂದು ಕೊಂಡಾಡಿದ್ದಾರೆ.

    ಒಸಾಮಾ ಬಿನ್ ಲಾಡೆನ್ ಹಾಗೂ ಜಲಾಲುದ್ದೀನ್ ಹಕ್ಕಾನಿಯಂತಹ ಭಯೋತ್ಪಾದಕರು ಹೀರೋಗಳು. 1979ರಲ್ಲಿ ನಾವು ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಅಫ್ಘಾನಿಸ್ಥಾನದಲ್ಲಿನ ಸೋವಿಯತ್ ದೇಶವನ್ನು ಹೊರಗೆ ತಳ್ಳಲು ಧಾರ್ಮಿಕ ಭಯೋತ್ಪಾದನೆಯನ್ನು ಪರಿಚಯಿಸಿದೆವು. ಮುಜಾಹಿದ್ದೀನ್‍ಗಳನ್ನು ಪ್ರಪಂಚದಾದ್ಯಂತ ಕರೆತಂದಿದ್ದೇವೆ. ಅವರಿಗೆ ತರಬೇತಿ ನೀಡುತ್ತಿದ್ದೇವೆ, ಅಲ್ಲದೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದೇವೆ. ತಾಲಿಬಾನಿಗಳಿಗೂ ತರಬೇತಿ ನೀಡುತ್ತಿದ್ದೇವೆ. ಅವರೂ ಸಹ ನಮ್ಮ ಹೀರೋಗಳು. ಹಕ್ಕಾನಿ, ಒಸಾಮಾ ಬಿನ್ ಲಾಡೆನ್, ಜವಾಹಿರಿ ನಮ್ಮ ನಾಯಕರಾಗಿದ್ದರು. ನಂತರ ನಮ್ಮ ಜಾಗತಿಕ ವಾತಾವರಣ ಬದಲಾಯಿತು. ಜಗತ್ತು ವಿಷಯಗಳನ್ನು ವಿಭಿನ್ನವಾಗಿ ನೋಡಲಾರಂಭಿಸಿತು. ನಮ್ಮ ಹೀರೋಗಳನ್ನು ಖಳನಾಯಕರನ್ನಾಗಿ ಮಾಡಲಾಯಿತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಕಾಶ್ಮೀರದಲ್ಲಿ ನಮ್ಮ ಯಾವುದೇ ಹಸ್ತಕ್ಷೇಪವಿಲ್ಲ ಎನ್ನುವ ಪಾಕಿಸ್ತಾನದ ಬಣ್ಣವನ್ನು ಸ್ವತಃ ಮುಷರಫ್ ಬಟಾಬಯಲು ಮಾಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಭಯೋತ್ಪಾದಕತೆ ಉತ್ತೇಜಿಸಲು ಅವರಿಗೆ ಸುರಕ್ಷಿತ ತಾಣವನ್ನು ಒದಗಿಸುತ್ತಿದೆ ಎಂದು ಮುಷರಫ್ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್

    ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್

    ನವದೆಹಲಿ: ಮುಂದೆ ಶಾಂತಿ ಮಂತ್ರ, ಹಿಂದೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನದ ಅಸಲಿ ಬಣ್ಣವನ್ನು ಅಲ್ಲಿನ ಮಾಜಿ ಅಧ್ಯಕ್ಷರೇ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‍ಐ ಭಾರತದ ಮೇಲೆ ದಾಳಿ ನಡೆಸಲು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಬಳಸಿಕೊಳ್ಳುತ್ತಿತ್ತು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನೀಡಿರುವ ಹೇಳಿಕೆ ಈಗ ಭಾರಿ ಸದ್ದು ಮಾಡುತ್ತಿದೆ.

    ಹೌದು, ಬುಧವಾರದಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ದೂರವಾಣಿ ಮೂಲಕ ಪರ್ವೇಜ್ ಮಷರಫ್ ಅವರ ಸಂದರ್ಶನ ನಡೆಸಿದ್ದರು. ಈ ವೇಳೆ ಮುಷರಫ್ ಅವರು ಪಾಕಿಸ್ತಾನದ ನಿಜ ಸ್ವರೂಪವನ್ನು ಬಯಲು ಮಾಡಿದ್ದಾರೆ. “ನನ್ನ ಅಧಿಕಾರವಧಿಯಲ್ಲಿ ಪಾಕ್‍ನ ಗುಪ್ತಚರ ಇಲಾಖೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸಹಾಯ ಪಡೆದು ಭಾರತದ ಮೇಲೆ ದಾಳಿ ನಡೆಸುತ್ತಿತ್ತು. ಈಗ ಈ ಉಗ್ರ ಸಂಘಟನೆಯ ವಿರುದ್ಧ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ” ಎಂದು ಹೇಳಿದ್ದಾರೆ.

