Tag: ಪರ್ವತಾರೋಹಿ

  • ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿ ಸಾವು

    ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿ ಸಾವು

    ಕಠ್ಮಂಡು: ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್(Mount Everest) ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳದ(West Bengal) ಸುಬ್ರತಾ ಘೋಷ್(45) ಮೃತ ಪರ್ವತಾರೋಹಿ. ಗುರುವಾರ 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ನಂತರ ಹಿಂತಿರುಗುವಾಗ ಹಿಲರಿ ಸ್ಟೆಪ್ಸ್(Hillary Step) ಬಳಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ಸುಬ್ರತಾ ಘೋಷ್(Subrata Ghosh) ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿಖರವನ್ನು ತಲುಪಿದರು. ಬಳಿಕ ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದೆ ಎಂದು ಪರ್ವತಾರೋಹಣ ಕಂಪನಿ ಸ್ನೋವಿ ಹರೈಸನ್ ಟ್ರೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬೋಧರಾಜ್ ಭಂಡಾರಿ ತಿಳಿಸಿದರು. ಇದನ್ನೂ ಓದಿ: ಪಾಕ್‌ ವಿರುದ್ಧ ಅಗತ್ಯ ಇದ್ರೆ ಯುದ್ಧ ಮಾಡಿ ಅಂದಿದ್ದೆ, ಕಟ್ ಮಾಡಿ ತೋರಿಸಿ ಬಿಟ್ಟಿದ್ದಾರೆ: ಸಿದ್ದರಾಮಯ್ಯ

    ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಚಂಪಲ್ ತಮಾಂಗ್ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್‌ರಿಂದ ಇಳಿಯಲು ಸಾಧ್ಯವಾಗಲಿಲ್ಲ. ತಮಾಂಗ್ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂಪ್‌ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು.

    ಹಿಲರಿ ಸ್ಟೆಪ್ಸ್‌ನಲ್ಲಿ ಆಮ್ಲಜನಕದ ಮಟ್ಟವು ತೀವ್ರ ಕಡಿಮೆ ಇರುವುದರಿಂದ ಈ ಪ್ರದೇಶವನ್ನು ಸಾವಿನ ವಲಯ ಎಂದೇ ಕರೆಯಲಾಗುತ್ತದೆ. ಇದನ್ನೂ ಓದಿ: ವಿದೇಶದಲ್ಲಿ ಪದವಿ ಪಡೆದ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

    ಬುಧವಾರವಷ್ಟೇ ಫಿಲಿಪೈನ್ಸ್‌ನ ಪರ್ವತಾರೋಹಿ ಫಿಲಿಪ್ ಸ್ಯಾಂಟಿಯಾಗೊ ದಕ್ಷಿಣ ಶಿಖರವನ್ನು ಏರುವಾಗ ಸಾವನ್ನಪ್ಪಿದ್ದರು. ಸ್ಯಾಂಟಿಯಾಗೊ ನಾಲ್ಕನೇ ಹೈ ಕ್ಯಾಂಪ್ ತಲುಪಿದಾಗ ದಣಿದು, ಟೆಂಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಸುನೀಗಿದ್ದರು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಹಿಮಾಲ್ ಗೌತಮ್ ತಿಳಸಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ಸ್ಯಾಂಟಿಯಾಗೊ ಮತ್ತು ಸುಬ್ರತಾ ಘೋಷ್ ಇಬ್ಬರೂ ಸ್ನೋವಿ ಹರೈಸನ್ ಟ್ರೆಕ್ಸ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಪರ್ವತಾರೋಹಣದ ಸದಸ್ಯರಾಗಿದ್ದರು.

  • ನೇಪಾಳದ ಅನ್ನಪೂರ್ಣ ಪರ್ವತವೇರುತ್ತಿದ್ದಾಗ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತವಾಗಿ ಪತ್ತೆ

    ನೇಪಾಳದ ಅನ್ನಪೂರ್ಣ ಪರ್ವತವೇರುತ್ತಿದ್ದಾಗ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತವಾಗಿ ಪತ್ತೆ

    ಕಠ್ಮಂಡು: ನೇಪಾಳದ (Nepal) ಅನ್ನಪೂರ್ಣ ಪರ್ವತವನ್ನು (Mount Annapurna) ಏರುತ್ತಿದ್ದ ವೇಳೆ ಆಳವಾದ ಬಿರುಕಿನೊಳಗೆ ಬಿದ್ದು ಸೋಮವಾರದಿಂದ ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿ (Indian Climber) ಅನುರಾಗ್ ಮಾಲೂ (Anurag Maloo) ಅವರನ್ನು ಜೀವಂತವಾಗಿ ಪತ್ತೆಹಚ್ಚಲಾಗಿದೆ.

    34 ವರ್ಷದ ಭಾರತೀಯ ವಾಣಿಜ್ಯೋದ್ಯಮಿ ಮತ್ತು ಅನುಭವಿ ಪರ್ವತಾರೋಹಿ ಅನುರಾಗ್ ಮಾಲೂ ಸೋಮವಾರ ನಾಪತ್ತೆಯಾಗಿದ್ದರು. ಸೋಮವಾರ 4ನೇ ಕ್ಯಾಂಪ್‌ನಿಂದ ಹಿಂತಿರುಗುತ್ತಿದ್ದಾಗ 3ನೇ ಕ್ಯಾಂಪ್ ಬಳಿ ಬಿರುಕಿನಲ್ಲಿ ಬಿದ್ದಿದ್ದರು. ಅನ್ನಪೂರ್ಣ ಪರ್ವತ ವಿಶ್ವದ 10ನೇ ಅತಿ ಎತ್ತರದ ಪರ್ವತವಾಗಿದೆ.

