Tag: ಪರೋಟ

  • ಆರೋಗ್ಯಕರ ತುಂಬಾ ರುಚಿಯಾದ ಬೇಳೆ ಪರೋಟ ಮಾಡಿ ಸವಿಯಿರಿ

    ಆರೋಗ್ಯಕರ ತುಂಬಾ ರುಚಿಯಾದ ಬೇಳೆ ಪರೋಟ ಮಾಡಿ ಸವಿಯಿರಿ

    ರೋಗ್ಯಕರ, ರುಚಿಕರ ಮಾತ್ರವಲ್ಲದೇ ಪ್ರೋಟೀನ್‌ಯುಕ್ತ ಬೇಳೆಯ ಪರೋಟ ಪ್ರತಿಯೊಬ್ಬರೂ ಒಮ್ಮೆ ಟ್ರೈ ಮಾಡಲೇ ಬೇಕು. ಆಲೂ ಪರೋಟದಂತೆಯೇ ಮಾಡಲಾಗುವ ಈ ವಿಧಾನವನ್ನು ಕಲಿತುಕೊಂಡರೆ, ನಿಮ್ಮ ಹೆಲ್ದಿ ರೆಸಿಪಿ ಲಿಸ್ಟ್‌ಗಳ ಪಟ್ಟಿಯಲ್ಲಿ ಇದು ಕೂಡಾ ಉಳಿದುಕೊಳ್ಳುತ್ತದೆ. ರುಚಿಕರ ಪರೋಟವನ್ನು ಊಟಕ್ಕೆ ಬಡಿಸಲು ಪರ್ಫೆಕ್ಟ್ ಆಗಿದ್ದು, ಚಟ್ನಿ, ಮೊಸರಿನೊಂದಿಗೂ ಸವಿಯಬಹುದು.

    ಬೇಕಾಗುವ ಪದಾರ್ಥಗಳು:
    ಕಡಲೆ ಬೇಳೆ – 1 ಕಪ್(3 ಗಂಟೆ ನೆನೆಸಿರಬೇಕು)
    ಅರಿಶಿನ – ಕಾಲು ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಆಮ್ಚೂರ್/ಒಣ ಮಾವಿನ ಪುಡಿ – ಅರ್ಧ ಟೀಸ್ಪೂನ್
    ಗರಂ ಮಸಾಲಾ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಓಂಕಾಳು – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಗೋಧಿ ಹಿಟ್ಟು – 10 ಚಪಾತಿ ಗಾತ್ರದ ಉಂಡೆಗಳು
    ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಪಾತ್ರೆಯಲ್ಲಿ 3 ಗಂಟೆ ನೆನೆಸಿಟ್ಟ ಕಡಲೆ ಬೇಳೆಯನ್ನು ತೆಗೆದುಕೊಳ್ಳಿ.
    * ಅದನ್ನು 15 ನಿಮಿಷಗಳ ಕಾಲ ಕುದಿಸಿ ಬೇಯಿಸಿ. ಅಥವಾ ಪರ್ಯಾಯವಾಗಿ 2 ಕಪ್ ನೀರನ್ನು ಸೇರಿಸಿ 2 ಸೀಟಿಗಳಿಗೆ ಪ್ರೆಶರ್ ಕುಕರ್‌ನಲ್ಲಿ ಬೇಯಿಸಬಹುದು.
    * ಬಳಿಕ ನೀರನ್ನು ಸಂಪೂರ್ಣವಾಗಿ ಬಸಿಯಬೇಕು. ಇದಕ್ಕೆ 30 ನಿಮಿಷ ಬಸಿಯಲು ಬದಿಗಿರಿಸಿ.
    * ಈಗ ಬೇಯಿಸಿ, ಬಸಿದ ಕಡಲೆ ಬೆಳೆಯನ್ನು ಬ್ಲೆಂಡರ್‌ಗೆ ಹಾಕಿ, ನೀರನ್ನು ಸೇರಿಸದೇ ನುಣ್ಣಗೆ ಪುಡಿ ಮಾಡಿ.
    * ಈಗ ಕಡಲೆ ಬೇಳೆ ಪುಡಿಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಅಥವಾ ಒಣ ಮಾವಿನ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ, ಓಂಕಾಳು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಈಗ ಚಪಾತಿ ಮಾಡುವ ಗಾತ್ರದ ಗೋಧಿ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು, ಸ್ವಲ್ಪ ಲಟ್ಟಿಸಿ, ಅದರ ಮಧ್ಯ 2 ಟೀಸ್ಪೂನ್ ಕಡಲೆ ಬೇಳೆಯ ಮಿಶ್ರಣವನ್ನು ಹಾಕಿ, ಪರೋಟಾದಂತೆ ಸುತ್ತಿಕೊಳ್ಳಿ.
    * ಈಗ ಆ ಹಿಟ್ಟನ್ನು ಲಟ್ಟಿಸಿ, ಬಿಸಿ ತವಾದಲ್ಲಿ ಹಾಕಿ, ಬೇಯಿಸಿ.
    * ಅದಕ್ಕೆ 1 ಟೀಸ್ಪೂನ್ ಎಣ್ಣೆ ಸವರಿ, ಮತ್ತೆ ಮಗುಚಿ ಹಾಕಿ, ಎರಡೂ ಬದಿ ಕಾಯಿಸಿ.
    * ಈಗ ಆರೋಗ್ಯಕರ ಬೇಳೆ ಪರೋಟ ಸವಿಯಲು ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪರೋಟ ತಿಂದ ಮರುದಿನವೇ ಬಾಲಕನ ಸಾವು – ಅಸಲಿ ಕಾರಣವೇನು?