    1999-2008ರ ಅವಧಿಯಲ್ಲಿ ನೀವು ಅಧ್ಯಕ್ಷರಾಗಿದ್ದೀರಿ. ನಿಮ್ಮ ಅಧಿಕಾರದಲ್ಲಿ ನೀವು ಯಾಕೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ಪ್ರಶ್ನಿಸಿದಕ್ಕೆ, ಆಗಿನ ಚಿತ್ರಣವೇ ಬೇರೆಯಾಗಿತ್ತು. ಆಗ ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಬ್ಬರ ಮೇಲೊಬ್ಬರು ರಹಸ್ಯವಾಗಿ ದಾಳಿ ನಡೆಯುತಿತ್ತು. ನಮ್ಮ ದೇಶದ ಗುಪ್ತಚರ ಇಲಾಖೆಗಳು ಕೂಡ ಭಾಗಿಯಾಗಿತ್ತು. ಆದರಿಂದ ಜೈಷ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ ಎಂದು ಉತ್ತರಿಸಿದ್ದಾರೆ.

    ಫೆ. 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಈ ದಾಳಿಯನ್ನು ಮೌಲಾನ ಮಸೂದ್ ಅಜಾರ್ ಮುಖ್ಯಸ್ಥನಾಗಿರು ಜೈಷ್ ಉಗ್ರ ಸಂಘಟನೆಯೇ ನಡೆಸಿರುವುದಾಗಿ ಒಪ್ಪಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಾತಂತ್ರ್ಯ ಕಾಶ್ಮೀರ, ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ

    ಸ್ವಾತಂತ್ರ್ಯ ಕಾಶ್ಮೀರ, ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ

    ನವದೆಹಲಿ: ಕಾಶ್ಮೀರ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‍ನ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಬೆಂಬಲ ನೀಡಿ ಸಮರ್ಥನೆ ನೀಡಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಸೈಫುದ್ದೀನ್, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಮುಷರಫ್ ಸರಿಯಾದ ಹೇಳಿಕೆ ನೀಡಿದ್ದಾರೆ. ಅವರು ಕಾಶ್ಮೀರವನ್ನು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರುವ ಬದಲು ಸ್ವಾತಂತ್ರ್ಯ ನೀಡಲು ಬಯಸಿದ್ದರು. 2007 ರಲ್ಲಿ ಮುಷರಫ್ ಕಾಶ್ಮೀರದ ಸಮಸ್ಯೆ ಬಗೆಹರಿಸುವ ಕುರಿತು ತಮ್ಮ ಸಲಹೆಗಳನ್ನು ಪಾಕಿಸ್ತಾನದ ಅಧಿಕಾರಿಗಳ ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ.

    ಸದ್ಯ ಸೈಫುದ್ದೀನ್ ಅವರ `ಕಾಶ್ಮೀರ ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್’ ಪುಸ್ತಕ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆ ಮುಷರಫ್ ಅವರ ಹೇಳಿಕೆಗೆ ಸಮರ್ಥನೆ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸೈಫುದ್ದೀನ್ ನೀಡಿರುವ ಹೇಳಿಕೆಗೆ ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.

    ಮುಷರಫ್ ಏನು ಹೇಳಿದ್ದರು?
    ಒಂದು ವೇಳೆ ಕಾಶ್ಮೀರ ಜನರಿಗೆ ಅವಕಾಶ ಲಭಿಸಿದರೆ ಅವರು ಪಾಕಿಸ್ತಾನಕ್ಕೆ ಸೇರುವುದಿಲ್ಲ, ಅಲ್ಲದೇ ಸ್ವಾತಂತ್ರವಾಗಿರಲು ಬಯಸುತ್ತಾರೆ. ಕಾಶ್ಮೀರ ಸಮಸ್ಯೆ ಬಗೆ ಹರಿಸಲು ಇರುವುದು ಇದು ಒಂದೇ ಮಾರ್ಗ ಎಂದು 2007 ರಲ್ಲಿ ಹೇಳಿದ್ದರು.

    ಸದ್ಯ ಸೈಫುದ್ದೀನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ನಾಯಕಿ ಮನಿಷಾ ಕಯಾಂಡೆ, ಎಐಸಿಸಿ ಅಧ್ಯಕ್ಷರು ಸೈಫುದ್ದೀನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕು, ಅಲ್ಲದೇ ಪಾಕಿಸ್ತಾನ ಹಾಗೂ ಮುಷರಫ್ ಬಗ್ಗೆ ಅವರು ಅಷ್ಟು ಕಳಜಿ ಹೊಂದಿದ್ದರೆ, ಅವರು ವಲಸೆ ಹೋಗಿ ಗುಲಾಮರಾಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

