Tag: ಪರ್ವತಾರೋಹಿಗಳು

  • ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 11 ಸಾವು, 12 ಪರ್ವತಾರೋಹಿಗಳು ನಾಪತ್ತೆ

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 11 ಸಾವು, 12 ಪರ್ವತಾರೋಹಿಗಳು ನಾಪತ್ತೆ

    ಜಕಾರ್ತ: ಇಂಡೋನೇಷ್ಯಾದ (Indonesia) ಮೌಂಟ್ ಮರಾಪಿಯಲ್ಲಿ (Mount Marapi) ಜ್ವಾಲಾಮುಖಿ (Volcano) ಸ್ಫೋಟಗೊಂಡಿದ್ದು, ಈ ವೇಳೆ 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಭಾನುವಾರ ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಸಂದರ್ಭ ಅಲ್ಲಿ 75 ಜನರು ಇದ್ದರು. ಜ್ವಾಲಾಮುಖಿ ಸ್ಫೋಟದ ಬಳಿಕ ರಕ್ಷಣಾ ತಂಡಗಳು ಧಾವಿಸಿದ್ದು, ಅದರಲ್ಲಿ 14 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಮೊದಲು ನಾಪತ್ತೆಯಾಗಿದ್ದವರಲ್ಲಿ ಮೂವರನ್ನು ಜೀವಂತವಾಗಿ ಪತ್ತೆ ಮಾಡಿದ್ದೇವೆ. 11 ಜನರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.

    ಭಾನುವಾರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜ್ವಾಲಾಮುಖಿಯಿಂದಾದ ದಟ್ಟವಾದ ಹೊಗೆ ಆಕಾಶದಲ್ಲಿ ಹರಡಿರುವುದು, ರಸ್ತೆ, ವಾಹನಗಳು ಜ್ವಾಲಾಮುಖಿಯ ಬೂದಿಯಿಂದ ಆವೃತವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ಇಂಡೋನೇಷ್ಯಾ ಪೆಸಿಫಿಕ್ ಸಾಗರದ ರಿಂಗ್ ಆಫ್ ಫೈರ್‌ನ ಅಂಚಿನಲ್ಲಿ ಬರುತ್ತದೆ. ದೇಶದ ಜ್ವಾಲಾಮುಖಿ ಏಜೆನ್ಸಿಯ ಪ್ರಕಾರ ಮೌಂಟ್ ಮರಾಪಿ ಸುಮಾರು 2,891 ಅಡಿ ಎತ್ತರದಲ್ಲಿದ್ದು, ಇದೇ ರೀತಿಯ 127 ಸಕ್ರಿಯ ಜ್ವಾಲಾಮುಖಿಗಳು ಈ ಪ್ರದೇಶದಲ್ಲಿದೆ. ಇದನ್ನೂ ಓದಿ: ಕೂಟಿಯಾಲ ಹೊಳೆಯಲ್ಲಿ ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

  • ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ದ್ರೌಪದಿ ಕಾ ದಂಡಾ-2 (Draupadi ka Danda) ಶಿಖರದಲ್ಲಿ ಇಂದು ಭಾರೀ ಹಿಮಪಾತ (Avalanche) ಸಂಭವಿಸಿದ್ದು, 20ಕ್ಕೂ ಹೆಚ್ಚು ಪರ್ವತಾರೋಹಿಗಳು (Mountaineers) ಹಿಮದಲ್ಲಿ ಸಿಲುಕಿರುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ತಿಳಿಸಿದ್ದಾರೆ.

    ವರದಿಗಳ ಪ್ರಕಾರ ನಾಪತ್ತೆಯಾದವರು ಉತ್ತರ ಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನವರಾಗಿದ್ದಾರೆ. ಟ್ರೆಕ್ಕಿಂಗ್ ತೆರಳಿದ್ದ 40 ಜನರ ಗುಂಪಿನಲ್ಲಿ 22 ವಿದ್ಯಾರ್ಥಿಗಳು ಹಾಗೂ 7 ಮಂದಿ ಬೋಧಕರಿದ್ದರು.

    ಹಿಮಪಾತ ಸಂಭವಿಸಿದಾಗ 29 ಮಂದಿ ಸಿಲುಕಿಕೊಂಡಿದ್ದರು. ಅವರಲ್ಲಿ 8 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರ ಪತ್ತೆಗೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದನ್ನೂ ಓದಿ: ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲವೆಂದು ಗ್ರಾಮ ಪಂಚಾಯತ್ ಕಚೇರಿಗೆ ಚಪ್ಪಲಿ ಹಾರ ಹಾಕಿದ ನೌಕರ

    ಸೇನೆಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಧಾಮಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ 8 ತಿಂಗಳ ಮಗು ಸೇರಿ ನಾಲ್ವರು ಕಿಡ್ನ್ಯಾಪ್‌

    Live Tv
    [brid partner=56869869 player=32851 video=960834 autoplay=true]