Tag: ಪರೀಕ್ಷಾ ಪೇ ಚರ್ಚಾ

  • ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್‌-10 ಟಿಪ್ಸ್!

    ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್‌-10 ಟಿಪ್ಸ್!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು 2024ನೇ ಸಾಲಿನ ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಚರ್ಚಾ ಕಾರ್ಯಕ್ರಮದಲ್ಲಿ ಹತ್ತು-ಹಲವು ಸಲಹೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅನುಕೂಲಕರ ಸಲಹೆಗಳನ್ನು ನೀಡಿದ್ದಾರೆ.

    ವಿದ್ಯಾರ್ಥಿಗಳು – ಶಿಕ್ಷಕರಿಗೆ ಮೋದಿ ಟಾಪ್‌-10 ಟಿಪ್ಸ್‌:
    * ಹೆಚ್ಚಿನ ವಿದ್ಯಾರ್ಥಿಗಳು (Students) ಪರೀಕ್ಷೆಗೆ ಓದಿಕೊಂಡು ಹೋಗ್ತಾರೆ, ಆದ್ರೆ ಬರೆದು ಅಭ್ಯಾಸ ಮಾಡಿರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಆದ್ದರಿಂದ ಪರೀಕ್ಷೆಗೂ ಮುನ್ನ ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯಲು ಸಾಧ್ಯವಾಗುತ್ತದೆ.

    * ತರಗತಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ (Teachers) ನಡುವಿನ ಸಂಬಂಧ ಉತ್ತಮವಾಗಿರಬೇಕು. ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸುವಂತಿರಬೇಕು. ಶಿಕ್ಷಕರೂ ಅಷ್ಟೇ ಚೆನ್ನಾಗಿ ವಿದ್ಯಾರ್ಥಿಗಳ ಸಮಸ್ತೆ ಆಲಿಸಿದಾಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಿದ್ಯಾರ್ಥಿಗಳು ಮುನ್ನಡೆಯುತ್ತಾರೆ.

    * ವಿದ್ಯಾರ್ಥಿಗಳ ಮೇಲಿನ ಒತ್ತಡ ಹೇಗೆ ಹೋಗಲಾಡಿಸಬೇಕು ಅನ್ನೋದು ಶಿಕ್ಷಕರ ಮನಸ್ಸಿಗೆ ಮೊದಲೇ ಬರಬೇಕು. ವಿದ್ಯಾರ್ಥಿ ಜೊತೆಗಿನ ಸಂಬಂಧವು ಆರಂಭದ ದಿನದಿಂದ ಪರೀಕ್ಷೆ ದಿನದವರೆಗೂ ಬೆಳೆಯುತ್ತಲೇ ಇರಬೇಕು. ಆಗ ವಿದ್ಯಾರ್ಥಿ ಪುಸ್ತಕ ಮೀರಿ ಬೆಳೆಯುತ್ತಾನೆ.

    * ಪರೀಕ್ಷೆಯ ಕೊಠಡಿಗೆ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯರೊಂದಿಗೆ ಮಾತನಾಡಿ, ಒಂದು ಜೋಕ್‌ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.

    * ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ಸಿಕ್ಕ ತಕ್ಷಣ ಗಾಬರಿಯಾಗದೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳಬೇಡಿ.

    * ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಉತ್ತರ ಬರೆದು, ನೋಟ್ಸ್‌ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.

    * ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹಕ್ಕೂ ಸ್ವಲ್ಪ ವಿಶ್ರಾಂತಿ ಕೊಡಬೇಕು. ಉಲ್ಲಾಸದ ಸಮಯಗಳನ್ನು ಕಳೆಯುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು.

    * ಒಂದೇ ಕಡೆ ಕೂರುವುದಕ್ಕಿಂತ ಶಾಂತ ವಾತಾವರಣ, ಎಳೆ ಬಿಸಿಲಿನ ವಾತಾವರಣಗಳಲ್ಲಿಯೂ ಕುಳಿತು, ಓದಬೇಕು. ಓದುತ್ತೇವೆ ಅಂತ ನಿದ್ರೆಗೆ ಜಾರಬಾರದು.

    * ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಬೇಕು. ಬಡತನ ಇರಲಿ, ಸಿರಿತನ ಇರಲಿ, ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ, ಆರೋಗ್ಯ ಕಾಪಾಡಿಕೊಳ್ಳಬೇಕು.

    * ಬೆಳಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ, 10 ನಿಮಿಷವಾದ್ರೂ ವ್ಯಾಯಾಮ ಮಾಡಬೇಕು. ಸಾಧ್ಯವಾದ್ರೆ ಒಂದಷ್ಟು ನಿಮಿಗಳ ಕಾಲ ಧ್ಯಾನ ಮಾಡಬೇಕು. ಇದರಿಂದ ಮೆದುಳಿನ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

  • ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿದ್ಯಾರ್ಥಿಗಳ ನಡುವೆ ಕುಳಿತು ವೀಕ್ಷಿಸಿದರು. ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ (Narendra Modi) ಅವರ ಚರ್ಚೆ ಬಳಿಕ ಹುಬ್ಬಳ್ಳಿಯಲ್ಲಿ ಜೋಶಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.‌

    ಮೋದಿಯವರ ಆಶಯದಂತೆ, ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯಪಡದೇ, ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೋಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಉತ್ತಮ ತಯಾರಿ ಹಾಗೂ ಆತ್ಮಸ್ಥೈರ್ಯದಿಂದ ಯಾವುದೇ ಪರೀಕ್ಷೆಯನ್ನು ಕೂಡ ಯಶಸ್ವಿಯಾಗಿ ಎದುರಿಸಬಹುದು ಎಂಬ ಸ್ಪೂರ್ತಿದಾಯಕ ನುಡಿಗಳನ್ನಾಡಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬಿದರು.