    ಇನ್ನು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ಹೇಳಿಕೆ ವಿರುದ್ಧ ಕಿಡಿಕಾರಿದ್ದು, ಕೇಂದ್ರ ಮಂತ್ರಿಯಾಗಿ ಸೈಫುದ್ದೀನ್ ಸೋಜ್ ತಮ್ಮ ಮಗಳನ್ನು ಜೆಕೆಎಲ್‍ಎಫ್ ನಿಂದ ಅಪಹರಿಸಲ್ಪಟ್ಟಾಗ ಕೇಂದ್ರದ ಅಧಿಕಾರದಿಂದ ಪ್ರಯೋಜನ ಪಡೆದಿದ್ದಾರೆ. ಆದರೆ ತಮ್ಮ ಅಧಿಕಾರದ ಅವಧಿಯಲ್ಲಿ ಅಲ್ಲಿನ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಭಾರತದಲ್ಲಿ ಇರಲು ಇಚ್ಛಿಸುವವರು ಸಂವಿಧಾನ ಪಾಲಿಸಬೇಕು, ಇಲ್ಲವಾದರೆ ಅವರಿಗೆ ಪಾಕಿಸ್ತಾನಕ್ಕೆ ತೆರಳಲು ಟಿಕೆಟ್ ನೀಡಬೇಕು ಎಂದು ತಿರುಗೇಟು ನೀಡಿದರು.

  • ಹೆಚ್.ಡಿ ದೇವೇಗೌಡರ ಬಗ್ಗೆ ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವಹೇಳನಕಾರಿ ಟ್ವೀಟ್- ಸಿಟಿ ರವಿ ತರಾಟೆ

    ಹೆಚ್.ಡಿ ದೇವೇಗೌಡರ ಬಗ್ಗೆ ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವಹೇಳನಕಾರಿ ಟ್ವೀಟ್- ಸಿಟಿ ರವಿ ತರಾಟೆ

    ಬೆಂಗಳೂರು: ಮಾಜಿ ಪ್ರಧಾನಿ, ಕರ್ನಾಟಕದ ಮಣ್ಣಿನ ಮಗ ಹೆಚ್.ಡಿ.ದೇವೇಗೌಡ ಅವರ ಬಗ್ಗೆ ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

    ಓಮರ್ ಅಬ್ದುಲ್ಲಾ ಪಾಕಿಸ್ತಾನ ಸರ್ವಾಧಿಕಾರಿ ಅಂತಾನೇ ಕರೆಸಿಕೊಳ್ತಿದ್ದ ಪರ್ವೇಜ್ ಮುಷರಫ್‍ಗೆ ದೇವೇಗೌಡರನ್ನ ಹೋಲಿಸಿದ್ದಾರೆ. ಆಂಗ್ಲ ಮಾಧ್ಯಮವೊಂದು ಕುಲಭೂಷಣ್ ಜಾಧವ್ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‍ನಿಂದ ಪರ್ವೇಜ್ ಮುಷರಫ್ ಅವರನ್ನ ಸಂದರ್ಶನ ಮಾಡಿತ್ತು. ಇದಕ್ಕೆ ಟ್ವೀಟ್ ಮಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಈ ವಿಚಾರದ ಬಗ್ಗೆ ಮಾತನಾಡಲು ಪರ್ವೇಜ್ ಮುಷರಫ್ ಅವರನ್ನ ಕೂರಿಸಿಕೊಳ್ಳಬೇಕಿತ್ತಾ? ಕುಲಭೂಷಣ್ ಬಗ್ಗೆ ಮುಷರಫ್ ಮಾತನಾಡೋದೂ ಒಂದೇ, ಅಭಿವೃದ್ಧಿ ಬಗ್ಗೆ ದೇವೇಗೌಡರನ್ನ ಕೇಳೋದೂ ಒಂದೇ ಅಂತಾ ಅವಹೇಳನ ಮಾಡಿದ್ದಾರೆ.

    ಸಿಟಿ ರವಿ ತರಾಟೆ: ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಪಕ್ಷಬೇಧ ಮರೆತು ಬಿಜೆಪಿ ಮುಖಂಡ ಸಿ.ಟಿ.ರವಿ ಓಮರ್ ಅಬ್ದುಲ್ಲಾಗೆ ಟ್ವಿಟ್ಟರ್‍ನಲ್ಲೇ ಜಾಡಿಸಿದ್ದಾರೆ. ದೇವೇಗೌಡ ಅವರು ನಿಜವಾದ ಮಣ್ಣಿನ ಮಗ. ಅವರು ದೇಶದ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಗಳನ್ನ ಓಮರ್ ಅಬ್ದುಲ್ಲಾ ಕುಟುಂಬ ಕನಸಿನಲ್ಲೂ ಮಾಡೋಕಾಗಲ್ಲ ಅಂತ ಟ್ವಿಟ್ಟರ್‍ನಲ್ಲೇ ತಿವಿದಿದ್ದಾರೆ.

    https://www.youtube.com/watch?v=K3PS-1RtJC8