    ಇದೀಗ ಅನುರಾಗ್ ಅವರನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಅನುರಾಗ್ ಸದ್ಯ ಜೀವಂತವಾಗಿ ಪತ್ತೆಯಾಗಿದ್ದರೂ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿದೆ ಎಂದು ಅನುರಾಗ್ ಸಹೋದರ ಸುಧೀರ್ ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ಗೆ ಹಿನ್ನಡೆ – ಜೈಲು ಶಿಕ್ಷೆಗೆ ತಡೆ ಕೋರಿದ ಅರ್ಜಿ ವಜಾ

    ಅನುರಾಗ್ ರಾಜಸ್ಥಾನದ ಕಿಶನ್‌ಗಢ್ ಮೂಲದವರಾಗಿದ್ದು ರೆಕ್ಸ್ ಕರಮ್‌ವೀರ್ ಚಕ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅನುಭವಿ ಪರ್ವತಾರೋಹಿಯಾಗಿರುವ ಮಾಲೂ ಕಳೆದ ವರ್ಷ ಮೌಂಟ್ ಅಮಾ ದಬ್ಲಾಮ್ ಅನ್ನು ಹತ್ತಿದ್ದರು. ಈ ಋತುವಿನಲ್ಲಿ ನೇಪಾಳದ ಮೌಂಟ್ ಎವರೆಸ್ಟ್, ಅನ್ನಪೂರ್ಣ ಮತ್ತು ಲೊಟ್ಸೆಯನ್ನು ಏರುವ ಯೋಜನೆಯನ್ನು ಅವರು ಮಾಡಿದ್ದರು.

    8,000 ಮೀ. ಎತ್ತರದ ಎಲ್ಲಾ 14 ಶಿಖರಗಳನ್ನು ಮತ್ತು ಎಲ್ಲಾ 7 ಖಂಡಗಳಲ್ಲಿನ 7 ಎತ್ತರದ ಪ್ರದೇಶಗಳನ್ನು ಏರುವುದು ಮಾಲೂ ಗುರಿಯಾಗಿದೆ. ಇದನ್ನೂ ಓದಿ: ಕಾಲ್ತುಳಿತಕ್ಕೆ ಮಹಿಳೆ, ಮಕ್ಕಳು ಸೇರಿದಂತೆ 85 ಮಂದಿ ಸಾವು

  • ಪದ್ಮಶ್ರೀ ಪುರಸ್ಕೃತ ಎಚ್‍ಪಿಎಸ್ ಅಹ್ಲುವಾಲಿಯಾ ನಿಧನ

    ಪದ್ಮಶ್ರೀ ಪುರಸ್ಕೃತ ಎಚ್‍ಪಿಎಸ್ ಅಹ್ಲುವಾಲಿಯಾ ನಿಧನ

    ನವದೆಹಲಿ: ಪದ್ಮಶ್ರೀ ಪುರಸ್ಕೃತ ಮತ್ತು ಭಾರತೀಯ ಬೆನ್ನುಮೂಳೆ ಗಾಯಗಳ ಕೇಂದ್ರದ ಮೇಜರ್ ಎಚ್‍ಪಿಎಸ್ ಅಹ್ಲುವಾಲಿಯಾ(85) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

    ಎಚ್‍ಪಿಎಸ್ ಅಹ್ಲುವಾಲಿಯಾ ಅವರು ನಿವೃತ್ತ ಸೇನಾ ಅಧಿಕಾರಿಯಾಗಿದ್ದು, ತರಬೇತಿ ಪಡೆದ ಪರ್ವತಾರೋಹಿ, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅಹ್ಲುವಾಲಿಯಾ ಅವರು ಸಾಹಸ, ಕ್ರೀಡೆ, ಪರಿಸರ, ಅಂಗವೈಕಲ್ಯ ಮತ್ತು ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

    HPS Ahluwalia

    ವೃತ್ತಿಪರ ಪರ್ವತಾರೋಹಿಯಾಗಿರುವ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಆತ್ಮಕಥೆ ಹೈಯರ್ ದ್ಯಾನ್ ಎವರೆಸ್ಟ್ ಸೇರಿದಂತೆ 13 ಪುಸ್ತಕಗಳನ್ನು ಬರೆದಿದ್ದಾರೆ. ಮೇಜರ್ ಅಹ್ಲುವಾಲಿಯಾ ಅವರು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ ಮತ್ತು ದೆಹಲಿ ಪರ್ವತಾರೋಹಣ ಸಂಘದ ಮಾಜಿ ಅಧ್ಯಕ್ಷರೂ ಸಹ ಆಗಿದ್ದಾರೆ.

    ಅಹ್ಲುವಾಲಿಯಾ ಅವರಿಗೆ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇದೀಗ ಪತ್ನಿ ಭೋಲಿ ಅಹ್ಲುವಾಲಿಯಾ ಮತ್ತು ಪುತ್ರಿ ಸುಗಂಧ್ ಅಹ್ಲುವಾಲಿಯಾ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