    ಕಾರ್ಯಕ್ರಮದ ನಂತರ ಸವಾಯೀ ಗಂಧರ್ವ ಸಭಾಭವನದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ, ಮೋದಿ ಅವರು ಬರೆದ ಎಕ್ಸಾಮ್ ವಾರಿಯರ್ಸ್ (Exam Warriors) ಪುಸ್ತಕವನ್ನು ಜೋಶಿ ವಿತರಿಸಿದರು. ಭಾರತದ ಭವಿಷ್ಯವಾದ ಈ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅನುಭವ ತುಂಬಾ ಆನಂದ ನೀಡಿತು. ಈ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.  ಇದನ್ನೂ ಓದಿ: ಕಾಂಪೌಂಡ್ ಕಟ್ಟೋಕೆ ಹಣ ಕೊಡೋದು ಬಿಡಿ; ಮಕ್ಕಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ – ಬೊಮ್ಮಾಯಿ

    ಸುಮಾರು ಐದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೋಶಿಯವರು ವಿದ್ಯಾರ್ಥಿಗಳ ಜೊತೆ ಕುಳಿತು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಿಸುವಾಗ ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Pariksha Pe Charcha 2023: ಪೋಷಕರು ಮಕ್ಕಳಿಗೆ ಒತ್ತಡ ಹಾಕಬೇಡಿ – ವಿದ್ಯಾರ್ಥಿಗಳು ತಾಯಿಯಿಂದ ಸಮಯದ ನಿರ್ವಹಣೆ ಕಲಿಯಿರಿ: ಮೋದಿ

    Pariksha Pe Charcha 2023: ಪೋಷಕರು ಮಕ್ಕಳಿಗೆ ಒತ್ತಡ ಹಾಕಬೇಡಿ – ವಿದ್ಯಾರ್ಥಿಗಳು ತಾಯಿಯಿಂದ ಸಮಯದ ನಿರ್ವಹಣೆ ಕಲಿಯಿರಿ: ಮೋದಿ

    – ಪರೀಕ್ಷೆಯಲ್ಲಿ ನಕಲು ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ

    ನವದೆಹಲಿ: ಪೋಷಕರು (Parents) ಮಕ್ಕಳಿಗೆ (Childrens) ಹೆಚ್ಚು ಒತ್ತಡ ಹಾಕಬಾರದು. ಪೋಷಕರು ಒತ್ತಡ ಹಾಕದಿದ್ದರೂ ವಿದ್ಯಾರ್ಥಿಗಳು (Students) ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯಲ್ಲಿ ಮುನ್ನುಗ್ಗಿ ಯಾವತ್ತು ಧೈರ್ಯ ಕಳೆದುಕೊಳ್ಳಬೇಡಿ. ಓದನ್ನು ಕಡೆಗಣಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

    ಆರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (Pariksha Pe Charcha 2023) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜೊತೆಗೆ ಸಂವಾದ ನಡೆಸಿ ಹಲವು ಸಲಹೆಗಳನ್ನು ನೀಡಿದರು. ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೋದಿ, ಒಂದೋ, ಎರಡೋ ಪರೀಕ್ಷೆಯಲ್ಲಿ ನಕಲು (Copy) ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಕಲು ಮಾಡುತ್ತಾ ಮುಂದೆ ಹೋದರೂ ಮುಂದೆ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತೆ ಯಾರಾದರೂ ಮೋಸ ಮಾಡಿ ನಿಮಗಿಂತ ಸ್ವಲ್ಪ ಹೆಚ್ಚು ಅಂಕ ಪಡೆದರೂ ಅದು ನಿಮಗೆ ಜೀವನದಲ್ಲಿ ಅಡ್ಡಿಯಾಗಲಾರದು ನಿಮ್ಮ ಆಂತರಿಕ ಶಕ್ತಿಯನ್ನು ನಂಬಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ಗೌರವ ನೀಡಿದೆ: ಎಸ್.ಎಂ.ಕೃಷ್ಣ

    ಪೋಷಕರು ತಮ್ಮ ಮಕ್ಕಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಒತ್ತಡಗಳಿಗೆ ಮಣಿಯಬೇಕೇ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಕ್ರಿಕೆಟ್‍ನಲ್ಲಿ (Cricket) ಜನರು ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್ ಬೇಕು ಅಂತ ಕೂಗುತ್ತಲೇ ಇರುತ್ತಾರೆ, ಪ್ರೇಕ್ಷಕರ ಬೇಡಿಕೆಯ ಮೇರೆಗೆ ಆಟಗಾರನು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುತ್ತಾನಾ? ಆಟಗಾರನು ಚೆಂಡಿನ ಮೇಲೆ ಮಾತ್ರ ಕೇಂದ್ರೀಕರಿಸುತ್ತಾನೆ ಹಾಗೆಯೇ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ನಿಭಾಯಿಸಬೇಕು ಎಂದರು.

