Tag: ಪರ್ಮಾನು

  • ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಬಾಲಿವುಡ್‌ನ `ದೇಸಿಬಾಯ್ಸ್’ ಮತ್ತೆ ತೆರೆಯ ಮೇಲೆ ಮಿಂಚೋದಕ್ಕೆ ಸಜ್ಜಾಗ್ತಿದ್ದಾರೆ. ಕಿಲಾಡಿ ಜೋಡಿ ಅಕ್ಷಯ್ ಕುಮಾರ್ ಮತ್ತು ನಟ ಜಾನ್ ಅಬ್ರಾಹಾಂ ಒಂದೇ ಸಿನಿಮಾದಲ್ಲಿ ನಟಿಸೋದಕ್ಕೆ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಯುತ್ತಿದೆ. ಈ ಹೊಸ ಪ್ರಾಜೆಕ್ಟ್ `ಪರ್ಮನು’ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶರ್ಮಾ ಆಕ್ಷನ್ ಕಟ್ ಹೇಳ್ತಿದ್ದಾರೆ.

    ಅಭಿಷೇಕ್ ಶರ್ಮಾ ನಿರ್ದೇಶನದ ೨೦೧೮ರ `ಪರ್ಮನು’ ಚಿತ್ರದಲ್ಲಿ ಜಾನ್ ಅಬ್ರಾಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ಈಗ ಮತ್ತೆ ಅಭಿಷೇಕ್ ಮತ್ತು ಜಾನ್ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ನಟ ಜಾನ್‌ಗೆ ಸಾಥ್ ಕೊಡೋಕೆ ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಳ್ತಿದ್ದಾರೆ. ಇದನ್ನು ಓದಿ:`ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್

    ಈಗಾಗಲೇ ಜಾನ್ ಅಬ್ರಾಹಂ ಮತ್ತು ಅಕ್ಷಯ್ ಕುಮಾರ್ ಕಾಂಬೋದಲ್ಲಿ `ದೇಸಿ ಬಾಯ್ಸ್’, `ಹೌಸ್‌ಫುಲ್ ೨’, `ಗರಂ ಮಸಾಲ’ ಚಿತ್ರಗಳು ಕಮಾಲ್ ಮಾಡಿದೆ. ಈಗ ಅಭಿಷೇಕ್ ನಿರ್ದೇಶನದ ಚಿತ್ರದಲ್ಲಿ ಭಿನ್ನ ಕಥೆ, ಪಾತ್ರಗಳ ಮೂಲಕ ಮೋಡಿ ಮಾಡಲು ದೇಸಿ ಬಾಯ್ಸ್ ಬರುತ್ತಿದ್ದಾರೆ. ಸಾಕಷ್ಟು ಚಿತ್ರಗಳ ಮೂಲಕ ಅಟ್ರಾಕ್ಟ್ ಮಾಡಿರೋ ಜಾನ್ ಮತ್ತು ಅಕ್ಷಯ್ ಕುಮಾರ್ ಜುಗಲ್‌ಬಂದಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.