    ಪರೋಟ ತಿಂದ ಮರುದಿನವೇ ಬಾಲಕನ ಸಾವು – ಅಸಲಿ ಕಾರಣವೇನು?

    ತಿರುವನಂತಪುರಂ: 9 ವರ್ಷದ ಬಾಲಕ ಪರೋಟ ತಿಂದು ಮರುದಿನವೇ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಇದಕ್ಕೆ ಅಸಲಿ ಕಾರಣ ತಿಳಿದ ವೈದ್ಯರು ಶಾಕ್ ಆಗಿದ್ದಾರೆ.

    ಮೃತನನ್ನು ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ಅವರ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ. ಸಂತೋಷ್ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಶುಕ್ರವಾರ ಪರೋಟ ತಿಂದ ಸಂತೋಷ್ ಅಸ್ವಸ್ಥನಾಗಿದ್ದನು. ಶನಿವಾರ ಅತಿಯಾದ ವಾಂತಿಯಾಗುತ್ತಿದ್ದ ಹಿನ್ನೆಲೆ ಪೋಷಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇದನ್ನೂ ಓದಿ: ಮೈ ಮೇಲೆ ಕೆಸರು ಹಾರಿದ್ದಕ್ಕೆ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ

    ತಣ್ಣಗಾದ ಮೇಲೂ ಪರೋಟ ಮೃದುವಾಗಿರಲು ಇಲ್ಲಿವೆ ಸಿಂಪಲ್ ಟಿಪ್ಸಗಳು | Paratha recipe | How to Make Soft Layered Paratha at Home in Kannada - Kannada Boldsky

    ಆಸ್ಪತ್ರೆಗೆ ಕರೆತಂದಾಗ ಬಾಲಕನ ಹೊಟ್ಟೆ ಊದಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೊಟ್ಟೆ ನೋವು ಕಡಿಮೆಯಾಯಿತು. ಬೆಳಗ್ಗೆ 10.30ರ ವೇಳೆಗೆ ಸಂತೋಷ್ ರಕ್ತದೊತ್ತಡ ಕುಸಿದಿದ್ದು, ಬಳಿಕ ಸಂತೋಷ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಸಂತೋಷ್ ಬಹಳ ದಿನಗಳಿಂದ ಮೂರ್ಛೆ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ. ಈ ಕಾರಣ ಆತನಿಗೆ ರಕ್ತದೊತ್ತಡ ಕುಸಿದು ಆಹಾರ ಅವನ ಶ್ವಾಸಕೋಶದಲ್ಲಿ ಸಿಕ್ಕಿಕೊಂಡಿದ್ದು, ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

  • ಮುಂಬೈನಲ್ಲಿ ಸಿಗುತ್ತದೆ ಅತೀ ದೊಡ್ಡ ಪರೋಟ

    ಮುಂಬೈನಲ್ಲಿ ಸಿಗುತ್ತದೆ ಅತೀ ದೊಡ್ಡ ಪರೋಟ

    ಮುಂಬೈ: ಆಹಾರ ಪದ್ಧತಿಯಲ್ಲಿ ಭಾರತೀಯರು ವೈವಿಧ್ಯ ಆಹಾರವನ್ನು ಸೇವಿಸುತ್ತಾರೆ. ಮುಂಬೈನ ಹಲ್ವಾ ಪರೋಟ ಎಲ್ಲರ ಗಮನವನ್ನು ಸೆಳೆಯುತ್ತಿದೆ.

    ಮುಂಬೈನ ಮಹೀಮ್ ಹಲ್ವಾ ಪರೋಟ ಹೋಟೆಲ್ ಮಾಡಿದ್ದಾರೆ. ದೊಡ್ಡ ದೊಡ್ಡ ಗಾತ್ರದ ಪರೋಟ ಮಾಡುವುದರಿಂದಲೇ ಇವರು ಫೇಮಸ್ ಆಗಿದ್ದಾರೆ. ಇವರು ಪರೋಟವನ್ನು ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಈ ವೀಡಿಯೋವನ್ನು 63 ಸಾವಿರ ಜನ ಲೈಕ್ ಮಾಡಿದ್ದು, 2ಸಾವಿರ ಮಂದಿ ಕಮೇಂಟ್ ಮಾಡಿದ್ದಾರೆ. ಹಲ್ವಾ ಪರೋಟ ಮುಂಬೈನಲ್ಲಿ ಸಿಗುವ ಪರೋಟದಲ್ಲಿಯೇ ಅತ್ಯಂತ ದೊಡ್ಡ ಪರೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮೈದಾಹಿಟ್ಟಿನಿಂದ ಪರೋಟವನ್ನು ಮಾಡುತ್ತಾರೆ. ವಿಶೇಷವೆಂದರೆ ಇವರು ಪರೋಟವನ್ನು ತಪ್ಪವನ್ನು ಹಾಕಿ ಚೆನ್ನಾಗಿ ಬೇಯಿಸುತ್ತಾರೆ. ದಾಲ್, ಸಾಂಬಾರ್, ಮಟ್ಟನ್ ಕೈಮಾ ಜೊತೆಗೆ ಕೊಡಲಾಗುತ್ತದೆ. ಮುಂಬೈನ ಹಲ್ವಾ ಪರೋಟ ಎಲ್ಲೆಡೆ ಸುದ್ದಿ ಮಾಡುತ್ತಿದೆ.