    ನಮ್ಮ ಇಷ್ಟದ ವಿಷಯಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ ಅಂತಹ ಪರಿಸ್ಥಿತಿಯಲ್ಲಿ ಕಷ್ಟಕರವಾದ ವಿಷಯಕ್ಕೆ ಒತ್ತು ನೀಡಬೇಕು ಅದರ ನಂತರ ಹೆಚ್ಚು ಇಷ್ಟವಾದ ವಿಷಯವನ್ನು ಓದಬೇಕು. ಇಷ್ಟ ಮತ್ತು ಇಷ್ಟಪಡದಿರುವ ವಿಷಯಗಳಿಗೆ ಒಂದರ ನಂತರ ಒಂದರಂತೆ ಸಮಯ ನೀಡಿ. ತಾಯಿಯಿಂದ ಸಮಯ ನಿರ್ವಹಣೆ ಕಲಿಯಿರಿ, ತಾಯಿಯು ದಿನದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾಳೆ ತಾಯಿಗೆ ಗರಿಷ್ಠ ಕೆಲಸವಿದೆ, ಸಮಯ ನಿರ್ವಹಣೆಯಿಂದ ಕೆಲಸ ನಿರ್ವಹಿಸುತ್ತಾರೆ ಪ್ರತಿ ಕೆಲಸವನ್ನು ತಾಯಿ ಸಮಯಕ್ಕೆ ಸರಿಯಾಗಿ ಮಾಡುತ್ತಾಳೆ ಹಾಗಯೇ ವಿದ್ಯಾರ್ಥಿಗಳು ಸಮಯದ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    ಇದೇ ವೇಳೆ ಪರೀಕ್ಷೆಯಲ್ಲಿ ನಕಲು ತಪ್ಪಿಸುವ ಕುರಿತಾಗಿ ಮಾತನಾಡಿದ ಅವರು, ಟ್ಯೂಷನ್ ಕಲಿಸುವ ಕೆಲವು ಶಿಕ್ಷಕರಿದ್ದಾರೆ ಅವರು ತಮ್ಮ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬೇಕೆಂದು ಬಯಸುತ್ತಾರೆ. ಆದ್ದರಿಂದ ಅವರು ಮೋಸವನ್ನು ಪ್ರೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳು ನಕಲು ಮಾಡಲು ಸೃಜನಶೀಲತಾಗಿರುತ್ತಾರೆ. ಆ ಸೃಜನಶೀಲತೆಯನ್ನು ಅಧ್ಯಯನಕ್ಕೆ ತೋರಿಸಿದರೆ, ನಕಲು ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

    ಸ್ಮಾರ್ಟ್ ವರ್ಕ್ ಮತ್ತು ಹಾರ್ಡ್ ವರ್ಕ್ ನಡುವೆ ಯಾವುದನ್ನು ಆಯ್ಕೆ ಮಾಡಬೇಕು? ಎನ್ನುವ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಮೋದಿ, ಬಾಯಾರಿದ ಕಾಗೆಯ ಕಥೆಯನ್ನು ನೀವೆಲ್ಲರೂ ಕೇಳಿರಬೇಕು, ಅದರಲ್ಲಿ ಕಾಗೆಯು ಕಲ್ಲುಹಾಕಿ ನೀರು ಕುಡಿಯುತ್ತದೆ ಇದು ಕಾಗೆಯ ಹಾರ್ಡ್ ವರ್ಕ್ ಅಥವಾ ಸ್ಮಾರ್ಟ್ ವರ್ಕ್? ಕೆಲವರು ಹಾರ್ಡ್‍ಲಿ ಸ್ಮಾರ್ಟ್ ವರ್ಕ್ ಮಾಡಿದರೆ ಕೆಲವರು ಸ್ಮಾರ್ಟ್‍ಲಿ ಹಾರ್ಡ್ ವರ್ಕ್ ಮಾಡುತ್ತಾರೆ ಕಾಗೆಗಳಿಂದ ನಾವು ಕಲಿಯಬೇಕಾದುದು ಇದನ್ನೇ. ಒಮ್ಮೆ ಕಾರು ಕೆಟ್ಟು ನಿಂತಿತ್ತು ಗಂಟೆಗಟ್ಟಲೆ ತಳ್ಳಿದರೂ ವಾಹನ ಸ್ಟಾರ್ಟ್ ಆಗಲಿಲ್ಲ 2 ನಿಮಿಷದಲ್ಲಿ ಕಾರನ್ನು ಮೆಕಾನಿಕ್ ಸರಿಪಡಿಸಿದ ಕಾರು ಸರಿಪಡಿಸಿ ಮೆಕಾನಿಕ್ 200 ರೂ.ಗೆ ಬೇಡಿಕೆ ಇಟ್ಟ 2 ನಿಮಿಷದ ಕೆಲಸಕ್ಕೆ 200 ರೂಪಾಯಿ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು ಅದಕ್ಕೆ 200 ರೂ. 2 ನಿಮಿಷಕ್ಕೆ ಅಲ್ಲ 20 ವರ್ಷಗಳ ಅನುಭವಕ್ಕೆ ಎಂದು ಮೆಕ್ಯಾನಿಕ್ ಹೇಳಿದ ಎಂದು ಉದಾಹರಣೆ ನೀಡಿದರು.

    ವಿದ್ಯಾರ್ಥಿಯೊಬ್ಬ ವಿರೋಧ ಪಕ್ಷದವರ ಟೀಕೆ ಬಗ್ಗೆ ಪ್ರಶ್ನಿಸಿದಾಗ ಅದು ಔಟ್ ಆಫ್ ಸಿಲಬಸ್ ಪ್ರಶ್ನೆ ಇದ್ದಂತೆ ಎಂದು ಉತ್ತರಿಸಿದರು. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇರಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

    ಈ ಬಾರಿಯ ಪರೀಕ್ಷಾ ಪೇ ಚರ್ಚೆಯಲ್ಲಿ 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಮತ್ತು 1.95 ಲಕ್ಷ ಪೋಷಕರು ಸೇರಿದಂತೆ ಒಟ್ಟು 38.80 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಕಳೆದ ವರ್ಷ, ಸುಮಾರು 15.7 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

    ಸಮಾರಂಭದಲ್ಲಿ, ಪ್ರಧಾನಿ ಮೋದಿ ಅವರು ಪರೀಕ್ಷೆಯ ಒತ್ತಡವನ್ನು ನಿವಾರಿಸಲು ಮತ್ತು ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದ ಅವರ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳೊಂದಿಗೆ ಸಲಹೆಗಳನ್ನು ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪರೀಕ್ಷಾ ಪೇ ಚರ್ಚಾದ ಐದನೇ ಆವೃತ್ತಿಯನ್ನು ನಡೆಸಿಕೊಟ್ಟರು. ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಮೋದಿ ಸಂವಾದ ನಡೆಸಿದರು.

    ಪರೀಕ್ಷೆಗಳಿಗೆ ಸಿದ್ಧತೆ, ಓದು ಕುರಿತು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಪರೀಕ್ಷೆ ಸಂದರ್ಭದಲ್ಲಿ ಒತ್ತಡಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ಹಲವು ಟಿಪ್ಸ್‌ಗಳನ್ನು ನೀಡಿದರು. ಇದನ್ನೂ ಓದಿ: 2 ವರ್ಷದಿಂದ ಜಾರಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನ ತೆಗೆದು ಹಾಕಿದ ತೆಲಂಗಾಣ ಸರ್ಕಾರ

    ಪರೀಕ್ಷೆಗೆ ಮೋದಿ ಸಲಹೆ
    * ಪರೀಕ್ಷೆಯ ಸಮಯದಲ್ಲಿ ನಾವು ಹಬ್ಬಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ. ಆದರೆ ನಾವು ಪರೀಕ್ಷೆಗಳನ್ನೇ ಹಬ್ಬವನ್ನಾಗಿ ಮಾಡಿದರೆ, ನಾವು ಅವುಗಳನ್ನು ಆನಂದಿಸಬಹುದು.

    * ನೀವು ಪರೀಕ್ಷೆ ದೃಷ್ಟಿಯಿಂದ ಪಠ್ಯದ ಕೆಲವು ವಿಷಯಗಳ ಅಧ್ಯಯನ ಮಾಡಲು ಸಾಧ್ಯವಾಗದಿರಬಹುದು. ಆದರೆ ನೀವು ಅಧ್ಯಯನ ಮಾಡಿದ್ದರಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಿ. ಇದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    * ಹೆದರಬೇಡಿ ಮತ್ತು ಅತಿಯಾಗಿ ಯೋಚಿಸಬೇಡಿ. ಅದು ನಿಮ್ಮನ್ನು ಇನ್ನಷ್ಟು ಗಾಬರಿಗೊಳಿಸುವಂತೆ ಮಾಡುತ್ತದೆ.

    * ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಹುಡುಕಬಹುದು ಮತ್ತು ಅದನ್ನು ಆಫ್‌ಲೈನ್‌ಗೆ ತಾಳೆಹಾಕಿ ನೋಡಬಹುದು.

    * ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಮಯ ಗೊತ್ತುಪಡಿಸಿಕೊಳ್ಳಿ. ಈ ಸಮಯದಲ್ಲಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಲ್ಲ, ಅದರ ಒಳಗಿನ ಸಾಲಿನಲ್ಲಿರುತ್ತೀರಿ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ

  • ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್ ಉದಾಹರಿಸಿ ಮಕ್ಕಳಿಗೆ ಮೋದಿ ಪಾಠ

    ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್ ಉದಾಹರಿಸಿ ಮಕ್ಕಳಿಗೆ ಮೋದಿ ಪಾಠ

    ನವದೆಹಲಿ: ಸೋಲೇ ಗೆಲುವಿನ ಸೋಪಾನ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.

    ಮೂರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್ ಆಟಗಾರರು ಸೇರಿದಂತೆ ವಿವಿಧ ಸಾಧಕರ ಉದಾಹರಣೆ ನೀಡಿದ್ದು, ಜೀವನದಲ್ಲಿ ಸೋಲಿನಿಂದಲೇ ಗೆಲ್ಲಲು ಸಾಧ್ಯ. ಹೀಗಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಚಿಂತೆಗೊಳಗಾಗಬೇಡಿ ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

    ಪ್ರಧಾನಿ ನರೇಂದ್ರ ಮೋದಿಯವರು ಕ್ರಿಕೆಟ್ ಸಾಧಕರ ನಿದರ್ಶನಗಳನ್ನು ವಿವರಿಸುವ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬಿದರು. 2001ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಪಂದ್ಯದ ಕುರಿತು ಮತನಾಡಿ, ಅನಿಲ್ ಕುಂಬ್ಳೆ ಅವರ ಉದಾಹರಣೆ ನೀಡಿದರು. ಪಂದ್ಯ ಆಡುತ್ತಿರುವ ವೇಳೆ ಕುಂಬ್ಳೆ ಗಾಯಗೊಂಡಿದ್ದರು. ಆದರೂ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ್ದರು. ನಾವು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ನಮ್ಮ ಜಯ ನಿಂತಿರುತ್ತದೆ ಎಂದು ಕಿವಿ ಮಾತು ಹೇಳಿದರು.

    ರಾಹುಲ್ ಡ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಉದಾಹರಣೆಯನ್ನೂ ನೀಡಿದ ಅವರು, ನಮ್ಮ ತಂಡವು ಹಿನ್ನಡೆ ಅನುಭವಿಸುತಿತ್ತು. ಆಗ ಆಟಗಾರರ ಮನಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಪಂದ್ಯವನ್ನು ಹೇಗೆ ಗೆಲುವಿನತ್ತ ತಿರುಗಿಸಿದರು ಎಂಬುದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೇ ಸಕಾರಾತ್ಮಕ ಚಿಂತನೆ ಹಾಗೂ ಪ್ರೇರಣೆಯ ಶಕ್ತಿ ಎಂದು ಮಕ್ಕಳಿಗೆ ತಿಳಿಸಿದರು.

    ಅಲ್ಲದೆ ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ವಿಫಲತೆಯ ಕುರಿತು ಸಹ ಪ್ರಧಾನಿ ಮೋದಿ ಮಾತನಾಡಿದರು. ಇದು ವಿಫಲವಾದರೆ ಏನು ಗತಿ, ಈ ಬಗ್ಗೆ ಖಚಿತತೆ ಇಲ್ಲ, ಹೀಗಾಗಿ ನೀವು ಅಲ್ಲಿಗೆ ಹೋಗದಿರುವುದೇ ಉತ್ತಮ ಎಂದು ಹಲವರು ನನಗೆ ತಿಳಿಸಿದರು. ಆದರೆ ನಾನು ಇದಕ್ಕೆ ಉತ್ತರಿಸಿ, ಅಲ್ಲಿಗೆ ಹೋಗಿಯೇ ಸಿದ್ಧ ಎಂದು ಇಸ್ರೋ ಕೇಂದ್ರಕ್ಕೆ ತೆರಳಿದೆ. ಚಂದ್ರಯಾನ-2 ವಿಫಲವಾದ್ದರಿಂದ ನನಗೂ ನೋವಾಗಿತ್ತು. ಆದರೆ ವಿಜ್ಞಾನಿಗಳ ಬಳಿ ತೆರಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದೆ. ನನ್ನ ಭಾವನೆಗಳನ್ನು ಅವರ ಬಳಿ ಹಂಚಿಕೊಂಡೆ. ರಾಷ್ಟ್ರದ ಕನಸಿಗೆ ಅವರು ವಹಿಸಿದ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದೆ. ಆಗ ಮನಸ್ಥಿತಿ ಬದಲಾಯಿತು. ಕೇವಲ ಅಲ್ಲಿ ಮಾತ್ರವಲ್ಲ ದೇಶಾದ್ಯಂತ ಬದಲಾವಣೆಯಾಯಿತು. ನಂತರ ಏನಾಯಿತು ಎಂಬುದು ನಿಮಗೆಲ್ಲ ತಿಳಿದಿದೆ. ಕೆಲವು ಬಾರಿ ನೀವು ಸೋಲಿನಿಂದ ಕಲಿಯಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

    ಕೇಂದ್ರ ಸರ್ಕಾರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗಿರುವ ಪರೀಕ್ಷಾ ಒತ್ತಡವನ್ನು ನಿವಾರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿಯವರು ಮಕ್ಕಳು ಪರೀಕ್ಷಾ ಒತ್ತಡ ನಿಭಾಯಿಸುವುದು ಹೇಗೆ ಎಂಬುದರ ಕುರಿತು ಸಲಹೆಯನ್ನು ಹಂಚಿಕೊಳ್ಳುತ್ತಿದ್ದಾರೆ.

    ದೇಶಾದ್ಯಂತ ಸುಮಾರು 2 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದರಲ್ಲಿ 1,050 ವಿದ್ಯಾರ್ಥಿಗಳನ್ನು ಪ್ರಬಂಧ ಸ್ಪರ್ಧೆ ಮೂಲಕ ಆಯ್ಕೆ ಮಾಡಲಾಗಿದೆ. ರಾಜ್ಯದಿಂದ 42 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಮಕ್ಕಳ ಜೊತೆ ಸುರೇಶ್ ಕುಮಾರ್ ಪರೀಕ್ಷಾ ಪೇ ಚರ್ಚಾ

    ಮಕ್ಕಳ ಜೊತೆ ಸುರೇಶ್ ಕುಮಾರ್ ಪರೀಕ್ಷಾ ಪೇ ಚರ್ಚಾ

    ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಮಕ್ಕಳ ಪರೀಕ್ಷಾ ಆತಂಕ ನಿವಾರಣೆಗಾಗಿ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದರೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚೆ ನಡೆಸಿ ಮಕ್ಕಳ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದರು.

    ರಾಜಾಜಿನಗರದ ಕೆ.ಎಲ್.ಇ ಶಾಲೆಯಲ್ಲಿ ಸುತ್ತ ಮುತ್ತಲಿನ ಶಾಲಾ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೊತೆಗೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

    ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಮೋದಿ ಅವರ ಕನಸಿನ ಭಾರತವನ್ನು ಮಕ್ಕಳಿಗೆ ತೆರೆದಿಟ್ಟರು. ಮಕ್ಕಳು ಪರೀಕ್ಷೆಗೆ ಆತಂಕ ಪಡಬೇಡಿ. ಪರೀಕ್ಷೆ ಕೇವಲ ಶೈಕ್ಷಣಿಕ ಗುಣಮಟ್ಟ ಅಳೆಯಲು ಮಾತ್ರ. ಅದು ಜೀವನದ ಪರೀಕ್ಷೆ ಅಲ್ಲ. ಹೀಗಾಗಿ ಮಕ್ಕಳು ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಅಂತ ಸಲಹೆ ನೀಡಿದರು.

    ಮೋದಿ ಅವರ ಪರೀಕ್ಷಾ ಆಂತಕ ನಿವಾರಣೆಯ ಪುಸ್ತಕ ಓದುವಂತೆ ಸಲಹೆ ನೀಡಿದರು. ಇದಲ್ಲದೆ ಮಕ್ಕಳ ಜೊತೆ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರು. ಪರೀಕ್ಷೆ ಕುರಿತು ಮಕ್ಕಳ ಪ್ರಶ್ನೆಗೆ ತಾಳ್ಮೆಯಿಂದ ಉತ್ತರ ಕೊಟ್ಟ ಸಚಿವರು ಮಕ್ಕಳ ಅನುಕೂಲವಾಗುವ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

  • ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

    ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

    ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಹಾಗೂ ಪರೀಕ್ಷಾ ಭಯವನ್ನು ದೂರಗೊಳಿಸುವ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಗ್ರಾಮ ಭೈರನಾಯ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ಯಶವಂತ್, ಈ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ಪರೀಕ್ಷೆಗಳ ಪ್ರಾಶಾಸ್ತ್ಯ ಮತ್ತು ಮಹತ್ವದ ಕುರಿತು ಯಶವಂತ ಬರೆದಿದ್ದ ಕನ್ನಡ ಪ್ರಬಂಧ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗುವಂತೆ ಮಾಡಿದೆ.

    ಶಾಲೆಯ ವಿದ್ಯಾರ್ಥಿ ಕನ್ನಡದಲ್ಲಿ ಬರೆದಿದ್ದ ಪ್ರಬಂಧವನ್ನು ಶಾಲೆಯ ಮುಖ್ಯ ಶಿಕ್ಷಕರು ಇಂಗ್ಲಿಷ್‍ನಲ್ಲಿ ತರ್ಜುಮೆ ಮಾಡಿ ಕಳುಹಿಸಿದ್ದರು. ಒಟ್ಟಾರೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಯ ಪರಿಶ್ರಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಪ್ರಧಾನಿಗಳ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ದೆಹಲಿಗೆ ತೆರಳಲು ಶಿಕ್ಷಕರು ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ.

    ಯಶವಂತ್ ಕಡು ಬಡತನದ ಕುಟುಂಬದ ವಿದ್ಯಾರ್ಥಿ. ತಂದೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಶಿಕ್ಷಕರ ಹಾಗೂ ಸಹಪಾಠಿಗಳ ಸಹಯೋಗದಿಂದ ಶಿಕ್ಷಣದ ಆಸಕ್ತಿಗೆ ಇಂದು ಒಂದು ದಾರಿ ಸಿಕ್ಕ ಆಗಿದೆ. ಈ ಖುಷಿಯಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯಶವಂತ್‍ಗೆ ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯಶವಂತ್ ಸಂತಸವನ್ನು ವ್ಯಕ್ತಪಡಿಸಿ, ಈ ಪರಿಶ್ರಮಕ್ಕೆ ನನ್ನ ತಂದೆ-ತಾಯಿ, ಪರಿಶ್ರಮ, ಮುಖ್ಯವಾಗಿ ನನ್ನ ಮೆಚ್ಚಿನ ಗುರುಗಳು, ಹೀಗಾಗಿ ಪ್ರಧಾನಿಯವರ ಕಾರ್ಯಕ್ರಮ ಹಾಗೂ ಅವರನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿದೆ. ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾನೆ.

  • ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆನೇಕಲ್ ವಿದ್ಯಾರ್ಥಿನಿ ಆಯ್ಕೆ

    ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆನೇಕಲ್ ವಿದ್ಯಾರ್ಥಿನಿ ಆಯ್ಕೆ

    ಬೆಂಗಳೂರು: ಆನೇಕಲ್ ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಭಾವನಾ ಜನವರಿ 20ರಂದು ದೆಹಲಿಯಲ್ಲಿ ನಡೆಯಲಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲು ಆಯ್ಕೆಯಾಗಿದ್ದಾಳೆ.

    ಬೆಂಗಳೂರು ನಗರ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಪೈಕಿ ಆನೇಕಲ್ ತಾಲೂಕಿನ ಹೆಬ್ಬಗೋಡಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಭಾವನಾ ಕೂಡ ಒಬ್ಬಳು. ಆನ್‍ಲೈನ್‍ನಲ್ಲಿ ನೀಡಲಾದ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಆಯ್ಕೆ

    ಭಾವನಾ ತಂದೆ ರಮೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಭಾರತಿ ಶಾಲೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕುಟುಂಬದ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆದಿರುವುದು ಹೆತ್ತವರಿಗೆ ಹಾಗೂ ಗ್ರಾಮಕ್ಕೆ ಹೆಮ್ಮೆ ತಂದಿದೆ. ಇದನ್ನೂ ಓದಿ: ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ವಿದ್ಯಾರ್ಥಿನಿ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಆಕೆ ಓದುತ್ತಿರುವ ಶಾಲೆಯ ಶಿಕ್ಷಕರಲ್ಲಿ ಸಂತಸ ತಂದಿದೆ. ವಿದ್ಯಾರ್ಥಿನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್ ರಾಮಮೂರ್ತಿ ಮತ್ತು ಮುಖ್ಯೋಪಾಧ್ಯಾಯ ಸಿ. ನಾರಾಯಣಸ್ವಾಮಿ ಅಭಿನಂದಿಸಿದ್ದಾರೆ.

  • ಪರೀಕ್ಷಾ ಪೇ ಚರ್ಚಾ ಗಡಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ಪರೀಕ್ಷಾ ಪೇ ಚರ್ಚಾ ಗಡಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ಚಾಮರಾಜನಗರ: ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು? ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಸ್ಪತ: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜನವರಿ 20ರಂದು ನವದೆಹಲಿಯಲ್ಲಿ ನಡೆಯುಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಡಿ ಜಿಲ್ಲೆ ಚಾಮರಾಜನಗರದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಪರೀಕ್ಷೆ ಬಂತೆಂದೆರೆ ಸಾಕು ವಿದ್ಯಾರ್ಥಿಗಲ್ಲಿ ಆತಂಕ ಮನೆ ಮಾಡುತ್ತದೆ. ಪರೀಕ್ಷಾ ಭಯ ಇನ್ನಿಲ್ಲದಂತೆ ಅವರನ್ನು ಕಾಡುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಸಮಪರ್ಕವಾಗಿ ಎದುರಿಸಲಾಗದೆ ಫೇಲ್ ಆಗುವುದು ಸಾಮಾನ್ಯವಾಗಿದೆ. ಕಡಿಮೆ ಅಂಕಗಳಿಸಿ ಖಿನ್ನತೆಗೆ ಗುರಿಯಾಗುತ್ತಾರೆ. ಇದೆನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಈ ಬಾರಿ ಚಾಮರಾಜನಗರ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಸ್ವತ: ಮೋದಿಯವರೇ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಬಯಸುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಒಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿರುವ ಆದರ್ಶ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಹಾಗೂ ಯಳಂದೂರಿನಲ್ಲಿರುವ ಆದರ್ಶ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿ ಅರ್ಫತ್ ಪ್ರಬಂಧ ಬರೆದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಸ್ವತ: ಮೋದಿ ಅವರೊಡನೆ ಸಂವಾದ ನಡೆಸಲು ಖುಷಿಯಾಗುತ್ತಿದೆ ಎನ್ನುವ ಯಳಂದೂರಿನ ಅರ್ಫತ್, ದೇಶದ ಎಲ್ಲಾ ರಾಜ್ಯಗಳಲ್ಲು ಪ್ರಾಥಮಿಕ ಹಂತದಿಂದಲೇ ಏಕರೂಪ ಶಿಕ್ಷಣ ಪದ್ದತಿ ಜಾರಿಗೆ ತರುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಹೇಳುತ್ತಾನೆ.

    ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರೂ ಅನಾರೋಗ್ಯ ಕಾರಣದಿಂದ ಭಾಗವಹಿಸಲು ಹಿಂಜರಿದಿದ್ದ ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಅಪೂರ್ವ ಇದೀಗ ತನ್ನ ನಿರ್ಧಾರ ಬದಲಿಸಿದ್ದಾಳೆ. ಪ್ರಧಾನಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹಾಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎನ್ನುವ ಅಪೂರ್ವ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಶಿಕ್ಷಣದಲ್ಲಿ ಕೃಷಿಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಅವರ ಗಮನ ಸೆಳೆಯುವುದಾಗಿ ಆಯ್ಕೆಯಾದ ಶಾಲಾ ವಿಧ್ಯಾರ್ಥಿ ಅಪೂರ್ವ ಮಾತು.

    ಜನವರಿ 20 ರಂದು ನವದೆಹಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

  • ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    – ಜ.20ರಂದು ಮೋದಿ ಜೊತೆ ಸಂವಾದ

    ತುಮಕೂರು: ಪ್ರಧಾನಿ ಮಂತ್ರಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಶಿರಾ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್ ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ.ಆರ್ ಆಯ್ಕೆಯಾಗಿದ್ದು. ಪ್ರಧಾನಿ ಭೇಟಿ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

    ವಿದ್ಯಾರ್ಥಿ ಸಾಗರ್ ತಂದೆ ಆಟೋ ಚಾಲಕರಾಗಿದ್ದು, ವಿದ್ಯಾರ್ಥಿನಿ ದೀಪಿಕಾ ಅವರ ತಂದೆ ರೈತರಾಗಿದ್ದಾರೆ. ಇಬ್ಬರಿಗೂ ಜಿಲ್ಲೆಯಿಂದ ಅವಕಾಶ ಸಿಕ್ಕಿರುವುದರಿಂದ ಕುಟುಂಬದವರಲ್ಲಿ ಸಂತಸ ಮನೆ ಮಾಡಿದೆ. ಜ.19 ರಂದು ಇಬ್ಬರು ವಿದ್ಯಾರ್ಥಿಗಳು ದೆಹಲಿಗೆ ಹಾರಲಿದ್ದು, ಜ.20 ರಂದು ನಡೆಯುವ ಪ್ರಧಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ವಿದ್ಯಾರ್ಥಿ ಸಾಗರ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸದಂತೆ ಕರೆ ನೀಡಬೇಕೆಂದು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ವಿದ್ಯಾರ್ಥಿನಿ ದೀಪಿಕಾ ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳಲು ತಯಾರಿಸಿ ನಡೆಸಿದ್ದಾರೆ.

    ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆರವಾಗಿ ಪ್ರಧಾನಿ ನರೇಂದ್ರ ಮೋದಿರೊಂದಿಗೆ ಚರ್ಚೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಯ್ಕೆಯಾದ ಮಕ್ಕಳಿಗೆ ಪ್ರಧಾನಿಗಳು ಕೆಲ ಸಲಹೆಗಳನ್ನು ನೀಡುತ್ತಾರೆ. 10ನೇ ತರಗತಿಯ ವಿದ್ಯಾರ್ಥಿಗಳಾಗಿರುವುದರಿಂಧ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು. ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬ ಸಲಹೆಗಳನ್ನು ನೀಡಲಾಗುತ್ತದೆ.

    ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ಕೆ ಆಯ್ಕೆಯಾಗುತ್ತೇನೆ ಎಂದು ಸಾಗರ್ ನಿರೀಕ್ಷೆಯನ್ನೇ ಮಾಡಿರಲಿಲ್ಲ. ನಮ್ಮ ಶಾಲೆಯಲ್ಲಿ 10 ವಿದ್ಯಾರ್ಥಿಗಳ ಪಟ್ಟಿ ಮಾಡಿ ಕಳಿಸಿದ್ದರು. ಅದರಲ್ಲಿ ನಾನು ಆಯ್ಕೆ ಆಗಿರುವುದು ತುಂಬಾ ಸಂತೋಷ ತಂದಿದ್ದು, ಎಕ್ಸೈಟ್ ಮೆಂಟ್ ಹೆಚ್ಚಾಗಿದೆ ಎಂದು ಸಾಗರ್ ಹೇಳಿದ್ದಾರೆ. ನಾನು ಪ್ರಧಾನ ಮಂತ್ರಿಗಳ ಎದುರು ಮಕ್ಕಳು ಮೊಬೈಲ್ ಬಳಕೆ ಮಾಡುವುದು ಎಷ್ಟು ಸರಿ? ಮಕ್ಕಳ ಕೈಗೆ ಮೊಬೈಲ್ ನೀಡದಂತೆ ನೋಡಿಕೊಳ್ಳುವುದು ಹೇಗೆ? ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

    ವಿದ್ಯಾರ್ಥಿನಿ ದೀಪಿಕಾ ಕೂಡ ಆಯ್ಕೆ ಕುರಿತು ಖುಷಿ ಹಂಚಿಕೊಂಡಿದ್ದು, ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿರುವುದು ಪುಣ್ಯ ಎಂದು ದೀಪಾ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಬೇಟಿ ಪಡಾವೋ ಬೇಟಿ ಬಚಾವೋ’ ಕಾರ್ಯಕ್ರಮದಂತೆ ಹೆಣ್ಣು ಮಕ್ಕಳಿಗಾಗಿ ಮತ್ತಷ್ಟು ಕಾರ್ಯಕ್ರಮ ರೂಪಿಸುವಂತೆ ಪ್ರಧಾನಿಗಳ ಬಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.